“ಯುಎಸ್‍ ಜಗಳಗಂಟ ಪುಂಡನಂತೆ ವರ್ತಿಸುತ್ತಿದೆ”

ಇರಾನ್‍ ಮೇಲೆ ದಾಳಿಗೆ ಸಿಪಿಐ(ಎಂ) ಖಂಡನೆ

ಯುಎಸ್ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸಿರುವ ದಾಳಿಯನ್ನು ಸಿಪಿಐ(ಎಂ) ಪೊಲಿಟ್ ಬ್ಯೂರೋ ಬಲವಾಗಿ ಖಂಡಿಸಿದೆ. ಇರಾನ್‌ನ ರಾಷ್ಟ್ರೀಯ ಸಾರ್ವಭೌಮತ್ವ, ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಎಲ್ಲಾ ಅಂತರರಾಷ್ಟ್ರೀಯ ಒಪ್ಪಂದಗಳನ್ನು ಉಲ್ಲಂಘಿಸಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಅದು ಹೇಳಿದೆ.

ಇರಾನ್‌ನೊಂದಿಗೆ ನಡೆಯುತ್ತಿರುವ ಮಾತುಕತೆಗಳನ್ನು ನಿರ್ಲಕ್ಷಿಸಿ ಯುಎಸ್‍ ಮತ್ತು ಇಸ್ರೇಲ್ ಈ ದಾಳಿಗಳನ್ನು ನಡೆಸಿವೆ. ಈ ದಾಳಿಗಳು ಮತ್ತು ಯುಎಸ್‍ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳಿಂದ ಅವರುಗಳಿಗೆ ಈ ಮಾತುಕತೆಗಳಲ್ಲಿ ಎಂದಿಗೂ ನಂಬಿಕೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಯುಎಸ್‍ ಸಾರ್ವಭೌಮ ರಾಷ್ಟ್ರಗಳ ಮೇಲೆ ಮನಬಂದಂತೆ ದಾಳಿ ಮಾಡುವ ಜಗಳಗಂಟ ಪುಂಡನಂತೆ ವರ್ತಿಸುತ್ತಿದೆ. ವೆನೆಜುವೆಲಾ ಮೇಲಿನ ಇತ್ತೀಚಿನ ದಾಳಿ ಮತ್ತು ಕ್ಯೂಬಾಗೆ ನೀಡಲಾದ ಬೆದರಿಕೆಗಳ ನಂತರ ಇರಾನ್ ಮೇಲೆ ಈ ದಾಳಿ ನಡೆದಿದೆ.

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಸ್ರೇಲ್‌ ಭೇಟಿಯನ್ನು ಮುಗಿಸಿದ ಕೂಡಲೇ ಇರಾನ್ ಮೇಲಿನ ಈ ದಾಳಿ ನಡೆದಿದೆ. ಭಾರತ ಸರ್ಕಾರವು ತನ್ನ ಮಿತ್ರರಾಷ್ಟ್ರ ಇರಾನ್ ಮೇಲಿನ ದಾಳಿಯನ್ನು ನಿಸ್ಸಂದಿಗ್ಧವಾಗಿ ಖಂಡಿಸಬೇಕು ಮತ್ತು ವೈಷಮ್ಯಗಳನ್ನು ಮತ್ತು ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *