ಅಸ್ಪೃಶ್ಯತೆ ಅಪರಾಧಗಳು ಕಾಯಿದೆ

ಮೇ 28, 1955

ಸಂವಿಧಾನದ ಕಲಮು 17ರ ಪ್ರಕಾರ ಅಸ್ಪೃಶ್ಯತೆ ಮತ್ತು ಅದನ್ನು ಯಾವುದೇ ರೂಪದಲ್ಲಿ ಆಚರಿಸುವುದನ್ನು ನಿಷೃಧಿಸಲಾಯಿತು. ಆದರೆ ಆಹಾರ ಹಂಚಿಕೊಳ್ಳುವುದು, ದೇವಾಲಯ, ಬಾವಿ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ, ಪ್ರಾರ್ಥನೆ ಮತ್ತು ಧಾರ್ಮಿಕ ವಿಧಿ-ವಿಧಾನಗಳನ್ನು ಆಚರಿಸುವುದರಲ್ಲಿ ತಾರತಮ್ಯಗಳು ಮುಂದುವರೆದಿದ್ದು, ಸಂವಿಧಾನಿಕ ನಿಷೇಧವನ್ನು ಜಾರಿಗೆ ತರಲು ಸಂವಿಧಾನ ಅಂಗೀಕರಿಸಿ 5 ವರ್ಷಗಳ ನಂತರ ಈ ಕಾಯಿದೆಯನ್ನು ಸಂಸತ್ತ್ ನಲ್ಲಿ ಪಾಸು ಮಾಡಿತು.

ಮೇಲೆ ಹೇಳಿದ ಆಚರಣೆಗಳನ್ನು ಅಸ್ಪೃಶ್ಯತೆ ಎಂದು ಪರಿಗಣಿಸುವುದು ಹಾಗೂ ಅದನ್ನು ಆಚರಿಸುವ ವ್ಯಕ್ತಿ ಆಪಾದಿತ ಎಂದು ಪರಿಗಣಿಸುವುದು ಹಾಗೂ ಅದನ್ನು ಅಲ್ಲಗಳೆಯುವ ಜವಾಬ್ದಾರಿಯನ್ನು ಆಪಾದಿತನ ಮೇಲೆ ಹೊರಿಸುವುದು ಕಾಯಿದೆಯ ಮುಖ್ಯ ಅಂಶವಾಗಿತ್ತು. ಆದರೆ ಶಿಕ್ಷೆಯ ಪ್ರಮಾಣ ಮುಂತಾದ ಹಲವು ನ್ಯೂನತೆಗಳಿಂದಾಗಿ ಕಾನೂನಿನಲ್ಲಿ ಬದಲಾವಣೆ ತರಬೇಕಾಯಿತು. ಈಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು (ದೌರ್ಜನ್ಯಗಳ ತಡೆ) ಕಾಯಿದೆ 1989 ಮತ್ತು 1995ರಲ್ಲಿ ಅದರಡಿ ರೂಪಿಸಲಾದ ನಿಯಮಗಳು ಜಾರಿಯಲ್ಲಿವೆ.

Leave a Reply

Your email address will not be published. Required fields are marked *