ಯೆಚೂರಿ ಪುತ್ರ ನಿಧನ-ಪೊಲಿಟ್ ಬ್ಯುರೋ ಸಂತಾಪ

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಮತ್ತು ಇಂದ್ರಾಣಿ ಮಜುಂದಾರ್ ಅವರ ಪುತ್ರ , ಆಶೀಶ್ ಯೆಚೂರಿ ಇಂದು ಬೆಳಿಗ್ಗೆ ಕೋವಿಡ್ ಸಂಬಂಧಿ ತೀವ್ರ ಸಮಸ್ಯೆಗಳಿಂದಾಗಿ ನಿಧನರಾಗಿದ್ದಾರೆ. ಅವರ ವಯಸ್ಸು 35 ವರ್ಷ.

ಸಿಪಿಐ(ಎಂ) ಪೊಲಿಟ್ ಬ್ಯುರೋ  ಸೀತಾರಾಮ್ ಯೆಚೂರಿ, ಇಂದ್ರಾಣಿ ಮಜುಂದಾರ್, ಆಶೀಶ್ ಅವರ ಪತ್ನಿ ಸ್ವಾತಿ, ಸೋದರಿ ಅಖಿಲಾ ಮತ್ತು ದುಃಖ ಸಂತಪ್ತ ಕುಟುಂಬದ ಇತರ ಸದಸ್ಯರಿಗೆ ತನ್ನ ಆಳವಾದ ಸಂತಾಪಗಳನ್ನು ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *