ಪ್ರಮೋದ ದಾಸ್‍ಗುಪ್ತ

ನವೆಂಬರ್ 29 1982

ಪಶ್ಚಿಮ ಬಂಗಾಳದಲ್ಲಿ ಬಲಿಷ್ಟ ಕಮ್ಯುನಿಸ್ಟ್ ಚಳುವಳಿಯನ್ನು ಕಟ್ಟಿದ ಅಗ್ರಗಣ್ಯ ನಾಯಕ ನಿಧನರಾದ ದಿನ. ಸಿಪಿಐ(ಎಂ) ಸ್ಥಾಪಿಸಿದ ಮೊದಲ ಪೊಲಿಟ್ ಬ್ಯುರೊದ ‘ನವರತ್ನ’ಗಳಲ್ಲಿ ಒಬ್ಬರು. ಈಗಿನ ಬಾಂಗ್ಲಾದೇಶದಲ್ಲಿ ಜುಲೈ 7, 1910ರಲ್ಲಿ ಹುಟ್ಟಿ, ಅನುಶೀಲನ ಸಮಿತಿ ಎಂಬ ಕ್ರಾಂತಿಕಾರಿ ಸಂಘಟನೆಯ ಸದಸ್ಯರಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ಇತರ ಬಂಗಾಳಿ ಕ್ರಾಂತಿಕಾರಿಗಳಂತೆ 1938ರಲ್ಲಿ ಕಮ್ಯುನಿಸ್ಟ್ ಪಕ್ಷ ಸೇರಿದ ಅವರು ಸ್ವಾತಂತ್ರ್ಯದ ಮೊದಲೂ ನಂತರವೂ ದೀರ್ಘಕಾಲ ಸೆರೆಮನೆ ವಾಸ ಅನುಭವಿಸಿದವರು, ಭೂಗತರಾಗಿದ್ದವರು.

1961ರಲ್ಲಿ ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿಯಾದ ಅವರು, ನಿಧನದವರೆಗೂ ಆ ಜವಾಬ್ದಾರಿಯನ್ನು ಅದ್ಭುತವಾಗಿ ನಿರ್ವಹಿಸಿದವರು. ಪರಿಷ್ಕರಣವಾದದ ವಿರುದ್ಧ ಹೋರಾಟ, ಪಕ್ಷದ ವಿಭಜನೆ, ಪಕ್ಷದ ಮೇಲೆ ಅರೆ ಫ್ಯಾಸಿಸ್ಟ್ ದಾಳಿಯ ಸನಿವೇಶವನ್ನು ದೃಢವಾಗಿ ಎದುರಿಸಿಯೂ ಬೆಳೆದು ಎಡರಂಗ ಸರಕಾರದ ಸ್ಥಾಪನೆ ಸಾಧನೆಗಳನ್ನು ಮಾಡಿದ್ದರ ಹಿಂದೆ ಅವರ ಸಂಘಟನಾ ಸಾಮಥ್ರ್ಯ ಬದ್ಧತೆಯ ಪಾತ್ರ ದೊಡ್ಡದು. 1940ರ ದಶಕದ ‘ಜನ ಯುದ್ಧ’, ‘ಸ್ವಾಧೀನತಾ’ದಿಂದ ಹಿಡಿದು ‘ಗಣಶಕ್ತಿ’ ಪತ್ರಿಕೆಗಳ ಸ್ಥಾಪನೆ ನಿರ್ವಹಣೆಯಲ್ಲೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

Leave a Reply

Your email address will not be published. Required fields are marked *