ಸಿಪಿಐ(ಎಂ) ಚುನಾವಣಾ ಪ್ರಣಾಳಿಕೆ :18 ನೇ ಲೋಕಸಭೆ 2024

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ)

 ಚುನಾವಣಾ ಪ್ರಣಾಳಿಕೆ

18 ನೇ ಲೋಕಸಭೆ 2024

ಚುನಾವಣಾ ಪ್ರಣಾಳಿಕೆಯ  ಇಡೀ ದಸ್ತಾವೇಜನ್ನು ಇಲ್ಲಿಂದ Download ಮಾಡಬಹುದು

http://www.cpimkarnataka.org/cpim/wp-content/uploads/2024/04/CPIM-Manisesto-Kannada-Ver-6-3.pdf

ಒಂದು ದಶಕದಷ್ಟು ದೀರ್ಘ ಕಾಲದ ಮೋದಿ ನೇತೃತ್ವದಲ್ಲಿನ  ಬಿಜೆಪಿ ಸರ್ಕಾರದ ಆಡಳಿತದಿಂದಾಗಿ ಭಾರತದ ಜಾತ್ಯತೀತ, ಪ್ರಜಾಸತ್ತಾತ್ಮಕ, ಗಣರಾಜ್ಯವು ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ 2024 ರ ಲೋಕಸಭಾ ಚುನಾವಣೆಯು ನಡೆಯುತ್ತಿದೆ.

ಸಂವಿಧಾನದ ನಾಲ್ಕು ಆಧಾರ ಸ್ತಂಭಗಳನ್ನು – ಜಾತ್ಯತೀತ ಪ್ರಜಾಪ್ರಭುತ್ವ, ಆರ್ಥಿಕ ಸಾರ್ವಭೌಮತ್ವ, ಒಕ್ಕೂಟವಾದ ಮತ್ತು ಸಾಮಾಜಿಕ ನ್ಯಾಯ – ವ್ಯವಸ್ಥಿತವಾಗಿ ಕಳಚಿ ಹಾಕುತ್ತಿರುವ ಪ್ರಕ್ರಿಯೆಗೆ ಭಾರತ ಇಂದು ಸಾಕ್ಷಿಯಾಗುತ್ತಿದೆ. ಭಾರತದ ದುಡಿಯುವ ಜನರ ಹಕ್ಕುಗಳನ್ನು ನಾಶಮಾಡಲು ಮೋದಿ ಸರ್ಕಾರದ ಸರ್ವಾಧಿಕಾರಿ-ಕೋಮುವಾದಿ ಆಳ್ವಿಕೆಯು ಫ್ಯಾಸಿಸ್ಟ್ ಮಾದರಿಯ ವಿಧಾನಗಳನ್ನು ಬಳಸುತ್ತಿದೆ; ಸರ್ಕಾರದ ಅಧಿಕಾರ ಯಂತ್ರಗಳನ್ನು ಮತ್ತು ತನ್ನ ಸಂಸದೀಯ ಬಹುಮತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ; ಆ ಮೂಲಕ ಭಾರತವನ್ನು ಜಗತ್ತಿನ ಅತ್ಯಂತ ಅಸಮಾನ ಸಮಾಜವನ್ನಾಗಿ ಪರಿವರ್ತಿಸುತ್ತಿದೆ; ಸಂಕುಚಿತ ಮನೋಭಾವದ ಆಧಾರದಲ್ಲಿ ಜನರಲ್ಲಿ ವಿಭಜನೆ ಉಂಟು ಮಾಡುವ ಸಲುವಾಗಿ ಅವರ ಮೇಲೆ ತನ್ನ ವಿಷಪೂರಿತ ಕೋಮುವಾದಿ ಸಿದ್ಧಾಂತವನ್ನು ಹೇರುತ್ತಿದೆ.

ಆ ಕಾರಣದಿಂದ 18 ನೇ ಲೋಕಸಭಾ ಚುನಾವಣೆಯು ನಿರ್ಣಾಯಕ ಪ್ರಾಮುಖ್ಯತೆಯನ್ನು ಪಡೆಯುತ್ತದೆ; ‘ನಾವು ಭಾರತದ ಜನರು’ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ಭಾರತದ ಸಂವಿಧಾನದಲ್ಲಿ ಘೋಷಿಸಿರುವಂತೆ ಭಾರತೀಯ ಗಣತಂತ್ರದ ಗುಣಲಕ್ಷಣಗಳಾದ ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಸಾಧ್ಯವೇ ಎನ್ನುವುದನ್ನು ಅದರ ಫಲಿತಾಂಶವು ನಿರ್ಧರಿಸುತ್ತದೆ. ಭಾರತೀಯ ಗಣತಂತ್ರದ ಗುಣಲಕ್ಷಣಗಳಾದ ಜಾತ್ಯತೀತತೆ ಹಾಗೂ ಪ್ರಜಾಪ್ರಭುತ್ವವನ್ನು ಒಂದು ವಿವೇಕರಹಿತವಾದ ಅಸಹಿಷ್ಣುತೆ, ದ್ವೇಷ ಹಾಗೂ ಹಿಂಸೆಯ ಆಧಾರದ ಸರ್ವಾಧಿಕಾರಿ ಫ್ಯಾಸಿಸ್ಟ್ ಮಾದರಿಯ ಹಿಂದುತ್ವ ರಾಷ್ಟ್ರವನ್ನಾಗಿ ರೂಪಾಂತರಿಸುವ ಬಿಜೆಪಿಯ ಪ್ರಯತ್ನದ ವಿರುದ್ಧ ಭಾರತವನ್ನು ರಕ್ಷಿಸುವ ಬಗ್ಗೆ ಈ ಬಾರಿಯ ಲೋಕಸಭಾ ಚುನಾವಣೆಯು ಇದೆ ಎನ್ನುವುದರ ಬಗ್ಗೆ ನಮಗೆ ಅನುಮಾನವೇ ಬೇಡ. ಭಾರತದ ನರನಾಡಿಗಳಲ್ಲಿ ಕೋಮುದ್ವೇಷವನ್ನು ಹರಡುತ್ತಿರುವ ಬಿಜೆಪಿಯ ಪಿತೃ ಸಂಘಟನೆಯಾದ ಆರ್.ಎಸ್.ಎಸ್. ಬಹಿರಂಗವಾಗಿ ಘೋಷಿಸಿದ ಗುರಿ ಅದಾಗಿದೆ. ಹಿಂದೆಂದೂ ಕಂಡು ಕೇಳರಿಯದಂತಹ ರೀತಿಯಲ್ಲಿ ಆರ್.ಎಸ್.ಎಸ್.  ಈಗ ಭಾರತದ ಉದ್ದಕ್ಕೂ ಇರುವ ಪ್ರತಿಯೊಂದು ಸಂಘ ಸಂಸ್ಥೆಗಳನ್ನು ತನ್ನ ವಶಕ್ಕೆ ಪಡೆದಿದೆ.

ಈ ಐದು ವರ್ಷಗಳ ಅವಧಿಯಲ್ಲಿ, ಹಿಂದಿನ ಲೋಕಸಭಾ ಚುನಾವಣೆಯ ನಂತರ ದುಡಿಯುವ ಜನರು, ರೈತರು, ಆದಿವಾಸಿಗಳು, ದಲಿತರು, ಮಹಿಳೆಯರು, ಯುವಜನರು ಮತ್ತು ವಿದ್ಯಾರ್ಥಿಗಳು ತಮ್ಮ ಪ್ರಜಾಸತ್ತಾತ್ಮಕ ಹೋರಾಟಗಳ ಮೂಲಕ ಪ್ರತಿರೋಧ ವ್ಯಕ್ತಪಡಿಸಿರುವುದನ್ನು ಭಾರತ ಕಂಡಿದೆ. ಈ ಸರ್ಕಾರವು ಹರಿಬಿಟ್ಟ ದಬ್ಬಾಳಿಕೆ, ಸರ್ವಶಕ್ತಿ ಹಾಗೂ ಪ್ರಭುತ್ವದ ಅಧಿಕಾರದ ವಿರುದ್ಧ ಜನರು ಐಕ್ಯತೆಯಿಂದ ಹೋರಾಡಿದರೆ ಸವಾಲೊಡ್ಡಬಹುದು ಮತ್ತು ಸೋಲಿಸಬಹುದು ಎನ್ನುವುದನ್ನು ಈ ಹೋರಾಟಗಳಲ್ಲಿ ಬಹಳ ಪ್ರಮುಖವಾದ ರೈತ ಸಮುದಾಯದ ಐತಿಹಾಸಿಕ ಹೋರಾಟವು ಸಾಬೀತು ಮಾಡಿದೆ. ಅದೇ ಸಮಯದಲ್ಲಿ, ಪರ್ಯಾಯ ನೀತಿಗಳನ್ನು ಜಾರಿ ಮಾಡಲು ಸಾಧ್ಯವಿದೆ ಎನ್ನುವುದನ್ನು ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗದ ಸರ್ಕಾರವು ಕೇರಳದಲ್ಲಿ ಸಾಧಿಸಿ ತೋರಿಸಿದೆ; ಆರ್ಥಿಕವಾಗಿ ಕೇರಳ ಸರ್ಕಾರವನ್ನು ಉಸಿರುಗಟ್ಟಿಸಲು ಕೇಂದ್ರವು ಎಷ್ಟೇ ಪ್ರಯತ್ನ ಮಾಡಿದರೂ ಕೇರಳ ಎಡ ಪ್ರಜಾಸತ್ತಾತ್ಮಕ ರಂಗವು ಜನಪರ ನೀತಿಗಳ ಹಾಗೂ ಕೋಮು ಸಾಮರಸ್ಯದ ದಾರಿದೀಪವಾಗಿ ಹೊರಹೊಮ್ಮಿದೆ.

ಬಿಜೆಪಿ ಮತ್ತು ಅದರ ಮೈತ್ರಿಕೂಟವನ್ನು ಸೋಲಿಸುವುದು ಪ್ರತಿಯೊಬ್ಬ ದೇಶಪ್ರೇಮಿಯ ಮೊದಲ ಹಾಗೂ ಅತ್ಯಂತ ಅತ್ಯಗತ್ಯವಾದ ಕರ್ತವ್ಯ ಎಂಬ ಸ್ಪಷ್ಟ ತಿಳುವಳಿಕೆಯೊಂದಿಗೆ ಸಿಪಿಐ(ಎಂ) ಪಕ್ಷವು ತನ್ನ ಪ್ರಣಾಳಿಕೆಯನ್ನು ಭಾರತದ ಜನರ ಮುಂದೆ ಇಡುತ್ತಿದೆ. ಕೇಂದ್ರದಲ್ಲಿ ಜಾತ್ಯತೀತ ಸರ್ಕಾರವೊಂದನ್ನು ಸ್ಥಾಪಿಸಲು ಸಹಾಯವಾಗುವಂತೆ ತನ್ನ ಶಕ್ತಿಮೀರಿ ಸಾಧ್ಯವಾದುದೆಲ್ಲ ಪ್ರಯತ್ನವನ್ನು ಕೈಗೊಳ್ಳಲು ಸಿಪಿಐ(ಎಂ) ಪ್ರತಿಜ್ಞೆ ಮಾಡುತ್ತದೆ. ಇದಕ್ಕಾಗಿ ಮತ್ತು ಜನಪರ ನೀತಿಗಳನ್ನು ಖಾತ್ರಿಪಡಿಸುವ ಸಲುವಾಗಿ ಸಂಸತ್ತಿನಲ್ಲಿ ಒಂದು ಶಕ್ತಿಯುತವಾದ  ಸಿಪಿಐ(ಎಂ)ಉಪಸ್ಥಿತಿಯ ಅವಶ್ಯಕತೆ ಇದೆ.

ಭಾಗ 1 ರಲ್ಲಿ, ಪ್ರಣಾಳಿಕೆಯು ಪ್ರಮುಖ ಪ್ರಚಲಿತ ಸಮಸ್ಯೆಗಳನ್ನು ಕುರಿತು ಬೆಳಕು ಚೆಲ್ಲುತ್ತದೆ. 2 ನೇ ಭಾಗದಲ್ಲಿ, ನಮ್ಮ ವಿವಿಧ ಜನವಿಭಾಗಗಳನ್ನು ಬಾಧಿಸುವ ಸಮಸ್ಯೆಗಳ ಪರಿಹಾರಕ್ಕೆ ಪರ್ಯಾಯ ನೀತಿಗಳ ಕುರಿತ ಸಿಪಿಐ(ಎಂ) ನ ಧೋರಣೆಯ ಬಗ್ಗೆ ತಿಳಿಸುತ್ತದೆ.

ಭಾಗ 1

ಪ್ರಚಲಿತ ಸಮಸ್ಯೆಗಳು

ಜಾತ್ಯತೀತತೆಯನ್ನು ಸಂರಕ್ಷಿಸಿ

ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆ ಎರಡೂ ಪರಸ್ಪರ ಒಂದಕ್ಕೊಂದು ಬೇರ್ಪಡಿಸಲಾಗದಂತೆ ಬೆಸೆದುಕೊಂಡಿವೆ. ಬಿಜೆಪಿ ಆಡಳಿತದಲ್ಲಿ ಮಾಡುತ್ತಿರುವಂತೆ ಜಾತ್ಯತೀತ ತತ್ವಗಳನ್ನು ನಾಶ ಮಾಡಿದರೆ ಪ್ರಜಾಪ್ರಭುತ್ವವೇ ಶಿಥಿಲಗೊಳ್ಳುತ್ತದೆ.

ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕರ ಧಾರ್ಮಿಕ ನಂಬಿಕೆಯ ಹಕ್ಕನ್ನು, ನಾಸ್ತಿಕನಾಗುವುದನ್ನೂ ಒಳಗೊಂಡಂತೆ, ಖಾತ್ರಿಪಡಿಸುತ್ತದೆ. ಸುಪ್ರೀಂ ಕೋರ್ಟಿನ ಹಲವಾರು ತೀರ್ಪುಗಳಲ್ಲಿ ಪ್ರತಿಫಲನಗೊಂಡಂತೆ, ಪ್ರಭುತ್ವ ಮತ್ತು ಸರ್ಕಾರ ಯಾವುದಾದರೂ ಒಂದು ನಿರ್ದಿಷ್ಟ ಮತಧರ್ಮ ದೊಂದಿಗೆ ಗುರುತಿಸಿಕೊಳ್ಳುವುದನ್ನು ಅಥವಾ ಉತ್ತೇಜಿಸುವುದನ್ನು ಸಂವಿಧಾನದ ಅಡಿಯಲ್ಲಿ ನಿಷೇಧಿಸಲಾಗಿದೆ. ಧರ್ಮ ಮತ್ತು ರಾಜಕೀಯದ ನಡುವಿನ ಕಡ್ಡಾಯವಾದ ಬೇರ್ಪಡುವಿಕೆಯನ್ನು ಕಾರ್ಯತಃ ತೊರೆಯಲಾಗಿದೆ. ಅಯೋಧ್ಯಾ ದೇವಸ್ಥಾನದ ಉದ್ಘಾಟನೆ ಸಂದರ್ಭದಲ್ಲಿ ಧರ್ಮಾಧಿಕಾರಿಗಳು ನಿರ್ವಹಿಸಬೇಕಾದ ಎಲ್ಲಾ ಧಾರ್ಮಿಕ ಆಚರಣೆಗಳನ್ನು ಪ್ರಧಾನ ಮಂತ್ರಿಗಳೇ ಸ್ವತಃ ಮಾಡಿರುವುದು ಧರ್ಮದಿಂದ ಪ್ರಭುತ್ವವನ್ನು ಬೇರ್ಪಡಿಸಬೇಕೆಂಬ ಮೂಲಭೂತ ತತ್ವದ ಮೇಲೆಯೇ ದೊಡ್ಡ ಪ್ರಹಾರ ಮಾಡಿದಂತಾಗಿದೆ. ಅದೊಂದೇ ಉದಾಹರಣೆಯಲ್ಲ. ನೂತನ ಸಂಸತ್ ಭವನ, ಅಥವಾ ಕಾಶಿ ವಿಶ್ವನಾಥ್ ಗಂಗಾ ತಟ ಉದ್ಘಾಟನೆ, ಸಮಯದಲ್ಲಿ ಕೂಡ ಮೋದಿಯವರು ಪ್ರಧಾನ ಪೂಜಾರಿಯಂತೆ ಎಲ್ಲಾ ಹಿಂದೂ ಧಾರ್ಮಿಕ ಆಚರಣೆಗಳನ್ನು ನಡೆಸಿದ್ದಾರೆ ಮತ್ತು ಅದನ್ನು ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮದಂತೆ ಬಿಂಬಿಸಲಾಗಿದೆ ಕೂಡ. ಸಂಕೇತಗಳು ಬಹಳ ಸ್ಪಷ್ಟವಾಗಿವೆ: ಬಿಜೆಪಿ ಸರ್ಕಾರದ ಅಡಿಯಲ್ಲಿ ಭಾರತವು ಮನುವಾದಿ ಸಿದ್ಧಾಂತದ ಆಧಾರದಲ್ಲಿ ಹೆಚ್ಚೆಚ್ಚಾಗಿ ಹಿಂದುತ್ವ ಪ್ರಭುತ್ವ ಆಗುತ್ತಿದೆ.

ಚುನಾವಣೆಯ ಹೊಸ್ತಿಲಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ 2019 (ಸಿಎಎ) ಯ ನಿಯಮಗಳನ್ನು ಪ್ರಕಟ ಮಾಡಿರುವುದು ಮತದಾರರನ್ನು ಧ್ರುವೀಕರಿಸುವ ಉದ್ದೇಶದಿಂದಲೇ ತಂದ ಅಪಾಯಕಾರಿ ನಡೆಯಾಗಿದೆ. ಈ ಕಾನೂನು ಪೌರತ್ವವನ್ನು ಧರ್ಮದೊಂದಿಗೆ ಬೆಸೆಯುವ ಉದ್ದೇಶ ಹೊಂದಿರುವುದರಿAದ ಅದು ಅತಿಯಾದ ತಾರತಮ್ಯದಿಂದ ಕೂಡಿದೆಯಾದ್ದರಿಂದ ಸಿಪಿಐ(ಎಂ) ಮತ್ತಿತರ ಪ್ರಜಾಸತ್ತಾತ್ಮಕ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ. ಕೇರಳ ರಾಜ್ಯದಲ್ಲಿ ಅದನ್ನು ಜಾರಿಮಾಡಲಾಗುವುದಿಲ್ಲ ಎಂಬ ನಿರ್ಣಯವನ್ನು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಅಂಗೀಕರಿಸಿದ್ದು ಸಿಪಿಐ(ಎಂ) ನೇತೃತ್ವದ ಎಲ್.ಡಿ.ಎಫ್. ಸರ್ಕಾರ. ರಾಜ್ಯ ಸರ್ಕಾರಗಳ ವಿರೋಧವನ್ನು ಕಡೆಗಣಿಸುವ ಉದ್ದೇಶದಿಂದ ಪೌರತ್ವ ನೋಂದಾವಣೆ ಸಮಿತಿಗಳಲ್ಲಿ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಇರದಂತೆ, ಕೇವಲ ಆಹ್ವಾನಿತರನ್ನಾಗಿ ಮಾತ್ರ ಪರಿಗಣಿಸಿ ನಿಯಮಗಳನ್ನು ರೂಪಿಸಲಾಗಿದೆ. ಇದು ಸಂವಿಧಾನದ ಮೇಲಿನ ಮತ್ತೊಂದು ದೊಡ್ಡ ಪ್ರಹಾರವಾಗಿದೆ.

ಧಾರ್ಮಿಕ ಅಲ್ಪಸಂಖ್ಯಾತರನ್ನು, ವಿಶೇಷವಾಗಿ ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷಪೂರಿತ ಹಿಂಸಾತ್ಮಕ ವಿಷಕಾರಿ ಚಟುವಟಿಕೆಗಳು ಹೆಚ್ಚಾಗುತ್ತಲೇ ಇವೆ. ಸಶಸ್ತ್ರ ಗಲಭೆಕೋರರು ಕೋಮುಪ್ರಚೋದಕ ದಾಳಿಗಳನ್ನು ನಡೆಸಲು ಅವಕಾಶ ಒದಗಿಸಲಾಗುತ್ತಿದೆ. ದೆಹಲಿಯಲ್ಲಿ 2020ರಲ್ಲಿ ನಡೆದ ಕೋಮು ಹಿಂಸಾಚಾರ ಸಂಘಟಿತ ಮತ್ತು ಪೂರ್ವ ನಿಯೋಜಿತ ಹಲ್ಲೆಯಾಗಿತ್ತು. ದ್ವೇಷ ಹರಡುತ್ತಾ ಹಿಂಸೆಯನ್ನು ಪ್ರಚೋದಿಸುತ್ತಿರುವ ಅಂತಹ ದುಷ್ಕರ್ಮಿಗಳು, ಬಿಜೆಪಿ ಸಚಿವರು ಹಾಗೂ ಮುಖಂಡರುಗಳ ಮೇಲೆ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ, ಆದರೆ ಆ ಹಿಂಸೆಯಿಂದ ಸಂತ್ರಸ್ತರಾಗಿರುವವರ ಮೇಲೆ ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ. ಅಲ್ಪಸಂಖ್ಯಾತರ ಮೇಲೆ ಆಕ್ರಮಣ ಮಾಡುವ ಖಾಸಗಿ ಪುಂಡ ಸೇನೆಗಳಿಗೆ ಬಿಜೆಪಿ ರಾಜ್ಯ ಸರ್ಕಾರಗಳು ಕಾನೂನು ರಕ್ಷಣೆ ನೀಡುತ್ತಿವೆ; ಇನ್ನು ಕೆಲವು ರಾಜ್ಯ ಸರ್ಕಾರಗಳು ಬುಲ್ಡೋಜರ್ ರಾಜಕೀಯ ಮಾಡುತ್ತಾ ಕಾನೂನುಬಾಹಿರ ಒತ್ತುವರಿಯ ಹೆಸರಿನಲ್ಲಿ ಮುಸ್ಲಿಮರ ಮನೆಗಳನ್ನು ಅಂಗಡಿ ಮುಂಗಟ್ಟುಗಳನ್ನು ಕೆಡವಿ ಹಾಕುತ್ತಿವೆ. ಕೋಮು ಧ್ರುವೀಕರಣವನ್ನು ತೀವ್ರಗೊಳಿಸುವ ಸಲುವಾಗಿ ಬಿಜೆಪಿ ರಾಜ್ಯ ಸರ್ಕಾರಗಳು ಶಾಸನಗಳನ್ನು ಅಂಗೀಕರಿಸುತ್ತಿವೆ. ಗೋವು ಹಾಗೂ ಜಾನುವಾರು ರಕ್ಷಣೆ, ಜಾನುವಾರು ಮಾರಾಟ ಹಾಗೂ ಮಾಂಸ ಮಾರಾಟ, ಲವ್ ಜಿಹಾದ್, ಏಕರೂಪ ನಾಗರಿಕ ಸಂಹಿತೆ ಮುಂತಾದ ವಿಷಯಗಳನ್ನು ಮುಂದೆ ಮಾಡಿ ಅಲ್ಪಸಂಖ್ಯಾತ ಸಮುದಾಯದ ಅಮಾಯಕ ಜನರನ್ನು ಗುರಿ ಮಾಡಲಾಗುತ್ತಿದೆ, ದೈಹಿಕ ಹಲ್ಲೆ ಮಾಡಲಾಗುತ್ತಿದೆ, ಕಾನೂನಾತ್ಮಕವಾಗಿ ಅಪರಾಧಿಗಳನ್ನಾಗಿ ಮಾಡುತ್ತಿವೆ. ಈ ರೀತಿಯ ದ್ವೇಷ ಹಾಗೂ ಹಿಂಸೆಯ ಪ್ರಕರಣಗಳು ಸಾಮಾನ್ಯವಾಗುತ್ತಿವೆ. ಧರ್ಮ ಸಂಸದ್ ಎಂದು ಕರೆಸಿಕೊಳ್ಳುವ ಸಭೆಗಳಲ್ಲಿ ಮುಸ್ಲಿಮರ ಹತ್ಯಾಕಾಂಡಕ್ಕೆ ಬಹಿರಂಗ ಕರೆ ನೀಡುವ ಅಪಾಯಕಾರಿ ಘಟನೆಗಳೂ ವರದಿಯಾಗಿವೆ.

ಮತಾಂತರ-ವಿರೋಧಿ ಹೆಸರಿನಲ್ಲಿ ಬಿಜೆಪಿ ರಾಜ್ಯ ಸರ್ಕಾರಗಳು ತಂದಿರುವ ಕರಾಳ ಕಾನೂನುಗಳಿಂದಾಗಿ, ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಮೇಲೂ ದಾಳಿಗಳು ತ್ವರಿತಗತಿಯಲ್ಲಿ ಹೆಚ್ಚಾಗುತ್ತಿವೆ. ಆ ದಾಳಿಗಳು ವಿಶೇಷವಾಗಿ ಬಡ ಬುಡಕಟ್ಟು ಸಮುದಾಯಗಳನ್ನು ಗುರಿ ಮಾಡುತ್ತಿವೆ. ಮಣಿಪುರದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಬಹುಸಂಖ್ಯಾತವಾದಿ ನೀತಿಗಳು ಅಲ್ಲೋಲ ಕಲ್ಲೋಲ ಉಂಟು ಮಾಡುತ್ತಿರುವುದು ಅಂತಹ ಒಂದು ದುರಂತ ಉದಾಹರಣೆಯಷ್ಟೆ; ಅಲ್ಲಿ ಅಲ್ಲಿ ಬಹುಸಂಖ್ಯಾತರು ಕ್ರಿಶ್ಚಿಯನ್ನರಿರುವ ಬುಡಕಟ್ಟು ಜನರ ಬುಡಕಟ್ಟು ಹಾಗೂ ಧಾರ್ಮಿಕ ಎರಡೂ ಗುರುತನ್ನು ಬಳಸಿ ಗುರಿ ಮಾಡಲಾಗುತ್ತಿದೆ. ಈಶಾನ್ಯ ಭಾರತಕ್ಕೆ ಅನನ್ಯವಾಗಿರುವ ವೈವಿಧ್ಯತೆ ಹಾಗೂ ಬಹುತ್ವವನ್ನು ನಾಶ ಮಾಡುವ ವಿಚ್ಛಿದ್ರಕಾರಿ ರಾಜಕೀಯವನ್ನು ಬಿಜೆಪಿಯು ಮಣಿಪುರದಲ್ಲಿ ಅಳವಡಿಸಿಕೊಂಡಿದೆ.

ಸಿಪಿಐ(ಎಂ ಪಕ್ಷವು ತಾನು ಜಾತ್ಯತೀತತೆಯ ಸಂರಕ್ಷಣೆಯಲ್ಲಿ ತತ್ವಾದರ್ಶ ಹಾಗೂ ಆಚರಣೆಗಳ ಸಂಗಮ ಎಂದು ಹೇಳಿಕೊಳ್ಳಬಹುದು. ಅಲ್ಪಸಂಖ್ಯಾತ ಸಮುದಾಯಗಳ ಹಾಗೂ ಅಂಚಿನಲ್ಲಿರುವವರ ಹಕ್ಕುಗಳ ಪರವಾಗಿ ಯಾವುದೇ ರಾಜಿ ಅಥವಾ ಅಪವಾದ ಇಲ್ಲದೇ ದೃಢವಾಗಿ ನಿಂತ ಹೆಮ್ಮೆಯ ದಾಖಲೆ ಅದಕ್ಕಿದೆ. ಅದೇ ಸಮಯದಲ್ಲಿ, ಅಲ್ಪಸಂಖ್ಯಾತ ಮೂಲಭೂತವಾದವನ್ನು ಅಷ್ಟೇ ದೃಢವಾಗಿ ವಿರೋಧಿಸುತ್ತದೆ ಹಾಗೂ ಹಿಮ್ಮೆಟ್ಟಿಸುತ್ತದೆ.

ರಾಜಕೀಯ, ಪ್ರಭುತ್ವ, ಸರ್ಕಾರ ಹಾಗೂ ಆಡಳಿತದಿಂದ ಧರ್ಮವನ್ನು ಬೇರ್ಪಡಿಸುವ ತತ್ವಕ್ಕೆ ಯಾವುದೇ ರಾಜಿಯಿಲ್ಲದೇ ಬದ್ಧರಾಗಿರಲು ಹೋರಾಟ ಮಾಡುತ್ತದೆ ಎಂದು ಸಿಪಿಐ(ಎಂ) ಪ್ರತಿಜ್ಞೆ ಮಾಡುತ್ತದೆ. ದ್ವೇಷ ಭಾಷಣ ಹಾಗೂ ಅಪರಾಧಗಳ ವಿರುದ್ಧದ ಕಾನೂನಿಗಾಗಿ ಹೋರಾಡುತ್ತದೆ. ಸಿಎಎಯನ್ನು ರದ್ದುಗೊಳಿಸಲು ಸಿಪಿಐ(ಎಂ) ಬದ್ಧವಾಗಿದೆ.

ಪ್ರಜಾಪ್ರಭುತ್ವ ಉಳಿಸಿ

ಪ್ರಜಾಸತ್ತಾತ್ಮಕ ದೇಶದ ಆಧಾರ ಸ್ತಂಭವಾಗಿರುವ ಭಿನ್ನಾಭಿಪ್ರಾಯದ ಹಕ್ಕಿನ ಅಡಿಪಾಯವನ್ನೇ ಶಿಥಿಲಗೊಳಿಸುವ ಸಲುವಾಗಿ ಮೋದಿ ಸರ್ಕಾರವು ಎಲ್ಲಾ ಭಿನ್ನಾಭಿಪ್ರಾಯಗಳನ್ನು ದೇಶದ್ರೋಹ ಎಂದು ಅಪರಾಧೀಕರಣಗೊಳಿಸುವ ಅಘೋಷಿತ ನೀತಿಯನ್ನು ಹೊಂದಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ), ರಾಷ್ಟ್ರೀಯ ಭದ್ರತಾ ಕಾಯಿದೆ (ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ – ಎನ್‌ಎಸ್‌ಎ) ಮತ್ತು (ಕಳ್ಳ) ಹಣ ವರ್ಗಾವಣೆ ತಡೆ ಕಾಯಿದೆ (ಪಿ.ಎಂ.ಎಲ್.ಎ) ಈ ಕರಾಳ ಕಾನೂನುಗಳನ್ನು ಮನಸೋಇಚ್ಛೆ ಬಳಸಿ ಯಾವುದೇ ಆರೋಪಗಳಿಲ್ಲದೇ ಪ್ರಭಾವಿ ಹಾಗೂ ರಾಜಕೀಯ ಮುಖಂಡರನ್ನು, ಪ್ರಜಾಸತ್ತಾತ್ಮಕ ಕಾರ್ಯಕರ್ತರನ್ನು ಬಂಧಿಸಿದೆ. ಮೋದಿ ಸರ್ಕಾರದ ನೀತಿಗಳನ್ನು ವಿರೋಧಿಸಿದರು ಎಂಬ ಒಂದೇ ಒಂದು ಕಾರಣಕ್ಕಾಗಿ ಅವರಿಗೆ ಜಾಮೀನು ಸಿಗದಂತೆಯೂ ಮಾಡಲಾಗಿದೆ. ವಿಶೇಷವಾಗಿ ಪತ್ರಕರ್ತರನ್ನು, ನಿಷ್ಪಕ್ಷಪಾತ ವರದಿ ಮಾಡುವ ಕರ್ತವ್ಯದಿಂದ ಹಿಂದೆ ಸರಿಯಲು ಒಪ್ಪದ ಪತ್ರಕರ್ತರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತದೆ; ಒಂದು ಸ್ವತಂತ್ರ ಮಾಧ್ಯಮವೆಂಬ ತೀರ ಅಗತ್ಯವಾದ ಸಂಸ್ಥೆಯನ್ನು ನಾಶಮಾಡಲಾಗುತ್ತಿದೆ; ಈಗ ಬಹುತೇಕ ಮಾಧ್ಯಮಗಳು ಮೋದಿ ಸರ್ಕಾರದ ಮಿತ್ರರಾಗಿರುವ ದೊಡ್ಡ ಉದ್ದಿಮೆದಾರರ ನಿಯಂತ್ರಣದಲ್ಲಿ ಇವೆ. ದುಡಿಯುವ ಜನರ ಸಾಮೂಹಿಕ ಹೋರಾಟಗಳು ಅತ್ಯಂತ ದುಷ್ಟ ದಮನಕ್ಕೆ ಒಳಗಾಗಿವೆ. ಶಾಂತಿಯುತವಾಗಿ ಹೋರಾಟ ಮಾಡುತ್ತಿರುವ ರೈತರನ್ನು ದೇಶದ ಶತ್ರುಗಳೆಂದು ಬಗೆದು ಅವರ ಮೇಲೆ ಅಶ್ರುವಾಯು ಶೆಲ್ಲುಗಳನ್ನು ಹಾಕಲು ಡ್ರೋನ್ ಉಪಕರಣವನ್ನು ಬಳಸುವ ಮೋದಿ ಸರ್ಕಾರದ ನಡೆಯನ್ನು ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಯಾವ ಚುನಾಯಿತ ಸರ್ಕಾರವೂ ಮಾಡಿರಲಿಲ್ಲ.

ಕಳೆದ ಐದು ವರ್ಷಗಳಲ್ಲಿ ಸಂಸತ್ತನ್ನೇ ಅಸಹನೀಯವಾಗಿ ಶಿಥಿಲಗೊಳಿಸಲಾಗಿದೆ; ವಿರೋಧ ಪಕ್ಷಗಳ ಸಂಸದರನ್ನು ಕೆಲವು ಬಾರಿ ಇಡೀ ಅಧಿವೇಶನದ ಅವಧಿಗೆ ಸಾರಾಸಗಟಾಗಿ ಉಚ್ಛಾಟಿಸಲಾಗಿದೆ, ಎಲ್ಲಾ ಪಕ್ಷಗಳ ಸಮಿತಿಯಾಗಿರುವ ಸ್ಥಾಯೀ ಸಮಿತಿಯ ಪರಿಗಣನೆಗೇ ಕಳಿಸದೆ ಕಾನೂನುಗಳನ್ನು ಮಾಡುವುದು, ತಮ್ಮ ಬಹುಮತವನ್ನು ಬಳಸಿ ಚರ್ಚೆಯೇ ಇಲ್ಲದೇ ಕಾನೂನುಗಳನ್ನು ಬಲವಂತವಾಗಿ ಅಂಗೀಕರಿಸುವುದು., ಇವು ಕೆಲವು ನಿದರ್ಶನಗಳಷ್ಟೆ. 

ಅದೂ ಅಲ್ಲದೇ, ಸಂಸತ್ತು, ನ್ಯಾಯಾಂಗ, ಚುನಾವಣಾ ಆಯೋಗದಂತಹ, ವ್ಯವಸ್ಥೆಯ ತಪ್ಪುಗಳನ್ನು ಸರಿಪಡಿಸುವ ಅತಿರೇಕಗಳನ್ನು ತಡೆದು ಸಮತೋಲನ ಕಾದುಕೊಳ್ಳುವ ಸಾಂವಿಧಾನಿಕವಾಗಿ ನಿರ್ದೇಶಿಲ್ಪಟ್ಟ ಸ್ವತಂತ್ರ ಸಂಸ್ಥೆಗಳನ್ನು, ಗಂಭೀರವಾಗಿ ಶಿಥಿಲಗೊಳಿಸಲಾಗುತ್ತಿದೆ. ಸಾಮೂಹಿಕ ಹೋರಾಟಗಳ ಮೂಲಕ ರಚಿಸಲ್ಪಟ್ಟ ಸಂಸ್ಥೆಗಳಾದ ಮಹಿಳಾ ಆಯೋಗ, ಮಾನವ ಹಕ್ಕುಗಳ ಆಯೋಗ, ಮಾಹಿತಿ ಹಕ್ಕುಗಳ ಆಯೋಗಗಳು ಸರ್ಕಾರದ ಅಂಗಸಂಸ್ಥೆಗಳಂತೆ ಕಾರ್ಯನಿರ್ವಹಿಸುತ್ತಿವೆ. ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ ತೆರಿಗೆ ಇಲಾಖೆ (ಐಟಿ) ಮುಂತಾದ ಕೇಂದ್ರೀಯ ಸಂಸ್ಥೆಗಳು ವಿರೋಧ ಪಕ್ಷಗಳ ಮುಖಂಡರ ಮೇಲೆ ದಾಳಿ ಮಾಡುವ ಆಳುವ ಪಕ್ಷದ ರಾಜಕೀಯ ಅಂಗವಾಗಿ ಕೆಲಸ ಮಾಡುತ್ತಿವೆ. ಆಳುವ ಪಕ್ಷವನ್ನು ಸೇರು ಎಂದು ಭಯಪಡಿಸುವ, ಪ್ರಭಾವ ಬೀರುವ, ಪೀಡಿಸುವ ಉದ್ದೇಶ ಹೊಂದಿವೆ ಮತ್ತು ಅವರು ಒಪ್ಪಿದರೆ, ಎಲ್ಲಾ ಆರೋಪಗಳೂ ಮಂಗಮಾಯ! “ನಮ್ಮ ಜತೆ ಸೇರ‍್ತೀಯಾ ಅಥವಾ ಜೈಲಿಗೆ ಹೋಗ್ತೀಯ” ಎಂಬುದು ಬಿಜೆಪಿಯ ಘೋಷಣೆಯಾಗಿದೆ!

ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರಗಳನ್ನು ದೊಡ್ಡ ಪ್ರಮಾಣದ ಪಕ್ಷಾಂತರ (ಕುದುರೆ ವ್ಯಾಪಾರ) ದ ಮೂಲಕ ಬೀಳಿಸಲು ನಾನಾ ವಿಧದ ಸಂಶಯಾಸ್ಪದ ರೀತಿಯಲ್ಲಿ ಕಲೆ ಹಾಕಿದ ಹಣವನ್ನು ನಿರ್ಲಜ್ಜವಾಗಿ ಬಳಸಲಾಗುತ್ತಿದೆ. ಚುನಾವಣೆಯಲ್ಲಿ ಬಿಜೆಪಿ ಸೋತಿರುವ ಹಲವಾರು ರಾಜ್ಯಗಳಲ್ಲಿ ಈ ರೀತಿಯಲ್ಲಿ ರಾಜ್ಯ ಸರ್ಕಾರವನ್ನು ರಚಿಸಿ ಆಳ್ವಿಕೆ ಮಾಡುತ್ತಿವೆ. ಇದು ಪ್ರಜಾಪ್ರಭುತ್ವದ ಅಣಕವಾಗಿದ್ದು, ಚುನಾವಣಾ ಜನಾದೇಶವನ್ನು ಇಲ್ಲದಂತೆ ಮಾಡಲಾಗಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ಇಡೀ ಚುನಾವಣಾ ಬಾಂಡ್ ಯೋಜನೆಯ ವಿರುದ್ಧ ನೀಡಿದ ತೀರ್ಪು ಸಿಪಿಐ(ಎಂ)ನ ಪ್ರಬಲ ಹಾಗೂ ತಾತ್ವಿಕ ವಿರೋಧವನ್ನು ಎತ್ತಿಹಿಡಿದಿದೆ. ಆ ವಿಷಯದಲ್ಲಿ ಸಿಪಿಐ(ಎಂ) ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಆ ಯೋಜನೆಯು ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವ ಹಾದಿ ಎಂಬ ಸ್ಪಷ್ಟ ನಿಲುವನ್ನು ಸಿಪಿಐ(ಎಂ) ತಳೆದಿತ್ತು, ನ್ಯಾಯಾಲಯ ಕೂಡ ಆ ನಿಲುವನ್ನೇ ಎತ್ತಿ ಹಿಡಿದಿದೆ. ತಾನು ಕಾರ್ಪೊರೇಟ್ ಮಿತ್ರರೊಂದಿಗೆ ಸೇರಿ ನಡೆಸಿದ ಕೊಡು-ಕೊಳ್ಳುವ ವ್ಯವಹಾರದ ಮೂಲಕ ಕಲೆ ಹಾಕಿದ ಭಾರಿ ಮೊತ್ತದ ಲಂಚ ಪಡೆದಿದ್ದನ್ನು ಮುಚ್ಚಿಕೊಳ್ಳಲು ಮೋದಿ ಸರ್ಕಾರವು ಕೊನೆಯತನಕ ಪ್ರಯತ್ನ ಮಾಡಿತು. ಬಿಜೆಪಿಯ ಇವತ್ತಿನ ನಾಯಕತ್ವವು ಅತ್ಯಂತ ಭ್ರಷ್ಟ ಎನ್ನುವುದನ್ನು ಈ ಹಗರಣ ಸಾಬೀತು ಮಾಡಿದೆ.

ಮೋದಿ ಸರ್ಕಾರವು ನಾಗರಿಕರ ಮೂಲಭೂತ ಹಕ್ಕಾದ ಖಾಸಗಿತನವನ್ನು ಸಂಪೂರ್ಣವಾಗಿ ಉಲ್ಲಂಘಿಸುವ ಬೆಚ್ಚಿ ಬೀಳಿಸುವ ಕಣ್ಗಾವಲು ವ್ಯವಸ್ಥೆಯನ್ನು ನೇಮಿಸಿದೆ. ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯಿದೆ (ಪರ್ಸನಲ್ ಡಾಟಾ ಪ್ರೊಟೆಕ್ಷನ್ ಆಕ್ಟ್), ಅಪರಾಧ ನ್ಯಾಯವಿಧಾನ ಗುರುತಿನ ಕಾಯಿದೆ (ಕ್ರಿಮಿನಲ್ ಪ್ರೊಸೀಜರ್ ಐಡೆಂಟಿಫಿಕೇಷನ್ ಆಕ್ಟ್) ಮುಂತಾದ ಕರಾಳ ಕಾನೂನುಗಳನ್ನು ತಂದು ಶಿಕ್ಷೆಗೊಳಗಾದವರು ಮಾತ್ರವಲ್ಲ, ಬಂಧನಕ್ಕೊಳಗಾದವರೆಲ್ಲರ ಬೆರಳಚ್ಚು (ಬಯೋಮೆಟ್ರಿಕ್) ದತ್ತಾಂಶಗಳನ್ನು ಸಂಗ್ರಹಿಸಲು ಮುಂದಾಗಿದೆ. ಕುಖ್ಯಾತ ಇಸ್ರೇಲಿ ಪೆಗಾಸಸ್ ಬೇಹುಗಾರಿಕೆ ಉಪಕರಣವನ್ನು ವಿರೋಧ ಪಕ್ಷಗಳ ಮುಖಂಡರು, ಪತ್ರಕರ್ತರು ಹಾಗೂ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಬಳಸಲಾಗಿದೆ. ಕಣ್ಗಾವಲು ಆಳ್ವಿಕೆಯನ್ನು ಸ್ಥಾಪಿಸುವ ಮೂಲಕ ಪೋಲಿಸ್ ರಾಜ್ಯವನ್ನು ಬಲಪಡಿಸುವ ನಡೆಯು ನಮ್ಮ ಸಂವಿಧಾನವು ಖಾತ್ರಿಪಡಿಸಿದ ಪ್ರಜಾಸತ್ತಾತ್ಮಕ ಹಕ್ಕುಗಳು ಹಾಗೂ ನಾಗರಿಕ ಹಕ್ಕುಗಳನ್ನು ಕಿತ್ತುಕೊಳ್ಳುವ ಅಪಾಯಕಾರಿ ಪ್ರಯತ್ನವಾಗಿದೆ.

ಯುಎಪಿಎ ಮತ್ತು ಪಿಎಂಎಲ್‌ನಂತಹ ಕರಾಳ ಶಾಸನಗಳನ್ನು ರದ್ದುಪಡಿಸುವ, ಸ್ವತಂತ್ರ ಸಂಸ್ಥೆಗಳ ಸ್ವಾಯತ್ತತೆಯ ರಕ್ಷಣೆ ಹಾಗೂ ಬಲಪಡಿಸುವ ಕ್ರಮಗಳ, ಜನರ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಯ ಪರವಾಗಿ ಸಿಪಿಐ(ಎಂ) ದೃಢವಾಗಿ ನಿಲ್ಲುತ್ತದೆ;

ಆರ್ಥಿಕ ಸಾರ್ವಭೌಮತೆ ರಕ್ಷಿಸಿ

ಭಾರತದ ಆರ್ಥಿಕತೆಯು ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ, ಜನರ ಸಂಪತ್ತು ಹೆಚ್ಚಾಗುತ್ತಿದೆ ಎಂದು ಬಿಂಬಿಸುವ ಭಾರಿ ಪ್ರಚಾರ ನಡೆಯುತ್ತಿದೆ; ಆದರೆ ಅವೆಲ್ಲವೂ ಸರ್ಕಾರವು ಕಲೆ ಹಾಕಿದ ಭಾರಿ ಪ್ರಮಾಣದ ಬೊಗಳೆ ಮಾಹಿತಿಗಳ ಆಧಾರದಲ್ಲಿ ಸಿದ್ಧಪಡಿಸಿದ ವರದಿಗಳಾಗಿವೆ. ಒಂದೇ ಒಂದು ಉದಾಹರಣೆ ನೋಡೋಣ: ಈ ವರ್ಷದ ನಾಮಮಾತ್ರದ ಜಿಡಿಪಿ ಬೆಳವಣಿಗೆಯು ಶೇಕಡಾ 9.1 ಇದೆ. ನಿಜವಾದ ಬೆಳವಣಿಗೆಯ ದರ ತಲುಪಲು ಇದನ್ನು ಹಣದುಬ್ಬರ ಸೂಚ್ಯಾಂಕದಿAದ ತಗ್ಗಿಸಬೇಕು. ಹಣದುಬ್ಬರ ದರವು ಸುಮಾರು ಶೇಕಡಾ 6 ರಷ್ಟಿರುವಾಗ ಮತ್ತು ಆಹಾರ ಹಣದುಬ್ಬರವು ಶೇಕಡಾ 10 ರಷ್ಟಿರುವಾಗ ಸರ್ಕಾರವು ಅದನ್ನು 1.5 ಎಂಬ ತಗ್ಗಿಸುವ ಸಂಖ್ಯೆಯನ್ನು ಬಳಸಿದೆ. ಹಣದುಬ್ಬರದ ದರಕ್ಕೆ ಸಮೀಪವಾಗಿರುವ 6 ನ್ನು ತಗ್ಗಿಸುವ ಸಂಖ್ಯೆಯನ್ನಾಗಿ ಬಳಸಿದರೆ ಆಗ ನಿಜವಾದ ಬೆಳವಣಿಗೆಯ ದರವು ಶೇಕಡಾ 3 ರಷ್ಟಾಗುತ್ತದೆ. ಇಂತಹ ಮಂಕಾದ ವಾಸ್ತವವನ್ನು ಸರ್ಕಾರ ಮರೆಮಾಚುತ್ತಿದೆ. ಭಾರತವು ಜಿ-20 ದೇಶಗಳಲ್ಲೇ ಅತ್ಯಂತ ಕಡಿಮೆ ತಲಾ ಜಿಡಿಪಿಯನ್ನು ಹೊಂದಿದೆ. 

ಮೋದಿ ಸರ್ಕಾರದ “ಮೇಡ್ ಇನ್ ಇಂಡಿಯಾ” ಘೋಷಣೆಯು ವಾಸ್ತವದಲ್ಲಿ “ಭಾರತದ ಲೂಟಿ” ನೀತಿಯಾಗಿ ಪರಿಣಮಿಸಿದೆ. ಕಾರ್ಪೊರೇಟ್-ಕೋಮುವಾದಿ ನಂಟನ್ನು ಸಂಕೇತಿಸುವ ಮೋದಿ ಆಳ್ವಿಕೆಯು ಕ್ರೂರ ಸ್ವಜನ-ಪಕ್ಷಪಾತಿ (ಕ್ರೋನಿ) ಬಂಡವಾಳವಾದ ಹಾಗೂ ರಾಷ್ಟ್ರೀಯ ಆಸ್ತಿಗಳ ಲೂಟಿಯನ್ನು ಉತ್ತೇಜಿಸುತ್ತಿದೆ. ಉದಾಹರಣೆಗೆ, ಸಾರ್ವಜನಿಕ ಹಣ ಹೂಡಿಕೆಯಿಂದ ಕಟ್ಟಲ್ಪಟ್ಟ ಇಡೀ ಮೂಲಸೌಕರ್ಯ ವಲಯವನ್ನು (ಇನ್‌ಫ್ರಾಸ್ಟ್ರಕ್ಚರ್ ಸೆಕ್ಟರ್) ಹಂತ ಹಂತವಾಗಿ ಖಾಸಗೀ ವಲಯಕ್ಕೆ ಧಾರೆಯೆರೆದು ಕೊಡುವುದನ್ನೇ ರಾಷ್ಟ್ರೀಯ ನಗದೀಕರಣ ಮಾರ್ಗ (ನ್ಯಾಷನಲ್ ಮಾನಿಟೈಸೇಷನ್ ಪೈಪ್‌ಲೈನ್) ಎಂದು ಹೆಸರಿಸಲಾಗಿದೆ. ಯಾವುದೇ ಹೂಡಿಕೆಯಿಲ್ಲದೆ, ಖಾಸಗೀ ವಲಯವು ಏಕಸ್ವಾಮ್ಯ ಸ್ವಾಧೀನದ ಲೈಸೆನ್ಸನ್ನು ಪಡೆದು ಹಣದ ರಾಶಿಯನ್ನು ಹಾಕಿಕೊಳ್ಳುತ್ತದೆ. ದೇಶದ ಖನಿಜ ಸಂಪತ್ತು ಹಾಗೂ ನೈಸರ್ಗಿಕ ಸಂಪನ್ಮೂಲಗಳನ್ನು ಖಾಸಗಿಯವರ ಲೂಟಿಗೆ ತೆರೆದಿಡಲಾಗಿದೆ. ಈ ಲೂಟಿಗೆ ಅನುಕೂಲವಾಗುವಂತೆ ಹಲವಾರು ಕಾನೂನುಗಳನ್ನು ಅಂಗೀಕರಿಸಲಾಗಿದೆ ಮತ್ತು ಕೆಲವು ರಕ್ಷಣಾತ್ಮಕ ಕಾನೂನುಗಳನ್ನು ತಿದ್ದುಪಡಿ ಮಾಡಲಾಗಿದೆ; ಇದರಿಂದಾಗಿ ಆದಿವಾಸಿಗಳು ಹಾಗೂ ಅರಣ್ಯವಾಸಿ ಸಮುದಾಯದ ಜನರು ದೊಡ್ಡ ಪ್ರಮಾಣದಲ್ಲಿ ಒಕ್ಕಲೆಬ್ಬಿಸುವಿಕೆ ಬಲಿಯಾಗುತ್ತಿದ್ದಾರೆ; ಅಷ್ಟೇ ಅಲ್ಲ, ಭಾರಿ ಪ್ರಮಾಣದ ಅರಣ್ಯ ನಾಶ ಹಾಗೂ ಪರಿಸರ ನಾಶಕ್ಕೆ ದೇಶದ ಸಂಪತ್ತನ್ನು ಧಾರೆಯೆರೆದು ಕೊಡಲಾಗಿದೆ.

ವಾಸ್ತವವಾಗಿ ಮೋದಿ ಸರ್ಕಾರವು ಭಾರತೀಯ ಆರ್ಥಿಕತೆಯನ್ನು ನಿಯಂತ್ರಣ-ಮುಕ್ತಗೊಳಿಸುವ ಮತ್ತು ಸಾರ್ವಜನಿಕ ವಲಯವನ್ನು ಖಾಸಗೀಕರಣ ಮಾಡುವ ವೇಗವನ್ನು ಹೆಚ್ಚಿಸಿದೆ; ಅದು ದೇಶೀಯ ಹಾಗೂ ವಿದೇಶಿ ಕಾರ್ಪೊರೇಟುಗಳಿಗೆ ಹೆಚ್ಚಿನ ಪ್ರಮಾಣದ ಅನುಕೂಲ ಕಲ್ಪಿಸಲಿದೆ. ಜನರ ಜೀವಮಾನದ ಉಳಿತಾಯ ಹಣವನ್ನು ಬ್ಯಾಂಕಿನ ಠೇವಣಿಯಿಂದ ಲೂಟಿ ಮಾಡಲು ಅವರ ಆಪ್ತಮಿತ್ರರಿಗೆ ಅನುಮತಿ ನೀಡಿದೆ. 2014 ರಿಂದ ಮೋದಿ ಸರ್ಕಾರವು 17.46 ಲಕ್ಷ ಕೋಟಿ ಬ್ಯಾಂಕ್ ಸಾಲವನ್ನು ಮನ್ನಾ ಮಾಡಿದೆ. ಕಾರ್ಪೊರೇಟ್‌ಗಳಿಗೆ ಹಾಗೂ ಶ್ರೀಮಂತರಿಗೆ ಭಾರಿ ತೆರಿಗೆ ರಿಯಾಯತಿ ಒದಗಿಸಲಾಗಿದೆ. ಇದು ಅಸಮಾನತೆಯ ಅಂತರವನ್ನು ತೀವ್ರವಾಗಿ ಹೆಚ್ಚಿಸುತ್ತಿದೆ. ಭಾರತದ ಒಟ್ಟು ಜನಸಂಖ್ಯೆಯ ಕೇವಲ ಶೇಕಡಾ 1 ರಷ್ಟು ಜನರು ಶೇಕಡಾ 40 ರಷ್ಟು ಸಂಪತ್ತನ್ನು ಅನುಭವಿಸುತ್ತಿದ್ದಾರೆ ಎಂದು ಆಕ್ಸ್ ಫಾಮ್ ವರದಿ ಹೇಳುತ್ತದೆ. ಕೆಳಗಿನ ಶೇಕಡಾ 50 ರಷ್ಟು ಜನರು ಕೇವಲ ಶೇಕಡಾ 1 ರಷ್ಟು ಸಂಪತ್ತನ್ನು ಹೊಂದಿದ್ದಾರೆ. 2020 ರಲ್ಲಿ 102 ಜನರು ಶತಕೋಟ್ಯಾಧಿಪತಿಗಳಿದ್ದರೆ ಅದು 2023 ರ ಹೊತ್ತಿಗೆ 169 ಕ್ಕೆ ಏರಿದೆ.

ಮತ್ತೊಂದೆಡೆ, ಹಿಂದೆಂದೂ ಕಂಡು ಕೇಳರಿಯದಂತಹ ದಾಳಿಗಳನ್ನು ಭಾರತದ ದುಡಿಯುವ ಜನರ ಮೇಲೆ ಮಾಡಲಾಗುತ್ತಿದೆ, ಹೋರಾಟಗಳ ಮೂಲಕ ಗಳಿಸಿದ್ದ ಹಕ್ಕುಗಳನ್ನು ಕಿತ್ತುಹಾಕಿ, ಅದರ ಬದಲು ಕಾರ್ಪೊರೇಟ್-ಪರ ಕಾರ್ಮಿಕ ಸಂಹಿತೆಗಳನ್ನು ತರಲಾಗಿದೆ. ಸಂಘ ಕಟ್ಟಿಕೊಳ್ಳುವ ಪ್ರಾಥಮಿಕ ಹಕ್ಕು ಕೂಡ ಈಗ ಗಂಭೀರ ದಾಳಿಗೊಳಗಾಗಿದೆ.

ಭಾರತೀಯ ರೈತರ ಹಕ್ಕುಗಳ ಮೇಲೆ ಸರ್ವತೋಮುಖ ದಾಳಿ ಮಾಡುವುದರೊಂದಿಗೆ ಕೃಷಿ ವಲಯವನ್ನು ಕಾರ್ಪೊರೇಟೀಕರಣ ಮಾಡುವ ಮೂಲಕ ಆರ್ಥಿಕ ಸಾರ್ವಭೌಮತೆಯನ್ನು ಮೋದಿ ಸರ್ಕಾರವು ದುರ್ಬಲಗೊಳಿಸುತ್ತಿದೆ. ರೈತರ ಒಂದು ವರ್ಷಕ್ಕೂ ಮೀರಿದ ಐತಿಹಾಸಿಕ ಹೋರಾಟದ ಎದುರು ಮೋದಿ ಸರ್ಕಾರ ತನ್ನ ಮೂರು ರೈತ-ವಿರೋಧಿ, ಬಳಕೆದಾರ-ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕಾಯಿತು, ಆದರೆ ಆಗ ನೀಡಿದ ಭರವಸೆಗಳನ್ನು ಈಡೇರಿಸದೆ ರೈತರಿಗೆ ವಂಚನೆ ಮಾಡಿದೆ. ಇದೂ ಕೂಡ ಭಾರತದ ಸ್ವಾವಲಂಬನೆ ಹಾಗೂ ಆರ್ಥಿಕ ಸಾರ್ವಭೌಮತೆಯನ್ನು ಶಿಥಿಲಗೊಳಿಸುತ್ತದೆ.

ಭಾರತದ ಸಾರ್ವಜನಿಕ ವಲಯದ ರಕ್ಷಣೆ ಮಾಡದೆ, ಅದರ ನೈಸರ್ಗಿಕ ಸಂಪತ್ತನ್ನು ಕಾಪಾಡದೆ ಹಾಗೂ ಅದರ ಕಾರ್ಮಿಕರು ಮತ್ತು ರೈತರ ಹಕ್ಕುಗಳನ್ನು ರಕ್ಷಿಸದೆ ಆರ್ಥಿಕ ಸಾರ್ವಭೌಮತೆ ಇರಲು ಸಾಧ್ಯವಿಲ್ಲ.

ಭಾರತದ ಆರ್ಥಿಕ ಸಾರ್ವಭೌಮತೆಯ ರಕ್ಷಣೆಗಾಗಿನ ನೀತಿಗಳಿಗೆ ಸಿಪಿಐ(ಎಂ) ಬದ್ಧವಾಗಿದೆ. ಸಾರ್ವಜನಿಕ ವಲಯದ ಖಾಸಗೀಕರಣ ನೀತಿಯನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಮತ್ತು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂಬ ನಿಲುವನ್ನು ಎತ್ತಿಹಿಡಿಯುತ್ತದೆ. ಅತಿ ಶ್ರೀಮಂತರ ಮೇಲಿನ ತೆರಿಗೆ ಮತ್ತು ಜತೆಯಲ್ಲಿಯೇ ಒಂದು ಸಾಮಾನ್ಯ ಸಂಪತ್ತು ತೆರಿಗೆ ಹಾಗೂ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಮತ್ತೆ ಜಾರಿಮಾಡಲು ಕಾನೂನುಗಳನ್ನು ಅಂಗೀಕರಿಸಬೇಕು; ಕಾರ್ಮಿಕ ಸಂಹಿತೆಗಳನ್ನು ಹಿಂಪಡೆದು ಕಾರ್ಮಿಕ ಪರ ಕಾನೂನುಗಳನ್ನು ಅಂಗೀಕರಿಸಬೇಕು; ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಆಧಾರದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನನ್ನು ಖಾತರಿಗೊಳಿಸುವ ಮೂಲಕ ಭಾರತೀಯ ರೈತರ ಭದ್ರತೆಯನ್ನು ಮತ್ತು ಅದರ ಮೇಲೆ ಅವಲಂಬಿತವಾದ ಆಹಾರ ಭದ್ರತೆಯನ್ನು ಖಾತ್ರಿಗೊಳಿಸಬೇಕು.

ಬೆಲೆಗಳನ್ನು ನಿಯಂತ್ರಿಸಿ, ಆಹಾರ ಭದ್ರತೆ ಖಾತ್ರಿಪಡಿಸಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಿ.

ಮೋದಿ ಸರ್ಕಾರದಿಂದ ಕೋವಿಡ್ ಮಹಾಸಾಂಕ್ರಾಮಿಕದ ಅಸಮರ್ಪಕ ಹಾಗೂ ಕ್ರಿಮಿನಲ್ ನಿರ್ವಹಣೆ ಹಾಗೂ ಕಳಂಕಿತ ಅವೈಜ್ಞಾನಿಕ ಧೋರಣೆಗಳಿಂದಾಗಿ ಜನರು ಭಾರಿ ಪ್ರಮಾಣದ ಕಷ್ಟಗಳನ್ನು ಹಾಗೂ ಸಾವು ನೋವುಗಳನ್ನು ಅನುಭವಿಸಬೇಕಾಯಿತು. ಅಂತಹ ಸನ್ನಿವೇಶದಲ್ಲಿ ಮಜಬೂತಾದ ಆರೋಗ್ಯ ಆರೈಕೆ ವ್ಯವಸ್ಥೆಯ ಕೇರಳ ಮಾದರಿಯು ಒಂದು ಪರ್ಯಾಯವನ್ನು ದೇಶದ ಮುಂದೆ ಇರಿಸಿದೆ. ವಿಮಾ ಸೌಲಭ್ಯ ಆಧಾರಿತ ಆರೈಕೆಯು ಪ್ರಮುಖವಾಗಿ ಖಾಸಗೀ ವಲಯಕ್ಕೆ ಅನುಕೂಲವಾಗಲಿದೆ. ಅದರ ಬದಲು, ಸಾರ್ವಜನಿಕ ಆರೋಗ್ಯ ವಲಯವನ್ನು ಬಲಪಡಿಸುವ ಹಾಗೆಯೇ ವೈದ್ಯಕೀಯ ಆರೈಕೆ ಬಯಸುವ ವೈಯಕ್ತಿಕ ರೋಗಿಗಳ ಹಕ್ಕುಗಳನ್ನು ಖಾತ್ರಿ ಪಡಿಸುವ ಒಂದು ಸಂಯೋಜಿತ ಯೋಜನೆಯನ್ನು ಜಾರಿ ಮಾಡಲು ಸಾಧ್ಯವಾಗಬೇಕು.

ಭಾರತದಲ್ಲಿ ಬೆಳೆಯುತ್ತಿರುವ ಬಡತನದ ಪ್ರಮಾಣವನ್ನು ಮುಚ್ಚಿಡುವ ಸಲುವಾಗಿ ಮೋದಿ ಸರ್ಕಾರವು ಕಟ್ಟುಕತೆಗಳನ್ನು ಹೆಣೆಯಿತು; ಅದಕ್ಕಾಗಿ ಜನಧನ್ ಖಾತೆ, ಶೌಚಾಲಯ ಸಹಿತದ ಮನೆ, ಮುಂತಾದ ಅಂಶಗಳನ್ನು ಒಳಗೊಂಡ ವಿವಿಧ-ಆಯಾಮಗಳ ಸೂಚ್ಯಾಂಕ (ಮಲ್ಟಿ-ಡೈಮೆನ್ಶನಲ್ ಇಂಡೆಕ್ಸ್) ಎಂದು ಕರೆಯಲ್ಪಡುವುದನ್ನು ಬಳಸಲಾಗುತ್ತಿದೆ. ವಾಸ್ತವದಲ್ಲಿ ಜಾಗತಿಕ ಹಸಿವಿನ ಸೂಚ್ಯಾಂಕ (ಗ್ಲೋಬಲ್ ಹಂಗರ್ ಇಂಡೆಕ್ಸ್), ರಾಷ್ಟ್ರೀಯ ಮಾದರಿ ಸಮೀಕ್ಷೆ (ನ್ಯಾಷನಲ್ ಸ್ಯಾಂಪಲ್ ಸರ್ವೆ) ಮತ್ತು ಕುಟುಂಬ ಆರೋಗ್ಯ ಸಮೀಕ್ಷೆ (ಫ್ಯಾಮಿಲಿ ಹೆಲ್ಥ್ ಸರ್ವೆ) ಯಂತಹ ನಿಜವಾಗಿಯೂ ಬಡತನವನ್ನು ಅಳೆಯುವ ಪ್ರತಿಯೊಂದು ಪ್ರಮುಖ ಸೂಚ್ಯಾಂಕಗಳು ಜನರ ಅಪೌಷ್ಟಿಕತೆ, ಹಸಿವು ಹಾಗೂ ಅಭಾವಗಳ ಮೇಲ್ಮಟ್ಟಗಳನ್ನು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಹಾಗೂ ಮಕ್ಕಳಲ್ಲಿ ತೋರಿಸುತ್ತಿವೆ. ಆಹಾರ ಭದ್ರತೆ ಕುರಿತ ವಿಶ್ವಸಂಸ್ಥೆಯ 5 ಸಂಸ್ಥೆಗಳ 2021 ರ ವರದಿಯ ಪ್ರಕಾರ ಶೇಕಡಾ 74.1 ರಷ್ಟು ಭಾರತೀಯರು, ಅಂದರೆ ಸರಿಸುಮಾರು 104.3 ಕೋಟಿ ಜನರು, ಆರೋಗ್ಯಕರ ಆಹಾರ ಪಡೆಯಲು ಶಕ್ತರಾಗಿಲ್ಲ.

ಮೋದಿ ಸರ್ಕಾರವು ಅನುಸರಿಸಿದ ನೀತಿಗಳು ಹಿಂದೆAದೂ ಕಾಣದ ಬೆಲೆ ಏರಿಕೆಗೆ ಕಾರಣವಾಗಿವೆ. 2014-2015 ಮತ್ತು 2023-24 ರ ಅವಧಿಯಲ್ಲಿ ಪೆಟ್ರೋಲಿಯಮ್ ಉತ್ಪನ್ನಗಳ ಮೇಲೆ ಆಮದು ತೆರಿಗೆಯನ್ನು ವಿಪರೀತ ಏರಿಸುವ ಮೂಲಕ ರೂ.28.33 ಲಕ್ಷ ಕೋಟಿಯ ಭಾರಿ ಆದಾಯವನ್ನು ಮೋದಿ ಸರ್ಕಾರ ಗಳಿಸಿತು, ಆದರೆ ಅದು ದಿನಬಳಕೆಯ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ತೀವ್ರವಾಗಿ ಹೆಚ್ಚಿಸಿ ಗ್ರಾಹಕರ ದಿನನಿತ್ಯದ ಬದುಕನ್ನು ಮೂರಾಬಟ್ಟೆ ಮಾಡಿದೆ. ಇದು ಜನರ ಬೆವರಿನ ಹಣವನ್ನು ಪಿಕ್ ಪಾಕೆಟ್ ಮಾಡುವ ಮೂಲಕ ಸುಲಿಗೆ ಮಾಡಿದಂತೆ ಅಷ್ಟೆ. ಇಂತಹ ಬೆಲೆ ಏರಿಕೆಗಳು ಇತರ ಜೀವನಾವಶ್ಯಕ ವಸ್ತುಗಳ ಬೆಲೆಗಳ ಮೇಲೆ ದುಷ್ಪರಿಣಾಮ ಬೀರಿ ಸಾಮಾನ್ಯ ಜನರ, ಅದರಲ್ಲೂ ಕುಟುಂಬದ ಅಸ್ತಿತ್ವಕ್ಕಾಗಿ ತಮ್ಮ ಅಗತ್ಯಗಳನ್ನು ತ್ಯಾಗ ಮಾಡುವ ಮಹಿಳೆಯರ ಬದುಕಿನ ಮೇಲೆ ತೀವ್ರತರದ ಪರಿಣಾಮ ಬೀರಿದೆ.

ಕೇರಳದ ಎಲ್.ಡಿ.ಎಫ್. ಸರ್ಕಾರ ಮತ್ತಿತರ ರಾಜ್ಯ ಸರ್ಕಾರಗಳು ಮಾಡುತ್ತಿರುವಂತೆ ಸುಂಕಗಳನ್ನು ಕಡಿತ ಮಾಡುವ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ವಿಸ್ತರಿಕೆಯನ್ನು ಖಾತ್ರಪಡಿಸುವ ಬದಲು, ಮೋದಿ ಸರ್ಕಾರವು ವಾಸ್ತವವಾಗಿ ಆಹಾರಕ್ಕಾಗಿನ ಬಜೆಟಿನ ಅನುದಾನವನ್ನು ತೀವ್ರತರವಾಗಿ ಕಡಿತ ಮಾಡಿದೆ ಮತ್ತು ಜನರಿಗೆ ಲಭ್ಯವಿರುವ ಆಹಾರಧಾನ್ಯಗಳ ಪ್ರಮಾಣವನ್ನು ಕಡಿಮೆ ಮಾಡಿದೆ.

ಅದೇ ಸಮಯದಲ್ಲಿ ಶ್ರಮಶಕ್ತಿ ಸಮೀಕ್ಷೆ (ಲೇಬರ್ ಫೋರ್ಸ್ ಸರ್ವೆ) ಯು ಸರಾಸರಿ ನೈಜ ಕೂಲಿಗಳು 2014 ರಿಂದ ಸ್ಥಗಿತಗೊಂಡಿವೆ ಎನ್ನುವುದನ್ನು ತೋರುತ್ತಿವೆ. ಸರಾಸರಿ ನೈಜ ಕೂಲಿಗಳು ಸ್ಪಷ್ಟವಾಗಿ ಕಡಿಮೆಯಾಗುತ್ತಿವೆ, ಅದು ಕಡಿಮೆ ಬಳಕೆಗೆ ಕಾರಣವಾಗುತ್ತಿದೆ. ಕೌಟುಂಬಿಕ ಉಳಿತಾಯಗಳು 2023 ರಲ್ಲಿ 47 ವರ್ಷ ಹಿಂದಿನಷ್ಟು ಕಡಿಮೆ ದಾಖಲಾಗಿದೆ ಎಂದು ಆರ್.ಬಿ.ಐ. ಹೇಳಿದೆ. ಇದು ಕೌಟುಂಬಿಕ ಸಾಲಗಳಿಗೆ ಕಾರಣವಾಗಿ ಬಳಕೆಯ ಅಗತ್ಯಗಳಿಗಾಗಿ ಸಾಲ ಪಡೆಯುವುದು ತೀವ್ರವಾಗಿ ಹೆಚ್ಚುತ್ತಿದೆ. ಇದು ತಗ್ಗಿದ ಆಂತರಿಕ ಬೇಡಿಕೆಗೆ ಕಾರಣವಾಗಿದ್ದು ತಯಾರಿಕೆ ತಗ್ಗಿದೆ ಮತ್ತು ಉದ್ಯೋಗ ಸೃಷ್ಟಿಯನ್ನೂ ಕಡಿಮೆ ಮಾಡಿದೆ. ಭಾರತದ ಆರ್ಥಿಕತೆ ಪುನಶ್ಚೇತನಗೊಳ್ಳಬೇಕೆಂದರೆ ಜನರ ಕೊಳ್ಳುವ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ನೀತಿಗಳನ್ನು ಅನುಸರಿಸಬೇಕು.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸುಂಕವನ್ನು ತುರ್ತಾಗಿ ಇಳಿಸಬೇಕು, ಬೆಲೆ ಏರಿಕೆ ನಿಯಂತ್ರಿಸುವ ನೀತಿಗಳು ಬರಬೇಕು, 81 ಕೋಟಿ ಜನರಿಗೆ ಮಾಸಿಕ 5 ಕೆಜಿ ಉಚಿತ ರೇಷನನ್ನು ಪೂರೈಸಬೇಕು, ಸಬ್ಸಿಡಿಯೊಂದಿಗೆ 5 ಕೆಜಿ ಆಹಾರಧಾನ್ಯಗಳನ್ನು (ಅಕ್ಕಿ ರೂ.3/ಕೆಜಿ ಗೋಧಿ ರೂ.2/ಕೆಜಿ, ದಪ್ಪ ಧಾನ್ಯ ರೂ.1/ಕೆಜಿ) ನೀಡುವ ಯೋಜನೆಯನ್ನು ಮತ್ತೆ ಆರಂಭಿಸಬೇಕು. ಸರ್ಕಾರದ ಹಣಸಹಾಯದೊಂದಿಗೆ ಸಾರ್ವತ್ರಿಕ ಸಾರ್ವಜನಿಕ ಆರೋಗ್ಯ ಆರೈಕೆ ವ್ಯವಸ್ಥೆಯನ್ನು ಈ ಕೂಡಲೇ ಜಾರಿಮಾಡಬೇಕು ಎಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

ನಿರುದ್ಯೋಗ

ಭಾರಿ ಪ್ರಮಾಣದ ನಿರುದ್ಯೋಗ ಹೆಚ್ಚಾಗುತ್ತಿರುವುದು ಮೋದಿ ಸರ್ಕಾರದ ಬಹು ದೊಡ್ಡ ವೈಫಲ್ಯಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಮೋದಿ ಸರ್ಕಾರ ಭರವಸೆ ನೀಡಿತ್ತು. ಈ ಗ್ಯಾರಂಟಿಯನ್ನು ಜಾರಿ ಮಾಡುವುದಿರಲಿ, ಕಳೆದ ಐದು ವರ್ಷಗಳಲ್ಲಿ ಉದ್ಯೋಗಗಳು ಕಡಿಮೆಯಾಗಿವೆ. 2023 ರಲ್ಲಿ ಕಳೆದ 6 ವರ್ಷಗಳಲ್ಲೇ ಅತಿ ಕಡಿಮೆ ನಿರುದ್ಯೋಗ ದರ ದಾಖಲಾಗಿದೆ ಎಂದು ಮೋದಿ ಸರ್ಕಾರ ಬಡಾಯಿ ಕೊಚ್ಚಿಕೊಳ್ಳುತ್ತಿದೆ, ಆದರೆ ಅದಕ್ಕೆ ವ್ಯತಿರಿಕ್ತವಾಗಿ ಇತ್ತೀಚಿನ ದಶಕಗಳಲ್ಲಿ ಭಾರತವು ಅತ್ಯಂತ ಹೆಚ್ಚಿನ ಮಟ್ಟದ ನಿರುದ್ಯೋಗವನ್ನು ದಾಖಲಿಸಿದೆ. ಭಾರತದ ಆರ್ಥಿಕತೆಯ ಪರಿವೀಕ್ಷಣ ಕೇಂದ್ರ (ಸಿ.ಎಂ.ಐ.ಇ – ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ಪ್ರಕಾರ ಆಗಸ್ಟ್ 2023 ರಲ್ಲಿ ನಿರುದ್ಯೋಗ ದರವು ಶೇಕಡಾ 8.1 ರಷ್ಟಿತ್ತು. ಯುವಜನ (15-24 ವರ್ಷ) ನಿರುದ್ಯೋಗವು ಶೇಕಡಾ 23.22 ರಷ್ಟಿತ್ತು. ಪದವೀಧರರಲ್ಲಿ ಅದು ಭಾರಿ ಪ್ರಮಾಣ ಶೇಕಡಾ 42 ರಷ್ಟಿತ್ತು. ಹೆಚ್ಚು ಪ್ರಚಾರದಲ್ಲಿರುವ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದಲ್ಲಿಯೂ ಮೇಲಿನ 4 ಕಾರ್ಪೊರೇಟ್ ಕಂಪನಿಗಳು ಜನವರಿ-ಡಿಸೆಂಬರ್ 2023ರ ಅವಧಿಯಲ್ಲಿ 65,000 ನೌಕರರನ್ನು ವಜಾ ಮಾಡಿದೆ. ಮಹಿಳೆಯರು, ಮುಖ್ಯವಾಗಿ ಗ್ರಾಮೀಣ ಮಹಿಳೆಯರು ಹೆಚ್ಚು ಬಾಧಿತರಾಗಿದ್ದಾರೆ.

ಹಲವಾರು ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ರಂಗದ ಸಂಸ್ಥೆಗಳಲ್ಲಿ 25 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ ಎಂದು ಅಂದಾಜು ಮಾಡಲಾಗಿದೆ. ಸರ್ಕಾರವು ಉದ್ದೇಶಪೂರ್ವಕವಾಗಿ ಈ ಹುದ್ದೆಗಳನ್ನು ತುಂಬುತ್ತಿಲ್ಲ. ಪ್ರತಿಯಾಗಿ ಅದರ ಆಳ್ವಿಕೆಯಡಿಯಲ್ಲಿ ಉದ್ಯೋಗಗಳ ಗುಣಮಟ್ಟ ಬಹಳ ಕೆಟ್ಟಿದೆ. ಸಾಮೂಹಿಕ ತಾತ್ಕಾಲಿಕ ಹುದ್ದೆಗಳು, ಗುತ್ತಿಗೆ ಕೆಲಸಗಳು ಮತ್ತು ಅನೌಪಚಾರಿಕ ಹುದ್ದೆಗಳು ಎಲ್ಲಾ ರಂಗಗಳಲ್ಲಿ ಯಥೇಚ್ಛವಾಗುತ್ತಿವೆ. ತಯಾರಿಕಾ ವಲಯದಲ್ಲೂ, ಖಾಸಗಿ ಹಾಗೂ ಸಾರ್ವಜನಿಕ ವಲಯ ಮತ್ತು ಸರ್ಕಾರಿ ವಲಯಗಳಲ್ಲೂ ಇದು ವ್ಯಾಪಕವಾಗಿದೆ. ಒಟ್ಟಾರೆಯಾಗಿ ಅತ್ಯಂತ ಉತ್ಪಾದಕ ಕಾರ್ಮಿಕ ಶಕ್ತಿಯ ಮೇಲೆ ಬಹು ದೊಡ್ಡ ದಾಳಿಯಾಗುತ್ತಿದೆ. ಸಶಸ್ತ್ರ ಪಡೆಗಳಲ್ಲಿ ಕೂಡ ನೇಮಕಾತಿಯು ಗುತ್ತಿಗೆಯಾಧಾರದಲ್ಲಿ, ಉದಾಹರಣೆಗೆ ಕ್ರೂರ “ಅಗ್ನಿವೀರ್” ಯೋಜನೆಯಡಿಯಲಿ,್ಲ ನಡೆಯುತ್ತಿದೆ. ಅಂದರೆ ನಿರ್ಣಾಯಕವಾಗಿರುವ ದೇಶದ ಭದ್ರತೆಯನ್ನೇ ಪಣಕ್ಕಿಟ್ಟು ಇಂತಹ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ.

ಕೋವಿಡ್-19 ರ ಅವಧಿಯಲ್ಲಿ ಮುಖ್ಯವಾಗಿ ಗ್ರಾಮೀಣ ಭಾರತದಲ್ಲಿ ಉದ್ಯೋಗ ಹಾಗೂ ಆದಾಂiÀiಗಳಲ್ಲಿ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. ಭಾರತದ ಪಟ್ಟಣಗಳಲ್ಲಿನ ಉದ್ಯೋಗ ಕೊರತೆಯಿಂದಾಗಿ, ಭಾರತವು ಈಗ ಹಿಂಚಲನೆಯ ವಲಸೆಯನ್ನು (ರಿವರ್ಸ್ ಮೈಗ್ರೇಷನ್) ಅನುಭವಿಸುತ್ತಿದೆ. ಅಂದರೆ ಬದುಕುಳಿಯುವ ಸಲುವಾಗಿ ಜನರು ಹಳ್ಳಿಗಳಿಗೆ ಹಿಂತಿರುಗುತ್ತಿದ್ದಾರೆ. 2023-24 ರಲ್ಲಿ 9.84 ಕೋಟಿ ಕುಟುಂಬಗಳು ಮನರೇಗಾ (ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ) ಅಡಿ ಕೆಲಸ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ; ಪರ್ಯಾಯ ಉದ್ಯೋಗ ಇಲ್ಲದಿರುವುದರಿಂದ ಅದು ಕಷ್ಟದ ಕೆಲಸವಾಗಿದ್ದು ಕಡಿಮೆ ಕೂಲಿ ಸಿಗುತ್ತಿದ್ದಾಗ್ಯೂ ಜನರು ಅದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಯೂ ಕೂಡ ಮೋದಿ ಸರ್ಕಾರವು ಜನರನ್ನು ವಂಚಿಸುತ್ತಿದೆ, ಆ ಕಾಯಿದೆ ಅಡಿಯಲ್ಲಿನ ಅನುದಾನವನ್ನು ಕಡಿತ ಮಾಡಿದೆ, ಅದರಿಂದಾಗಿ ಭಾರಿ ಪ್ರಮಾಣದ ಕೂಲಿ ಬಾಕಿ ಉಳಿದಿದೆ.

ಉದ್ಯೋಗದ ಹಕ್ಕನ್ನು ಸಾಂವಿಧಾನಿಕ ಹಕ್ಕನ್ನಾಗಿ ಒಳಗೊಳ್ಳಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ. ತುರ್ತಾಗಿ ಸರ್ಕಾರಿ ಹಾಗೂ ಸಾರ್ವಜನಿಕ ವಲಯದಲ್ಲಿನ ಖಾಲಿ ಹುದ್ದೆಗಳನ್ನು ತುಂಬಬೇಕು. ಉದ್ಯೋಗಗಳನ್ನು ಸೃಷ್ಟಿ ಮಾಡುವ ಮೈಕ್ರೋ, ಚಿಕ್ಕ ಹಾಗೂ ಮಧ್ಯಮ ಉದ್ದಿಮೆಗಳನ್ನು (ಎಂ.ಎಸ್‌.ಎಂ.ಇ – ಮೈಕ್ರೋ ಸ್ಮಾಲ್ ಅಂಡ್ ಮೀಡಿಯಂ ಎಂಟರ್‌ಪ್ರೆöÊಸಸ್) ಬಲಪಡಿಸಬೇಕು ಮತ್ತು ವಿಸ್ತರಿಸಬೇಕು. ಮನರೇಗಾ ಯೋಜನೆಗೆ ಅನುದಾನವನ್ನು ಎರಡು ಪಟ್ಟು ಹೆಚ್ಚಿಸಬೇಕು. ಪಟ್ಟಣ ಉದ್ಯೋಗ ಖಾತ್ರಿಪಡಿಸುವ ಹೊಸದೊಂದು ಕಾನೂನನ್ನು ತರಬೇಕು ಮತ್ತು ನಿರುದ್ಯೋಗ ಭತ್ಯೆಯನ್ನು ಒದಗಿಸಬೇಕು. ಉದ್ಯೋಗ ನಷ್ಟ ಬೆಳವಣಿಗೆಯ ಈಗಿನ ನೀತಿಗಳನ್ನು ಬದಲಾಯಿಸುವ ಮೂಲಕ ಭಾರತದ ಬಹುತೇಕ ಯುವ ಶ್ರಮಶಕ್ತಿಯ ಪ್ರಯೋಜನದ ವಿನಾಶವನ್ನು ತಡೆಯಬೇಕು.

ಶಿಕ್ಷಣದ ಸಾರ್ವತ್ರಿಕ ಹಕ್ಕನ್ನು ಬಲಪಡಿಸಿ, ಉನ್ನತ ಶಿಕ್ಷಣದ ಖಾಸಗೀಕರಣವನ್ನು ನಿಲ್ಲಿಸಿ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) 2020 ವಾಣಿಜ್ಯೀಕರಣ, ಕೇಂದ್ರೀಕರಣ ಮತ್ತು ಕೋಮುವಾದೀಕರಣಕ್ಕೆ ಒತ್ತು ನೀಡುವ ಮೂಲಕ ಶಿಕ್ಷಣದ ಹಕ್ಕಿನ ಮೇಲೆ ಸಂಪೂರ್ಣ ಆಕ್ರಮಣವಾಗಿದೆ. ಒಂದು ಕಡೆ ಸಾರ್ವಜನಿಕ ಶಿಕ್ಷಣಕ್ಕಾಗಿ ಬಜೆಟ್ ಹಂಚಿಕೆಗಳು ಜಿಡಿಪಿಯ ಶೇಕಡಾ 3 ಕ್ಕಿಂತ ಕಡಿಮೆಯಿದೆ. ಇನ್ನೊಂದು ಕಡೆ ಶಿಕ್ಷಣದ ಹಕ್ಕನ್ನು ಲಾಭ ಗಳಿಸುವ ಹಕ್ಕಾಗಿ ಬದಲಾಯಿಸಿ, ವಿದ್ಯಾರ್ಥಿಗಳು ಮತ್ತು ಯುವಜನರನ್ನು ಲೂಟಿ ಮಾಡಲು ಖಾಸಗಿ ಆಟಗಾರರಿಗೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇದರೊಂದಿಗೆ ಎನ್.ಇ.ಪಿ ಶಿಕ್ಷಣದ ಕೋಮುವಾದೀಕರಣವನ್ನು ಪ್ರತಿಪಾದಿಸುತ್ತದೆ, ಪಠ್ಯಕ್ರಮದಲ್ಲಿ ಅತ್ಯಂತ ಅತಿರೇಕದ ಲೋಪಗಳು ಮತ್ತು ದೋಷಗಳನ್ನು ಹೊಂದಿದೆ. ಇದು ಇತಿಹಾಸವನ್ನು ಸಂಪೂರ್ಣವಾಗಿ ವಿರೂಪಗೊಳಿಸಲು ಪ್ರಯತ್ನಿಸುತ್ತದೆ, ಅವೈಜ್ಞಾನಿಕ ಮತ್ತು ತಾರ್ಕಿಕ ಚಿಂತನೆಯನ್ನು ಉತ್ತೇಜಿಸುತ್ತದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಅಧಿಕಾರದ ಕೇಂದ್ರೀಕರಣದ ಪ್ರವೃತ್ತಿಯು ಉಪಕುಲಪತಿಗಳು ಮತ್ತು ಅಧ್ಯಾಪಕರ ನೇಮಕಾತಿ ಸೇರಿದಂತೆ ಆಯಾ ರಾಜ್ಯಗಳಲ್ಲಿ ಶಿಕ್ಷಣ ಸಂಸ್ಥೆಗಳ ನಿರ್ವಹಣೆಯಲ್ಲಿ ರಾಜ್ಯಗಳ ಹಕ್ಕುಗಳ ಮೇಲಿನ ಆಕ್ರಮಣವಾಗಿದೆ. ಅತ್ಯಂತ ಚಿಂತಾಜನಕ ಪ್ರವೃತ್ತಿಯೆಂದರೆ ಅರ್ಹತೆಯ ಆಧಾರದ ಮೇಲೆ ಅಲ್ಲ, ಬದಲಿಗೆ ಹಿಂದುತ್ವ ಸಿದ್ಧಾಂತಗಳಿಗೆ ನಿಷ್ಠೆಯ ಆಧಾರದ ಮೇಲೆ ವ್ಯಕ್ತಿಗಳನ್ನು ನೇಮಿಸುವುದು.

ಸಿಪಿಐ(ಎಂ) ಶಿಕ್ಷಣಕ್ಕಾಗಿ ಬಜೆಟ್ ಹಂಚಿಕೆಗಳಲ್ಲಿ ಜಿಡಿಪಿಯ ಕನಿಷ್ಠ 6 ಪ್ರತಿಶತಕ್ಕೆ ಹೆಚ್ಚಳವನ್ನು ಪ್ರತಿಪಾದಿಸುತ್ತದೆ; ವಾಣಿಜ್ಯೀಕರಣ, ಕೋಮುವಾದೀಕರಣ ಮತ್ತು ಕೇಂದ್ರೀಕರಣದ ನೀತಿಗಳನ್ನು ಹಿಮ್ಮೆಟ್ಟಿಸ ಬಯಸುತ್ತದೆ.

ಒಕ್ಕೂಟವಾದವನ್ನು ಬಲಪಡಿಸಿ, ರಾಜ್ಯಗಳ ಹಕ್ಕುಗಳನ್ನು ರಕ್ಷಿಸಿ

ಒಕ್ಕೂಟವಾದದ ಸಾಂವಿಧಾನಿಕ ತತ್ವಗಳನ್ನು ಮೋದಿ ಸರ್ಕಾರವು ಕಡೆಗಣಿಸಿರುವುದು, ರಾಜ್ಯಗಳ ಹಕ್ಕುಗಳನ್ನು ಬಲಿಕೊಟ್ಟು ಬಲವಂತದ ಕೇಂದ್ರೀಕರಣದ ಅಪಾಯಕಾರಿ ನೀತಿಗಳಲ್ಲಿ ಪ್ರತಿಫಲನವಾಗುತ್ತಿದೆ.  ರಾಜಕೀಯ, ಹಣಕಾಸಿನ, ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ – ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಒಕ್ಕೂಟವಾದದ ಮೇಲೆ ಪಟ್ಟುಬಿಡದ ಸರ್ವಾಂಗೀಣ ದಾಳಿಯು ಈ ಅವಧಿಯ ಗುರುತಾಗಿ ಬಿಟ್ಟಿದೆ.  ವಿರೋಧ ಆಡಳಿತದ ರಾಜ್ಯಗಳನ್ನು ನಿರ್ದಿಷ್ಟವಾಗಿ ಗುರಿಪಡಿಸಲಾಗಿದೆ. ಗವರ್ನರುಗಳು ಮತ್ತು ಲೆಫ್ಟಿನೆಂಟ್ ಗವರ್ನರುಗಳು ನಿಯಮಿತವಾಗಿ ಎಲ್ಲಾ ಸಾಂವಿಧಾನಿಕ ನೀತಿ-ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಬಿಜೆಪಿಯೇತರ ರಾಜ್ಯಗಳಲ್ಲಿ, ರಾಜ್ಯ ಸರ್ಕಾರಗಳ ಕಾರ್ಯನಿರ್ವಹಣೆಯನ್ನು ಬುಡಮೇಲು ಕೃತ್ಯಗಳ ಮತ್ತು ತೊಂದರೆ ಉಂಟುಮಾಡುವ ಕೇಂದ್ರಗಳಾಗಿ ರಾಜ್ಯಪಾಲರು ಕಾರ್ಯ ನಿರ್ವಹಿಸುತಿದ್ದಾರೆ. ಈ ವಿಷಯಗಳ ಬಗ್ಗೆ ಹಲವಾರು ಬಿಜೆಪಿಯೇತರ ರಾಜ್ಯ ಸರ್ಕಾರಗಳು ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವ ಅನಿವಾರ್ಯ ಸ್ಥಿತಿ ಸೃಷ್ಟಿ ಮಾಡಲಾಗಿದೆ.

ಕೇರಳ ಎಲ್.ಡಿ.ಎಫ್ ಸರ್ಕಾರವು ಪರ್ಯಾಯ ನೀತಿಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವುದರಿಂದ, ಕೇಂದ್ರವು ಆರ್ಥಿಕವಾಗಿ ಅದರ ಕತ್ತು ಹಿಸುಕಲು ಗುರಿಯಾಗಿಸಿದೆ.

ರಾಜ್ಯ ಮತ್ತು ಸಂವಿಧಾನದ ಸಮವರ್ತಿ ಪಟ್ಟಿಗಳ ಅಡಿಯಲ್ಲಿ ವಿಷಯಗಳ ಮೇಲೆ ಶಾಸನ ಮಾಡುವ ಮೂಲಕ ಕೇಂದ್ರ ಸರ್ಕಾರವು ರಾಜ್ಯಗಳ ಹಕ್ಕುಗಳನ್ನು ನಿರಂತರವಾಗಿ ಅತಿಕ್ರಮಿಸುತ್ತಿದೆ.

ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಸರ್ಕಾರಗಳ ಸ್ವಾಯತ್ತತೆ ಸಂಕುಚಿತಗೊಂಡಿದೆ. ಸಂವಿಧಾನದ 8ನೇ ಶೆಡ್ಯೂಲಿನಲ್ಲಿ ಪಟ್ಟಿ ಮಾಡಲಾದ ಎಲ್ಲಾ ರಾಷ್ಟ್ರೀಯ ಭಾಷೆಗಳಿಗೆ ಸಮಾನ ಸ್ಥಾನಮಾನವನ್ನು ನಿರಾಕರಿಸುತ್ತಾ, ಕೇಂದ್ರ ಸರ್ಕಾರವು ಪ್ರಜ್ಞಾಪೂರ್ವಕವಾಗಿ ಹಿಂದಿಯನ್ನು ಉತ್ತೇಜಿಸುತ್ತಿದೆ.

ಹಣಕಾಸು ಒಕ್ಕೂಟವಾದ : ರಾಜ್ಯಗಳಿಗೆ ಹಣಕಾಸು ಸಂಗ್ರಹದ ಅವಕಾಶಗಳನ್ನು ತೀವ್ರವಾಗಿ ಹಿಂಡಲಾಗುತ್ತಿದೆ. ಜಿ.ಎಸ್.ಟಿ ಪರಿಹಾರದ ಅವಧಿಯನ್ನು ರಾಜ್ಯಗಳಿಗೆ ವಿಸ್ತರಿಸಲು ಮೋದಿ ಸರ್ಕಾರ ನಿರಾಕರಿಸಿತು. ಕೇಂದ್ರೀಯವಾಗಿ ಸಂಗ್ರಹಿಸಿದ ತೆರಿಗೆ ಆದಾಯದ ನ್ಯಾಯಯುತ ಪಾಲನ್ನು ರಾಜ್ಯಗಳಿಗೆ ವಂಚಿಸಲಾಗುತ್ತಿದೆ. ರಾಜ್ಯಗಳು ಶೇಕಡಾ 42 ರಷ್ಟು ಪಾಲನ್ನು ಪಡೆಯಬೇಕಾಗಿತ್ತು, ಬದಲಿಗೆ, ಅವು ಪಡೆಯುವುದು ಶೇಕಡಾ 32 ರಷ್ಟಿದೆ.

ರಾಜ್ಯ ಸರ್ಕಾರಗಳು ಸಾಲ ಪಡೆಯುವುದನ್ನೂ ನಿರ್ಬಂಧಿಸಲಾಗಿದೆ ಮತ್ತು ಹಣಕಾಸು ಜವಾಬ್ದಾರಿ ಮತ್ತು ನಿರ್ವಹಣೆ ಕಾಯಿದೆಯ (FRBM) ಷರತ್ತುಗಳು ಸಂಪನ್ಮೂಲಗಳನ್ನು ಸಂಗ್ರಹಿಸಲು ರಾಜ್ಯಗಳ ಸಾಮರ್ಥ್ಯವನ್ನು ನಿರ್ಬಂಧಿಸುತ್ತವೆ.

ಸಿಪಿಐ(ಎಂ) ಮೋದಿ ಸರ್ಕಾರದಿಂದ ತೀವ್ರವಾಗಿ ದುರ್ಬಲಗೊಂಡಿರುವ ರಾಜ್ಯಗಳ ಸಾಂವಿಧಾನಿಕ ಹಕ್ಕುಗಳ ಮರುಸ್ಥಾಪನೆಗಾಗಿ ದೃಢನಿರ್ಧಾರ ಮಾಢಿದೆ. ಕೇಂದ್ರದಿಂದ ವಿಧಿಸಲಾದ ಹೆಚ್ಚುವರಿ ಶುಲ್ಕಗಳು ಮತ್ತು ಸೆಸ್ ಗಳ ಪಾಲು ಸೇರಿದಂತೆ ರಾಜ್ಯಗಳಿಗೆ ಕೇಂದ್ರ ತೆರಿಗೆಗಳ ಒಟ್ಟು ಸಂಗ್ರಹದ ಶೇಕಡಾ 50 ರಷ್ಟು ವಿತರಣೆಯಾಗಬೇಕು ಎಂಬುದು ಸಿಪಿಐ(ಎಂ) ನಿಲುವು.  ರಾಜ್ಯಗಳ ಹಿತಾಸಕ್ತಿ ಬಲಿ ಕೊಟ್ಟು ಕೇಂದ್ರೀಕರಣವನ್ನು ಉತ್ತೇಜಿಸುವ ನೀತಿಗಳ ಅಂತ್ಯಕ್ಕಾಗಿ, ಮುಖ್ಯಮಂತ್ರಿ ಪ್ರಸ್ತಾಪಿಸಿದ ಮೂವರು ಗಣ್ಯ ವ್ಯಕ್ತಿಗಳ ಸಮಿತಿಯಿಂದ ರಾಜ್ಯಪಾಲರನ್ನು ಆಯ್ಕೆ ಮಾಡಬೇಕು ಎಂದು ಸಿಪಿಐ(ಎಂ) ಪ್ರತಿಪಾದಿಸುತ್ತದೆ.

ಸಾಮಾಜಿಕ ನ್ಯಾಯ

ಸಾಮಾಜಿಕ ನ್ಯಾಯದ ಉದ್ದೇಶವನ್ನು ಸಾಕಾರಗೊಳಿಸಲು ಎಲ್ಲರಿಗೂ ಸಮಾನತೆಯ ಸಾಂವಿಧಾನಿಕ ಖಾತರಿಯಿಂದ ದೂರ ಸರಿಯುತ್ತಾ, ಸಾಮಾಜಿಕವಾಗಿ ತುಳಿತಕ್ಕೊಳಗಾದ ವಿಭಾಗಗಳು ಇನ್ನೂ ಹೆಚ್ಚಿನ ಅನ್ಯಾಯ ಮತ್ತು ತಾರತಮ್ಯಕ್ಕೆ ಒಳಗಾಗುತ್ತಿವೆ.

ಹತ್ತು ವರ್ಷಗಳ ಮೋದಿ ಆಳ್ವಿಕೆಯು ಬಿಜೆಪಿ ಸರ್ಕಾರದ ಮನುವಾದಿ ಧೋರಣೆಯ ಆಧಾರದ ಮೇಲೆ ಸಾಮಾಜಿಕ ನ್ಯಾಯದ ತತ್ವಗಳ ಮೇಲೆ ಸಂಪೂರ್ಣ ಆಕ್ರಮಣವನ್ನು ಕಂಡಿದೆ. ಜಾತಿ ವ್ಯವಸ್ಥೆಯ ವಿನಾಶಕ್ಕೆ ಸಾಂವಿಧಾನಿಕ ಆಶಯವನ್ನು ಜಾರಿಗೊಳಿಸುವ ಬದಲು, ಜಾತಿ ವ್ಯವಸ್ಥೆಯ ಶ್ರೇಣಿಗಳನ್ನು ಉಳಿಸಿಕೊಂಡೇ ರಾಜಕೀಯ ಲಾಭಕ್ಕಾಗಿ ಸಂಕುಚಿತ ಜಾತಿ ಗುರುತುಗಳನ್ನು ಉತ್ತೇಜಿಸಲು ಮೋದಿ ಸರ್ಕಾರವು ಸಿನಿಕತನದ ವಿಧಾನಗಳನ್ನು ಬಳಸಿದೆ. ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಹುದ್ದೆಗಳಲ್ಲಿ ಎಸ್.ಸಿ/ಎಸ್.ಟಿ ಗೆ ಖಾಲಿ ಹುದ್ದೆಗಳ ದೊಡ್ಡ ಬ್ಯಾಕ್ಲಾಗ್, ಅತ್ಯಂತ ಅಂಚಿನಲ್ಲಿರುವ ಮತ್ತು ತುಳಿತಕ್ಕೊಳಗಾದ ವರ್ಗಗಳಿಗೆ ಮೀಸಲಾತಿಯ ಕುರಿತು ಅದರ ಇಬ್ಬಗೆಯ ನೀತಿಯ ಸೂಚನೆಯಾಗಿದೆ. ಒಂದು ಕಡೆ ಸರ್ಕಾರದ ಹೊರಗುತ್ತಿಗೆ ಮತ್ತು ಖಾಸಗೀಕರಣ ನೀತಿಗಳು ಉದ್ಯೋಗಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಕಡಿಮೆಗೊಳಿಸಿದೆ. ಇನ್ನೊಂದು ಕಡೆ, ಖಾಸಗಿ ವಲಯದಲ್ಲಿ ಮೀಸಲಾತಿಗಾಗಿ ಕಾನೂನನ್ನು ಜಾರಿಗೊಳಿಸಲು ನಿರಾಕರಿಸಿರುವುದು ಈ ಸಾಂವಿಧಾನಿಕ ಖಾತರಿಯನ್ನು ದುರ್ಬಲಗೊಳಿಸಿದೆ. ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಗಳು ಸಹ ಭಾರಿ ಬಾಕಿಯನ್ನು ಕಂಡಿವೆ. ಆದಿವಾಸಿಗಳ ಸಾಂವಿಧಾನಿಕ ಮತ್ತು ಕಾನೂನು ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ, ಇದು ಸ್ಥಳಾಂತರ ಮತ್ತು ನಿರ್ಗತಿಕತೆಗೆ ಕಾರಣವಾಗುತ್ತಿದೆ.

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಮತ್ತು ದಾಳಿಗಳು ಹಲವು ಪಟ್ಟು ಹೆಚ್ಚಿವೆ. ಗ್ರಾವiಸಭಾದ ನಿರ್ಣಾಯಕ ಪಾತ್ರ ಸೇರಿದಂತೆ ಅನೇಕ ಸಾಂವಿಧಾನಿಕ ಮತ್ತು ಕಾನೂನು ನಿಬಂಧನೆಗಳನ್ನು ತೆಗೆದು ಹಾಕಿರುವುದರಿಂದಾಗಿ ಆದಿವಾಸಿಗಳು ತಮ್ಮ ಹಕ್ಕುಗಳ ಸವೆತಕ್ಕೆ ಒಳಗಾಗುತ್ತಾರೆ. ಅರಣ್ಯಗಳು ವಾಣಿಜ್ಯೀಕರಣ ಮತ್ತು ಖಾಸಗೀಕರಣಗೊಳ್ಳುವುದರೊಂದಿಗೆ, ಆದಿವಾಸಿಗಳ ಸ್ಥಳಾಂತರವು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದಿವಾಸಿಗಳನ್ನು ಏಕರೂಪದ ಹಿಂದೂ ಗುರುತಿನಡಿಯಲ್ಲಿ ಜೀರ್ಣಿಸಿಕೊಳ್ಳುವ ಪ್ರಯತ್ನಗಳೊಂದಿಗೆ, ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕ್ರಿಶ್ಚಿಯನ್ ಆದಿವಾಸಿಗಳ ಮೇಲೆ ಹೆಚ್ಚು ದಾಳಿ ಮಾಡಲಾಗುತ್ತಿದೆ.

ಮಹಿಳಾ ಮೀಸಲಾತಿ ಕಾನೂನನ್ನು ಜನಗಣತಿ ಮತ್ತು ಕ್ಷೇತ್ರಗಳ ಪುನರ್ವಿಂಗಡಣೆಯೊಂದಿಗೆ ಜೋಡಿಸಿ, ಅನಿರ್ದಿಷ್ಟಾವಧಿಗೆ ಮುಂದೂಡುವ ಮೂಲಕ ಮೋದಿ ಸರ್ಕಾರ ಮಹಿಳೆಯರಿಗೆ ದ್ರೋಹ ಮಾಡಿದೆ. ಈ ಚುನಾವಣೆಯಲ್ಲಿಯೇ ಮೂರನೇ ಒಂದು ಭಾಗದಷ್ಟು ಮೀಸಲಾತಿ ಪಡೆಯಬೇಕಾಗಿದ್ದ ಮಹಿಳೆಯರಿಗೆ ಇದು ದೊಡ್ಡ ಹೊಡೆತವಾಗಿದೆ. ಮಹಿಳೆಯರು ಉದ್ಯೋಗ ಮತ್ತು ಆದಾಯದ ನಷ್ಟದೊಂದಿಗೆ ಆರ್ಥಿಕ ಸಂಕಷ್ಟದ ಭಾರವನ್ನು ಎದುರಿಸುತ್ತಿದ್ದಾರೆ, ತಮ್ಮ ಕುಟುಂಬದ ಉಳಿವಿಗಾಗಿ ಅವರು ಸಾಲಕ್ಕೆ ಮೊರೆ ಹೋಗಬೇಕಾಗಿದೆ. ನಿರ್ದಿಷ್ಟವಾಗಿ ದಲಿತ ಮತ್ತು ಆದಿವಾಸಿ ಮಹಿಳೆಯರು ಜಾತಿ, ಲಿಂಗ ಮತ್ತು ವರ್ಗದಿಂದ ತ್ರಿವಳಿ ಹೊರೆಯನ್ನು ಅನುಭವಿಸುತ್ತಾರೆ. ಮೋದಿ ಆಳ್ವಿಕೆಯ ಹತ್ತು ವರ್ಷಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವು ಶೇಕಡಾ 28 ರಷ್ಟು ತೀವ್ರವಾಗಿ ಹೆಚ್ಚಾಗಿದೆ. ಗಂಡಾಳ್ವಿಕೆ, ಕೋಮುವಾದಿ ಮತ್ತು ಜಾತಿವಾದಿ ಆಚರಣೆಗಳನ್ನು ಉತ್ತೇಜಿಸುವ ಪ್ರತಿಗಾಮಿ ಮನುವಾದಿ ಸಿದ್ಧಾಂತಗಳನ್ನು ಆಡಳಿತ ಪಕ್ಷವು ಸಕ್ರಿಯವಾಗಿ ಪ್ರಚಾರ ಮಾಡುತ್ತಿದೆ. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಕಂಡು ಬಂದಂತೆ ಲೈಂಗಿಕ ಅಪರಾಧಗಳಲ್ಲಿ ನ್ಯಾಯದ ಪ್ರಕ್ರಿಯೆಗಳ ಕೋಮುವಾದೀಕರಣವು ಅತ್ಯಂತ ಅಪಾಯಕಾರಿ ಪ್ರವೃತ್ತಿಯಾಗಿದೆ. ಜೊತೆಗೆ, ಹತ್ರಾಸ್ ಪ್ರಕರಣದಲ್ಲಿ ಮತ್ತು ಮಹಿಳಾ ಕುಸ್ತಿಪಟುಗಳಿಗೆ ಸರಣಿ ಲೈಂಗಿಕ ಕಿರುಕುಳದ ಆರೋಪಿಗಳ ಪ್ರಕರಣಗಳಲ್ಲಿ ಕಂಡುಬಂದಂತೆ, ಪ್ರಬಲ ಜಾತಿ ಸಂಪರ್ಕಗಳ ಆಧಾರದ ಮೇಲೆ ಬಿಜೆಪಿಯ ಬೆಂಬಲಿಗರಿಗೆ ನೀಡಿದ ರಕ್ಷಣೆ ಆಡಳಿತದ ಬೂಟಾಟಿಕೆಯನ್ನು ಸಂಪೂರ್ಣವಾಗಿ ಬಹಿರಂಗಪಡಿಸಿದೆ.

ಸಿಪಿಐ(ಎಂ ಸಾಮಾಜಿಕ ನ್ಯಾಯದ ಜಾರಿಗಾಗಿ ಈ ಮುಂದಿನ ಕ್ರಮಗಳನ್ನು ಬಲವಾಗಿ ಪ್ರತಿಪಾದಿಸುತ್ತದೆ : ಖಾಸಗಿ ವಲಯದಲ್ಲಿ ಮೀಸಲಾತಿಗಾಗಿ ಕಾನೂನು ರೂಪಿಸಲು ಮತ್ತು ದುರ್ಬಲಗೊಳಿಸದೆ ಕಾಯ್ದಿರಿಸಿದ ಹುದ್ದೆಗಳಲ್ಲಿ ಖಾಲಿ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಲು; ಆದಿವಾಸಿಗಳ ಸಾಂವಿಧಾನಿಕ ಮತ್ತು ಕಾನೂನು ಹಕ್ಕುಗಳ ರಕ್ಷಣೆ ಮತ್ತು ಸಾಂಸ್ಕೃತಿಕ ಜೀರ್ಣೀಕರಣದ ಅಂತ್ಯಕ್ಕಾಗಿ; ದೇಶದಲ್ಲಿ ಒಬಿಸಿ (ಇತರ ಹಿಂದುಳಿದ ವರ್ಗಗಳ) ಬಗ್ಗೆ ಸರಿಯಾದ ದತ್ತಾಂಶವನ್ನು ಪಡೆಯಲು 2021ರ ಅತಿವಿಳಂಬಿತ ಸಾಮಾನ್ಯ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನು ನಡೆಸುವುದು ಅವಶ್ಯಕ: ಇದು ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿಗಳ ತಕ್ಷಣದ ಅನುಷ್ಠಾನಕ್ಕಾಗಿ; ದೌರ್ಜನ್ಯಗಳಿಗೆ ಬಲಿಯಾದ ಮಹಿಳೆಯರಿಗೆ ನ್ಯಾಯದ ಪ್ರಕ್ರಿಯೆಗಳನ್ನು ಬಲಪಡಿಸಲು.

ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವುದು

ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಭ್ರಷ್ಟಾಚಾರ-ಮುಕ್ತ ಆಡಳಿತ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಭ್ರಷ್ಟಾಚಾರಕ್ಕೆ ಶೂನ್ಯ-ಸಹಿಷ್ಣುತೆ ಎಂದೂ ಘೋಷಿಸಿದ್ದರು. ಆದರೆ, ಬಿಜೆಪಿ ಸರ್ಕಾರದ ದಾಖಲೆ ಇದಕ್ಕೆ ವಿರುದ್ಧವಾಗಿದೆ. ಒಂದೇ ವ್ಯತ್ಯಾಸವೆಂದರೆ ಮೋದಿ ಆಡಳಿತದಲ್ಲಿ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಲಾಯಿತು ಮತ್ತು ಚುನಾವಣಾ ಬಾಂಡುಗಳ ಯೋಜನೆ ಅಥವಾ ಪಿಎಂ ಕೇರ್ಸ್ (PM Cares) ನಿಧಿಯ ಮೂಲಕ ಭಾರೀ ಪ್ರಮಾಣದಲ್ಲಿ ಏರಿದೆ. 

ಚುನಾವಣಾ ಬಾಂಡುಗಳನ್ನು ಅಸಂವಿಧಾನಿಕ ಎಂದು ಘೋಷಿಸುವ ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮವಾಗಿ, ಅದಕ್ಕೆ ಯಾರು ಚಂದಾದಾರರಾಗಿದ್ದಾರೆ ಮತ್ತು ಯಾವ ಪಕ್ಷವು ಅದನ್ನು ಪಡೆದುಕೆಂಡಿತು ಎಂಬ ಚುನಾವಣಾ ಬಾಂಡುಗಳ ದತ್ತಾಂಶದಿಂದಾಗಿ, ಈಗ ಈ ಭ್ರಷ್ಟಾಚಾರಕ್ಕೆ ಸ್ಫಟಿಕ ಸ್ಪಷ್ಟ ಪುರಾವೆಗಳಿವೆ. ಬಿಜೆಪಿ ಬಾಂಡುಗಳ ಮೂಲಕ 8,252 ಕೋಟಿ ರೂ., ಇದು ಖರೀದಿ ಮಾಡಲಾಗಿರುವ ಬಾಂಡುಗಳ ಒಟ್ಟು ಮೊತ್ತದ ಶೇಕಡಾ 50 ರಷ್ಟಿದೆ. ಬಿಜೆಪಿಯು ಈ ಹಣವನ್ನು ಕಾರ್ಪೊರೇಟ್ ಗಳಿಂದ ‘ನೀ ನನಗಿದ್ದರೆ ನಾ ನಿನಗೆ’  ವಿಧಾನದ ಮೂಲಕ ಸಂಗ್ರಹಿಸಿದೆ, ಬಾಂಡುಗಳ ಮೂಲಕ ಲಂಚ ಸಂಗ್ರಹಿಸಿ ಕಾಂಟ್ರಾಕ್ಟುಗಳು ಮತ್ತು ಲೈಸೆನ್ಸ್ ಗಳನ್ನು ನೀಡಲಾಗಿದೆ. ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಕೇಂದ್ರೀಯ ಏಜೆನ್ಸಿಗಳ ಬಲವಂತದ ಕ್ರಮವನ್ನು ಬಳಸಿಕೊಂಡು ವಸೂಲಿ ಮಾಡುವುದು ಇನ್ನೊಂದು ವಿಧಾನವಾಗಿದೆ. ಇದಲ್ಲದೆ, ಚುನಾವಣಾ ಬಾಂಡುಗಳು ದೊಡ್ಡ ಪ್ರಮಾಣದ ಕಪ್ಪು ಹಣ ಬಿಳಿ ಮಾಡುವ ಮಾರ್ಗಗಳನ್ನು ತೆರೆದವು. ಅನೇಕ ಸಂಸ್ಥೆಗಳು ಚುನಾವಣಾ ಬಾಂಡುಗಳನ್ನು ಖರೀದಿಸಿದವು, ಅದರ ಮೌಲ್ಯವು ಅವರು ಗಳಿಸಿದ ಲಾಭದ ಹಲವು ಪಟ್ಟು ಹೆಚ್ಚು. ಬಿಜೆಪಿ ಅನಾಮಧೇಯ ಚುನಾವಣಾ ಬಾಂಡುಗಳ ಮೂಲಕ ಲಂಚ ಮತ್ತು ಸುಲಿಗೆ ದಂಧೆಯನ್ನು ನಡೆಸುತ್ತಿದೆ. 

ಚುನಾವಣಾ ಬಾಂಡುಗಳ ಯೋಜನೆಯನ್ನು ಸ್ವೀಕರಿಸಲು ನಿರಾಕರಿಸಿದ ಮತ್ತು ಬಾಂಡುಗಳ ಮೂಲಕ ಯಾವುದೇ ಹಣವನ್ನು ಪಡೆಯದ ಏಕೈಕ ರಾಷ್ಟ್ರೀಯ ಪಕ್ಷ ಸಿಪಿಐ(ಎಂ).  ಬಾಂಡುಗಳ ಯೋಜನೆಯನ್ನು ಪ್ರಶ್ನಿಸಲು ಅದು ಯಶಸ್ವಿಯಾಗಿ ಸುಪ್ರೀಂ ಕೋರ್ಟಿಗೆ ಹೋಗಿದೆ. 

ಬಿಜೆಪಿ ರೂ. 2013 ಮತ್ತು 2023ರ ನಡುವೆ ಕಾರ್ಪೊರೇಟುಗಳಿಂದ 7,726 ಕೋಟಿ ರೂ.ನಷ್ಟು ಚುನಾವಣಾÀ ಬಾಂಡ್ ಅಲ್ಲದ ವಿಧಾನಗಳಿಂದಲೂ ನೀಡಲಾದ ರಾಜಕೀಯ ನಿಧಿಯ ಶೇ.65ರಷ್ಟು ಪಡೆದಿದೆ.

ಸಿಪಿಐ(ಎಂ) ಚುನಾವಣಾ ವ್ಯವಸ್ಥೆಯಲ್ಲಿ ಹಣದ ಅಧಿಕಾರದ ಬಳಕೆಯನ್ನು ತಡೆಯಲು ತುರ್ತು ಚುನಾವಣಾ ಸುಧಾರಣೆಗಳನ್ನು ಪ್ರತಿಪಾದಿಸುತ್ತದೆ. ಇದಕ್ಕಾಗಿ, ಪ್ರಭುತ್ವವು ಚುನಾವಣೆಗಳಿಗೆ ನಿಧಿ ಕೊಡುವ ವ್ಯವಸ್ಥೆಯನ್ನು ಮತ್ತು ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳ ಮೇಲೆ ನಿಷೇಧವನ್ನು ಪಕ್ಷವು ಬಯಸುತ್ತದೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ಕಾರ್ಪೊರೇಟ್ ಗಳು ಹಣವನ್ನು ನೀಡಬೇಕು ಮತ್ತು ಅಂತಹ ಕೊಡುಗೆಗಳನ್ನು ಪ್ರಭುತ್ವ ಚುನಾವಣಾ ನಿಧಿಯಲ್ಲಿ ಜಮಾ ಮಾಡಬೇಕು ಮತ್ತು ಪ್ರಭುತ್ವ ನಿಧಿಯಾಗಿ ಬಳಸಬೇಕು.

ಜಮ್ಮು ಮತ್ತು ಕಾಶ್ಮೀರ

ಕಲಮು 370 ಅನ್ನು ರದ್ದುಗೊಳಿಸುವುದು ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸುವುದು 2019 ರಲ್ಲಿ ಎರಡನೇ ಮೋದಿ ಸರ್ಕಾರದ ಮೊದಲ ಕಾರ್ಯಾಚರಣೆಗಳಲ್ಲಿ ಒಂದಾಗಿತ್ತು. ಅದರೊಂದಿಗೆ ಸಂವಿಧಾನದ 35 ಎ ಪರಿಚ್ಛೇದವನ್ನೂ ರದ್ದುಗೊಳಿಸಲಾಯಿತು. ಈ ರೀತಿಯಲ್ಲಿ, ಭಾರತದಲ್ಲಿನ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯವನ್ನು ಗುರಿಯಾಗಿಸುವ ಮತ್ತು ಅದು ಭಾರತ ಒಕ್ಕೂಟಕ್ಕೆ ಸೇರಿದ ಸಾಧನದ ಭಾಗವಾಗಿ ಭಾರತೀಯ ಸಂವಿಧಾನವು ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಆರೆಸ್ಸೆಸ್ ನ ದೀರ್ಘಕಾಲದ ಹಿಂದುತ್ವ ಕಾರ್ಯಸೂಚಿಯ ಜಾರಿಯನ್ನು  ಮಾಡಿತು. ಇದನ್ನು ಮಾಡುತ್ತಿದ್ದಂತೆ, ರಾಜ್ಯದ ಎಲ್ಲಾ ರಾಜಕೀಯ ನಾಯಕರು ಮತ್ತು ಇತರ ಅನೇಕರನ್ನು ನಿರ್ದಾಕ್ಷಿಣ್ಯವಾಗಿ ಕರಾಳ ಕಾನೂನುಗಳ ಅಡಿಯಲ್ಲಿ ಬಂಧಿಸಲಾಯಿತು ಮತ್ತು ಇಂಟರ್ನೆಟ್ ಸ್ಥಗಿತಗೊಳಿಸುವಿಕೆ ಮುಂತಾದ ತೀವ್ರ ನಿರ್ಬಂಧಗಳನ್ನು ವಿಧಿಸಲಾಯಿತು.

ಅಂದಿನಿAದ, ಹಲವು ಸರಣಿ ಕ್ರಮಗಳಲ್ಲಿ ಪುನರ್ವಿಂಗಡಣೆ ಆಯೋಗದ ಮೂಲಕ ಜಮ್ಮು-ಕಾಶ್ಮೀರದ ಜನಸಂಖ್ಯಾ ಸ್ವರೂಪ ಮತ್ತು ಸಂಯೋಜನೆಯನ್ನು ಬದಲಾಯಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ; ಜಮ್ಮು-ಕಾಶ್ಮೀರದ ಖಾಯಂ ನಿವಾಸಿಗಳ ನಿವಾಸ ಸ್ಥಿತಿಯನ್ನು ಮತ್ತು ಭೂಮಿಯ ಹಕ್ಕುಗಳನ್ನು ದುರ್ಬಲಗೊಳಿಸಲಾಗುತ್ತಿದೆ. ರಾಜ್ಯ ವಿಧಾನಸಭೆಗೆ ಚುನಾವಣೆಯನ್ನು ಮುಂದೂಡುತ್ತಲೇ ಬಂದಿದೆ. 

ಆರ್ಥಿಕ ಅಭಿವೃದ್ಧಿ ಮತ್ತು ಭಯೋತ್ಪಾದನೆಯ ಅಂತ್ಯದ ಸಾಧನೆಗಳ ಕುರಿತು ಕೊಚ್ಚಿಕೊಳ್ಳವುದರ ಹೊರತಾಗಿಯೂ, ಅಧಿಕೃತ ಮಾಹಿತಿಯು ಜಮ್ಮು ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ಬಂಧನದಲ್ಲಿ ಶೇಕಡಾ 71 ರಷ್ಟು ಹೆಚ್ಚಳದೊಂದಿಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಹೆಚ್ಚಳವನ್ನು ತೋರಿಸುತ್ತದೆ. ಇಡೀ ಜಮ್ಮು-ಕಾಶ್ಮೀರದÀಲ್ಲಿ 2019 ಮತ್ತು 2022 ರ ನಡುವೆ ವಾರ್ಷಿಕವಾಗಿ 150-125 ರ ನಡುವೆ ಭಯೋತ್ಪಾದಕ ದಾಳಿಗಳ ಸಂಖ್ಯೆ ಇದೆ. ಅಂತೆಯೇ, ಈ ಅವಧಿಯಲ್ಲಿ ಎನ್‌ಕೌಂಟರ್ ಘಟನೆಗಳು ವಾರ್ಷಿಕವಾಗಿ ನೂರಕ್ಕೂ ಹೆಚ್ಚು ಇವೆ. ಆರ್ಥಿಕ ಪರಿಸ್ಥಿತಿಯು ಹದಗೆಟ್ಟಿದೆ. ನಿರುದ್ಯೋಗವು ರಾಷ್ಟ್ರೀಯ ಸರಾಸರಿಗಿಂತ ಮೂರು ಪಟ್ಟು ಹೆಚ್ಚು ಇದೆ. ಆಪಲ್ ಬೆಳೆಗಾರರು ಮತ್ತು ಸಣ್ಣ ವ್ಯಾಪಾರ ಮಾಲೀಕರ ಮೇಲೆ ಪ್ರತಿಕೂಲ ಪರಿಣಾಮದಿಂದ ಬಳಲುತ್ತಿದ್ದಾರೆ..

ಸುಪ್ರಿಂ ಕೋರ್ಟು ತೀರ್ಪು: ಕಲಮು 370 ರ ರದ್ದತಿ ಮತ್ತು ಜಮ್ಮು-ಕಾಶ್ಮೀರ ರಾಜ್ಯದ ವಿಸರ್ಜನೆಯ ಸಾಂವಿಧಾನಿಕತೆಯ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್ನ ತೀರ್ಪು ನಮ್ಮ ಸಂವಿಧಾನದ ಒಕ್ಕೂಟ ಸಂರಚನೆೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತದೆ. ಕಲಮು 370 ರಲ್ಲಿ ಒಳಗೊಂಡಿರುವ ವಿಶೇಷ ಸ್ಥಾನಮಾನವನ್ನು ಉಳಿಸಿಕೊಳ್ಳಲು ಜಮ್ಮು-ಕಾಶ್ಮೀರ ಭಾರತಕ್ಕೆ ಸೇರಿದ ಸಾಧನವು ಷರತ್ತುಬದ್ಧವಾಗಿದೆ ಎಂಬ ಅಂಶವನ್ನು ನಿರಾಕರಿಸಿದ ಸುಪ್ರೀಂ ಕೋರ್ಟು, ಒಕ್ಕೂಟ ಸೇರಿದ ನಂತರ ಜಮ್ಮು-ಕಾಶ್ಮೀರವು ಸಾರ್ವಭೌಮತ್ವದ ಯಾವುದೇ ಅಂಶವನ್ನು ಉಳಿಸಿಕೊಳ್ಳುವುದಿಲ್ಲ ಎಂದು ತೀರ್ಪು ನೀಡಿತು. ಈ ತೀರ್ಪು ದೇಶದ ಎಲ್ಲಾ ರಾಜ್ಯಗಳಿಗೆ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತದೆ, ಅಲ್ಲಿ ಅಧ್ಯಕ್ಷರ ಆಡಳಿತವನ್ನು ವಿಧಿಸಬಹುದು ಮತ್ತು ರಾಜ್ಯಪಾಲರ ಒಪ್ಪಿಗೆಯೊಂದಿಗೆ ಚುನಾಯಿತ ಶಾಸಕಾಂಗ ಸಭೆಯ ಅನುಪಸ್ಥಿತಿಯಲ್ಲಿ ಅದರ ಗಡಿಗಳನ್ನು ಬದಲಾಯಿಸಬಹುದು ಅಥವಾ ರಾಜ್ಯತ್ವವನ್ನು ವಿಸರ್ಜಿಸಬಹುದು.

ಸಂವಿಧಾನದ ಕಲಮು 370 ನೀಡುವ ಸ್ವಾಯತ್ತ ಸ್ಥಾನಮಾನವನ್ನು ಮುಂದುವರೆಸುವುದಕ್ಕೆ ಸಿಪಿಐ(ಎಂ)ನ ಬದ್ಧತೆ, ಜಮ್ಮು ಮತ್ತು ಕಾಶ್ಮೀರದ ಜನರ ಹಕ್ಕುಗಳನ್ನು ರಕ್ಷಿಸಲು ಪ್ರತಿ ವೇದಿಕೆಗಳನ್ನು ಬಳಸುವುದರಲ್ಲಿ ಪ್ರತಿಫಲಿಸುತ್ತದೆ. ಸಿಪಿಐ(ಎಂ) ಮೊದಲ ಹಂತವಾಗಿ ರಾಜ್ಯ ಅಸೆಂಬ್ಲಿಗೆ ತಕ್ಷಣದ ಚುನಾವಣೆಗಳನ್ನು ಮತ್ತು ಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸಲು ಕಟಿಬದ್ಧವಾಗಿದೆ.

ಈಶಾನ್ಯ ಪ್ರದೇಶ

ಮಣಿಪುರದಲ್ಲಿ ಬುಡಕಟ್ಟು ಸಂಘರ್ಷವು ಮೇ 2023ರಿಂದ ಮುಂದುವರೆದಿದೆ, ನೂರಾರು ಜನರು ಸಾವನ್ನಪ್ಪಿದ್ದಾರೆ, ನೂರಾರು ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಈಶಾನ್ಯ ಮತ್ತು ಅಸ್ಸಾಂನಲ್ಲಿ ಅಕ್ರಮ ವಲಸಿಗರ ಆರ್.ಎಸ್.ಎಸ್ ಪ್ರಚಾರವನ್ನು ಪ್ರತಿಧ್ವನಿಸಿದ ಬಿಜೆಪಿ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು, ಕೋಮುವಾದಿ ಸ್ವರೂಪ ಪಡೆದ ಬುಡಕಟ್ಟು ಸಂಘರ್ಷ ಮತ್ತು ಗ್ಯಾಂಗ್-ರೇಪ್ ಗಳು ಸೇರಿದಂತೆ ದೊಡ್ಡ ಪ್ರಮಾಣದ ಹಿಂಸಾಚಾರಕ್ಕೆ ಅವರೇ ಸಂಪೂರ್ಣವಾಗಿ ಕಾರಣರಾಗಿದ್ದಾರೆ. ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಲು ನಿರಾಕರಿಸಿತು ಮತ್ತು ಈ ಎಲ್ಲಾ ತಿಂಗಳುಗಳಲ್ಲಿ ಪ್ರಧಾನ ಮಂತ್ರಿಯ ಕರ್ಕಶ ಮೌನವು ಡಬಲ್ ಎಂಜಿನ್ ಆಳ್ವಿಕೆಯ ಸಂಪೂರ್ಣ ದಿವಾಳಿತನವನ್ನು ತೋರಿಸುತ್ತದೆ. ನಿರಂತರ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದ್ದರೂ ಕೇಂದ್ರ ಸರ್ಕಾರ ತನ್ನದೇ ಮುಖ್ಯಮಂತ್ರಿಯನ್ನು ಬಹಿರಂಗವಾಗಿ ರಕ್ಷಿಸಿದೆ.

ಮೈಟೈ-ಕುಕಿ ಜನಾಂಗೀಯ ಸಂಘರ್ಷವು ಹತ್ತಿರದ ರಾಜ್ಯಗಳಿಗೆ ವಿಶೇಷವಾಗಿ ಮಿಜೋರಾಂ ಮತ್ತು ಮೇಘಾಲಯಕ್ಕೆ ಹರಡುವ ಅಪಾಯವನ್ನು ಹೊಂದಿದೆ. ಈಶಾನ್ಯದಾದ್ಯಂತ, ವಿಶೇಷವಾಗಿ ಅಸ್ಸಾಂನಲ್ಲಿ ಧ್ರುವೀಕರಣದ ತೀಕ್ಷ್ಣತೆಯು ಪರಿಸ್ಥಿತಿಯನ್ನು ಅಪಾಯಕಾರಿಯಾಗಿ ಉದ್ವಿಗ್ನ ಮತ್ತು ಸ್ಫೋಟಕವಾಗುವಂತೆ ಮಾಡಿದೆ. ಇದು ಮ್ಯಾನ್ಮಾರ್ ಗಡಿ ರಾಜ್ಯವಾಗಿರುವುದರಿಂದ ಮತ್ತು ಆ ದೇಶದ ಪರಿಸ್ಥಿತಿಯನ್ನು ಗಮನಿಸಿದರೆ, ಅತ್ಯಂತ ಅನಿಶ್ಚಿತ ಮತ್ತು ಅಪಾಯಕಾರಿ ಪರಿಸ್ಥಿತಿ ಉದ್ಭವಿಸುತ್ತದೆ.

ಜಮ್ಮು-ಕಾಶ್ಮೀರ ಮತ್ತು ಮಣಿಪುರ ಎರಡರಲ್ಲೂ ಬೆಳವಣಿಗೆಗಳು ನಮ್ಮ ರಾಷ್ಟ್ರೀಯ ಭದ್ರತೆಗೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ.

ವಿದೇಶಿ ನೀತಿ

ಭಾರತ ಸ್ವತಂತ್ರ ವಿದೇಶಾಂಗ ನೀತಿಯನ್ನು ತ್ಯಜಿಸಿರುವುದು: ಬಿಜೆಪಿ ಸರ್ಕಾರವು ವ್ಯೂಹಾತ್ಮಕ ರಾಜಕೀಯ ಮತ್ತು ಭದ್ರತಾ ಹುನ್ನಾರಗಳಿಗೆ ಮತ್ತು ಜಾಗತಿಕ ಪ್ರಾಬಲ್ಯಕ್ಕಾಗಿ ಯುಎಸ್ ಸಾಮ್ರಾಜ್ಯಶಾಹಿಯ ಹುನ್ನಾರಗಳನ್ನು ಬಲಪಡಿಸಲು ಸಂಪೂರ್ಣವಾಗಿ ಶರಣಾಗಿದೆ. ಪ್ಯಾಲೆಸ್ಟೀನ್ ಜನರ ವಿರುದ್ಧದ ನರಮೇಧದ ಯುದ್ಧವನ್ನು ನಿಲ್ಲಿಸಲು ಬೇಷರತ್ತಾದ ಕದನ ವಿರಾಮವನ್ನು ಒತ್ತಾಯಿಸಲು ನಿರಾಕರಿಸುವ ಮೋದಿ ಸರ್ಕಾರದ ನಾಚಿಕೆಗೇಡಿನ ನಿಲುವು ಅತ್ಯಂತ ನಗ್ನವಾದ ಸಾಕ್ಷಿಯಾಗಿದೆ. ಇದು ಯು.ಎಸ್ ಬೆಂಬಲಿತ ಝಿಯೋನಿಸ್ಟ್ ಸರ್ಕಾರದ ಪರವಾಗಿದೆ. ಇಸ್ರೇಲಿನೊಂದಿಗಿನ ಅದರ ರಕ್ಷಣಾ ಸಂಬಂಧಗಳು ಮತ್ತು ಅದರ ಶಸ್ತ್ರಾಸ್ತ್ರ ವ್ಯಾಪಾರವು ಪ್ಯಾಲೇಸ್ಟಿನಿಯನ್ ಜನರ ತಾಯ್ನಾಡಿನ ಹೋರಾಟಕ್ಕೆ ನಮ್ಮ ಸಾಂಪ್ರದಾಯಿಕ ಬೆಂಬಲಕ್ಕಾಗಿ ಕಪ್ಪು ದಾಖಲೆಯಾಗಿದೆ. ಯು.ಎಸ್ ಸಾಮ್ರಾಜ್ಯಶಾಹಿಯು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ತನ್ನ ವ್ಯೂಹಾತ್ಮಕ ವಿನ್ಯಾಸಗಳಲ್ಲಿ ಭಾರತವನ್ನು ಅಧೀನ ಮಿತ್ರರಾಷ್ಟ್ರವಾಗಿ ಭದ್ರಪಡಿಸುವುದನ್ನು ಮುಂದುವರೆಸಿದೆ. ಭಾರತವು ವ್ಯೂಹಾತ್ಮಕ ಮಿಲಿಟರಿ ಸಹಕಾರದ ಒಪ್ಪಂದಗಳಿಗೆ ಸಹಿ ಹಾಕುವ ವ್ಯೂಹಾತ್ಮಕ ರಕ್ಷಣಾ ಪಾಲುದಾರನಾಗಿ ಮಾರ್ಪಟ್ಟಿದೆ. ಕ್ವಾಡ್ ಅನ್ನು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸಕ್ರಿಯ ವ್ಯೂಹಾತ್ಮಕ ಮತ್ತು ಮಿಲಿಟರಿ ಮೈತ್ರಿಯಾಗಿ ಪರಿವರ್ತಿಸಲಾಗಿದೆ. ಯುಎಸ್-ಇಸ್ರೇಲ್-ಭಾರತದ ಅಕ್ಷವು ಬಲಗೊಳ್ಳುತ್ತಿದೆ.

ಅಲಿಪ್ತ (ಎನ್.ಎ.ಎಂ) ಚಳವಳಿಯ ಸಾಂಪ್ರದಾಯಿಕ ನಾಯಕತ್ವದ ಪಾತ್ರವನ್ನು ಭಾರತ ಕೈಬಿಟ್ಟಿದೆ. ಮೋದಿ ಪ್ರಧಾನಿಯಾದಾಗಿನಿಂದ ಅವರು ಒಂದೇ ಒಂದು ಅಲಿಪ್ತ ಶೃಂಗಸಭೆಯಲ್ಲಿ ಭಾಗವಹಿಸಲಿಲ್ಲ. ಮೊದಲ ಬಾರಿಗೆ, ಭಾರತದ ಪ್ರಧಾನಿ ಪ್ಯಾಲೆಸ್ತೀನಿಗೆ ಭೇಟಿ ನೀಡದೆ ಇಸ್ರೇಲಿಗೆ ಭೇಟಿ ನೀಡಿದರು.

ಈ ಬೆಳವಣಿಗೆಗಳು ನಮ್ಮ ನೆರೆಹೊರೆಯವರೊಂದಿಗಿನ ಸಂಬAಧಗಳಿಗೆ ಮತ್ತು ಭಾರತದ ಅಂತರಾಷ್ಟ್ರೀಯ ಸ್ಥಾನಮಾನಕ್ಕೆ ಗಂಭೀರ ಪರಿಣಾಮಗಳನ್ನು ಬೀರುತ್ತಿವೆ.

ಸಿಪಿಐ(ಎಂ) ನಮ್ಮದೇ ದೇಶದ ಹಿತಾಸಕ್ತಿಗಳನ್ನು ಉತ್ತಮವಾಗಿ ಪೂರೈಸುವ ಅಲಿಪ್ತ ವಿದೇಶಾಂಗ ಧೋರಣೆಯನ್ನು ಪ್ರತಿಪಾದಿಸುತ್ತದೆ. ನಮ್ಮ ದೇಶದ ಭದ್ರತೆಯ ಪ್ರತಿಯೊಂದು ಅಂಶವನ್ನು ರಕ್ಷಿಸುತ್ತಲೇ, ನಮ್ಮ ನೆರೆಹೊರೆಯವರೊಂದಿಗೆ ಉತ್ತಮ ಸಂಬAಧವನ್ನು ಹೊಂದುವುದನ್ನು ಪ್ರತಿಪಾದಿಸುತ್ತದೆ.

ಭಾರತೀಯ ಸಂವಿಧಾನ, ಪ್ರಜಾಪ್ರಭುತ್ವವನ್ನು ಸಂರಕ್ಷಿಸಿ ಮತ್ತು ಜನರ ಕಲ್ಯಾಣವನ್ನು ಉತ್ತಮ ಪಡಿಸಿ

ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಭಾರತೀಯ ದೇಶಭಕ್ತರೂ ಭಾರತದ ಸಾಂವಿಧಾನಿಕ ವ್ಯವಸ್ಥೆಯನ್ನು ಕಾಪಾಡಲು ಮತ್ತು ಬಲಪಡಿಸಲು ಶ್ರಮಿಸಬೇಕು. ಜನರ ತೀವ್ರವಾಗಿ ಹದಗೆಡುತ್ತಿರುವ ಜೀವನ ಪರಿಸ್ಥಿತಿಗಳನ್ನು ಗಮನಿಸಿದರೆ ಕ್ರೋನಿ ಬಂಡವಾಳಶಾಹಿ ಮತ್ತು ಕೋಮುವಾದಿ-ಕಾರ್ಪೊರೇಟ್ ಸಖ್ಯತೆಯ ಪ್ರಸ್ತುತ ನೀತಿ ನಿರ್ದೇಶನವನ್ನು ಹಿಮ್ಮೆಟ್ಟಿಸಬೇಕು.

ಇದಕ್ಕೆ ಪರ್ಯಾಯ ಜನಪರ ನೀತಿಗಳ ಒಂದು ಪಟ್ಟಿಯನ್ನು ಕಾರ್ಯಗತಗೊಳಿಸುವ ಅಗತ್ಯವಿದೆ. ಬಿಜೆಪಿಯು ಸರ್ಕಾರ ಮತ್ತು ಪ್ರಭುತ್ವ ಉಪಕರಣದ ಮೇಲಿನ ನಿಯಂತ್ರಣವನ್ನು ಬಳಸಿಕೊಂಡೇ ನಮ್ಮ ಸಾಂವಿಧಾನಿಕ ವ್ಯವಸ್ಥೆ ಮತ್ತು ನಮ್ಮ ಗಣರಾಜ್ಯದ ಜಾತ್ಯತೀತ, ಪ್ರಜಾಸತ್ತಾತ್ಮಕ ಸ್ವರೂಪದ ಮೇಲಿನ ಆಕ್ರಮಣಗಳನ್ನು ಮಾಡುತ್ತಿದೆ.

ಸರ್ಕಾರ ಮತ್ತು ಪ್ರಭುತ್ವ ಉಪಕರಣದ ಮೇಲಿನ ನಿಯಂತ್ರಣದಿAದ ಬಿಜೆಪಿಯನ್ನು ಪ್ರತ್ಯೇಕಿಸುವ ಮೂಲಕ ಮಾತ್ರ ನಮ್ಮ ಸಾಂವಿಧಾನಿಕ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯನ್ನು ಸಾಧಿಸಬಹುದು. ಅಂತೆಯೇ, ಸರ್ಕಾರಿ ಉಪಕರಣದ ನಿಯಂತ್ರಣದಿಂದ ಬಿಜೆಪಿಯನ್ನು ತೆಗೆದು ಹಾಕಿದಾಗ ಮಾತ್ರವೇ ಯಾವುದೇ ಪರ್ಯಾಯ ಜನಪರ ನೀತಿಗಳನ್ನು ಜಾರಿಗೆ ತರಬಹುದು.

ಸಿಪಿಐ(ಎಂ) ಜನರ ಮುಂದೆ ಇಡುತ್ತಿರುವ ಪರ್ಯಾಯ ನೀತಿಗಳನ್ನು ಮುಂದಿನ ವಿಭಾಗದಲ್ಲಿ ವಿವರಿಸಲಾಗಿದೆ.

ಆದ್ದರಿಂದ, ಸಾಂವಿಧಾನಿಕ ಗಣರಾಜ್ಯವನ್ನು ರಕ್ಷಿಸಲು, ಅದನ್ನು ಮತ್ತಷ್ಟು ಬಲಪಡಿಸಲು ಮತ್ತು ಆಮೂಲಾಗ್ರ ಜನಪರ ನೀತಿಯತ್ತ ದಿಕ್ಕನ್ನು ಬದಲಾಯಿಸಲು, 18 ನೇ ಲೋಕಸಭೆಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸುವುದು ಕಡ್ಡಾಯವಾಗಿದೆ.

ಸಿಪಿಐ(ಎಂ) ಭಾರತೀಯ ಮತದಾರರಿಗೆ ಮನವಿಯನ್ನು ಮಾಡುತ್ತದೆ :

1. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಸೋಲಿಸಿ.

2. ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡ ಪಕ್ಷಗಳ ಬಲವನ್ನು ಹೆಚ್ಚಿಸಿ.

3. ಕೇಂದ್ರದಲ್ಲಿ ಪರ್ಯಾಯ ಜಾತ್ಯತೀತ ಸರ್ಕಾರವನ್ನು ರಚನೆಯನ್ನು ಖಚಿತಗೊಳಿಸಿ

ಭಾಗ  2

ಪರ್ಯಾಯ ನೀತಿಗಳು

ಮುಖ್ಯಾಂಶಗಳು

ಸಿ.ಪಿ.ಐ(ಎಂ) ಜಾರಿ ಮಾಡಲು ಪ್ರತಿಜ್ಙೆ ಮಾಡುವ ಪರ್ಯಾಯ ನೀತಿ ವೇದಿಕೆಯ ಮುಖ್ಯಾಂಶಗಳು:

•    ಸಂವಿಧಾನದಲ್ಲಿ ಹೇಳಲಾಗಿರುವ ಜಾತ್ಯತೀತ ತತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸುವುದು

•    ರೈತರು ತಮ್ಮ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆಗೆ ಮಾರುವ ಹಕ್ಕನ್ನು ಜಾರಿಗೆ ತರುವುದು ಮತ್ತು ಅಂತಹ ಬೆಲೆ ಒಟ್ಟು ಉತ್ಪಾದನಾ ವೆಚ್ಚಗಳಿಗಿಂತ  ಶೇ 50 ರಷ್ಟು ಹೆಚ್ಚಿರುವಂತೆ ನೋಡಿಕೊಳ್ಳುವುದು

•         ಕೆಲಸಗಾರರಿಗೆ ತಿಂಗಳಿಗೆ 26,000 ರೂಪಾಯಿಗಳಿಗಿಂತ ಕಡಿಮೆಯಿಲ್ಲದ ವೇತನವನ್ನು ಕಾನೂನುಬದ್ಧವಾಗಿ ನಿಗದಿ ಪಡಿಸುವುದು; ವೇತನಗಳನ್ನು ಬಳಕೆದಾರರ ಸೂಚ್ಯಂಕಕ್ಕೆ ಸಂಬಂಧಿಸಿ ಇರುವಂತೆ ನೋಡಿಕೊಳ್ಳುವುದು

•         ಸಾರ್ವತ್ರಿಕ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಪ್ರತಿಯೊಬ್ಬರಿಗೂ 10 ಕಿಲೊ ಆಹಾರಧಾನ್ಯ ವಿತರಿಸುವುದು – 5 ಕಿಲೊ ಉಚಿತವಾಗಿ ಮತ್ತು 5 ಕಿಲೊ ಕಡಿಮೆ ದರದಲ್ಲಿ

•         ಉಚಿತ ಆರೋಗ್ಯ ಸೇವೆಯ ಹಕ್ಕು; ಖಾಸಗಿ ವಿಮೆ ಮೂಲಕ ಜಾರಿಯಾಗುತ್ತಿರುವ ಆರೋಗ್ಯಸೇವೆಯ ಅಂತ್ಯ; ಆರೋಗ್ಯದ ಮೇಲಿನ ಖರ್ಚನ್ನು ಜಿಡಿಪಿಯ ಶೇ 5 ಕ್ಕೆ ಏರಿಸುವುದು

•         ಜನಗಣತಿ ಮತ್ತು ಕ್ಷೇತ್ರ ಮರುವಿಂಗಡನೆಗೆ ತಳುಕು  ಹಾಕದೇ ಪಾರ್ಲಿಮೆಂಟು ಮತ್ತು ರಾಜ್ಯಗಳ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದ ಮೀಸಲಾತೀಯನ್ನು ಕೂಡಲೇ ಜಾರಿಗೆ ತರುವುದು;  ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆಯನ್ನು ಕೊನೆಗೊಳಿಸಲು ಸಮಗ್ರ ಕ್ರಮಗಳನ್ನು ಕೈಗೊಳ್ಳುವುದು

•         ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಕೂಡಲೇ ತಿರಸ್ಕರಿಸುವುದು; ಶಾಲೆಗಳು ಮತ್ತು ಉನ್ನತ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಮತ್ತು ಗುಣಮಟ್ಟದಲ್ಲಿ ವಿಸ್ತರಿಸುವುದು; ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವನ್ನು ಒಟ್ಟು ಉತ್ಪಾದನೆಯ ಶೇ 6 ಕ್ಕೆ ಏರಿಸುವುದು; ಶಿಕ್ಷಣ ವ್ಯವಸ್ಥೆಯ  ಕೋಮುವಾದಿಕರಣವನ್ನು ತೊಡೆದು ಅದರ ಪ್ರಜಾಸತ್ತಾತ್ಮಕ ಗುಣವನ್ನು ಖಾತ್ರಿ ಮಾಡುವುದು

•         ಕೆಲಸದ ಹಕ್ಕನ್ನು ಸಾಂವಿಧಾನಿಕಗೊಳಿಸಿ ಉದ್ಯೋಗರಹಿತರಿಗೆ ನಿರುದ್ಯೋಗ ಭತ್ಯೆ ನೀಡುವುದು

•         ಎಲ್ಲ ಹಿರಿಯ ನಾಗರಿಕರಿಗೆ ಸಂಧ್ಯಾ ವಯಸ್ಸಿನ ಪಿಂಚಣಿಯನ್ನು – ಕನಿಷ್ಟ ವೇತನದ ಅರ್ಧದಷ್ಟು ಅಥವಾ 6000 ರೂಪಾಯಿಗಳು ಇವುಗಳಲ್ಲಿ ಯಾವುದು ಹೆಚ್ಚೊ  ಅದನ್ನು – ನೀಡುವುದು

•         ಸಾರ್ವಜನಿಕ ವಲಯದ ಖಾಸಗೀಕರಣವನ್ನು ನಿಲ್ಲಿಸಿ, ರಕ್ಷಣೆ, ಶಕ್ತಿ ಮತ್ತು ರೈಲ್ವೆ ಮತ್ತು ಇತರ ಮೂಲ ಸೇವೆಗಳಲ್ಲಿನ ಖಾಸಗೀಕರಣವನ್ನು ಹಿಂದೆ ಸರಿಸುವುದು

•         ಖಾಸಗಿ ವಲಯದ ಕೆಲಸಗಳಲ್ಲಿ ಮತ್ತು ಶಿಕ್ಷಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ, ಇತರ ಹಿಂದುಳಿದ ವರ್ಗದವರಿಗೆ ಮತ್ತು ಅಂಗವಿಕಲರಿಗೆ ಮೀಸಲಾತಿ ನೀಡುವುದು

•         ಶ್ರೀಮಂತರ ಮೇಲೆ ಮತ್ತು ಕಂಪನಿಗಳ ಲಾಭಗಳ ಮೇಲೆ ತೆರಿಗೆ ಹೆಚ್ಚಿಸುವುದು; ಅತಿ ಶ್ರೀಮಂತರ ಮೇಲೆ  ಸಂಪತ್ತು ತೆರಿಗೆ ಹೇರುವುದು, ವಾರಸುದಾರಿಕೆಯ ಮೇಲೆ ತೆರಿಗೆ ಹೇರುವುದು; ಬಂಡವಾಳ ಗಳಿಕೆಯ ಮೇಲಿನ ತೆರಿಗೆ ಪುನಃ ಜಾರಿಗೆ ತರುವುದು

•         ಪ್ರಮಾಣಾತ್ಮಕ ಪ್ರತಿನಿದಿತ್ವದ ಆಧಾರದ ಮೇಲೆ ಮತ್ತು ಆಂಶಿಕ ಪಟ್ಟಿ ವ್ಯವಸ್ಥೆಯ ಮೇಲೆ  ಚುನಾವಣಾ ಸುಧಾರಣೆ ತರುವುದು; ಚುನಾವಣಾ ಪ್ರಕ್ರಿಯೆಗಳ ಖರ್ಚಿಗೆ  ನಗದೇತರ ರೂಪದಲ್ಲಿ ಪ್ರಭುತ್ವ ನಿಧಿ ರೂಪಿಸುವುದು

ಸಂವಿಧಾನ ಮತ್ತು ಪ್ರಜಾಸತ್ತೆಯ ರಕ್ಷಣೆಯ ಸಲುವಾಗಿ:

ಸಿ.ಪಿ.ಐ(ಎಂ) ಸಂವಿಧಾನ, ಪ್ರಜಾಸತ್ತೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ತುಳಿಯುವ ನಿರಂಕುಶವಾದಿ ವ್ಯವಸ್ಥೆಯನ್ನು ತೊಡೆದು ಹಾಕುವುದನ್ನು ಖಾತ್ರಿಪಡಿಸುವುದು.

ಅದಕ್ಕಾಗಿ :

•           ಉನ್ನತ ನ್ಯಾಯಾಂಗ, ಚುನಾವಣಾ ಆಯೋಗ, ಮತ್ತು ಇತರ ಸಂವಿಧಾನಾತ್ಮಕ ಸಂಸ್ಥೆಗಳ ಸ್ವಾತಂತ್ರ‍್ಯ ಮತ್ತು ಸ್ವಾಯತ್ತೆಯನ್ನು ರಕ್ಷಿಸುವುದು

•           ಕಾನೂನುವಿರೋಧಿ ಚಟುವಟಿಕೆಗಳ ತಡೆಯ ಕಾಯಿದೆಯನ್ನು (UAPA), ರಾಷ್ಟ್ರೀಯ ಸುರಕ್ಷೆ ಕಾಯಿದೆ (NSA) ಮತ್ತು ಸಶಸ್ತ್ರ ಪಡೆಯ ವಿಶೇಷ ಅಧಿಕಾರಗಳ ಕಾಯಿದೆ  (AFPSA) ಗಳನ್ನು  ರದ್ದು ಮಾಡುವುದು

•           ಪಿ.ಎಮ್.ಎಲ್.ಎ (PMLA) ಕಾಯಿದೆ ರದ್ದು ಮಾಡುವುದು; ಜಾರಿ ನಿರ್ದೇಶನಾಲಯದ (ED) ಕಾನೂನು ಜಾರಿ ಅಧಿಕಾರಗಳನ್ನು ಹಿಂತೆಗೆದುಕೊಳ್ಳುವುದು

•           ಮೂರು ಅಪರಾಧ ಸಂಹಿತೆಗಳನ್ನು ವಿಮರ್ಶಿಸಿ ಅವುಗಳಲ್ಲಿನ ಪ್ರಜಾಸತ್ತೆ ವಿರೋಧಿ ಅಂಶಗಳು ಮತ್ತು ಪೊಲೀಸ್ ಅಧಿಕಾರಗಳ ವರ್ಧನೆಯನ್ನು ತೊಡೆದು ಭಿನ್ನಮತದ ಹಕ್ಕನ್ನು ರಕ್ಷಣೆ ಮಾಡುವುದು

•           ಮರಣ ದಂಡನೆಯನ್ನು ಶಿಕ್ಷೆ ಸಂಹಿತೆಗಳಿಂದ ತೊಡೆದು ಹಾಕುವುದು

•           ಸಾರ್ವಜನಿಕ ಕಾರ್ಯಕ್ರಮಗಳ (ಯೋಜನೆಗಳ) ಪರಿಣಾಮಗಳನ್ನು ಅರಿಯಲು ಕಡ್ಡಾಯ ಸಾಮಾಜಿಕ ಪರಿಶೋಧನೆಯ ಶಾಸನ ಜಾರಿಗೊಳಿಸುವುದು. ಇದು ಆಢಳಿತದ ಎಲ್ಲ ಕ್ಷೇತ್ರಗಳನ್ನು ವ್ಯಾಪಿಸಿರಬೇಕು ಮತ್ತು ಪ್ರತಿಯೊಬ್ಬ ನಾಗರಿಕನೂ ಸರ್ಕಾರವನ್ನು ತನ್ನ ಜನಾದೇಶಗಳಿಗೆ ಉತ್ತರದಾಯಿತ್ವ ಕೇಳುವ ಹಕ್ಕು ಹೊಂದಿರಬೇಕು

•           ಸಾಮಾಜಿಕ ಪುರೋಭಿವೃದ್ದಿ ಯೋಜನೆಗಳಿಗೆ ಆಧಾರ್ ಮತ್ತು ಬಯೊಮೆಟ್ರಿಕ್ ಕಡ್ಡಾಯ ನಿಯಮವನ್ನು ತತ್ಕ್ಷಣ ರದ್ದು ಗೊಳಿಸುವುದು

•           ‘ಚಿತ್ರಹಿಂಸೆ ಮತ್ತು ಇತರ ಕ್ರೂರ, ಅಮಾನವೀಯ ಮತ್ತು ಘನತೆ ಹಾನಿ ಮಾಢುವ ನಡಾವಳಿ ಅಥವಾ ಶಿಕ್ಷೆಗಳನ್ನು ಕೈಬಿಡುವ ವಿಶ್ವ ಸಂಸ್ಥೆಯ ಒಡಂಬಡಿಕೆ’ಯನ್ನು ಅನುಮೋದಿಸುವುದು

•           ಯಾವುದೇ ಅಂತರರಾಷ್ಟ್ರೀಯ ಒಡಂಬಡಿಕೆಗಳನ್ನು ಜಾರಿಗೆ ತರುವ ಮೊದಲು ಪಾರ್ಲಿಮೆಂಟಿನ ಅನುಮೋದನೆ ಪಡೆಯುವುದನ್ನು ಕಡ್ಡಾಯಗೊಳಿಸುವುದು

ಜಾತ್ಯಾತೀತತೆಯ ರಕ್ಷಣೆಗಾಗಿ

ಸಿಪಿಐ(ಎಂ) ಮತಧರ್ಮ ಮತ್ತು ರಾಜಕೀಯ ವನ್ನು ಬೇರೆ ಬೇರೆಯಾಗಿ ಇಡುವುದನ್ನು ಬಯಸುವ ನಿಲುವನ್ನು ಹೊಂದಿದೆ, ಇದನ್ನು ಸಾಧಿಸಲು ಅವಶ್ಯವಾದ ಎಲ್ಲ ಶಾಸನಗಳನ್ನು ತಂದು ಅನುಷ್ಟಾನ ಗೊಳಿಸಬೇಕೆಂಬ ನಿಲುವ ಅದರದು. ಕೋಮುವಾದಿ ಹಿಂಸೆಯನ್ನು ಧೃಡವಾಗಿ ಹತ್ತಿಕ್ಕಬೇಕು. ಜಾತ್ಯತೀತ ಮೌಲ್ಯಗಳು, ವೈಜ್ಞಾನಿಕ ಮನೋಭಾವ ಮತ್ತು ತರ್ಕಬದ್ದತೆ ಯನ್ನು ದೇಶದಲ್ಲಿ ಎಲ್ಲ ವಲಯಗಳಲ್ಲೂ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಸಿಪಿಐ(ಎಂ) ಕೆಳಗಿನವುಗಳನ್ನು ಸಾಧಿಸಲು ಶ್ರಮಿಸುತ್ತದೆ:

•           ನಾಗರಿಕತೆ ತಿದ್ದುಪಡಿ ಕಾಯಿದೆಯ ರದ್ದತಿ

•           ಅಲ್ಪ ಸಂಖ್ಯಾತರನ್ನು ಗುರಿ ಮಾಡುವ ರಾಜ್ಯಗಳಲ್ಲಿನ ಮತಾಂತರ-ವಿರೋಧಿ ಕಾಯಿದೆಗಳನ್ನು ರದ್ದು ಪಡಿಸುವುದು 

•           ಆಯಕಟ್ಟಿನ ಪ್ರಮುಖ ಹುದ್ದೆಗಳಿಗೆ ಬಿಜೆಪಿ ಸರ್ಕಾರ ನೇಮಕ ಮಾಡಿರುವ ಆರ್.ಎಸ್.ಎಸ್ ವ್ಯಕ್ತಿಗಳ ನೇಮಕಾತಿಗಳನ್ನು ರದ್ದು ಪಡಿಸುವುದು

•           ದಲಿತರನ್ನು ಮತ್ತು ಅಲ್ಪಸಂಖ್ಯಾತರನ್ನು ಗೊರಕ್ಷಣೆ ಇತ್ಯಾದಿ ವಿಷಯಗಳ ಮೇಲೆ ಹಲ್ಲೆ ಮಾಡುವ ಮತ್ತು ಕೋಮುದ್ವೇಷ ಹರಡುವ ಎಲ್ಲ ಕಾನೂನುಬಾಹಿರ ಖಾಸಗಿ ಪಡೆಗಳನ್ನು, ವಿವಿಧ ಜಾಗರೂಕ ಪುಂಡು ಗುಂಪುಗಳಾದ ‘ಸೇನಾ’ ಗಳನ್ನು ನಿಷೇಧಿಸಬೇಕು; ಕೋಮುವಾದಿ ದ್ವೇಷ ಮತ್ತು ಅಲ್ಪಸಂಖ್ಯಾತರ ಮೇಲೆ ಆಕ್ರಮಣ ಮಾಡುವ ಸಂಸ್ಥೆಗಳು  ಮತ್ತು ಸಂಘಟನೆಗಳನ್ನು ನಿಯಂತ್ರಿಸಲು ತಡೆಯಲು ಕಾನೂನು ರಚಿಸಿ ಜಾರಿಗೊಳಿಸಬೇಕು; ಗುಂಪು-ಹತ್ಯೆ ತಡೆಯಲು ಕಾನೂನು ರಚಿಸಬೇಕು.

•           ಕೋಮು ಹಿಂಸೆ ಪ್ರಚೋದಿಸಿ ಹರಡುವವರಿಗೆ ಅವರ ಸಾರ್ವಜನಿಕ ಅಥವಾ ಅಧಿಕೃತ ಸ್ಥಾನವನ್ನು ಲೆಕ್ಕಿಸದೆ ಮಾದರಿ ಶಿಕ್ಷೆ ವಿಧಿಸಬೇಕು.

•           ಅಲ್ಪ ಸಂಖ್ಯಾತರ ಹಕ್ಕುಗಳನ್ನು ರಕ್ಷಿಸಿ ಅವರು ಸಮಾನತೆ ಮತ್ತು ಘನತೆÉಯಿಂದ ಭಯರಹಿತವಾಗಿ ಜೀವಿಸಲು ಸಾಧ್ಯವಾಗುವಂತೆ ಮಾಡಬೇಕು

•           ಕೋಮು ಪಕ್ಷಪಾತದ ದ್ವೇಷ ತುಂಬಿರುವ ಉನ್ನತ ಶಿಕ್ಷಣದ ಮತ್ತು ಶಾಲಾ ಶಿಕ್ಷಣದ ಎಲ್ಲ ಪಠ್ಯಪುಸ್ತಕಗಳು ಮತ್ತು ಪಠ್ಯಕ್ರಮಗಳನ್ನು ಕಿತ್ತೊಗೆಯಬೇಕು

ಪರ್ಯಾಯ ಆರ್ಥಿಕ ನೀತಿಗಳು

ಸಿಪಿಐ(ಎಂ) ಕೆಳಕಂಡ ಆರ್ಥಿಕ ನೀತಿಗಳಿಗಾಗಿ ಕೆಲಸ ಮಾಡಬಯಸುತ್ತದೆ

•           ಯೋಜನಾ ಆಯೋಗವನ್ನು ಪುನಃ ಸ್ಥಾಪಿಸುವುದು

•           ಉದ್ಯೋಗ ಮತ್ತು ಅಭಿವೃದ್ದಿಯನ್ನು ಮೆಳಯಿಸಿ ಪೂರ್ಣ ಪ್ರಮಾಣದ ಉದ್ಯೋಗ ಸೃಜಿಸಿ ಜನರ ಕೈಯಲ್ಲಿ ಹಣ ಹರಿದಾಡುವಂತೆ ಮಾಡಿ ಆರ್ಥಿಕ ಬೇಡಿಕೆಯನ್ನು ಉತ್ತೇಜಿಸುವುದು 

•           ಶ್ರೀಮಂತರ ಮೇಲೆ ಮತ್ತು ಕಂಪನಿ ಲಾಭಗಳ ಮೇಲೆ ಮತ್ತು ಐಷಾರಾಮಿ ಸರಕುಗಳ ಮೇಲೆ ತೆರಿಗೆ ಹೇರಿ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು

•           ಕೃಷಿ ಉತ್ಪಾದನೆ, ಸಂಶೋಧನೆ ಮತ್ತು ನೀರಾವರಿಗಳ ಮೇಲೆ ಸಾರ್ವಜನಿಕ ಹೂಡಿಕೆ ಹೆಚ್ಚಿಸುವುದು

•           ಬೌತಿಕ ಮತ್ತು ಸಾಮಾಜಿಕ ಮೂಲಭೂತ ಸೌಕರ್ಯಗಳಾದ ವಿದ್ಯುತ್, ಸಾರ್ವಜನಿಕ ಸಾಗಣೆ, ಬಂದರುಗಳು, ಶಾಲೆ, ಕಾಲೇಜುಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಮೇಲೆ ಸಾರ್ವಜನಿಕ ಹೂಡಿಕೆ ಮಾಡಲು ಅವಶ್ಯ ಸಂಪನ್ಮೂಲಗಳನ್ನು ತೆಗೆದಿರಿಸುವುದು

•           ಸಮೂಹ ಬಳಕೆಗಾಗಿ ಬಳಸುವ ಸರಕುಗಳ ಉತ್ಪಾದನೆಗೆ ಒತ್ತು  ಕೊಡುವುದು; ಅಸ್ಥಿರ ಐಷಾರಾಮಿ ಸರಕುಗಳಿಗಲ್ಲ

•           ಕೃಷಿ ಲಾಗುವಾಡುಗಳಾದ ಬೀಜ, ರಸಗೊಬ್ಬರ, ವಿದ್ಯುತ್/ಡೀಸೆಲ್ ಗಳ ಮೇಲೆ ಸಾರ್ವಜನಿಕ ಹೂಡಿಕೆ/ವಿತರಣೆ ಮತ್ತು ಸಹಾಯಧಾನಗಳನ್ನು ಹೆಚ್ಚಿಸಲಾಗುತ್ತದೆ

•           ಹೆಚ್ಚು ಉದ್ಯೋಗಗಳನ್ನು ಸೃಸ್ಟಿಸುವ  ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಹೆಚ್ಚಿಸಿ ಅವುಗಳ ಸ್ಪರ್ಧಾತ್ಮಕತೆ ಬೆಳೆಸುವ ಸಂಶೋಧನೆ, ಮತ್ತು ಬೆಳವಣಿಗೆಯ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವುದು

•           ಹಣಕಾಸು ಜವಾಬ್ದಾರಿ ಮತ್ತು ಆಯ- ವ್ಯಯ ನಿರ್ವಹಣಾ ಕಾಯಿದೆಯನ್ನು ರದ್ದುಪಡಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಾಮಾಜಿಕ ವಲಯದ ವೆಚ್ಚಕ್ಕೆ ಕನಿಷ್ಟ ಮಿತಿಗಳನ್ನು ನಿಗದಿಪಡಿಸುವುದು

•           ಸಾರ್ವಜನಿಕ ಬ್ಯಾಂಕುಗಳಲ್ಲಿನ ಸರ್ಕಾರಿ ಹೂಡಿಕೆಯನ್ನು ಮತ್ತಷ್ಟು ಕಡಿಮೆ ಮಾಡುವ ಪ್ರಕ್ರಿಯೆಗೆ ತಡೆ ಹಾಕಿ ಈ ಬ್ಯಾಂಕುಗಳನ್ನು ಬಲಪಡಿಸಿ ಬ್ಯಾಂಕು ಮತ್ತು ವಿಮೆ ವಲಯಗಳನ್ನು ಆದ್ಯತಾ ವಲಯದ ಸಾಲ ನೀಡುವ ನಿಬಂಧನೆಗಳಿಗೆ ಒಳಪಡಿಸುವುದು

•           ಹಣಕಾಸು ವಲಯದ ಎಲ್ಲ ನಿಬಂಧಕ ಪ್ರಾಧಿಕಾರಗಳು (ರೆಗ್ಯುಲೆಟರಿ ಅಥಾರಿಟಿ)  ಸಂಸತ್ತಿಗೆ ಜವಾಬುದಾರವಾಗಿದ್ದು ಶಾಸನ ಸಭೆಯ ಕಣ್ಗಾವಲಿಗೆ ಒಳಪಡಬೇಕು

•           ಅವು ರಾಷ್ಟ್ರ ಮಟ್ಟದ ಪ್ರಮುಖ ಆರ್ಥಿಕ ನಿರ್ಣಯಗಳಲ್ಲಿ  ರಾಜ್ಯ ಸರ್ಕಾರಗಳ ಒಳಗೊಳ್ಳುವುದು, ರಾಜ್ಯಗಳ ನೀತಿ ನಿರ್ಣಯದ ಅಧಿಕಾರಗಳನ್ನು ಗೌರವಿಸಿ ಅವುಗಳಿಗೆ ಹೆಚ್ಚಿನ ಹಣಕಾಸು ಸಂಗ್ರಹಣಾ ನಮ್ಯತೆಯನ್ನು ಪುನರ್-ಸ್ಥಾಪಿಸುವುದು

ಸಂಪನ್ಮೂಲ ಸಂಗ್ರಹಣೆ 

ಸಿಪಿಐ(ಎಂ) ಮಾಡಬಯಸುವುದು

•           ಸಟ್ಟಾ (ಸ್ಪೆಕ್ಯುಲೇಶನ್) ವ್ಯಾಪಾರಗಳ ಮೇಲಿನ ಬಂಡವಾಳ ಲಾಭದ (ಕ್ಯಾಪಿಟಲ್ ಗೈನ್ಸ್) ಮೇಲೆ ‘ದೀರ್ಘ ಕಾಲಿನ ಬಂಡವಾಳ ಲಾಭದ ತೆರಿಗೆ (ಲಾಂಗ್-ಟರ್ಮ್ ಕ್ಯಾಪಿಟಲ್ ಗೈನ್ಸ್)  ಮತ್ತು ‘ಒತ್ತೆಗಳ ಮೇಲಿನ ವಹಿವಾಟು ತೆರಿಗೆ’ (ಸೆಕ್ಯುರಿಟಿ ಟ್ರಾನ್ಸಾಕ್‌ಶನ್ ಟ್ಯಾಕ್ಸ್) ಹೆಚ್ಚಿಸುವುದು

•           ಸಾಲ ಸುಸ್ತಿದಾರರು ದೇಶ ತೊರೆದು ಕಾನೂನಾತ್ಮಕ ಕ್ರಮ ತಪ್ಪಿಸಿಕೊಳ್ಳುವವರನ್ನು ಹಿಡಿದು ಅವರಿಂದ ತಪ್ಪದೆ ಸಾಲ ಮತ್ತು ಬಡ್ಡಿ ವಸೂಲಿ ಮಾಡುವುದು

•           ಸಂಪತ್ತು ತೆರಿಗೆ ಪುನಃ ಹೇರಿ ಅತೀ ಶ್ರೀಮಂತರಿಂದ ತೆರಿಗೆ ವಸೂಲಿ ಮಾಡುವುದು; ವಾರಸುದಾರಿಕೆ ತೆರಿಗೆ (ಇನ್‌ಹೆರಿಟೆನ್ಸ್ ಟ್ಯಾಕ್ಸ್) ಜಾರಿಗೆ ತರುವುದು 

•           ಕಂಪನಿ ಲಾಭ ತೆರಿಗೆಯನ್ನು (ಕಡ್ಡಾಯ ತೆರಿಗೆ ದರಗಳನ್ನು) ಹೆಚ್ಚಿಸಿ ಪರಿಣಾಮಕಾರಿ ತೆರಿಗೆ ದರ ಕಡಿಮೆ ಇಲ್ಲದಂತೆ ನೋಡಿಕೊಳ್ಳುವುದು (ಕಂದಾಯ ನಷ್ಟ ಆಗದಂತೆ ನೋಡಿಕೊಳ್ಳುವುದು)

•           ಭಾರತದಲ್ಲಿ ಆಧಾರಭೂತ ಆಸ್ತಿ ಹೊಂದಿರುವ ವಿದೇಶಿ ಕಂಪನಿಗಳ ಶೇರುಗಳ ಅಂತರ ರಾಷ್ಟ್ರೀಯ ವರ್ಗಾವಣೆಯ ವಹಿವಾಟಿನಲ್ಲಿ ಬಂಡವಾಳ ಲಾಭ ತೆರಿಗೆ ಪಾವತಿಯ ಬಗ್ಗೆ ನಿಗಾ ವಹಿಸುವುದು

•           ನಮ್ಮ ಒಕ್ಕೂಟ  ವ್ಯವಸ್ಥೆಗೆ ಒಗ್ಗುವಂತೆ ಮತ್ತು ರಾಜ್ಯಗಳ ಹಕ್ಕುಗಳಿಗೆ ಚ್ಯುತಿ  ಬರದಂತೆ ಸಂಪನ್ಮೂಲ ಹಂಚಿಕೊಳ್ಳುವುದಕ್ಕೆ ಜಿ.ಎಸ್.ಟಿ ಯಲ್ಲಿ ಆಮೂಲಾಗ್ರ ಬದಲಾವಣೆ ಮಾಡುವುದು

ಹಣಕಾಸು ವಲಯದ ನಿಬಂಧನೆ

ಸಿಪಿಐ(ಎಂ) ನ ನಿಲುವು

•           ಜನತೆ ಮತ್ತು ಪ್ರಭುತ್ವದ ಮೇಲೆ ಅಂತರ ರಾಷ್ಟ್ರೀಯ ಹಣಕಾಸು ಬಂಡವಾಳದ ಯಜಮಾನಿಕೆಯನ್ನು ಹತ್ತಿಕ್ಕುವ ಸಾರ್ವಭೌಮ ಹಣಕಾಸು ನಿಬಂಧನಾ ನೀತಿಯನ್ನು ಬಯಸುತ್ತದೆ. ರಾಷ್ಟ್ರೀಯ ಆದಾಯಕ್ಕೆ ಹೋಲಿಸಿದರೆ ಹಣಕಾಸು ಬಾಧ್ಯತೆಗಳನ್ನು ಕಡಿಮೆ ಮಾಡುವ ಪರ್ಯಾಯ  ನೀತಿಗಳನ್ನು ಬೆಳೆಸಬೇಕು.

•           ದ್ವಿಪಕ್ಷೀಯ ಅದಲು ಬದಲು ರೇಖೆ (Bilateral Swap Line – BSL)  ಮತ್ತು ಇತರ ಹರಿತ ತಂತ್ರಗಳ ಮೂಲಕ ಡಾಲರೇತರ ವ್ಯಾಪಾರ ಒಪ್ಪಂದಗಳ ವಿಸ್ತರಣೆ ಮತ್ತು ಸ್ಥೀರೀಕರಣ; ಬ್ರಿಕ್ಸ್+, ಶಾಂಘೈ ಸಹಕಾರ ಸಂಘಟನೆ (SCO) ಯಂತಹ ಪ್ರಾದೇಶಿಕ ಗುಂಪು ದೇಶಗಳ ನಡುವೆ ಹಣಕಾಸು ಸಹಕಾರ ಮತ್ತು ಸಂಯೋಜನೆಯನ್ನು ಸಾಧಿಸುವುದು

•           ಕ್ರಿಪ್ಟೊ ನಾಣ್ಯಗಳ ವಿಷಯದಲ್ಲಿ ಬಲವಾದ ನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಹೊಂದಿರುವುದು

•           ಪೂರ್ಣ ಬಂಡವಾಳ ಪರಿವರ್ತನೆ ಪ್ರಕ್ರಿಯೆಯನ್ನು ತಡೆದು ಬಂಡವಾಳದ ಒಳಹರಿವು ಮತ್ತು ಹೊರ ಹರಿವಿನ ಮೇಲೆ ನಿಬಂಧನೆಗಳನ್ನು ಹೇರುವುದು

•           ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಭಾಗವಹಿಸುವಿಕೆಯ ನೋಟುಗಳನ್ನು (Participatory Notes) ಬಳಸುವುದನ್ನು ನಿಷೇಧಿಸುವುದು, ಹಾಗೂ ಅತಿಯಾದ ಅಪಾಯ ತೆಗೆದುಕೊಳ್ಳುವ ಮತ್ತು ಮಾರುಕಟ್ಟೆ ಚಂಚಲತೆಯನ್ನು ತಡೆಯಲು ಸಟ್ಟಾ ವ್ಯವಹಾರ ಸಾಧನಗಳನ್ನು ತಡೆಯುವುದು

•           ಭಾರತೀಯ ರಿಸರ್ವ್ ಬ್ಯಾಂಕಿನ ಸ್ವಾಯತ್ತತೆ ಮತ್ತು ಮೀಸಲುನಿಧಿಯನ್ನು ರಕ್ಷಿಸುವುದು. ಅದರ ಆಢಳಿತ ಮತ್ತು ನಿಬಂಧನೆಯನ್ನು ಬಲಪಡಿಸುವುದು

•           ಹೊಸ ಖಾಸಗಿ ಬ್ಯಾಂಕುಗಳಿಗೆ ಪರವಾನಗಿ ಕೊಡುವುದನ್ನು ನಿಲ್ಲಿಸುವುದು, ಬ್ಯಾಂಕುಗಳ ನಿಯಂತ್ರಣ (ತಿದ್ದುಪಡಿ) ಕಾಯಿದೆ 2012 ಅನ್ನು ವಿಮರ್ಶಿಸಿ, ವಿದೇಶಿ ಬ್ಯಾಂಕುಗಳು ಭಾರತೀಯ ಬ್ಯಾಂಕುಗಳನ್ನು ಕೊಳ್ಳುವುದನ್ನು ನಿಷೇಧೀಸುವುದು

•           ಸಾರ್ವಜನಿಕ ಬ್ಯಾಂಕುಗಳನ್ನು ಬಲಪಡಿಸುವುದು, ಖಾಸಗೀಕರಣ ಮಾಡದೆ ಇರುವುದು, ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಕೇಂದ್ರ ಸರ್ಕಾರದ ಹೂಡಿಕೆಯನ್ನು ಕಡಿಮೆ ಮಾಡುವ ಪ್ರಸ್ತಾಪಗಳನ್ನು ರದ್ದುಗೊಳಿಸುವುದು, ಖಾಸಗಿ ವಲಯದ ಬ್ಯಾಂಕುಗಳನ್ನು ಆದ್ಯತೆಯ ವಲಯದ ಕಾರ್ಯಗಳಲ್ಲಿ ಒಳಗೊಳಿಸುವುದು; ಬಂಡವಾಳದ ಸಮರ್ಥ ನಿಬಂಧನೆಯ ಮೂಲಕ ಬ್ಯಾಂಕುಗಳಿಗೆ  ಅಪಾಯವನ್ನು ಕನಿಷ್ಠಗೊಳಿಸುವುದು

•           ದೊಡ್ಡ ಸಾಲಗಾರರಿಗೆ ಬಡ್ಡಿ ದರವನ್ನು ಹೆಚ್ಚಿಸುವುದು; ಸಣ್ಣ ಸಾಲಗಳಿಗೆ ಬಡ್ಡಿ ದರವನ್ನು ಕಡಿಮೆ ಮಾಡುವುದು; ಸೇವಿಂಗ್ಸ್ ಖಾತೆಗಳ ಮತ್ತು ಚಿಲ್ಲರೆ ಠೇವಣಿಗಳ ಬಡ್ಡಿ ದರವನ್ನು ಹೆಚ್ಚಿಸುವುದು, ಮತ್ತು ಸಾಮಾನ್ಯ ಚಿಲ್ಲರೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯ ಗ್ರಾಹಕರಿಗೆ ಸೇವಾ ಶುಲ್ಕಗಳನ್ನ ಮನ್ನಾ ಮಾಡುವುದು

•      ಕಂಪನಿಗಳ ಆಸ್ತಿಗಳನ್ನು ಮತ್ತು ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಎಲ್ಲ ನಿಷ್ಕ್ರಿಯ ಆಸ್ತಿಗಳನ್ನು (NPAs) ವಸೂಲಿ ಮಾಡುವುದು;  ಉದ್ದೇಶಪೂರ್ವಕ ಸಾಲಬಾಕಿಯನ್ನು (willful defaults) ಶಿಕ್ಷಿಸಲು ಮತ್ತು ವಸೂಲಿ ಮಾಡಲು ಕ್ರಿಮಿನಲ್ ಕಾಯಿದೆಗಳಲ್ಲಿ ತಿದ್ದುಪಡಿ ತರುವುದು; ದಿವಾಳಿತನ ಮತ್ತು ಪಾಪರುಗಿರಿ ಸಂಹಿತೆಯನ್ನು (Insolvency & Bankruptcy Code – IBC) ಹಿಂಪಡೆಯುವುದು

•           ದೊಡ್ಡ ತಂತ್ರಜ್ಞಾನ ಕಂಪನಿಗಳಾದ  ಅಮೆಜೋನ, ಫೇಸ್ಬುಕ್ ಮತ್ತು ಗೂಗಲ್ ಗಳನ್ನು ಹಣಕಾಸು ತಂತ್ರಜ್ಞಾನ ವಲಯದಲ್ಲಿ ನಿಬಂಧನೆಗೊಳಿಸಿ ಅವುಗಳ ದತ್ತಾಂಶಗಳ ಹತೋಟಿ ಸಾಧಿಸುವುದು

•           ಖಾಸಗಿ ಮೈಕ್ರೋ ಹಣಕಾಸು ಸಂಸ್ಥೆಗಳನ್ನು (Micro Finance Institutions – MFIs)) ಕಟ್ಟುನಿಟ್ಟಿನ ನಿಬಂಧನೆಗೆ ಒಳಪಡಿಸಿ ಅತಿ ಸಣ್ಣ ಸಾಲಗಾರರನ್ನು ಪೀಡಿಸುವುದನ್ನು ತಡೆಯುವುದು. ಸಾರ್ವಜನಿಕ ಬ್ಯಾಂಕುಗಳು ಖಾಸಗಿ ಮೈಕ್ರೋ ಹಣಕಾಸು ಸಂಸ್ಥೆಗಳಿಗೆ ಸಾಲ ನೀಡುವುದನ್ನು ನಿಲ್ಲಿಸುವುದು ಮತ್ತು ವಾಣಿಜ್ಯ ಸಂಸ್ಥೆಗಳನ್ನು ಬ್ಯಾಂಕುಗಳಿಂದ ಬೇರ್ಪಡಿಸುವುದು.

•           ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (ತಿದ್ದುಪಡಿ) ಕಾಯಿದೆ 2015 ಅನ್ನು ರದ್ದುಗೊಳಿಸುವುದು

•           ಸಹಕಾರ ಸಂಘಗಳನ್ನು ರಾಜ್ಯ ವಿಷಯವಾಗಿ ಪುನರ್-ಸ್ಥಾಪಿಸುವುದು; 2020 ರ ಬ್ಯಾಂಕಿAಗ್ ನಿಯಂತ್ರಣ ತಿದ್ದುಪಡಿ ಕಾಯಿದೆಯನ್ನು ಹಿಂಪಡೆಯುವುದು; ಪ್ರಾಥಮಿಕ ಕೃಷಿ ಮತ್ತು ಪತ್ತಿನ ಸಹಕಾರಿ ಸಂಘಗಳು ಭಾರತೀಯ ರಿಜರ್ವ್ ಬ್ಯಾಂಕಿನ ಮೇಲ್ವಿಚಾರಣೆಯಲ್ಲಿ ಠೇವಣಿ ಪಡೆಯಲು ಅನುಮತಿಸುವುದು; ಸಹಕಾರಿ ಬ್ಯಾಂಕುಗಳನ್ನು ಬಲಪಡಿಸಿ ಜನರನ್ನು ಖಾಸಗಿಯವರ  ಅತೀ ಹೆಚ್ಚಿನ ಬಡ್ಡಿಯ ಸಾಲಗಳಿಂದ ರಕ್ಷಿಸುವುದು; ಮತ್ತು ಸಹಕಾರಿ ಬ್ಯಾಂಕುಗಳನ್ನು ವರಮಾನ ತೆರಿಗೆಯಿಂದ ಮುಕ್ತಗೊಳಿಸುವುದು.

•           ಅಭಿವೃದ್ದಿ ಹಣಕಾಸು ಸಂಸ್ಥೆಗಳನ್ನು (Development Financial Institutions – DFIs) ವಾಣಿಜ್ಯ ಬ್ಯಾಂಕುಗಳ ತಳಕಿನಿಂದ ತಪ್ಪಿಸುವುದು; ಬ್ಯಾಂಕಿಂಗ್ ವಲಯ ಸಾಮಾನ್ಯ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವಂತೆ ನೋಡಿಕೊಳ್ಳುವುದು

•           ಭಾರತೀಯ ಜೀವ ವಿಮಾ ಸಂಸ್ಥೆಯ ಸರ್ಕಾರಿ ಶೇರುಗಳನ್ನು ಮುಂದೆ ಮಾರದೆ ಸರ್ಕಾರಿ ಸ್ವಾಮ್ಯವನ್ನು ತೆಳುಗೊಳಿಸದೆ ಇರುವುದು; ಜೀವನ, ವೈದ್ಯಕೀಯ ಮತ್ತು ಸಾಮಾನ್ಯ ವಿಮೆಗಳ ಮೇಲಿನ ಜಿ.ಎಸ್.ಟಿ ಯನ್ನು ತೆಗೆಯುವುದು; ಸಾರ್ವಜನಿಕ ಸಾಮಾನ್ಯ ವಿಮಾ ಕಂಪನಿಗಳನ್ನು ಒಗ್ಗೂಡಿಸಿ ಅಗತ್ಯ ಆರ್ಥಿಕ ಗಾತ್ರ ಪಡೆಯುವಂತೆ ಮಾಡುವುದು

•           ಬಂಡವಾಳ ಕಾನೂನುಬಾಹಿರವಾಗಿ ತೆರಿಗೆ ಸ್ವರ್ಗಗಳಿಗೆ ಹರಿಯದಂತೆ ನಿಷೇಧ ಹೇರುವುದು; ದ್ವಿ ತೆರಿಗೆ ತಪ್ಪಿಸುವ ಒಪ್ಪಂದಗಳಲ್ಲಿನ ಲೋಪದೋಷಗಳನ್ನು ಸರಿಪಡಿಸಿ ತೆರಿಗೆ ಸಂಗ್ರಹಣೆ ಸರಿಯಾಗಿ ಆಗುವಂತೆ ನೋಡಿಕೊಳ್ಳುವುದು

•           ಠೇವಣಿ ರಕ್ಷಿಸಲು ಮತ್ತು ಮೋಸದ (ಪೊಂಜಿ) ಯೋಜನೆಗಳ ಮಾಲೀಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ನೊಂದ ಠೇವಣಿದಾರರಿಗೆ ಪರಿಹಾರ ನೀಡಲು ಚಿಟ್ ಫಂಡ್ ಕಾನೂನು ಬಲಪಡಿಸುವುದು,

•           ಹಣಕಾಸು ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ನಿರ್ಬಂಧಿಸುವುದು

ವ್ಯಾಪಾರ ವಿಷಯಗಳು

ಸಿಪಿಐ(ಎಂ) ನ ನಿಲುವು

•           ಭಾರತೀಯ ಸರಕುಗಳ ಮೇಲೆ ಸುಂಕ ಹೆಚ್ಚಿಸುವ ಮತ್ತು ‘ವಾಣಿಜ್ಯ ಯುದ್ಧ’ದ ಅಮೇರಿಕದ ನಡೆಗಳನ್ನು ಎದುರಿಸಿ ಭಾರತದ ಆಸಕ್ತಿಗಳನ್ನು ರಕ್ಷಿಸುವುದು

•           ಪ್ರಮಾಣಾತ್ಮಕ ನಿರ್ಬಂಧಗಳು ಸೇರಿದಂತೆ ಸಣ್ಣ ಮತ್ತು ಅತಿ ಸಣ್ಣ ರೈತರ ಹಿತಾಸಕ್ತಿಗಳನ್ನು ಕಾಯುವುದು

•           ಆರೋಗ್ಯ, ಶಿಕ್ಷಣ, ನೀರಾವರಿ ಸಂಪನ್ಮೂಲಗಳು, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಗ್ಯಾಟ್ಸ್ ಒಪ್ಪಂದದ ಪರಿಧಿಯಿಂದ ಹೊರಗಿಡುವುದು; ಟ್ರಿಪ್ಸ್  ಒಪ್ಪಂದದ ವಿಮರ್ಶೆಗೆ ಆಗ್ರಹಿಸುವುದು

•           ಈಗಿನ ಮುಕ್ತ ವ್ಯಾಪಾರ ಒಪ್ಪಂದಗಳನ್ನು (Free Trade Agreements – FTAs) ವಿಮರ್ಶೆಗೆ ಒಳಪಡಿಸುವುದು; ಯುರೋಪಿನ ಒಕ್ಕೂಟದೊಂದಿಗೆ ಮುಕ್ತ  ವ್ಯಾಪಾರದ ಒಪ್ಪಂದದ ಮಾತುಕತೆಗೆ ಮುಂದುವರೆಯದಿರುವುದು

ಒಕ್ಕೂಟವಾದಿ ವ್ಯವಸ್ಥೆ ಬಲಪಡಿಸುವುದು

ಆಮೂಲಾಗ್ರವಾಗಿ ಕೇಂದ್ರ ರಾಜ್ಯಗಳ ಸಂಬಂಧವನ್ನು ಪುರ‍್ರಚಿಸುವ ವಿಷಯದಲ್ಲಿ ಸಿಪಿಐ(ಎಂ) ನ ನಿಲುವು:

•           ಸಂವಿಧಾನದ ಅನುಚ್ಛೇದ 356 ನ್ನು ಸೂಕ್ತ ಅಂಶಗಳೊಂದಿಗೆ ಸೇರಿಸಿ ಬದಲಿಸಬೇಕು ಮತ್ತು ಅನುಚ್ಛೇದ 355 ನ್ನು  ತಿದ್ದುಪಡಿ ಮಾಡಿ ಇವುಗಳನ್ನು ದುರುಪಯೋಗ ಮಾಡದಂತೆ ತಡೆಯುವುದು

•           ರಾಜ್ಯಪಾಲರ ಈಗಿನ ಹುದ್ದೆ ಮತ್ತು ಪಾತ್ರವನ್ನು ವಿಮರ್ಶೆಗೆ ಒಳಪಡಿಸಬೇಕು. ಮುಖ್ಯಮಂತ್ರಿಗಳು ಸೂಚಿಸುವ ಮೂರು ಪ್ರಮುಖ ವ್ಯಕ್ತಿಗಳ ಪಟ್ಟಿಯಿಂದ ಒಬ್ಬರನ್ನು ರಾಷ್ಟ್ರಪತಿಗಳು ರಾಜ್ಯಪಾಲರನ್ನಾಗಿ ನೇಮಕ ಮಾಡಬೇಕು

•           ಕೇಂದ್ರದ ತೆರಿಗೆ ಸಂಗ್ರಹದ ಶೇ 50 ರಷ್ಟನ್ನು ರಾಜ್ಯಗಳಿಗೆ ವರ್ಗಾಯಿಸಬೇಕು; ಸರ್ಚಾರ್ಜ್ ಮತ್ತು ಸೆಸ್ ಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು

•           ಕೇಂದ್ರ ಸರಕಾರಕ್ಕೆ ಬರುವ ತೇರಿಗೆಯೆತರ ಆದಾಯವನ್ನು ರಾಜ್ಯಗಳೊಂದಿಗೆ ಹಂಚಲು ಭಾಗ ಮಾಡುವ ಸಂಗ್ರಹಕ್ಕೆ (divisible pool) ಸೇರಿಸಬೇಕು ಅದಕ್ಕೆ ತಕ್ಕಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು

•           ಹಣಕಾಸು ಜವಾಬುದಾರಿ ಮತ್ತು ಆಯ-ವ್ಯಯ ನಿರ್ವಹಣಾ (FRBM) ಕಾಯಿದೆಯಂತಹ ಕಾನೂನುಗಳಲ್ಲಿ ರಾಜ್ಯಗಳ ಮೇಲೆ ಹೇರುವ ಶರತ್ತುಗಳನ್ನು ಹಿಂಪಡೆಯಬೇಕು; ರಾಜ್ಯಗಳಿಗೆ ಹಣಕಾಸು ಆಯೋಗದ ರಚನೆ ಮತ್ತು ಅದರ ಕಾರ್ಯಸೂಚಿ ನಿರ್ಧರಿಸುವುದರಲ್ಲಿ ಭಾಗವಹಿಸುವಿಕೆ ಇರಬೇಕು.

•           ರಾಜ್ಯದ ವಿಷಯಗಳ ಅಡಿ ಬರುವ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಹಣಕಾಸಿನೊಂದಿಗೆ  ರಾಜ್ಯಗಳಿಗೆ ವರ್ಗಾಯಿಸಬೇಕು

•           ಅಂತರ ರಾಜ್ಯ ಮಂಡಲಿಗಳ ನಿರ್ಧಾರಗಳಿಗೆ ಕೇಂದ್ರ ಬದ್ಧವಾಗಿರುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು; ರಾಷ್ಟ್ರೀಯ ಅಭಿವೃದ್ದಿ ಮಂಡಳಿಗೆ ಸಾಂವಿಧಾನಿಕ ಸ್ಥಾನ ನೀಡಬೇಕು; ಯೋಜನಾ ಆಯೋಗವನ್ನು ಪುರ‍್ರಚಿಸಬೇಕು ಮತ್ತು ಅದು ರಾಷ್ಟ್ರೀಯ ಅಭಿವೃದ್ದಿ ಮಂಡಳಿಗೆ (NDC) ಕಾರ್ಯಾಂಗವಾಗಿ ರೂಪುಗೊಳ್ಳಬೇಕು.

•           ಸ್ಥಳೀಯ ಸ್ವಯಂ-ಸರ್ಕಾರಗಳಿಗೆ  ಒಟ್ಟು ಜಿಡಿಪಿಯ ಮೇಲೆ ಕನಿಷ್ಟ ವೆಚ್ಚ ನಿಗದಿ ಪಡಿಸಬೇಕು; ಸ್ಥಳೀಯ ಸಂಸ್ಥೆಗಳಿಗೆ ಬರಬೇಕಾದ ಹಣವನ್ನು ರಾಜ್ಯ ಸರ್ಕಾರಗಳ ಮೂಲಕ ಕೊಡಬೇಕು.

ಮೂಲಭೂತ ಸೌಕರ್ಯ

ಸಿಪಿಐ(ಎಂ) ನ ನಿಲುವು

•           ಜನರಿಗಾಗಿ ಮೂಲಭೂತ ಸೌಕರ್ಯ ಯೋಜನೆ ಮತ್ತು ಅಭಿವೃದ್ದಿ, ಖಾಸಗಿ ಕಂಪನಿಗಳಿಗಾಗಲ್ಲ

•           ಭಾರತೀಯ ಮೂಲಭೂತ ಸೌಕರ್ಯ ವಲಯಗಳ ಮೇಲೆ ಅಂತರ ರಾಷ್ಟೀಯ ಹಣಕಾಸು ಸಂಸ್ಥೆಗಳ ಮತ್ತು ಆಸ್ತಿ ನಿರ್ವಹಣಾ ಸಂಸ್ಥೆಗಳ  ಹತೋಟಿಯನ್ನು ಪ್ರತಿರೋಧಿಸಬೇಕು

•           ರಾಷ್ಟೀಯ ಮೂಲಭೂತ ಸೌಕರ್ಯ ಪೈಪ್‌ಲೈನ್ (NIP) ಯನ್ನು ರದ್ದು ಪಡಿಸಬೇಕು. ಅದು ಖಾಸಗಿಯವರು ದೀರ್ಘ ಕಾಲದಲ್ಲಿ ಮುಖ್ಯ ಮೂಲಭೂತ ಸೌಕರ್ಯ ಚಟುವಟಿಕೆಗಳಲ್ಲಿ ಆದಾಯಮೂಲವಾಗಿ ಮಾಡುವುದಕ್ಕೆ ಅನುಕೂಲ ಮಾಡಿಕೊಡುತ್ತದೆ.

•           ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ನ್ನು (NMP) ಅದೇ  ರೀತಿ ರದ್ದು ಪಡಿಸಬೇಕು; ಈ ಪೈಪ್‌ಲೈನ್ ಮೂಲಕ ಖಾಸಗಿ ಕಂಪನಿಗಳು ಮೂಲಭೂತ ಸೌಕರ್ಯ ಆಸ್ತಿಗಳನ್ನು ವಿವಿಧ ರೀತಿಯಲ್ಲಿ ಲಾಭಪಡೆಯಲು ದೀರ್ಘ ಕಾಲದ ಇನಾಮು ಆಗುವುದನ್ನು ತಡೆಯಬೇಕು ಮತ್ತು ಹಿಂಫಡೆಯಬೇಕು; ಖಾಸಗಿಕರಣವನ್ನು ರದ್ದುಪಡಿಸುವುದು ಮತ್ತು  ಸಾರ್ವಜನಿಕ ಮೂಲಭೂತ ಸೌಕರ್ಯಗಳನ್ನು ಮಾರಾಟಗಳ  ಮೂಲಕ ದುರ್ಬಲಗೊಳಿಸಿ, ಪಿ.ಪಿ.ಪಿ ಮತ್ತು ಇತರ ರೀತಿಯಲ್ಲಿ ಕೊಳ್ಳೆ ಹೊಡೆಯುವುದನ್ನು ತಡೆಯಬೇಕು

•           ರಾಷ್ಟ್ರೀಯ ಭೂಮಿ ನಗದೀಕರಣ ಪೈಪ್‌ಲೈನ್ ನ್ನು (NLMP) ರದ್ದು ಪಡಿಸಿ ಅದನ್ನು ಹಿಂಫಡೆಯಬೇಕು. ಖಾಸಗಿ ಕಂಪನಿಗಳು ಬಹುದೊಡ್ಡ ಭೂ ಹಿಡುವಳಿಗಳನ್ನು ಶೇಖರಿಸಿ ಅದರ ಮೂಲಕ ವಿಶಿಷ್ಟ ಬಾಡಿಗೆ ಕೊಳ್ಳೆ ಹೊಡೆಯುವುದನ್ನು ತಡೆಯಬೇಕು

•           ಸಾರ್ವಜನಿಕ ಮೂಲಭೂತ ಸೌಕರ್ಯಗಳ (ವಿದ್ಯುತ್, ಸಂಪರ್ಕ, ರೈಲು, ರಸ್ತೆ, ಬಂದರು, ವಿಮಾನ ನಿಲ್ದಾಣ, ಇತ್ಯಾದಿಗಳ) ಕಟ್ಟುವಿಕೆ, ಕಾರ್ಯಾಚರಣೆ, ನಡೆಯಿಸುವಿಕೆ ಮತ್ತು ಆದಾಯ ಸಂಗ್ರಹಣೆಯನ್ನು ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯಗಳ ಮೂಲಕವೇ ಮಾಡಬೇಕು.

•           ಖಾಸಗಿ ನಿರ್ವಾಹಕರಿಗೆ ನೀಡಿದ್ದ  ಸಾರ್ವಜನಿಕ ಮೂಲಭೂತ ಸೌಕರ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು (Operation and Maintenance – O&M)) ಹಿಂಪಡೆಯುವುದು; ಜನರಿಂದ ಕೊಳ್ಳೆ ಹೊಡೆದು ಅವರನ್ನು ಸಂಕಷ್ಟಕ್ಕೆ ಸಿಲುಕಿಸುವ ಖಾಸಗಿ ಕಾರ್ಯಾಚರಣೆ ಮತ್ತು ನಿರ್ವಹಣಾ (O&M) ಏಜೆನ್ಸಿಗಳು ಹೆದ್ದಾರಿ ಗಳು, ರೈಲು, ವಿಮಾನ ನಿಲ್ದಾಣ, ಗ್ಯಾಸ್ ಮತ್ತು ವಿದ್ಯುತ್ ಲೈನುಗಳು, ಇತ್ಯಾದಿ ಗಳಿಂದ ಮಾಡುವ ಆದಾಯ ಸಂಗ್ರಹವನ್ನು (ಟೋಲ್ ಗಳು, ಚೀಟಿಗಳು ಮತ್ತು ಇತರೆ ಆದಾಯಗಳು)  ರದು ್ದಪಡಿಸಬೇಕು.  ಸಾರ್ವಜನಿಕ ಸಂಸ್ಥೆಗಳನ್ನು ಇವುಗಳಲ್ಲಿ ತೊಡಗಿಸಬೇಕು.

•           ನವೀಕರಿಸಬಹುದಾದ ಶಕ್ತಿ, ಶಕ್ತಿ ಸಂಗ್ರಹಣೆ, ಮತ್ತು ಭವಿಷ್ಯದ ಎಲ್ಲ ಶಕ್ತಿ ಸಂಪನ್ಮೂಲಗಳು ಖಾಸಗಿ ಏಕಸ್ವಾಮ್ಯವನ್ನು ಸ್ಥಾಪಿಸಲು ಖಾಸಗಿಯವರಿಗೆ ಅನುಕೂಲ ಮಾಡಿಕೊಡುವ ನೀತಿಗಳನ್ನು ಬದಲಿಸಬೇಕು; ಸರ್ಕಾರಿ ಹಿಡಿತವನ್ನು ಈ ವಲಯಗಳ ಮೇಲೆ ಸ್ಥಾಪಿಸಬೇಕು; ಅ ಮೂಲಕ ನಮ್ಮ ಶಕ್ತಿ ಸಾರ್ವಭೌಮತ್ವವನ್ನು ಕಾಪಾಡಿಕೊಳ್ಳಬೇಕು; ಇಲ್ಲಿ ಪಳೆಯುಳಿಕೆ ಇಂದನದಿದ ಪುನರ್-ನವೀಕರಿಸುವ ಇಂಧನಕ್ಕೆ ಪಲ್ಲಟದ ಪ್ರಕ್ರಿಯೆಯಲ್ಲಿ  ಸಮುದಾಯಗಳ (ಮುಖ್ಯವಾಗಿ ಕಲ್ಲಿದ್ದಲು ಕಾರ್ಮಿಕರು) ಜೀವನೋಪಾಯ ಮತ್ತು ಆರ್ಥಿಕ ಅವಕಾಶಗಳನ್ನು ರಕ್ಷಿಸುವ ಭಾಗವಹಿಸುವಿಕೆಯ ಒಂದು ಸೂಕ್ತ ಮಾದರಿಯನ್ನು ರೂಪಿಸಬೇಕು

•           ಕೈಗೆ ಎಟಕುವ ಬೆಲೆಯಲ್ಲಿ ವಿದ್ಯುತ್ ಲಭ್ಯತೆ; 2022 ರ ವಿದ್ಯುತ್ (ತಿದ್ದುಪಡಿ) ಕಾಯಿದೆಯನ್ನು ರದ್ದು ಪಡಿಸಬೇಕು; ಖಾಸಗಿ ಕಂಪನಿಗಳ ಟೋಟೆಕ್ಸ್ (TOTEX) ಮಾದರಿ ಸ್ಮಾರ್ಟ್ ಮೀಟರ್ ಗಳನ್ನು ತಡೆಯಬೇಕು; ಖಾಸಗೀಕಾರಣವನ್ನು ನಿಲ್ಲಿಸಬೇಕು: ಹರಿಹಂಚಲಾದ. ವಿದ್ಯುತ್ ಸೌಲಭ್ಯಗಳನ್ನು ಒಟ್ಟುಗೂಡಿಸಿ ಖಾಸಗಿಯವರ ಪರವಾನಗಿಗಳನ್ನು ರದ್ದುಗೊಳಿಸಬೇಕು; ಕಾಲ್ಪನಿಕ ಖಾಸಗಿ ವಿದ್ಯುತ್ ಮಾರುಕಟ್ಟೆ  ಮತ್ತು ಚಲನಶೀಲ ಬೆಲೆ ನಿರ್ಧಾರ ವನ್ನು ಮೂಲೋತ್ಪಾಟನೆ ಮಾಡಬೇಕು.

•           2023 ರ ಟೆಲಿ ಸಂಪರ್ಕ ಮಸೂದೆಯನ್ನು ಹಿಂಪಡೆಯಬೇಕು; ಖಾಸಗಿ ಪರ ಟೆಲಿ ಸಂಪರ್ಕ ನೀತಿಯನ್ನು ಬದಲಿಸಿ  ಟೆಲಿಕಾಂ ಜಾಲ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ವಲಯದ ನೆರವಿನಿಂದ ಹರಡುವಂತೆ ಮಾಡಬೇಕು. ಸಾರ್ವಜನಿಕ ಸಂಸ್ಥೆಗಳಾದ BSNL ಮತ್ತು MTNL ಗಳಿಗೆ ಸಮಾನ ಸ್ಪರ್ಧೆಯ ಅವಕಾಶ ಖಚಿತಪಡಿಸಿ 4 ಜಿ ಮತ್ತು 5 ಜಿ ಸೇವೆಗಳನ್ನು ನೀಡಬೇಕು. ಇಂಟರ್ನೆಟ್ ಹಕ್ಕುಗಳನ್ನು ಜಾರಿಗೊಳಿಸಬೇಕು. ಸಂಪರ್ಕ ಸಾಧನಗಳ ಉತ್ಪಾದನೆಗಳಲ್ಲಿ  ರಾಷ್ಟ್ರೀಯ ಸ್ವಾವಲಂಬನೆ ಸಾಧಿಸಬೇಕು. 

•           ರೈಲು ಮೂಲಭೂತ ಸೌಕರ್ಯ ರಚನೆಯಲ್ಲಿ ಭದ್ರತೆ, ವೇಗ ಮತ್ತು ಲಭ್ಯತೆ ಸಾಧಿಸಲು ದೊಡ್ಡ ಪ್ರಮಾಣದ ಹೂಡಿಕೆ ಮಾಡಬೇಕು. ರೈಲು ನಿಲ್ದಾಣಗಳು, ಮುಡುಪಾಗಿಟ್ಟ ಸರಕು ಕಾರಿಡಾರ್ ಸರಕು ಮತ್ತು ಸಂಚಾರಿ ರೈಲುಗಳು ಇತ್ಯಾದಿಗಳ ಖಾಸಗಿಕರಣ ರದ್ದುಗೊಳಿಸಬೇಕು ರೈಲು ಉಪಕರಣ ಉತ್ಪಾದನೆಗಳಲ್ಲಿ ದೇಶಿ ತಂತ್ರಜ್ಞಾನವನ್ನು ಬಳಸುವುದು; ಕೈಗೆಟಕುವ ಸುಲಭ ಬೆಲೆ ಮತ್ತು ಸೇವೆ ಪರಿಷ್ಕರಣೆ ಸಾಧಿಸುವುದು.

•           ‘ಭೂಮಾಲಕನ ಬಂದರು’ ಪರಿಕಲ್ಪನೆ  ಮಾದರಿಯನ್ನು ರದ್ದುಗೊಳಿಸುವುದು; ಸರಕು ನಿರ್ವಹಣೆಗೆ ಹೊಸ ಯೋಜನೆಗಳನ್ನು ರೂಪಿಸುವುದು, ಪಿಪಿಪಿ ಮಾದರಿಯಲ್ಲಿ ಪ್ರಮುಖ ಬಂದರು-ಆಸ್ಪತ್ರೆಗಳ ಹೊರಗುತ್ತಿಗೆಯನ್ನು ರದ್ದುಗೊಳಿಸುವುದು’ ಬಂದರುಗಳನ್ನು ಆಧುನಿಕರಣಗೊಳಿಸುವುದು.

•           ಉಗ್ರಾಣ ಅಭಿವೃದ್ದಿ ಮಂಡಳಿಯ ಮೂಲಭೂತ ಸೌಕರ್ಯಗಳನ್ನು ಬೆಳೆಗಳನ್ನು ಕೊಳ್ಳಲು (ಕಾಳು  ಮತ್ತು ತರಕಾರಿ ಹಣ್ಣುಗಳನ್ನು ಹೊರತುಪಡಿಸಿ) ಬಳಸುವುದು; ಇವುಗಳನ್ನು ಖಾಸಗಿ ಏಕಸ್ವಾಮ್ಯಪತಿಗಳಿಗೆ ಬಾಡಿಗೆಗೆ ನೀಡುವುದನ್ನು ನಿಲ್ಲಿಸುವುದು

ಕೈಗಾರಿಕೆ

ಸಿ.ಪಿ.ಐ.(ಎಂ) ಇವುಗಳಿಗಾಗಿ ಶ್ರಮಿಸುತ್ತದೆ 

•           ವಿವಿಧ ಆಡಳಿತಾತ್ಮಕವಾದ ಆದೇಶಗಳು ಮತ್ತು ನಿರ್ದೇಶನಗಳ ಮೂಲಕ ಸಾರ್ವಜನಿಕ ಉದ್ದಿಮೆಗಳನ್ನು ಕಳಚಿಹಾಕುವ ಮತ್ತು ನಾಶಮಾಡುವ  ನೀತಿಗಳನ್ನು ವಾಪಸು ತೆಗೆದುಕೊಳ್ಳುವುದು; ಬಂಡವಾಳ ಹೂಡಿಕೆ ಮತ್ತು ಸಾರ್ವಜನಿಕ ಸಂಪತ್ತು ನಿರ್ವಹಣಾ ಇಲಾಖೆ(ಡಿ.ಐ.ಪಿ.ಎ.ಎಂ.)-ಮೂಲಕ ನಡೆಸಲಾಗುತ್ತಿರುವ ಎಲ್ಲ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣದ ಪ್ರಯತ್ನಗಳಿಗೆ ಕೊನೆ ಹಾಡುವುದು.

•           ಸಾರ್ವಜನಿಕ ಉದ್ದಿಮೆಗಳ ಮೇಲೆ ಹೇರಿರುವ ಭಾರಿ ಲೆವಿಯ ಹೊರೆಯನ್ನು ವಾಪಸ್ ಪಡೆಯುವುದು, ಸಾರ್ವಜನಿಕ ಉದ್ದಿಮೆಗಳ ಲಾಭಾಂಶವನ್ನು ಉದ್ದಿಮೆಯ ಆಧುನೀಕರಣ ಮತ್ತು ಮೇಲ್ದರ್ಜೆಗೇರಿಸುವುದಕ್ಕಾಗಿ ದಕ್ಷವಾದ ರೀತಿಯಲ್ಲಿ ಪುನರ್ ಹೂಡಿಕೆ ಮಾಡುವುದು, ಸಮಾನ ಸ್ಪರ್ಧೆಯ ಅವಕಾಶಗಳನ್ನು, ಸಂಪನ್ಮೂಲಗಳನ್ನು ಪಡೆಯುವ ಸಮಾನ ಅವಕಾಶವನ್ನು ಒದಗಿಸುವುದು, ದುರ್ಬಲ ಸಾರ್ವಜನಿಕ ಉದ್ದಿಮೆಗಳಿಗೆ ಹೊಸ ಬಂಡವಾಳ ಹೂಡಿಕೆ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಬೆಂಬಲ ನೀಡುವುದು, ಪ್ರತಿಯೊಂದು ಪ್ರಮುಖ ಒಪ್ಪಂದದಲ್ಲಿ ತಂತ್ರಜ್ಞಾನದ ವರ್ಗಾವಣೆಯನ್ನು ಖಾತ್ರಿ ಪಡಿಸುವುದು, ಉದ್ದಿಮೆಯಲ್ಲಿ ಹೆಚ್ಚಿನ ಸ್ವಾಯುತ್ತತೆಯನ್ನು ಮತ್ತು ವಿವಿಧ ಸಾರ್ವಜನಿಕ ಉದ್ದಿಮೆಗಳ ನಡುವಿನ ಅಂತರ್ ಉದ್ದಿಮೆಗಳ ಸಮನ್ವಯವನ್ನು ಪ್ರೋತ್ಸಾಹಿಸುವುದು ಮುಂತಾದ ವಿವಿಧ ಕ್ರಮಗಳ ಮೂಲಕ ಸಾರ್ವಜನಿಕ ಉದ್ದಿಮೆಗಳನ್ನು, ನಿರ್ದಿಷ್ಟವಾಗಿ ಅಯಕಟ್ಟಿನ ಮತ್ತು ಮುಂಚೂಣಿ ವಲಯದ ಸಾರ್ವಜನಿಕ ಉದ್ದಿಮೆಗಳನ್ನು ಬಲಪಡಿಸುವುದು.  

•           ಹೆಚ್ಚಿನ ಉದ್ಯೋಗ-ಬಂಡವಾಳ ಅನುಪಾತವನ್ನು ಖಾತ್ರಿ ಪಡಿಸಲು, ಅಂದರೆ ಹೆಚ್ಚಿನ ಉದ್ಯೋಗ ಸೃಷ್ಟಿಯನ್ನು ಖಾತ್ರಿಪಡಿಸಲು ಬಂಡವಾಳ ಹೂಡಿಕೆ ಕಾರ್ಯಯೋಜನೆ ಮತ್ತು ಒಪ್ಪಂದದ ಷರತ್ತುಗಳÀನ್ನು ಮರು-ಅವಿಷ್ಕಾರ ಮಾಡುವ ಒಂದು ಸಮಗ್ರವಾದ ಮತ್ತು ದೀರ್ಘಾವಧಿಯ ಕೈಗಾರಿಕಾ ನೀತಿಯನ್ನು ರೂಪಿಸುವುದು; ನಿವ್ವಳ ಉತ್ಪಾದಕತೆಯನ್ನು ಹೆಚ್ಚಿಸಲು, ‘ಸೇವೆ’ ಮತ್ತು ‘ಸರಕು ಉತ್ಪಾದನೆ’ ಈ ಎರಡೂ ವಲಯಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದು ಮತ್ತು ಈ ವಲಯಗಳ ಪರಸ್ಪರ ಪೂರಕ ಪಾತ್ರವನ್ನು ಪೋಷಿಸುವುದು.  

•           ಬಿಗಿಯಾದ ಆಮದು-ರಫ್ತು-ಬಂಡವಾಳ ಹೂಡಿಕೆ ನೀತಿಗಳ ಮೂಲಕ ಜಾಗತಿಕ ಉತ್ಪಾದನಾ ಜಾಲದಲ್ಲಿನ ದೇಶದ ಆಂತರಿಕ ವಿಭಾಗಗಳ ಮೌಲ್ಯ ವರ್ಧನೆಯ ಹೆಚ್ಚಳ  ಮತ್ತು ವಿನಿಯೋಗವನ್ನು ಖಾತ್ರಿಪಡಿಸುವುದು; ಜೊತೆಗೆ ಬಹುರಾಷ್ಟ್ರೀಯ ಕಂಪನಿ(ಎA.ಎನ್.ಸಿ.)ಗಳು ಮತ್ತು ಅಂತರಾಷ್ಟ್ರೀಯ ಕಂಪನಿ(ಟಿ.ಎನ್.ಸಿ.)ಗಳ ಇಡೀ ಮೌಲ್ಯ ಜಾಲದಲ್ಲಿ, (ಕಾರ್ಮಿಕರ ಹಿತಗಳನ್ನು ರಕ್ಷಿಸುವ) ಬಿಗಿಯಾದ ‘ಕಾರ್ಮಿಕ  ಮಾನದಂಡ’ಗಳ ಅನುಸರಣೆಯನ್ನು ಖಾತ್ರಿ ಪಡಿಸುವುದು.    

•           ಅಡ್ಡ ಮಾಲಿಕತ್ವ (ಹಲವಾರು ಸಂಸ್ಥೆಗಳ ಮೇಲೆ ಪರೋಕ್ಷವಾಗಿ ಅಕ್ರಮ ವಿಧಾನದಲ್ಲಿ ಮಾಲಿಕತ್ವ ಹೊಂದುವುದು)  ಹೊಂದುವುದಕ್ಕೆ  ಮತ್ತು ಷೇರು ಹೂಡಿಕೆಗಳ (equity investment) ಮೇಲೆ ಗರಿಷ್ಟ ಮಿತಿ ಹೇರುವ ಮೂಲಕ, ಹಣಕಾಸೇತರ ಸಂಸ್ಥೆಗಳ ಮೇಲಿನ ಹೆಚ್ಚುತ್ತಿರುವ ಹಣಕಾಸು ಸಂಸ್ಥೆಗಳ ನಿಯಂತ್ರಣಕ್ಕೆ ತಡೆ ಒಡ್ಡುವುದು; ಸಾರ್ವಜನಿಕ ವಲಯದ ಬ್ಯಾಂಕುಗಳ ಸಕ್ರಿಯ ಅಡಮಾನ ನೀತಿಯ ಮೂಲಕ ಹಣಕಾಸೇತರ ಸಂಸ್ಥೆಗಳ ಹಣಕಾಸು ಅಗತ್ಯಗಳಿಗೆ ಬೆಂಬಲ ನೀಡುವುದು; ದೇಶೀಯ ಸಾಮರ್ಥ್ಯ ಹೆಚ್ಂಳದ ಯತ್ನಗಳು ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದು; ಏಕಸ್ವಾಮ್ಯ ಮತ್ತು ಉದ್ಯಮಿಗಳ ಪ್ರಭಾವಿ ನಿಯಂತ್ರಣ ಗುಂಪುಗಳು ರೂಪುಗೊಳ್ಳದಂತೆ ಎಚ್ಚರಿಕೆಯ ಕ್ರಮಗಳನ್ನು ವಹಿಸುವುದು.  

 •          ಸೆಣಬು ಮಿಲ್‌ಗಳು, ತೋಟಗಳು, ಜವಳಿ, ಚರ್ಮೋದ್ಯಮ, ಕರಕುಶಲ ಉದ್ಯಮ, ತೆಂಗಿನ ನಾರಿನ ಉದ್ಯಮ ಮುಂತಾದ ಬಹುತೇಕ ಮಾನವಶ್ರಮ ಆಧಾರಿತವಾಗಿರುವ ಸಾಂಪ್ರದಾಯಿಕ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸುವುದು; ಅಂತರರಾಷ್ಟ್ರೀಯ ಶಕ್ತಿಗಳಿಂದ ದೇಶೀಯ ಕೈಗಾರಿಕೆಗಳನ್ನು ರಕ್ಷಿಸುವ ದೃಷ್ಟಿಯಿಂದ ಕಠಿಣವಾದ ನೀತಿಗಳನ್ನು ರೂಪಿಸುವುದು; ದೇಶೀಯ ಉದ್ದಿಮೆಗಳನ್ನು ಪ್ರೋತ್ಸಾಹಿಸಿ ಬೆಳೆಸುವುದು.  ಭಾರತೀಯ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯನ್ನು ಒದಗಿಸುವುದು. 

•           ಬಹುತೇಕ ಮಾನವಶ್ರಮ ಆಧಾರಿತವಾಗಿರುವ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು – ಅವುಗಳಿಗೆ ಮೂಲಭೂತ ಸೌಕರ್ಯಗಳ ಬೆಂಬಲ, ಪ್ರೋತ್ಸಾಹ, ಸಾರ್ವಜನಿಕ ಬ್ಯಾಂಕುಗಳ ಮೂಲಕ ಅಗತ್ಯ ಪ್ರಮಾಣದ ಸಾಲ ಒದಗಿಸುವ ಮೂಲಕ – ಪ್ರೋತ್ಸಾಹಿಸುವುದು; ಕೈಗಾರಿಕಾ ಸಮೂಹಗಳ ಅಭಿವೃದ್ಧಿ ಯೋಜನೆ(ಸಿಡಿಪಿ)ಗಳಿಗೆ ನೀಡುವ ಅನುದಾನವನ್ನು ಹೆಚ್ಚಿಸುವುದು; ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ವಲಯದಲ್ಲಿ ಖಾಸಗಿ ಮೈಕ್ರೋ ಹಣಕಾಸು ಸಂಸ್ಥೆಗಳು ಪ್ರವೇಶ ಪಡೆಯದಂತೆ ನಿರ್ಬಂಧಗಳನ್ನು ವಿಧಿಸುವುದು; ಸಂಕಷ್ಟದಲ್ಲಿರುವ ಕಡಿಮೆ ಆದಾಯದ  ಗುಂಪುಗಳಿಗೆ ಸಾಲ ಮನ್ನಾ ಮಾಡುವುದು. 

•           ಸಹಕಾರಿ ಸಂಘಗಳು, ಸ್ವಸಹಾಯ-ಗುಂಪು(SHGs.)ಗಳು ಮುಂತಾದ ಸಾಮುದಾಯಿಕ ಸಂಸ್ಥೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಉದ್ಯಮಶೀಲ ಚಟುವಟಿಕೆಗಳನ್ನು ಹೆಚ್ಚಿಸಲು  ಅನುಕೂಲಕರವಾದಂತಹ ಕಾರ್ಯಯೋಜನೆಯನ್ನು ರೂಪಿಸುವುದು;  ಗೃಹ ಕೈಗಾರಿಕೆ ಮತ್ತು ಸಾಂಪ್ರದಾಯಿಕ ಕೈಗಾರಿಕೆಗಳನ್ನು ಒಳಗೊಂಡಂತಹ ಘಟಕಗಳಿಗೆ ಸಹಾಯಧನ ಸೇರಿದಂತಹ ಸಾಲ ಸೌಲಭ್ಯವನ್ನು ಹೆಚ್ಚಿಸುವುದು. 

•           ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ನಿಷೇಧಿಸುವುದು;  ಪರವಾನಗಿ ನೀತಿಯ ಮೂಲಕ ಇ-ಕಾಮರ್ಸ್ ಮತ್ತು ಸ್ಥಳೀಯ ಕಾರ್ಪೋರೇಟ್ ಚಿಲ್ಲರೆ ವ್ಯಾಪಾರಿಗಳನ್ನು ನಿಬಂಧನೆಗೊಳಪಡಿಸುವುದು; ಸಣ್ಣ ಉತ್ಪಾದಕರು ಮತ್ತು ತಯಾರಕರ ಉತ್ಪನ್ನಗಳ ಮಾರಾಟವನ್ನು ಪ್ರೋತ್ಸಾಹಿಸಲು ಸರಕಾರದ ಮಾಲಿಕತ್ವದ ಇ-ಕಾಮರ್ಸ್ ವೇದಿಕೆಯನ್ನು ಸೃಷ್ಟಿಸುವುದು.

•           ಅಮೆಜಾನ್, ಊಬರ್, ಜೊಮೆಟೋ ಮುಂತಾದ ಜಾಗತಿಕ ಕಾರ್ಪೋರೇಟ್‌ಗಳ ಏಕಸ್ವಾಮ್ಯವನ್ನು ಮುರಿಯಲು, ಸಾರ್ವಜನಿಕ ರಂಗದಲ್ಲಿ ‘ಡಿಜಿಟಲ್’ ವೇದಿಕೆಯ ಸೇವೆಯನ್ನು ಆರಂಭಿಸುವುದು; ವಿಸ್ತಾರಗೊಳ್ಳುತ್ತಿರುವ ಡಿಜಿಟಲ್ ಆರ್ಥಿಕತೆಯಲ್ಲಿ ದೇಶೀಯವಾದ ‘ಸ್ಟಾರ್ಟ್ ಅಪ್’ ಉದ್ದಿಮೆಗಳು ಮತ್ತು ಸಹಕಾರಿ ಸಂಸ್ಥೆಗಳನ್ನು ರಕ್ಷಿಸಲು ಸರಕಾರದ ವ್ಯವಸ್ಥಿತವಾದ ಬೆಂಬಲವನ್ನು ಖಾತ್ರಿ ಪಡಿಸುವುದು.

•           ಉದ್ಯೋಗಿಗಳ ಹಕ್ಕುಗಳೊಂದಿಗೆ ರಾಜಿ ಮಾಡಿಕೊಳ್ಳದೇ, ಎರಡನೇ ದರ್ಜೆ ಮತ್ತು ಮೂರನೇ ದರ್ಜೆಯ ನಗರಗಳಿಗೆ ಹೆಚ್ಚಿನ ಮಾಹಿತಿ ತಂತ್ರಜ್ಞಾನ (ಐ.ಟಿ.) ಉದ್ಯೋಗಗಳನ್ನು ತರಲು ಮತ್ತು ತಾಂತ್ರಿಕ ಬೆಳವಣಿಗೆಗಾಗಿ ಸಕ್ರಿಯ ಮುತುವರ್ಜಿಯನ್ನು ವಹಿಸುವುದು; ಮಾಹಿತಿ ತಂತ್ರಜ್ಞಾನದ ಯಂತ್ರೋಪಕರಣ(ಹಾರ್ಡ್ವೇರ್)ಗಳು ಮತ್ತು ಬಿಡಿಭಾಗಗಳ ಉತ್ಪಾದನೆಯನ್ನು ಉತ್ತೇಜಿಸುವುದು; ಎಲ್ಲ ಇಲಾಖೆಗಳು ಮತ್ತು ಇಲಾಖೆಗಳ ಸೇವೆಗಳನ್ನು ಡಿಜಿಟಲೀಕರಣ ಮಾಡಲು ಸರಕಾರಿ ಮಾಲಿಕತ್ವದ ಮಾಹಿತಿ ತಂತ್ರಜ್ಞಾನ(ಐ.ಟಿ.) ಕಂಪನಿಯನ್ನು ಆರಂಭಿಸುವುದು; ಆಲ್ಗಾರಿದಮ್(ಗಣನೆಯ ವಿಧಾನ), ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ(AI/ML.) ಮತ್ತಿತರ, ವೇಗವಾಗಿ ಬೆಳೆದು ಬರುತ್ತಿರುವ ತಂತ್ರಜ್ಞಾನಗಳನ್ನು ನಿಬಂಧನೆಗೊಳಪಡಿಸುವ ಮೂಲಕ ಅವುಗಳನ್ನು ಪ್ರಜಾಸತ್ತಾತ್ಮಕಗೊಳಿಸಿ ಜನತೆಗೆ ಅದರ ಲಾಭಗಳನ್ನು ನೀಡಲು ನಿಯಮಗಳನ್ನು ರೂಪಿಸುವುದು.  

•           ವಿವೇಚನಾರಹಿತವಾದ ಭೂಬಳಕೆಯನ್ನು ನಿಯಂತ್ರಿಸಲು, ‘ತೆರಿಗೆ ಅನುಕೂಲ’ಗಳನ್ನು ಅಥವಾ ತೆರಿಗೆ ತಪ್ಪಿಸಿಕೊಳ್ಳುವ ಅವಕಾಶಗಳನ್ನು ನಿವಾರಿಸಲು ವಿಶೇಷ ಆರ್ಥಿಕ ವಲಯ(ಎಸ್.ಇ.ಜೆಡ್.) ಕಾಯ್ದೆ ಮತ್ತು ನಿಯಮಗಳಿಗೆ ಕ್ರಮೇಣವಾಗಿ ತಿದ್ದುಪಡಿಗಳನ್ನು ತರುವುದು; ವಿಶೇಷ ಆರ್ಥಿಕ ವಲಯ (ಎಸ್.ಇ.ಜೆಡ್.)ಗಳಲ್ಲಿ ಕಾರ್ಮಿಕ ಕಾಯ್ದೆಗಳನ್ನು ಬಿಗಿಯಾಗಿ ಜಾರಿಗೆ ತರುವುದನ್ನು ಖಾತ್ರಿ ಪಡಿಸುವುದು.  

