ಲಾಲಾ ಹರ ದಯಾಲ್ ಜನ್ಮದಿನ

ಅಕ್ಟೋಬರ್ 14, 1884

ದೆಹಲಿಯಲ್ಲಿ ಹುಟ್ಟಿದ ಹರದಯಾಲ್ ಪಂಜಾಬ್ ವಿ.ವಿ.ದಲ್ಲಿ ಪದವಿ ಪಡೆದು ಆಕ್ಸ್ ಫರ್ಡಿಗೆ ಉನ್ನತ ಅಧ್ಯಯನಕ್ಕೆ ತೆರಳಿದರು.  1911 ರಲ್ಲಿ ಅಮೆರಿಕಕ್ಕೆ ತೆರಳಿದ ಅವರು ಮಾರ್ಕ್ಸ್ ಮತ್ತು ಬಕುನಿನ್ ಬರಹಗಳಿಂದ ಪ್ರಭಾವಿತರಾದರು. ಕೈಗಾರಿಕಾ ಕಾರ್ಮಿಕರ ಚಳುವಳಿಯಲ್ಲಿ ಭಾಗವಹಿಸಿದರು.

1913 ರಲ್ಲಿ ಭಾರತದಲ್ಲಿ ಬ್ರಿಟಿಶ್ ವಸಾಹತುಶಾಹಿ ಆಳ್ವಿಕೆಯನ್ನು ವಿರೋಧಿಸಲು ಅಮೆರಿಕ ಮತ್ತು ಕೆನಡಾದಲ್ಲಿರುವ ಭಾರತೀಯರನ್ನು ‘ಪೆಸಿಫಿಕ್ ಕರಾವಳಿ ಹಿಂದೂಸ್ತಾನ್ ಅಸೋಸಿಯೇಶನ್’ ಸ್ಥಾಪಿಸಿದರು. ಮುಂದೆ ಗದರ್ ಪಾರ್ಟಿಯನ್ನು ಸ್ಥಾಪಿಸಿದ ಅವರು ಪ್ರಖರ ಚಿಂತಕ, ಸಂಘಟಕ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

Leave a Reply

Your email address will not be published. Required fields are marked *