ವೆನೆಜುವೆಲಾ ಅಧ್ಯಕ್ಷರ ಅಪಹರಣ- ರಾಜ್ಯದ ಹಲವೆಡೆಗಳಲ್ಲಿ ಸಿಪಿಐ(ಎಂ) ಪ್ರತಿಭಟನೆ

ವೆನೆಜುವೆಲಾ ದೇಶದ ಮೇಲೆ ಅಮೆರಿಕವು, ಏಕಪಕ್ಷೀಯ ಮಿಲಿಟರಿ ಆಕ್ರಮಣ ನಡೆಸಿ ಅಧ್ಯಕ್ಷ ನಿಕೊಲಸ್ ಮಡುರೊ, ಪತ್ನಿ ಸಿಲಿಯಾ ರವರನ್ನು ಅಪಹರಣ ಮಾಡಿರುವುದನ್ನು ಖಂಡಿಸಿ, ಜನವರಿ 4, 2026ರಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಪ್ರತಿಭಟನೆ ನಡಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಸಿಪಿಐ(ಎಂ) ನ ರಾಜ್ಯ ಸಮಿತಿ ಕಚೇರಿ ಬಳಿ ನಡೆದ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಕೆ. ಪ್ರಕಾಶ್‌ ರವರು, ವೆನೆಜುವೆಲಾದ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯುವ ದುರುದ್ದೇಶಕ್ಕೆ ಅಡ್ಡಿಯಾಗಿದ್ದ ಕಾರಣಕ್ಕಾಗಿ ಮಡುರೋ ರವರನ್ನು ಪದಚ್ಯುತಗೊಳಿಸುವ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದೆ. ಒಂದು ಸಾರ್ವಭೌಮ, ಸ್ವತಂತ್ರ ಹಾಗೂ ಚುನಾಯಿತ ಪ್ರಜಾಪ್ರಭುತ್ವ ರಾಷ್ಟ್ರ ಒಂದರ ಅಧ್ಯಕ್ಷರನ್ನು ಮತ್ತೊಂದು ದೇಶ ಮಿಲಿಟರಿ ಆಕ್ರಮಣದ ಮೂಲಕ ಅಪಹರಿಸಿರುವುದು ಹಿಂದೆಂದೂ ಕಂಡರಿಯದ ದೌರ್ಜನ್ಯವಾಗಿದೆ. ವೆನೆಜುವೆಲಾ ದೇಶದ ಮೇಲೆ ನಡೆದಿರುವ ಧಾಳಿ, ಭಾರತ ಸೇರಿದಂತೆ ಇಡೀ ಪ್ರಪಂಚದ ಎಲ್ಲಾ ಸಾರ್ವಭೌಮ ದೇಶಗಳ ಮೇಲೆ ನಡೆದಿರುವ ಆಕ್ರಮಣವಾಗಿದೆ. ಕೂಡಲೇ ವೆನೆಜುವೆಲಾ ಅಧ್ಯಕ್ಷರನ್ನು ಬಿಡುಗಡೆ ಮಾಡುವಂತೆ ಭಾರತ ಸರ್ಕಾರ ಅಮೇರಿಕಾವನ್ನು ಒತ್ತಾಯಿಸಬೇಕು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೂಡಲೇ ಅಮೇರಿಕಾದ ಪುಂಡಾಟಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮುಂದುವರಿದು ಮಾತಾನಾಡಿದ ಅವರು, ಮತ್ತೊಂದು ಸಾರ್ವಭೌಮ ದೇಶದ ಮೇಲೆ ಅಮೇರಿಕ ನಡೆಸಿರುವ ಮಿಲಿಟರಿ ದಬ್ಬಾಳಿಕೆಗೆ ಬಹಳ ದೀರ್ಘ ಇತಿಹಾಸವೇ ಇದೆ. ಈ ಹಿಂದೆ ಇರಾಕ್, ಲಿಬಿಯಾ ಮುಂತಾದ ದೇಶಗಳ ಮೇಲೆ ಆಕ್ರಮಣ ನಡೆಸಿ ಅದರ ಅಧ್ಯಕ್ಷರನ್ನು ಕಗ್ಗೊಲೆ ಮಾಡಿದೆ. ಈಗ ವೆನೆಜುವೆಲಾ ಅಧ್ಯಕ್ಷರ ಮೇಲೆ ಮಾದಕ ವಸ್ತು ಸರಬರಾಜು ಆರೋಪ ಹೊರಿಸುತ್ತಿರುವ ಆಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೀತಿಯಲ್ಲೇ ಈ ಹಿಂದೆ ಕೂಡ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ರವರ ಮೇಲೆ ಸಮೂಹ ವಿನಾಶಕ ಅಸ್ತ್ರ ಹೊಂದಿರುವ ಆರೋಪ ಹೊರಿಸಲಾಗಿತ್ತು. ಇವೆಲ್ಲವೂ ತನ್ನ ಹಿಡಿತದ ಮಾಧ್ಯಮಗಳನ್ನು ಬಳಸಿ ಆಮೇರಿಕಾ ನಡೆಸಿರುವ ಅಪಪ್ರಚಾರಗಳೇ ಆಗಿವೆ. ಭಾರತ ದೇಶವೂ ಕೂಡ ಸುಂಕ ಕಡಿತದ ಬೆದರಿಕೆ ಹಾಗೂ ಒತ್ತಡವನ್ನು ಆಮೇರಿಕಾದಿಂದ ಎದುರಿಸುತ್ತಿದೆ. ಇಂದು ವೆನೆಜುವೆಲಾ ದೇಶಕ್ಕೆ ಒದಗಿರುವ ಪರಿಸ್ಥಿತಿ ಯಾವುದೇ ದೇಶಕ್ಕಾದರೂ ಬರಬಹುದು. ಅದ್ದರಿಂದ ಇಂತಹ ಸಾಮ್ರಾಜ್ಯಶಾಹಿ ದಬ್ಬಾಳಿಕೆ ವಿರುದ್ಧ ರಾಜ್ಯದಲ್ಲಿ ಮತ್ತು ದೇಶದಲ್ಲಿ ಬೃಹತ್ ಪ್ರತಿಭಟನೆ ವ್ಯಕ್ತವಾಗುವಂತೆ ಸಿಪಿಐ(ಎಂ) ಪಕ್ಷ ಶ್ರಮಿಸಲಿದ್ದು ಎಲ್ಲಾ ಸಾಮ್ರಾಜ್ಯಶಾಹಿ ವಿರೋಧಿ ಶಕ್ತಿಗಳನ್ನು ಬೆಂಬಲಿಸುತ್ತದೆ ಎಂದು ತಿಳಿಸಿದರು.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಹರಳಹಳ್ಳಿ, ಚಂದ್ರಪ್ಪ ಹೊಸ್ಕೇರಾ, ಕೆ.ಎಸ್. ವಿಮಲಾ ರಾಜ್ಯ ಸಮಿತಿ ಸದಸ್ಯರಾದ ಟಿ.ಯಶವಂತ, ಸೂರಜ್ ನಿಧಿಯಂಗ್ ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

….

ಗುಲ್ಬರ್ಗಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಕ್ಷದ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ನೀಲಾ ಮತ್ತಿತರರು.

….

ಕುಂದಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಶಶಿಧರ ಗೊಲ್ಲ, ಜಿಲ್ಲಾ ಸಮಿತಿ ಸದಸ್ಯೆ ಶೀಲಾವತಿ, ಬಲ್ಕೀಸ್ , ಕುಂದಾಪುರ ತಾಲೂಕು ಸಮಿತಿ ಸದಸ್ಯ ಚಿಕ್ಕ ಮೊಗವೀರ, ಸಂತೋಷ್ ಹೆಮ್ಮಾಡಿ, ಅಣ್ಣಪ್ಪ ಅಬ್ಬಿಗುಡ್ಡಿ, ರಾಮಚಂದ್ರ ನಾವಡ ಮೊದಲಾದವರಿದ್ದರು.

….

ಸಿಪಿಐ(ಎಂ) ಮಳವಳ್ಳಿ ತಾಲೂಕು ಸಮಿತಿ ನೇತೃತ್ವದಲ್ಲಿ ಮಳವಳ್ಳಿ ಪಟ್ಟಣದಲ್ಲಿ ನಡೆದ ಪ್ರತಿಭಟನೆ.

…..

ಸಿಪಿಐ(ಎಂ) ಮೈಸೂರು ಜಿಲ್ಲಾ ಸಂಘಟನಾ ಸಮಿತಿಯಿಂದ ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ: ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾ‌ ಸಮಿತಿ ಸದಸ್ಯರಾದ ಎನ್.ವಿಜಯ್‌ಕುಮಾರ್, ಜಯರಾಂ, ಲೀಲಾವತಿ, ಸ್ಥಳೀಯ ಸಮಿತಿ ಕಾರ್ಯದರ್ಶಿ ಸುಬ್ರಹ್ಮಣ್ಯ, ಸದಸ್ಯರಾದ ರಾಜೇಂದ್ರ, ಅಣ್ಣಪ್ಪ, ಬಸವಯ್ಯ, ಬಾಲಾಜಿ ರಾವ್, ಬಲರಾ, ಪ್ರಭಾರಕ್, ರಾಮಚಂದ್ರ, ನಾಗಣ್ಣ, ಬೀರೇಗೌಡ, ಮಹದೇವ ಸ್ವಾಮಿ, ಬಸವರಾಜ್, ಹಿರೇಮಠ್ ಮುಂತಾದವರು ಇದ್ದರು.

…..

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನಲ್ಲಿ ಪ್ರತಿಭಟನೆ: ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ, ಜಿಲ್ಲಾ ಸಮಿತಿ ಸದಸ್ಯರಾದ ಎಂ.ಎಸ್. ಹಡಪದ, ಪಿರು ರಾಠೋಡ, ಗಜೇಂದ್ರಗಡ ಶಾಖಾ ಕಾರ್ಯದರ್ಶಿ ದಾವಲಸಾಬ್ ತಾಳಿಕೋಟಿ, ಹಾಗೂ ಪಕ್ಷದ ಸದಸ್ಯರಾದ ಚಂದ್ರು ರಾಠೋಡ, ಚನ್ನಪ್ಪ ಗೂಗಲೋತ್ತರ, ಅನಿಲ್ ಆರ್, ಗುರುಕಿರಣ್, ಅಭಿಲಾಷ್ ರಾಠೋಡ, ಈಶ್ವರ ಗುಡ್ಡದ ದೇವಲಾಪೂರ, ರೇಣಪ್ಪ ಕಲ್ಗುಡಿ ಇದ್ದರು.

…..

Leave a Reply

Your email address will not be published. Required fields are marked *