•           ಕಂಪನಿಗಳ ನಷ್ಟ/ದಿವಾಳಿತನ ನಿರ್ಧರಿಸುವ ನಿಯಮ ‘IBC.’ ಕುರಿತು ಕಠಿಣವಾಗಿ ವಿಮರ್ಶಿಸಿ ಪುನರ್ ಪರಿಶೀಲಿಸುವುದು, ಉತ್ಪಾದನಾ ಸಂಬAಧಿ ಪ್ರೋತ್ಸಾಹಧನ ‘ಪಿ.ಎಲ್.ಐ’ ಮೂಲಕ ಸಾರ್ವಜನಿಕ ಹಣಕಾಸನ್ನು ಇಂತಹ ಕಂಪನಿಗಳಿಗೆ ವರ್ಗಾವಣೆ ಮಾಡುವುದಕ್ಕೆ ಪ್ರತಿರೋಧ ಒಡ್ಡುವುದು; ದೊಡ್ಡ ಖಾಸಗಿ ಕಾರ್ಪೋರೇಟ್ ಕಂಪನಿಗಳಿಗೆ ಬೇಷರತ್ತಾಗಿ ಸಾಲ ಮನ್ನಾ ಮಾಡುವುದರ ವಿರುದ್ಧ ಕಠಿಣ ಕ್ರಮವಹಿಸುವುದು.

•           ಅಪರೂಪದ ಮತ್ತು ಪ್ರಮುಖ ಭೂ-ಖನಿಜಗಳಾದ ಲಿಥಿಯಮ್ ಮುಂತಾದ ಖನಿಜಗಳ ವಾಣಿಜ್ಯ ಗಣಿಗಾರಿಕೆಯಲ್ಲಿ ಏಕಸ್ವಾಮ್ಯ ಸ್ಥಾಪಿಸಲು ಅವಕಾಶವಾಗುವಂತೆ ಖನಿಜ ಮತ್ತು ಗಣಿಗಾರಿಕೆ ಅಭಿವೃದ್ಧಿ ಕಾಯ್ದೆಗೆ (ಎಂ.ಎA.ಡಿ.ಆರ್) ತಂದಿರುವ ತಿದ್ದುಪಡಿಗಳನ್ನು ಹಿಂಪಡೆಯವುದು; ಕಚ್ಚಾ ತೈಲ ಸೇರಿದಂತೆ, ಭವಿಷ್ಯದ ಇಂಧನ ಭದ್ರತೆಗಾಗಿ ಖನಿಜ ಗಣಿಗಾರಿಕೆಗೆ ಪ್ರೋತ್ಸಾಹ ನೀಡುವ, ಗಣಿ ಕ್ಷೇತ್ರವನ್ನು ಮತ್ತಷ್ಟು ಖಾಸಗೀಕರಣ ಮಾಡುವ, ಉದಾರೀಕರಣಗೊಳಿಸುವ ನೀತಿಗಳಿಗೆ ತಡೆ ಒಡ್ಡುವುದು. 

•           ಶಸ್ತ್ರಾಸ್ತ್ರ ಕಾರ್ಖಾನೆ ಮಂಡಳಿ (ಓ.ಎಫ್.ಬಿ.)ಯನ್ನು ಕಳಚಿ ಹಾಕಿರುವ ಕ್ರಮವನ್ನು ಹಿಮ್ಮೆಟ್ಟಿಸಿ ಮಂಡಳಿಯನ್ನು ಮರಳಿ ಸ್ಥಾಪಿಸುವುದು. ಮತ್ತು ದೇಶೀಯವಾದ ಶಸ್ತ್ರಾಸ್ತ್ರ ಉತ್ಪಾದನಾ ಘಟಕಗಳನ್ನು ಬಲಗೊಳಿಸುವುದು; ಶಸ್ತ್ರಾಸ್ತ್ರ ಉತ್ಪಾದನಾ ರಂಗಕ್ಕೆ ಖಾಸಗಿ ರಂಗದ ಕಂಪನಿಗಳ ಪ್ರವೇಶವನ್ನು ಹಿಮ್ಮೆಟ್ಟಿಸುವುದು; ಈ ರಂಗದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ತಡೆ ಒಡ್ಡುವುದು.

•           ಭಾರತ ಕಲ್ಲಿದ್ದಲು ಲಿಮಿಟೆಡ್(ಸಿ.ಐ.ಎಲ್.)ನ ಸಾಮರ್ಥ್ಯ ಹೆಚ್ಚಳಕ್ಕಾಗಿ ಒಂದು ಸಮಗ್ರವಾದ ನೀತಿಯನ್ನು ರೂಪಿಸುವುದು; ಕಲ್ಲಿದ್ದಲು ಸಾಗಾಣಿಕೆ-ಸಂಗ್ರಹ-ನಿರ್ವಹಣೆ ಮುಂತಾದವುಗಳ ಕುರಿತೂ ಸಮಗ್ರ ಯೋಜನೆ ರೂಪಿಸುವುದು;  ಖಾಸಗಿಯವರಿಗೆ ಮಂಜೂರು ಮಾಡಲಾಗಿರುವ, ಆದರೆ ಇನ್ನೂ ಗಣಿಗಾರಿಕೆ ನಡೆಸಿಲ್ಲದ ಕಲ್ಲಿದ್ದಲು ಗಣಿಗಳನ್ನು ಸಿ.ಐ.ಎಲ್.ಗೆ ಹಸ್ತಾಂತರಿಸುವುದು; ವಿದೇಶದಿಂದ ಆಮದಾಗುವ ಕಲ್ಲಿದ್ದಲ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ಖಾಸಗಿ ಕಂಪನಿಗಳಿAದ ಕಲ್ಲಿದ್ದಲು ಆಮದಿನಲ್ಲಿ ಆಗಿರುವ ಮೋಸ-ವಂಚನೆಗಳ ಕುರಿತು ನ್ಯಾಯಾಂಗ ತನಿಖೆಯನ್ನು ನಡೆಸುವುದು.  

ಕೃಷಿಯನ್ನು ಪುನಶ್ಚೇತನಗೊಳಿಸುವುದು

ಕೃಷಿ ಬಿಕ್ಕಟ್ಟನ್ನು ಹಿಮ್ಮೆಟ್ಟಿಸಲು, ಕೃಷಿ ಬೆಳವಣಿಗೆಯನ್ನು ಪುನಶ್ಚೇತನಗೊಳಿಸಲು ಮತ್ತು ರೈತರ ಆದಾಯ ಹೆಚ್ಚಳವನ್ನು ಖಾತ್ರಿಪಡಿಸಲು  ಸಿ.ಪಿ.ಐ.(ಎಂ) ಈ ಕೆಳಕಂಡ ನಿರ್ದಿಷ್ಟ ಕ್ರಮಗಳನ್ನು ಪ್ರತಿಪಾದಿಸುತ್ತದೆ. 

•           ಕೃಷಿ ಉತ್ಪನ್ನಗಳಿಗೆ, ಸಮಗ್ರ ಉತ್ಪಾದನಾ ವೆಚ್ಚದ ಕನಿಷ್ಟ ಒಂದೂವರೆ ಪಟ್ಟು (ಸಿ2+ಶೇ.50) ಕನಿಷ್ಟ ಬೆಂಬಲ ಬೆಲೆ(ಎಂ.ಎಸ್.ಪಿ.)ಯನ್ನು ಖಾತ್ರಿಪಡಿಸುವುದು. 

•           ಕನಿಷ್ಟ ಬೆಂಬಲ ಬೆಲೆಯ ಸೌಲಭ್ಯವನ್ನು ಪಡೆಯುವ ಕೃಷಿ ಉತ್ಪನ್ನಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ, ಎಂ.ಎಸ್.ಪಿ. ಸೌಲಭ್ಯವನ್ನು ವಿಸ್ತರಿಸುವುದು. ಎಲ್ಲ ರಾಜ್ಯಗಳಲ್ಲೂ ಕೃಷಿ ಉತ್ಪನ್ನಗಳ ಪರಿಣಾಮಕಾರಿ ಖರೀದಿ ವ್ಯವಸ್ಥೆಯನ್ನು ಖಾತ್ರಿಪಡಿಸುವುದು; ಮೂರು ವರ್ಷಗಳ ಒಳಗಾಗಿ ಭಾರತ ದೇಶದಲ್ಲಿ ಎ.ಪಿ.ಎಂ.ಸಿ. ಮಂಡಿಗಳ ಸಂಖ್ಯೆಯನ್ನು 10,000 ಕ್ಕೆ ಹೆಚ್ಚಿಸುವುದು. 

•           ಸರಕಾರದ ಸಹಾಯಧನವನ್ನು ಹೆಚ್ಚಿಸುವ ಮೂಲಕ ಹಾಗೂ ದೈತ್ಯ ಕಾರ್ಪೋರೇಟ್ ಲಾಬಿಯನ್ನು ನಿಯಂತ್ರಿಸುವ ಮೂಲಕ, ಬೀಜ, ರಸಗೊಬ್ಬರ, ಕ್ರಿಮಿನಾಶಕಗಳು, ಡೀಸೆಲ್, ನೀರು ಮತ್ತು ವಿದ್ಯುತ್ ಮುಂತಾದ ಕೃಷಿಗೆ ಅಗತ್ಯ ಒಳಹರಿವುಗಳ  ವೆಚ್ಚವನ್ನು ತೀವ್ರವಾಗಿ ಕಡಿತಗೊಳಿಸುವುದು.

•           ನೀರಾವರಿಗೆ ಮತ್ತು ಗ್ರಾಮೀಣ ಮಾರುಕಟ್ಟೆ ಮೂಲಸೌಕರ್ಯಗಳಿಗೆ ವಿಶೇಷ ಆದ್ಯತೆಯನ್ನು ನೀಡುತ್ತಾ, ಮೂರು ವರ್ಷಗಳಲ್ಲಿ ಕೃಷಿಯ ಮೇಲಿನ ಸರಕಾರದ ಹೂಡಿಕೆಯನ್ನು ಎರಡು ಪಟ್ಟು ಮಾಡುವುದು.  ಎಲ್ಲ ಬಗೆಯ ಜಲಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಏಕೀಕೃತವಾದ  ಜಲಸಂಪನ್ಮೂಲ ನಿರ್ವಹಣೆ(IWRM)ಗೆ ಗಮನ ನೀಡುವುದು.

•           ಕೃಷಿಗೆ ಸಕಾಲಿಕವಾದ ಮತ್ತು ಅಗತ್ಯ ಪ್ರಮಾಣದ ಕಡಿಮೆ ಬಡ್ಡಿದರದ ಸಾಂಸ್ಥಿಕ ಸಾಲ (ಬ್ಯಾಂಕ್-ಸಹಕಾರಿ ಸಂಘಗಳ ಮುಂತಾದವುಗಳ ಸಾಲ) ಸಿಗುವುದನ್ನು ಖಾತ್ರಿ ಪಡಿಸುವುದು. ಕೃಷಿ ಕ್ಷೇತ್ರದ ಸಾಂಸ್ಥಿಕ ಸಾಲ ಸೌಲಭ್ಯವು ಕಾರ್ಪೋರೇಟ್ ಹಿತಾಸಕ್ತಿಗಳ ಕಡೆಗೆ ಹರಿದು ಹೋಗದಂತೆ ಮಾರ್ಗಸೂಚಿಗಳಲ್ಲಿ ಅಗತ್ಯ ಮಾರ್ಪಾಟು ಮಾಡುವುದು; ಸಣ್ಣ ಮತ್ತು ಅತಿಸಣ್ಣ ಅಂಚಿನ ರೈತರಿಗೆ ಕೃಷಿ ಸಾಲದ ದೊಡ್ಡ ಭಾಗ ದೊರೆಯುವಂತೆ ಗುರಿ ನಿಗದಿ ಕ್ರಮವನ್ನು ಜಾರಿಗೆ ತರುವುದು.

•           ಭಾರತದಲ್ಲಿ ಸಹಕಾರಿ ಸಾಲ ಸೌಲಭ್ಯ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವುದು; ಸಾಲ ನೀಡುವ ಸಹಕಾರ ಸಂಘಗಳು ಪ್ರಜಾಸತ್ತಾತ್ಮಕವಾಗಿ ನಡೆಯುವುದನ್ನು ಮತ್ತು ನಿಯಮಿತವಾಗಿ ಚುನಾವಣೆಗಳು ನಡೆಸುವುದನ್ನು ಖಾತ್ರಿ  ಪಡಿಸುವುದು.

•           ಪೋಷಕಾಂಶ ಆಧಾರಿತವಾದ ರಸಗೊಬ್ಬರ ಸಹಾಯಧನ ಪದ್ಧತಿಯನ್ನು ರದ್ದು ಮಾಡುವುದು; ಗುಣಮಟ್ಟದ ಕೃಷಿ ಅಗತ್ಯ ಒಳಹರಿವುಗಳು, ಸುಲಭ ದರದಲ್ಲಿ ದೊರೆಯುವುದನ್ನು ಖಾತ್ರಿಪಡಿಸಲು ಕೃಷಿ ಸಹಾಯಧನವನ್ನು ಗಣನೀಯವಾಗಿ ಹೆಚ್ಚಿಸುವುದು ಮತ್ತು ರಸಗೊಬ್ಬರ ಬೆಲೆ ನಿಯಂತ್ರಣ ಕ್ರಮಗಳನ್ನು ಮರಳಿ ಜಾರಿಗೆ ತರುವುದು.

•           ಕೃಷಿ ಕ್ಷೇತ್ರದಲ್ಲಿನ ದೊಡ್ಡ ಬಂಡವಾಳಗಾರ ಸಂಸ್ಥೆಗಳಿಗೆ ಅನುಕೂಲವಾಗುವಂತೆ ‘ಬೌದ್ಧಿಕ ಆಸ್ತಿ ಹಕ್ಕು’ ವ್ಯವಸ್ಥೆಗೆ ತರಲಾಗಿರುವ ಬದಲಾವಣೆಗಳನ್ನು ಹಿಂದೆ ಪಡೆಯುವುದು; ಬೀಜಗಳ ಬೆಲೆ, ರಾಯಧನಗಳು, ಬೀಜ ಉತ್ಪಾದನೆಯ ಮೇಲಿನ ರೈತರ ಹಕ್ಕುಗಳು ಮತ್ತು ಜೀವ ವೈವಿಧ್ಯದ ಸಂರಕ್ಷಣೆಗಳಿಗೆ ಸಂಬAಧಿಸಿದAತೆ ಖಾಸಗಿ ಕೃಷಿ ಸಂಶೋಧನೆಗಳನ್ನು ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಖಾತ್ರಿಪಡಿಸುವುದು.  .

•           ಭಾರತ-ಆಗ್ನೇಯ ಏಷ್ಯಾ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (India-ASEAN FTA), ಭಾರತ-ಯೂರೋಪಿಯನ್ ದೇಶಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (India-EU FTA) ಗಳಂತಹ ಅಸಮಾನತೆಯ ಮತ್ತು ಶೋಷಣಾತ್ಮಕವಾದ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಮುಕ್ತ ವಾಣಿಜ್ಯ ಒಪ್ಪಂದಗಳನ್ನು ರದ್ದುಗೊಳಿಸುವುದು;  ಯಾವುದೇ ವಾಣಿಜ್ಯ ಒಪ್ಪಂದವು ಭಾರತದ ಆರ್ಥಿಕ ಸಾರ್ವಭೌಮತೆ ಮತ್ತು ಸಹಕಾರಿ ಒಕ್ಕೂಟ ತತ್ವವನ್ನು ರಕ್ಷಿಸುವುದನ್ನು ಖಾತ್ರಿ ಪಡಿಸುವುದು.  

ಭೂಮಿಯ ಪ್ರಶ್ನೆ

ಸಿ.ಪಿ.ಐ.(ಎಂ.) ಇದನ್ನು ಪ್ರತಿಪಾದಿಸುತ್ತದೆ.

•           ಕಾರ್ಪೋರೇಟ್ ಕಂಪನಿಗಳು ಮತ್ತು ದೊಡ್ಡ ಕೃಷಿ ವಾಣಿಜ್ಯ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು ಭೂಮಿತಿ ಕಾಯ್ದೆಯನ್ನು ದುರ್ಬಲಗೊಳಿಸಲಾಗಿರುವುದನ್ನು ಹಿಂಪಡೆಯುವುದು. 

•           ಭೂಸುಧಾರಣೆ (ಭೂಮಿ ಮರುಹಂಚಿಕೆ)ಯನ್ನು ಅತ್ಯಂತ ತ್ವರಿತವಾಗಿ ಮತ್ತು ಸಮಗ್ರವಾಗಿ ಜಾರಿಗೊಳಿಸುವ ಕ್ರಮಗಳನ್ನು ಖಾತ್ರಿಪಡಿಸುವುದು; ಭೂಮಿತಿಗಿಂತಲೂ ಹೆಚ್ಚುವರಿಯಾದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಮತ್ತು ಆ ರೀತಿ ಸ್ವಾಧೀನ ಪಡಿಸಿಕೊಂಡ ಹೆಚ್ಚುವರಿ ಭೂಮಿಯನ್ನು ತಕ್ಷಣ ಪುನರ್ ಹಂಚಿಕೆ ಮಾಡಲು ರಾಜ್ಯ ಸರಕಾರಗಳಿಗೆ ಪ್ರೋತ್ಸಾಹ ನೀಡುವುದು; ಭೂಮಿ ಹಂಚಿಕೆಯಲ್ಲಿ ಎಸ್.ಸಿ. ಮತ್ತು ಎಸ್.ಟಿ. ಸಮುದಾಯಗಳಿಗೆ ಆದ್ಯತೆ ನೀಡುವುದನ್ನು ಖಾತ್ರಿಪಡಿಸುವುದು; ಭೂ ಮಾಲಿಕತ್ವದಲ್ಲಿ ಮಹಿಳೆಯರಿಗೂ ಸಮಾನ ಹಕ್ಕು ದೊರೆಯುವಂತೆ ಜಂಟಿ ಪಟ್ಟಾ ನೀಡುವುದನ್ನು ಖಾತ್ರಿ ಪಡಿಸುವುದು;  ಹೊಸ  ಭೂನ್ಯಾಯಮಂಡಳಿಗಳ ರಚನೆಯ ಮೂಲಕ ತ್ವರಿತವಾಗಿ ಕಾಲಮಿತಿಯಲ್ಲಿ ಭೂ ವ್ಯಾಜ್ಯಗಳನ್ನು ಪರಿಹರಿಸಿ, ಭೂಮಿ ಪ್ರಶ್ನೆಯನ್ನು ಇತ್ಯರ್ಥ ಪಡಿಸಲು  ರಾಜ್ಯ ಸರಕಾರಗಳಿಗೆ ಹೆಚ್ಚುವರಿ ನಿಧಿಯನ್ನು ನೀಡುವುದು.   

•           ಎಲ್ಲ ಗೇಣಿದಾರರನ್ನು ನೋಂದಾಯಿಸುವುದನ್ನು ಖಾತ್ರಿ ಪಡಿಸುವುದು; ಎಲ್ಲ ರಾಜ್ಯಗಳಲ್ಲಿ ಗೇಣಿದಾರರ ಹಕ್ಕುಗಳನ್ನು ರಕ್ಷಿಸುವುದು; ಉಳುಮೆ ಪರವಾನಗಿ ಚೀಟಿ (Licensed Cultivator Cards) ಯ ಮೂಲಕ ಗೇಣಿದಾರರಿಗೆ ಕೃಷಿ ಸಹಾಯಧನ, ವಿಮಾ ಯೋಜನೆ ಮತ್ತು ಆದಾಯಗಳ ಸವಲತ್ತುಗಳÀನ್ನು ಖಾತ್ರಿ ಪಡಿಸುವುದು. 

•           ‘ಭೂ ಸ್ವಾಧೀನದಲ್ಲಿ ಪಾರದರ್ಶಕತೆ ಮತ್ತು ನ್ಯಾಯಬದ್ಧ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ವ್ಯವಸ್ಥೆ ಕಾಯ್ದೆ-2013’ಕ್ಕೆ, ಭೂ ಸ್ವಾಧೀನ ಮಾಡಬೇಕಾಗುವ ಯಾವುದೇ ಕಾಯ್ದೆಗಳಿಗೂ ಅದು ಸಾರ್ವತ್ರಿಕವಾಗಿ ಅನ್ವಯವಾಗುವಂತೆ ತಿದ್ದುಪಡಿ ತರುವುದು; ಭೂ ಸ್ವಾಧೀನದ ಎಲ್ಲ ಬಾಧಿತ ಜನರೂ, ಸಾಕಷ್ಟು ಮುಂಚಿತವಾಗಿ ಮತ್ತು ಪೂರ್ಣವಾಗಿ   ಮಾಹಿತಿ ಪಡೆದು ಒಪ್ಪಿಗೆ ನೀಡಿರುವುದನ್ನು ಖಾತ್ರಿ ಪಡಿಸುವುದು, ‘ಸಾರ್ವಜನಿಕ ಉದ್ದೇಶ’ ಎಂಬುದನ್ನು ಸರಿಯಾಗಿ ವ್ಯಾಖ್ಯಾನಿಸುವುದು, ಭೂಸ್ವಾಧೀನದ ಸಾಮಾಜಿಕ ಪರಿಣಾಮದ ಅಂದಾಜು ಮಾಡುವುದನ್ನು ಕಡ್ಡಾಯಗೊಳಿಸುವುದು ಮತ್ತು ಭೂಸ್ವಾಧೀನದ ಬಾಧಿತರು ಉತ್ತಮ ಜೀವನ ನಡೆಸಲು ಸಾಧ್ಯವಾಗುವಂತೆ ಮತ್ತು  ಭೂಮಿಯ ಮೌಲ್ಯವರ್ಧನೆಯಲ್ಲಿ  ಪಾಲು ಪಡೆಯುವಂತೆ, ಭೂ ಸ್ವಾಧೀನ ಪರಿಹಾರ ಹಾಗೂ ಪುನರ್ವಸತಿ ಕ್ರಮಗಳನ್ನು ಖಾತ್ರಿ ಪಡಿಸುವುದು.  

•           ಹುಲ್ಲುಗಾವಲು, ಸಾಮುದಾಯಿಕ ಅರಣ್ಯ, ಕುರುಚಲು ಕಾಡು ಮುಂತಾದ ಸಾರ್ವಜನಿಕ ಭೂಮಿಯನ್ನು ಅತಿಕ್ರಮಣ ಮಾಡದಂತೆ ಪಡೆಯುವುದು. 

•           ಸಾರ್ವಜನಿಕ ಟ್ರಸ್ಟ್ ನಲ್ಲಿ ಇರುವ ಸರಕಾರದ ಮತ್ತು ಸಾರ್ವಜನಿಕ ಸಂಸ್ಥೆಗಳ ಎಲ್ಲ ಭೂಮಿಯನ್ನು ಗುತ್ತಿಗೆ, ಮಾರಾಟ, ವರ್ಗಾವಣೆ ಅಥವಾ ಇನ್ನೂ ಯಾವುದೇ ವಿಧಾನಗಳ ಮೂಲಕ ಖಾಸಗಿಯವರಿಗೆ ಹಸ್ತಾಂತರಿಸದಂತೆ ಸಂರಕ್ಷಿಸುವುದು.

•           ಕೃಷಿಯೋಗ್ಯವಾದ ಬೀಳುಭೂಮಿಯನ್ನು ಭೂಹೀನ ಮತ್ತು ಬಡ ರೈತ ಕುಟುಂಬಗಳಿಗೆ ಉಚಿತವಾಗಿ ಹಂಚುವುದು;  ಈ ಭೂ ವಿತರಣೆಯಲ್ಲಿ ಎಸ್.ಸಿ. ಮತ್ತು ಎಸ್.ಟಿ. ಸಮುದಾಯಗಳಿಗೆ ಅದ್ಯತೆ ನೀಡುವುದು ಮತ್ತು ಮಹಿಳೆಯರಿಗೆ ಸಮಾನ ಹಕ್ಕು ನೀಡುವಂತೆ ಜಂಟಿ ಪಟ್ಟಾ ನೀಡುವುದು. 

•           ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲ ಭೂ ಹೀನರಿಗೆ ಹಿತ್ತಲು ಸಹಿತವಾದ ಮನೆ ನಿವೇಶನವನ್ನು ನೀಡುವುದು. 

•           ಯಾವೆಲ್ಲ ರಾಜ್ಯಗಳಲ್ಲಿ ಗೇಣಿದಾರರ ನೋಂದಣಿ ಆಗಿಲ್ಲವೋ ಅಲ್ಲಿ, ಗೇಣಿದಾರರ ನೋಂದಾವಣೆ ಮಾಡುವುದು ಮತ್ತು ಗೇಣಿದಾರರ ಹಕ್ಕುಗಳನ್ನು ರಕ್ಷಿಸುವುದು.

ಆಹಾರ ಭದ್ರತೆ

ಹಸಿವು ಮುಕ್ತ ಭಾರತದ ನಿರ್ಮಾಣಕ್ಕಾಗಿ ಸಿಪಿಐ(ಎಂ) ಇವುಗಳಿಗಾಗಿ ಶ್ರಮಿಸುತ್ತದೆ. 

•           ಪ್ರಸಕ್ತ ಗುರಿ ನಿರ್ದೇಶಿತ ಪಡಿತರ ಪದ್ದತಿಯನ್ನು ರದ್ದುಪಡಿಸುವುದು ಮತ್ತು ಆದಾಯ ತೆರಿಗೆ ಪಾವತಿಸುವವರನ್ನು ಹೊರತುಪಡಿಸಿದ, ಸುಧಾರಿತವಾದ ಮತ್ತು ಸದೃಢವಾದ ಸಾರ್ವತ್ರಿಕ (ಪಡಿತರ) ವಿತರಣಾ ಪದ್ದತಿಯನ್ನು, ಆಧಾರ್ ಸಂಖ್ಯೆಗೆ ಸಂಪರ್ಕ ಅಗತ್ಯ ಇಲ್ಲದಂತೆ ಜಾರಿಗೆ ತರುವುದು. 

•           ಪ್ರತಿ ವ್ಯಕ್ತಿಗೆ 5 ಕೆ.ಜಿ. ಉಚಿತ ಮತ್ತು 5 ಕೆ.ಜಿ. ಕಡಿಮೆ ದರದ ಆಹಾರಧಾನ್ಯವನ್ನು, ಒಟ್ಟು 10 ಕೆ.ಜಿ. ಆಹಾರಧಾನ್ಯವನ್ನು ನೀಡುವುದು.

•           ಈ ನಿಟ್ಟಿನಲ್ಲಿ ರಾಜ್ಯ ಸರಕಾರಗಳ ಕ್ರಮಗಳನ್ನು ಬೆಂಬಲಿಸುವುದು. 

•           ಆಹಾರಧಾನ್ಯಗಳ ಜೊತೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಬೇಳೆಕಾಳುಗಳು, ಅಡುಗೆ ಎಣ್ಣೆ, ಸಕ್ಕರೆ, ಸೀಮೆಎಣ್ಣೆಯಂತಹ ಜೀವನಾವಶ್ಯಕ ವಸ್ತುಗಳನ್ನು ನಿಯಂತ್ರಿತ ಬೆಲೆಗಳಲ್ಲಿ ಒದಗಿಸುವುದು.

•           ಐ.ಸಿ.ಡಿ.ಎಸ್. ಮತ್ತು ಮಧ್ಯಾಹ್ನದ ಊಟದ ಯೋಜನೆಯಲ್ಲಿ, ಪೌಷ್ಟಿಕದಾಯಕ ಬಿಸಿಯೂಟ ನೀಡುವುದನ್ನು ಖಾತ್ರಿಪಡಿಸಲು ಆಹಾರಧಾನ್ಯಕ್ಕೆ   ಹೆಚ್ಚಿನ ಅನುದಾನ ನೀಡುವುದು; ಈ ಯೋಜನೆಗಳನ್ನು ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ತಂದು ಕಾಯ್ದೆಬದ್ಧ ಹಕ್ಕು ನೀಡುವುದು.  

•           ಗರ್ಭಿಣಿ ಮಹಿಳೆಯರಿಗೆ ಯಾವುದೇ ಷರತ್ತುಗಳಿಲ್ಲದಂತೆ ಆಹಾರ ಭದ್ರತಾ ಕಾಯ್ದೆಯ ಭತ್ಯೆಯಾಗಿ 6.000 ರೂಪಾಯಿಗಳನ್ನು ನೀಡುವುದು.

•           ವಲಸೆ ಕಾರ್ಮಿಕರು, ನಿರ್ಗತಿಕರು, ವಿಧವೆಯರು, ಅಂಗವಿಕಲರು ಮುಂತಾದ ಅಶಕ್ತ ಜನ ವಿಭಾಗಗಳಿಗೆ ಉಚಿತ ಊಟದ ಮನೆಗಳಂತಹ ಸೌಲಭ್ಯವನ್ನು ಒದಗಿಸಲು ವಿಶೇಷ ಕ್ರಮಗಳನ್ನು ವಹಿಸುವುದು. 

•           ದೂರದ ಗುಡ್ಡಗಾಡು ಪ್ರದೇಶಗಳ ಆದಿವಾಸಿಗಳು ಮತ್ತು ಅವಕಾಶವಂಚಿತ ಜನವಿಭಾಗಗಳಿಗೆ ಸುಲಭವಾಗಿ ಸಿಗುವುವಂತೆ ಪಡಿತರ ವ್ಯವಸ್ಥೆಯನ್ನು ಬಲಪಡಿಸಿ ಆಹಾರ ಭದ್ರತೆಯನ್ನು ಖಾತ್ರಿಪಡಿಸುವುದು.

•           ವರ್ಷಕ್ಕೆ  12 ಅಡುಗೆ ಅನಿಲ ಸಿಲಿಂಡರ್‌ಗಳನ್ನು ಆಧಾರ್ ಸಂಪರ್ಕದ ಷರತ್ತಿಲ್ಲದೇ, ರಿಯಾಯತಿ ದರದಲ್ಲಿ ನೀಡುವುದು.

•           ಆಹಾರಧಾನ್ಯಗಳಿಗೆ ಬದಲಾಗಿ ಹಣದ ವರ್ಗಾವಣೆ ಮಾಡಬಾರದು. ಆಹಾರ ಧಾನ್ಯವನ್ನೇ ನೀಡಬೇಕು.

ಬೆಲೆ ಏರಿಕೆಯ ನಿಯಂತ್ರಣ

ಸಿ.ಪಿ.ಐ.(ಎಂ) ಪಕ್ಷವು ಅವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಈ ಕೆಳಕಂಡ ಸರಣಿ ಕ್ರಮಗಳನ್ನು ಸೂಚಿಸುತ್ತದೆ.

•           ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ರದ್ದುಪಡಿಸಿದ ಕ್ರಮವನ್ನು ವಾಪಸ್ ಪಡೆಯಬೇಕು ಹಾಗೂ ಆಡಳಿತಾತ್ಮಕ ಬೆಲೆ ನಿಯಂತ್ರಣದ ವ್ಯವಸ್ಥೆಯನ್ನು ಜಾರಿಗೆ ತರಬೇಕು.

•           ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಆಮದು ಸುಂಕ ಮತ್ತು ಕೇಂದ್ರೀಯ ತೆರಿಗೆಯನ್ನು ಕಡಿತ ಮಾಡಬೇಕು.

•           ನೈಸರ್ಗಿಕ ಅನಿಲದ ಬೆಲೆಯನ್ನು ಹಾಗೂ ಸಹಾಯಧನ ಆಧಾರಿತ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ನಿಯಂತ್ರಿಸಬೇಕು. .

•           ಪಾರ್ಲಿಮೆಂಟಿನ ಸ್ಥಾಯಿ ಸಮಿತಿಯ ಶಿಫಾರಸ್ಸಿನಂತೆ ಕೃಷಿ ಉತ್ಪನ್ನಗಳಲ್ಲಿ ಭವಿಷ್ಯತ್ತಿನ ವ್ಯಾಪಾರವೆಂಬ (ಫ್ಯೂಚರ್ ಟ್ರೇಡಿಂಗ್) ಜೂಜಾಟವನ್ನು ನಿಷೇಧಿಸಬೇಕು.

•           ಜೀವನಾವಶ್ಯಕ ವಸ್ತುಗಳ ಕಾಯ್ದೆಯ ನಿಯಮಗಳನ್ನು ಬಲಪಡಿಸುವುದು ಮತ್ತು ಅಕ್ರಮ ದಾಸ್ತಾನುಗಾರರು ಮತ್ತು  ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದು.  

•           ಖಾಸಗಿ ಉಗ್ರಾಣ ಮತ್ತು ಸಂಗ್ರಹಾಗಾರಗಳಲ್ಲಿ ಆಹಾರಧಾನ್ಯಗಳನ್ನು ಶೇಖರಿಸಿರುವುದನ್ನು ಬಯಲಿಗೆಳೆಯುವ ಕ್ರಮಗಳನ್ನು ಬಲಗೊಳಿಸುವುದು.

•           ಸಾರ್ವಜಿನಿಕ ಪಡಿತರ ವ್ಯವಸ್ಥೆಯನ್ನು ಬಲಪಡಿಸುವುದು, ತುರ್ತುಕಾಲಕ್ಕಾಗಿ ಸಂಗ್ರಹಿಸಿದ  ಆಹಾರಧಾನ್ಯಗಳನ್ನು ನ್ಯಾಯೋಚಿತವಾದ ರೀತಿಯಲ್ಲಿ ಬಿಡುಗಡೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆಗೆ ತಡೆ ಒಡ್ಡುವುದು. 

•           ಆಹಾರಧಾನ್ಯಗಳ ಬೆಲೆ ಹೆಚ್ಚಿರುವಾಗ ಮತ್ತು ಏರುತ್ತಿರುವಾಗ ಆಹಾರಧಾನ್ಯಗಳ ರಫ್ತನ್ನು ನಿಯಂತ್ರಿಸುವುದು. 

•           ಅವಶ್ಯಕ ಔಷಧಗಳ ಬೆಲೆಯ ನಿಯಂತ್ರಣವನ್ನು ಖಾತ್ರಿಪಡಿಸುವುದು.

ವಿದೇಶಾಂಗ ನೀತಿ

ಸಿಪಿಐ(ಎಂ) ಇವುಗಳನ್ನು ಪ್ರತಿಪಾದಿಸುತ್ತದೆ.

•           ಒಂದು ಸ್ವತಂತ್ರವಾದ ಮತ್ತು ಅಲಿಪ್ತ ವಿದೇಶಾಂಗ ನೀತಿ; ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನಡುವೆ ಸಹಕಾರಕ್ಕೆ ಪ್ರೋತ್ಸಾಹ ಹಾಗೂ ಬಹುದ್ರುವೀಯತೆಯನ್ನು ಬಲಪಡಿಸುವುದು.

•           ಯು.ಎಸ್ ದೊಂದಿಗಿನ ವ್ಯೂಹಾತ್ಮಕ ಮೈತ್ರಿಯಿಂದ ಹೊರಬರುವುದು ಮತ್ತು ಸಾರ್ವಭೌಮ ದೇಶಗಳ ಮೇಲೆ ದಿಗ್ಬಂಧನ ಹೇರುವುದು, ಹಸ್ತಕ್ಷೇಪ ಮಾಡುವುದು, ಮತ್ತು ಸರಕಾರಗಳನ್ನು ಬದಲಾಯಿಸುವುದು ಮುಂತಾದವುಗಳನ್ನು ಮಾಡುವ ಯು.ಎಸ್ ನ ನೀತಿಗಳನ್ನು ವಿರೋಧಿಸುವುದು.

•           ಭಾರತ ದೇಶದ ಸಾರ್ವಭೌಮತೆಯ ವಿಷಯದಲ್ಲಿ ರಾಜಿಮಾಡಿಕೊಳ್ಳುವ ಮತ್ತು ಭಾರತದ ಹಿತಾಸಕ್ತಿಗಳಿಗೆ ಹಾನಿಕಾರಕವಾದ, ಅಮೆರಿಕದೊಂದಿಗಿನ ಎಲ್ಲ ಮೂಲಭೂತ ಒಪ್ಪಂದಗಳಿಂದ ಹೊರಬರುವುದು.

•           ಇಸ್ರೇಲ್‌ನೊಂದಿಗಿನ ಎಲ್ಲ ರಕ್ಷಣಾ ಮತ್ತು ಸೈನಿಕ ಒಪ್ಪಂದಗಳನ್ನು ರದ್ದುಪಡಿಸುವುದು ಮತ್ತು ವಿಶ್ವಸಂಸ್ಥೆಯು ಇಸ್ರೇಲ್‌ನ ಮೇಲೆ ದಿಗ್ಬಂಧನ ವಿಧಿಸಬೇಕೆಂದು ಒತ್ತಾಯಿಸುವುದು.

•           ಪೂರ್ವ ಜೆರುಸಲೇಮ್ ಅನ್ನು ರಾಜಧಾನಿಯಾಗಿ ಉಳ್ಳಂತಹ ರೀತಿಯಲ್ಲಿ, 1967 ಕ್ಕೂ ಮುಂಚಿನ ಗಡಿರೇಖೆಗಳ ಸ್ಥಿತಿಯಲ್ಲಿ ಪ್ಯಾಲಿಸ್ಟೇನ್ ದೇಶವನ್ನು ಸ್ಥಾಪನೆ ಮಾಡುವುದು. 

•           ನಮ್ಮ  ನೆರೆಯ ಎಲ್ಲ ದೇಶಗಳೊಂದಿಗಿನ ಸಂಬAಧಗಳನ್ನು ಬಲಪಡಿಸುವುದು. ಹಾಗೆಯೇ ಪರಸ್ಪರರಿಗೆ ಅನುಕೂಲವಾಗುವ ಹಾಗೆ ಸಾಮಾನ್ಯ ಸಂಪನ್ಮೂಲಗಳನ್ನು ಹಂಚಿಕೊಳ್ಳುವಂತೆ ವಿವಿಧ ಪ್ರಶ್ನೆಗಳನ್ನು ಬಗೆಹರಿಸಿಕೊಳ್ಳುವುದು. 

•           ಚೀನಾ ದೇಶದೊಂದಿಗಿನ ಗಡಿ ವಿವಾದಗಳಿಗೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವುದು ಹಾಗೂ ಚೀನಾದೊಂದಿಗೆ ಎಲ್ಲ ರೀತಿಯ ಸಂಬಂಧಗಳನ್ನು ಪ್ರೋತ್ಸಾಹಿಸುವುದು.

•           ಗಡಿಯಾಚೆಗಿನ  ಭಯೋತ್ಪಾದನೆ ಸೇರಿದಂತೆ, ಎಲ್ಲ ಪ್ರಮುಖ ಪ್ರಶ್ನೆಗಳ ಪರಿಹಾರಕ್ಕಾಗಿ ಮತ್ತು ಜನತೆ-ಜನತೆ ನಡುವಿನ ಕ್ರೀಡಾ ಸಾಂಸ್ಕೃತಿಕ  ಸಂಬಂಧಗಳನ್ನು ಪ್ರೋತ್ಸಾಹಿಸಲು ಪಾಕಿಸ್ತಾನದೊಂದಿಗಿನ ಮಾತುಕತೆಗಳನ್ನು ಪುನರಾರಂಭಿಸುವುದು.

•           ಶ್ರೀಲಂಕಾದ ತಮಿಳು ಮಾತನಾಡುವ ಜನರು ಐಕ್ಯ  ದೇಶದೊಳಗೆ, ಉತ್ತರ ಮತ್ತು ಈಶಾನ್ಯ ಭಾಗದಲ್ಲಿ ತಮ್ಮದೇ ಆದ ಸ್ವಾಯತ್ತತೆ ಹೊಂದಲು ಅವಕಾಶವಾಗುವಂತೆ ಅಧಿಕಾರ ಹಂಚಿಕೆ ಏರ್ಪಾಟು ಮಾಡುವ ಬಗೆಗೆ ಶ್ರೀಲಂಕಾದ ಸರಕಾರದೊಂದಿಗೆ ಮಾತುಕತೆ ನಡೆಸುವುದು.

ಭದ್ರತೆಗೆ ಸಂಬಂಧಿಸಿದ ವಿಷಯಗಳು

ಸಿಪಿಐ(ಎಂ) ಈ ಕೆಳಗಿನ ನೀತಿಗಳಿಗಾಗಿ ಶ್ರಮಿಸುತ್ತದೆ.

•           ಭಾರತ-ಅಮೆರಿಕ ರಕ್ಷಣಾ ಚೌಕಟ್ಟು ಒಪ್ಪಂದ, ಕ್ವಾಡ್ (QUAD) ಮತ್ತು  I2U2 ಒಪ್ಪಂದಗಳಿಂದ ಹೊರಬರುವುದು.

•           ನಿರ್ದಿಷ್ಟವಾಗಿ ಅಣ್ವಸ್ತçಗಳನ್ನು ಸಂಗ್ರಹಿಸಿಡಲಾಗಿರುವ ಹಿಂದೂ ಮಹಾಸಾಗರದ  ಡಿಯಗೋ ಗಾರ್ಸಿಯಾದಲ್ಲಿನ ಅಮೆರಿಕದ ಮಿಲಿಟರಿ ನೆಲೆ ಸೇರಿದಂತೆ ನಮ್ಮ ಪ್ರದೇಶದಲ್ಲಿನ ಎಲ್ಲ ಮಿಲಿಟರಿ ನೆಲೆಗಳನ್ನು ತೆಗೆದುಹಾಕುವುದು.

•           ಜೈವಿಕ ಅಸ್ತ್ರ ಮತ್ತು ರಾಸಾಯನಿಕ ಅಸ್ತ್ರಗಳು ಸೇರಿದಂತೆ ಎಲ್ಲ ಸಮೂಹ ನಾಶಕ ಅಸ್ತ್ರಗಳನ್ನು ಮತ್ತು ಅಣ್ವಸ್ತ್ರಗಳನ್ನು ಸಂಪೂರ್ಣವಾಗಿ ನಾಶ ಪಡಿಸುವುದು.

•           ಜಗತ್ತಿನ ಎಲ್ಲೇ ಆಗಲಿ ಮಿಲಿಟರಿ ಮಧ್ಯಪ್ರವೇಶ ಅಥವಾ ಯುದ್ಧ ನಡೆಸುತ್ತಿರುವ ದೇಶಗಳಿಗೆ, ಇಂಧನವನ್ನು ಮರು ಭರ್ತಿ  ಮಾಡಿಕೊಳ್ಳಲು ಮತ್ತು ನಿಲ್ದಾಣವಾಗಿ ಬಳಸಲು ಭಾರತದ ನೌಕಾಪಡೆ ಮತ್ತು ವಾಯುಪಡೆ ಹಾಗೂ ಸೈನ್ಯದ ನೆಲೆ ಮತ್ತು ಸೌಲಭ್ಯಗಳು ದೊರೆಯದಂತೆ ನಿರಾಕರಿಸುವುದು. 

•           ಧ್ರುವ ಪ್ರದೇಶಗಳು ಮತ್ತು ಬಾಹ್ಯಾಕಾಶಗಳು ಮಿಲಿಟರೀಕರಣಗೊಳ್ಳಲು ಅವಕಾಶ ನೀಡದಿರುವುದು.

•           ಯಾವುದೇ ತಿಕ್ಕಾಟ-ಸಂಘರ್ಷಗಳನ್ನು ರಾಜತಾಂತ್ರಿಕ ವಿಧಾನದಲ್ಲಿ ಮಾತುಕತೆಗಳ ಮೂಲಕ ಮತ್ತು ಚರ್ಚೆಗಳ ಮೂಲಕ ಬಗೆಹರಿಸಿಕೊಳ್ಳಲು ಮತ್ತು ಸ್ನೇಹ ಸಂಬಂಧಗಳನ್ನು ಬೆಳೆಸಲು ಪ್ರೋತ್ಸಾಹಿಸುವುದು. 

•           ಸೈಬರ್ ಲೋಕವನ್ನು ಮಿಲಿಟರೀಕರಣದಿಂದ ಮುಕ್ತಗೊಳಿಸುವುದು; ಸೈಬರ್ ದಾಳಿಗಳು ಹಾಗೂ ಸೈಬರ್ ವಂಚನೆಗಳಿಂದ ರಕ್ಷಿಸುವುದು; ಎಲ್ಲ ವ್ಯಕ್ತಿಗಳ ಖಾಸಗಿತನವನ್ನು ರಕ್ಷಿಸುವುದು ಮತ್ತು ವ್ಯಕ್ತಿಗಳ ಮೇಲೆ ನಡೆಸುವ ಬೇಹುಗಾರಿಕೆ-ಗೂಢಚಾರಿಕೆ, ಕಣ್ಗಾವಲುಗಳಿಂದ ವ್ಯಕ್ತಿಗಳನ್ನು ರಕ್ಷಿಸುವುದು.  

•           ಮಿಲಿಟರಿ ಸಾಧನ-ಉಪಕರಣಗಳ ಖರೀದಿ ಮುಂತಾದ ವಿಷಯಗಳಲ್ಲಿ ಪಾರ್ಲಿಮೆಂಟಿನ ಮೇಲ್ವಿಚಾರಣೆ ಮತ್ತು ಉತ್ತರದಾಯಿತ್ವವನ್ನು ತರುವುದು. 

•           ವಿವಿಧ ಗುಪ್ತಚರ ಸಂಸ್ಥೆಗಳ ನಡುವಿನ ಒಂದು ಪರಿಣಾಮಕಾರಿಯಾದ ಸಮನ್ವಯದ ವ್ಯವಸ್ಥೆಯ ಮೂಲಕ ಮನುಷ್ಯ ಜೀವಗಳಿಗೆ ಆದ್ಯತೆ ನೀಡುವುದು ಮತ್ತು ಅವರನ್ನು ರಕ್ಷಿಸುವುದು ಮತ್ತು ಗಮನಾರ್ಹವಾದ ಗುಪ್ತಚರ ವರದಿಗಳ ಬಗೆಗೆ ತುರ್ತು ಕ್ರಮಗಳನ್ನು ಖಾತ್ರಿ ಪಡಿಸುವುದು. 

•           ಭಾರತದ ಭದ್ರತೆ ಮತ್ತು ರಕ್ಷಣಾ ಅಗತ್ಯಗಳನ್ನು ಪೂರೈಸುವಲ್ಲಿ ದೇಶವು ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಪ್ರಧಾನ ಪಾತ್ರ ವಹಿಸುವ ಸಾರ್ವಜನಿಕ ಉದ್ದಿಮೆಗಳ ರಕ್ಷಣಾ ಘಟಕಗಳನ್ನು ಬಲಗೊಳಿಸಿ ವಿಸ್ತರಿಸುವುದು ಮತ್ತು ಅಭಿವೃದ್ಧಿಪಡಿಸುವುದು.

•           ರಕ್ಷಣಾ ಖರೀದಿ ಮುಂತಾದ ವ್ಯವಹಾರಗಳಲ್ಲಿ ಭ್ರಷ್ಟಾಚಾರವನ್ನು ತಡೆಯಲು, ಉತ್ತರದಾಯಿತ್ವ ಮತ್ತು ಪಾರದರ್ಶಕತೆಗಳನ್ನು ಖಾತ್ರಿಪಡಿಸುವುದು; ಭ್ರಷ್ಟಾಚಾರದ ಪ್ರಕರಣಗಳಲ್ಲಿ ವಿಶೇಷವಾಗಿ ದೇಶದ ರಕ್ಷಣೆಯ ವಿಷಯದಲ್ಲಿನ ಪ್ರಕರಣಗಳಲ್ಲಿ ತ್ವರಿತ ಗತಿಯ ತನಿಖೆ, ವಿಚಾರಣೆ ಮತ್ತು ಶಿಕ್ಷೆಗಳನ್ನು ಖಾತ್ರಿ ಪಡಿಸುವುದು. 

ಜಮ್ಮು ಮತ್ತು ಕಾಶ್ಮೀರ

ಸಿಪಿಐ(ಎಂ) ಈ ಕ್ರಮಗಳಿಗೆ ಬದ್ಧವಾಗಿದೆ.

•           ಸಂವಿಧಾನದ 370 ನೇ ವಿಧಿ ಮತ್ತು 35ಎ ವಿಧಿಗಳನ್ನು ಪುನರ್‌ಸ್ಥಾಪಿಸುವುದು. ಲಡಾಕ್‌ಗೆ ಪ್ರಾದೇಶಿಕ ಸ್ವಾಯುತ್ತತೆಯನ್ನು ನೀಡಿ, ತಕ್ಷಣವೇ ರಾಜ್ಯದ ವಿಧಾನ ಸಭಾ ಚುನಾವಣೆಗಳನ್ನು ನಡೆಸುವುದು.

•           ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಸಂಬAಧಿಸಿದ ಎಲ್ಲ ಪಕ್ಷಗಳೊಂದಿಗೆ ಮಾತುಕತೆ ನಡೆಸುವ ಮೂಲಕ ರಾಜಕೀಯ ಪ್ರಕ್ರಿಯೆಯನ್ನು ತುರ್ತಾಗಿ ಆರಂಭಿಸುವುದು.

•           ಸಮಾಜದ ಎಲ್ಲ ವಿಭಾಗದ ಜನರೊಂದಿಗೆ ಮಾತುಕತೆ ನಡೆಸುವ ಮೂಲಕ ಮತ್ತು ಅವರ ನೈಜ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಕಾಶ್ಮೀರದ ಜನರಲ್ಲಿ ವಿಶ್ವಾಸ ಮೂಡಿಸುವ ಕ್ರಮಗಳನ್ನು ಆರಂಭಿಸುವುದು.

•           ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಮತ್ತು ಹಾನಿಗೊಳಗಾಗಿರುವ ಮೂಲಭೂತ ಸೌಕರ್ಯಗಳನ್ನು ಪುನರ್‌ನಿರ್ಮಿಸುವ ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಖಾತ್ರಿ ಪಡಿಸುವುದು.

ಸೇನಾ ಪಡೆಗಳ ವಿಶೇಷಾಧಿಕಾರ ಕಾಯ್ದೆ(AFSPA)ಯನ್ನು ಗಡಿ ಪ್ರದೇಶ ಬಿಟ್ಟು ಉಳಿದೆಲ್ಲ ಕಡೆಗಳಲ್ಲಿ ಹಿಂತೆಗೆದುಕೊಳ್ಳುವುದು.

ಈಶಾನ್ಯ ರಾಜ್ಯಗಳು

ಸಿಪಿಐ(ಎಂ) ಇವುಗಳಿಗೆ ಬದ್ಧವಾಗಿದೆ.

•           ಮಣಿಪುರದ ಸಂಘರ್ಷವನ್ನು ರಾಜಕೀಯ ಪರಿಹಾರದ ಮೂಲಕ ಕೊನೆಗೊಳಿಸುವುದು. ಇದಕ್ಕಾಗಿ ಮಣಿಪುರ ಮುಖ್ಯಮಂತ್ರಿಯನ್ನು ತೆಗೆದುಹಾಕುವುದು; ಎಲ್ಲ ಸಮುದಾಯಗಳಿಗೂ ಸಮಾನವಾದ ಹಕ್ಕುಗಳನ್ನು ನೀಡುವಂತಹ ಪರಿಹಾರ ರೂಪಿಸುವುದಕ್ಕಾಗಿ, ಸಂಬಂಧಿಸಿದ ಎಲ್ಲರೊಂದಿಗೆ ಮಾತುಕತೆ ನಡೆಸುವುದು.

•           ಸುಪ್ರಿಂ ಕೋರ್ಟಿನ ನಿರ್ದೇಶನದಂತೆ ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(NRC.) ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸುವುದು; ಯಾವುದೇ ಭಾರತೀಯರನ್ನೂ ನೋಂದಣಿಯಿAದ ಹೊರಗಿಡಬಾರದು; ನೋಂದಣಿಯಿಂದ ಹೊರಗುಳಿದ ವ್ಯಕ್ತಿಗಳಿಗೆ ‘ತ್ವರಿತ ಅರ್ಜಿ ವಿಲೇವಾರಿ ಪ್ರಕ್ರಿಯೆ’ಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡುವುದು.

•           ಈಶಾನ್ಯ ಪ್ರದೇಶವನ್ನು ಅಭಿವೃದ್ಧಿ ವಿಷಯದಲ್ಲಿ ಒಂದು ಆದ್ಯತೆಯ ಪ್ರದೇಶ ಎಂದು ಘೋಷಿಸುವುದು; ರಸ್ತೆ, ಸೇತುವೆ ಮುಂತಾದ ಭೌತಿಕ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಯುವಜನರಿಗೆ ಉದ್ಯೋಗದ ಯೋಜನೆಗಳನ್ನು ರೂಪಿಸುವುದು; ಭಾರತ-ಬಾಂಗ್ಲಾದೇಶಗಳ ಗಡಿಯಲ್ಲಿ ತಡೆ ಬೇಲಿ ನಿರ್ಮಿಸುವ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸುವುದು.

•           ಆರನೇ ಶೆಡ್ಯೂಲ್‌ನ ಅಡಿಯಲ್ಲಿ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರಗಳನ್ನು ರಕ್ಷಿಸುವುದು ಮತ್ತು ವಿಸ್ತರಿಸುವುದು; ವಿವಿಧ ಜನಾಂಗೀಯ ಗುಂಪುಗಳು ಹಾಗೂ ರಾಷ್ಟ್ರೀಯತೆಗಳ ಅಸ್ಮಿತೆಗಳನ್ನು ರಕ್ಷಿಸುವುದು.

•           ವಿಭಾಗವಾರು ಖರ್ಚುಗಳು 

ದುಡಿಯುವ ಜನರ ಹಕ್ಕುಗಳ ರಕ್ಷಣೆಯಲ್ಲಿ

ಕಾರ್ಮಿಕ ವರ್ಗ

ಸಿಪಿಐ(ಎಂ) ಪಕ್ಷವು ಈ ಕೆಳಗಿನ ಅಂಶಗಳಿಗಾಗಿ ಹೋರಾಡುವುದು :

* ರೂ.26 ಸಾವಿರಕ್ಕೆ ಕಡಿಮೆ ಇಲ್ಲದಂತೆ ಕಾರ್ಮಿಕರಿಗೆ ಮಾಸಿಕ ಕನಿಷ್ಠ ವೇತನ ನೀಡಲು; ಕನಿಷ್ಠ ವೇತನವನ್ನು ಗ್ರಾಹಕ ಬೆಲೆ ಸೂಚ್ಯಂಕಕ್ಕೆ  ಜೋಡಿಸಲು; ದಿನಕ್ಕೆ ಎಂಟು ಗಂಟೆ ಮೀರದಂತೆ ದುಡಿಯುವ ಅವಧಿಯನ್ನು ಖಾತ್ರಿಗೊಳಿಸಲು;  ಸಂವಿಧಾನದ ಕಲಮು 43ರ  ಆಶಯದಂತೆ  ಜೀವನ ನಡೆಸಲು ಬೇಕಾದ   ವೇತನ ನೀಡಲು ಕಾನೂನಾತ್ಮಕ  ಕ್ರಮಗಳನ್ನು ಕೈಗೊಳ್ಳಲು.

* ಆರ್ಥಿಕ ಸಾಮರ್ಥ್ಯದ ಯಾವುದೇ ಶರತ್ತುಗಳನ್ನು ವಿಧಿಸದೆ ಎಲ್ಲಾ ಕೇಂದ್ರ  ಸಾರ್ವಜನಿಕ ವಲಯ ಉದ್ಯಮಗಳ ನೌಕರರಿಗೆ   ನಿಯಮಿತವಾಗಿ ವೇತನ ಪರಿಷ್ಕರಣೆ ಮಾಡಲು.

* ಕೇಂದ್ರ ಸರ್ಕಾರಿ ನೌಕರರಿಗೆ 8ನೇ ವೇತನ ಆಯೋಗ  ನಿಯೋಜಿಸುವುದು ಮತ್ತು ಜನವರಿ 2020 ರಿಂದ ಜೂನ್ 2021ರ  ವರೆಗೆ  ಈ ನೌಕರರಿಗೆ ಪಾವತಿಸದಿದ್ದ  ತುಟ್ಟಿ ಭತ್ಯೆ/ತುಟ್ಟಿ ಪರಿಹಾರ ನೀಡುವುದು :

* ಕೇಂದ್ರ ಮತ್ತು ರಾಜ್ಯ ಸರ್ಕಾರಿ ಯೋಜನೆಗಳಲ್ಲಿ ಕೆಲಸ ಮಾಡುವ ಎಲ್ಲಾ ನೌಕರರನ್ನು (ಅಂಗನವಾಡಿ, ಆಶಾ, ಬಿಸಿಯೂಟ, ಇತ್ಯಾದಿ) ಉದ್ಯೋಗಿಗಳು/ಕಾರ್ಮಿಕರು ಎಂದು ಪರಿಗಣಿಸುವುದು ಮತ್ತು ಇವರುಗಳಿಗೆ ಕಾನೂನು ಬದ್ಧ ಕನಿಷ್ಠ ವೇತನ, ಪಿಂಚಣಿ, ಗ್ರಾಚುಯಿಟಿ ಇತ್ಯಾದಿ  ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಒದಗಿಸುವುದು ಮತ್ತು ಇವರುಗಳ ಕಾರ್ಮಿಕ ಸಂಘಟನೆ ಹಕ್ಕುಗಳನ್ನು ಖಾತ್ರಿಗೊಳಿಸುವುದು:

* ನಾಲ್ಕು ಕಾರ್ಮಿಕ ಸಂಹಿತೆಗಳ ಮೂಲಕ ಕಾರ್ಮಿಕ ಕಾನೂನುಗಳಿಗೆ ತಂದ ಎಲ್ಲಾ ಕಾರ್ಮಿಕ ವಿರೋಧಿ ಮತ್ತು ಮಾಲೀಕರ ಪರವಾದ ತಿದ್ದುಪಡಿಗಳನ್ನು  ರದ್ದುಗೊಳಿಸುವುದು; ಕೆಲಸದಿಂದ ಕಿತ್ತು ಹಾಕಲ್ಪಟ್ಟ/ ಕಾರ್ಖಾನೆಗಳನ್ನು ಮುಚ್ಚಿದ  ಕಾರಣದಿಂದ ತೊಂದರೆಗೀಡಾದ ನೌಕರರಿಗೆ ಪರಿಹಾರ ನೀಡುವುದು ಮತ್ತು ಕೈಗಾರಿಕಾ ವಿವಾದ ಕಾಯ್ದೆಯ ಸೂಚನೆಗಳನ್ನು ಜಾರಿಗೊಳಿಸುವುದು;  ಕಾರ್ಮಿಕ ಇಲಾಖೆಗಳು ಮತ್ತು ಜಾರಿ ಇಲಾಖೆಗಳನ್ನು ಬಲಪಡಿಸುವುದು;  ಎಲ್ಲಾ ಜಿಲ್ಲಾ ಮತ್ತು ಕೈಗಾರಿಕಾ ಕೇಂದ್ರಗಳಲ್ಲಿ ಕೈಗಾರಿಕಾ ಟ್ರಿಬನಲ್ ಮತ್ತು ಕಾರ್ಮಿಕ ನ್ಯಾಯಾಲಯಗಳನ್ನು ಸ್ಥಾಪಿಸುವುದು;

* ಅಂತರ ರಾಜ್ಯ ವಲಸೆ ಕಾರ್ಮಿಕರ ಕಾನೂನು ಒಳಗೊಂಡಂತೆ ಎಲ್ಲ ಕಾರ್ಮಿಕ ಕಾನೂನುಗಳನ್ನು ಬಲಪಡಿಸುವುದು; 

* ಅಸಂಘಟಿತ ಕ್ಷೇತ್ರದ ಕಾರ್ಮಿಕರ ಕಾನೂನುಗಳನ್ನು ಸುಧಾರಣೆಗೊಳಿಸುವುದು  ಮತ್ತು ಕಾರ್ಮಿಕ ಸ್ಥಾಯಿ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸುವುದು; ವಲಸೆ ಕಾರ್ಮಿಕರು ಮತ್ತು ಪ್ಲಾಂಟೇಶನ್ ಕಾರ್ಮಿಕರಿಗೆ ವಿಶೇಷ  ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ತರುವುದು; ಅಸಂಘಟಿತ ಕಾರ್ಮಿಕರಿಗೆ ರಾಷ್ಟ್ರೀಯ ನಿಧಿಯನ್ನು ಸ್ಥಾಪಿಸುವುದು; ವೃದ್ಧಾಪ್ಯ ಪಿಂಚಣಿ, ಆರೋಗ್ಯ, ಹೆರಿಗೆ ಮತ್ತು ಮಕ್ಕಳ ಆರೋಗ್ಯ  ಸೌಲಭ್ಯಗಳು, ಅಪಘಾತ ಮತ್ತು ಜೀವವಿಮೆ ಒಳಗೊಂಡ ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ನೀಡುವ ಒಂದು ಸಾರ್ವತ್ರಿಕ ಯೋಜನೆಯನ್ನು ಕಾನೂನಾತ್ಮಕವಾಗಿ ತರುವುದು;

* ಗಿಗ್/ಪ್ಲಾಟ್‌ಫಾರ್ಮ್-ಆಧಾರಿತ/ಆಪ್-ಆಧಾರಿತ ಕಾರ್ಮಿಕರು ಮತ್ತು ‘ಮನೆಯಿಂದ ಕೆಲಸ ಮಾಡುವ’ ನೌಕರರ  ದುಡಿಯುವ ಪರಿಸ್ಥಿತಿಯನ್ನು ಸ್ಪಷ್ಟವಾಗಿ ವಿವರಿಸುವ ಕಾನೂನನ್ನು ಜಾರಿ ಮಾಡುವುದು;  ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಎಲ್ಲಾ ಕಾರ್ಮಿಕ ಕಾನೂನುಗಳು ಲಭ್ಯವಾಗುವಂತೆ ನೋಡಿಕೊಳ್ಳುವುದು ಮತ್ತು ಇದನ್ನು ಜಾರಿ ಮಾಡದಿರುವಂತೆ ಮಾಲಕರಿಗೆ ಯಾವುದೇ ರೀತಿ ವಿನಾಯಿತಿ ದೊರೆಯದಂತೆ ಸೂಕ್ತ ಕಾನೂನು ಕ್ರಮಗಳ ಮೂಲಕ ನೋಡಿಕೊಳ್ಳುವುದು;

* ‘ಹೊಸ ಪಿಂಚಣಿ ಯೋಜನೆ’ ಮತ್ತು PFRDA ಕಾಯಿದೆಯನ್ನು  ರದ್ದು ಮಾಡುವುದು ಮತ್ತು ಎಲ್ಲಾ ನೌಕರರು ಮತ್ತು ಉದ್ಯೋಗಿಗಳಿಗೆ ಮಾಲೀಕರು ಮತ್ತು ಸರ್ಕಾರ  ಒದಗಿಸುವ ನಿಧಿಯ ಮೂಲಕ  ಒಂದು ಸೌಲಭ್ಯ-ನಮೂದಿತ ಪೆನ್ಷನ್ ಯೋಜನೆಯನ್ನು ಜಾರಿ ಮಾಡುವುದು;  ಕೊನೆಯ ವೇತನದ  ಕನಿಷ್ಠ ಶೇಕಡ 50ರಷ್ಟನ್ನು  ಪಿಂಚಣಿಯನ್ನಾಗಿ ಬೆಲೆ ಸೂಚ್ಯಂಕಕ್ಕೆ ಜೋಡಿಸಿ ನೀಡುವುದು:

* ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ 2019 ಅನ್ನು  ಹಿಂಪಡೆಯುವುದು;

* ರಹಸ್ಯ ಮತದಾನದ ಮೂಲಕ ಕಾರ್ಮಿಕ ಸಂಘಟನೆಗಳಿಗೆ  ಮಾನ್ಯತೆ ಮತ್ತು  ಕಾರ್ಮಿಕ ಸಂಘಟನಾ ಹಕ್ಕುಗಳ ರಕ್ಷಣೆಯನ್ನು ಖಾತ್ರಿಪಡಿಸುವುದು;  ಎಲ್ಲಾ  ಉದ್ದಿಮೆಗಳಲ್ಲಿ  ಸಂಘಟನೆಗಳಿಗೆ ಮಾನ್ಯತೆ ನೀಡುವುದನ್ನು ಕಾನೂನಿನ ಮೂಲಕ ಕಡ್ಡಾಯಗೊಳಿಸುವುದು; ಐ.ಎಲ್.ಒ ಒಪ್ಪಂದ ಸಂಖ್ಯೆ 87 ಮತ್ತು 98 (ವಿಶೇಷ ಆರ್ಥಿಕ ವಲಯಗಳಲ್ಲಿ ನೌಕರರ ಹಕ್ಕುಗಳ ಕುರಿತು) ಮತ್ತು 189 (ಮನೆ ಕೆಲಸ ಮಾಡುವವರು) ಗಳನ್ನು ಅನುಮೋದಿಸುವುದು; ಪ್ರತಿ ವರ್ಷಕ್ಕೊಮ್ಮೆ ತಪ್ಪದೇ ಭಾರತ ಕಾರ್ಮಿಕ ಸಮ್ಮೇಳನಗಳನ್ನು ನಡೆಸುವುದು:

* ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯಗಳೆರಡರಲ್ಲೂ ಆಡಳಿತದಲ್ಲಿ ಕಾರ್ಮಿಕರ ಭಾಗವಹಿಸುವಿಕೆಗಾಗಿ ಒಂದು ಪರಿಣಾಮಕಾರಿ ಯೋಜನೆಯನ್ನು ಜಾರಿ ಮಾಡುವುದು; ದ್ವಿಪಕ್ಷೀಯ ಮತ್ತು ತ್ರಿಪಕ್ಷಿಯ ಮಾತುಕತೆಗಳನ್ನು ಬಲಪಡಿಸುವುದು; ಕಾರ್ಮಿಕ ಸಂಘಟನೆಗಳೊಡನೆ ಚರ್ಚಿಸದೆ   ಕಾರ್ಮಿಕರಿಗೆ ಸಂಬಂಧ ಪಟ್ಟ ಯಾವುದೇ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳಬಾರದು, ಕಾರ್ಮಿಕರ ಪ್ರತಿನಿಧಿಗಳೊಡನೆ ಅರ್ಥಪೂರ್ಣ, ನಿಯಮಿತ, ಸಾಮಾಜಿಕ ಮಾತುಕತೆಗಳನ್ನು ಖಾತ್ರಿಗೊಳಿಸುವುದು;

* ಗುತ್ತಿಗೆ ಮತ್ತು ಹಂಗಾಮಿ ಕೆಲಸದ ವ್ಯವಸ್ಥೆಯನ್ನು ಪ್ರೋತ್ಸಾಹಿಸದಿರುವುದು;  ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ರದ್ದು) ಕಾಯಿದೆ 1970 ನ್ನು  ಕಟ್ಟುನಿಟ್ಟಾಗಿ ಜಾರಿ ಮಾಡುವುದು;  ಸಮಾನ ಕೆಲಸಕ್ಕೆ ನಿಯಮಿತ ಕಾರ್ಮಿಕರಿಗೆ ನೀಡುವ ವೇತನ  ಮತ್ತು ಸೌಲಭ್ಯವನ್ನು ಗುತ್ತಿಗೆ ಕಾರ್ಮಿಕರಿಗೆ ನೀಡುವುದು; ಖಾಯಂ ಮತ್ತು ದೀರ್ಘಕಾಲಿಕ ಹುದ್ದೆಗಳ  ಹೊರಗುತ್ತಿಗೆ ಮತ್ತು ಗುತ್ತಿಗೆಯನ್ನು ನಿಲ್ಲಿಸುವುದು;  ‘ನಿಗದಿತ ಅವಧಿ ಉದ್ಯೋಗ’ ಯೋಜನೆಯನ್ನು ಹಿಂಪಡೆಯುವುದು;  ಗುತ್ತಿಗೆ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಕ್ಕುಗಳನ್ನು ರಕ್ಷಣೆ ಮಾಡುವ ಮೂಲಕ ಅವರಿಗೆ ಸಂಘಟನೆ ರಚಿಸುವ ಮತ್ತು ಮುಷ್ಕರ ಹೂಡುವ ಹಕ್ಕನ್ನು ಚಲಾಯಿಸುವಂತೆ ನೋಡಿಕೊಳ್ಳುವುದು;

* ಮಹಿಳೆಯರಿಗೆ, ಮನೆ ಕೆಲಸವೂ ಒಳಗೊಂಡಂತೆ ಅವರು ಕೆಲಸ ಮಾಡುವ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ವೇತನ  ನೀಡುವುದನ್ನು ಖಾತ್ರಿಗೊಳಿಸುವುದು; ಹೆರಿಗೆ ಸೌಲಭ್ಯಗಳು, ಪಿಂಚಣಿ ಮತ್ತು ಆರೋಗ್ಯ ವಿಮೆ ಒಳಗೊಂಡAತೆ ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ ಸಾಮಾಜಿಕ ಸುರಕ್ಷತೆಯನ್ನು ಒದಗಿಸುವುದು; ಎಲ್ಲಾ ಮಹಿಳಾ ಉದ್ಯೋಗಿಗಳಿಗೆ 26 ವಾರಗಳ ಹೆರಿಗೆ ರಜೆ, ಹೆರಿಗೆ ಸೌಲಭ್ಯ ಮತ್ತು  ಶಿಶು ಆರೈಕೆ ಸೌಲಭ್ಯಗಳು ಹಾಗೂ ವೃದ್ಧಾಪ್ಯ ಆರೈಕೆ ಒದಗಿಸುವುದು;

* ದುಡಿಯುವ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ತಡೆ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದು; ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ  ಮಹಿಳೆಯರಿಗೆ ರಕ್ಷಣಾ ಕ್ರಮಗಳನ್ನು ಖಾತ್ರಿಗೊಳಿಸುವುದು;

* ಕಾರ್ಮಿಕರ ಕಲ್ಯಾಣಕ್ಕಾಗಿ  ಸ್ಥಾಪಿಸಿರುವ ಕಲ್ಯಾಣ ಮಂಡಳಿಗಳಲ್ಲಿ ಕಾರ್ಮಿಕರು ಸಕ್ರಿಯವಾಗಿ ಮತ್ತು ಪರಿಣಾಮಕಾರಿಯಾಗಿ ಭಾಗವಹಿಸುವಂತೆ ಮಾಡುವುದು;

ಮೀನುಗಾರಿಕೆ ಕಾರ್ಮಿಕರು

* ಮೀನುಗಾರರಿಗೆ ವಿಶೇಷ ಕಲ್ಯಾಣ ಮಂಡಳಿಗಳನ್ನು ಸ್ಥಾಪಿಸುವುದು ಮತ್ತು ಅವರಿಗೆ ಗುರುತಿನ ಪತ್ರಗಳು ಮತ್ತು ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಒದಗಿಸುವುದು;

* ವಿದೇಶಿ ವಾಣಿಜ್ಯ ಮೀನುಗಾರಿಕೆ ಹಡಗುಗಳನ್ನು ಮತ್ತು ಬೃಹತ್ ವಾಣಿಜ್ಯ ಮೀನುಗಾರಿಕೆ ಹಡಗುಗಳ ವಿಧ್ವಂಸಕಾರಿ ಮೀನುಗಾರಿಕೆ ಪದ್ಧತಿಗಳನ್ನು ನಿರ್ಬಂಧಿಸುವುದು; ಇ.ಇ.ಜೆಡ್ ಮತ್ತು  ನಮ್ಮ ಭೂಭಾಗದಲ್ಲಿ ಬೃಹತ್ ಕಾರ್ಪೊರೇಟ್‌ಗಳಿಗೆ  ಮೀನುಗಾರಿಕೆ ನಡೆಸಲು ಅನುವು ಮಾಡುವ ಮತ್ತು  ದೇಶೀಯ ಸಣ್ಣ ಮೀನುಗಾರರಿಗೆ ಪ್ರವೇಶವನ್ನು ಮಿತಿಗೊಳಿಸುವ, ಸಮುದ್ರದ ಆಳದಲ್ಲಿ ಮೀನುಗಾರಿಕೆ ಮಾಡುವ ನೀತಿಗಳನ್ನು ರದ್ದುಗೊಳಿಸುವುದು;

* ಕಡಲ ತೀರವನ್ನು ಬಳಸುವ ಮೀನುಗಾರರ ಹಕ್ಕನ್ನು ನಿರಾಕರಿಸಿರುವ ಸಿ.ಆರ್.ಜೆಡ್ ನೋಟಿಫಿಕೇಶನ್ 2018 ನ್ನು  ಹಿಂಪಡೆಯುವುದು;

* ನಮ್ಮ ಸಮುದ್ರ-ತಳದಿಂದ ಖಾಸಗಿ ಮತ್ತು ವಿದೇಶಿ ಕಾರ್ಪೊರೇಟ್ ಗಳಿಗೆ ಸಮೃದ್ಧ ಖನಿಜ ಸಂಪತ್ತನ್ನು ಹೊರಗೆಳೆಯಲು  ಅನುಮತಿ ನೀಡುವ  ನೀಲಿ-ಆರ್ಥಿಕತೆ ನೀತಿಯನ್ನು ರದ್ದುಗೊಳಿಸುವುದು.

ರೈತರು

* ಗ್ರಾಮೀಣ ಭಾರತದ ಎಲ್ಲಾ ಸಣ್ಣ, ಮಧ್ಯಮ ಮತ್ತು ಸಂತ್ರಸ್ತ ರೈತರನ್ನು ಮತ್ತು ಕೃಷಿ ಕಾರ್ಮಿಕರನ್ನು ಸಾಲದಿಂದ ವಿಮುಕ್ತಿಗೊಳಿಸುವುದು ಮತ್ತು ಇವರು ಸಂಸ್ಥೆಗಳಿAದ ಮತ್ತು ಲೇವಾದೇವಿಗಾರದಿಂದ ಪಡೆದ ಖಾಸಗಿ ಸಾಲವನ್ನು ಮನ್ನಾ ಮಾಡುವುದು;

* ಎಲ್ಲಾ ರೈತರಿಗೆ ಒಂದು ಸಾರ್ವತ್ರಿಕ, ಸಮರ್ಪಕ ಬೆಳೆ ವಿಮೆ ಯೋಜನೆಯನ್ನು, ಆಯಾ ರಾಜ್ಯಗಳಿಗೆ ನಿರ್ದಿಷ್ಟವಾಗಿ ಹೊಂದಿಕೊಳ್ಳುವ ಯೋಜನೆ ಪಡೆಯಲು ನೆರವಾಗುವಂತೆ ಜಾರಿ ಮಾಡುವುದು; ಇಳುವರಿ ರಿಸ್ಕ್ ಮತ್ತು ಬೆಲೆ ರಿಸ್ಕ್ ಅನ್ನು ವಿಮೆ  ಒಳಗೊಳ್ಳುತ್ತದೆ ಎನ್ನುವುದನ್ನು ಖಾತ್ರಿಪಡಿಸುವುದು; ಪ್ರತಿಯೊಂದು ಹಳ್ಳಿಯಲ್ಲಿಯೂ ಹವಾಮಾನ ನಿಗಾ ಕೇಂದ್ರಗಳನ್ನು ಸ್ಥಾಪಿಸುವುದು;  ಸಾರ್ವಜನಿಕ ವಿಮಾ ಸಂಸ್ಥೆಗಳ ಬೆಳೆ ವಿಮೆ ವ್ಯಾಪ್ತಿಯನ್ನು ವಿಸ್ತರಿಸುವುದು; ಬೆಲೆ ರಿಸ್ಕ್ ನಿಂದ ರೈತರನ್ನು ರಕ್ಷಿಸಲು ಒಂದು ಬೆಲೆ ಸ್ಥಿರೀಕರಣ ನಿಧಿಯನ್ನು ಸ್ಥಾಪಿಸುವುದು;

* ಎಲ್ಲಾ ಸಣ್ಣ, ಅಂಚಿನಲ್ಲಿರುವ ಮತ್ತು ಮಧ್ಯಮ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಒಂದು ಸಮರ್ಪಕ ಮಾಸಿಕ ಪಿಂಚಣಿಯನ್ನು ನೀಡುವ ಕಾನೂನಾತ್ಮಕ ಗ್ಯಾರಂಟಿಯನ್ನು ಖಾತ್ರಿ ಗೊಳಿಸುವುದು;

* ಕೃಷಿ ಉತ್ಪಾದನೆ, ಸಾಲ ನೀಡುವಿಕೆ, ಹೈನುಗಾರಿಕೆ,  ನೀರು ಬಳಕೆ, ಲಾಗುವಾಡು ಖರೀದಿ, ಬೆಳೆ ಸಂಗ್ರಹ, ಸಂಸ್ಕರಣೆ, ಮೌಲ್ಯ ಸೇರ್ಪಡೆ ಮತ್ತು ಮಾರುಕಟ್ಟೆಗಳಿಗಾಗಿ  ಸಹಕಾರಿ ವಲಯವನ್ನು ಉತ್ತೇಜಿಸುವುದು ಮತ್ತು ಬಲಪಡಿಸುವುದು;  ಬಹು ರಾಜ್ಯ ಸಹಕಾರಿ ಸಂಸ್ಥೆಗಳಿಂದ ಆಚೆ ಇರುವ ಸಹಕಾರಿ ವ್ಯವಸ್ಥೆಯು ರಾಜ್ಯ ಸರ್ಕಾರಗಳ ಅಡಿಯಲ್ಲಿ ಕಾರ್ಯನಿರ್ವಹಿಸುವುದನ್ನು ಖಾತ್ರಿಗೊಳಿಸುವುದು;

* ಕೃಷಿ ಉತ್ಪಾದನೆಯಲ್ಲಿ ರೈತ ಉತ್ಪಾದನಾ ಸಂಸ್ಥೆಗಳು ಅಲ್ಲದೆ  ಮಹಿಳಾ ಸ್ವಸಹಾಯ ಗುಂಪುಗಳು,  ಜಂಟಿ ಹೊಣೆಗಾರಿಕೆ ಗುಂಪುಗಳು ಮತ್ತು ಇನ್ನಿತರ ಮಹಿಳಾ ಸಮೂಹಗಳನ್ನು ನಿರ್ಮಿಸಲು ಉತ್ತೇಜಿಸುವುದು; ಈ ಸಾಮೂಹಿಕ ಸಂಘಗಳನ್ನು  ಖಾಸಗಿ ಕಾರ್ಪೊರೇಟ್‌ಗಳು  ಆವರಿಸಿಕೊಳ್ಳದಂತೆ ನೋಡಿಕೊಳ್ಳುವುದು

* ಜಾನುವಾರು ಮೇವುಗಳ  ಉತ್ಪಾದನೆ, ವಿತರಣೆ ಮತ್ತು ಸಗಟು ವ್ಯಾಪಾರಕ್ಕೆ  ಅಗತ್ಯವಿರುವ ಸಬ್ಸಿಡಿಯನ್ನು ಒದಗಿಸುವುದು;   ಜಾನುವಾರುಗಳನ್ನು ಸಾಕಿರುವ ರೈತರಿಗೆ ಲಾಗುವಾಡು ಬೆಲೆಗಳ ಏರುಪೇರಿನಿಂದ ರಕ್ಷಿಸುವುದು; ಜಾನುವಾರುಗಳಿಗೆ ಬರುವ ಎಲ್ಲಾ ರೋಗಗಳು ಮತ್ತು ಸಾಂಕ್ರಾಮಿಕಗಳನ್ನು ಒಳಗೊಳ್ಳುವ ಒಂದು ಸಮರ್ಪಕ  ಜಾನುವಾರು ವಿಮೆ ಯೋಜನೆಯನ್ನು ರಚಿಸಿ, ಜಾರಿ ಮಾಡುವುದು;

* ಮನರೇಗಾ ಯೋಜನೆಯಡಿ  ಸಣ್ಣ ಮತ್ತು ಅಂಚಿನ ರೈತರನ್ನು ಸೇರಿಸಿ ಇವರುಗಳಿಗೆ ಕಾರ್ಮಿಕ ಸಬ್ಸಿಡಿಯನ್ನು ಒದಗಿಸುವುದು.

ಕೃಷಿ ಕಾರ್ಮಿಕರು

* ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನ, ಚೌಕಾಸಿ ಹಕ್ಕು ಮತ್ತು ಪಿಂಚಣಿ, ಅಪಘಾತ ಪರಿಹಾರ ಮುಂತಾದ ಸಾಮಾಜಿಕ ಸುರಕ್ಷಾ ಕ್ರಮಗಳನ್ನು ಕೇಂದ್ರ ಸರ್ಕಾರ ಕೊಡಮಾಡುವ ನಿಧಿಯೊಂದಿಗೆ ಒದಗಿಸುವ ಒಂದು ಸಮಗ್ರ ಕಾನೂನು ಜಾರಿ ಮಾಡುವುದು;

* ಮನರೇಗಾ ದಲ್ಲಿ  ಕೆಲಸದ ಅವಧಿಗೆ ಈಗಿರುವ 100 ದಿನಗಳ ಮಿತಿಯನ್ನು ತೆಗೆದು 200ಕ್ಕೆ ಏರಿಸುವುದು; ಮನರೇಗಾ  ಯೋಜನೆಯಡಿ ನೀಡುವ ವೇತನವು ಯಾವುದೇ ರಾಜ್ಯದಲ್ಲಿ ನೀಡುವ  ಕನಿಷ್ಠ ವೇತನವಾದ ರೂ.700ಕ್ಕಿಂತ  ಕಡಿಮೆ ಇರದಂತೆ ನೋಡಿಕೊಳ್ಳುವುದು; ಮನರೇಗಾ ಯೋಜನೆಯಡಿ  ಕೆಲಸ ದೊರೆಯದಿದ್ದ ಕಾರ್ಮಿಕರಿಗೆ ಸಮಯಮಿತಿಯೊಳಗೆ ನಿರುದ್ಯೋಗ ಭತ್ಯೆ ನೀಡುವುದನ್ನು ಖಾತ್ರಿಪಡಿಸುವುದು;

* ಎಲ್ಲ ಗ್ರಾಮೀಣ ಮತ್ತು ಕೃಷಿ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ರೂ.700 ಕ್ಕೆ ಹೆಚ್ಚಿಸುವುದು; ಪುರುಷ ಮತ್ತು ಮಹಿಳಾ  ಕೃಷಿ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದನ್ನು ಖಾತ್ರಿಪಡಿಸುವುದು; ಬಸುರಿಯಾದ ಕೃಷಿ ಕಾರ್ಮಿಕರಿಗೆ ವಿಶೇಷ ಭತ್ಯೆ ನೀಡುವುದು;  ಕನಿಷ್ಠ ವೇತನ ಕಾಯಿದೆಯನ್ನು  ಪರಿಣಾಮಕಾರಿಯಾಗಿ ಮತ್ತು  ಕಟ್ಟುನಿಟ್ಟಾಗಿ ಜಾರಿ ಮಾಡಲು ಇಡೀ ಜಾರಿ ಯಂತ್ರವನ್ನು ಪುನರ್ ರಚಿಸುವುದು.

* ಎಲ್ಲಾ ಕೃಷಿ ಕಾರ್ಮಿಕರಿಗೆ ವಸತಿ, ಶೌಚಾಲಯ ಸೌಲಭ್ಯಗಳು, ಕುಡಿಯುವ ನೀರು, ವೈದ್ಯಕೀಯü ವ್ಯವಸ್ಥೆ, ಗಾಯಗಳಾದ ಸಮಯದಲ್ಲಿ ಪ್ರಥಮ ಚಿಕಿತ್ಸೆ, ಸಾರಿಗೆ ಮುಂತಾದ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.

* ವಲಸೆ ಕೃಷಿ ಕಾರ್ಮಿಕರ ರಕ್ಷಣೆಗಾಗಿ ಏಕ ಗವಾಕ್ಷಿ ವ್ಯವಸ್ಥೆ ಮತ್ತು ರಾಷ್ಟ್ರವ್ಯಾಪಿ ಅರ್ಹತೆ ಇರುವ  ವಿಕೇಂದ್ರೀಕೃತ ತ್ರಿಪಕ್ಷಿಯ ಮಂಡಳಿಗಳನ್ನು ಸ್ಥಾಪಿಸುವುದು;

* ಭೂರಹಿತ ಕೃಷಿ ಕಾರ್ಮಿಕರನ್ನು ಭೂಸ್ವಾಧೀನ ಪರಿಹಾರ ಮತ್ತು ಪುನರ್ವಸತಿ (LARR) ಕಾಯಿದೆ, 2013 ರ ಅನ್ವಯ  ಸಂತ್ರಸ್ತರು, ಸಂಪೂರ್ಣ ಪರಿಹಾರಕ್ಕೆ ಅರ್ಹರು, ಅಷ್ಟೇ ಅಲ್ಲದೆ ಭೂಸ್ವಾಧೀನ ಮತ್ತು ಸ್ಥಳಾಂತರದ ಎಲ್ಲಾ ವ್ಯಾಜ್ಯಗಳಡಿ ಪುನರ್ವಸತಿ ಗೂ  ಹಕ್ಕುದಾರರು ಎಂಬುದನ್ನು ಗುರುತಿಸುವುದು

* ದಲಿತರು ಮತ್ತು ಆದಿವಾಸಿ ಕೃಷಿ ಕಾರ್ಮಿಕರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದು ಮತ್ತು ಇವರ ವಾಸ ಸ್ಥಳಗಳ  ಸಮಗ್ರ ಅಭಿವೃದ್ಧಿಯನ್ನು ಖಾತ್ರಿ ಗೊಳಿಸುವುದು;

* ಎಲ್ಲ ಬಗೆಯ ಜಾತಿ, ಜನಾಂಗ, ಧಾರ್ಮಿಕ ಮತ್ತು ಲಿಂಗ ಆಧಾರಿತ ಶೋಷಣೆಯ ವಿರುದ್ಧ ದಲಿತ ಮತ್ತು ಆದಿವಾಸಿ ಕೃಷಿ ಕಾರ್ಮಿಕರನ್ನು ರಕ್ಷಿಸಲು  ಪ್ರತ್ಯೇಕ ಕಾನೂನುಗಳು ಮತ್ತು ಕೋರ್ಟುಗಳನ್ನು  ಸ್ಥಾಪಿಸುವುದು;

* ಕಾರ್ಷಕ ದುಡಿಯುವ ಸ್ಥಳಗಳಲ್ಲಿ ಸಾರ್ವಜನಿಕ ಸಹಕಾರದೊಂದಿಗೆ ಶಿಶು ಆರೈಕೆ ಮತ್ತು ಶಿಶುವಿಹಾರಗಳನ್ನು ಸ್ಥಾಪಿಸುವುದು.

ಸಮಾನ ಹಕ್ಕು ಮತ್ತು ಸಾಮಾಜಿಕ ನ್ಯಾಯಕ್ಕಾಗಿ

ಮಹಿಳೆಯರು

ಸಿಪಿಐ(ಎಂ)ಪಕ್ಷವು

* ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ, ಮಹಿಳೆಯರಿಗೆ ಶೇ.33  ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಜೋಡಣೆ ಮಾಡದೆ ಜಾರಿ ಮಾಡುವುದು;

* ಎಲ್ಲಾ ಮಹಿಳೆಯರಿಗೆ ವೈವಾಹಿಕ ಮತ್ತು ಅನುವಂಶೀಯ ಆಸ್ತಿಗಳಲ್ಲಿ ಸಮಾನ ಹಕ್ಕು ನೀಡುವ ಕಾನೂನು ಜಾರಿ ಮಾಡುವುದು; (ವಿಚ್ಛೇದನ, ತ್ಯಜಿಸಲ್ಪಟ್ಟ ಸಂದರ್ಭಗಳಲ್ಲಿ) ಮಹಿಳೆಯರು ಮತ್ತು ಮಕ್ಕಳ ನಿರ್ವಹಣೆಗೆ ಪರಿಹಾರ ಕೊಡುವ ಕಾನೂನುಗಳನ್ನು ಬಲಪಡಿಸುವುದು; ತ್ಯಜಿಸಲ್ಪಟ್ಟ ಮಹಿಳೆಯರ  ರಕ್ಷಣೆ, ಸಮರ್ಪಕ ನಿರ್ವಹಣೆ ಮತ್ತು ಪುನರ್ವಸತಿಯನ್ನು  ಖಾತ್ರಿಪಡಿಸುವುದು;

* ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸೆಯನ್ನು  ತಡೆಯುವುದು ಮತ್ತು ಇವರುಗಳ ಮೇಲೆ ಭಯಾನಕವಾಗಿ ಹಿಂಸೆ ಮಾಡುವವರಿಗೆ ಶಿಕ್ಷೆ  ನೀಡುವ ಒಂದು ಸರಣಿ ಕ್ರಮಗಳನ್ನು ಕೈಗೊಳ್ಳುವುದು.  ಈ ಕ್ರಮಗಳಲ್ಲಿ ಕೆಲವು ಹೀಗಿವೆ:

* ಈಗ ತಿದ್ದುಪಡಿ ಮಾಡಲಾದ ಕಾನೂನಿನಲ್ಲಿ ಬಿಟ್ಟು ಹೋಗಿರುವ ವರ್ಮ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸುವುದು;  ಶೈಕ್ಷಣಿಕ ಪಠ್ಯಕ್ರಮದಲ್ಲ್ಲಿ ಬದಲಾವಣೆ ತಂದು ಲಿಂಗ ಸಮಾನತೆಯ ಬಗ್ಗೆ ವಿಷಯಗಳನ್ನು ಸೇರಿಸುವುದು;  ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳು ಸುರಕ್ಷತವಾಗಿರುವಂತೆ ನೋಡಿಕೊಳ್ಳುವುದು; ವಿಶೇಷ ಚೇತನ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳು ಸುರಕ್ಷಿತವಾಗಿ ಎಟಕುವ ರೀತಿಯಲ್ಲಿ ಮಾಡುವುದು; ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದ ಮಹಿಳೆಯರ ಮೇಲಿನ ಜಾತಿ ಆಧಾರಿತ ಹಿಂಸೆಗೆ ನೀಡುವ ಶಿಕ್ಷೆಯನ್ನು ಹೆಚ್ಚಿಸುವುದು; ಕೇಸುಗಳನ್ನು ಮುಚ್ಚಿ ಹಾಕುವ ಇಲ್ಲವೇ ವಿಳಂಬ ಮಾಡುವ ಸಿಬ್ಬಂದಿಗಳಿಗೆ, ಪೊಲೀಸ್ ಸಿಬ್ಬಂದಿಗಳ ಒಳಗೊಂಡಂತೆ,  ದಂಡ ವಿಧಿಸುವುದು; ತ್ವರಿತಗತಿಯ ನ್ಯಾಯಾಲಯಗಳನ್ನು ಸ್ಥಾಪಿಸುವುದು;  ವೈವಾಹಿಕ ಅತ್ಯಾಚಾರವನ್ನು ಒಂದು ಅಪರಾಧ ಎಂದು ಪರಿಗಣಿಸುವುದು;  ಭಾರತೀಯ ಅಪರಾಧ ಸಂಹಿತೆಯ ವಿಧಿ 498 ಎ ಅನ್ನು  ಕಾಪಾಡುವುದು;  ಲೈಂಗಿಕ ಹಿಂಸೆ ಮತ್ತು ಆಸಿಡ್ ದಾಳಿಗಳಿಗೆ  ತುತ್ತಾದ  ಸಂತ್ರಸ್ತರಿಗೆ  ಒಂದು ಸಂಪೂರ್ಣವಾಗಿ ಸಂಪನ್ಮೂಲ ಭರಿತವಾದ ಯೋಜನೆಯನ್ನು,  ಅದರಲ್ಲೂ ಮುಖ್ಯವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೋಸ್ಕರ, ಜಾರಿ ಮಾಡುವುದು;  ಕೌಟುಂಬಿಕ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯಗಳ ವಿರುದ್ಧದ  ಕಾನೂನುಗಳ ಜಾರಿಗೆ ಸಮರ್ಪಕವಾದ ಬಜೆಟ್  ಒದಗಿಸುವುದು; PCPNDT (ಲಿಂಗ ಪತ್ತೆ ಮಾಡುವ ಪರೀಕ್ಷೆಗಳು ಮತ್ತು ಹೆಣ್ಣು ಭ್ರ‍್ರೂಣಹತ್ಯೆಯ ವಿರುದ್ಧ) ಕಾಯಿದೆ ಯನ್ನು  ಕಟ್ಟು ನಿಟ್ಟಾಗಿ ಜಾರಿ ಮಾಡುವುದು ಮತ್ತು  ನಿಷ್ಕ್ರಿಯವಾಗಿರುವ ನಿಗಾ ಕೇಂದ್ರಗಳನ್ನು ಚಾಲನೆಗೊಳಿಸುವುದು;

* ಕೆಳ ಕಾಣಿಸಿದ ಹೊಸ ಕಾನೂನುಗಳನ್ನು ಜಾರಿ ಮಾಡುವುದು:  ಮರ್ಯಾದಾ ಹತ್ಯೆ ಎಂದು ಕರೆಯಲ್ಪಡುವ ಅಪರಾಧಗಳ ವಿರುದ್ಧ ಒಂದು ಪ್ರತ್ಯೇಕ ಕಾನೂನು ತರುವುದು;  ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಾಣಿಕೆಯ ವಿರುದ್ಧ ಒಂದು ಕಾನೂನು; ದೂರ ತಳ್ಳಲ್ಪಟ್ಟ ಮಹಿಳೆಯರಿಗೆ  ತ್ರಿಪುರದಲ್ಲಿ ಎಡರಂಗ ಸರ್ಕಾರ ನೀಡುತ್ತಿದ್ದ ಒಂದು  ಭತ್ಯೆ ನೀಡುವ ಯೋಜನೆ ರೀತಿಯಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ನೋಡಿಕೊಳ್ಳುವ ಕಾನೂನನ್ನು ಬಲಪಡಿಸುವುದು;  ವಿಧವೆಯರು, ಮಹಿಳೆ ಮುಂದಾಳಾಗಿರುವ ಕುಟುಂಬಗಳು ಮತ್ತು ಏಕಾಂಗಿ ಮಹಿಳೆಯರಿಗಾಗಿ  ಒಂದು ವಿಶೇಷ ಯೋಜನೆ;  ಸ್ವ-ಸಹಾಯ ಗುಂಪುಗಳು ಮತ್ತು ಬ್ಯಾಂಕಿಂಗ್ ಸಂಸ್ಥೆಗಳ ನಡುವಿನ ಸಂಬAಧವನ್ನು ಖಾತ್ರಿ ಗೊಳಿಸುವ ಕಾನೂನು ತರುವುದು ಮತ್ತು ಶೇ. 4 ಕ್ಕೆ ಹೆಚ್ಚಿಲ್ಲದ ಸಬ್ಸಿಡಿ ಬಡ್ಡಿದರ ನೀಡುವುದು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಜನಾಂಗದ ಮಹಿಳೆಯರು ನಡೆಸುವ ಸ್ವ ಸಹಾಯ ಗುಂಪುಗಳಿಗೆ ವಿಶೇಷ ವಿನಾಯಿತಿಗಳನ್ನು ನೀಡುವುದು;  ಮನೆ ಕೆಲಸ ಮಾಡುವವರು ಮತ್ತು ಮನೆಯಿಂದ ಕೆಲಸ ಮಾಡುವ ಮಹಿಳೆಯರಿಗೆ ರಕ್ಷಣಾತ್ಮಕ ಕಾನೂನು;  ಮಹಿಳೆಯರು ಮುಂದಾಗಿರುವ ಕುಟುಂಬಗಳಿಗೆ ವಿಶೇಷ  ಯೋಜನೆಗಳು;

* ವಿವಿಧ ಕ್ಷೇತ್ರಗಳ ಚುನಾಯಿತ ಪ್ರತಿನಿಧಿಗಳಿಗೆ  ಅವರ ಸಾರ್ವಜನಿಕ ಮಾತುಗಳಲ್ಲಿ ಮತ್ತು ಅಭಿಪ್ರಾಯಗಳಲ್ಲಿ ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಳ್ಳುವುದು ಮತ್ತು ಮಹಿಳೆಯರನ್ನು ಕೀಳಾಗಿಸುವ ಮತ್ತು ತುಚ್ಚವಾಗಿಸುವ  ರೀತಿಯ  ಲಿಂಗಾಧಾರಿತ ಮತ್ತು ಸ್ತ್ರೀ ದ್ವೇಷಿ  ಹೇಳಿಕೆಗಳ ವಿರುದ್ಧ ಒಂದು  ನೀತಿ ಸಂಹಿತೆ ತರುವುದು;

* ಲಿಂಗಾಧಾರಿತ ಬಜೆಟ್ ನಲ್ಲಿ  ಮಹಿಳೆಯರಿಗೆ  ಹಂಚಿಕೆಯನ್ನು ಈಗಿರುವ ಶೇಕಡಾ 30 ರಿಂದ  ಕನಿಷ್ಠ ಶೇ.40ಕ್ಕಾದರೂ ಹೆಚ್ಚಿಸುವುದು.

ಮಕ್ಕಳು

 ಸಿಪಿಐ(ಎಂ) ಪಕ್ಷವು ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸುತ್ತದೆ ಮತ್ತು ಜಾರಿಗಾಗಿ ಕಟಿಬದ್ಧವಾಗಿದೆ.

* ಐ.ಸಿ.ಡಿ.ಎಸ್ ಯೋಜನೆಯನ್ನು 0-6 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಒಳಗೊಳ್ಳುವಂತೆ ಸಾರ್ವತ್ರಿಕಗೊಳಿಸುವುದು; ಐ.ಸಿ.ಡಿ.ಎಸ್ ಅನ್ನು  ಖಾಸಗೀಕರಣಗೊಳಿಸುವ ಎಲ್ಲ ಕ್ರಮಗಳನ್ನು ಹಿಂಪಡೆಯುವುದು;  ಅಂಗನವಾಡಿ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದನ್ನು ಖಾತ್ರಿಪಡಿಸಲು ತಲಾ ಮಗುವಿನ ಹಂಚಿಕೆಯನ್ನು ಹೆಚ್ಚು ಮಾಡುವುದು;  ಅಂಗನವಾಡಿ ಕೇಂದ್ರಗಳಲ್ಲಿ ಶಿಶುವಿಹಾರಗಳನ್ನು ಸ್ಥಾಪಿಸುವುದು;

* ಶಿಕ್ಷಣ ಹಕ್ಕು ಕಾಯ್ದೆಯನ್ನು 3-18  ವರ್ಷದ ಮಕ್ಕಳನ್ನು ಒಳಗೊಳ್ಳುವಂತೆ ವಿಸ್ತಾರಗೊಳಿಸುವುದು; ಒಳಗೊಳ್ಳುವ ಶಿಕ್ಷಣ ಕುರಿತ ವಿಶೇಷ ಚೇತನರ ಹಕ್ಕು ಕಾಯಿದೆ, 2016ರ  ನಿಬಂಧನೆಗಳನ್ನು ಜಾರಿ ಮಾಡುವುದು;

* ನೆರೆಹೊರೆಗಳಲ್ಲಿ ಮಕ್ಕಳಿಗೆ ಅನುಕೂಲಕರ ರೀತಿಯಲ್ಲಿ ಕ್ರೀಡಾ ಮೈದಾನಗಳನ್ನು  ಒದಗಿಸುವುದು;

* ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯಿದೆಗೆ  ತಿದ್ದುಪಡಿಗಳನ್ನು ತಂದು ಹಾನಿಕಾರಕ ಮತ್ತು ಹಾನಿಕಾರಕವಲ್ಲದ ಕೆಲಸ ಎಂಬ ವ್ಯತ್ಯಾಸವನ್ನು ತೆಗೆದು ಎಲ್ಲ ರೀತಿಯ ಬಾಲ ಕಾರ್ಮಿಕ ದುಡಿಮೆಯನ್ನು  ನಿಷೇಧಿಸುವುದು ಮತ್ತು ಎಲ್ಲಾ ದುಡಿಯುವ ಮಕ್ಕಳ ಪುನರ್ವಸತಿ ಯೋಜನೆಗೆ ಹೆಚ್ಚು ಸಂಪನ್ಮೂಲ ಒದಗಿಸುವ ಮೂಲಕ ಇದನ್ನು ಜಾರಿಗೊಳಿಸುವುದು;

* ಆದಿವಾಸಿ, ದಲಿತರು ಮತ್ತು  ಸಾಮಾಜಿಕವಾಗಿ ಶೋಷಣೆಗೊಳಗಾದ ಗುಂಪುಗಳ ಮಕ್ಕಳು ಮತ್ತು ಇತರರ ಮಕ್ಕಳ ನಡುವಿನ  ಹೆಚ್ಚುತ್ತಿರುವ ಅಂತರವನ್ನು ಕಡಿಮೆ ಮಾಡಲು ನವೀನ  ಸೌಲಭ್ಯಗಳೊಂದಿಗೆ ವಸತಿ ಶಾಲೆ ಮತ್ತು ಹಾಸ್ಟೆಲ್ ಗಳನ್ನು ಹೆಚ್ಚುವರಿ ಸಂಪನ್ಮೂಲ ನೀಡುವ ಮೂಲಕ ಸ್ಥಾಪಿಸುವುದು ಒಳಗೊಂಡಂತೆ ಹಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುವುದು;

* ಹೆಚ್ಚುವರಿ ಪೌಷ್ಟಿಕತೆ, ಸೋಂಕು ನಿರೋಧಕತೆ, ಶಾಲಾ ಪೂರ್ವ  ಅಸಾಂಪ್ರದಾಯಿಕ ಶಿಕ್ಷಣ,  ನಿಯಮಿತ ಆರೋಗ್ಯ ತಪಾಸಣೆ ಮತ್ತು ಶೀಘ್ರ ಹೆಚ್ಚುವರಿ ಸೇವೆ  ಒಳಗೊಂಡAತೆ ಹಲವು ಮೂಲಭೂತ ಸೌಕರ್ಯಗಳನ್ನು ಸಂಪೂರ್ಣವಾಗಿ ಖಾತ್ರಿಪಡಿಸುವುದು.

* ಲೈಂಗಿಕ ದೌರ್ಜನಗಳಿಂದ ಮಕ್ಕಳ ರಕ್ಷಣೆ ಕಾಯಿದೆಯನ್ನು  ಕಟ್ಟು ನಿಟ್ಟಾಗಿ ಜಾರಿ ಮಾಡುವುದು;

* ಬೀದಿ ಮಕ್ಕಳಿಗೆ ವಸತಿ ಮತ್ತು ಸಾಮಾಜಿಕ  ಸೇವೆಗಳನ್ನು ಒದಗಿಸುವುದು;  ಕಾಣೆಯಾಗಿರುವ ಮಕ್ಕಳನ್ನು ಹುಡುಕಲು ಮತ್ತಷ್ಟು  ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದು;

* ಬಾಲ ನ್ಯಾಯ ಮಂಡಳಿ ಮತ್ತು ಸಂಸ್ಥೆಗಳನ್ನು ಸಂಪೂರ್ಣವಾಗಿ ಸುಧಾರಣೆಗೊಳಿಸುವುದು ಮತ್ತು ಈ ಮಕ್ಕಳಿಗೆ ಜವಾಬ್ದಾರಿಯುತ ನಾಗರಿಕರಾಗಿ ಸಮಾಜಕ್ಕೆ ಮತ್ತೆ ಮರಳುವಂತೆ ಮಾಡಲು ಈ ಸಂಸ್ಥೆಗಳನ್ನು ಸಂವೇದನಾಶೀಲಗೊಳಿಸುವುದು.

ಯುವಜನ

 * ದುಡಿಯುವ ಹಕ್ಕನ್ನು ಒಂದು ಸಾಂವಿಧಾನಿಕ ಹಕ್ಕಾಗಿ ಸೇರಿಸುವುದು;

 * ಕೆಲಸ ಒದಗಿಸುವುದು ಇಲ್ಲವೇ ನಿರುದ್ಯೋಗ ಭತ್ಯೆ;

 * ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಿ ಸೇವೆಗಳಲ್ಲಿ ನೇಮಕಾತಿಗೆ ಇರುವ ನಿರ್ಬಂಧವನ್ನು ತೆಗೆದುಹಾಕುವುದು; ಒಂದು ನಿಗದಿತ ಕಾಲಾವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ  ಖಾಲಿ ಇರುವ ಎಲ್ಲಾ ಹುದ್ದೆಗಳನ್ನು  ಭರ್ತಿ ಮಾಡುವುದು;

 * ಯುವಜನರ ಕಾಳಜಿಗಳನ್ನು ಪರಿಗಣಿಸಲು ಒಂದು ರಾಷ್ಟ್ರೀಯ ಯುವ ನೀತಿಯನ್ನು ರೂಪಿಸುವುದು;

 * ಕ್ರೀಡಾ ಚಟುವಟಿಕೆಗಳು ಮತ್ತು ಯುವಜನರಿಗೆ  ತರಬೇತಿ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರಾಯೋಜಕತ್ವದಲ್ಲಿ  ಕ್ರೀಡಾ ಮಿಷನ್ ಗಳನ್ನು ಸ್ಥಾಪಿಸುವುದು;

 * ಯುವ ಜನತೆಗೆ ಅವರ ಆಯ್ಕೆಯ ಕ್ರೀಡಾ ರಂಗದಲ್ಲಿ ಮುಂದುವರೆಯಲು ಯುವಜನರ ಒಟ್ಟಾರೆ ದೈಹಿಕ,ಸಾಂಸ್ಕೃತಿಕ ಮತ್ತು ಸಾಮಾಜಿಕ  ಬೆಳವಣಿಗೆಯನ್ನು ಉತ್ತೇಜಿಸುವುದು;

 * ಮಾದಕ ಪದಾರ್ಥಗಳ ಹಾವಳಿಯನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುವುದು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ

 ಸಿಪಿಐ (ಎಂ) ಪಕ್ಷವು ಜಾತಿ ವ್ಯವಸ್ಥೆಯ ಮತ್ತು ಎಲ್ಲ ವಿಧದ ಜಾತಿ ದಬ್ಬಾಳಿಕೆಗಳ ರದ್ದತಿಗೆ ಕಟಿಬದ್ಧವಾಗಿದೆ.

* ಪರಿಶಿಷ್ಟ ಜಾತಿಗಳಿಗೆ  ಒಂದು ವಿಶೇಷ ಅಂಗಭಾಗ ಯೋಜನೆ (Special Component Plan) ಮತ್ತು ಪರಿಶಿಷ್ಟ ಪಂಗಡಗಳಿಗೆ ಉಪಯೋಜನೆಗಳನ್ನು ಕೇಂದ್ರ ಕಾನೂನಿನ ಮೂಲಕ ಜಾರಿ ಮಾಡುವುದು; ಈ ಕಾನೂನು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆಯಾ ರಾಜ್ಯಗಳ ಎಸ್.ಸಿ/ಎಸ್.ಟಿ  ಜನಸಂಖ್ಯೆಗೆ ಅನುಗುಣವಾಗಿ ಯೋಜನೆಯ ಅನುದಾನವನ್ನು ನೀಡುವುದನ್ನು ಕಡ್ಡಾಯಗೊಳಿಸುತ್ತದೆ;

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಟುಂಬಗಳ ಎಲ್ಲಾ ಭೂಹೀನರಿಗೆ ಕೃಷಿಗಾಗಿ ತಲಾ ಐದು ಎಕರೆ ಕೃಷಿ ಯೋಗ್ಯ ಭೂಮಿ ಹಂಚುವುದು;

* ಖಾಸಗಿ ರಂಗದಲ್ಲಿ ಮೀಸಲಾತಿ ಜಾರಿ ಮಾಡಲು ಒಂದು ಕೇಂದ್ರ ಕಾನೂನು ಜಾರಿ ಮಾಡುವುದು;

* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು (ದೌರ್ಜನ್ಯ ತಡೆ) ಕಾಯಿದೆ 1989 ಮತ್ತು ದೌರ್ಜನ್ಯ ತಡೆ  ತಿದ್ದುಪಡಿ ಕಾಯಿದೆ 2015 ಅನ್ನು  ಕಡ್ಡಾಯವಾಗಿ ಜಾರಿ ಮಾಡುವುದು; ಸಂವಿಧಾನದ ಶೇಡ್ಯೂಲ್ 9ರಲ್ಲಿ ರಲ್ಲಿ  ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ)  ಕಾಯಿದೆಯನ್ನು ಅಳವಡಿಸಲು  ಕ್ರಮ ಕೈಗೊಳ್ಳುವುದು;

* ಪ್ರತಿ ಜಿಲ್ಲೆಯಲ್ಲಿಯೂ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ(ದೌರ್ಜನ್ಯ ತಡೆ)ಯ ಭಾಗ 14ರ ಪ್ರಕಾರ ಕಡ್ಡಾಯ ವಿಶೇಷ ಕೋರ್ಟ್ ಗಳನ್ನು ಸ್ಥಾಪಿಸುವುದು;

* ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ದಡಿಯುವ ಪ್ರದೇಶಗಳಲ್ಲಿ ಜಾತಿ ಧಾರ್ಮಿಕ ಮತ್ತು ಲಿಂಗ ಆಧಾರಿತ ತಾರತಮ್ಯಗಳನ್ನು ತಡೆಗಟ್ಟಲು  ಒಂದು ವಿಶೇಷ ಕಾಯಿದೆಯನ್ನು ಜಾರಿ ಮಾಡುವುದು;

* ಸಾಮಾನ್ಯ ಜನಗಣತಿಯ ಭಾಗವಾಗಿ ಒಂದು ಜಾತಿ ಜನಗಣತಿಯನ್ನು ಈ ಕೂಡಲೇ  ನಡೆಸುವುದು;

* ಎಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳು ಮತ್ತು ಸ್ಕಾಲರ್‌ಶಿಪ್ ಸಾರ್ವತ್ರಿಕವಾಗಿ ದೊರಕುವಂತೆ ಮಾಡುವುದು;

* ಒಂದು ನಿಗದಿತ ಅವಧಿಯ ನೇಮಕಾತಿ ಪ್ರಕ್ರಿಯೆ ಮೂಲಕ ಮೀಸಲು ಸ್ಥಾನಗಳು, ಹುದ್ದೆಗಳು ಮತ್ತು ಬಡ್ತಿ ಗಳಲ್ಲಿರುವ ಎಲ್ಲ ಬ್ಯಾಕ್ ಲಾಗ್ ಅನ್ನು  ಭರ್ತಿ ಮಾಡುವುದು;

* ಈವರೆಗೂ ಮೀಸಲಾತಿ ಸೌಲಭ್ಯ ನೀಡದ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ಜಾರಿ ಮಾಡುವುದು;

* ಕೈಯ್ಯಾರೆ ಮಲ ವಿಸರ್ಜನೆಯನ್ನು ಹೊರುವ ಪದ್ಧತಿಯನ್ನು ತಡೆಯುವ ಕಾನೂನಿನಲ್ಲಿರುವ ಲೋಪದೋಷಗಳನ್ನು ತಿದ್ದುಪಡಿಗಳ ಮೂಲಕ ತೆಗೆದು ಹಾಕುವುದು;  ಸೂಕ್ತ ಸಂಪನ್ಮೂಲದೊAದಿಗೆ ಒಂದು ನಿಗದಿತ ಅವಧಿಯ  ಪುನರ್ವಸತಿ ಯೋಜನೆಯನ್ನು ಜಾರಿ ಮಾಡುವುದು;

* ಸ್ವಚ್ಛತಾ ಸೇವೆಗಳಲ್ಲಿ ಇರುವ ಗುತ್ತಿಗೆ  ಕಾರ್ಮಿಕರನ್ನು ಖಾಯಂ ಮಾಡುವುದು;

* ವಸತಿ ಮತ್ತು ನಾಗರಿಕ ಸೌಲಭ್ಯಗಳನ್ನು ಹೊಂದುವುದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರರ ನಡುವೆ ವ್ಯಾಪಕವಾಗುತ್ತಿರುವ ಅಂತರವನ್ನು ಸೂಕ್ತ ಸಂಪನ್ಮೂಲದೊಂದಿಗೆ ಮುಚ್ಚಲು ಒಂದು ವಿಶೇಷ ಅಭಿಯಾನ ನಡೆಸುವುದು;

* ದಲಿತ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯವನ್ನು ವಿಸ್ತರಿಸುವುದು;

* ಚುನಾವಣಾ ವೆಚ್ಚಕ್ಕೆ ಹೊಣೆಗಾರಿಕೆ  ತರುವುದು.

ಪರಿಶಿಷ್ಟ ಪಂಗಡಗಳು

ಸಿಪಿಐ(ಎಂ ಈ ಕ್ರಮಗಳಿಗೆ ಬದ್ಧವಾಗಿದೆ :

•ಎಲ್ಲಾ ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಪಂಗಡಗಳಿಗೆ ಕಾಯ್ದಿರಿಸಿದ ಹುದ್ದೆಗಳಿಗೆ ಎಲ್ಲಾ ಖಾಲಿ ಹುದ್ದೆಗಳನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಿರುವ ಕಾಲಮಿತಿಯೊಳಗೆ ಭರ್ತಿ ಮಾಡುವುದು.

•ಆದಿವಾಸಿಗಳ ಭೂಮಿಯ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅವರಿಂದ ಕಾನೂನುಬಾಹಿರವಾಗಿ ಪ್ರತ್ಯೇಕಿಸಲಾದ ಭೂಮಿಯನ್ನು ಮರಳಿಸುವುದು. ‘ವಹಿವಾಟನ್ನು ಸುಗಮಗೊಳಿಸುವ ಹೆಸರಿನಲ್ಲಿ, ಭೂಸ್ವಾಧೀನಕ್ಕಾಗಿ ಆದಿವಾಸಿ ಸಮುದಾಯಗಳ ಒಪ್ಪಿಗೆಯ ಹಕ್ಕನ್ನು ತೆಗೆದುಹಾಕಿದ ವಿವಿಧ ಕಾನೂನುಗಳಿಗೆ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳುವುದು,

•ಅರಣ್ಯಗಳ ಖಾಸಗೀಕರಣವನ್ನು ಪ್ರತಿಪಾದಿಸುವ ರಾಷ್ಟ್ರೀಯ ಅರಣ್ಯ ನೀತಿಯನ್ನು ಹಿಂಪಡೆಯುವುದು ಮತ್ತು ಬುಡಕಟ್ಟು ಜನರ ಹಕ್ಕುಗಳನ್ನು ರಕ್ಷಿಸುವ ಸೂಕ್ತ ನೀತಿಯೊಂದಿಗೆ ಬದಲಾಯಿಸುವುದು.

•’ಪರಿಶಿಷ್ಟ ಪಂಗಡಗಳು ಮತ್ತು ಇತರ ಸಾಂಪ್ರದಾಯಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯಿದೆ 2006’ ನ್ನು ಪೂರ್ಣವಾಗಿ ಜಾರಿ ಮಾಡುವುದು; 1980 ಕ್ಕೆ ಕೊನೆಯಾಗುವಂತೆ (ಕಟ್-ಆಫ್ ವರ್ಷವಾಗಿ) ಇತರ ಸಾಂಪ್ರದಾಯಿಕ ಅರಣ್ಯವಾಸಿಗಳನ್ನು ಸೇರಿಸಲು ಕಾಯಿದೆಯನ್ನು ತಿದ್ದುಪಡಿ ಮಾಡುವುದು; ಆದಿವಾಸಿಗಳನ್ನು ಅವರ ವಾಸಸ್ಥಳಗಳಿಂದ ಒಕ್ಕಲೆಬ್ಬಿಸುವುದಿಲ್ಲ.

• ಆದಿವಾಸಿಗಳಿಂದ ಸಂಪಾದಿಸಲ್ಪಟ್ಟ ಸಣ್ಣ ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(ಒSP)ಯನ್ನು ಖಾತ್ರಿಪಡಿಸುವುದು ಮತ್ತು ಆದಿವಾಸಿ ಮಹಿಳೆಯರ ಹಕ್ಕುಗಳನ್ನು ರಕ್ಷಿಸುವುದು.

• ಅವರ ಅಧಿಕಾರ ವ್ಯಾಪ್ತಿಯಲ್ಲಿರುವ ಪ್ರದೇಶಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರದಲ್ಲಿ ಗ್ರಾಮ ಸಭೆಗಳ ಪಾತ್ರವನ್ನು ದುರ್ಬಲಗೊಳಿಸುವ, ಅರಣ್ಯ ಸಂರಕ್ಷಣೆ ಮತ್ತು ಪರಿಸರ ಸಂಬಂಧಿತ ನಿಯಮಗಳು ಮತ್ತು ಸರ್ಕಾರಿ ಸುತ್ತೋಲೆಗಳಿಗೆ ಎಲ್ಲಾ ತಿದ್ದುಪಡಿಗಳನ್ನು ತೆಗೆದುಹಾಕುವುದು,

• PESA ಮತ್ತು ಐದನೇ ಶೆಡ್ಯೂಲಿನ ಅಡಿಯಲ್ಲಿ ಹಕ್ಕುಗಳ ರಕ್ಷಣೆ; ಬುಡಕಟ್ಟು ಭಾಷೆಗಳು ಮತ್ತು ಲಿಪಿಗಳ ಮಾನ್ಯತೆ, ರಕ್ಷಣೆ ಮತ್ತು ಅಭಿವೃದ್ಧಿಯನ್ನು ಖಾತ್ರಿ ಪಡಿಸುವುದು; ಭಿಲಿ, ಗೊಂಡಿ ಮತ್ತು ಕೊಕ್ ಬೊರೊಕ್ ಬುಡಕಟ್ಟು ಭಾಷೆಗಳನ್ನು ಸಂವಿಧಾನದ ಎಂಟನೇ ಶೆಡ್ಯೂಲಿನಲ್ಲಿ ಸೇರಿಸುವುದು; ಸಂಬಂಧಿತ ರಾಜ್ಯ ಸರ್ಕಾರಗಳು ಆದಿವಾಸಿಗಳ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯ ಮಾಡಬೇಕು.

• ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋದರೂ ರಾಜ್ಯ ಸರ್ಕಾರಗಳ ಘೋಷಿತ ನಿವಾಸ ಪಟ್ಟಿಯಲ್ಲಿ ಆದಿವಾಸಿಗಳನ್ನು ಅವರ ಎಸ್.ಟಿ ಗುರುತು ಮತ್ತು ಹಕ್ಕುಗಳೊಂದಿಗೆ ತಾವಾಗಿಯೇ ಸೇರಿಸುವುದು.

• ಆಹಾರ ಭದ್ರತಾ ಕಾಯಿದೆಯಲ್ಲಿ ಉಚಿತ ಮತ್ತು ಸಬ್ಸಿಡಿ ಆಹಾರ ಧಾನ್ಯಗಳಿಗೆ ಅರ್ಹರ ಪಟ್ಟಿಯಲ್ಲಿ ಎಲ್ಲಾ ಬುಡಕಟ್ಟು ಜನರನ್ನು ಸೇರಿಸುವುದು

• ಬುಡಕಟ್ಟು ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ಹೆಚ್ಚಿಸುವುದು ಮತ್ತು ಎಲ್ಲಾ ಬುಡಕಟ್ಟು ಹಾಸ್ಟೆಲುಗಳ ಕಾಲಮಿತಿಯೊಳಗೆ ಲೆಕ್ಕಪರಿಶೋಧನೆ (ಆಡಿಟ್) ಮಾಡುವುದು ಮತ್ತು ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸುವುದು

ಅಲ್ಪಸಂಖ್ಯಾತರು

ಸಿಪಿಐ(ಎಂ ಈ ಕ್ರಮಗಳಿಗೆ ಬದ್ಧವಾಗಿದೆ :

• ಅಲ್ಪಸಂಖ್ಯಾತರ ಆಯೋಗವನ್ನು ವರ್ಧಿತ ಅಧಿಕಾರಗಳು ಮತ್ತು ನ್ಯಾಯವ್ಯಾಪ್ತಿಯೊಂದಿಗೆ ಶಾಸನಬದ್ಧ ಸಂಸ್ಥೆಯನ್ನಾಗಿ ಮಾಡುವುದು ಹಾಗೂ ಅದರ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನಮಾನವನ್ನು ಹೆಚ್ಚಿಸುವುದು.

• ಸಾಚಾರ್ ಸಮಿತಿಯ ಶಿಫಾರಸುಗಳನ್ನು ಕಾರ್ಯಗತಗೊಳಿಸಲು ಬುಡಕಟ್ಟು ಉಪ-ಯೋಜನೆಯ ರೀತಿಯಲ್ಲಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಉಪ-ಯೋಜನೆಯನ್ನು ರೂಪಿಸುವುದು; ಮುಸ್ಲಿಂ ಜನಸಂಖ್ಯೆಯು ಕೇಂದ್ರೀಕೃತವಾಗಿರುವ ಜಿಲ್ಲೆಗಳನ್ನು ಗುರಿಯಾಗಿಸಿ ಸಾಚಾರ್ ಸಮಿತಿಯ ನಂತರ ಜಾರಿಗೊಳಿಸಿದ ಅಲ್ಪಸಂಖ್ಯಾತ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮವನ್ನು ಹೆಚ್ಚಿಸುವುದು ಹಾಗೂ ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಸಂಪನ್ಮೂಲಗಳು ಮತ್ತು ವಿಶೇಷ ಉಪಕ್ರಮಗಳನ್ನು ಖಾತ್ರಿ ಪಡಿಸಲು ತಿದ್ದುಪಡಿ ಮಾಡುವುದು

•ಕ್ರಿಶ್ಚಿಯನ್ನರು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ಮುಂದುವರೆಯುತ್ತಿರುವ ದಾಳಿಯನ್ನು ತಡೆಗಟ್ಟುವ ಸಲುವಾಗಿ ‘ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯಗಳ ತಡೆಗಟ್ಟುವಿಕೆ ಕಾಯಿದೆ’ ಯನ್ನು ರಚಿಸುವುದು.

• ರಂಗನಾಥ್ ಮಿಶ್ರಾ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಮಾಡುವುದು; ತಕ್ಷಣದ ಕ್ರಮವಾಗಿ ಮುಸ್ಲಿಂ ಸಮುದಾಯದ ದೊಡ್ಡ ಭಾಗವಾಗಿರುವ ಎಲ್ಲಾ ಒಬಿಸಿ ಮುಸ್ಲಿಮರನ್ನು ನಿರ್ದಿಷ್ಟ ರಾಜ್ಯವಾರು ಹಂಚಿಕೆಯೊAದಿಗೆ ಒಬಿಸಿ ಕೋಟಾದಲ್ಲಿ ಸೇರ್ಪಡೆಗೊಳಿಸುವುದು

•ಮುಸ್ಲಿಮರಿಗೆ ಬ್ಯಾಂಕುಗಳ ಆದ್ಯತೆಯ ವಲಯದ ಸಾಲದ ಶೇ. 15 ನ್ನು ಮೀಸಲಿಡುವುದು; ಸ್ವಯಂ ಉದ್ಯೋಗಿ ಮುಸ್ಲಿಂ ಯುವಜನರಿಗೆ ಸಬ್ಸಿಡಿ ದರದಲ್ಲಿ ಸಾಲ ನೀಡುವುದÀನ್ನು ಖಾತ್ರಿಪಡಿಸುವುದು.

•ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡುವುದು; ಮುಸ್ಲಿಂ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸುವುದು.

•ಶಾಲೆಗಳಲ್ಲಿ ಉರ್ದು ಬೋಧನೆಯನ್ನು ಪ್ರೋತ್ಸಾಹಿಸುವುದು; ಉರ್ದುವಿನಲ್ಲಿ ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳನ್ನು ಪ್ರಕಟಿಸುವುದು ಮತ್ತು ಉರ್ದು ಶಿಕ್ಷಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು.

•ಭಯೋತ್ಪಾದನೆಯ ಪ್ರಕರಣಗಳಲ್ಲಿ ಖುಲಾಸೆಗೊಂಡ ಎಲ್ಲಾ ಮುಸ್ಲಿಮರಿಗೆ ಪರಿಹಾರ ಮತ್ತು ಪುನರ್ವಸತಿಯನ್ನು ಖಾತ್ರಿಪಡಿಸುವುದು ಮತ್ತು ಅವರನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿದ, ಚಿತ್ರಹಿಂಸೆಗೆ ಒಳಪಡಿಸಿದ ಅಧಿಕಾರಿಗಳಿಗೆ ಶಿಕ್ಷೆಯನ್ನು ಖಾತ್ರಿಪಡಿಸುವುದು; ಅಂತಹ ಎಲ್ಲಾ ಪ್ರಕರಣಗಳ ವಿಚಾರಣೆಗೆ ತ್ವರಿತ (ಫಾಸ್ಟ್ ಟ್ರ್ಯಾಕ್) ನ್ಯಾಯಾಲಯಗಳನ್ನು ಸ್ಥಾಪಿಸುವುದು.

•ಗುಂಪು ಹತ್ಯೆಯ (ಮೊಬ್ ಲಿಂಚಿಂಗ್)ಗೆ ಎಲ್ಲ ಪೀಡಿತರಿಗೂ ಪರಿಹಾರ.

ಇತರ ಹಿಂದುಳಿದ ವರ್ಗ(ಒಬಿಸಿ)ಗಳು

ಸಿಪಿಐ(ಎಂ) ಈ ಕ್ರಮಗಳಿಗೆ ಬದ್ಧವಾಗಿದೆ :

• ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 27 ಒಬಿಸಿ ಮೀಸಲಾತಿಯ ಸಮರ್ಪಕ ಜಾರಿಯನ್ನು ಖಚಿತಪಡಿಸುವುದು; ಒಬಿಸಿ ಮೀಸಲಾತಿಯನ್ನು ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಸ್ತರಿಸುವುದು.

• ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವನ್ನು ಬಲಪಡಿಸುವುದು.

• ಒಬಿಸಿ ಪ್ರಮಾಣಪತ್ರವನ್ನು ನೀಡುವ ವಿಧಾನಗಳನ್ನು ಸರಳಗೊಳಿಸುವುದು

• ಒಬಿಸಿ ಗಳ ಉದ್ಯೋಗ ಮತ್ತು ಬಡತನ ನಿರ್ಮೂಲನೆಗಾಗಿ ಎಸ್.ಸಿ/ಎಸ್.ಟಿ ಗಳಿಗಾಗಿ ರಚಿಸಲಾದ ಯೋಜನೆಗಳ ಮಾದರಿಯಲ್ಲಿ ಸಮಗ್ರ ಪ್ಯಾಕೇಜ್ ಅನ್ನು ವಿನ್ಯಾಸಗೊಳಿಸುವುದು.

ಲಿಂಗ ಅಲ್ಪಸಂಖ್ಯಾತರು(LGBTQ+)

ಸಿಪಿಐ(ಎಂ) ಈ ಕ್ರಮಗಳಿಗೆ ಬದ್ಧವಾಗಿದೆ :

•ಸಮುದಾಯದಿಂದ ವ್ಯಕ್ತವಾಗಿರುವ ಕಾಳಜಿಗಳನ್ನು ಪರಿಹರಿಸಲು ‘ತೃತೀಯ ಲಿಂಗಿ (ಟ್ರಾನ್ಸ್-ಜೆಂಡರ್) ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ, 2019’ ನ್ನು ತಿದ್ದುಪಡಿ ಮಾಡುವುದು

• ಸಲಿಂಗ ದಂಪತಿಗಳಿಗೆ ಅದು ಸಿವಿಲ್ ಯೂನಿಯನ್/ಸಲಿಂಗ ಸಹಜೀವನವಾಗಿದ್ದರೂ ವಿವಾಹದಂತೆಯೇ ಕಾನೂನಿನ ಮಾನ್ಯತೆ ಮತ್ತು ರಕ್ಷಣೆ; ಜತೆಗಾರ/ಜತೆಗಾತಿ ಯನ್ನು ಉತ್ತರಾಧಿಕಾರಕ್ಕಾಗಿ, ವಿಚ್ಛೇದ ಪ್ರಕರಣಗಳಲ್ಲಿ ಜೀವನಾಂಶಕ್ಕಾಗಿ, ಅವಲಂಬಿತ ಎಂದು ಪಟ್ಟಿ ಮಾಡಲು ಇತ್ಯಾದಿಗಳಿಗಾಗಿ ವಿಶೇಷ ವಿವಾಹ ಕಾಯಿದೆ, 1954 ರಂತೆಯೇ ಕಾಯಿದೆಗಳನ್ನು ರಚಿಸಿ ಜಾರಿಗೊಳಿಸುವುದು

• LGBTQ+ ನ್ನು ಒಳಗೊಂಡಿರುª ಒಂದು ಸಮಗ್ರ ತಾರತಮ್ಯ ವಿರೋಧಿ ಮಸೂದೆ.

• ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ; ಉದ್ಯೋಗದಲ್ಲಿ ಸಮತಳ ಮೀಸಲಾತಿಯನ್ನು ಖಾತ್ರಿಪಡಿಸುವುದು.

• LGBTQ+ ವ್ಯಕ್ತಿಗಳ ವಿರುದ್ಧದ ಅಪರಾಧಗಳನ್ನು LGBTQ+ ಅಲ್ಲದ ವ್ಯಕ್ತಿಗಳ ವಿರುದ್ಧದ ಅಪರಾಧಗಳಿಗೆ ಸರಿಸಮಾನವಾಗಿ ಪರಿಗಣಿಸುವುದನ್ನು ಖಚಿತಪಡಿಸಿಕೊಳ್ಳುವುದು.

• ಶೈಕ್ಷಣಿಕ ಸ್ಥಳಗಳಲ್ಲಿ ಲಿಂಗಕ್ಕೆ ಅನುಗುಣವಾಗಿಲ್ಲದ ಮತ್ತು LGBTQ+ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಶಿಕ್ಷಕರ ಬೆದರಿಸುವಿಕೆ, ಹಿಂಸೆ ಮತ್ತು ಕಿರುಕುಳವನ್ನು ಪರಿಹರಿಸಲು ಕ್ರಮಗಳು; ಲೈಂಗಿಕ ದೃಷ್ಟಿಕೋನ ಮತ್ತು ಲಿಂಗ ಗುರುತಿನ ಆಧಾರದ ಮೇಲೆ ರ‍್ಯಾಗಿಂಗ್ ಅನ್ನು ತಡೆಗಟ್ಟಲು  ಯುಜಿಸಿ ರ‍್ಯಾಗಿಂಗ್ ನೀತಿ ತಿದ್ದುಪಡಿಯನ್ನು (2016) ಜಾರಿ ಮಾಡುವುದು; ಇದು ತೃತೀಯ ಲಿಂಗಿಗಳು, ಅಂತರ್-ಲಿಂಗಿಗಳು ಮತ್ತು ಲಿಂಗಕ್ಕೆ ಅನುಗುಣವಾಗಿಲ್ಲದ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಅಧ್ಯಾಪಕರಿಗೆ ಸುಲಭವಾಗಿ ಪ್ರವೇಶಿಸಬಹುದಾದ ಮತ್ತು ಸುರಕ್ಷಿತ ಸ್ನಾನಗೃಹಗಳನ್ನು ಖಾತ್ರಿಪಡಿಸುವುದು

• ಮಾಹಿತಿ ನೀಡಿ ಒಪ್ಪಿಗೆ ಪಡೆಯದೆ  LGBTQ+ ವ್ಯಕ್ತಿಗಳಿಗೆ ಲೈಂಗಿಕ ಬದಲಾವಣೆಯ ಶಸ್ತ್ರಚಿಕಿತ್ಸೆಗಳನ್ನು ನಡೆಸಬಾರದು

ವಿಕಲಚೇತನ ವ್ಯಕ್ತಿಗಳು

ಸಿಪಿಐ(ಎಂ) ಈ ಕ್ರಮಗಳಿಗೆ ಬದ್ಧವಾಗಿದೆ :

•ವಿಕಲಚೇತನ ವ್ಯಕ್ತಿಗಳ ಸಮಸ್ಯೆಗಳನ್ನು ಮಿಶ್ರ-ವಲಯ (cross-sectoral) ಎಂದು ಗುರುತಿಸುವುದು; ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯಿದೆ, 2016 (RPD ಕಾಯಿದೆ) ಉದ್ದೇಶಗಳಿಗೆ ಅನ್ವಯಿಸುವಂತೆ ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಮರುವಿನ್ಯಾಸಗೊಳಿಸುವುದು.

•ಲಿಂಗ ಬಜೆಟಿನ ರೀತಿಯಲ್ಲಿಯೇ ವಿಕಲಚೇತನರ ಬಜೆಟನ್ನು ಪರಿಚಯಿಸುವುದು; ಸಚಿವಾಲಯಗಳಲ್ಲಿ ಶೇ. 5 ಹಂಚಿಕೆಗಳನ್ನು ವಿಕಲಚೇತನರಿಗೆ ಮೀಸಲಿಡಬೇಕು; RPD ಕಾಯಿದೆಯ ವಿವಿಧ ಆದೇಶಗಳನ್ನು ಪೂರೈಸಲು ಮತ್ತು ಮಾನಸಿಕ ಆರೋಗ್ಯ ಕಾಯಿದೆ, 2017 ರ ಅನುಷ್ಠಾನಕ್ಕಾಗಿ ಹಂಚಿಕೆಗಳನ್ನು ಹೆಚ್ಚಿಸುವುದು

• ವಿಕಲಚೇತನರಿಗೆ (ಸಾರ್ವಜನಿಕ ಪ್ರದೇಶಗಳಿಗೆ) ಪ್ರವೇಶದ ಕುರಿತ RPD  ಕಾಯಿದೆಯ ಕಡ್ಡಾಯವಾದ ನಿಬಂಧನೆಗಳನ್ನು ಅನುಸರಿಸುವುದು

• ಸಹಾಯಕ ಸಾಧನಗಳು ಮತ್ತು ಉಪಕರಣಗಳ ಮೇಲಿನ ಜಿ.ಎಸ್.ಟಿ ಯನ್ನು ತೆಗೆದು ಹಾಕುವುದು

• ಪ್ರಮಾಣೀಕರಣ, ಕಾರ್ಯವಿಧಾನದ ಸರಳೀಕರಣ, ತ್ವರಿತ ಪ್ರಮಾಣೀಕರಣ ಮತ್ತು UDID ಕಾರ್ಡುಗಳ ಸಾರ್ವತ್ರಿಕ ಸಿಂಧುತ್ವವನ್ನು ಖಚಿತಪಡಿಸುವುದು.

•ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಖಾಸಗಿ ವಲಯಕ್ಕೆ ವಿಸ್ತರಿಸುವುದು; ಒಳಗೊಳ್ಳುವ ಶಿಕ್ಷಣದ ಆದೇಶವನ್ನು ಜಾರಿಗೊಳಿಸುವುದು.

• ರಾಜ್ಯದಲ್ಲಿ ಕನಿಷ್ಠ ಕೂಲಿ/ಜೀವನ ನಿರ್ವಹಣಾ ವೆಚ್ಚದೊಂದಿಗೆ ಹೊಂದಿಸಿದ 6000 ರೂ.ಗಳ ಕನಿಷ್ಠ ಏಕರೂಪದ ವಿಕಲಚೇತನ ಪಿಂಚಣಿ ನಿಗದಿ ಮಾಢುವುದು: ಅದಕ್ಕೆ ಸರಿಸಮಾನವಾದ ಆರೈಕೆದಾರ ಭತ್ಯೆಯನ್ನು ಪರಿಚಯಿಸಿ ಆರೈಕೆ ಕಾರ್ಯಕರ್ತÀರಿಗೆ ನೀಡುವುದು; ಎಲ್ಲಾ ವಿಕಲಚೇತನರಿಗೆ ‘ಅಂತ್ಯೋದಯ ಅನ್ನ ಯೋಜನಾ’ ಕಾರ್ಡುಗಳನ್ನು ಒದಗಿಸಬೇಕು; ಎಲ್ಲಾ ವಿಕಲಚೇತನರಿಗೆ ಉಚಿತ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆ.

• ವಿಕಲಚೇತನ ಮಹಿಳೆಯರನ್ನು ಜೀವನೋಪಾಯ ಮತ್ತು ವಸತಿಗಾಗಿ ಹಾಗೂ ಲೈಂಗಿಕ ಮತ್ತು ಸಂತಾನೋತ್ಪತ್ತಿ ಹಕ್ಕುಗಳನ್ನು ಚಲಾಯಿಸಲು ಬೆಂಬಲಿಸುವುದು.

• ಸಂವಿಧಾನದ ಪರಿಚ್ಚೇದ 15 ಮತ್ತು 16 ನ್ನು ತಿದ್ದುಪಡಿ ಮಾಡಿ ವಿಕಲಚೇತನದ ಕಾರಣಕ್ಕೆ ತಾರತಮ್ಯ ಎಸಗುವುದನ್ನು  ನಿಷೇಧಿಸುವುದು; ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ವಿಶ್ವಸಂಸ್ಥೆಯ ಸಮಾವೇಶದ ನಿಬಂಧನೆಗಳಿಗೆ ಅನುಗುಣವಾಗಿ ಎಲ್ಲಾ ಕಾನೂನುಗಳನ್ನು ಸಮನ್ವಯಗೊಳಿಸುವುದು.

ಜನರ ಕಲ್ಯಾಣಕ್ಕಾಗಿ

ಸಿಪಿಐ(ಎಂ) ಇದಕ್ಕಾಗಿ ಕೆಲಸ ಮಾಡುತ್ತದೆ:

ಶಿಕ್ಷಣ

• ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಜಾರಿಯನ್ನು ನಿಲ್ಲಿಸುವುದು; ಶಿಕ್ಷಣದ ವಾಣಿಜ್ಯೀಕರಣ, ಕೋಮುವಾದ ಮತ್ತು ಕೇಂದ್ರೀಕರಣವನ್ನು ತಿರಸ್ಕರಿಸುವುದು.

• ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವು ಜಿಡಿಪಿಯ ಶೇ. 6

• ಶಿಕ್ಷಣ ಮತ್ತು ಪಠ್ಯ ಪುಸ್ತಕಗಳಲ್ಲಿನ ಕೋಮು ವಿಷಯವನ್ನು ಕಿತ್ತುಹಾಕಲು ಕ್ರಮ ವಹಿಸುವುದು; ಪ್ರಭುತ್ವ ಅನುದಾನಿತ ಸಂಸ್ಥೆಗಳಲ್ಲಿ ಯಾವುದೇ ಉಪಕುಲಪತಿಗಳು ಅಥವಾ ಪ್ರಮುಖ ಸಿಬ್ಬಂದಿಗಳು ಜಾತ್ಯತೀತ ವಿರೋಧಿ ಅಭಿಪ್ರಾಯಗಳನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು

•ವಿಶ್ವವಿದ್ಯಾನಿಲಯಗಳು, ಇಂಡಿಯನ್ ಕೌನ್ಸಿಲ್ ಫಾರ್ ಹಿಸ್ಟಾರಿಕಲ್ ರಿಸರ್ಚ್, ಇಂಡಿಯನ್ ಕೌನ್ಸಿಲ್ ಫಾರ್ ಸೋಶಿಯಲ್ ಸೈನ್ಸ್ ರಿಸರ್ಚ್, ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್, ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಮುಂತಾದ ಸಂಸ್ಥೆಗಳಿಗೆ ಎಲ್ಲಾ ನೇಮಕಾತಿಗಳಿಗೆ ಶೈಕ್ಷಣಿಕ ಶ್ರೇಷ್ಠತೆ ಮತ್ತು ವೃತ್ತಿಪರ ಸಾಮರ್ಥ್ಯವು ಏಕೈಕ ಮಾನದಂಡವಾಗಬೇಕು ಪಠ್ಯಕ್ರಮದ ಕೋಮುವಾದೀಕರಣವನ್ನು ಹಿಂಪಡೆಯಲು ತಜ್ಞರ ಪರಿಶೀಲನಾ ಸಮಿತಿಯನ್ನು ರಚಿಸುವುದು.

• ಒಂದು ಸಾಮಾನ್ಯ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸುವುದು; ಸರ್ಕಾರಿ ಶಾಲೆಗಳ ಮುಚ್ಚುವಿಕೆ ಅಥವಾ ವಿಲೀನವನ್ನು ನಿಲ್ಲಿಸಿ; ಕೇರಳ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ; ವಿದ್ಯಾರ್ಥಿ-ಶಿಕ್ಷಕ ಅನುಪಾತವನ್ನು 20:1 ಕ್ಕೆ ಇಳಿಸುವುದು

• ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಒದಗಿಸಲು ಶಿಕ್ಷಣದ ಹಕ್ಕು (RTE)  ಕಾಯಿದೆಯನ್ನು ಜಾರಿಗೊಳಿಸುವುದು; ನೆರೆಹೊರೆಯ ಶಾಲಾ ಶಿಕ್ಷಣದ ಪರಿಕಲ್ಪನೆಯನ್ನು ಸಾಂಸ್ಥಿಕಗೊಳಿಸಲು RTE ಕಾಯಿದೆಯನ್ನು ತಿದ್ದುಪಡಿ ಮಾಡುವುದು, ದನ್ನು ಪ್ರಾಥಮಿಕ ಶಿಕ್ಷಣದ ನಂತರವೂ ವಿಸ್ತರಿಸುವುದು ಮತ್ತು ವಿದ್ಯಾಭ್ಯಾಸ ಮುಂದುವರಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಒದಗಿಸುವುದು; ಪ್ರತಿ ಶಾಲೆಯಲ್ಲೂ RTE ನಿಬಂಧನೆಗಳ ಅನುಸರಣೆಯಾಗಿದೆ ಎಂದು ಖಚಿತಪಡಿಸಿಕೊಳ್ಳುವುದು.

•ಶಾಲೆಗಳಿಂದ ಹೊರಬೀಳುವುದನ್ನು ಕಡಿಮೆ ಮಾಡಲು ಮಾಧ್ಯಮಿಕ ಶಿಕ್ಷಣವನ್ನು ವಿಸ್ತರಿಸುವುದು ಮತ್ತು ಅದನ್ನು ಸಾರ್ವತ್ರಿಕಗೊಳಿಸುವುದು; SSA ಶಾಲೆಗಳಲ್ಲಿ ಶಿಕ್ಷಣದ ಮತ್ತು ಮೂಲಸೌಕರ್ಯದ ಗುಣಮಟ್ಟವನ್ನು ಸುಧಾರಿಸುವುದು,  ವಿದ್ಯಾರ್ಥಿನಿಯರು ಮತ್ತು ಹಿಂದುಳಿದ ಪ್ರದೇಶಗಳ ಮತ್ತು ಅಂಚಿನಲ್ಲಿರುವ ಗುಂಪುಗಳ ವಿದ್ಯಾರ್ಥಿಗಳನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿಯಮಗಳು, ಸಮಯ ಮತ್ತು ಇತರ ಅಂಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು

•ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಕ್ಯಾಂಪಸ್ ಗಳಲ್ಲಿ ಲೈಂಗಿಕ ಕಿರುಕುಳದ ವಿರುದ್ಧ ಲಿಂಗ ಸಂವೇದನೆ ಸಮಿತಿಗಳನ್ನು ರಚಿಸುವುದು

•ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕಗಳು, ದಾಖಲಾತಿ, ಮತ್ತು ಪಠ್ಯಕ್ರಮಗಳನ್ನು ನಿಯಂತ್ರಿಸಲು ಕಾನೂನನ್ನು ಜಾರಿಗೊಳಿಸುವುದು.

•ಉನ್ನತ ಶಿಕ್ಷಣದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ನೀಡದಿರುವುದು.

• ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಗುರುತಿಸುವ ರೀತಿಯಲ್ಲಿ ಶಿಕ್ಷಣದ ಎಲ್ಲಾ ಹಂತಗಳಲ್ಲಿ ವೈಜ್ಞಾನಿಕ, ಪ್ರಗತಿಪರ ಮತ್ತು ಪ್ರಜಾಸತ್ತಾತ್ಮಕ ವ್ಯಾಸಂಗಕ್ರಮ ಮತ್ತು ಪಠ್ಯಕ್ರಮಗಳನ್ನು ರೂಪಿಸುವುದು.

•ಪ್ರಸ್ತುತ ಗುತ್ತಿಗೆ ಅಥವಾ ಪ್ಯಾರಾ ಶಿಕ್ಷಕರನ್ನು ಕ್ರಮಬದ್ಧಗೊಳಿಸುವುದು

•ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಖಾತರಿಪಡಿಸುವುದು; ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಯೂನಿಯನ್ ಚುನಾವಣೆಗಳನ್ನು ಕಡ್ಡಾಯಗೊಳಿಸುವುದು.

•ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯ ಮೇಲಿನ ದಾಳಿಯನ್ನು ನಿಲ್ಲಿಸುವುದು

• ಉನ್ನತ ಶಿಕ್ಷಣಕ್ಕಾಗಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವುದು

• ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಸಾಗರೋತ್ತರ ಫೆಲೋಶಿಪ್ ಅನ್ನು ಮರುಸ್ಥಾಪಿಸುವುದು

• ದಲಿತ ಮತ್ತು ಆದಿವಾಸಿ ಸಮುದಾಯಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಸಹಾಯವನ್ನು ಒದಗಿಸಲು ರೋಹಿತ್ ಕಾಯಿದೆಯನ್ನು ಜಾರಿಗೊಳಿಸುವುದು; ಮಾನಸಿಕ ಆರೋಗ್ಯ ಶಿಬಿರಗಳು ಮತ್ತು ವಿದ್ಯಾರ್ಥಿಗಳು ತಲುಪಬಹುದಾದ ಸಹಾಯವಾಣಿಗಳು.

ಆರೋಗ್ಯ

• ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸೂಕ್ತ ಕಾನೂನುಗಳನ್ನು ಜಾರಿಗೊಳಿಸುವ ಮೂಲಕ ಉಚಿತ ಆರೋಗ್ಯ ರಕ್ಷಣೆಯ ಹಕ್ಕನ್ನು ಕೋರ್ಟಿನಲ್ಲಿ ಸಾಧಿಸಬಹುದಾಧ ಹಕ್ಕಾಗಿಸುವುದು

• ಒಕ್ಕೂಟವಾದಕ್ಕೆ ಬಲವಾದ ಒತ್ತು ನೀಡುವ ಮೂಲಕ ಆರೋಗ್ಯ ಸೇವೆಗಳನ್ನು ರಾಜ್ಯ ವಿಷಯವಾಗಿ ಉಳಿಸಿಕೊಳ್ಳುವುದು

• ಆರೋಗ್ಯದ ಮೇಲಿನ ಸಾರ್ವಜನಿಕ ವೆಚ್ಚದ ಪ್ರಮಾಣವನ್ನು ಜಿಡಿಪಿಯ ಶೇ. 5ಕ್ಕೆ ಏರಿಸುವುದು, ಕೇಂದ್ರದಿಂದ ಕನಿಷ್ಠ ಶೇ.2 ಬರಬೇಕು

• ಆರೋಗ್ಯದ ಮೇಲೆ ಖರ್ಚು ಮಾಡುವ ಸ್ವಂತ ಹಣದ ಪ್ರಮಾಣವನ್ನು ಆರೋಗ್ಯ ವೆಚ್ಚದ ಶೇಕಡಾ 25 ಕ್ಕಿಂತ ಕೆಳಗೆ ತರುವುದು; ಎಲ್ಲ ಔಷಧಿಗಳು, ರೋಗನಿರ್ಣಯ ಮತ್ತು ಲಸಿಕೆಗಳು ಸೇರಿದಂತೆ ಎಲ್ಲಾ ಹಂತಗಳಲ್ಲಿ ಗುಣಮಟ್ಟದ ಆರೋಗ್ಯ ರಕ್ಷಣೆಯ ಉಚಿತ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ವಿಸ್ತರಿಸಿ ಬಲಪಡಿಸುವುದು ಮತ್ತು ಸ್ಥಳೀಯ ಸಮುದಾಯಗಳಿಗೆ ಉತ್ತರದಾಯಿತ್ವವನ್ನು ಹೊಂದುವುದು

• ಸರ್ಕಾರದಿಂದ ಅನುದಾನಿತ PMJAY /ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ರದ್ದುಗೊಳಿಸಿ, ಅದನ್ನು ಜನ-ಕೇಂದ್ರಿತ ಸಾರ್ವತ್ರಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯಾಗಿ ಬದಲಾಯಿಸುವುದು

• ಆರೋಗ್ಯ ಸೇವೆಗಳ ಖಾಸಗೀಕರಣ ಮತ್ತು ಸಾರ್ವಜನಿಕ-ಖಾಸಗಿ ಪಾಲುದಾರಿಕೆ (ಪಿಪಿಪಿ) ಗಳ ಮೂಲಕ ಸೇವೆಗಳ ಹೊರಗುತ್ತಿಗೆಯನ್ನು ಹಿಮ್ಮೆಟ್ಟಿಸುವುದು

• ಸಂಘಟಿತ ಮತ್ತು ಅಸಂಘಟಿತ ವಲಯದಲ್ಲಿ ಕಾರ್ಮಿಕರ ಆರೋಗ್ಯವನ್ನು ಪರಿಣಾಮಕಾರಿಯಾಗಿ ರಕ್ಷಿಸಲು ಮತ್ತು ಔದ್ಯೋಗಿಕ ಆರೋಗ್ಯವನ್ನು ಒಳಗೊಳ್ಳಲು ಇ.ಎಸ್.ಐ ಯೋಜನೆಯನ್ನು ವಿಸ್ತರಿಸುವುದು ಮತ್ತು ಸುಧಾರಿಸುವುದು.

• ಖಾಸಗಿ ಆರೋಗ್ಯ ಸೇವಾ ವಲಯವನ್ನು, ವಿಶೇಷವಾಗಿ ಕಾರ್ಪೊರೇಟ್ ಆಸ್ಪತ್ರೆಗಳನ್ನು ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ ವ್ಯಾಪ್ತಿಗೆ ತಂದು ಪರಿಣಾಮಕಾರಿಯಾಗಿ ನಿಯಂತ್ರಿಸುವುದು; ರೋಗಿಗಳ’ ಹಕ್ಕುಗಳ ಸನ್ನದು ಅನುಷ್ಠಾನ ಮತ್ತು ಸಮಂಜಸವಾದ ದರಗಳು ಮತ್ತು ವಿವಿಧ ಸೇವೆಗಳ ಗುಣಮಟ್ಟವನ್ನು ಪ್ರಮಾಣೀಕರಿಸುವುದನ್ನು ಖಾತ್ರಿಪಡಿಸಲು ರಾಷ್ಟ್ರೀಯ ಕ್ಲಿನಿಕಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್, 2010 ಅನ್ನು ಸೂಕ್ತವಾಗಿ ಮಾರ್ಪಡಿಸುವುದು

• ‘ರಾಷ್ಟ್ರೀಯ ಆರೋಗ್ಯ ಮಿಷನ್’ ನೊಂದಿಗೆ ಪರಿಷ್ಕೃತ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ಜೋಡಿಸುವ ಮೂಲಕ ಮಾನಸಿಕ ಅಸ್ವಸ್ಥತೆ ಹೊಂದಿರುವ ವ್ಯಕ್ತಿಗಳ ಸಮಗ್ರ ಚಿಕಿತ್ಸೆ ಮತ್ತು ಆರೈಕೆಗೆ ಸಮರ್ಪಕವಾದ ಅವಕಾಶವನ್ನು ಖಚಿತಪಡಿಸಿಕೊಳ್ಳುವುದು

• ಅತಾರ್ಕಿಕ ಮತ್ತು ಅಪಾಯಕಾರಿ ಸೂತ್ರೀಕರಣಗಳನ್ನು ತೊಡೆದು ಹಾಕುವುದು, ಪರಿಣಾಮಕಾರಿ ವೆಚ್ಚ-ಆಧಾರಿತ ಬೆಲೆ ನಿಯಂತ್ರಣಗಳೊಂದಿಗೆ ಮತ್ತು ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಲೇಬಲಿಂಗ್, ಪ್ರಿಸ್ಕ್ರಿಪ್ಷನ್ ಮತ್ತು ಲಭ್ಯತೆಯನ್ನು ಒಳಗೊಂಡÀ ಜನ-ಕೇಂದ್ರಿತ, ತರ್ಕಬದ್ಧ ಔಷಧೀಯ ನೀತಿಯನ್ನು ಅಳವಡಿಸಿಕೊಳ್ಳುವುದು; ಎಲ್ಲಾ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಅಗತ್ಯ ಔಷಧಿಗಳ ಲಭ್ಯತೆಯನ್ನು ಉಚಿತವಾಗಿ ಖಚಿತಪಡಿಸಿಕೊಳ್ಳುವುದು

•ನಿರ್ಣಾಯಕ ಮಹತ್ವದ ಕ್ಷೇತ್ರಗಳಲ್ಲಿ ಔಷಧೀಯ ಬಹುರಾಷ್ಟ್ರೀಯ ಕಂಪನಿಗಳ ಏಕಸ್ವಾಮ್ಯವನ್ನು ಮುರಿಯಲು ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು.

•ಅಗತ್ಯ ಔಷಧಗಳು ಮತ್ತು ಲಸಿಕೆಗಳ ಉತ್ಪಾದನೆಗೆ ಬಳಸಿಕೊಳ್ಳಲು ಸಾರ್ವಜನಿಕ ವಲಯದ ಔಷಧೀಯ ಘಟಕಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಖಾಸಗೀಕರಣದ ಪ್ರವೃತ್ತಿಯಿಂದ ಹಿಮ್ಮೆಟ್ಟಿಸುವುದು; ಓಪನ್ ಸೋರ್ಸ್ ಡ್ರಗ್ ಡಿಸ್ಕವರಿ (OSDD) ಕಾರ್ಯಕ್ರಮಗಳನ್ನು ಮರುಸ್ಥಾಪಿಸಿ ಮತ್ತು ಕೈಗೆಟುಕುವ ಔಷಧಿಗಳಿಗೆ ಸಹಯೋಗದ R&D; ಜೀವ ಉಳಿಸುವ ಮತ್ತು ನಿರ್ಣಾಯಕ ಔಷಧಿಗಳಿಗಾಗಿ ಜಿ.ಎಸ್.ಟಿ ಯನ್ನು ತೆಗೆದುಹಾಕಿ.

•ಕ್ಲಿನಿಕಲ್ ಪ್ರಯೋಗಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದು ಮತ್ತು ಅನೈತಿಕ ಕ್ಲಿನಿಕಲ್ ಪ್ರಯೋಗಗಳನ್ನು ನಿಷೇಧಿಸುವುದು; ಕ್ಲಿನಿಕಲ್ ಪ್ರಯೋಗದಲ್ಲಿ ಭಾಗವಹಿಸುವವರಿಗೆ ಹಕ್ಕುಗಳ ನ್ಯಾಯಸಮ್ಮತವಾದ ಸನ್ನದನ್ನು ಅಭಿವೃದ್ಧಿಪಡಿಸುವುದು

• ಭಾರತದ ಪೇಟೆಂಟ್ ಕಾನೂನುಗಳ ದುರ್ಬಲಗೊಳಿಸುವುದನ್ನು ವಿರೋಧಿಸುವುದು ಮತ್ತು ಕಡಿಮೆ-ವೆಚ್ಚದ ಜೆನೆರಿಕ್ ಔಷಧಿಗಳ ದೇಶೀಯ ಉತ್ಪಾದನೆಯನ್ನು ತಡೆಯುವ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿನ ನಿಬಂಧನೆಗಳನ್ನು ತಿರಸ್ಕರಿಸುವುದು

• ಆಯುಷ್ ಔಷಧ ಪದ್ಧತಿಯ ಪರಿಣಾಮಕಾರಿ, ಸೂಕ್ತವಾದ ನಿಯಂತ್ರಕ ಮೇಲ್ವಿಚಾರಣೆ, ಅಂತಹ ವ್ಯವಸ್ಥೆಗಳ ಪುರಾವೆ-ಆಧಾರಿತ ಬಳಕೆಯನ್ನು ಬೆಂಬಲಿಸುವುದು

•ವೈದ್ಯರು ಮತ್ತು ದಾದಿಯರಿಗೆ ತರಬೇತಿ ನೀಡಲು ಹೊಸ ಸಾರ್ವಜನಿಕ ಕಾಲೇಜುಗಳ ಸ್ಥಾಪನೆಗೆ ಆದ್ಯತೆ ನೀಡುವುದು, ವಿಶೇಷವಾಗಿ ಪೂರ್ಣ ಸೇವೆ ದೊರಕದ ಈಶಾನ್ಯ ಮತ್ತು ಬಡ ರಾಜ್ಯಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುವುದು.

•ಔಷಧಿಗಳ ಮಾರ್ಕೆಟಿಂಗ್ ಕ್ರಮಗಳ ಮೇಲೆ ನೈತಿಕ ಸಂಹಿತೆಯನ್ನು ಕಡ್ಡಾಯಗೊಳಿಸುವುದು

ಉದ್ಯೋಗ ಖಾತರಿ

•ಎಲ್ಲಾ ನಗರ ಪ್ರದೇಶಗಳಲ್ಲಿ ಉದ್ಯೋಗ ಖಾತರಿಗಾಗಿ ಕಾನೂನನ್ನು ಜಾರಿಗೊಳಿಸುವುದು.

• ಮನರೇಗಾದಲ್ಲಿ 200 ದಿನಗಳ ಕೆಲಸವನ್ನು ಖಚಿತಪಡಿಸುವುದು; ಗ್ರಾಮೀಣ ಪ್ರದೇಶಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸುವ ಎಲ್ಲಾ ಚಟುವಟಿಕೆಗಳನ್ನು ಸೇರಿಸಲು ಮನರೇಗಾ ಅಡಿಯಲ್ಲಿ ಅನುಮತಿಸುವ ಕೆಲಸಗಳ ಪಟ್ಟಿಯನ್ನು ವಿಸ್ತರಿಸುವುದು; ಆಪ್ (ಅಪ್ಲಿಕೇಶನ್) ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಹಿಂತೆಗೆದುಕೊಳ್ಳುವುದು

•ಉದ್ಯೋಗಗಳನ್ನು ಸೃಷ್ಟಿಸುವ ಮಾನವಶ್ರಮ-ಆಧಾರಿತ ಕೈಗಾರಿಕೆಗಳನ್ನು ಬೆಂಬಲಿಸಲು ವಿಶೇಷ ಪ್ಯಾಕೇಜ್ ನೀಡುವುದು.

• ಮಾನವಶ್ರಮ-ಆಧಾರಿತ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ನೀತಿಗಳ ಮೂಲಕ ನಿರುದ್ಯೋಗವನ್ನು ಕಡಿಮೆ ಮಾಡುವುದು; ಸಂಬAಧಪಟ್ಟ ಸಂಸ್ಥೆಗಳಲ್ಲಿ ಉದ್ಯೋಗ ಸೃಷ್ಟಿಯೊಂದಿಗೆ ಉದ್ಯೋಗದಾತರಿಗೆ ಹಣಕಾಸಿನ ನೆರವು/ಪ್ರೋತ್ಸಾಹಗಳು/ರಿಯಾಯತಿಗಳನ್ನು ತಳುಕು ಹಾಕುವುದು

•ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವುದು; ಸರ್ಕಾರಿ ಹುದ್ದೆಗಳ ನೇಮಕಾತಿ ಮೇಲಿನ ನಿಷೇಧವನ್ನು ಮತ್ತು ವಾರ್ಷಿಕ ಶೇ. 3 ಹುದ್ದೆಗಳ ವಾಪಸಾತಿಯ ನಿಯಮವನ್ನು ತೆಗೆದು ಹಾಕುವವುದು; ಎಲ್ಲಾ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಯನ್ನು ಖಚಿತಪಡಿಸುವುದು

ಹಿರಿಯ ನಾಗರಿಕರು

• ಆದಾಯ ತೆರಿಗೆ ಪಾವತಿದಾರರು ಅಥವಾ ಯಾವುದೇ ಇತರ ಮೂಲದಿಂದ ಹೆಚ್ಚಿನ ಪಿಂಚಣಿ ಪಡೆಯುವವರನ್ನು ಹೊರತುಪಡಿಸಿ, ಭಾರತದ ಎಲ್ಲಾ ಹಿರಿಯ ನಾಗರಿಕರಿಗೆ ವೈಯಕ್ತಿಕ ಹಕ್ಕಾಗಿ, ತಕ್ಷಣವೇ ಸಾರ್ವಜನಿಕ ಸಂಚಯಿತ ನಿಧಿಯಿಂದ ಅನುದಾನಿತವಾದ, ಸಾರ್ವತ್ರಿಕ ಮತ್ತು ಕೊಡುಗೆ ರಹಿತ ವೃದ್ಧಾಪ್ಯ ಪಿಂಚಣಿ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ, ಹಿರಿಯ ನಾಗರಿಕರಿಗೆ ಕನಿಷ್ಠ ವೇತನದ ಶೇಕಡಾ 50 ಕ್ಕಿಂತ ಕಡಿಮೆಯಿಲ್ಲದ ಮಾಸಿಕ ಪಿಂಚಣಿ ಅಥವಾ ತಿಂಗಳಿಗೆ ರೂ 6,000/- (ಇವುಗಳಲ್ಲಿ ಯಾವುದು ಹೆಚ್ಚೋ ಆ) ಮಾಸಿಕ ಪಿಂಚಣಿಯ ಕನಿಷ್ಠ ಮೊತ್ತ ಪಡೆದು ಘನತೆಯಿಂದ ಬದುಕಲು ಅನುವು ಮಾಡಿಕೊಡುವುದು

•ಸ್ವಯಂಚಾಲಿತ ವಾರ್ಷಿಕ ಪರಿಷ್ಕರಣೆಗಾಗಿ ಪಿಂಚಣಿಯನ್ನು ಗ್ರಾಹಕರ ಬೆಲೆಗಳ ಸೂಚ್ಯಂಕಕ್ಕೆ ಸೂಚೀಕರಣಗೊಳಿಸುವುದು.

•ವೃದ್ಧಾಪ್ಯ ಪಿಂಚಣಿಗಾಗಿ ಏಕಗವಾಕ್ಷಿ ವ್ಯವಸ್ಥೆಯನ್ನು ಹೊಂದಿಸುವುದು.

• ಪ್ರಭುತ್ವ ಬೆಂಬಲದೊಂದಿಗೆ ವೃದ್ಧಾಶ್ರಮಗಳು/ಹಗಲು ಉಪಚಾರದ ಕೇಂದ್ರಗಳು/ಉಪಶಮನ ಆರೈಕೆ ಕೇಂದ್ರಗಳ ಜಾಲವನ್ನು ನಿರ್ಮಿಸುವುದು; ವೃದ್ಧಾಪ್ಯ ಆರೈಕೆಗೆ ಹೆಚ್ಚಿನ ಬೆಂಬಲ

ಮಾಜಿ ಸೈನಿಕರು

•ಒಂದು ಶ್ರೇಣಿ, ಒಂದು ಪಿಂಚಣಿ’ಯನ್ನು  ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸುವುದು; ಸಶಸ್ತ್ರ ಪಡೆಗಳ ಸಿಬ್ಬಂದಿಗೆ ನೀಡಲಾಗುವ ಅಪಘಾತ ಪಿಂಚಣಿ ಮತ್ತು ಅಂಗವೈಕಲ್ಯ ಪರಿಹಾರದ ಹೊಸ ಕಾಯಿದೆಗಳ ಬಗ್ಗೆ ಕಾಳಜಿಯನ್ನು ಪರಿಹರಿಸುವುದು

•ನಿವೃತ್ತ ಕೇಂದ್ರೀಯ ಅರೆಸೈನಿಕ ಪಡೆಗಳ ಸಿಬ್ಬಂದಿ, ವಿಧವೆಯರು ಮತ್ತು ಅವಲಂಬಿತ ವ್ಯಕ್ತಿಗಳ ಕಲ್ಯಾಣವನ್ನು ಖಚಿತಪಡಿಸುವುದು, ಅವರನ್ನು ಸಶಸ್ತ್ರ ಪಡೆಗಳಿಗೆ ಸಮಾನವಾಗಿ ಪರಿಗಣಿಸುವುದು

•ಮಾಜಿ ಸೈನಿಕರ ಕುಂದುಕೊರತೆಗಳು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಮಾಜಿ-ಸಶಸ್ತ್ರ ಪಡೆಗಳ ಅಧಿಕಾರಿಯ ನೇತೃತ್ವದಲ್ಲಿ ಮಾಜಿ ಸೈನಿಕರಿಗಾಗಿ ಆಯೋಗವನ್ನು ರಚಿಸುವುದು

ನಗರ ಸಮಸ್ಯೆಗಳು

ನಗರೀಕರಣದ ಗತಿ ತೀವ್ರಗೊಳ್ಳುತ್ತಿರುವ ಮತ್ತು ಅಭಿವೃದ್ಧಿಯಲ್ಲಿ ತೀವ್ರ ಅಸಮಾನತೆಗಳು ಏರುಪೇರುಗಳು ಕಾಣುತ್ತಿರುವ ಹಿನ್ನೆಲೆಯಲ್ಲಿ, ಸಿಪಿಐ(ಎಂ) ಈ ವಿಷಯಗಳಿಗೆ ಬದ್ಧವಾಗಿದೆ:

• ನಗರ ಪ್ರದೇಶಗಳ ಅನೌಪಚಾರಿಕ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಲು ವಿಶೇಷ ಕ್ರಮಗಳು

• ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯ, ಶಿಕ್ಷಣ ಮತ್ತು ಇತರ ಅಗತ್ಯ ಸಾರ್ವಜನಿಕ ಸೇವೆಗಳ ಖಾಸಗೀಕರಣವನ್ನು ನಿಲ್ಲಿಸುವುದು.

