ಕೇರಳದಲ್ಲಿ ನೆರೆ ಪರಿಹಾರ-ಎಲ್‍.ಡಿ.ಎಫ್ ಸರಕಾರದ ಪ್ರಶಂಸಾರ್ಹ ಕೆಲಸ

ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿಕೆ:

ತ್ರಿಪುರಾದಲ್ಲಿ ಫ್ಯಾಸಿಸ್ಟ್-ಮಾದರಿ ದಾಳಿಗಳು-ಪತ್ರಿಕಾ ಸ್ವಾತಂತ್ರ್ಯದ ಮೇಲೆ ಸರ್ವಾಧಿಕಾರಶಾಹೀ ಹಲ್ಲೆ

ತ್ರಿಪುರಾದಲ್ಲಿ ಬಿಜೆಪಿ-ಐಪಿಎಫ್‍ಟಿ ಸರಕಾರ ಅಧಿಕಾರ ವಹಿಸಿಕೊಂಡಂದಿನಿಂದ ಸಿಪಿಐ(ಎಂ) ಮೇಲೆ ಫ್ಯಾಸಿಸ್ಟ್ ಮಾದರಿ ಹಲ್ಲೆಗಳು ಮುಂದುವರೆಯುತ್ತಿವೆ. ಸ್ಥಳೀಯ ಸಂಸ್ಥೆಗಳ ಪಚುನಾವಣೆಗಳಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆ ಹಿಂಸಾತ್ಮಕವಾಗಿ ತಡೆದುದರಿಂದ 96% ಸೀಟುಗಳನ್ನು ಬಿಜೆಪಿ ಸ್ಪಧೆಯಿಲ್ಲದೇ ಗೆದ್ದಿದೆ. ಇದು ಬಿಜೆಪಿ/ಆರೆಸ್ಸೆಸ್‍ ನ ನಿಜಸ್ವರೂಪ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಖಂಡಿಸಿದೆ.

ಸಿಪಿಐ(ಎಂ)ನೊಂದಿಗೆ ಸಹಕಾರವಿರುವ, ಮತ್ತು ರಾಜ್ಯದ ಎರಡನೇ ಅತಿ ಹೆಚ್ಚು ಪ್ರಸಾ ಇರುವ ದಿನಪತ್ರಿಕೆ ‘ದೇಶೇರ್ ಕಥಾ’ದ ನೋದಾವಣೆಯನ್ನು ರದ್ದು ಮಾಡಿರುವುದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ಒಂದು ಸರ್ವಾಧಿಕಾರಶಾಹಿ ಹಲ್ಲೆ ಎಂದಿರುವ ಕೇಂದ್ರ ಸಮಿತಿ, ಇದನ್ನು ಖಂಡಿಸುತ್ತ, ದಕ್ಕೆ ವ್ಯಾಪಕ ವಿರೋಧ ಹೆಚ್ಚುತ್ತಿರುವುದನ್ನೂ ಗಮನಿಸಿದೆ. ಮೋದಿ ಸರಕಾರದ  ಸುದ್ದಿ ಮತ್ತು ಪ್ರಸಾರ ಮಂತ್ರಾಲಯ ಕೂಡಲೇ ನೋಂದಾವಣೆ ರದ್ದು ಮಾಡಿರುವ ಆದೇಶವನ್ನು ಹಿಂತೆಗೆದುಕೊಳ್ಳಬೇಕೆಂದು ಕೇಂದ್ರ ಸಮಿತಿ ಆಗ್ರಹಿಸಿದೆ.

ಅಕ್ಟೋಬರ್‍ 6ರಿಂದ 8ರ ವರೆಗೆ ನವದೆಹಲಿಯಲ್ಲಿ ನಡೆದ ಕೇಂದ್ರ ಸಮಿತಿ ದೇಶದಲ್ಲಿನ ಕಳೆದ ಮೂರು ತಿಂಗಳ ಆಗುಹೋಗುಗಳನ್ನು ಚರ್ಚಿಸಿದ ನಂತರ ಹೊರಡಿಸಿದ ಹೇಳಿಕೆಯಲ್ಲಿ ಈ ಆಗ್ರಹವನ್ನು ಮಾಡಲಾಗಿದೆ.

ಕೇಂದ್ರ ಸಮಿತಿ ಕೇರಳದಲ್ಲಿ ನೆರೆ ಪರಿಹಾರ ಮತ್ತು ಮರುವಸತಿ ಹಾಗೂ ಶಬರಿಮಲೆ ತೀರ್ಪು, ಗುಜರಾತಿನಲ್ಲಿ ಬೇರೆ ಭಾಷಿಕರ ಮೇಲೆ ಹಲ್ಲೆಗಳು, ಅಸ್ಸಾಂನಲ್ಲಿ ಎನ್‍ ಆರ್ ಸಿ ಸ್ಥಿತಿಗತಿ, ರಫೇಲ್‍ ಹಗರಣ ,ಕಾಶ್ಮೀರದಲ್ಲಿನ ಪರಿಸ್ಥಿತ ಮತ್ತು ಚುನಾವಣಾ ತಂತ್ರಗಳನ್ನು ಕುರಿತಂತೆ ಮಾಡಿದ ಚರ್ಚೆಗಳ ಬಗ್ಗೆಯೂ ಈ ಕೇಂದ್ರ ಸಮಿತಿ ಹೇಳಿಕೆ ಪ್ರಸ್ತಾಪ ಮಾಡಿದೆ.

ಕೇರಳದಲ್ಲಿ ನೆರೆ ಪರಿಹಾರ-ಎಲ್‍ ಡಿ ಎಫ್ ಸರಕಾರದ ಪ್ರಶಂಸಾರ್ಹ ಕೆಲಸ:

ಕೇರಳದಲ್ಲಿ ಎಲ್‍ ಡಿ ಎಫ್ ಸರಕಾರ, ಪಕ್ಷ ಮತ್ತು ಜನತೆ ಇತ್ತೀಚಿನ ವಿಧ್ವಂಸಕಾರಿ ಪ್ರವಾಹ ಉಂಟುಮಾಡಿದ ಕಷ್ಟ-ನಷ್ಟಗಳನ್ನು  ಒಂದಾಗಿ ನಿಂತು ಎದುರಿಸಿರುವ ಬಗ್ಗೆ ನ್ನತ ಮೆಚ್ಚುಗೆಯನ್ನು ಕೇಂದ್ರ ಸಮಿತಿ ವ್ಯಕ್ತಪಡಿಸಿದೆ. ಎಲ್‍ ಡಿ ಎಫ್‍ ಸರಕಾರ ಸಂಕಟಕ್ಕೀಡಾದವರ ಪುನರ್ವಸತಿಗೆ ಮಾತ್ರವಲ್ಲ, ಒಂದು ನವ ಕೇರಳವನ್ನು ಕಟ್ಟುವ ಪ್ರಯತ್ನ ಮಾಡುತ್ತಿದೆ. ದೇಶದಾದ್ಯಂತ ಮತ್ತು ಹೊರದೇಶಗಳಲ್ಲೂ ರಾಜಕೀಯ ಭಿನ್ನತೆಗಳನ್ನೆಲ್ಲ ಮೀರಿ ನಿಂತು ಮುಖ್ಯಮಂತ್ರಿಗಳ ಸಂಕಟ ಪರಿಹಾರ ನಿಧಿಗೆ ಅತ್ಯುತ್ಸಾಹದಿಂದ ಕೊಡುಗೆಗಳನ್ನು ನೀಡಿರುವುದನ್ನೂ ಕೇಂದ್ರ ಸಮಿತಿ ಪ್ರಶಂಸಿಸಿದೆ.

ಶಬರಿಮಲೆ ತೀರ್ಪು- ಆರೆಸ್ಸೆಸ್‍-ಬಿಜೆಪಿಗೆ ಕಾಂಗ್ರೆಸ್‍ ನೆರವು!:

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಕುರಿತು ಸುಪ್ರಿಂ ಕೋರ್ಟ್‍ ತೀರ್ಪನ್ನು ಸಿಪಿಐ(ಎಂ) ಕೇಂದ್ರ ಸಮಿತಿ ಸ್ವಾಗತಿಸಿದೆ. ಇದು ಮಹಿಳೆಯರ ಸಮಾನ ಹಕಲ್ಕುಗಳನ್ನು ಎತ್ತಿ ಹಿಡಿದಿದೆ. ಬಿಜೆಪಿ ಮತ್ತು ಆರೆಸ್ಸೆಸ್  ಸರ್ವೋಚ್ಚ ನ್ಯಾಯಾಲಯದ  ತೀರ್ಪನ್ನು ವಿರೋಧಿಸುತ್ತಿವೆ ಮತ್ತು ಕೇರಳದಲ್ಲಿ ಅದರ ವಿರುದ್ಧ ಮದು ಚಳುವಳಿಯನ್ನು ನಡೆಸುತ್ತಿವೆ. ಈ ತೀರ್ಪು ಒಂದು ಪ್ರಗತಿಪರ ಹೆಜ್ಜೆ ಎಂದು ಕಾಂಗ್ರೆಸ್‍ನ ಅಖಿಲ ಭಾರತ ಮುಖಂಡತ್ವ ಸ್ವಾಗತಿಸಿದರೂ, ಅದರ ಕೇರಳ ಘಟಕ ಅದರ ಜಾರಿಯನ್ನು ವಿರೋಧಿಸುತ್ತಿದೆ ಮತ್ತು ಬಿಜೆಪಿ ಯೊಂದಿಗೆ ಪ್ರತಿಭಟಿಸುತ್ತಿದೆ. ಇಂತಹ ನಿಲುವಿನ ಮೂಲಕ ಕಾಂಗ್ರೆಸ್‍ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಜಾತ್ಯತೀತ-ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಮತ್ತು ಸಮಾನತೆಯ ಹಕ್ಕಿನ ವಿರುದ್ಧ ಆರೆಸ್ಸೆಸ್‍-ಬಿಜೆಪಿ ಕೂಟದ ಪ್ರಚಾರಕ್ಕೆ ನೆರವು ನೀಡುತ್ತದಷ್ಟೇ ಎಂದು ಕೇಂದ್ರ ಸಮಿತಿ ಟೀಕಿಸಿದೆ.

ಗುಜರಾತಿಯೇತರರ ಮೇಲೆ ಹಿಂಸಾಚಾರವನ್ನು ನಿಲ್ಲಿಸದ ಬಿಜೆಪಿ ರಾಜ್ಯ ಸರಕಾರ:

ಗುಜರಾತಿನಲ್ಲಿ  ಉತ್ತರ ರಾಜ್ಯಗಳಿಂದ, ಮುಖ್ಯವಾಗಿ ಬಿಹಾರ ಮತ್ತು ಉತ್ತರಪ್ರದೇಶದಿಂದ ಬಂದು ಕೆಲಸ ಮಾಡುತ್ತಿರುವ ಜನಗಳ ಮೇಲೆ ಹಿಂಸಾಚಾರವನ್ನು ಹರಿಯ ಬಿಟ್ಟಿರುವುದನ್ನು ಕೇಂದ್ರ ಸಮಿತಿ ಖಂಡಿಸಿದೆ. ಒಬ್ಬ ವಲಸೆ ಕಾರ್ಮಿಕ ಒಂದು ಮಗುವಿನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಹೇಳಲಾಗಿದೆ, ಇದು ಖಂಡನಾರ್ಹ. ಈ  ಹಿಂಸಾಚಾರದಿಂದಾಗಿ ಸಾವಿರಾರು ಕಾರ್ಮಿಕರು ತಮ್ಮ ಕುಟುಂಬಗಳೊಮದಿಗೆ ಪ್ರಾಣ ಭೀತಿಯಿಂದ ಡಿ ಹೋಗುತ್ತಿದ್ದಾರೆ.

ಗುಜರಾತಿನ ಬಿಜೆಪಿ ರಾಜ್ಯ ಸರಕಾರ  ಹಿಂಸಾಚಾರವನ್ನು ತಡೆಯುವ ಬದಲು ಪರಿಸ್ಥಿತಿ ಗಂಭೀರಗೊಳ್ಳು ಅವಕಾಶ ಮ಻ಡಿ ಕೊಡುತ್ತಿದೆ. ರಾಜ್ಯದಲ್ಲಿನ ಠಾಕುರ್‍ ಸೇನೆ ಭಾವೋದ್ರೇಕಗಳನ್ನು ಬಡಿದೆಬ್ಬಿಸುತ್ತಿದ್ದು ಇದು ಗುಜರಾತಿಯೇತರರಲ್ಲಿ ಅಭದ್ರತೆಯ ಭಾವನೆಯನ್ನು ಹೆಚ್ಚಿಸುತ್ತಿದೆ. ಇದು ದೂಷಣೀಯ ದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.

ಅಸ್ಸಾಂ ನಲ್ಲಿ ಎನ್‍.ಆರ್.ಸಿ- ಪ್ರತಿಕೂಲಕರ ಕ್ರಮ:

ಅಸ್ಸಾಂ ನಲ್ಲಿ ರಾಷ್ಟ್ರೀಯ ಪೌರರ ರಿಜಿಸ್ಟರ್(ಎನ್‍.ಆರ್.ಸಿ)ನಲ್ಲಿ ಹೆಸರು ಬಿಟ್ಟು ಹೋದವರ ಅಪೀಲುಗಳ ಬಗ್ಗೆ ಸುಪ್ರಿಂ ಕೋಟರ್ಟ್‍ ಆದೇಶಗಳಂತೆ ನಿರ್ಧರಿಸಬೇಕಾಗಿದೆ. ಯಾವ ಭಾರತೀಯರನ್ನೂ ನೋದಾಯಿಸದೆ ಇರಬಾರದು ಎಂಬ ಸಿಪಿಐ(ಎಂ)ನ ನಿಲುವನ್ನು ಪುನರುಚ್ಚರಿಸಿರುವ ಕೇಂದ್ರ ಸಮಿತಿ, ಈಗ ಸುಪ್ರಿಂ ಕೋರ್ಟ್ ಪೌರತ್ವವನ್ನು ಸಾಬೀತು ಪಡಿಸಲು ಆಧಾರವಾಗುವ ಐದು  ದಸ್ತಾವೇಜುಗಳನ್ನು ಹಿಂದಕ್ಕೆ ಪಡೆದಿರುವುದನ್ನು ಮಂಜೂರು ಮಾಡಿರುವುದು ದುರದೃಷ್ಟಕರ ಎಂದಿದೆ. ಇದರಿಂದ ಬಹಳಷ್ಟು ಜನಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ  ಈ ದಸ್ತಾವೇಜುಗಳನ್ನು ಮತ್ತೆ ಸೇರಿಸಬೇಕು ಎಂದು ಕೇಂದ್ರ ಸಮಿತಿ ಹೇಳಿದೆ.

ರಫೆಲ್‍ ಹಗರಣ, ಚಮಚಾ ಬಂಡವಾಳಶಾಹಿ  ಮತ್ತು ರಾಜಕೀಯ ಭ್ರಷ್ಟಾಚಾರ :

ಮಹಾ ರಫೆಲ್‍ ಹಗರಣದಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಮೋದೀ ಸರಕಾರ ಎಷ್ಟೇ ಪ್ರಯತ್ನಿಸಿದರೂ ನಂತರದ ಎಲ್ಲ ಬೆಳವಣಿಗೆಗಳೂ ಈ ವ್ಯವಹಾರ ನಡೆಸಿದ್ದು ಪ್ರಧಾನ ಮಂತ್ರಿಯ ಚಮಚಾ ಬಂಡವಾಳಶಾಹಿ ಗೆಳೆಯನ ಪ್ರಯೋಜನಕ್ಕಾಗಿ ಎಂಬದನ್ನು ದೃಢಪಡಿಸಿವೆಯಷ್ಟೇ. ಈ ಪ್ರಕ್ರಿಯೆಯಲ್ಲಿ ನಮ್ಮ ದೇಶದ ಭದ್ರತೆಯನ್ನು ಶಿಥಿಲಗೊಳಿಸಲಾಗಿದೆ. ಇದು ರಕ್ಷಣಾ ಉತ್ಪಾದನೆಯ ದೊಡ್ಡ ಪ್ರಮಾಣದ ಖಾಸಗೀಕರಣಕ್ಕೆಕೂಡ  ಹಾದಿ ಮಾಡಿಕೊಟ್ಟಿದೆ. ಅದು ದೇಶದ ಭದ್ರತೆಯ ಆದ್ಯತೆಗಳ ಹಿತಗಳಿಗೆ ಹೊರತಾಗಿರುವಂತದ್ದು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ.

ಈ ಸರಕಾರ ಚುನಾವಣಾ ಬಾಂಡುಗಳ ಬದಲಾವಣೆಯ ಮೂಲಕ ರಾಜಕೀಯ ಭ್ರಷ್ಟಾಚಾರವನ್ನು ಸಾಂಸ್ಥೀಕರಿಸಿರುವುದರಿಂದ ಇಂತಹ ಚಮಚಾ ಬಂಡವಾಳಶಾಹಿ ಆಳುವ ಪಕ್ಷಕ್ಕೆ ನಿಧಿಗಳನ್ನು ಹರಿಸುವ ಕೊಳಾಯಿಯಾಗುತ್ತಿದೆ,  ಈ ಬಗ್ಗೆ  ಯಾರೂ ಪ್ರಶ್ನೆ ಕೇಳುವಂತಿಲ್ಲ, ಯಾರಿಗೂ ಉತ್ತರ ಕೊಡಬೇಕಾಗಿಲ್ಲ ಎಂದು ಕೇಂದ್ರ ಸಮಿತಿ ಈ ರಾಜಕೀಯ ಭ್ರಷ್ಟಾಚಾರದ ಸಾಂಸ್ಥೀಕರಣವನ್ನು ವರ್ಣಿಸಿದೆ.

ಜಮ್ಮು ಮತ್ತು ಕಾಶ್ಮೀರ-ದೇಶಾದ್ಯಂತ ಕೋಮುಧ್ರುವೀಕರಣಕ್ಕಾಗಿ:

ಪ್ರಮುಖ ಪಕ್ಷಗಳಾದ ನ್ಯಾಶನಲ್ ‍ಕಾನ್ಫರೆನ್ಸ್ , ಪಿಡಿಪಿ ಮತ್ತು ಸಿಪಿಐ(ಎಂ) ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಚುನಾವಣೆಗಳನ್ನು ಬಹಿಷ್ಕರಿಸಿದರೂ ರಾಜ್ಯಪಾಲರು ಮತದಾನ ನಡೆಸಿಯೇ ಬಿಟ್ಟಿದ್ದಾರೆ. ಈ ಮತದಾನದ ಮೊದಲೇ ಈ ಚುನಾವಣೆ ಇಬ್ಬರು ನ್ಯಾಶನಲ್‍ ಕಾನ್ಫರೆನ್ಸ್ ಕಾರ್ಯಕರ್ತರ ಜೀವಗಳನ್ನು  ಆಹುತಿ ತೆಗೆದುಕೊಂಡಿದೆ.

ಸಂವಿಧಾನದ ಕಲಮು 370 ಮತ್ತು ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಯ ಬೆನ್ನೆಲುಬಾದ ಸಂವಿಧಾನದ ಸೆಕ್ಷನ್‍ 35 ಎ ನ್ನು ರದ್ದು ಮಾಡುವುದನ್ನು ಕುರಿತಂತೆ  ಸುಪ್ರಿಂ ಕೋರ್ಟಿನ ವಿಚಾರಣೆಗೆ ಒಳಗಾಗಿರುವ ಅರ್ಜಿಯಲ್ಲಿ ಸಿಪಿಐ(ಎಂ) ತನ್ನ ಶಾಸಕ ಮಹಮ್ಮದ್‍ ಯೂಸುಫ್‍ ತರಿಗಾಮಿ ಮೂಲಕ ಮಧ್ಯಪ್ರವೇಶ ಅರ್ಜಿ ಹಾಕಿದೆ.

ಮೋದಿ ಸರಕಾರ  ಜಮ್ಮು ಮತ್ತು ಕಾಶ್ಮೀರದಲ್ಲಿನ ಗಲಭೆಗಳನ್ನು ಬಿಜೆಪಿ  ದೇಶಾದ್ಯಂತ ಕೋಮುವಾದಿ ಧ್ರುವೀಕರಣದ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ.

17 ನೇ ಲೋಕಸಭಾ ಚುನಾವಣೆಗಳಲ್ಲಿ ಸಿಪಿಐ(ಎಂ)  ಮುಖ್ಯ ಗುರಿ  2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ

  1.  ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವುದು,
  2.  ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಬಲವನ್ನು ಹೆಚ್ಚಿಸಿಕೊಳ್ಳುವುದು ಮತ್ತು
  3.  ಕೇಂದ್ರದಲ್ಲಿ ಒಂದು ಪರ್ಯಾಯ ಜಾತ್ಯತೀತ ಸರಕಾರ ರಚನೆಯಾಗುವಂತೆ ಮಾಡುವುದು ಸಿಪಿಐ(ಎಂ)ನ ಪ್ರಮುಖ ಕೆಲಸವಾಗಿರುತ್ತದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ನಿರ್ಧರಿಸಿದೆ.

ಸಾರ್ವತ್ರಿಕ ಚುನಾವಣೆಗಳ ಹಿನ್ನೆಲೆಯಲ್ಲಿ ಪ್ರಸಕ್ತ ಸಂದರ್ಭವನ್ನು ಚರ್ಚಿಸುತ್ತ ,ಮೋದಿ ಸರಕಾರ ನಡೆಸಿರುವ ನಾಲ್ಕು ಅಲಗುಗಳ ದಾಳಿ ತೀವ್ರಗೊಳ್ಳುತ್ತಿದೆ ಎಂದು ಕೇಂದ್ರ ಸಮಿತಿ ವಿಶ್ಲೇಷಿಸಿದೆ. ಇದರಲ್ಲಿ ಬೆಲೆಯೇರಿಕೆ, ಅದರಲ್ಲೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಗಳು, ನಿರುದ್ಯೋಗ, ಆಳಗೊಳ್ಳುತ್ತಿರುವ ಕೃಷಿ ಸಂಕಟ ಬಹುಪಾಲು ಜನಗಳ ಬದುಕಿನ ಪರಿಸ್ಥಿತಿಗಳನ್ನು, ಜೀವನಾಧಾರಗಳನ್ನು  ತೀವ್ರವಾಗಿ ಬಾಧಿಸಿವೆ.

ಕೋಮುವಾದಿ ಧ್ರುವೀಕರಣ ತೀಕ್ಷ್ಣಗೊಳ್ಳುತ್ತಿದ್ದು ದ್ವೇಷ, ಹಿಂಸಾಚಾರ ಮತ್ತು ಭಯೋತ್ಪಾದನೆಯ ವಾತಾವರಣ ಹರಡುತ್ತಿದೆ. ಇದರಲ್ಲಿ ಬಹಳಷ್ಟು ಮುಗ್ಧ ಜೀವಗಳ, ಮುಖ್ಯವಾಗಿ ದಲಿತರು ಮತ್ತು ಮುಸ್ಲಿಮರ ಜೀವಗಳ ಬಲಿಯಾಗಿದೆ. ಸರ್ವಾಧಿಕಾರಶಾಹಿ ದಾಳಿಗಳು ಜನಗಳ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ, ಸಂಸದೀಯ ಸಂಸ್ಥೆಗಳನ್ನು ಮತ್ತು ಪ್ರಾಧಿಕಾರಗಳನ್ನು ಶಿಥಿಲಗೊಳಿಸುವ ಮೂಲಕ  ತೀವ್ರಗೊಳ್ಳುತ್ತಿವೆ.

ಭಾರತವನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳ ಕಿರಿಯ ಸಾಮರಿಕ ಮಿತ್ರನ ಸ್ಥಾನಕ್ಕೆ ಇಳಿಸಿ ನಮ್ಮ ದೇಶದ ಸಾರ್ವಭೌಮತೆಯನ್ನು, ಮತ್ತು ಒಂದು ಸ್ವತಂತ್ರ ವಿದೇಶಾಂಗ ಧೋರಣೆಯೊಂದಿಗೆ ಅಭಿವೃದ್ಧಿಶೀಲ ದೇಶಗಳ ಹಕ್ಕುಗಳನ್ನು ಪ್ರತಿಪಾದಿಸುತ್ತ ಬಂದಿರುವ ನಮ್ಮ ದೇಶದ ಸ್ಥಾನಮಾನವನ್ನು ಶಿಥಿಲಗೊಳಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮುಂಬರುವ 17ನೇ ಲೋಕಸಭಾ ಚುನಾವಣೆಗಳಲ್ಲಿ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸುವುದು ಸಿಪಿಐ(ಎಂ) ಮತ್ತು ಎಡ ಹಾಗೂ ಪ್ರಜಾಪ್ರಭುತ್ವವಾದಿ ಶಕ್ತಿಗಳ ಪ್ರಮುಖ ಕಾರ್ಯಭಾರ ಎಂಬ ಪಕ್ಷದ 22ನೇ ಮಹಾಧಿವೇಶನದಲ್ಲಿ ರೂಪಿಸಿಕೊಂಡ ತಿಳುವಳಿಕೆಯನ್ನು ಸಿಪಿಐ(ಎಂ) ಕೇಂದ್ರ ಸಮಿತಿ ಪುನರುಚ್ಚರಿಸಿದೆ. ಅದರ ಪ್ರಕಾರ ಮೇಲೆ ಹೇಳಿದ ಮೂರು ಕಾರ್ಯಭಾರಗಳನ್ನು ಈಡೇರಿಸಲು  ಅದು ನಿರ್ಧರಿಸಿದೆ.

ವಿಧಾನಸಭಾ ಚುನಾವಣೆಗಳು: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಡ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಸಿಪಿಐ(ಎಂ) ತನ್ನ ವಿಧಾನಸಭಾ ಪ್ರಾತಿನಿಧ್ಯವನ್ನು ಬಲಪಡಿಸಿಕೊಳ್ಳುವ ಗುರಿಯಿಂದ ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತದೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸಲು ಪ್ರಚಾರ ಮಾಡುತ್ತದೆ ಎಂದು ಕೇಂದ್ರ ಸಮಿತಿ ಹೇಳಿಕೆ ತಿಳಿಸಿದೆ.

ತೆಲಂಗಾಣದಲ್ಲಿ ಆಳುವ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್‍) ಮತ್ತು ಬಿಜೆಪಿಯನ್ನು ಸೋಲಿಸಲು ಸಿಪಿಐ(ಎಂ) ಕೆಲಸ ಮಾಡುತ್ತದೆ. ಇದನ್ನು ಸಾಧಿಸಲು ಸಿಪಿಐ(ಎಂ) ಒಂದು ಪ್ರಮುಖ ಭಾಗವಾಗಿರುವ ಬಹುಜನ ಎಡರಂಗ(ಬಿಎಲ್‍ಎಫ್) ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಈ ಬಗ್ಗೆ ಬಿಎಲ್‍ಎಫ್‍ ನ  ಅಂಗ ಪಕ್ಷಗಳೊಂದಿಗೆ ಸಮಾಲೋಚನೆಗಳು ನಡೆಯುತ್ತಿವೆ. ಸಿಪಿಐ(ಎಂ) ತನ್ನ ಚುನಾವಣಾ ಚಿಹ್ನೆಯ ಮೇಲೆ ಸ್ಪರ್ಧಿಸುವ 12 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಇನ್ನೊಂದು ಪಟ್ಟಿ ಸದ್ಯದಲ್ಲೇ ಪ್ರಕಟವಾಗಲಿದೆ.

ರಫೆಲ್ ಹಗರಣ, ಕಾರ್ಪೊರೇಟ್‍ ಸುಸ್ತಿ ಸಾಲಗಳ ಮೇಲೆ ಪ್ರಚಾರಾಂದೋಲನ

ನೋಟು ರದ್ದತಿಯ ಎರಡನೇ ವಾರ್ಷಿಕದ ಆಚರಣೆ: ಕೇಂದ್ರ ಸಮಿತಿ ಕರೆ

ಆಗಸ್ಟ್ 9 ರ ಜೈಲ್‍ ಭರೋ ಮತ್ತು ಸಪ್ಟಂಬರ್‍ 5ರ ಸಂಸದ್‍ ಚಲೋ ಕಾರ್ಯಾಚರಣೆಗಳಲ್ಲಿ ಕಂಡುಬಂದ ರೈತರು, ಕಾರ್ಮಿಕರು ಮತ್ತು ಕೃಷಿ ಕೂಲಿಕಾರರ ಅಣಿನೆರಿಕ ಬಹಳ ಮಹತ್ವದ್ದಾಗಿದೆ ಎಂದು ಗಮನಿಸಿದ ಸಿಪಿಐ(ಎಂ) ಕೇಂದ್ರ ಸಮಿತಿ ಅಕ್ಟೋಬರ್‍28ರಿಂದ 30 ರ ವರೆಗಿನ ಕಿಸಾನ್‍ ಲಾಂಗ್‍ ಮಾರ್ಚ್ ಮತ್ತು ನವಂಬರ್‍ 3ರಂದು “ಎಲ್ಲಿದೆ ನನ್ನ ಉದ್ಯೋಗ’ ಎಂದು ಮೋದಿ ಸರಕಾರವನ್ನು ಪ್ರಶ್ನಿಸುವ ಯುವಜನರ ದಿಲ್ಲಿ ನಡೆ, ಜನ ಏಕತಾ ಜನ ಅಧಿಕಾರ್‍ ಆಂದೋಲನದ ಕರೆಗಳು ಹಾಗೂ ಜನವರಿ 8ಮತ್ತು 9ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಕೇಂದ್ರ ಕಾರ್ಮಿಕ ಸಂಘಗಳ  ಕರೆಗಳಿಗೆ ಬೆಂಬಲ ವ್ಯಕ್ತಪಡಿಸಲು ಕೇಂದ್ರ ಸಮಿತಿ ನಿರ್ಧರಿಸಿದೆ.

ಮೋದಿ ಸರಕಾರದ ಭ್ರಷ್ಟಾಚಾರ ಮತ್ತು ಚಮಚಾ ಬಂಡವಾಳಶಾಹಿಯನ್ನು ಬಯಲಿಗೆಳೆಯುವ ಪ್ರಚಾರಾಂದೋಲನದ ಭಾಗವಾಗಿ ಸಿಪಿಐ(ಎಂ) ಇತರ ಎಡಪಕ್ಷಗಳೊಂದಿಗೆ ಒಂದು ದೇಶವ್ಯಾಪಿ ಪ್ರಚಾರ ನಡೆಸಲಿದೆ. ಇದರಲ್ಲಿ ರಫೇಲ್‍ ಹಗರಣ ಮತ್ತು ಕಾರ್ಪೊರೇಟ್‍ ಸುಸ್ತಿ ಸಾಲಗಳು ಹಾಗೂ ಇಂತಹ ಹಗರಣಕೋರರಿಗೆ ಮೋದಿ ಸರಕಾರದ ಕೃಪಾಪೋಷಣೆಯನ್ನು ಎತ್ತಿ ತೋರಿಸಲಾಗುವುದು ಎಂದು ಕೇಂದ್ರ ಸಮಿತಿ ಹೇಳಿದೆ.

ನವಂಬರ್‍ ನಲ್ಲಿ ನೋಟುರದ್ಧತಿಯ ಎರಡನೇ ವಾರ್ಷಿಕದ ಆಚರಣೆಯನ್ನು ದೇಶಾದ್ಯಂತ ಪ್ರತಿಭಟನಾ ಕಾರ್ಯಾಚರಣೆಗಳ ಮೂಲಕ ಇತರ ಎಡಪಕ್ಷಗಳೊಂದಿಗೆ ನಡೆಸಲಾಗುವುದು ಎಂದೂ ಅದು ಹೇಳಿದೆ.

ಎಡ , ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಶಕ್ತಿಗಳೊಂದಿಗೆ ಕೋಮುವಾದದ ವಿರುದ್ಧ ಪ್ರಚಾರವನ್ನು ಮತ್ತಷ್ಟು ಬಲಗೊಳಿಸಲಾಗುವುದು ಎಂದೂ ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.

Leave a Reply

Your email address will not be published. Required fields are marked *