ಸುಭಾಷ್ ಬೋಸ್‌ರನ್ನು ಅಪಹರಿಸುವ ಆರೆಸ್ಸೆಸ್-ಬಿಜೆಪಿ ಪ್ರಯತ್ನ

ಜನತೆ ತುಚ್ಛೀಕಾರದೊಂದಿಗೆ ತಿರಸ್ಕರಿಸುತ್ತಾರೆ

ಭಾರತೀಯ ಸ್ವಾತಂತ್ರ್ಯ ಹೋರಾಟವನ್ನು ಕೈವಶ ಮಾಡಿಕೊಳ್ಳುವ ಹತಾಶೆ ಈಗ ಬಿಜೆಪಿಯನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ತಮ್ಮ ಪ್ರತಿಮೆಯಾಗಿ ಅಪಹರಿಸುವ ಪ್ರಯತ್ನಕ್ಕೆ ಕೈಹಾಕುವಂತೆ ಮಾಡಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

ಬ್ರಿಟಿಶ್ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಭಾರತೀಯ ಜನತೆ ನಡೆಸಿದ ಮಹಾನ್ ಹೋರಾಟದ ಗಾಥೆಯಲ್ಲಿ ಆರೆಸ್ಸೆಸ್ ಮತ್ತು ಅದರ ರಾಜಕೀಯ ಅಂಗಗಳ ಪಾತ್ರ ಏನೇನೂ ಇರಲಿಲ್ಲ ಎಂಬುದು ಸಾಬೀತಾಗಿರುವ ಸಂಗತಿ.  ಅವರು ಭಾಗವಹಿಸಲಿಲ್ಲ ಮಾತ್ರವಲ್ಲ, ಅವರ ಚಟುವಟಿಕೆಗಳು ಬ್ರಿಟಿಶರ ಪ್ರಯತ್ನಗಳಿಗೆ ಪೂರಕವಾಗಿದ್ದವು. ಆ ಕಳಂಕಿತ ಪಾತ್ರವನ್ನು ಅಳಿಸಿ ಬಿಡುವ ಪ್ರಯತ್ನದಲ್ಲಿ ಅವರು ಸರ್ದಾರ್ ಪಟೇಲ್ ಅವರನ್ನು ಕೈವಶ ಮಾಡಿಕೊಳ್ಳಲು ಪ್ರಯತ್ನಿಸಿದರು. ಈಗ ಸುಭಾಷ್ ಚಂದ್ರ ಬೋಸ್ ಅವರನ್ನು ಅಪಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಸ್ವತಃ ಸರ್ದಾರ್ ಪಟೇರೇ ಆರೆಸ್ಸೆಸ್  ಮೇಲೆ ನಿಷೇಧ ಹಾಕಿದವರು ಮತ್ತು ಸ್ವತಃ ಸುಭಾಷ್ ಚಂದ್ರ ಬೋಸ್ ರವರೇ, ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಅಧ್ಯಕ್ಷರಾಗಿ, ಕಾಂಗ್ರೆಸ್ ಹಾಗೂ ಅವರು ಕೋಮುವಾದಿ ಸಂಘಟನೆಗಳು ಎಂದು ವರ್ಣಿಸಿದ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್ ನಂತಹ ಸಂಘಟನೆಗಳ ದ್ವಂದ್ವ ಸದಸ್ಯತ್ವವನ್ನು ನಿಷೇಧಿಸಿದವರು ಎಂದು ನೆನಪಿಸಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಸರ್ದಾರ್ ಪಟೇಲ್ ಮತ್ತು ಸುಭಾಷ್ ಚಂದ್ರ ಬೋಸ್ ಇವರಿಬ್ಬರೂ ಕೋಮುವಾದಿ ರಾಜಕೀಯವನ್ನು ತಿರಸ್ಕರಿಸಲು ಭಾರತೀಯ ಜನತೆಯನ್ನು ಅಣಿನೆರೆಸುವಲ್ಲಿ ಒಂದು ಮಹತ್ವಪೂರ್ಣ ಪಾತ್ರ ವಹಿಸಿದರು ಎಂದಿದೆ.

ಭಾರತೀಯ ಸ್ವಾತಂತ್ರ್ಯ ಹೋರಾಟದ ಕೆಲವು ಪ್ರತಿಮೆಗಳನ್ನು ಅಪಹರಿಸಿ ತಮ್ಮ ಕೈವಶ ಮಾಡಿಕೊಳ್ಳುವ ಆರೆಸ್ಸೆಸ್-ಬಿಜೆಪಿ ಪ್ರಯತ್ನಗಳನ್ನು ಭಾರತೀಯ ಜನತೆ ತುಚ್ಛೀಕಾರದಿಂದ ತಿರಸ್ಕರಿಸುತ್ತಾರೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *