ದೂರದರ್ಶನದ ಇಬ್ಬಂಗಿತನ

ಚುನಾಯಿತ  ಮುಖ್ಯಮಂತ್ರಿಗಳಿಗೆ  ತಮ್ಮ ಜನತೆಗೆ ಸಂದೇಶ ನೀಡಲು ಅವಕಾಶವಿಲ್ಲ
ಚುನಾಯಿತರಲ್ಲದವರಿಗೆ ವಿಭಜನಕಾರಿ ಸಿದ್ಧಾಂತ ಪ್ರಚಾರಕ್ಕೆ ಪೂರ್ಣ ಅವಕಾಶ

‘ದೂರದರ್ಶನ’ ನಾಗಪುರದಿಂದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ದಸರಾ ಭಾಷಣದ ನೇರ ಪ್ರಸಾರ ಮಾಡಿ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದೆ. ಒಂದೂವರೆ ತಿಂಗಳ ಹಿಂದೆ ಅದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಭಾಷಣವನ್ನು ಪ್ರಸಾರ ಮಾಡಿಸಲು ನಿರಾಕರಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಆಗ ದೂರದರ್ಶನ ಮತ್ತು ಆಕಾಶವಾಣಿ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿದ್ದ ತ್ರಿಪುರಾದ ಮುಖ್ಯಮಂತ್ರಿಗಳ ಬಾಷಣವನ್ನು ಪ್ರಸಾರ ಮಾಡಬೇಕಾದರೆ ಅದರÀಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಹೇಳಿದ್ದವು.  ಇದೊಂದು ಅಭೂತಪೂರ್ವ, ಅಪ್ರಜಾಸತ್ತಾತ್ಮಕ, ನಿರಂಕುಶತ್ವ ಮತ್ತು ಅಸಹಿಷ್ಣು ಕ್ರಮ ಎಂದು ಮಾಣಿಕ್ ಸರ್ಕಾರ್ ತಮ್ಮ ಭಾಷಣದಲ್ಲಿ ಬದಲಾವಣೆ ಮಾಡಲು ನಿರಾಕರಿಸಿ ಅದನ್ನು ಬೇರೆ ಮಾಧ್ಯಮಗಳ ಮೂಲಕ ಪ್ರಕಟಿಸಿದರು.

ಈ ಕುರಿತ ಪ್ರಸಾರ ಭಾರತಿ ಮತ್ತು ದೂರದರ್ಶನ, ಅಗರ್ತಲಾದ ಪತ್ರ ಹೀಗೆ ಹೇಳಿತ್ತು: “ಮುಖ್ಯಮಂತ್ರಿಗಳ ಸಂದೇಶವನ್ನು ಸಂಬಂಧಪಟ್ಟ ಅಧಿಕಾರಿಗಳು ಸೂಕ್ಷ್ಮವಾಗಿ ಪರೀಕ್ಷಿಸಿದರು. ಸಂದರ್ಭದ ಪಾವಿತ್ರ್ಯೇತೆ, ಪ್ರಸಾರ ಸಂಹಿತೆ ಮತ್ತು ಸಾರ್ವಜನಿಕ ಪ್ರಸಾರಕರ ಹೊಣೆಗಾರಿಕೆಯಿಂದಾಗಿ ಅದನ್ನು ಈಗಿರುವ ರೂಪದಲ್ಲಿ ಪ್ರಸಾರ ಮಾಡಲು ಸಾಧ್ಯವಿಲ್ಲ”.

ಕೇಂದ್ರ ಸೂಚನೆ ಮತ್ತು ಪ್ರಸಾರ ಮಂತ್ರಾಲಯದ ಅಡಿಯಲ್ಲಿರುವ ಅದೇ ‘ಸಾರ್ವಜನಿಕ ಪ್ರಸಾರಕರು’ ಸಪ್ಟಂಬರ್ 29ರಂದು ನಾಗಪುರದಿಂದ ಒಂದು ಸರಕಾರೇತರ ಸಂಘಟನೆಯ ಮುಖ್ಯಸ್ಥರ ಭಾಷಣದ ನೇರ ಪ್ರಸಾರವನ್ನು ಮಾಡಿದೆ. ಇದರಲ್ಲಿ  ‘ಸಂಬಂಧಪಟ್ಟ’ವರ ಪರೀಕ್ಷಣೆ, ಪ್ರಸಾರ ಸಂಹಿತೆ ಮತ್ತು ಸಾರ್ವಜನಿಕ ಪ್ರಸಾರಕರ ಹೊಣೆಯನ್ನು ಗಮನದಲ್ಲಿಟುಕೊಳ್ಳಲಾಗಿದೆಯೇ ಎಂಬ ಪ್ರಶ್ನೆ ಸಹಜವಾಗಿ ಎದ್ದಿದೆ.

ಈ ಇಬ್ಬಂದಿತನವನ್ನು ಬಲವಾಗಿ ಟೀಕಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ “ಆರೆಸ್ಸೆಸ್ ಮುಖ್ಯಸ್ಥರಿಗೆ ರಾಷ್ಟ್ರೀಯ, ರಾಜ್ಯ ಟಿವಿಯಲ್ಲಿ ಪ್ರಚಾರ ಕೊಡಲಾಗುತ್ತಿದೆ. ಅವರ ಭಾಷಣವನ್ನು ಪರೀಕ್ಷಿಸಲಾಗಿದೆಯೇ? ಈ ಸರಕಾರ ತ್ರಿಪುರಾದ ಮುಖ್ಯಮಂತ್ರಿಗಳ ಆಗಸ್ಟ್ 15ರ ಭಾಷಣವನ್ನು ಪ್ರಸಾರ ಮಾಡದಿರುವ ಭಂಡತನ ತೋರಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಈಗ ನಾಗಪುರದಿಂದ ಪ್ರಸಾರ ಮಾಡುವ ಆದೇಶ ಈ ಸರಕಾರ ಪ್ರಜಾಪ್ರಭುತ್ವದೊಂದಿಗೆ ಹೇಗೆ ವರ್ತಿಸುತ್ತಿದೆ ಎಂಬುದನ್ನು ಪ್ರಕಟಗೊಳಿಸುತ್ತದೆ. ಪ್ರತಿಪಕ್ಷದ ಮುಖ್ಯಮಂತ್ರಿಗಳನ್ನು ತೋರಿಸಲಾರದು, ಆದರೆ ಚುನಾಯಿತರಲ್ಲದ ಆರೆಸ್ಸೆಸ್ ಯಜಮಾನರುಗಳಿಗೆ ತಮ್ಮ ವಿಭಜನಕಾರಿ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಪೂರ್ಣ ಅವಕಾಶ ಒದಗಿಸಲಾಗುತ್ತದೆ.” ಎಂದು ತಮ್ಮ ಫೇಸ್‌ಬುಕ್ ಟಿಪ್ಪಣಿಯಲ್ಲಿ ಹೇಳಿದ್ದಾರೆ.

ಆರೆಸ್ಸೆಸ್ ಮುಖ್ಯಸ್ಥರು ತಮ್ಮ ಭಾಷಣದಲ್ಲಿ ಗೋರಕ್ಷಕರು ಮತ್ತು ಅವರನ್ನು ಉತ್ತೇಜಿಸುವವರು ಸರಕಾರದಲ್ಲಿ ಉನ್ನತ ಸ್ಥಾನಗಳಲ್ಲಿರುವವರು ಅಥವ ಸುಪ್ರಿಂ ಕೋರ್ಟ್ ಏನನ್ನುತ್ತಾರೆ ಎಂಬುದರ ಬಗ್ಗೆ ಬೇಸರ ಪಡಬಾರದು ಮತ್ತು ವಿಚಲಿತರಾಗಬಾರದು ಎಂದಿದ್ದಾರೆ. ಸರಕಾರ ಮತ್ತು ಆಡಳಿತ ಈ ಕುರಿತ ತಪ್ಪು ವ್ಯಾಖ್ಯಾನಗಳಿಂದ ದೂರ ಇರಬೇಕು ಎಂದು ಸಲಹೆ ನೀಡಿದ್ದಾರೆ!

ರೊಹಿಂಗ್ಯ ಮುಸ್ಲಿಮರ ಹತ್ಯಾಕಾಂಡ ನಡೆಯುತ್ತಿದೆ ಎಂದು ಜಗತ್ತಿನಾದ್ಯಂತ ಮ್ಯಾನ್ಮಾರ್ ತೀವ್ರ ಟೀಕೆಗೊಳಗಾಗುತ್ತಿರುವ ಸಂದರ್ಭದಲ್ಲಿ ಅದೇ ರೊಹಿಂಗ್ ಜನಗಳ ಬಗ್ಗೆ ಹೀನಾಯವಾಗಿ ಮಾತಾಡುತ್ತ ಅವರು ತಮ್ಮ ಹಿಂಸಾತ್ಮಕ ಮತ್ತು ಕ್ರ‍್ರಿಮಿನಲ್ ಪ್ರತ್ಯೇಕತಾವಾದಿ ಚಟುವಟಿಕೆಗಳು ಮತ್ತು  ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕದಿಂದಾಗಿ ಮ್ಯಾನ್ಮಾರ್‌ನಿಂದ ಹೊರಗಾಗಿದ್ದಾರೆ ಎಂದು ಯಾವುದೇ ಆಧಾರವಿಲ್ಲದೆ ಹೇಳಿದ್ದಾರೆ.

ಆದರೆ ಹೀಗೆ ಹೇಳಲು ಅವಕಾಶ ನೀಡುವಾಗ ದೂರದರ್ಶನಕ್ಕೆ ಈಗ ತನ್ನ ‘ಸಾರ್ವಜನಿಕ ಪ್ರಸಾರಕರ ಹೊಣೆಗಾರಿಕೆ’ ಅಡ್ಡಿಯೇನೂ ಆಗಿಲ್ಲ1 ‘ದೂರದರ್ಶನ’ ನಾಗಪುರದಿಂದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ದಸರಾ ಭಾಷಣದ ನೇರ ಪ್ರಸಾರ ಮಾಡಿ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದೆ. ಒಂದೂವರೆ ತಿಂಗಳ ಹಿಂದೆ ಅದು ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಭಾಷಣವನ್ನು ಪ್ರಸಾರ ಮಾಡಿಸಲು ನಿರಾಕರಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಆಗ ದೂರದರ್ಶನ ಮತ್ತು ಆಕಾಶವಾಣಿ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿದ್ದ ತ್ರಿಪುರಾದ ಮುಖ್ಯಮಂತ್ರಿಗಳ ಬಾಷಣವನ್ನು ಪ್ರಸಾರ ಮಾಡಬೇಕಾದರೆ ಅದರಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಹೇಳಿದ್ದವು.  ಇದೊಂದು ಅಭೂತಪೂರ್ವ, ಅಪ್ರಜಾಸತ್ತಾತ್ಮಕ, ನಿರಂಕುಶತ್ವ ಮತ್ತು ಅಸಹಿಷ್ಣು ಕ್ರಮ ಎಂದು ಮಾಣಿಕ್ ಸರ್ಕಾರ್ ತಮ್ಮ ಭಾಷಣದಲ್ಲಿ ಬದಲಾವಣೆ ಮಾಡಲು ನಿರಾಕರಿಸಿ ಅದನ್ನು ಬೇರೆ ಮಾಧ್ಯಮಗಳ ಮೂಲಕ ಪ್ರಕಟಿಸಿದರು.

ಈ ಕುರಿತ ಪ್ರಸಾರ ಭಾರತಿ ಮತ್ತು ದೂರದರ್ಶನ, ಅಗರ್ತಲಾದ ಪತ್ರ ಹೀಗೆ ಹೇಳಿತ್ತು: “ಮುಖ್ಯಮಂತ್ರಿಗಳ ಸಂದೇಶವನ್ನು ಸಂಬಂಧಪಟ್ಟ ಅಧಿಕಾರಿಗಳು ಸೂಕ್ಷ್ಮವಾಗಿ ಪರೀಕ್ಷಿಸಿದರು. ಸಂದರ್ಭದ ಪಾವಿತ್ರತೆ, ಪ್ರಸಾರ ಸಂಹಿತೆ ಮತ್ತು ಸಾರ್ವಜನಿಕ ಪ್ರಸಾರಕರ ಹೊಣೆಗಾರಿಕೆಯಿಂದಾಗಿ ಅದನ್ನು ಈಗಿರುವ ರೂಪದಲ್ಲಿ ಪ್ರಸಾರ ಮಾಡಲು ಸಾಧ್ಯವಿಲ್ಲ”.

ಕೇಂದ್ರ ಸೂಚನೆ ಮತ್ತು ಪ್ರಸಾರ ಮಂತ್ರಾಲಯದ ಅಡಿಯಲ್ಲಿರುವ ಅದೇ  ‘ಸಾರ್ವಜನಿಕ ಪ್ರಸಾರಕರು’ ಸಪ್ಟಂಬರ್ 29ರಂದು ನಾಗಪುರದಿಂದ ಒಂದು ಸರಕಾರೇತರ ಸಂಘಟನೆಯ ಮುಖ್ಯಸ್ಥರ ಭಾಷಣದ ನೇರ ಪ್ರಸಾರವನ್ನು ಮಾಡಿದೆ. ಇದರಲ್ಲಿ  ‘ಸಂಬಂಧಪಟ್ಟ’ವರ ಪರೀಕ್ಷಣೆ, ಪ್ರಸಾರ ಸಂಹಿತೆ ಮತ್ತು ಸಾರ್ವಜನಿಕ ಪ್ರಸಾರಕರ ಹೊಣೆಯನ್ನು ಗಮನದಲ್ಲಿಟುಕೊಳ್ಳಲಾಗಿದೆಯೇ ಎಂಬ ಪ್ರಶ್ನೆ ಸಹಜವಾಗಿ ಎದ್ದಿದೆ.

ಈ ಇಬ್ಬಂದಿತನವನ್ನು ಬಲವಾಗಿ ಟೀಕಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ “ಆರೆಸ್ಸೆಸ್ ಮುಖ್ಯಸ್ಥರಿಗೆ ರಾಷ್ಟ್ರೀಯ, ರಾಜ್ಯ ಟಿವಿಯಲ್ಲಿ ಪ್ರಚಾರ ಕೊಡಲಾಗುತ್ತಿದೆ. ಅವರ ಭಾಷಣವನ್ನು ಪರೀಕ್ಷಿಸಲಾಗಿದೆಯೇ? ಈ ಸರಕಾರ ತ್ರಿಪುರಾದ ಮುಖ್ಯಮಂತ್ರಿಗಳ ಆಗಸ್ಟ್ 15ರ ಭಾಷಣವನ್ನು ಪ್ರಸಾರ ಮಾಡದಿರುವ ಭಂಡತನ ತೋರಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಈಗ ನಾಗಪುರದಿಂದ ಪ್ರಸಾರ ಮಾಡುವ ಆದೇಶ ಈ ಸರಕಾರ ಪ್ರಜಾಪ್ರಭುತ್ವದೊಂದಿಗೆ ಹೇಗೆ ವರ್ತಿಸುತ್ತಿದೆ ಎಂಬುದನ್ನು ಪ್ರಕಟಗೊಳಿಸುತ್ತದೆ. ಪ್ರತಿಪಕ್ಷದ ಮುಖ್ಯಮಂತ್ರಿಗಳನ್ನು ತೋರಿಸಲಾರದು, ಆದರೆ ಚುನಾಯಿತರಲ್ಲದ ಆರೆಸ್ಸೆಸ್ ಯಜಮಾನರುಗಳಿಗೆ ತಮ್ಮ ವಿಭಜನಕಾರಿ ಸಿದ್ಧಾಂತಗಳನ್ನು ಪ್ರಚಾರ ಮಾಡಲು ಪೂರ್ಣ ಅವಕಾಶ ಒದಗಿಸಲಾಗುತ್ತದೆ.” ಎಂದು ತಮ್ಮ ಫೇಸ್‌ ಬುಕ್ ಟಿಪ್ಪಣಿಯಲ್ಲಿ ಹೇಳಿದ್ದಾರೆ.

ಆರೆಸ್ಸೆಸ್ ಮುಖ್ಯಸ್ಥರು ತಮ್ಮ ಭಾಷಣದಲ್ಲಿ ಗೋರಕ್ಷಕರು ಮತ್ತು ಅದನ್ನು ಉತ್ತೇಜಿಸುವವರು ಸರಕಾರದಲ್ಲಿ ಉನ್ನತ ಸ್ಥಾನಗಳಲ್ಲಿರುವವರು ಅಥವ ಸುಪ್ರಿಂ ಕೋರ್ಟ್ ಏನನ್ನುತ್ತಾರೆ ಎಂಬುದರ ಬಗ್ಗೆ ಬೇಸರ ಪಡಬಾರದು ಮತ್ತು ವಿಚಲಿತರಾಗಬಾರದು ಎಂದಿದ್ದಾರೆ. ಸರಕಾರ ಮತ್ತು ಆಡಳಿತ ಈ ಕುರಿತ ತಪ್ಪು ವ್ಯಾಖ್ಯಾನಗಳಿಂದ ದೂರ ಇರಬೇಕು ಎಂದು ಸಲಹೆ ನೀಡಿದ್ದಾರೆ!

ರೊಹಿಂಗ್ಯ ಮುಸ್ಲಿಮರ ಹತ್ಯಾಕಾಂಡ ನಡೆಯುತ್ತಿದೆ ಎಂದು ಜಗತ್ತಿನಾದ್ಯಂತ ಮ್ಯಾನ್ಮಾರ್ ತೀವ್ರ ಟೀಕೆಗೊಳಗಾಗುತ್ತಿರುವ ಸಂದರ್ಭದಲ್ಲಿ ಅದೇ ರೊಹಿಂಗ್ ಜನಗಳ ಬಗ್ಗೆ ಹೀನಾಯವಾಗಿ ಮಾತಾಡುತ್ತ ಅವರು ತಮ್ಮ ಹಿಂಸಾತ್ಮಕ ಮತ್ತು ಕ್ರ‍್ರಿಮಿನಲ್ ಪ್ರತ್ಯೆÃಕತಾವಾದಿ ಚಟುವಟಿಕೆಗಳು ಮತ್ತು  ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕದಿಂದಾಗಿ ಮ್ಯಾನ್ಮಾರ್‌ನಿಂದ ಹೊರಗಾಗಿದ್ದಾರೆ ಎಂದು ಯಾವುದೇ ಆಧಾರವಿಲ್ಲದೆ ಹೇಳಿದ್ದಾರೆ.

ಆದರೆ ಹೀಗೆ ಹೇಳಲು ಅವಕಾಶ ನೀಡುವಾಗ ಈಗ ದೂರದರ್ಶನಕ್ಕೆ ತನ್ನ ‘ಸಾರ್ವಜನಿಕ ಪ್ರಸಾರಕರ ಹೊಣೆಗಾರಿಕೆ’ ಅಡ್ಡಿಯೇನೂ ಆಗಿಲ್ಲ.

Leave a Reply

Your email address will not be published. Required fields are marked *