• ಯಾವುದೇ ನೆಪದ ಮೇಲೆ ಜನರನ್ನು ಅವರ ನಿವಾಸಗಳಿಂದ ಎತ್ತಂಗಡಿ ಮಾಡಿಸುವುದು ಮತ್ತು ಕೊಳೆಗೇರಿಗಳಿಂದ ಜನರನ್ನು ಓಡಿಸಿ ಅವರ ಗುಡಿಸಲು ನೆಲಸಮ ಮಾಡುವುದನ್ನು ನಿಲ್ಲಿಸುವುದು. ಸ್ಥಳೀಯವಾಗಿ ಮೂಲ ಸೌಕರ್ಯಗಳ ಅಭಿವೃದ್ಧಿಯನ್ನು ಖಚಿತಪಡಿಸುವುದು.

• ಸಾರ್ವಜನಿಕ ವಸತಿ ಸೌಲಭ್ಯಗಳು, ಸಾರ್ವಜನಿಕ ಸಾರಿಗೆ ಮತ್ತು ಉದ್ಯಾನವನಗಳ ಸೌಕರ್ಯವನ್ನು ವಿಸ್ತರಿಸುವುದು.

• ಎಲ್ಲ ರೀತಿಯ ಮಾಲಿನ್ಯವನ್ನು ಮತ್ತು ಪರಿಸರ ಹಾಳುಗೆಡಿಸುವುದನ್ನು ತಡೆಯುವ ಕ್ರಮಗಳು.

• ಖಾಸಗಿ ರಿಯಲ್ ಎಸ್ಟೇಟ್‌ನ ಹಿತಾಸಕ್ತಿಗಳಿಗಿಂತ ಜನ ಸಾಮಾನ್ಯರ ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಹೊಸ ನಗರ ನೀತಿಯನ್ನು ರೂಪಿಸುವುದು.

• ಅಧಿಕಾರದ ವಿಕೇಂದ್ರೀಕರಣವನ್ನು ಖಚಿತಪಡಿಸಿಕೊಳ್ಳಲು ಸಂವಿಧಾನದ 74ನೇ ತಿದ್ದುಪಡಿಯ ಮೂಲಕ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುವ ಮೂಲಕ ಅವುಗಳನ್ನು ಬಲಪಡಿಸುವುದು.

• ಎಲ್ಲಾ ನಿವಾಸಿಗಳಿಗೂ ಸರಿಯಾದ ವಸತಿ, ನೀರು ಸರಬರಾಜು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚು ಹಣ ದೊರಕುವಂತೆ ನೋಡಿಕೊಳ್ಳುವುದು.

ಪರಿಸರ

• ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಮತ್ತು ಪರಿಸರದ ಮೇಲೆ ಬೀಳುವ ಹಾನಿಯ ಮೌಲ್ಯಮಾಪನ (Environmental Impact Assessment – EIA) ಮತ್ತು ಆ ಸಂಬಂಧವಾಗಿ ರಾಜ್ಯಗಳ ಮಟ್ಟದಲ್ಲಿ ಮತ್ತು ಕೇಂದ್ರ ಮಟ್ಟದಲ್ಲಿ ನೀಡುವ ಅನುಮತಿಯ ಪ್ರಕ್ರಿಯೆಗಳನ್ನು ಹಿತಾಸಕ್ತಿಗಳ ಸಂಘರ್ಷದಿಂದ ಮುಕ್ತಗೊಳಿಸಿ, ನಿಗದಿತ ಸಮಯದೊಳಗೆ ಅನುಮತಿ ನೀಡುವಂತೆ ಮಾಡುವುದು.  EIA ಅಧಿಸೂಚನೆ 2020 ನ್ನು ರದ್ದುಗೊಳಿಸುವುದು ಮತ್ತು ಪರಿಷ್ಕೃತ ಮಾರ್ಗಸೂಚಿಗಳನ್ನು ನೀಡುವುದು.

• ಹಸಿರು ಮನೆ ಅನಿಲ (Greenhouse Gas) ಹೊರಸೂಸುವಿಕೆಯನ್ನು ಇಡೀ ಆರ್ಥಿಕತೆಯಲ್ಲಿ ಕಡಿಮೆ ಮಾಡಲು ಕೈಗೊಳ್ಳುವ ಕ್ರಮಗಳನ್ನು ಯೋಜಿಸುವುದು, ಪಳೆಯುಳಿಕೆ ಇಂಧನಗಳ ಬಳಕೆಯಿಂದ ಸೂಕ್ತ ನ್ಯಾಯಯುತ ಪರಿವರ್ತನೆಯೊಂದಿಗೆ ಸೌರಶಕ್ತಿ ಮತ್ತು ಪವನಶಕ್ತಿಯಂತಹ ನವೀಕರಿಸಬಹುದಾದ ಇಂಧನದ ಬಳಕೆಯನ್ನು ಉತ್ತೇಜಿಸುವುದು.

• ಅಧಿಕ ಮಳೆ ಮತ್ತು ಭೂಕುಸಿತಗಳಂತಹ ಹವಾಮಾನ ವೈಪರೀತ್ಯಗಳು ಕೃಷಿಯ ಮೇಲೆ ಬೀರುವ ಪರಿಣಾಮವನ್ನು ನಿಭಾಯಿಸಲು ಎಲ್ಲಾ ಭಾಗೀದಾರರನ್ನು, ವಿಶೇಷವಾಗಿ ರಾಜ್ಯಗಳನ್ನು ಒಳಗೊಂಡ ಭಾಗೀದಾರಿ ಪ್ರಕ್ರಿಯೆಯ ಮೂಲಕ ರಾಷ್ಟ್ರೀಯ ಅಳವಡಿಕೆ ಯೋಜನೆಯನ್ನು (National Adaptation Plan -NAP)  ರೂಪಿಸುವುದು. ನಗರ ವಸತಿ ಪ್ರದೇಶಗಳಲ್ಲಿ ಪ್ರವಾಹ, ಉಷ್ಣ ಅಲೆಗಳು ಮತ್ತು ನಗರ ಉಷ್ಣ ದ್ವೀಪಗಳು, ಕರಾವಳಿ ಭೂ ಕೊರೆತ ಮತ್ತು ಸಮುದ್ರ ಮಟ್ಟದ ಏರಿಕೆಯನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವುದು.

• ಹಿಮಾಲಯದ ಸೂಕ್ಷ್ಮ ಪ್ರದೇಶಗಳು ಮತ್ತು ಪರಿಸರ-ಸೂಕ್ಷ್ಮ ಪಶ್ಚಿಮ ಘಟ್ಟಗಳು ಮತ್ತು ಈಶಾನ್ಯದ ಪ್ರದೇಶಗಳಿಗೆ ಸುಸ್ಥಿರ ಮತ್ತು ಪರಿಸರ/ಹವಾಮಾನ-ಸ್ನೇಹಿ ಅಭಿವೃದ್ಧಿ ಕಾರ್ಯವ್ಯೂಹವನ್ನು ರೂಪಿಸುವುದು.

 • ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯದ ತ್ವರಿತ ಮತ್ತು ಗುರಿ-ಆಧಾರಿತ ಇಳಿಕೆಗಾಗಿ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮವನ್ನು (National Clean Air Programme – NCAP) ಸಂಪೂರ್ಣವಾಗಿ ಪರಿಷ್ಕರಿಸುವುದು.

• ಪರಿಸರ ವಿನಾಶವನ್ನು ತಡೆಗಟ್ಟಲು ಮತ್ತು ನಗರ ಪ್ರದೇಶಗಳನ್ನೂ ಒಳಗೊಂಡಂತೆ ನದಿ ಪಾತ್ರಗಳು ಮತ್ತು ಪ್ರವಾಹ-ಪೀಡಿತ ಬಯಲುಗಳ ವಿನಾಶಕಾರಿ ಅಭಿವೃದ್ಧಿಯನ್ನು ತಡೆಗಟ್ಟಲು ತುರ್ತಾಗಿ ಕ್ರಮಗಳನ್ನು ಪ್ರಾರಂಭಿಸುವುದು.

• ಜೀವ ವೈವಿಧ್ಯತೆಗೆ ಸಂಬಂಧಿಸಿದ ಸಂಪನ್ಮೂಲಗಳ ಜ್ಞಾನವನ್ನು ಕಾರ್ಪೊರೇಟ್‌ಗಳಿಗೆ ವರ್ಗಾಯಿಸಲು ಅನುಮತಿಸುವ ಜೈವಿಕ ವೈವಿಧ್ಯ ತಿದ್ದುಪಡಿ ಕಾಯಿದೆ 2023ರ ನಿಬಂಧನೆಗಳನ್ನು ರದ್ದುಗೊಳಿಸುವುದು.

• ಅಂಡಮಾನ್ ಮತ್ತು ನಿಕೋಬಾರ್ ಮತ್ತು ಲಕ್ಷದ್ವೀಪ, ಈ ದ್ವೀಪ ಸಮೂಹದ ಪರಿಸರಕ್ಕೆ ಹಾನಿಕಾರಕವಾದ ಮತ್ತು ಕಾರ್ಪೊರೇಟ್‌ಗಳ ಪರವಾದ ದ್ವೀಪಗಳ ಅಭಿವೃದ್ಧಿ ಯೋಜನೆಯನ್ನು ರದ್ದುಗೊಳಿಸುವುದು. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಉದ್ದೇಶಿತ ನೌಕಾ ನೆಲೆಯ ಸ್ಥಾಪನೆ ಮತ್ತು ಅದರ ಸಾಧಕ-ಬಾಧಕಗಳನ್ನು ಮರು-ಪರಿಶೀಲಿಸುವುದು.

• ಪರಿಸರ-ಅಪಾಯಕಾರೀ ಹಾಗೂ ಉತ್ಪ್ರೇಕ್ಷಿತ ಇಳುವರಿಗಳ ದಾವೆಯ ರಾಷ್ಟ್ರೀಯ ಆಯಿಲ್ ಪಾಮ್ ಮಿಷನ್‌ಅನ್ನು ರದ್ದುಗೊಳಿಸುವುದು ಮತ್ತು ಪರಿಸರ-ಸೂಕ್ಷ್ಮ ಈಶಾನ್ಯದ ಮತ್ತು ಅಂಡಮಾನ್ ದ್ವೀಪಗಳ ಜಲ ಸಂಪನ್ಮೂಲಗಳನ್ನು ಸಂರಕ್ಷಿಸುವತ್ತ ಗಮನ ಹರಿಸುವುದು.

ಜಲ ಸಂಪನ್ಮೂಲಗಳು

• ರಾಷ್ಟ್ರೀಯ ಜಲನೀತಿಯನ್ನು ಮರು-ರೂಪಿಸುವ ಮೂಲಕ ನೀರನ್ನು ಒಂದು ವಿರಳ ಸಾರ್ವಜನಿಕ ವಸ್ತು ಎಂದು ಪರಿಗಣಿಸುವುದು; ಉಲ್ಬಣಗೊಳ್ಳುತ್ತಿರುವ ನೀರಿನ ಬಿಕ್ಕಟ್ಟನ್ನು ನಿಭಾಯಿಸುವುದು; ನದಿಗಳ ಪರಿಣಾಮಕಾರಿ ರಕ್ಷಣೆ, ಜಲಮೂಲಗಳ ವಿಸ್ತರಣೆ ಮತ್ತು ಅಂತರ್ಜಲ ಮರುಪೂರಣವನ್ನು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಂಗ್ರಹವನ್ನು ವೃದ್ಧಿಸಿ ಅದನ್ನು ಗೃಹ-ಬಳಕೆಗೆ ಸರಬರಾಜು ಮಾಡುವುದು, ನೀರಾವರಿ ಕೃಷಿಗೆ ಮತ್ತು ಕೈಗಾರಿಕೆಗಳಿಗೆ ನೀರಿನ ಲಭ್ಯತೆಯನ್ನು ಸಮಾನವಾಗಿ ಹೆಚ್ಚಿಸುವುದು; ನೀರಿನ ಪರಿಣಾಮಕಾರಿ ನಿಯಂತ್ರಣ ಮತ್ತು ಬೇಡಿಕೆಯ ನಿರ್ವಹಣೆಗಾಗಿ ಸೂಕ್ತ ಕಾನೂನು ರೂಪಿಸುವುದು; ನೀರಿನ ಅಕ್ರಮ ಸರಬರಾಜು ಮತ್ತು ಬಳಕೆಗಳನ್ನು ಪತ್ತೆ ಹಚ್ಚುವುದು ಮತ್ತು ವಿಶೇಷವಾಗಿ ನಗರ ಪ್ರದೇಶಗಳಲ್ಲಿ ನೀರನ್ನು ಸಂರಕ್ಷಿಸಲು, ಸಂಸ್ಕರಿಸಲು ಮತ್ತು ಮರುಬಳಕೆ ಮಾಡಲು ಕ್ರಮ ಕೈಗೊಳ್ಳುವುದು. 

• ಎಲ್ಲ ಮನೆಗಳಿಗೂ ಸಮನಾಗಿ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿತ ಗುಣ ಮಟ್ಟದ ಕುಡಿಯುವ ಕೊಳವೆ ನೀರನ್ನು ಒದಗಿಸುವುದು..

• ನಗರ ಪ್ರದೇಶಗಳಲ್ಲಿ ಜಲ ಮೂಲಗಳು ಮತ್ತು ನೀರು ವಿತರಣಾ ಸಂಸ್ಥೆಗಳ ಖಾಸಗೀಕರಣವನ್ನು ನಿಲ್ಲಿಸುವುದು.

• ನೀರಿನ ಹಕ್ಕನ್ನು ಜೀವನ ಹಕ್ಕಿನ ಭಾಗವಾಗಿ ಗುರುತಿಸುವುದು.

• ಪರಿಣಾಮಕಾರಿ ಶಾಸನದ ಮೂಲಕ ನದಿಗಳು ಮತ್ತು ಇತರ ಜಲಮೂಲಗಳ ಮಾಲಿನ್ಯವನ್ನು ತಡೆಯುವುದು ಮತ್ತು ಒಳಚರಂಡಿ ನೀರು ಹಾಗೂ ಇತರ ತ್ಯಾಜ್ಯಗಳ ನೀರಿನ ಸಂಸ್ಕರಣೆಯನ್ನು ಮತ್ತು ಮರುಬಳಕೆಯನ್ನು ನಿಯಂತ್ತಿಸುವುದು.

• ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು (SPCBs) ಅತಿಕ್ರಮಿಸಲು ಕೇಂದ್ರಕ್ಕೆ ಅವಕಾಶ ನೀಡುವ ನೀರು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ತಿದ್ದುಪಡಿ, 2024ರ ನಿಬಂಧನೆಗಳನ್ನು ಹಿಂತೆಗೆದುಕೊಳ್ಳುವುದು.

• ನದಿಗಳ ಅಂತರ್-ಜೋಡಣೆಯ ಕಾರ್ಯಕ್ರಮದ ಸಮಗ್ರ ಪರಿಶೀಲನೆಯನ್ನು ಕೈಗೊಳ್ಳುವುದು.

• ಪ್ರಮುಖ ನದಿಗಳ ಜಲಾನಯನ ಪ್ರದೇಶಗಳನ್ನು, ವಿಶೇಷವಾಗಿ ಹಿಮಾಲಯ ಜಲಾನಯನ ಪ್ರದೇಶವನ್ನು ರಕ್ಷಿಸುವ ಮತ್ತು ಸುಧಾರಿಸುವ ಕ್ರಮಗಳನ್ನು ಜಾರಿಗೊಳಿಸುವುದು.

• ನೀರ್ಗಲ್ಲು (glacier) ಕರಗುವಿಕೆಯನ್ನು ತಡೆಗಟ್ಟಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದು.

ವಿಜ್ಞಾನ ಮತ್ತು ತಂತ್ರಜ್ಞಾನ

● ಮೂಲ ಸಂಶೋಧನೆಗೆ ತಕ್ಕ ಪ್ರಾಮುಖ್ಯತೆ ನೀಡುವುದು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶೀಯ ಸಂಶೋಧನೆಗಾಗಿ ಒದಗಿಸುವ ಹಣವನ್ನು ಜಿಡಿಪಿಯ ಕನಿಷ್ಠ ಶೇ. 2ಕ್ಕೆ ಹೆಚ್ಚಿಸುವುದು.

● ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬAಧಿಸಿ ವಿಶ್ವವಿದ್ಯಾನಿಲಯ ವ್ಯವಸ್ಥೆಯನ್ನು ಬಲಪಡಿಸುವುದು; ಸಂಶೋಧನಾ ಫೆಲೋಶಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು; ಸಂಸ್ಥೆಗಳಲ್ಲಿ ಸಂಶೋಧನಾ ಅಧ್ಯಾಪಕ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವುದು; ಪಿಎಚ್‌ಡಿಗಳ ಗುಣಮಟ್ಟ ಮತ್ತು ಸಂಖ್ಯೆಯನ್ನು ಹೆಚ್ಚಿಸುವುದು.

● ಸಂಶೋಧನೆಗಳಿಗೆ ಅನುದಾನ ಒದಗಿಸುವ ವ್ಯವಸ್ಥೆಗಳನ್ನು ಮತ್ತು ಪ್ರಕ್ರಿಯೆಗಳನ್ನು ವಿಕೇಂದ್ರೀಕರಿಸುವುದು; ಹೊಸ ಶಿಕ್ಷಣ ನೀತಿ (ಎನ್.ಇ.ಪಿ) ಅಡಿಯಲ್ಲಿ ಸ್ಥಾಪಿಸಲಾದ ಅತಿಯಾಗಿ ಕೇಂದ್ರೀಕರಿಸಿದ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು (ಎನ್.ಆರ್.ಎಫ್) ರದ್ದುಗೊಳಿಸುವುದು.

● ಅನೇಕ ಸರ್ಕಾರಿ ಅನುದಾನಿತ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳನ್ನು ಮುಚ್ಚುವ ನಿರ್ಧಾರವನ್ನು ಮತ್ತೆ ಪರಿಶೀಲಿಸುವುದು; ಪುನಾರಚಿಸಿದ ಭಾರತೀಯ ವಿಜ್ಞಾನ ಕಾಂಗ್ರೆಸ್‌ಗೆ ಸರ್ಕಾರದ ಬೆಂಬಲವನ್ನು ಪುನರಾರಂಭಿಸುವುದು.

● ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಜನರ ಸಮಸ್ಯೆಗಳನ್ನು ನಿಭಾಯಿಸಲು ತೊಡಗುವ ರಾಜ್ಯ ಮಟ್ಟದ ಉಪಕ್ರಮಗಳಿಗೆ ಹಣವನ್ನು ಮೀಸಲಿಡುವುದು, ಉದಾಹರಣೆಗೆ ಬರ, ಜಲಸಂಪನ್ಮೂಲ ನಿರ್ವಹಣೆ, ಗ್ರಾಮೀಣ ಜೀವನೋಪಾಯದ ಸಮಸ್ಯೆಗಳು, ಅಂಚಿನಲ್ಲಿರುವ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳು ಇತ್ಯಾದಿ.

● ‘4ನೇ ಕೈಗಾರಿಕಾ ಕ್ರಾಂತಿಯ’ ವಲಯಗಳೆಂದು ಗುರುತಿಸಲಾದ ಕೃತಕ ಬುದ್ಧಿಮತ್ತೆ (AI), ಇಂಟರ್ನೆಟ್ ಆಫ್ ಥಿಂಗ್ಸ್ (IoT), ಜೈವಿಕ ಮತ್ತು ನ್ಯಾನೊ-ತಂತ್ರಜ್ಞಾನ ಇತ್ಯಾದಿ ಕ್ಷೇತ್ರಗಳಿಗೆ ಅಗತ್ಯವಿರುವ ಅನುದಾನವನ್ನು ಆದ್ಯತೆಯ ಮೇಲೆ ಒದಗಿಸುವುದು; ಬಹು ರಾಷ್ಟ್ರೀಯ ಕಂಪೆನಿಗಳ ಏಕಸ್ವಾಮ್ಯವನ್ನು ಮುರಿಯಲು ಮತ್ತು ಹವಾಮಾನ-ವೈಪರೀತ್ಯಗಳಿಗೆ ಹೊಂದಿಕೊಳ್ಳುವ ಕೃಷಿ/ತೋಟಗಾರಿಕೆಯನ್ನು ಪ್ರೋತ್ಸಾಹಿಸುವ ಕೃಷಿ ಸಂಶೋಧನೆಯ ಮೇಲೆ ಕೇಂದ್ರೀಕರಿಸುವುದು.

● ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿAಗ್ ಮತ್ತು ಗಣಿತಶಾಸ್ತ್ರ (STEM – Science, Technology, Engineering and Mathematics) ಇವುಗಳಿಗೆ ಸಂಬಂಧಿಸಿದ ಸಂಶೋಧನೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳುವುದು. 

● ಪ್ರತಿಭಾ ಪಲಾಯನವನ್ನು ಹಿಮ್ಮೆಟ್ಟಿಸಲು ಶೈಕ್ಷಣಿಕ ಸ್ವಾತಂತ್ರ‍್ಯ ಮತ್ತು ಸಂಶೋಧನೆಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವುದು.

● ಸಾರ್ವಜನಿಕ ಒಳಿತಿಗಾಗಿ ಕೃತಕ ಬುದ್ಧಿಮತ್ತೆ (AI), ಜೆನೆಟಿಕ್ ಎಂಜಿನಿಯರಿAಗ್, ಡೇಟಾ-ಮೈನಿಂಗ್ ಮತ್ತು IT -ಆಧಾರಿತ ಕಣ್ಗಾವಲುಗಳನ್ನು ನಿಯಂತ್ರಿಸುವುದು.

● ಸಂವಿಧಾನದ ನಿರ್ದೇಶಕ ತತ್ವಗಳ ಅನುಸಾರವಾಗಿ ವೈಜ್ಞಾನಿಕ ಮನೋಭಾವ, ಪ್ರಶ್ನೆಗಳನ್ನು ಕೇಳುವ ಮನೋಭಾವ ಮತ್ತು ಸುಧಾರಣಾ ಮನೋಭಾವವನ್ನು ಉತ್ತೇಜಿಸಲು ಮತ್ತು ವಿಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಆದೇಶದೊಂದಿಗೆ ವಿಜ್ಞಾನ ಪ್ರಸಾರ ಕಾರ್ಯಕ್ರಮವನ್ನು ಒಂದು ಸ್ವತಂತ್ರ ಸಲಹಾ ಸಂಸ್ಥೆಯೊಂದಿಗೆ ಪುನಶ್ಚೇತನಗೊಳಿಸುವುದು.

● ಹಕ್ಕುಸ್ವಾಮ್ಯಗಳು ಅಥವಾ ಪೇಟೆಂಟ್‌ಗಳ ಮೂಲಕ ಏಕಸ್ವಾಮ್ಯ ಮಾಲೀಕತ್ವದಿಂದ ಮುಕ್ತವಾದ ಉಚಿತ ಮತ್ತು ಅನಿರ್ಬಂಧ ಮೂಲದ ಸಾಫ್ಟ್ವೇರ್‌ಅನ್ನು (FOSS) ಮತ್ತು ಇತರ ಹೊಸ ತಂತ್ರಜ್ಞಾನಗಳನ್ನು ಉತ್ತೇಜಿಸುವುದು; “ಸಾಮುದಾಯಿಕ ಜ್ಞಾನ”ವನ್ನು (Knowledge Commons – ಅಂದರೆ, ಅಂತರ್ಜಾಲದ ಮೂಲಕ ವ್ಯವಹರಿಸುವ ಮತ್ತು ಬಳಕೆದಾರರ ಅಧಿಕಾರ-ಒಡೆತನ ವ್ಯಾಪ್ತಿಗೆ ಒಳಪಟ್ಟ ವಿಷಯ ಸಂಬAಧಿತ ದತ್ತಾಂಶ/ಜ್ಞಾನದ ಬಳಕೆಯನ್ನು) ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಔಷದ ಸಂಶೋಧನೆಯಂತಹ ಎಲ್ಲ ವಲಯಗಳಲ್ಲಿ ಉತ್ತೇಜಿಸುವುದು.

● ಡಿಜಿಟಲ್ ಮೂಲಸೌಕರ್ಯವನ್ನು ಸಾರ್ವಜನಿಕ ಒಳಿತಿಗಾಗಿ ಬಳಸುವ ಸಾರ್ವಜನಿಕ ಮೂಲಸೌಕರ್ಯ ಎಂದು ಮನ್ನಣೆ ನೀಡುವುದು.

● ಸಾರ್ವಜನಿಕ ಸಂವಹನ ಜಾಲಗಳಲ್ಲಿ ಹೂಡಿಕೆ ಮಾಡುವುದು ಮತ್ತು ಹಕ್ಕುಸ್ವಾಮ್ಯದ ಅಡೆತಡೆಗಳಿಲ್ಲದೆ ವೈಜ್ಞಾನಿಕ ಮತ್ತು ಇತರ ಶೈಕ್ಷಣಿಕ ಪ್ರಕಟಣೆಗಳ ಉಚಿತ ಬಳಕೆಯ ಅವಕಾಶವನ್ನು ಕಲ್ಪಿಸುವುದು; ಎಲ್ಲ ಸಾರ್ವಜನಿಕ ಅನುದಾನಿತ ಸಂಶೋಧನೆಗಳನ್ನು ತಿಳಿದುಕೊಳ್ಳುವ ಅವಕಾಶವನ್ನು ಎಲ್ಲರಿಗೂ ಕಲ್ಪಿಸಲಾಗುವುದು.

ಕಣ್ಗಾವಲು ಮತ್ತು ಖಾಸಗಿತನ ವಿಷಯಗಳು (Surveillance and Privacy Issues)

• ನ್ಯಾಯಾಂಗದ ಮೇಲ್ವಿಚಾರಣೆಯೊಂದಿಗೆ ಒಂದು ಸ್ಪಷ್ಟ ಮತ್ತು ನಿರ್ದಿಷ್ಟ ವಾರಂಟ್ ಇಲ್ಲದ ಪ್ರಭುತ್ವದ ಏಜೆನ್ಸಿಗಳ ಎಲ್ಲ ಡಿಜಿಟಲ್ ಕಣ್ಗಾವಲುಗಳನ್ನು ನಿಲ್ಲಿಸುವುದು; ನಾಗರಿಕರ ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರ ಡಿಜಿಟಲ್ ಸಾಧನಗಳ ಮೇಲೆ ನಿಯಂತ್ರಣ ಸಾಧಿಸಲು ಮಾಲ್‌ವೇರ್, ಹ್ಯಾಕಿಂಗ್ ಅಥವಾ ಪೆಗಾಸಸ್‌ನಂತಹ ಇತರ ಒಳನುಗ್ಗಿಸುವ ತಂತ್ರಜ್ಞಾನಗಳ ಬಳಕೆಯನ್ನು ತಡೆಯುವುದು.

• ನಾಗರಿಕರ ಮೇಲೆ ವ್ಯಾಪಕವಾದ ಕಣ್ಗಾವಲಿಡುವ ಅಧಿಕಾರವನ್ನು ಪ್ರಭುತ್ವದ ಏಜೆನ್ಸಿಗಳಿಗೆ ನೀಡುವ ಮೂಲಕ ಡಿಜಿಟಲ್ ಸರ್ವಾಧಿಕಾರವನ್ನು ಭದ್ರಪಡಿಸುವ ಉದ್ದೇಶ ಹೊಂದಿದ ಮತ್ತು ದೊಡ್ಡ ದೊಡ್ಡ ಉದ್ದಿಮೆಗಳು ತಮ್ಮ ಸ್ವಂತ ಲಾಭಕ್ಕಾಗಿ ನಾಗರಿಕರ ದತ್ತಾಂಶವನ್ನು ಬಳಸಿಕೊಳ್ಳಲು ಮುಕ್ತ ಅವಕಾಶವನ್ನು ಕಲ್ಪಿಸುವ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಆಕ್ಟ್ (2023) ಅನ್ನು ರದ್ದುಗೊಳಿಸುವುದು.

• ಖಾಸಗಿತನವು ಒಂದು ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಪುಟ್ಟುಸ್ವಾಮಿ ಪ್ರಕರಣದಲ್ಲಿ ನೀಡಿರುವ ತೀರ್ಪಿಗೆ ಅನುಸಾರವಾಗಿ ಕೋರ್ಟಿನಲ್ಲಿ ಸಾಧಿಸಬಹುದಾದ ಖಾಸಗಿತನದ ಹಕ್ಕಿಗೆ ಒಂದು ಸರಿಯಾದ ಚೌಕಟ್ಟನ್ನು ಒದಗಿಸುವ ಒಂದು ಹೊಸ ಶಾಸನವನ್ನು ರೂಪಿಸುವುದು; ಮತ್ತು, ನಾಗರಿಕರ ಖಾಸಗಿತನದ ಹಕ್ಕನ್ನು ಸರ್ಕಾರ ಮತ್ತು ಖಾಸಗಿ ವ್ಯವಹಾರೋದ್ಯಮಗಳ ಉಲ್ಲಂಘನೆಯನ್ನು ತಡೆಯಲು ಒಂದು ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರವನ್ನು ರಚಿಸಲು ಒಂದು ಹೊಸ ಶಾಸನವನ್ನು ರೂಪಿಸುವುದು.

• ಟೆಲಿಕಾಂ ಮತ್ತು ಡಿಜಿಟಲ್ ಏಕಸ್ವಾಮ್ಯಗಳ ಶಕ್ತಿಯನ್ನು ಪರಿಣಾಮಕಾರಿಯಾಗಿ ನಿಗ್ರಹಿಸಲು ಮತ್ತು ನಿಯಂತ್ರಿಸಲು ಸಾಧ್ಯವಾಗುವಂತೆ ಭಾರತದ ಸ್ಪರ್ಧಾ ಆಯೋಗವನ್ನು ಬಲಪಡಿಸುವುದು.

• ಕಣ್ಗಾವಲಿಡುವ ಮತ್ತು ಅಡ್ಡಗಟ್ಟುವ, ಇಂಟರ್ನೆಟ್ ಸ್ಥಗಿತಗೊಳಿಸುವ, ರಹಸ್ಯ ಸಂಕೇತ ಬಳಸಿದ ಸೇವೆಗಳನ್ನು ದುರ್ಬಲಗೊಳಿಸುವ ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರ ಏಙಅ ಅವಶ್ಯಕತೆಗಳಿಗೆ ಸಂಬAಧಿಸಿದ ದೂರಸಂಪರ್ಕ ಕಾಯಿದೆ 2023ರ ಕಠಿಣ ನಿಬಂಧನೆಗಳನ್ನು ಹಿಂತೆಗೆಯುವುದು.

• ತನಗೆ ಒದಗಿಸಿದ ವಿವೇಚನೆಯಡಿಯಲ್ಲಿ ಸರ್ಕಾರವು ಒಂದು ಫ್ಯಾಕ್ಟ್ ಚೆಕ್ ಯೂನಿಟ್‌ಅನ್ನು ಸ್ಥಾಪಿಸುವ ಮೂಲಕ ಆನ್‌ಲೈನ್ ವಿಮರ್ಶಾ ಸಂಸ್ಕೃತಿಯ ಮತ್ತು ಮಾಧ್ಯಮದ ಮೇಲೆ ದಾಳಿ ಮಾಡುವ ಗುರಿಯನ್ನು ಹೊಂದಿರುವ ಮತ್ತು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸೆನ್ಸಾರ್‌ಶಿಪ್ ಅಧಿಕಾರವನ್ನು ನೀಡುವ ಕಠಿಣ IT ತಿದ್ದುಪಡಿ ನಿಯಮಗಳನ್ನು (2023) ಹಿಂತೆಗೆದುಕೊಳ್ಳುವುದು.

ಸಂಸ್ಕೃತಿ ಮತ್ತು ಮಾಧ್ಯಮ

• ಸಂವಿಧಾನದ ಎಂಟನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ ಎಲ್ಲ ಭಾಷೆಗಳನ್ನೂ ಸಮಾನವಾಗಿ ಪ್ರೋತ್ಸಾಹಿಸುವುದು ಮತ್ತು ಅಭಿವೃದ್ಧಿಪಡಿಸುವುದು; ಹಿಂದಿ ಭಾಷೆಯನ್ನು ಹೇರದಿರುವುದು.

• ಜಾತ್ಯತೀತ, ಪ್ರಗತಿಪರ ಮತ್ತು ಪ್ರಜಾಸತ್ತಾತ್ಮಕ ಸಂಸ್ಕೃತಿಯನ್ನು ಉತ್ತೇಜಿಸುವುದು; ಕೋಮು ಶಕ್ತಿಗಳಿಂದ ಸಾಂಸ್ಕೃತಿಕ ವಲಯದ ವ್ಯಕ್ತಿಗಳ ಮೇಲೆ ಮತ್ತು ನಿರ್ಮಾಪಕರ ಮೇಲಿನ ದಾಳಿಗಳನ್ನು ದೃಢವಾಗಿ ಹತ್ತಿಕ್ಕುವುದು.

• ಹಿಂಸೆಯ ವೈಭವೀಕರಣವನ್ನು ಮತ್ತು ಮಹಿಳೆ ಮತ್ತು ಲಿಂಗ ಇವುಗಳ ವ್ಯಾಪಾರೀಕರಣವನ್ನು ನಿಗ್ರಹಿಸುವುದು

• ಅಂತರ್ಜಾಲದ ಮೇಲಿನ ಹತೋಟಿಯನ್ನು ಅಮೆರಿಕಾದ ನಿಯಂತ್ರಣದಿAದ ಬಿಡಿಸಿಕೊಂಡು ಅದನ್ನು ಒಂದು ಸೂಕ್ತ ಅಂತಾರಾಷ್ಟ್ರೀಯ ಸಂಸ್ಥೆಗೆ ವಹಿಸುವುದು; ಜಾಗತಿಕ ಕಾರ್ಪೊರೇಟ್ ಸಂಸ್ಥೆಗಳ ನಿಯಂತ್ರಣದಿAದ ಮುಕ್ತವಾದ ಮತ್ತು ಸಾಮಾಜಿಕ ನ್ಯಾಯದ ಮೇಲೆ ನಿಲ್ಲುವ ಜನ-ಕೇಂದ್ರಿತ ಅಂತರ್ಜಾಲವನ್ನು ಉತ್ತೇಜಿಸುವುದು; ಗೌಪ್ಯತೆಯ ಹಕ್ಕನ್ನು ರಕ್ಷಿಸುವ ಮತ್ತು ಯಾವುದೇ ಸರ್ಕಾರಗಳಿಗೆ ಸಾಮೂಹಿಕ ಕಣ್ಗಾವಲಿಡುವ ಕ್ರಮವನ್ನು ಅನುಮತಿಸದ ಜಾಗತಿಕ ಇಂಟರ್ನೆಟ್ ಆಡಳಿತವನ್ನು ಉತ್ತೇಜಿಸುವುದು.

• ನಕಲಿ ಸುದ್ದಿಗಳ ಹರಡುವಿಕೆಯನ್ನು ನಿಯಂತ್ರಿಸುವ ಕ್ರಮಗಳನ್ನು ಕೈಗೊಳ್ಳುವುದು ಮತ್ತು ನಕಲಿ ಸುದ್ದಿಗಳನ್ನು ಸೃಷ್ಟಿಸುವ ಮತ್ತು ಪ್ರಚಾರ ಮಾಡುವ ವ್ಯಕ್ತಿಗಳು ಮತ್ತು ಗುಂಪುಗಳ ಮೇಲೆ ಕ್ರಮ ಕೈಗೊಳ್ಳುವುದು.

• ದುರುದ್ದೇಶಪೂರಿತ ಬಂಧನ ಮತ್ತು ಕಾನೂನು ಕ್ರಮದಿಂದ ಪತ್ರಕರ್ತರನ್ನು ರಕ್ಷಿಸಲು ಕಾನೂನು ರೂಪಿಸುವುದು.

• ಸುದ್ದಿ-ಮಾಹಿತಿಯ ಮುಕ್ತ ಹರಿವನ್ನು ಖಚಿತಪಡಿಸಿಕೊಳ್ಳಲು ಸಹಕಾರಿ ಮತ್ತು ಸಾಮೂಹಿಕ ಮಾಧ್ಯಮ ಸಂಸ್ಥೆಗಳನ್ನು ಪ್ರೋತ್ಸಾಹಿಸುವುದು; ಪ್ರಸಾರ ಭಾರತಿ ನಿಗಮವನ್ನು ನಿಜಕ್ಕೂ ಒಂದು ಸಾರ್ವಜನಿಕ ಪ್ರಸಾರ ಸೇವಾ ಸಂಸ್ಥೆಯಾಗಿ ಬಲಪಡಿಸುವುದು.

• ಮಾಧ್ಯಮಗಳ ಮೇಲೆ ಏಕಸ್ವಾಮ್ಯ ಮತ್ತು ಕ್ರೋನಿ ಕಂಪನಿಗಳು  ನಿಯಂತ್ರಣ ಹೊಂದಿರುವುದನ್ನು ತಡೆಯಲು ಮಾಧ್ಯಮಗಳಲ್ಲಿ ಅಡ್ಡ ಮಾಲೀಕತ್ವವನ್ನು (ಅಂದರೆ ಒಂದೇ ಕಂಪನಿ ರೇಡಿಯೊ, ಪ್ರಿಂಟ್, ಟಿವಿ ಎಲ್ಲದರ ಒಡೆತನ ಹೊಂದಿರುವುದು) ನಿಯಂತ್ರಿಸಲಾಗುವುದು; ಮುದ್ರಣ, ಡಿಜಿಟಲ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವಿದೇಶಿ ನೇರ ಹೂಡಿಕೆಯನ್ನು ನಿಷೇಧಿಸಲಾಗುವುದು.

• ಮಾಧ್ಯಮ ಪ್ರತಿನಿಧಿಗಳು, ಮಾಧ್ಯಮ ಯೂನಿಯನುಗಳು ಮತ್ತು ಪಕ್ಷಾತೀತ ಸಾರ್ವಜನಿಕ ವ್ಯಕ್ತಿಗಳನ್ನೊಳಗೊಂಡ ಒಂದು ಸಾಮಾನ್ಯ ಮಾಧ್ಯಮ ಮಂಡಳಿಯನ್ನು ಸ್ಥಾಪಿಸಿ, ಅದರ ವ್ಯಾಪ್ತಿಯೊಳಗೆ ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳನ್ನು ತರುವುದು; ಜಾಗತೀಕರಣದ ಆರಂಭದಿAದಲೂ ಪತ್ರಕರ್ತರು ತಮ್ಮ ಕಾರ್ಯವನ್ನು ನಿರ್ವಹಿಸುವ ಸ್ಥಳಗಳಲ್ಲಿರುವ ಶೋಚನೀಯ ಪರಿಸ್ಥಿತಿಗಳ ಬಗ್ಗೆ ಮತ್ತು ಮಾಧ್ಯಮದಲ್ಲಿ ಕಂಡು ಬರುವ ಹೊಸ ಪ್ರವೃತ್ತಿಗಳನ್ನು ಅಧ್ಯಯನ ಮಾಡಲು ಒಂದು ಮಾಧ್ಯಮ ಆಯೋಗವನ್ನು ಸ್ಥಾಪಿಸುವುದು.

• ಮುದ್ರಣ, ಡಿಜಿಟಲ್ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಸಂಸ್ಥೆಗಳ ಎಲ್ಲ ಪತ್ರಕರ್ತರ ಮತ್ತು ಕಾರ್ಮಿಕರ ಯೋಗ್ಯ ವೇತನ ಪರಿಷ್ಕರಣೆ ಮತ್ತು ಉದ್ಯೋಗ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಯನಿರತ ಪತ್ರಕರ್ತರ ಕಾಯಿದೆಯನ್ನು ಪುನಃ ಜಾರಿಗೊಳಿಸಲಾಗುವುದು ಮತ್ತು ಬಲಪಡಿಸಲಾಗುವುದು; ಮುದ್ರಣ, ಡಿಜಿಟಲ್ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ಸಂಸ್ಥೆಗಳ ಪತ್ರಕರ್ತರಿಗೆ ಒಂದು ಹೊಸ ವೇತನ ಮಂಡಳಿಯನ್ನು ರಚಿಸುವುದು.

• IT ನಿಯಮಗಳಿಗೆ 2021ರ ತಿದ್ದುಪಡಿಗಳನ್ನು ಹಿಂಪಡೆಯುವುದು ಮತ್ತು ಮುದ್ರಣ ಮತ್ತು ನಿಯತಕಾಲಿಕಗಳ ಕರಡು ನೋಂದಣಿ ಮಸೂದೆ, 2022 ಅನ್ನು ಪುನಃ ಪರಿಶೀಲಿಸುವುದು; ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಗಳನ್ನು (ನಿಯಂತ್ರಣ ಕಾಯಿದೆ) ಬದಲಿಸುವ ಕರಡು ಬ್ರಾಡ್‌ಕಾಸ್ಟಿಂಗ್ ಸೇವೆಗಳ (ನಿಯಂತ್ರಣ) ಮಸೂದೆ, 2023 ಅನ್ನು ಕೈಬಿಡುವುದು.

ಸಾಂಸ್ಥಿಕ ಸುಧಾರಣೆಗಳು

ಸಿಪಿಐ(ಎಂ) ಬೆಂಬಲಿಸುವ ಸಾಂಸ್ಥಿಕ ಸುಧಾರಣೆಗಳು 

• ವೈಯಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರ‍್ಯಗಳನ್ನು ರಕ್ಷಿಸುವುದು ಮತ್ತು ವಾಕ್ ಸ್ವಾತಂತ್ರ‍್ಯ, ಅಭಿವ್ಯಕ್ತಿ ಸ್ವಾತಂತ್ರ‍್ಯ ಮತ್ತು ವೈಯಕ್ತಿಕ ಹಕ್ಕುಗಳ ಮೇಲೆ ಇರಿಸುವ ಎಲ್ಲ ವಿಚಾರಹೀನ ಅಡೆತಡೆಗಳ/ನಿರ್ಬಂಧಗಳ ನಿಬಂಧನೆಗಳ ಪರಿಶೀಲನೆ ಮತ್ತು ಸುಧಾರಿಸುವುದು.

• ಕೇಂದ್ರೀಯ ವಿಚಕ್ಷಣಾ ಆಯೋಗ (CVC), ಸಿಬಿಐ, ಚುನಾವಣಾ ಆಯೋಗ, ರಾಷ್ಟ್ರೀಯ/ರಾಜ್ಯ ಮಾನವ ಹಕ್ಕುಗಳ ಆಯೋಗಗಳು, ಲೋಕಪಾಲ್, ಲೋಕಾಯುಕ್ತರು, ಮಹಿಳಾ ಆಯೋಗಗಳು, ಎಸ್‌ಸಿ/ಎಸ್‌ಟಿ ಆಯೋಗಗಳು ಮುಂತಾದ ಮೇಲ್ವಿಚಾರಣೆ, ನಿಯಂತ್ರಣ ಮತ್ತು ಶಾಸನ ರೀತ್ಯಾ ತೀರ್ಮಾನಿಸುವ ಅಧಿಕಾರ ಹೊಂದಿದ ಸಂಸ್ಥೆಗಳಿಗೆ ನೇಮಕಾತಿ ಮಾಡುವಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಮೂಲಕ ಶಾಸನಬದ್ಧ, ಸಾಂವಿಧಾನಿಕ ಮತ್ತು ನಿಯಂತ್ರಕ ಸಂಸ್ಥೆಗಳ ಸ್ವಾತಂತ್ರ‍್ಯವನ್ನು ರಕ್ಷಿಸುವುದು. ಮತ್ತು, ಎಲ್ಲ ರೀತಿಯ ಭ್ರಷ್ಟಾಚಾರವನ್ನು, ವಿಶೇಷವಾಗಿ ಉನ್ನತ ಸ್ಥಳಗಳಲ್ಲಿ, ತಡೆಗಟ್ಟಲು ಮತ್ತು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳುವುದು; ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವುದು, ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಸುಳಿವು ಕೊಡುವವರನ್ನು (Whistleblowers) ರಕ್ಷಿಸುವುದು; ನ್ಯಾಯ ದೊರಕುವ ಕಾರ್ಯವು ತ್ವರಿತವಾಗಿ ಕೈಗೆಟುಕುವಂತೆ ಮಾಡುವುದು; ಮತ್ತು ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವುದು.

ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಉತ್ತರದಾಯಿತ್ವ ವ್ಯವಸ್ಥೆಯ ಬಲಪಡಿಸುವಿಕೆ

 • ಕಳೆದ ನಾಲ್ಕು ವರ್ಷಗಳಲ್ಲಿ ಲೋಕಪಾಲ್ ಸಂಸ್ಥೆಯ ಕಾರ್ಯನಿರ್ವಹಣೆಯ ಅನುಭವದ ಆಧಾರದ ಮೇಲೆ ಲೋಕಪಾಲ್ ಸಂಸ್ಥೆಯನ್ನು ಬಲಪಡಿಸುವುದು ಮತ್ತು ಕಾರ್ಯಾಂಗದಿಂದ ಅದರ ಸ್ವಾತಂತ್ರ‍್ಯವನ್ನು ಬಲಪಡಿಸುವುದು.

• ಕಾರ್ಪೊರೇಟ್ ವಲಯದ ಅಪರಾಧಗಳನ್ನು ಕೂಲಂಕುಷವಾಗಿ ತನಿಖೆ ಮಾಡಲು ನಿಯಂತ್ರಕರು ಮತ್ತು ತನಿಖಾ ಸಂಸ್ಥೆಗಳಿಗೆ ಸೂಕ್ತ ಅಧಿಕಾರ ನೀಡುವುದು.

• ಹಣಕಾಸು ವಲಯದ ಖಾಸಗಿ ಸಂಸ್ಥೆಗಳು, ನಿರ್ದಿಷ್ಟವಾಗಿ ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರಗಳು ಮತ್ತು ಎಲ್ಲ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಯೋಜನೆಗಳನ್ನು ಲೋಕಪಾಲ್ ಕಾಯಿದೆ, ವಿಸಲ್ ಬ್ಲೋವರ್ಸ್ ಪ್ರೊಟೆಕ್ಷನ್ ಆಕ್ಟ್ ಮತ್ತು ಇತರ ಸಂಬಂಧಿತ ಭ್ರಷ್ಟಾಚಾರ-ವಿರೋಧಿ ಶಾಸನಗಳ ಅಡಿಯಲ್ಲಿ ತರುವುದು.

• ಮಾಹಿತಿ ಹಕ್ಕು (RTI) ಬಳಕೆದಾರರಿಗೆ ಮತ್ತು ಭ್ರಷ್ಟಾಚಾರ-ವಿರೋಧಿ ಹೋರಾಟಗಾರರಿಗೆ ರಕ್ಷಣೆ ಒದಗಿಸಲು ಪರಿಣಾಮಕಾರಿ ಕಾರ್ಯವಿಧಾನಗಳನ್ನು ವ್ಯವಸ್ಥಾಪಿಸುವುದು ಮತ್ತು ಅದನ್ನು ಪರಿಣಾಮಕಾರಿಯಾಗಿಸಲು ವಿಸಲ್ ಬ್ಲೋವರ್ಸ್ ಪ್ರೊಟೆಕ್ಷನ್ ಆಕ್ಟ್ ಅನ್ನು ತಿದ್ದುಪಡಿ ಮಾಡುವುದು.

• ಮಾಹಿತಿ ಹಕ್ಕು (RTI) ಕಾಯಿದೆಯನ್ನು ಬಲಪಡಿಸುವುದು ಮತ್ತು ಆಡಳಿತದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಷಯದಲ್ಲಿ ನಾಗರಿಕರು ಭಾಗವಹಿಸಲು ಸಾಂಸ್ಥಿಕ ಕಾರ್ಯವಿಧಾನಗಳನ್ನು ವ್ಯವಸ್ಥಾಪಿಸುವುದು; ಕಾನೂನುಗಳನ್ನು ಅಂಗೀಕರಿಸುವ ಮೊದಲು ಪಾರದರ್ಶಕ ಮತ್ತು ಶಾಸನ-ಪೂರ್ವ ಸಹಭಾಗಿತ್ವದ ಪ್ರಕ್ರಿಯೆಗಾಗಿ ನಾಗರಿಕರ ಪ್ರತಿಕ್ರಿಯೆಯನ್ನು ಕೋರುವ ಖಖಿI ಕಾಯಿದೆಯ ಸೆಕ್ಷನ್ 4 ನ್ನು ಅನುಷ್ಠಾನಗೊಳಿಸುವುದು.

• ಅಧಿಕೃತ ರಹಸ್ಯ ಕಾಯಿದೆಯ (OSA) ದುರುಪಯೋಗವನ್ನು ನಿಲ್ಲಿಸುವುದು ಮತ್ತು ಅದನ್ನು ಸೂಕ್ತವಾಗಿ ಸುಧಾರಿಸುವುದು.

ನ್ಯಾಯಾಂಗ ಸುಧಾರಣೆಗಳು

• ನ್ಯಾಯಾಧೀಶರ ನೇಮಕ, ವರ್ಗಾವಣೆ ಮತ್ತು ಅವರ ಲೋಪದೋಷಗಳ ಪ್ರಕರಣಗಳನ್ನು ಪರಿಶೀಲಿಸಲು ಮತ್ತು ನ್ಯಾಯಾಂಗದ ಉತ್ತರದಾಯಿತ್ವವನ್ನು ಖಚಿತಪಡಿಸಿಕೊಳ್ಳಲು, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ವಕೀಲರ ಪ್ರತಿನಿಧಿಗಳನ್ನೊಳಗೊಂಡ ರಾಷ್ಟ್ರೀಯ ನ್ಯಾಯಾಂಗ ಆಯೋಗವನ್ನು ಒಂದು ಸ್ವತಂತ್ರ ಸಂವಿಧಾನಾತ್ಮಕ ಸಂಸ್ಥೆಯಾಗಿ ರಚಿಸುವುದು.

• ಸಾಮಾನ್ಯ ಜನರಿಗೆ ಕೈಗೆಟುಕುವ ವೆಚ್ಚದಲ್ಲಿ ತ್ವರಿತ ಪರಿಹಾರ ಒದಗಿಸಲು ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸುವುದು; ನ್ಯಾಯಾಂಗದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು.

• ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ಅದರ ದುರುಪಯೋಗವನ್ನು ತಡೆಗಟ್ಟುವ ಸಲುವಾಗಿ ಕ್ರಿಮಿನಲ್ ಅಗೌರವದ ವ್ಯಾಖ್ಯಾನವನ್ನು(definition of criminal contempt) ಸೂಕ್ತವಾಗಿ ತಿದ್ದುಪಡಿ ಮಾಡುವುದು.

• ನ್ಯಾಯಾಧೀಶರ ಆಸ್ತಿ-ಪಾಸ್ತಿಗಳ ಸಾರ್ವಜನಿಕ ಘೋಷಣೆಯನ್ನು ಕಡ್ಡಾಯಗೊಳಿಸುವುದು.

 • ನ್ಯಾಯಾಂಗದ ಎಲ್ಲ ಸ್ತರಗಳಲ್ಲೂ ಸಾಕಷ್ಟು ಪ್ರಾತಿನಿಧ್ಯ ಮತ್ತು ವೈವಿಧ್ಯತೆಯನ್ನು ಖಾತ್ರಿಪಡಿಸುವುದು.

ಚುನಾವಣಾ ಆಯೋಗದ ಸುಧಾರಣೆ

• ಚುನಾವಣಾ ಆಯೋಗದ ಸದಸ್ಯರನ್ನು, ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ, ಅಧ್ಯಕ್ಷರು ನೇಮಕ ಮಾಡುವಂತೆ ‘ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಕಾಯಿದೆ’, 2023 ಅನ್ನು ತಿದ್ದುಪಡಿ ಮಾಡುವುದು.

• ಚುನಾವಣಾ ಆಯುಕ್ತರು ತಮ್ಮ ನಿವೃತ್ತಿಯ ನಂತರ ಸರ್ಕಾರದ ಅಡಿಯಲ್ಲಿ ಯಾವುದೇ ಹುದ್ದೆ ಪಡೆಯುವುದನ್ನು ಅಥವಾ ರಾಜ್ಯಪಾಲ ಹುದ್ದೆ ಪಡೆಯುವುದನ್ನು ಅಥವಾ ಶಾಸಕಾಂಗದ ಸದಸ್ಯರಾಗುವುದನ್ನು  ಶಾಸನಬದ್ಧವಾಗಿ ನಿಷೇಧಿಸುವುದು.

• ಚುನಾವಣಾ ವೀಕ್ಷಕರ ಅಧಿಕಾರ ವ್ಯಾಪ್ತಿಯನ್ನು ನಿರ್ದಿಷ್ಟಪಡಿಸಲು ಜನರ ಪ್ರಾತಿನಿಧ್ಯ ಕಾಯ್ದೆಯನ್ನು ತಿದ್ದುಪಡಿ ಮಾಡುವುದು

ಚುನಾವಣಾ ಸುಧಾರಣೆಗಳು  

• ಚುನಾವಣೆಯಲ್ಲಿ ಪಡೆದ ವೋಟುಗಳ ಅನುಪಾತದಲ್ಲಿ ನಿರ್ಧರಿಸಿದ ಪ್ರತಿನಿಧಿಗಳ ಪಟ್ಟಿ ಪದ್ಧತಿಯನ್ನು (Proportional Representation with Partial List System) ಜಾರಿಗೆ ತರುವುದು.

• ಪ್ರಭುತ್ವವು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಪ್ರಚಾರ ಸಾಮಗ್ರಿಗಳ ರೂಪದಲ್ಲಿ ಸಹಾಯ ಒದಗಿಸುವುದು; ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಯನ್ನು ನಿಷೇಧಿಸುವುದು.

• ವಿದ್ಯುನ್ಮಾನ ಮತಯಂತ್ರಗಳ (EVMs) ಬಳಕೆಗೆ ಸಂಬAಧಿಸಿದ ನಿಯಮಗಳನ್ನು ಸೂಕ್ತವಾಗಿ ತಿದ್ದುಪಡಿ ಮಾಡುವ ಮೂಲಕ ಪ್ರಜಾಪ್ರಭುತ್ವದಲ್ಲಿ ಇಟ್ಟ ನಂಬಿಕೆಯನ್ನು ಪೂರ್ವ ಸ್ಥಿತಿಗೆ ತರುವುದು; ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಘಟಕಗಳ – ಮತದಾನ ಘಟಕಗಳು, ನಿಯಂತ್ರಣ ಘಟಕಗಳು ಮತ್ತು VVPAT ಘಟಕ – ಹೀಗೆ ಮರು ಅನುಕ್ರಮಗೊಳಿಸುವುದು. ಫಲಿತಾಂಶಗಳನ್ನು ಘೋಷಿಸುವ ಮೊದಲು ನಿಯಂತ್ರಣ ಘಟಕದಲ್ಲಿ ದಾಖಲಾಗಿರುವ VVPAT ಯ (ಚೀಟಿ) ಕನಿಷ್ಠ ಶೇ. 50ರಷ್ಟನ್ನು ಮತದಾನ ಘಟಕದೊಂದಿಗೆ ತಾಳೆ ಮಾಡುವುದು.

• ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚದ ಗರಿಷ್ಟ ಮಿತಿಯನ್ನು ನಿಗದಿಪಡಿಸಿದ ರೀತಿಯಲ್ಲಿ ರಾಜಕೀಯ ಪಕ್ಷಗಳಿಗೂ ಚುನಾವಣಾ ವೆಚ್ಚಗಳ ಗರಿಷ್ಟ ಮಿತಿಯನ್ನು ನಿಗದಿಪಡಿಸುವುದು; ಚುನಾವಣಾ ಖರ್ಚಿನ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಖಚಿತಪಡಿಸುವುದು.

-***********

Leave a Reply

Your email address will not be published. Required fields are marked *