ಕದನವಿರಾಮ -ಸಕಾರಾತ್ಮಕ : ಸಿಪಿಐ(ಎಂ) ಪೊಲಿಟ್ ಬ್ಯುರೊ

ಭಾರತ ಮತ್ತು ಪಾಕಿಸ್ತಾನದ ನಡುವೆ ತಕ್ಷಣವೇ  ಕದನ ವಿರಾಮ ಜಾರಿಗೆ ಬರಲಿದೆ ಎಂಬ ಪ್ರಕಟಣೆಯನ್ನು ಸಕಾರಾತ್ಮಕವಾಗಿ ಗಮನಿಸಿರುವುದಾಗಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ. ಎರಡೂ ದೇಶಗಳ ಜನತೆ ತಮ್ಮ ಪ್ರಗತಿ ಮತ್ತು ಸಮೃದ್ಧಿಗಾಗಿ ಶಾಂತಿಗೆ ಅರ್ಹರು. ಎರಡೂ ದೇಶಗಳು ಇದನ್ನು ಬಳಸಿಕೊಳ್ಳಬೇಕು ಎಂಬುದು ನಮ್ಮ ಕಳಕಳಿಯ ನಿರೀಕ್ಷೆ  ಎಂದಿರುವ ಪೊಲಿಟ್‍ಬ್ಯುರೊ, ಪಾಕಿಸ್ತಾನವು ತನ್ನ ಗಡಿಗಳೊಳಗೆ ಭಯೋತ್ಪಾದಕ ಚಟುವಟಿಕೆ ಕೊನೆಗೊಳ್ಳುವಂತೆ ನೋಡಿಕೊಳ್ಳಬೇಕು, ಇನ್ನು ಮುಂದೆ ಯಾವುದೇ ಸಂಘರ್ಷ ನಡೆಯದಂತೆ ನೋಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದೆ.

Leave a Reply

Your email address will not be published. Required fields are marked *