ಮನೋರಮ ಪತ್ರಿಕೆ ಸುಳ್ಳು ಸುದ್ದಿ ಹರಡಿಸುತ್ತಿದೆ

‘ಮಲಯಾಳ ಮನೋರಮ’ ಪತ್ರಿಕೆಯ ಎಪ್ರಿಲ್ ೨೦ರ ಮುಖಪುಟದ ಸ್ಟೋರಿಯಲ್ಲಿ ಸಿಪಿಐ(ಎಂ)ನ ಕೇಂದ್ರೀಯ ಮುಖಂಡತ್ವ ಸ್ಪ್ರಿಂಕ್ಲರ್ ಪ್ರಶ್ನೆ ಕುರಿತಂತೆ ಕೇರಳದ ಪಕ್ಷ ಕೊಟ್ಟಿರುವ ವಿವರಣೆಯನ್ನು ತಿರಸ್ಕರಿಸಿದೆ ಎಂದು ಹೇಳಲಾಗಿದೆ. ಇದು ಸುಳ್ಳು ಮತ್ತು ಆಧಾರಹೀನ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ. ಒಂದು ಹೆಸರಾಂತ ದೈನಿಕ ಸುಳ್ಳು ಸುದ್ದಿಯನ್ನು ಹರಡಿಸುತ್ತಿರುವುದು ದುರದೃಷ್ಟಕರ ಎಂದು ಅದು ಖೇದ ವ್ಯಕ್ತಪಡಿಸಿದೆ.

ಕೇರಳ ಎಲ್.ಡಿ.ಎಫ್. ಸರಕಾರ ಕೊವಿಡ್-೧೯ರ ವಿರುದ್ಧ ಹೋರಾಟದಲ್ಲಿ ಮಾದರಿಯಾಗಿರುವ ಪಾತ್ರವನ್ನು ವಹಿಸುತ್ತಿರುವಾಗ, ಜತೆಗೆ ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟಿರುವ ವಿಭಾಗಗಳಿಗೆ, ಅತಿಥಿ ಕಾರ್ಮಿಕರಿಗೂ, ಸುರಕ್ಷೆ ಮತ್ತು ನೆರವು ಒದಗಿಸುತ್ತಿರುವಾಗ, ಇಂತಹ ಒಂದು ಸುಳ್ಳು ಕತೆಯ ಉದ್ದೇಶ ಕೇರಳದ ಸರಕಾರ ಮತ್ತು ಜನತೆ ಈ ಮಹಾಮಾರಿಯ ವಿರುದ್ಧ ಹೋರಾಟದಲ್ಲಿ ಮಾಡಿರುವ ಅತ್ಯುತ್ತಮ ಕೆಲಸವನ್ನು ಹೀಗಳೆಯುವುದೇ ಆಗಿದೆ.

ಇಂತಹ ಸುಳ್ಳೇ ಸೃಷ್ಟಿಸಿದ ವರದಿಗಳಿಗೆ ಕೇರಳದ ಜನತೆ ಯಾವುದೇ ಗಮನ ಕೊಡುವುದಿಲ್ಲ ಎಂಬ ವಿಶ್ವಾಸವನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *