ಪ್ರಧಾನಿಯವರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಆರೆಸ್ಸೆಸ್ ನ ಉಲ್ಲೇಖ: ಸಿಪಿಐ(ಎಂ) ಖಂಡನೆ

ಪ್ರಧಾನಿಯವರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಆರ್‌.ಎಸ್.ಎಸ್.ನ  ಉಲ್ಲೇಖವನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಈ ಮೂಲಕ, ಮೋದಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರ ವಹಿಸದ ಆರೆಸ್ಸೆಸ್ ಅನ್ನು ನ್ಯಾಯಸಮ್ಮತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಜನವಿರೋಧಿ ಸುಧಾರಣೆಗಳ ಘೋಷಣೆಯ ಜೊತೆಗೆ, ಪ್ರಧಾನ ಮಂತ್ರಿಯವರು ‘ಜನಸಂಖ್ಯಾ ಮಿಷನ್’ ರಚನೆಯನ್ನು ಸಹ ಘೋಷಿಸಿದರು. ಇದನ್ನು ನುಸುಳುಕೋರರನ್ನು ಗುರುತಿಸುವ ಹೆಸರಿನಲ್ಲಿ ಮುಸ್ಲಿಂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಕಿರುಕುಳ ನೀಡಲು ಬಳಸಲಾಗುತ್ತದೆ. ಎಲ್ಲಾ ಮುಸ್ಲಿಮರು ನುಸುಳುಕೋರರು, ಅವರನ್ನು ದೇಶದಿಂದ ಹೊರಹಾಕಬೇಕಾಗಿದೆ ಎಂದು ಬಿಂಬಿಸುವ ಆರೆಸ್ಸೆಸ್ ಅಭಿಯಾನವನ್ನು ನ್ಯಾಯಸಮ್ಮತಗೊಳಿಸುವುದು ಇದರ ಉದ್ದೇಶ ಎಂದು  ಪೊಲಿಟ್‍ಬ್ಯುರೊ  ಹೇಳಿದೆ.

ದೀಪಾವಳಿಯಂದು ಜಿಎಸ್‌ಟಿ ದರಗಳನ್ನು ಕಡಿಮೆ ಮಾಡಲಾಗುವುದು ಎಂದು ಕೂಡ ಪ್ರಧಾನಿ ಘೋಷಿಸಿದರು. ಈ ಕಡಿತದ ಪ್ರಯೋಜನಗಳು ಕಾರ್ಪೊರೇಟ್‌ಗಳಿಗೆ ಅಲ್ಲ, ಗ್ರಾಹಕರನ್ನು ತಲುಪುವಂತೆ ಸರ್ಕಾರ ಖಚಿತಪಡಿಸಬೇಕು. ಅಲ್ಲದೆ, ರಾಜ್ಯಗಳಿಗೆ ಇದರಿಂದ ಉಂಟಾಗುವ ಯಾವುದೇ ಆದಾಯ ನಷ್ಟಕ್ಕೆ ಕೇಂದ್ರ ಸರ್ಕಾರವು ಪರಿಹಾರ ನೀಡಬೇಕು ಎಂದು ಸಿಪಿಐ(ಎಂ) ಹೇಳಿದೆ.

ಆಗಸ್ಟ್ 18, 2025 ರಂದು ನಡೆದ ಪೊಲಿಟ್‍ಬ್ಯುರೊ ಸಭೆಯ ನಂತರ  ಈ ಹೇಳಿಕೆ ನೀಡಿದೆ.

Leave a Reply

Your email address will not be published. Required fields are marked *