ಎಸ್‌ಎನ್‌ಸಿ-ಲವ್ಲಿನ್ ಪ್ರಕರಣ: ರಾಜಕೀಯ ದುರುದ್ದೇಶ ಬಯಲು ಮಾಡಿದ ಹೈಕೋರ್ಟ್ ತೀರ್ಪು

ಆಗಸ್ಟ್ 23ರಂದು ಕೇರಳ ಹೈಕೋರ್ಟ್ ಎಸ್‌ಎನ್‌ಸಿ-ಲವ್ಲಿನ್ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ. ವಿಶೇಷ ನ್ಯಾಯಾಲಯ 1996-98ರ ಈ ಪ್ರಕರಣದಲ್ಲಿ ಆಗ ವಿದ್ಯುಚ್ಛಕ್ತಿ ಮಂತ್ರಿಗಳಾಗಿದ್ದ ಪಿಣರಾಯಿ ವಿಜಯನ್ ಮೇಲೆ ಸಿಬಿಐ ಹಾಕಿದ್ದ ಆರೋಪದಿಂದ ಮುಕ್ತಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಕೇರಳ ಹೈಕೋರ್ಟಿನಲ್ಲಿ ಅರ್ಜಿ ಹಾಕಿತ್ತು. ಈಗ ಕೇರಳ ಹೈಕೋರ್ಟ್ವಿಶೇಷನ್ಯಾಯಾಲಯದತೀರ್ಪುಎತ್ತಿಹಿಡಿದಿದೆ. ಇದು ರಾಜಕೀಯ ದುರುದ್ದೇಶದ ಪ್ರಕರಣ ಎಂಬ ಸಿಪಿಐ(ಎಂ) ನಿಲುವನ್ನು ತೀರ್ಪುಘಂಟಾಘೋಷವಾಗಿ ಎತ್ತಿ ಹಿಡಿದಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯರೊ ಹೇಳಿದೆ.

ಪಿಣರಾಯಿ ವಿಜಯನ್ ಅವರ ಮೇಲೆ ಸಿಬಿಐ ಉದ್ದೇಶಪೂರ್ವಕವಾಗಿಯೇ ಗುರಿಯಿಟ್ಟಿದೆ ಎಂದು ಹೈಕೋರ್ಟ್ ಹೇಳಿದೆ. ಅವರ ಮೇಲೆ ಹಾಕಿದ್ದ ಎಲ್ಲ ಆರೋಪಗಳನ್ನು ನ್ಯಾಯಾಲಯಸಮಗ್ರವಾಗಿ ಬಯಲಿಗೆ ತಂದಿದೆ.

ಲವ್ಲಿನ್ ಪ್ರಕರಣವನ್ನು  ಸಿಪಿಐ(ಎಂ) ಮತ್ತು ಅದರ ಒಬ್ಬ ಮುಖಂಡರ ಪ್ರತಿಷ್ಠೆಯ ಮೇಲೆ ಮಸಿ ಬಳೆಯಲು ಬಳಸುವ ಪ್ರಯತ್ನಗಳು ನಡೆಯುತ್ತಿವೆ. ಹೈಕೋರ್ಟ್ ತೀರ್ಪು ಈ ಪ್ರಯತ್ನಗಳನ್ನು ಬಯಲಿಗೆಳೆದಿಟ್ಟಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *