ಉಮರ್ ಖಾಲಿದ್ ಸೇರಿದಂತೆ 9 ಮಂದಿಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಣೆ ನ್ಯಾಯದ ಅಣಕ: ಸಿಪಿಐ(ಎಂ)

ಉಮರ್ ಖಾಲಿದ್ಶಾರ್ಜೀಲ್ ಇಮಾಮ್ ಮತ್ತು ಇತರ 7 ಜನರಿಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿರುವುದು ಶೋಚನೀಯ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಬೇಸರ ವ್ಯಕ್ತಪಡಿಸಿದೆ. ಫೆಬ್ರವರಿ 2020 ರಲ್ಲಿ ದೆಹಲಿಯಲ್ಲಿ ನಡೆದ ಕೋಮು ಗಲಭೆಯ ಹಿಂದೆ ಇದೆಯೆಂದು ಆರೋಪಿಸಲಾಗಿರುವ  “ಪಿತೂರಿ”ಗೆ ಸಂಬಂಧಿಸಿ ಅವರೆಲ್ಲರೂ ಐದು ವರ್ಷಗಳಿಗೂ ಹೆಚ್ಚು ಕಾಲ ಯುಎಪಿಎ ಅಡಿಯಲ್ಲಿ ಬಂಧನದಲ್ಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸುತ್ತಿರುವುದು ಇದು ಐದನೇ ಬಾರಿ. ಕಳೆದ ಐದು ವರ್ಷಗಳಿಂದ ಅವರ ವಿರುದ್ಧದ ಆರೋಪಗಳನ್ನು ಸಹ ರೂಪಿಸದಿರುವುದು ಇನ್ನಷ್ಟು ಕಳವಳಕಾರಿಯಾಗಿದೆ. ದೆಹಲಿ ಹೈಕೋರ್ಟ್‌ನ ನಿರ್ಧಾರ ನ್ಯಾಯದ ಒಂದು ಅಣಕ ಮತ್ತು “ಜಾಮೀನು ನೀಡುವುದು ನಿಯಮ ಮತ್ತು ನಿರಾಕರಣೆ ಅಪವಾದ” ಎಂಬ ತತ್ವದ ನಿರಾಕರಣೆಯಾಗುತ್ತದೆ ಎಂದು ಅದು ಹೇಳಿದೆ.

ಈ ಹತ್ತು ಯುವಜನರು ಐದು ವರ್ಷಗಳಿಗೂ ಹೆಚ್ಚು ಕಾಲ ಯಾವುದೇ ಅಪರಾಧ ಸಾಬೀತಾಗದೆ ಮತ್ತು ಯಾವುದೇ ಪುರಾವೆಗಳಿಲ್ಲದೆ ಜೈಲಿನಲ್ಲಿ ಕೊಳೆಯುತ್ತಿರುವಾಗ, ವಾಸ್ತವವಾಗಿ ಅವೇ ದೆಹಲಿ ಕೋಮು ಗಲಭೆಗಳಿಗೆ ತಮ್ಮ ಕಿಡಿಕಾರುವ ಭಾಷಣಗಳಿಂದ ಇಂಧನ ಸುರಿದ ಕಪಿಲ್ ಮಿಶ್ರಾ ಮತ್ತು ಅನುರಾಗ್ ಠಾಕೂರ್ ರಂತಹ ಬಿಜೆಪಿ ನಾಯಕರು ಯಾವುದೇ ಶಿಕ್ಷೆಯಿಲ್ಲದೆ ಮುಕ್ತವಾಗಿ ಓಡಾಡುತ್ತಿದ್ದಾರೆ ಎಂಬುದನ್ನು ಇಲ್ಲಿ ಗಮನಿಸುವುದು ಸೂಕ್ತವಾಗಿದೆ ಎಂದಿರುವ ಪೊಲಿಟ್‍ಬ್ಯುರೊ, ಮಾಲೇಗಾಂವ್ ಬಾಂಬ್ ಸ್ಫೋಟದ ಆರೋಪಿಗಳಾದ ಪ್ರಜ್ಞಾ ಸಿಂಗ್ ಠಾಕೂರ್ಕರ್ನಲ್ ಪ್ರಸಾದ್ ಪುರೋಹಿತ್ ಮತ್ತು ಇತರರನ್ನು ಖುಲಾಸೆಗೊಳಿಸಲಾಗಿದ್ದರೂಉಮರ್ ಖಾಲಿದ್ಶಾರ್ಜೀಲ್ ಇಮಾಮ್ ಮತ್ತು ಇತರರನ್ನು ಐದು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಕೊಳೆಯುವಂತೆ ಮಾಡಲಾಗಿದೆ ಎಂಬುದು ಗಂಭೀರ ನ್ಯಾಯಿಕ ವಿರೋಧಾಭಾಸವಾಗಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *