ಗಣಿ ಕಾರ್ಮಿಕರ ಅಪ್ರತಿಮ ನಾಯಕ ಕೆ.ಎಸ್.ವಾಸನ್ ಜನ್ಮದಿನ

ಜುಲೈ 16, 1915

ಕರ್ನಾಟಕದ ಮೊದಲ ಕಮ್ಯುನಿಸ್ಟ್ ಶಾಸಕರೂ ಆಗಿದ್ದ ಕಾ. ಕೆ.ಎಸ್.ವಾಸನ್, 1940 ಮತ್ತು 1950ರ ದಶಕದಲ್ಲಿ ಕೋಲಾರ ಗಣಿ ಕಾರ್ಮಿಕರ ಸಮರಶೀಲ ಯೂನಿಯನ್ ಕಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸಿದವರಲ್ಲಿ ಒಬ್ಬರು. ಅವರು ಗಡಿಪಾರು, ಕೊಲೆ ಪ್ರಯತ್ನ, ಬಂಧನಗಳನ್ನು ಲೆಕ್ಕಿಸದೆ ಯೂನಿಯನ್ ಕಟ್ಟಿ ಜನಪ್ರಿಯ ನಾಯಕರಾಗಿದ್ದರು. ಅವರ ಕೊಲೆ ಪ್ರಯತ್ನದ ಸುದ್ದಿ ಕೇಳಿ ಗಣಿಯಿಂದ ಎದ್ದು ಬಂದ ಸಾವಿರಾರು ಗಣಿ ಕಾರ್ಮಿಕರ ಮೇಲೆ ಗೋಳಿಬಾರು ಮಾಡಿದಾಗ ಸತ್ತ ಆರು ಕಾರ್ಮಿಕರ ಮತ್ತು ವಾಸನ್ ಅವರ ಗೋರಿ ಇರುವ ಹುತಾತ್ಮಕ ಪಾರ್ಕ್ ಈಗಲೂ ಕೆ ಜಿ ಎಫ್ ನಲ್ಲಿದೆ. ಕಾ. ವಾಸನ್ ಅವರ ಜನ್ಮ ಶತಾಬ್ದಿಯನ್ನು ಈ ವರ್ಷ ಆಚರಿಸಲಾಗುತ್ತಿದೆ.

Leave a Reply

Your email address will not be published. Required fields are marked *