ಅಮೆರಿಕದ ಒತ್ತಡಕ್ಕೆ ಭಾರತ ಸರ್ಕಾರ ಮಣಿಯಬಾರದು: ಸಿಪಿಐ(ಎಂ)

ಯುನೈಟೆಡ್ ಸ್ಟೇಟ್ಸ್ ಭಾರತದ ಮೇಲೆ ಶೇ. 50 ಸುಂಕಗಳನ್ನು ಘೋಷಿಸಿದೆ. ವ್ಯಾಪಾರ ಒಪ್ಪಂದವನ್ನು ತಲುಪಲು ವಿಫಲವಾದುದ್ದಕ್ಕೆ ಶೇ. 25  ಮತ್ತು ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಗೆ ಶೇ. 25. ಇದು ಭಾರತದ ಕೃಷಿ, ಮೀನುಗಾರಿಕೆ ವಲಯ  ಹಾಗೂ ಮಧ್ಯಮ, ಸಣ್ಣ ಮತ್ತು ಅತಿಸಣ್ಣ ಉದ್ದಿಮೆಗಳ (MSME ) ಮೇಲೆ, ವಿಶೇಷವಾಗಿ ಜವಳಿ ತಯಾರಕರ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುವುದರಿಂದ ಹಣದುಬ್ಬರ ಹೆಚ್ಚಾಗುತ್ತದೆ, ಏಕೆಂದರೆ ನಾವು ಪಾವತಿಸಲೇಬೇಕಾಗಿ ಬರುವ ಹೆಚ್ಚಿನ ಬೆಲೆಗಳಿಂದಾಗಿ ಎಲ್ಲಾ ಸರಕುಗಳ ಬೆಲೆಗಳು ಹೆಚ್ಚಾಗುತ್ತವೆ.

ಭಾರತ ಸರ್ಕಾರವು ರಷ್ಯಾದ ತೈಲ ಆಮದುಗಳನ್ನು ಕಡಿಮೆ ಮಾಡಬೇಕೆಂದು ಮತ್ತು ತನ್ನ ಇಂಧನ ಅಗತ್ಯಗಳಿಗಾಗಿ ಅಮೆರಿಕಾವನ್ನು ಹೆಚ್ಚು ಅವಲಂಬಿಸಬೇಕೆಂದು ಅದು ಬಯಸುತ್ತದೆ. ರಿಯಾಯಿತಿಗಳನ್ನು ಪಡೆಯುವ ಆಶಯದೊಂದಿಗೆ, ಯುಎಸ್ ವೈಮಾನಿಕ ಕಂಪನಿಗಳಿಂದ ರಕ್ಷಣಾ ಖರೀದಿಗಳನ್ನು ಗಮನಾರ್ಹವಾಗಿ ಹೆಚ್ಚಿಸುವ  ಭರವಸೆ ನೀಡುವ ಮೂಲಕ ಬಾರತ ಸರ್ಕಾರವು ಅಮೆರಿಕಾವನ್ನು ತುಷ್ಟೀಕರಿಸಲು  ಪ್ರಯತ್ನಿಸಿದೆ. ಅಮೆರಿಕದ ಒತ್ತಡಕ್ಕೆ ಭಾರತ ಸರ್ಕಾರ ಮಣಿಯಬಾರದು. ಬದಲಾಗಿ, ಅದು ತನ್ನ ಸಂಬಂಧಗಳಲ್ಲಿ ವೈವಿಧ್ಯತೆಯನ್ನು ತರುವತ್ತ ಗಮನಹರಿಸಬೇಕು ಮತ್ತು ಬಹು-ಧ್ರುವೀಯತೆಯನ್ನು ಬಲಪಡಿಸಲು ಶ್ರಮಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.

ಆಗಸ್ಟ್ 18, 2025 ರಂದು ನಡೆದ ಪೊಲಿಟ್‍ಬ್ಯುರೊ ಸಭೆಯ ನಂತರ  ಈ ಹೇಳಿಕೆ ನೀಡಿದೆ.

Leave a Reply

Your email address will not be published. Required fields are marked *