ಜನಗಳ ಪ್ರತಿಭಟನೆಗಳು ಹೆಚ್ಚುತ್ತಿವೆ: ಯುವಜನರ, ವಿದ್ಯಾಥಿಗಳ ಹೋರಾಟಗಳಿಗೆ ಬೆಂಬಲ

ಕೇರಳ ಮತ್ತು ಪಶ್ಚಿಮ ಬಂಗಾಲದ ಜನತೆ ಸಿಪಿಐ(ಎಂ) ಮತ್ತು ಎಡಪಕ್ಷಗಳ ಕರೆಗೆ ಸ್ಪಂದಿಸಿದ ರೀತಿಯ ಬಗ್ಗೆ ಪೊಲಿಟ್‍ ಬ್ಯುರೊ ಅವರಿಗೆ ಹಾರ್ದಿಕ ನಮನ ಸಲ್ಲಿಸಿದೆ.

 55 ಲಕ್ಷಕ್ಕೂ ಮಹಿಳೆಯರು ಕೇರಳದ ಉತ್ತರ ತುದಿಯಿಂದ ದಕ್ಷಿಣ ತುದಿಯನ್ನು ಜೋಡಿಸುವ ಒಂದು ಮಹಿಳಾ ಗೋಡೆಯನನ್ಏ ನಿರ್ಮಿಸಿ ಮಹಿಳೆಯರಿಗೆ ಸಮಾನ ಹಕ್ಕುಗಳು ಬೇಕೆಂಬ ಆಗ್ರಹವನ್ನು ಎತ್ತಿ ಹಿಡಿದಿದ್ದಾರೆ ಮತ್ತು ಕೇರಳದ ನವೋತ್ಥಾನ  ಆಂದೋಲನವನ್ನು ಮುಂದುವರೆಸಿದ್ದಾರೆ  ಎಂದು ಪೊಲಿಟ್‍ಬ್ಯುರೊ ಹೇಳಿದೆ.

 ಪಶ್ಚಿಮ ಬಂಗಾಲ ಕೊಲ್ಕತಾದ ಬ್ರಿಗೇಡ್‍ ಪರೇಡ್‍ ಮೈದಾನದಲ್ಲಿ ಬಹುಶಃ ಅತಿದೊಡ್ಡ ಜನಸಭೆಯನ್ನು ಕಂಡಿತು. “ಮೋದಿ ಸರಕಾರವನ್ನು ಓಡಿಸಿ, ಭಾರತ ಉಳಿಸಿ; ಟಿಎಂಸಿ ಓಡಿಸಿ, ಬಂಗಾಲ ಉಳಿಸಿ” ಎಂಬ ಎಡರಂಗದ ಕರೆಗೆ ಓಗೊಟ್ಟು ಈ ಬೃಹತ್‍ ಜನಸಭೆ ನಡೆಯಿತು.

ತ್ರಿಪುರಾದಲ್ಲಿಯೂ  ಜನತೆ ಮತ್ತು ಸಿಪಿಐ(ಎಂ)ನ ಕಾರ್ಯಕರ್ತರು ಮತ್ತು ಮುಖಂಡರು ಬಿಜೆಪಿ ಮತ್ತು ಅದರ ರಾಜ್ಯ ಸರಕಾರ ನಡೆಸುತ್ತಿರುವ ಫ್ಯಾಸಿಸ್ಟ್-ಮಾದರಿ ದಾಳಿಗಳಿಗೆ ಪ್ರತಿರೋಧವನ್ನು ಮುಂದುವರೆಸುತ್ತಿದ್ದಾರೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.

ಫೆಬ್ರುವರಿ 8 ಮತ್ತು 9ರಂದು ನಡೆದ ಸಿಪಿಐ(ಎಂ) ಪೊಲಿಟ್‍ ಬ್ಯುರೊ  ಸಭೆ ನಿರುದ್ಯೋಗವನ್ನು ಮರೆಮಾಚಲು ಪ್ರಯತ್ನಿಸುತ್ತಿರುವ ಮೋದಿ ಸರಕಾರದ, ನಮ್ಮ ಯುವಜನಗಳನ್ನು ತಮ್ಮ ಸಾಮರ್ಥ್ಯವನ್ನು ಸಾಕಾರಗೊಳಿಸುವ ಸಾಧ್ಯತೆಗಳಿಂದ ವಂಚಿಸುತ್ತಿರುವ ಧೋರಣೆಗಳ ವಿರುದ್ಧ  ಹೋರಾಟಗಳ ಮೂಲಕ  ಒತ್ತಡಗಳನ್ನು ಹೆಚ್ಚಿಸಬೇಕು ಎಂದೂ  ಪಕ್ಷದ ಎಲ್ಲ ಘಟಕಗಳು ಮತ್ತು ಭಾರತೀಯ  ಯುವಜನತೆಗೆ ಕರೆ ನೀಡಿದೆ.

