1984ರ ಸಿಖ್ಖರ ಹತ್ಯಾಕಾಂಡದ ಆರೋಪಿಗೆ ಶಿಕ್ಷೆ: ಸಿಪಿಐ(ಎಂ) ಸ್ವಾಗತ

“2002 ಮತ್ತಿತರ ಕೋಮು ಹಿಂಸಾಕಾಂಡಕ್ಕೆ ನೇತೃತ್ವ ನೀಡಿದವರಿಗೂ ಶಿಕ್ಷೆಯಾಗಬೇಕು”

1984ರಲ್ಲಿ ದಿಲ್ಲಿಯಲ್ಲಿ ನಡೆದ ಸಿಖ್ಖರ ಹತ್ಯಾಕಾಂಡದ ಒಬ್ಬ ಆರೋಪಿ ಸಜ್ಜನ್‍ ಕುಮಾರ್‍ ಗೆ ಶಿಕ್ಷೆ ವಿಧಿಸಿರುವುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸ್ವಾಗತಿಸಿದೆ. ಕೊನೆಗೂ ನ್ಯಾಯ ನೀಡುವಲ್ಲಿ ಕಾನೂನಿಗೆ 34 ವರ್ಷಗಳೇ  ಬೇಕಾದವು.

ಎಲ್ಲ ಕೋಮುವಾದಿ ಹಿಂಸಾಕಾಂಡಗಳಲ್ಲಿ, ಅದು 1984ರದ್ದು ಆಗಿರಬಹುದು, 2002ದ್ದು, ಅಥವ ಬೇರೆ ಇಂತಹ ಘಟನೆಗಳಲ್ಲಿ ಆಗಿರಬಹುದು, ಇದಕ್ಕೆ ಬಲಿಯಾದವರಿಗೆಲ್ಲರಿಗೂ ನ್ಯಾಯ ಸಿಗಬೇಕು, ಇವುಗಳಲ್ಲಿ ಹಿಂಸಾಕಾಂಡ ನಡೆಸಿದ ಜನಜಂಗುಳಿಗಳಿಗೆ ನೇತೃತ್ವ ನೀಡಿದ, ಬೆಂಬಲಿಸಿದ ಮತ್ತು ಅವರಿಗೆ ರಕ್ಷಣೆ ನೀಡಿದ ರಾಜಕೀಯ ಮುಖಂಡರನ್ನು ಶಿಕ್ಷಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಆಗ್ರಹಿಸಿದೆ.

Leave a Reply

Your email address will not be published. Required fields are marked *