ಮೇಘಾಲಯ ರಾಜ್ಯಪಾಲರನ್ನು ವಜಾಮಾಡಬೇಕು

ಮೇಘಾಲಯದ ರಾಜ್ಯಪಾಲ ತಥಾಗತ ರಾಯ್ ಮತ್ತೊಂದು ಆಕ್ರೋಶಕಾರಿ ಹೇಳಿಕೆ ನೀಡಿ ಪುಲ್ವಾಮ ದುರಂತದ ಹಿನ್ನೆಲೆಯಲ್ಲಿ ಕಾಶ್ಮೀರ ಮತ್ತು ಕಾಶ್ಮೀರಿಗಳನ್ನು ಬಹಿಷ್ಕರಿಸಬೇಕೆಂಬ ಕರೆಯನ್ನು ಅನುಮೋದಿಸಿದ್ದಾರೆ.

ಕಾಶ್ಮೀರಿಗಳು, ವಿಶೇಷವಾಗಿ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ ಹಲ್ಲೆಗಳಿಗೆ, ಕಿರುಕುಳ-ಪೀಡನೆಗಳಿಗೆ ತುತ್ತಾಗುತ್ತಿರುವಾಗ ಮತ್ತು ತಾವಿದ್ದ ಲ್ಲಿಂದ ಹೊರಹೋಗಬೇಕಾದ ಬಲವಂತಕ್ಕೆ ಒಳಗಾಗುತ್ತಿರುವ ಸಮಯದಲ್ಲಿ ಇದು ಬಂದಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯಪಾಲರು ಒಂದು ಸಂವಿಧಾನಿಕ ಹುದ್ದೆಯಲ್ಲಿದ್ದಾರೆ. ಭಾರತದ ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಅವರು ಭಾರತೀಯ ಸಂವಿಧಾನದ ಪಾಲಕರಾಗಿ ಕೆಲಸ ಮಾಡಬೇಕೆಂದು ನಿರೀಕ್ಷಿಸಲಾಗುತ್ತಿದೆ.

ಇವರಿಂದ ಇಂತಹ ತಾನು ಅಲಂಕರಿಸಿರುವ ಹುದ್ದೆಯನ್ನು ಅವಹೇಳನಕ್ಕೆ ಗುರಿಮಾಡುವಂತ ಸಾರ್ವಜನಿಕ ಟಿಪ್ಪಣಿ ಬಂದಿರುವುದು ಇದೇ ಮೊದಲ ಬಾರಿಯೇನಲ್ಲ ಎಂದು ನೆನಪಿಸಿರುವ ಪೊಲಿಟ್‍ ಬ್ಯುರೊ ಇಂತಹ ವಿಧಿಭಂಗವನ್ನು  ಒಪ್ಪಲು ಸಾಧ್ಯವಿಲ್ಲ, ರಾಷ್ಟ್ರಪತಿಗಳು ಅವರನ್ನು ತಕ್ಷಣವೇ ವಜಾ ಮಾಡಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *