ಗುರುತನ್ನು ಆಧರಿಸಿದ ದ್ವೇಷವನ್ನು ತಪ್ಪಿಸಬೇಕು: ಪ್ರಕಾಶ್ ಕಾರಟ್

ಮೇ 7 ರ ಮುಂಜಾನೆ, ಭಾರತೀಯ ಸಶಸ್ತ್ರ ಪಡೆಗಳು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)  ಮತ್ತು ಪಾಕಿಸ್ತಾನಿ ಪ್ರದೇಶಗಳ ಒಳಗೆ ಒಂಬತ್ತು ನೆಲೆಗಳನ್ನು ಗುರಿಯಾಗಿಸಿ ‘ಆಪರೇಷನ್ ಸಿಂಧೂರ್’ ಎಂಬ ಹೆಸರಿನ ಮಿಲಿಟರಿ ಕಾರ್ಯಾಚರಣೆ ನಡೆಸಿವೆ. ಪಹಲ್ಗಾಮ್ ನಲ್ಲಿ ನಡೆದ ಭಾರತೀಯ ಪ್ರವಾಸಿಗರ ಬರ್ಬರ ಹತ್ಯೆಗಳಿಗೆ ಪ್ರತಿಕ್ರಿಯಿಸುವ ಅಗತ್ಯತೆಯ ಬಗ್ಗೆ ರಾಜಕೀಯ ವಲಯದಲ್ಲಿ ಒಮ್ಮತವಿತ್ತು. ನರಮೇಧದಲ್ಲಿ ಪಾಕಿಸ್ತಾನಿ ಸರಕಾರವು ನೇರವಾಗಿ ನಿರ್ವಹಿಸಲ್ಪಡುವ ಲಷ್ಕರ್-ಎ-ತಯ್ಬಾ (ಎಲ್ಇಟಿ) ಸಂಘಟನೆ ಒಳಗೊಂಡಿರುವುದನ್ನು ಭಾರತ ಸರಕಾರ ಮತ್ತು ಸಶಸ್ತ್ರ ಪಡೆಗಳ ಪ್ರತಿನಿಧಿಗಳು ಮುಂದಿಟ್ಟ ಪುರಾವೆಗಳು ಸಾಬೀತುಪಡಿಸುತ್ತದೆ. ಎಲ್ಇಟಿ ಈಗಾಗಲೇ ವಿಶ್ವಸಂಸ್ಥೆಯ ಗೊತ್ತುಪಡಿಸಿದ ಭಯೋತ್ಪಾದಕ ಸಂಘಟನೆಗಳ ಪಟ್ಟಿಯಲ್ಲಿದೆ.

ಮಿಲಿಟರಿ ಕಾರ್ಯಾಚರಣೆಗಳ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ, ಪಹಲ್ಗಾಮ್ನಲ್ಲಿ ನಡೆದ ದಾಳಿಯು ಕೋಮು ಧ್ರುವೀಕರಣವನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿತ್ತು ಎಂದು ಗಮನಸೆಳೆದರು. ಅದು ನಿಜವಾದರೂ ಭಾರತದ ಮುಖ್ಯವಾಹಿನಿಯ ಮಾಧ್ಯಮಗಳು ಮತ್ತು ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳು ಈ ಪಿತೂರಿಯನ್ನು ಗಣನೆಗೆ ತೆಗೆದುಕೊಂಡಿದೆಯೇ ಎಂಬ ಪ್ರಶ್ನೆಯನ್ನು ಸಹ ಇದು ಹುಟ್ಟುಹಾಕುತ್ತದೆ. ಅದಕ್ಕೆ ಉತ್ತರ ಸ್ವಯಂ-ವೇದ್ಯವಾಗಿದೆ.

ಬಲಪಂಥೀಯ ಹ್ಯಾಂಡಲ್ಗಳ ಬಹುತೇಕ ವಿಭಾಗ ಮತ್ತು ಪೋಸ್ಟ್ ಗಳು ಹರಡುತ್ತಲೇ ಇರುವ ವಿಷಮಯ ವಾತಾವರಣ ಕೂಡ ಕಡಿಮೆ ಅಪರಾಧವಲ್ಲ ಎನ್ನುವುದನ್ನು ಮನಗಾಣಬೇಕು. ಅವರು ಇದೇ ರೀತಿಯ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ ಮಾತ್ರವಲ್ಲದೆ, ಪಹಲ್ಗಾಮ್ನಲ್ಲಿ ಭಯೋತ್ಪಾದಕ ಯೋಜನೆಯನ್ನು ಜಾರಿಗೆ ತಂದವರಂತೆಯೇ ಜನರ ಒಗ್ಗಟ್ಟನ್ನು ಮುರಿಯಲು ಅವರು ಕೂಡ ಅಷ್ಟೇ ಸಂಕಲ್ಪ ತೊಟ್ಟಿರುವಂತೆ ಕಾಣುತ್ತದೆ.

ಪಹಲ್ಗಾಮ್ ನಲ್ಲಿ ಭಯೋತ್ಪಾದನೆ ಹರಡಿದವರ ರೀತಿಯಲ್ಲೇ ಜನರ ಒಗ್ಗಟ್ಟನ್ನು ಮುರಿಯಲು ಅವರು ಕೂಡ ಅಷ್ಟೇ ಸಂಕಲ್ಪ ತೊಟ್ಟಿರುವಂತೆ ಕಾಣುತ್ತದೆ. ಆದ್ದರಿಂದ ಮಾಧ್ಯಮದಲ್ಲಿನ ಈ ವಿಷವನ್ನು ನಿವಾರಿಸಲು ದೃಢವಾದ ಬ್ಯಾಕ್ಅಪ್ ಕಾರ್ಯಾಚರಣೆಯನ್ನು ಹೊಂದುವುದು ಕೂಡ ಅಷ್ಟೇ ಅಗತ್ಯವಾಗುತ್ತದೆ. ಈ ಉದ್ದೇಶವನ್ನು ಸಾಧಿಸಲು ಭಾರತದ ಸಂವಿಧಾನ ಹಾಗೂ ಕಾನೂನುಗಳಲ್ಲಿ ಸಾಕಷ್ಟು ನಿಯಮಗಳಿವೆ.

ಮಿಲಿಟರಿ ಕ್ರಮವು ನಿಖರವಾಗಿತ್ತು ಹಾಗೂ ಪರಿಸ್ಥಿತಿ ಉಲ್ಬಣಗೊಳ್ಳದಂತೆ ಗುರಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ಸಮಕಾಲೀನ ಜಗತ್ತಿನಲ್ಲಿ, ಪೂರ್ಣಪ್ರಮಾಣದ ಮಿಲಿಟರಿ ಸಂಘರ್ಷದ ಭೌಗೋಳಿಕ ರಾಜಕೀಯ ಪರಿಣಾಮಗಳು ನಿಸ್ಸಂಶಯವಾಗಿಯೂ ವಿನಾಶಕಾರಿಯಾಗುತ್ತದೆ ಎನ್ನುವುದು ತುಂಬಾ ಸ್ಪಷ್ಟವಾಗಿದೆ. ಆದ್ದರಿಂದ, ಇಂಥ ಕಾರ್ಯಾಚರಣೆಗಳು ಯಾವಾಗಲೂ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಸಾಧ್ಯತೆ ಹೊಂದಿರುವುದರಿಂದ ನಾವು ಆದಷ್ಟೂ ಹೆಚ್ಚು ಜಾಗರೂಕರಾಗಿರಬೇಕು. ಅಂಥ ಪರಿಸ್ಥಿತಿಯನ್ನು ನಿವಾರಿಸಬೇಕು.

ಭಾರತ ಇನ್ನಷ್ಟು ಹೆಚ್ಚು ವಿಶ್ವಾಸಾರ್ಹವಾದ ಪುರಾವೆಗಳನ್ನು ಸಂಗ್ರಹಿಸಬೇಕು. ಪಹಲ್ಗಾಮ್ ನರಮೇಧದ ಅಪರಾಧಿಗಳನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಾಕಿಸ್ತಾನಿ ವ್ಯವಸ್ಥೆಯ ಮೇಲೆ ಇನ್ನಷ್ಟು ರಾಜತಾಂತ್ರಿಕ ಮತ್ತು ರಾಜಕೀಯ ಒತ್ತಡವನ್ನು ಹೇರಲು ಇದು ಅಗತ್ಯ. ಭವಿಷ್ಯದಲ್ಲಿ ಈ ರೀತಿಯ ಭಯೋತ್ಪಾದನಾ ಆಕ್ರಮಣಗಳು ನಡೆಯುವುದನ್ನು ತಡೆಯಲು ಇದು ಅಗತ್ಯ. ಸಮೃದ್ಧಿ ಮತ್ತು ಪ್ರಗತಿಗಾಗಿ ಉಭಯ ದೇಶಗಳ ಜನರು ಶಾಂತಿ ಮತ್ತು ಸ್ಥಿರತೆಗೆ ಅರ್ಹರಾಗಿದ್ದಾರೆ. ಭಾರತ ಒಂದು ವೈವಿಧ್ಯಮಯ ಸಮಾಜವಾಗಿದೆ ಹಾಗೂ ವಿವಿಧತೆಯಲ್ಲಿ ಏಕತೆಯೇ ಅದರ ದೊಡ್ಡ ಶಕ್ತಿಯಾಗಿದೆ. ಅದು ಹಾಗೆಯೇ ಇರಬೇಕು ಕೂಡ. ನಮ್ಮ ಜನರ ಏಕತೆಯನ್ನು ಅಡ್ಡಿಪಡಿಸುವ ಮತ್ತು ದುರ್ಬಲಗೊಳಿಸುವ ಯಾವುದೇ ಕ್ರಮಗಳು ಇರಬಾರದು ಮತ್ತು ಗುರುತಿನ ಆಧಾರಿತ ದ್ವೇಷವನ್ನು ದೂರವಿಡಬೇಕು.

Leave a Reply

Your email address will not be published. Required fields are marked *