ಶಿವಕುಮಾರ ಸ್ವಾಮೀಜಿ ಅಗಲಿಕೆ: ಶಿಷ್ಯ ಗಣ-ಭಕ್ತ ವೃಂದಕ್ಕೆ ಸಂತಾಪ

ತುಮಕೂರಿನ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮಿಗಳು ತಮ್ಮ 111ನೇ ವಯಸ್ಸಿನಲ್ಲಿ ನಿನ್ನೆ ದಿನ ನಿಧನರಾಗಿದ್ದಾರೆ.

ಅವರು ತಮ್ಮ ಸರಳ ಹಾಗೂ ಸಜ್ಜನಿಕೆಯ ಜೀವನದಿಂದ ಹೆಸರುವಾಸಿಯಾಗಿದ್ದಾರೆ. ಅದೇ ರೀತಿ, ರಾಜ್ಯದಾದ್ಯಂತ ಆದಾಯ ಕಡಿಮೆ ಇರುವ ಲಕ್ಷಾಂತರ ಬಡಜನರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದ್ದಾರೆ. ಆ ಮೂಲಕ ಅಕ್ಷರ ಹಾಗೂ ಅನ್ನ ದಾಸೋಹ ನಡೆಸಿ ತಮ್ಮ ಸಾರ್ವಜನಿಕ ಬದ್ದತೆಯನ್ನು ಮೆರೆದಿದ್ದಾರೆ.

ಶ್ರೀಗಳು ಬಸವತತ್ವದ ಅನುಷ್ಠಾನಕ್ಕೆ ಕ್ರಮವಹಿಸಿದ್ದಾರೆ.

ಮಠದಲ್ಲಿ ಜಾತಿ ತಾರತಮ್ಯ ಲಿಂಗ ತಾರತಮ್ಯಕ್ಕೆ ಅವಕಾಶ ನೀಡದೇ ಸಾಮಾಜಿಕ ಸಾಮರಸ್ಯ ಮೆರೆದಿದ್ದಾರೆ.

ಇವರು ಅಪಾರ ಭಕ್ತರು, ಶಿಷ್ಯ ವೃಂದ ಮತ್ತು ಅಭಿಮಾನಿಗಳು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ

ಅಗಲಿದ ಸ್ವಾಮಿಜಿಯವರ ದುಃಖತಪ್ತ ಭಕ್ತರು ಹಾಗೂ ಅವರ ಅಪಾರ ಶಿಷ್ಯ ವೃಂದಕ್ಕೆ, ಅಭಿಮಾನಿಗಳಿಗೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ತನ್ನ ಸಂತಾಪವನ್ನು ವ್ಯಕ್ತಪಡಿಸುತ್ತದೆ.

 

ಯು. ಬಸವರಾಜ
ಕಾರ್ಯದರ್ಶಿಗಳು

Leave a Reply

Your email address will not be published. Required fields are marked *