ಪಠ್ಯಕ್ರಮ ಕುರಿತ ತರ್ಕಹೀನ ಸಿ.ಬಿ.ಎಸ್‍.ಇ. ನಿರ್ಧಾರವನ್ನು ರದ್ದುಪಡಿಸಬೇಕು

ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿ.ಬಿ.ಎಸ್‍.ಇ.) ತರಗತಿ 10ರಿಂದ 12 ರವರೆಗಿನ ಪಠ್ಯದಲ್ಲಿ ಪೌರತ್ವ , ರಾಷ್ಟ್ರೀಯವಾದ, ಜಾತ್ಯತೀತತೆ, ಒಕ್ಕೂಟತತ್ವ ಮತ್ತಿತರ ನಮ್ಮ ಸಂವಿಧಾನಿಕ ವ್ಯವಸ್ಥೆಯ ಮೂಲಾಧಾರವಾಗಿರುವುಂತವುಗಳನ್ನು ತೆಗೆದು ಹಾಕಿರುವುದಕ್ಕೆ ಸಿಪಿಐ(ಎಂ) ಪೊಲಿಟ್‍ ಬ್ಯುರೊ ತನ್ನ ಬಲವಾದ ಅಸಮ್ಮತಿಯನ್ನು ವ್ಯಕ್ತಪಡಿಸಿದೆ.

ಪ್ರಸಕ್ತ ಮಹಾಮಾರಿ ಮತ್ತು ಲಾಕ್‍ ಡೌನ್ ನಿರ್ಬಂಧಗಳನ್ನು ನೆಪ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ಪಠ್ಯಕ್ರಮವನ್ನು ಹಗುರಗೊಳಿಸುವ ಹೆಸರಲ್ಲಿ, ಸಿ.ಬಿ.ಎಸ್‍.ಇ. ಏಕಪಕ್ಷೀಯವಾಗಿ ಈ ಕ್ರಮವನ್ನು ಕೈಗೊಂಡಿದೆ.

ಈ ರೀತಿಯಲ್ಲಿ ಆಯ್ದ ಅಂಶಗಳನ್ನು ತೆಗೆದು ಹಾಕುವ ಮೂಲಕ ಸಂವಿಧಾನಿಕ ಮೌಲ್ಯಗಳನ್ನು ಶಿಥಿಲಗೊಳಿಸುವುದನ್ನು, ಭಾರತದ ಜಾತ್ಯತೀತ ಪ್ರಜಾಸತ್ತಾತ್ಮಕ ಭಾರತದ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದನ್ನು ಬಲವಾಗಿ ತಿರಸ್ಕರಿಸಿರುವ ಪೊಲಿಟ್‍ ಬ್ಯುರೊ, ಈ ಅಧ್ಯಾಯಗಳನ್ನು ಹೊರತುಪಡಿಸುವುದಕ್ಕೆ ಯಾವುದೇ ತರ್ಕವನ್ನು ಕೊಡಲು ಸಿ.ಬಿ.ಎಸ್‍.ಇ.ಗೆ ಸಾಧ್ಯವಾಗಿಲ್ಲ, ಇದು ಅನುಮಾನಾಸ್ಪದವಾಗಿದೆ ಎಂದಿದೆ.

ಸಿ.ಬಿ.ಎಸ್‍.ಇ.ಯ ಈ ನಿರ್ಧಾರವನ್ನು ರದ್ದು ಮಾಡಬೇಕು, ನಮ್ಮ ಸಂವಿಧಾನದ ಮೂಲಭೂತ ನೀತಿಗಳನ್ನು ಶಿಥಿಲಗೊಳಿಸುವ ಯಾವುದೇ ಪ್ರಯತ್ನ ಜನತೆಗೆ ಒಪ್ಪಿಗೆಯಿಲ್ಲ ಎಂದು ಹೇಳಿದೆ.

Leave a Reply

Your email address will not be published. Required fields are marked *