ಸಪ್ಟಂಬರ್ 20 ರಂದು ಎಡ ಪಕ್ಷಗಳ ರಾಷ್ಟ್ರೀಯ ಸಮಾವೇಶ

ಆಳಗೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಜನಗಳ ಮೇಲೆ ಹೆಚ್ಚುತ್ತಿರುವ ಸಂಕಟಗಳ ವಿರುದ್ಧ ಅಖಿಲ ಭಾರತ ಪ್ರತಿಭಟನಾ ಕಾರ್ಯಾಚರಣೆಗಳ ಯೋಜನೆ

ಐದು ಎಡಪಕ್ಷಗಳಾದ ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್) ಲಿಬರೇಷನ್, ಫಾರ್ವರ್ಡ್ ಬ್ಲಾಕ್‍ ಮತ್ತು ಆರ್ ಎಸ್‍ ಪಿ ಸಪ್ಟಂಬರ್ 20ರಂದು ನವದೆಹಲಿಯಲ್ಲಿ ಒಂದು ಜಂಟಿ ಸಮಾವೇಶವನ್ನು ಸಂಘಟಿಸುತ್ತಿವೆ. ಆಳಗೊಳ್ಳುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ಜನಗಳ ಮೇಲೆ ಹೆಚ್ಚೆಚ್ಚು ಪ್ರಮಾಣದಲ್ಲಿ ಹೇರಲಾಗುತ್ತಿರುವ ಸಂಕಟಗಳು, ಜತೆಗೆ ಒಂದು ಬೃಹತ್‍ ಪ್ರಮಾಣದ ಉದ್ಯೋಗನಷ್ಟದ ವಿರುದ್ಧ ರಾಷ್ಟ್ರೀಯ ಮಟ್ಟದ ಪ್ರತಿಭಟನಾ ಕಾರ್ಯಾಚರಣೆಗಳನ್ನು ಕನ್ಸ್ಟಿಟ್ಯೂಶನ್  ಕ್ಲಬ್‍ ಸಭಾಂಗಣದಲ್ಲಿ ನಡೆಯುವ  ಈ ಸಮಾವೇಶದಲ್ಲಿ ಯೋಜಿಸಲಾಗುವುದು ಎಂದು ಈ ಐದು ಎಡಪಕ್ಷಗಳು ಜಂಟಿ ಹೇಳಿಕೆಯಲ್ಲಿ ಪ್ರಕಟಿಸಿವೆ.

ಹಣಕಾಸು ಮಂತ್ರಿಗಳು ಇತ್ತೀಚೆಗೆ ಪ್ರಕಟಿಸಿರುವ 70,000 ಕೋಟಿ ರೂ. ಗಳ ಬೃಹತ್‍ ಮೊತ್ತದ ಹಲವು ಕ್ರಮಗಳು ಜನಗಳಿಗೆ ಪರಿಹಾರ ಕೊಡುವುದು ಒತ್ತಟ್ಟಿಗಿರಲಿ, ಅವು ಬಿಕ್ಕಟ್ಟನ್ನು ಇನ್ನಷ್ಟು ಆಳಗೊಳಿಸುತ್ತವೆ. ಈಗ ಮಾಡಬೇಕಾಗಿರುವುದು ನಮ್ಮ ಬಹು ಅಗತ್ಯವಾಗಿರುವ ಮೂಲರಚನೆಗಳ ಮೇಲೆ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸುವುದು, ಉದ್ಯೋಗಾವಕಾಶಗಳನ್ನು ನಿರ್ಮಿಸುತ್ತಲೇ ಜನಗಳ ಕೈಯಲ್ಲಿ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವುದು.

ಎಡಪಕ್ಷಗಳ   ಈ ರಾಷ್ಟ್ರೀಯ ಸಮಾವೇಶ ದೇಶಾದ್ಯಂತ ಪ್ರತಿಭಟನಾ ಕಾರ್ಯಾಚರಣೆಗಳಿಗೆ ಮೂರ್ತಯೋಜನೆಗಳನ್ನು ರೂಪಿಸುತ್ತದೆ ಎಂದಿರುವ ಎಡಪಕ್ಷಗಳು ಈ ಪ್ರತಿಭಟನಾ ಕಾರ್ಯಾಚರಣೆಗಳಲ್ಲಿ ಸೇರಿಕೊಳ್ಳಲು ಸಿದ್ಧವಿರುವ ಎಲ್ಲ ಪ್ರಜಾಪ್ರಭುತ್ವವಾದಿ ಶಕ್ತಿಗಳು ಮುಂದೆ ಬಂದು ಜನತಾ ಆಂದೋಲನವನ್ನು ಬಲಪಡಿಸಬೇಕು ಎಂದು ಮನವಿ ಮಾಡಿವೆ.

Leave a Reply

Your email address will not be published. Required fields are marked *