ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಿ

ಎಡ,ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಶಕ್ತಿಗಳ ವಿಜಯವನ್ನು ಖಾತ್ರಿಪಡಿಸಿ ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ

ಕೇರಳ, ಪಶ್ಚಿಮ ಬಂಗಾಲ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿಯ ವಿಧಾನಸಭೆಗಳಿಗೆ ಹಾಗ್ತೂ ತ್ರಿಪುರಾದಲ್ಲಿ ಸ್ವಾಯಂತ್ತ ಜಿಲ್ಲಾ ಮಂಡಳಿಗಳಿಗೆ ನಡೆಯಲಿರುವ ಚುನಾವಣೆಗಳಲ್ಲಿ ಎಡ,ಪ್ರಜಾಪ್ರಭುತ್ವವಾದಿ ಮತ್ತು ಜಾತ್ಯತೀತ ಶಕ್ತಿಗಳ ವಿಜಯವನ್ನು ಖಾತ್ರಿಪಡಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ದೇಶಾದ್ಯಂತ ಇಡೀ ಪಕ್ಷಕ್ಕೆ ಕರೆ ನೀಡಿದೆ. ಸಿಪಿಐ(ಎಂ) ಈ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುವುದರ ಮೇಲೆ ಪ್ರಧಾನವಾಗಿ ಗಮನ ಕೇಂದ್ರೀಕರಿಸುತ್ತದೆ, ಇದು ಸಂಬಂಧಪಟ್ಟ ರಾಜ್ಯಗಳಲ್ಲಿ ಜನತೆಯ ಕಲ್ಯಾಣಕ್ಕೆ ಮತ್ತು ಇಡೀ ಭಾರತದ ಐಕ್ಯತೆ ಮತ್ತು ಸಮಗ್ರತೆಗೆ ಅತ್ಯಗತ್ಯ ಎಂದು ಅದು ಹೇಳಿದೆ.

ಸಂಬಂಧಪಟ್ಟ ಪಕ್ಷದ ರಾಜ್ಯಸಮಿತಿಗಳು ಈಗಾಗಲೇ ಈ ಚುನಾವಣೆಗಳಿಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಗಳನ್ನು ಪ್ರಕಟಿಸಿವೆ.

ಐತಿಹಾಸಿಕ ರೈತ ಹೋರಾಟ

ಭಾರತೀಯ ರೈತಾಪಿಗಳ ಐತಿಹಾಸಿಕ ಹೋರಾಟಕ್ಕೆ ಸಿಪಿಐ(ಎಂ) ತನ್ನ ಬೆಂಬಲ ಮತ್ತು ಸೌಹಾರ್ದವನ್ನು ಮುಂದುವರೆಸುತ್ತದೆ ಎಂದಿರುವ ಪೊಲಿಟ್‌ ಬ್ಯುರೊ ವಿನಾಶಕಾರೀ ಕೃಷಿ ಕಾಯ್ದೆಗಳನ್ನು ತಕ್ಷಣವೇ ರದ್ದು ಮಾಡಬೇಕು ಎಂದು ಮೋದಿ ಸರಕಾರವನ್ನು ಆಗ್ರಹಿಸಿದೆ.

ಖಾಸಗೀಕರಣದ ವಿರುದ್ಧ ಹೋರಾಟಗಳು

ಮೋದಿ ಸರಕಾರ ಕೈಗೊಂಡಿರುವ ಸಾರ್ವಜನಿಕ ವಲಯದ ಸಾರಾ ಸಗಟು ಖಾಸಗೀಕರಣ ಮತ್ತು ರಾಷ್ಟೀಯ  ಆಸ್ತಿಗಳ ಲಂಗುಲಗಾಮಿಲ್ಲದ ಲೂಟಿಯ ವಿರುದ್ಧ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ನಡೆಸಿರುವ ಸಮರಗಳಿಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ತನ್ನ ಬೆಂಬಲ ಮತ್ತು ಸೌಹಾರ್ದವನ್ನು ವ್ಯಕ್ತಪಡಿಸಿದೆ.

ವಿಶಾಖಪಟ್ಟಣ ಉಕ್ಕು ಸ್ಥಾವರದ ಖಾಸಗೀಕರಣದ ವಿರುದ್ಧ ಆಂಧ್ರಪ್ರದೇಶದ ಜನರು ನಡೆಸುತ್ತಿರುವ ಹೋರಾಟಕ್ಕೂ ಅದು ಬೆಂಬಲವನ್ನು ವ್ಯಕ್ತಪಡಿಸಿದೆ.

ಮಾರ್ಚ್ 15 ಮತ್ತು 16ರಂದು ಬ್ಯಾಂಕುಗಳಲ್ಲಿ ಎಲ್ಲ ಸಂಘಗಳು ಮುಷ್ಕರದ ಕರೆ ನೀಡಿವೆ. ಸಾಮಾನ್ಯ ವಿಮಾಕ್ಷೇತ್ರದ ಸಂಘಗಳು ಮಾರ್ಚ್ 17ರಂದು, ಮತ್ತು ಎಲ್‌.ಐ.ಸಿ. ಯಲ್ಲಿನ ಸಂಘಗಳು ಮಾರ್ಚ್ 18ರಂದು ಮುಷ್ಕರಗಳಿಗೆ ಕರೆ ನೀಡಿವೆ. ಇವೆಲ್ಲವುಗಳಿಗೂ ಸಿಪಿಐ(ಎಂ) ಪೊಲಿಟ್‌ ಬ್ಯುರೊ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

ಸಂಸತ್ತಿಗೆ ಉತ್ತರದಾಯಿ ಆಗಲೊಲ್ಲದ ಬಿಜೆಪಿ ಸರಕಾರ

ಪೆಟ್ರೋಲಿಯಂ ಉತ್ಪನ್ನಗಳ ಸತತ ಬೆಲೆಯೇರಿಕೆ ಮುಂತಾದ ಜನಗಳ ಜ್ವಲಂತ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಕೇಂದ್ರದ ಬಿಜೆಪಿ ಸರಕಾರ ನಿರಾಕರಿಸುತ್ತಿದೆ ಎಂದು ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ಸಂಸತ್ತಿನಲ್ಲಿ ಇಂತಹ ಚರ್ಚೆಗಳನ್ನು ತಪ್ಪಿಸಲು ಸಂಸತ್ತಿನ ಅಧಿವೇಶನಗಳನ್ನು ಮಾರ್ಚ್ 15ರ ವರೆಗೆ ರದ್ದು ಮಾಡಲಾಗಿದೆ.

ಇದು ಭಾರತೀಯ ಸಂವಿಧಾನ ವಿಧಿಸಿರುವ, ಸಂಸತ್ತಿಗೆ ಸರಕಾರದ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವವನ್ನು ಕೈಬಿಟ್ಟಿರುವ ಅತ್ಯಂತ ಕೆಟ್ಟ ಉದಾಹರಣೆಯಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಕೇಂದ್ರ ಸರಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಎಲ್ಲ ಅಬಕಾರಿ ಸುಂPಕ ಏರಿಕೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *