ಪರಿಶಿಷ್ಟ ಜಾತಿ/ಬುಡಕಟ್ಟು/ಒಬಿಸಿ ಮೀಸಲಾತಿಗಳು ದೇಶಾದ್ಯಂತ ಕಡ್ಡಾಯ

ಸುಪ್ರಿಂ ಕೋರ್ಟ್ ವ್ಯಾಖ್ಯಾನಕ್ಕೆ ಕಾರಣವಾದ ಲೋಪವನ್ನು ಕೂಡಲೇ ಸರಿಪಡಿಸಲು ಕೇಂದ್ರ ಸರಕಾರಕ್ಕೆ ಆಗ್ರಹ
ಸುಪ್ರಿಂ ಕೋರ್ಟಿನ ಇಬ್ಬರು ನ್ಯಾಯಾಧೀಶರ ಪೀಠsವೊಂದು ಕಲಮು ೧೬(೪) ಮತ್ತು ೧೬(೪-ಎ)ಅವಕಾಶ ಕಲ್ಪಿಸುವ ಅಂಶಗಳಷ್ಟೇ, ಮತ್ತು ಸರಕಾರೀ ಉದ್ಯೋಗಗಳು ಹಾಗೂ  ಬಡ್ತಿಗಳಲ್ಲಿ ಮೀಸಲಾತಿಯನ್ನು ಕೇಳುವ ಮೂಲಭೂತ ಹಕ್ಕು ಇಲ್ಲ ಎಂದು ವ್ಯಾಖ್ಯಾನ ನೀಡಿದೆ. ಈ ವ್ಯಾಖ್ಯಾನದಂತೆ ಅದು ಉತ್ತರಾಖಂಡ ಹೈಕೋರ್ಟ್ ಮೀಸಲಾತಿಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ನೀಡಿರುವ ಆಜ್ಞೆಯನ್ನು ರದ್ದು ಮಾಡಿದೆ.
ಮೀಸಲಾತಿಗಳು ಮತ್ತು ಬಡ್ತಿಗಳ ಅವಕಾಶ ಒಂದು ಮೂಲಭೂತ ಹಕ್ಕು ಆಗಿಲ್ಲದೇ ಇರಬಹುದು, ಆದರೆ ಇವು ಕಡ್ಡಾಯವಾಗಿರುವ ಸಂವಿಧಾನಿಕ ಅಂಶಗಳು, ಮತ್ತು ಭಾರತಾದ್ಯಂತ ಅನ್ವಯವಾಗತಕ್ಕಂತವು ಎಂದು ಈ ಸುಪ್ರಿಂ ಕೋರ್ಟ್ ವ್ಯಾಖ್ಯಾನದ ಬಗ್ಗೆ ಟಿಪ್ಪಣಿ ಮಾಡುತ್ತ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.
ಮುಂದುವರೆದು ಅದು ಸಂವಿಧಾನ ಕುರಿತ ಈ ವ್ಯಾಖ್ಯಾನ ದಲಿತ-ವಿರೋಧಿ, ಬುಡಕಟ್ಟು-ವಿರೋಧಿ ಮತ್ತು ಒಬಿಸಿ-ವಿರೋಧಿ ಎಂದು ತಾನು ಪರಿಗಣಿಸುವುದಾಗಿ ಹೇಳಿದೆ. ಇಂತಹ ಒಂದು ವ್ಯಾಖ್ಯಾನಕ್ಕೆ ಕಾರಣವಾಗಿರುವ ಲೋಪವನ್ನು ಸರಿಪಡಿಸಬೇಕಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಶಾಸಕೀಯ ನಿರ್ಣಯಗಳ ಮೂಲಕ ಸಂವಿಧಾನದಲ್ಲಿನ ಈ ಲೋಪವನ್ನು ಕೂಡಲೇ ಸರಿಪಡಿಸಬೇಕು ಎಂದು ಕೇಂದ್ರ ಸರಕಾರವನ್ನು ಪೊಲಿಟ್‌ ಬ್ಯುರೊ ಆಗ್ರಹಿಸಿದೆ.
ಮೀಸಲಾತಿಗಳು ಮತ್ತು ಬಡ್ತಿಗಳ ಅಂಶಗಳು ಭಾರತ ಒಕ್ಕೂಟದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಡ್ಡಾಯವಾಗಿವೆ ಎಂದು ತಾನು ಪರಿಗಣಿಸುವುದಾಗಿ ಸಿಪಿಐ(ಎಂ) ಪೊಲಿಟ್‌ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *