ವೈರಾಣು ನಿಯಂತ್ರಿಸುವ ಕಾರಣದಿಂದ ಲಾಕ್ ಡೌನ್ ವಿಸ್ಥರಣೆಯನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ

ದಿನಾಂಕ: 03.05.2020

ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರಕಾರ,
ವಿಧಾನಸೌಧ, ಬೆಂಗಳೂರು.

ಮಾನ್ಯರೇ,

ಕರೋನಾ ವೈರಾಣು ಸೋಂಕಿತರ ಸಂಖ್ಯೆಯು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರಾಜ್ಯವನ್ನು ಹಸಿರು,ಆರೆಂಜ್ ಹಾಗೂ ಕೆಂಪು ವಲಯಗಳಾಗಿ ಗುರುತಿಸಿ ಲಾಕ್ ಡೌನ್ ನ್ನು ಇನ್ನೂ ಹದಿನೈದು ದಿನಗಳಿಗೆ ವಿಸ್ಥರಿಸಿದ್ದೀರಿ. ಖಂಡಿತಾ, ವೈರಾಣು ನಿಯಂತ್ರಿಸುವ ಕಾರಣದಿಂದ ಲಾಕ್ ಡೌನ್ ವಿಸ್ಥರಣೆಯನ್ನು ಬೆಂಬಲಿಸುವುದು ಅನಿವಾರ್ಯವಾಗಿದೆ.

ಆದರೇ, ಸಿಪಿಐಎಂ ಪಕ್ಷ ವೈರಾಣು ನಿಯಂತ್ರಣಕ್ಕೆ ಮತ್ತಷ್ಠು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಪೂರ್ವ ಯೋಜನೆ ಇಲ್ಲದೇ ಲಾಕ್ ಡೌನ್ ಘೋಷಿಸಿದ್ದರ ಪರಿಣಾಮ ಎದುರಿಸಲು ಹಲವು ಆರ್ಥಿಕ ಕ್ರಮಗಳನ್ನು ಕೈಗೊಳ್ಳುವಂತೆ ಈಗಾಗಲೇ ಹಲವು ಪತ್ರಗಳನ್ನು ಬರೆದು ಒತ್ತಾಯಿಸಿದುದು ತಮ್ಮ ಗಮನಕ್ಕಿದೆಯೆಂದು ಸಿಪಿಐಎಂ ಭಾವಿಸಿದೆ.

ಆದರೇ, ವಾಸ್ತವದಲ್ಲಿ ತಾವು ಕೈಗೊಂಡ ಕ್ರಮಗಳು ಇಂತಹ ಸಂಕಷ್ಟಕರ ಸಮಯದಲ್ಲೂ ಅಸಮರ್ಪಕವಾಗಿವೆ ಮತ್ತು ಯೋಜನಾ ರಹಿತವಾಗಿರುವವೆಂದು ತಿಳಿಸಲೇ ಬೇಕಾಗಿದೆ. ಪರಿಣಾಮವಾಗಿ, ರಾಜ್ಯದ ಜನತೆ ಲಾಕ್ ಡೌನ್ ಅವಧಿಯ ವಿಸ್ಥರಣೆಯನ್ನು ಎದುರಿಸ ಬೇಕಾಗಿ ಬಂದಿದೆ. ಹಾಗೂ ಅದಾಗಲೇ ಆರ್ಥಿಕ ಸಂಕಷ್ಠವನ್ನು ಎದುರಿಸುತ್ತಿರುವ ರಾಜ್ಯ ಮತ್ತಷ್ಟು ಸಂಕಷ್ಠಕ್ಕೀಡಾಗು ವಂತಾಗಿದೆ.

ರಾಜ್ಯ ಸರಕಾರ ಕೇಂದ್ರ ಸರಕಾರದ ನೆರವಿನೊಂದಿಗೆ ಈಗಲೂ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದೇ ಹೋದರೇ, ಮುಂದೆಯೂ ಲಾಕ್ ಡೌನ್ ವಿಸ್ಥರಿಸ ಬೇಕಾದ ದುಸ್ಥಿತಿ ಮುಂದುವರೆಯ ಬಹುದಾಗಿದೆ ಮತ್ತು ರಾಜ್ಯ ಅತ್ಯಂತ ಕೆಟ್ಟ ಆರ್ಥಿಕ ಸಂಕಷ್ಠವನ್ನು ಎದುರಿಸ ಬೇಕಾಗುತ್ತದೆ.

ಈ ಹಿನ್ನೆಲೆಯಲ್ಲಿ ಮರಳಿ ಈ ಪತ್ರದ ಮೂಲಕ ತಮ್ಮ ಗಮನವನ್ನು ಸೆಳೆಯುತ್ತಿದ್ದೇವೆ.

ಮತ್ತು ಇದುವರೆಗೆ ತಾವು ಕೈಗೊಂಡ ಕ್ರಮಗಳು ಮತ್ತು ವೆಚ್ಚಗಳು ಹಾಗೂ ಕೇಂದ್ರ ಸರಕಾರದಿಂದ ಪಡೆದ ಸಹಾಯಗಳನ್ನು ಬಹಿರಂಗ ಪಡಿಸ ಬೇಕು.
ಅದೇ ರೀತಿ, ರಾಜ್ಯವನ್ನು ವೈರಾಣುವಿನ ಸಂಕಷ್ಠದಿAದ ಮತ್ತು ಆರ್ಥಿಕ ದುಸ್ಥಿತಿಯಿಂದ ಪಾರುಮಾಡಲು ಕೂಡಲೇ ಸಮಗ್ರ ಯೋಜನೆಯೊಂದನ್ನು ರೂಪಿಸಿ ಪ್ರಕಟಿಸಲು ಸಿಪಿಐಎಂ ರಾಜ್ಯ ಸಮಿತಿ ಒತ್ತಾಯಿಸುತ್ತದೆ.

1) ರಾಜ್ಯದ ಕೋವಿಡ್ – 19 ನ್ನು ಮತ್ತಷ್ಠು ಪರಿಣಾಮ ಕಾರಿಯಾಗಿ ನಿಯಂತ್ರಿಸಲು ರಾಜ್ಯದಾದ್ಯಂತ ವ್ಯಾಪಕವಾದ ಆರೋಗ್ಯ ತಪಾಸಣೆಗೆ ಕ್ರಮ ವಹಿಸಬೇಕು. ವೈದ್ಯರು, ಆರೋಗ್ಯ ಸಿಬ್ಬಂಧಿಗಳಿಗೆ ಅಗತ್ಯವಿರುವಷ್ಠು ಪಿಪಿಇ ಹಾಗೂ ಮತ್ತಿತರೆ ಸುರಕ್ಷತಾ ಕ್ರಮಗಳು ಲಭ್ಯವಿರುವಂತೆ ಕ್ರಮವಹಿಸಬೇಕು. ಕೋವಿಡ್ – 19 ರ ವಿರುದ್ದ ನೇರ ಹೋರಾಟದಲ್ಲಿ ತೊಡಗಿದ ಇವರಿಗೆ ರಿಸ್ಕ್ ವೇತನವನ್ನು ಹೆಚ್ಚಿಸಲು ಕ್ರಮವಹಿಸಬೇಕು.

2) ವಿವಿಧ ರಾಜ್ಯಗಳಿಂದ ರಾಜ್ಯಕ್ಕೆ ಆಗಮಿಸಿದ ಅತಿಥಿ ಕಾರ್ಮಿಕರು ಮತ್ತು ಆರೋಗ್ಯ ಸೌಲಭ್ಯ ಪಡೆಯಲು ಬಂದು ಲಾಕ್ ಡೌನ್ ಸಿಲುಕಿದ ನಾಗರೀಕ ಕುಟುಂಬಗಳನ್ನು ಈ ಕೂಡಲೇ ಅವರ ಸ್ವ ರಾಜ್ಯಗಳಿಗೆ ತೆರಳಲು ಕೇರಳ ಮಾದರಿಯಲ್ಲಿ ಸಾರಿಗೆ ಮತ್ತು ಪ್ರಯಾಣ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳೇ ಭರಿಸಬೇಕು. ಈಗ ಪಡೆಯಲಾಗುತ್ತಿರುವ ದುಬಾರಿ ಪ್ರಯಾಣ ವೆಚ್ಚವನ್ನು ತಕ್ಷಣವೇ ರದ್ದು ಪಡಿಸಬೇಕು. ಇದೇ ಮಾದರಿಯನ್ನು ರಾಜ್ಯ ದೊಳಗಿನ ವಿವಿಧ ಜಿಲ್ಲೆಗಳ (ವಲಸೆ) ಅತಿಥಿ ಕಾರ್ಮಿಕರು ಸ್ವ ಗ್ರಾಮಕ್ಕೆ ತೆರಳಲು ಅನಕೂಲ ಮಾಡಿಕೊಡಬೇಕು.

3) ರಾಜ್ಯದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಕಳೆದ ಲಾಕ್ ಡೌನ್ ಅವಧಿಯಲ್ಲಿ ವೇತನ ವಿಲ್ಲದ ಸಂಕಷ್ಠ ಅನುಭವಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಯಾವುದೇ ಉಪದೇಶಗಳನ್ನು ಮಾಲೀಕರು ಪಾಲಿಸುತ್ತಿಲ್ಲ. ಸದರಿ ವೇತನವನ್ನು ಸರಕಾರಗಳೇ ಭರಿಸಬೇಕು. ಇದೀಗ, ಲಾಕ್ ಡೌನ್ ನಿಂದ ರಿಯಾಯಿತಿ ಪಡೆದ ಕೈಗಾರಿಕೆಗಳ ಮಾಲೀಕವರ್ಗ ಮೇ, 04,2020 ರಿಂದ ಕಾರ್ಮಿಕರು ಹಾಜರಾಗದಿದ್ದರೇ ಗೈರು ಹಾಜರೆಂದು ಪರಿಗಣಿಸುವುದಾಗಿ ಬೆದರಿಸಿವೆ. ದೂರ ದೂರದ ಪ್ರದೇಶಗಳಿಂದ ಕಾರ್ಮಿಕರು ಕೈಗಾರಿಕಾ ಪ್ರದೇಶ ತಲುಪಲು ಅಗತ್ಯ ಸಾರಿಗೆ ವ್ಯವಸ್ಥೆ ಮಾಡಬೇಕಾಗಿದೆ.

ಲಕ್ಷಾಂತರ ಬೀಡಿ ಕಾರ್ಮಿಕರು ಉತ್ಪನ್ನಗಳು ವಿವಿಧ ರಾಜ್ಯಗಳ ಮಾರುಕಟ್ಟೆಗೆ ಅಗತ್ಯ ಅವಕಾಶ ದೊರೆಯದೇ ನಿರುದ್ಯೋಗಿಗಳಾಗಿದ್ದಾರೆ. ಈ ಕುರಿತು ಅಗತ್ಯ ಕ್ರಮ ವಹಿಸಬೇಕು.

4) ಕೃಷಿ ಹಾಗೂ ಕೈಗಾರಿಕೆಗಳು ಉತ್ಪಾದನೆಯಲ್ಲಿ ತೊಡಗಲು ಭಾಗಶಃ ಅವಕಾಶ ನೀಡಲಾಗಿದ್ದರೂ ಮತ್ತು 15 ದಿನಗಳ ಲಾಕ್ ಡೌನ್ ಮುಂದುವರಿಕೆ ಇರುವುದರಿಂದ ಬಹುತೇಕ ಬಡವರು, ದಿನದ ಆದಾಯದಲ್ಲೆ ಬದುಕುವವರು ಉದ್ಯೋಗಗಳಿಲ್ಲದ ಅವರ ಸಂಕಷ್ಠ ಮುಂದುವರೆದಿದೆ. ಮುಂದಿನ ಕನಿಷ್ಠ ಮೂರು ತಿಂಗಳ ಅವಧಿಗೆ ಇವರುಗಳಿಗೆ ನಿರುದ್ಯೋಗ ಭತ್ಯೆ ಮತ್ತು ಕೇರಳ ಸರಕಾರದ ಮಾದರಿಯಸಮಗ್ರ ಪಡಿತರ, ಆರೋಗ್ಯ ಸುರಕ್ಷತಾ ಕ್ರಮಗಳನ್ನು ಮನೆಮನೆಗೆ ತಲುಪಿಸಬೇಕು. ಮಾಸಿಕ 7,500 ರೂಗಳ ನೆರವು ನೀಡಬೇಕು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕಾರ್ಮಿಕರಿಗೆ ವಿತರಿಸುತ್ತಿರುವ ಕಾರ್ಮಿಕ ಇಲಾಖೆಯ ಸಿದ್ದ ಆಹಾರ ಫಲಾನುಭವಿಗಳಿಗೆ ಒಣ ಆಹಾರ ಹ್ಯಾಂಪರ್ಸಗಳನ್ನು ವಿತರಿಸಬೇಕು.

ಉದ್ಯೋಗ ಖಾತ್ರಿಯಲ್ಲಿ ತೊಡಗಲು ಅವಕಾಶ ನೀಡಲಾಗಿದೆಯಾದರೂ, ಅರ್ಜಿ ಹಾಕಿಕೊಂಡ ಎಲ್ಲರಿಗೂ ಉದ್ಯೋಗ ನೀಡಬೇಕು.

ರೈತರ ಕೃಷಿ ಉತ್ಪನ್ನಗಳ ಮಾರಾಟಕ್ಕೆ ತೀವ್ರ ಧಕ್ಕೆ ಉಂಟಾಗಿದೆ. ನಷ್ಠ ಹಾಗೂ ಸಾಲದ ಬಾಧೆಯಿಂದ ಕೆಲ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣ್ಣು, ಹೂ, ತರಕಾರಿ ಮತ್ತಿತರೆ ಬೆಳೆ ಬೆಳೆದು ನಷ್ಟ ಹೊಂದಿದ ರೈತರಿಗೆ ಪರಿಹಾರ ಘೋಷಿಸ ಬೇಕು ಮತ್ತು ಸ್ಪಷ್ಟವಾಗಿ ನಷ್ಠದ ಅಂದಾಜು ಮಾಡಲು ಗಣತಿಯನ್ನು ಕೈಗೊಳ್ಳ ಬೇಕು ಮಾರುಕಟ್ಟೆ ಸಮಸ್ಯೆ ಇರುವ ಬೆಳೆಗಳನ್ನು ರಾಜ್ಯ ಸರಕಾರದ ಖರೀದಿ ಏಜೆನ್ಷಿಗಳು ನೇರವಾಗಿ ಬೆಂಬಲ ಬೆಲೆಯಲ್ಲಿ ಖರೀದಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

5) ಕೇಂದ್ರ ಸರಕಾರದಿಂದ ಇದುವರೆಗೆ ಬರಬೇಕಾದ ಎಲ್ಲಾ ಅನುದಾನ ಬಾಕಿಗಳನ್ನು ತಕ್ಷಣ ಸಂಗ್ರಹಿಸಿಕೊಳ್ಳಲು ಕ್ರಮ ವಹಿಸಬೇಕು. ಕೋವಿಡ್ -19 ರ ಪರಿಹಾರ ನಿಧಿಯನ್ನು ಅಗತ್ಯನುಸಾರ ಹೆಚ್ಚಿಸಿ ರಾಜ್ಯಗಳಿಗೆ ನೀಡುವಂತೆ ಒತ್ತಾಯಿಸಿ ಪಡೆಯಬೇಕು.

ವಂದನೆಗಳೊಂದಿಗೆ,

ಯು. ಬಸವರಾಜ
ಕಾರ್ಯದರ್ಶಿಗಳು

Leave a Reply

Your email address will not be published. Required fields are marked *