ಮುಜಫ್ಫರ್ ಅಹಮದ್ ಜನ್ಮದಿನ

  • 5 ಅಗಸ್ಟ್ 1889

ಕಾಮ್ರೆಡ್ ಮುಜಫ್ಫರ್ ಅಹಮದ್ ಭಾರತದ ಕಮ್ಯುನಿಸ್ಟ್ ಚಳುವಳಿ ಮತ್ತು ಪಕ್ಷದ ಸ್ಥಾಪಕರಲ್ಲಿ ಒಬ್ಬರು. 1922ರಲ್ಲಿ ಭಾರತ ಸ್ವಾತಂತ್ರ್ಯತಾ ಸಮಿತಿ ಸ್ಥಾಪಿಸಿ ಸ್ವಾತಂತ್ರ್ಯಚಳುವಳಿಗೆ ಧುಮುಕಿದ ಮುಜಫ್ಫರ್ಕಮ್ಯುನಿಸ್ಟ್ಚಟುವಟಿಕೆಗಳಿಗಾಗಿ ಕಾನ್ಪುರ್ ಮತ್ತು ಮೀರತ್ ಪಿತೂರಿ ಮೊಕದ್ದಮೆಗಳಲ್ಲಿ ಆಪಾದಿತರಾಗಿ ದೀರ್ಘ ಕಾಲ ಜೈಲುವಾಸಮಾಡಬೇಕಾಯಿತು. 1925ರಲ್ಲಿ ಅವರು ಬಂಗಾಳದಲ್ಲಿ ಲೇಬರ್ ಸ್ವರಾಜ್ ಪಾರ್ಟಿ ಸಂಘಟಿಸಿದರು. ಬಂಗಾಳದಲ್ಲಿ ಕಮ್ಯುನಿಸ್ಟ್ ಚಳುವಳಿಯ ಅಡಿಪಾಯ ಹಾಕಿದಕಾಕಾಬಾಬುಎಂದು ಜನಪ್ರಿಯರಾದ ಅವರನ್ನು ಸ್ವತಂತ್ರ ಭಾರತದ ಕಾಂಗ್ರೆಸ್ ಸರಕಾರಗಳು ಸಹ ಬಂಧಿಸಿ 1948ರಲ್ಲಿ (3 ವರ್ಷಗಳ ಕಾಲ), 1962 ಮತ್ತು 1965ರಲ್ಲಿ 2ವರ್ಷಗಳ ಕಾಲ ಜೈಲಿಗೆ ಹಾಕಿದ್ದವು. 1973ರವರೆಗೆ ತಮ್ಮ 84 ನೇ ವಯಸ್ಸಿನ ವರೆಗೆ ಕಮ್ಯುನಿಸ್ಟ್ ಚಳುವಳಿಯಲ್ಲಿ ಸಕ್ರಿಯರಾಗಿದ್ದ ಅವರು ಭಾರತದ ಆದರ್ಶ ಕಮ್ಯುನಿಸ್ಟರಲ್ಲಿಒಬ್ಬರು. .ಬಂಗಾಳ ಸಿಪಿಐ(ಎಂ) ರಾಜ್ಯ ಸಮಿತಿಯ ಮುಖ್ಯ ಕಚೇರಿಗೆ ಅವರ ಹೆಸರಿಡಲಾಗಿದೆ.

Leave a Reply

Your email address will not be published. Required fields are marked *