ರೈತರ ವಿರುದ್ಧ ಪೋಲಿಸ್‍ ಕಾರ್ಯಾಚರಣೆಗೆ ಖಂಡನೆ

ದಿಲ್ಲಿಯ ಹೊರವಲಯದಲ್ಲಿ ಅಕ್ಟೋಬರ್‍ 2ರಂದು ರೈತರ ಮೇಲೆ ಅಮಾನುಷ  ದಾಳಿಯನ್ನು ಎಡಪಕ್ಷಗಳು ಖಂಡಿಸಿವೆ. ಇದು ಮೋದಿ ಸರಕಾರದ ರೈತ-ವಿರೋಧಿ ನಿಲುವನ್ನು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಅವು ಹೇಳಿವೆ. ಪ್ರಧಾನ ಮಂತ್ರಿ ಮೋದಿಯವರು 2014 ರ ಚುನಾವಣೆಗಳ ವೇಳೆಯಲ್ಲಿ ನೀಡಿದ ಆಶ್ವಾಸನೆಗಳೆಲ್ಲದರಲ್ಲೂ ವಿಶ್ವಾಸಘಾತ ಮಾಡಿದ್ದಾರೆ.

ತದ್ವಿರುದ್ಧವಾಗಿ ಅವರ ಧೋರಣೆಗಳು ಕರ್ಷಕ ಸಂಕಟವನ್ನು ಇನ್ನಷ್ಟು ಆಳಗೊಳಿಸಿವೆ, ಸಾವಿರಾರು ರೈತರು ಸಾಲ ಹೊರೆಯಿಂದಾಗಿ ಆತ್ಮಹತ್ಯೆಗಳಿಯುವಂತೆ ಮಾಡಿವೆ ಎಂದು ಎಡಪಕ್ಷಗಳು ಟೀಕಿಸಿವೆ.

ರಫೇಲ್‍ ಹಗರಣ-ಜೆಪಿಸಿ ತನಿಖೆ ನಡೆಯಲೇ ಬೇಕು:ಎಡಪಕ್ಷಗಳ ಆಗ್ರಹ

ಜನಾಧಿಕಾರ ಆಂದೋಲನದ ಭ್ರಷ್ಟಾಚಾರ-ವಿರೋಧಿ ವಾರಾಚರಣೆಗೆ ಬೆಂಬಲ

ರಫೇಲ್‍ ಯುದ್ಧ ವಿಮಾನಗಳ ಖರೀದಿಯಲ್ಲಿ ಸಂದೇಹದ ಮುಳ್ಳು ಪ್ರಧಾನ ಮಂತ್ರಿಗಳತ್ತವೇ ಬೊಟ್ಟು ಮಾಡುತ್ತಿದೆ. ಈ ಮಹಾ ಹಗರಣವನ್ನು ಒಂದು ಜಂಟಿ ಸಂಸದೀಯ ಸಮಿತಿಯ ವಿಚಾರಣೆಗೆ ಒಪ್ಪಿಸಬೇಕು ಎಂದು ಸಿಪಿಐ(ಎಂ), ಸಿಪಿಐ ಮತ್ತು ಸಿಪಿಐ(ಎಂಎಲ್)-ಲಿಬರೇಶನ್ ಈ ಮೂರು ಎಡಪಕ್ಷಗಳು ಅಕ್ಟೋಬರ್ 2 ರಂದು ನೀಡಿರುವ ಒಂದು ಜಂಟಿ ಹೇಳಿಕೆಯಲ್ಲಿ ಆಗ್ರಹಿಸಿವೆ.

ಜನ ಏಕತಾ ಜನ ಅಧಿಕಾರ್ ಆಂದೋಲನ (ಜೆಇಜೆಎಎ) ಅಕ್ಟೋಬರ್‍22ರಿಂದ 27 ರ ವರೆಗೆ ಈ ಮೋದಿ ಸರಕಾರದ ಭ್ರಷ್ಟಾಚಾರದ ವಿರುದ್ಧ ವಾರಾಚರಣೆ ನಡೆಸಲು ನಿರ್ಧರಿಸಿದ್ದು ಎಡಪಕ್ಷಗಳು ಅದಕ್ಕೆ ಬೆಂಬಲ ವ್ಯಕ್ತಪಡಿಸಿವೆ.

ಇತರ ಎಡಪಕ್ಷಗಳೊಂದಿಗೆ ಸಮಾಲೋಚಿಸಿ ಈ ಮಹಾ ಹಗರಣವನ್ನು ಬಯಲುಗೊಳಿಸಲು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲು ಒಂದು ರಾಷ್ಟ್ರವ್ಯಾಪಿ ಪ್ರತಿಭಟನಾ ಕಾರ್ಯಾಚರಣೆಗೆ ಕರೆ ನೀಡಲಾಗುವುದು ಎಂದು ಈ ಹೇಳಿಕೆ ತಿಳಿಸಿದೆ.

ಭೀಮಾ-ಕೋರೆಗಾಂವ್: ಸುಳ್ಳು ಆಪಾದನೆಗಳು ಬಯಲಿಗೆ

ಭೀಮಾ-ಕೋರೆಗಾಂವ್‍ ಹಿಂಸಾಚಾರ ಕುರಿತ ಮೊಕದ್ದಮೆಗೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟ ಐವರಲ್ಲಿ ಒಬ್ಬರಾದ ಗೌತಮ್‍ ನವ್ಲಖ ರವರನ್ನು ಪುಣೆಗೆ ಒಯ್ಯಲು ಪುಣೆ ಪೋಲೀಸರು ಪಡೆದ ವರ್ಗಾವಣೆ ರಿಮಾಂಡನ್ನು ದಿಲ್ಲಿ ಹೈಕೋರ್ಟ್ ರದ್ದು ಮಾಡಿರುವುದನ್ನು, ಮತ್ತು ಅವರ ಗೃಹಬಂಧನವನ್ನು ಕೊನೆಗೊಳಿಸಿರುವುದನ್ನು ಎಡಪಕ್ಷಗಳು ಸ್ವಾಗತಿಸಿವೆ. ಬಂಧನ ಅಸಮರ್ಥನೀಯ ಮತ್ತು ಸಂವಿಧಾನದ ಮೂಲ ಅಂಶಗಳಿಗೆ ಅನುಗುಣವಾಗಿಲ್ಲ  ಎಂಬ ನ್ಯಾಯಾಲಯದ ವೀಕ್ಷಣೆಯ ಹಿನ್ನೆಲೆಯಲ್ಲಿ ಇದು ಬಂದಿದೆ.

ಇದು ಆರೆಸ್ಸೆಸ್‍-ಬಿಜೆಪಿ ಈ ಐವರು ಕಾರ್ಯಕರ್ತರು “ನಗರ ನಕ್ಸಲ್‍”ಗಳು ಎಂಬ ಹುಸಿ ನೆವದ ಆಧಾರದಲ್ಲಿ ಆರಂಭಿಸಿರುವ ಸುಳ್ಳಿನ ಪ್ರಚಾರದ ನಿಜಹೂರಣವನ್ನು ಬಯಲಿಗೆಳೆದಿದೆ ಎಂದು ಎಡಪಕ್ಷಗಳು ಹೇಳಿವೆ.

 02-10-2018-Left-Party-press-Note-1

ಉ.ಪ್ರ.: ಕಗ್ಗೊಲೆ-ಕಾನೂನು ಹೀನತೆಯನ್ನು ಹರಡುವವರ ವಿರುದ್ಧ ಕಠಿಣ ಕಾರ್ಯಾಚರಣೆಗೆ ಆಗ್ರಹ

ಉತ್ತರಪ್ರದೇಶದಲ್ಲಿ ಲಖನೌನಲ್ಲಿ 38 ವರ್ಷದ ಆಪಲ್‍ ಕಂಪನಿಯ ಅಧಿಕಾರಿ ವಿವೇಕ ತಿವಾರಿಯ ಕಗ್ಗೊಲೆಯನ್ನು ಎಡಪಕ್ಷಗಳು ಬಲವಾಗಿ ಖಂಡಿಸಿವೆ. ಇಂತಹ ಕಾನೂನುಹೀನತೆಯನ್ನು ಹರಡುತ್ತಿರುವ, ಜನಗಳನ್ನು ಸಾಯಿಸುತ್ತಿರುವ ಪೋಲೀಸ್‍ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವು ಆಗ್ರಹಿಸಿವೆ. ಅಲಿಗಡ್‍ನಲ್ಲಿ ಇಬ್ಬರು ಅಮಾಯಕರ ‘ಎನ್‍ಕೌಂಟರ್’ ಕೊಲೆಯ ಬೆನ್ನಲ್ಲೇ ಈ ಕೊಲೆ ನಡೆದಿದೆ. ಈ ‘ಎನ್‍ಕೌಂಟರ್ ರಾಜ್ಯಭಾರ’ದ ಘಟನೆಯನ್ನು  ವೀಕ್ಷಿಸಲು ಮಾಧ್ಯಮಗಳನ್ನು ಆಹ್ವಾನಿಸಲಾಗಿತ್ತು ಎಂಬ ಸಂಗತಿಯತ್ತವೂ ಈ ಹೇಳಿಕೆ ಗಮನ ಸೆಳೆದಿದೆ.

02-10-2018-Left-Party-press-Note-2

Leave a Reply

Your email address will not be published. Required fields are marked *