ಸಾರ್ವಜನಿಕ ಶಿಕ್ಷಣದ ಮೇಲೆ ಎಲ್ಲ ಮಟ್ಟಗಳಲ್ಲೂ ನಡೆಯುತ್ತಿರುವ  ತೀವ್ರ ಆಕ್ರಮಣಗಳನ್ನು ನಡೆಸುತ್ತಿರುವುದರ ವಿರುದ್ಧ ಫೆಬ್ರುವರಿ 19ರಂದು ನವದೆಹಲಿಯಲ್ಲಿ  ಎಲ್ಲ ದರ್ಜೆಗಳ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಬೋಧಕೇತರ ನೌಕರರು ನಡೆಸಲಿರುವ ಐಕ್ಯ ಪ್ರತಿಭಟನಾ ಮೆರವಣಿಗೆಗೆ ಅದು  ಬೆಂಬಲ ವ್ಯಕ್ತಪಡಿಸಿದೆ..

ಮೋದಿ ಸರಕಾರ ರಫೆಲ್‍ ವ್ಯವಹಾರ ಕುರುತಂತೆ ಮರು-ಮಾತುಕತೆ ನಡೆಸಿದಂದಿನಿಂದ   ಈ ಕುರಿತು ಹೆಚ್ಚೆಚ್ಚು ಮಾಹಿತಿಗಳು ಬಹಿರಂಗಕ್ಕೆ ಬರುತ್ತಿವೆ. ಈ ಇಡೀ ಹಗರಣದ ವಿಚಾರಣೆ ನಡೆಸಲು ಮತ್ತು ಇಂತಹ ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರಕ್ಕೆ, ಚಮಚಾ ಬಂಡವಾಳಶಾಹಿಗೆ ಮತ್ತು ಭಾರತದ ರಕ್ಷಣಾ ಹಿತಾಸಕ್ತಿಗಳನ್ನು ಬುಡಮೇಲು ಮಾಡಲಿಕ್ಕೆ ಹೊಣೆಗಾರರಾದವರನ್ನು ಕುರಿತಂತೆ ವಿಚಾರಣೆ ನಡೆಸಲು ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಸಬೇಕು ಎಂದು ಪೊಲಿಟ್‍ ಬ್ಯುರೊ ಮತ್ತೊಮ್ಮೆ ಆಗ್ರಹಿಸಿದೆ.

ಈ ಪೊಲಿಟ್‍ಬ್ಯುರೊ ಸಭೆಯ ನಂತರ ನೀಡಿರುವ ಹೇಳಿಕೆಯಲ್ಲಿನ ಇತರ ಅಂಶಗಳನ್ನು ಈ ಮುಂದೆ ಕೊಡಲಾಗಿದೆ:

ಸಾರ್ವತ್ರಿಕ ಚುನಾವಣೆಗಳಿಗೆ ಸಿದ್ಧತೆ:

ಬಿಜೆಪಿ ಮೈತ್ರಿಕೀಟವನ್ನು ಸೋಲಿಸಬೇಕು, ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಬಲವನ್ನು ಹೆಚ್ಚಿಸಬೇಕು ಮತ್ತು ಕೇಂದ್ರದಲ್ಲಿ ಒಂದು ಪರ್ಯಾಯ ಜಾತ್ಯತೀತ ಸರಕಾರ ರಚನೆಯಾಗುವಂತೆ ಮಾಡಬೇಕು ಎಂಬ ಕಾರ್ಯಭಾರಗಳನ್ನು ಸಾಧಿಸಲು ಅನುಸರಿಸಬೇಕಾದ ಚುನ಻ವಣಾ ಕಾರ್ಯತಂತ್ರಗಳ ಬಗ್ಗೆ ರಾಜ್ಯವಾರು ವರದಿಗಳನ್ನು ಪೊಲಿಟ್‍ ಬ್ಯುರೊ ಚರ್ಚಿಸಿತು.

ಮಾರ್ಚ್‍ 3 ಮತ್ತು 4ರಂದು ನಡೆಯಲಿರುವ ಕೇಂದ್ರ ಸಮಿತಿ ಸಭೆಯಲ್ಲಿ ವಿವರಗಳನ್ನು ಅಂತಿಮಗೊಳಿಸಲಾಗುವುದು.

ರಫೆಲ್‍ ಹಗರಣ:

ಮೋದಿ ಸರಕಾರ ರಫೆಲ್‍ ವ್ಯವಹಾರ ಕುರುತಂತೆ ಮರು-ಮಾತುಕತೆ ನಡೆಸಿದಂದಿನಿಂದ   ಈ ಕುರಿತ ವರದಿಗಳ ಮಹಾಪೂರವೇ ಬರುತ್ತಿದೆ. ಈ ವಿಮಾನಗಳಿಗೆ ಆರಂಭದ ಒಪ್ಪಂದದಲ್ಲಿ ನಿರ್ಧರಿಸಿದ್ದಕ್ಕಿಂತ ಬಹಳ ಹೆಚ್ಚಿನ ಬೆಲೆ ತೆರಲಾಗುತ್ತಿದೆ ಎಂಬ ಆಪಾದನೆಗಳನ್ನು ಕುರಿತ ವರದಿಗಳಿವು. ಬಿಜೆಪಿ ನೇತೃತ್ವದ ನ್‍ಡಿಎ ಸರಕಾರ ಒಂದಿಲ್ಲೊಂದು ನೆವದಲ್ಲಿ ಈ ವ್ಯವಹಾರವನ್ನು ಸಮರ್ಥಿಸಿಕೊಳ್ಳುವ ವ್ಯರ್ಥ ಪ್ರಯತ್ನಗಳನ್ನು ನಡೆಸಿದೆ ಮತ್ತು  ಪಕ್ಷಪಾತ, ಭ್ರಷ್ಟಾಚಾರ ಹಾಗೂ ಅತ್ಯಂತ ಕೆಟ್ಟ ಚಮಚಾ ಬಂಡವಾಳಶಾಹಿಯೆಂಬ ಆಪಾದನೆಗಳನ್ನು ಬದಿಗೊತ್ತಲು ಮಾಡುತ್ತಿರುವ ಅದರ ಪ್ರಯತ್ನಗಳು ಯಶಸ್ವಿಯಾಗುತ್ತಿಲ್ಲ.

ರಫೆಲ್ ವ್ಯವಹಾರದಲ್ಲಿನ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿ ಮೋದಿ ಸರಕಾರ ವಿಮಾನ ಪಡೆಯ ಸಾಮರ್ಥ್ಯವನ್ನು ಮತ್ತು ರಕ್ಷಣಾ ಇಲಾಖೆಯ ಻ಧಿಕಾರವನ್ನು ಬುಡಮೇಲು ಮಾಡುತ್ತಲೇ ಬಂದಿದೆ3. ಇದರಿಂದ ಸಾರ್ವಜನಿಕ ಖಜಾನೆಗೆ ಭಾರೀ ನಷ್ವಾಗಿದೆತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟಾಗಿದೆ.

ಈ ಇಡೀ ಹಗರಣದ ವಿಚಾರಣೆ ನಡೆಸಲು ಮತ್ತು ಇಂತಹ ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರಕ್ಕೆ, ಚಮಚಾ ಬಂಡವಾಳಶಾಹಿಗೆ ಮತ್ತು ಭಾರತದ ರಕ್ಷಣಾ ಹಿತಾಸಕ್ತಿಗಳನ್ನು ಬುಡಮೇಲು ಮಾಡಲಿಕ್ಕೆ ಹೊಣೆಗಾರರಾದವರನ್ನು ಕುರಿತಂತೆ ವಿಚಾರಣೆ ನಡೆಸಲು ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಸಬೇಕು ಎಂದು ಪೊಲಿಟ್‍ ಬ್ಯುರೊ ಮತ್ತೊಮ್ಮೆ ಆಗ್ರಹಿಸುತ್ತದೆ. ಹಾಗೆ ಮಾಡಲು ಮೋದಿ ಸರಕಾರ ಮೊಂಡುತನದಿಂದ ನಿರಾಕರಿಸುತ್ತಿರುವುದು “ತಪ್ಪು ಎಸಗಲಾಗಿದೆ” ಎಂದು ಒಪ್ಪಿಕೊಂಡಂತಾಗಿದೆ.

ಹೆಚ್ಚುತ್ತಿರುವ ನಿರುದ್ಯೋಗ:

ಬಿಜೆಪಿ ಪ್ರತಿವರ್ಷ ಎರಡು ಕೋಟಿ ಹೊಸ ಉದ್ಯೋಗಗಳನ್ನು ನಿರ್ಮಿಸುವ ಆಶ್ವಾಸನೆ ನೀಡಿತ್ತು. ಆದರೆ ಮೋದಿ ಸರಕಾರ ಪ್ರಕಟವಾಗದಂತೆ ತಡೆದಿರುವ ರಾಷ್ಟ್ರೀಯ ಸ್ಯಾಂಪಲ್ ಸರ್ವೆ ಸಂಘಟನೆ(ಎನ್‍.ಎಸ್‍.ಎಸ್.ಒ.)ಯ ಮಾಹಿತಿಯ ಪ್ರಕಾರ 2017-18ರಲ್ಲಿ ಭಾರತದಲ್ಲಿನ ನಿರುದ್ಯೋಗ ದರ 6.1% ಕ್ಕೇ ಏರಿದೆ, ಇದು 45 ವರ್ಷಗಳಲ್ಲೇ ಅತಿ ಹೆಚ್ಚು.

ಹತ್ತು ಕೋಟಿ ಹೊಸ ಉದ್ಯೋಗಗಳ ಆಶ್ವಾಸನೆಗೆ ತದ್ವಿರುದ್ಧವಾಗಿ, ಕೋಟ್ಯಂತರ ವ್ಯಕ್ತಿಗಳು ತಮಗಿದ್ದ ಉದ್ಯೋಗಗಳನ್ನು ಕಳಕೊಂಡಿದ್ದಾರೆ. ವರದಿಗಳ ಪ್ರಕಾರ, ಎನ್‍.ಎಸ್‍.ಎಸ್.ಒ. ಸರ್ವೆ ಗ್ರಾಮೀಣ ಯುವಕರ(15-29 ವಯೋಗುಂಪು) ನಿರುದ್ಯೋಗ ದರ 2011-12ರಲ್ಲಿ 5 ಶೇಕಡಾ ಇದ್ದದ್ದು 2017-18ರಲ್ಲಿ 17.4ಶೇಕಡಾಕ್ಕೆ ಏರಿದೆ. ಅದೇ ವಯೋಗುಂಪಿನ ಗ್ರಾಮೀಣ ಮಹಿಳೆಯರ ನಿರುದ್ಯೋಗ ದರ 4.8 ಶೆಕಡಾದಿಂದ 13.6 ಶೇಕಡಾಕ್ಕೆ  ಏರಿದೆ.

ನಮ್ಮ ಯುವಜನಗಳನ್ನು ತಮ್ಮ ಸಾಮರ್ಥ್ಯವನ್ನು ಸಾಕಾರಗೊಳಿಸುವ ಸಾಧ್ಯತೆಗಳಿಂದ ವಂಚಿಸುತ್ತಿರುವ ಮೋದಿ ಸರಕಾರದ ಧೋರಣೆಗಳ ವಿರುದ್ಧ  ಹೋರಾಟಗಳ ಮೂಲಕ  ಅವನ್ನು ಬದಲಿಸುವಂತೆ ಒತ್ತಡಗಳನ್ನು ಹೆಚ್ಚಿಸಬೇಕು ಎಂದು ಪೊಲಿಟ್‍ ಬ್ಯುರೊ ಪಕ್ಷದ ಎಲ್ಲ ಘಟಕಗಳು ಮತ್ತು ಭಾರತೀಯ  ಯುವಜನತೆಗೆ ಕರೆ ನೀಡುತ್ತದೆ.

ಎನ್‍.ಎಸ್‍.ಎ. ಹಿಂತೆಗೆದುಕೊಳ್ಳಿ:

ಮಧ್ಯಪ್ರದೇಶದ ಕಾಂಗ್ರೆಸ್‍ ರಾಜ್ಯ ಸರಕಾರ ಗೋವಧೆಯ ಆರೋಪದ ಮೇಲೆ ಬಂಧಿಸಿರುವ ಐದು ವ್ಯಕ್ತಿಗಳ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‍.ಎಸ್.ಎ.) ಪ್ರಯೋಗಿಸಿರುವುದುನ್ನು ಪೊಲಿಟ್‍ಬ್ಯುರೊ ಖಂಡಿಸುತ್ತದೆ. ಈ ಕಟುವಾದ ಶಾಸನವನ್ನು  ತಂದದ್ದು ರಾಷ್ಟ್ರ-ವಿರೋಧಿ ಭಯೋತ್ಪಾದಕರ ವಿರುದ್ಧ ಬಳಸಲಿಕ್ಕಾಗಿ. ಅದರ ಬದಲು, ಇಂತಹ  ಆರೋಪಗಳ ಮೇಲೆ ಅದನ್ನು ಬಳಸುತ್ತಿರುವುದು ಕೋಮುವಾದಿ ಶಕ್ತಿಗಳನ್ನು ತುಷ್ಟೀಕರಿಸುವ ಒಂದು ಪ್ರಯತ್ವವನ್ನು ಪ್ರದರ್ಶಿಸುತ್ತದೆ.

ಎನ್‍.ಎಸ್‍.ಎ. ಪ್ರಯೋಗಿಸಿರುವುದನ್ನು ಹಿಂತೆಗೆದುಕೊಳ್ಳಬೇಕು ಎಂದು ಪೊಲಿಟ್‍ ಬ್ಯುರೊ ಆಗ್ರಹಿಸುತ್ತದೆ. ಇಂತಹ ಯಾವುದೇ ಆರೋಪವನ್ನು ನಿರ್ವಹಿಸಲು ಈಗಿರುವ ಕಾನೂನಿನ ಅಂಶಗಳೇ ಸಾಕಾಗುತ್ತವೆ.

ಶಿಕ್ಷಣದ ಮೇಲೆ ದಾಳಿಗಳು :

ಬಿಜೆಪಿ ಸರಕಾರ ಸಾರ್ವಜನಿಕ ಶಿಕ್ಷಣದ ಮೇಲೆ ಎಲ್ಲ ಮಟ್ಟಗಳಲ್ಲೂ, ನಿರ್ದಿಷ್ಟವಾಗಿ  ಉನ್ನತ ಅಧ್ಯಯನ ಮತ್ತು ಸಂಶೋಧನೆಯ ಸಂಸ್ಥಗಳ ಮೇಲೆ ತೀವ್ರ ಆಕ್ರಮಣಗಳನ್ನು ನಡೆಸುತ್ತಿದೆ ಎಂದು ಪೊಲಿಟ್‍ ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ. ನಿಧಿ ಕಡಿತಗಳು, ಸ್ವಾಯತ್ತತೆ ಮತ್ತು ಸಾಮಾಜಿಕ ನ್ಯಾಯದ ನೀತಿಗಳನ್ನು ಶಿಥಿಲಗೊಳಿಸುವುದು, ಅದರ ಜೊತೆಗೆ ಕೋಮುವಾದಿ ಒಲವುಗಳನ್ನು ಆಳಗೊಳಿಸುವುದು, ಅದಕ್ಕಾಗಿ ವಸ್ತುನಿಷ್ಟ ವೈಜ್ಞಾನಿಕ ಅಧ್ಯಯನ ಮತ್ತು ಇತಿಹಾಸದ ಬದಲು ಪುರಾಣ ಕಂತೆಗಳನ್ನು ಪ್ರೋತ್ಸಾಹಿಸುವುದು ಈಗ ಸಾಮಾನ್ಯ ಸಂಗತಿಯಾಗುತ್ತಿದೆ. ಫೆಬ್ರುವರಿ 19ರಂದು ನವದೆಹಲಿಯಲ್ಲಿ  ಎಲ್ಲ ದರ್ಜೆಗಳ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಬೋಧಕೇತರ ನೌಕರರು ನಡೆಸಲಿರುವ ಐಕ್ಯ ಪ್ರತಿಭಟನಾ ಮೆರವಣಿಗೆಗೆ ಪೊಲಿಟ್‍ ಬ್ಯುರೊ ಬೆಂಬಲ ವ್ಯಕ್ತಪಡಿಸುತ್ತದೆ..

Leave a Reply

Your email address will not be published. Required fields are marked *