ಫಿಡೆಲ್ ಕ್ಯಾಸ್ಟ್ರೋ ಜನ್ಮದಿನ

  • 13 ಅಗಸ್ಟ್ 1926

ಅಗಸ್ಟ್ 13ರಂದು ಜೀವಂತ ಇರುವ ಜಗತ್ತಿನ ಅಪ್ರತಿಮ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅವರ 90ನೇ ಜನ್ಮದಿನ. ದಿನ ಕ್ಯೂಬಾದ ಶ್ರೀಮಂತ ಕುಟುಂಬದಲ್ಲಿಜನಿಸಿ ವಿಶ್ವವಿದ್ಯಾಲಯ ಶಿಕ್ಷಣ ಪಡೆದ ಫಿಡೆಲ್ ಅಮೆರಿಕದ ಕೈಗೊಂಬೆಯಾದ ಅಧ್ಯಕ್ಷ ಬಾಟಿಸ್ಟಾನ ಸರ್ವಾಧಿಕಾರದ ವಿರುದ್ಧ ರಾಜಕೀಯಕ್ಕೆ ಧುಮುಕಿದರು. ಒಂದು ಕಡೆಮಾರ್ಕ್ಸ್, ಎಂಗೆಲ್ಸ್, ಇನ್ನೊಂದು ಕಡೆ ಲ್ಯಾಟಿನ್ ಅಮೆರಿಕದ ಹೋರಾಟಗಾರ ಜೋಸ್ ಮಾರ್ತಿ ಚಿಂತನೆಗಳಿಂದ ಪ್ರಭಾವಿತರಾಗಿದ್ದ ಫಿಡೆಲ್ ಪಶ್ಚಿಮ ಗೋಳಾರ್ಧದ ಮೊದಲಕಮ್ಯುನಿಸ್ಟ್ ಕ್ರಾಂತಿಯನ್ನು ಗೆರಿಲ್ಲಾ ಸಶಸ್ತ್ರ ಹೋರಾಟದ ಮೂಲಕ 1959ರಲ್ಲಿ ಸಾಧಿಸಿದರು. ಜಗತ್ತಿನ ಅತ್ಯಂತ ಪ್ರಬಲ ಸೂಪರ್ ಪವರ್ ಅಮೆರಿಕದ ದಿಗ್ಬಂಧನಕ್ಕೆ ಸೆಡ್ಡುಹೊಡೆದು ಕ್ಯೂಬಾವನ್ನು ಸುಮಾರು 5 ದಶಕಗಳ ಕಾಲ ಸಮಾಜವಾದಿ ಹಾದಿಯಲ್ಲಿ ಮುನ್ನಡೆಸಿದರು. ಮಾತ್ರವಲ್ಲ ಲ್ಯಾಟಿನ್ ಅಮೆರಿಕದ ಮತ್ತು ಜಗತ್ತಿನ ದುಡಿಯುವ ಜನತೆಯವಿಮೋಚನಾ ಚಳುವಳಿಯ ನೆಚ್ಚಿನ ನೇತಾರರಾದರು.

Leave a Reply

Your email address will not be published. Required fields are marked *