ಜನ ವಿರೋಧಿ ಪಠ್ಯಪುಸ್ತಕ ಮರು ಪರಿಷ್ಕರಣೆ ಸಮಿತಿ-ಅದರ ಪಠ್ಯಕ್ರಮಗಳನ್ನು ರದ್ದುಪಡಿಸಿ

ನಾಡಿನ ಗಣ್ಯ ಸಾಹಿತಿಗಳು, ಪ್ರಗತಿಪರರು, ಸಂಘ ಸಂಸ್ಥೆಗಳು ರಾಜ್ಯದಾದ್ಯಂತ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದರೂ, ಕರ್ನಾಟಕ ಸರಕಾರ ನಾಚಿಕೆ ಇಲ್ಲದೇ ಪಠ್ಯಪುಸ್ತಕ ಮರು ಪರಿಷ್ಕರಣೆ ಸಮಿತಿಯನ್ನು ಮತ್ತು ಅದು ಮಾಡಿದ ಪರಿಷ್ಕರಣ ಪಠ್ಯ ಕ್ರಮಗಳನ್ನು ಕೈ ಬಿಡದೇ ಮುಂದುವರೆಸುತ್ತಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

ಈ ಕೂಡಲೆ ಪರಿಷ್ಕರಿಸಿದ ಪಠ್ಯ ಕ್ರಮಗಳನ್ನು, ಪಠ್ಯಪುಸ್ತಕ ಮರು ಪರಿಷ್ಕರಣೆ ಸಮಿತಿಯನ್ನು ರದ್ದುಪಡಿಸಬೇಕೆಂದು ಬಲವಾಗಿ ಒತ್ತಾಯಿಸುತ್ತೇವೆ.

ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ, ನಾಡಿನ ಗಣ್ಯ ಮಾನ್ಯರಾದ ಡಾ. ಕುವೆಂಪುರವರ ಕುರಿತಂತೆ ಮತ್ತು ಅವರ ಬರೆದಿರುವ ʻನಾಡಗೀತೆʼಯ ಕುರಿತಂತೆ ನಿಂದನೆ ಹಾಗೂ ಅಪಮಾನ ಮಾಡುವುದೆಂದರೆ ನಾಡಿಗೆ ಅಪಮಾನ ಮಾಡಿದಂತೆ. ಇಂತಹವರನ್ನು ಪಠ್ಯಪುಸ್ತಕ ಮರು ಪರಿಷ್ಕರಣೆ ಸಮಿತಿ ಅಧ್ಯಕ್ಷರನ್ನಾಗಿಸಿರುವುದು ಮತ್ತು ನಿಂದಿಸಿದವರ ಮೇಲೆ ಯಾವುದೇ ಕಾನೂನು ಕ್ರಮಗಳನ್ನು ತೆಗೆದುಕೊಳ್ಳದಿರುವುದು ರಾಜ್ಯದ ಬಿಜೆಪಿ ಪಕ್ಷದ ನಡೆಯು ಸಹ ಬೆಂಬಲ ವ್ಯಕ್ತಪಡಿಸಿರುವುದು ಪುಂಡಾಟಿಕೆಯನ್ನು ಸಮರ್ಥಿಸುವಂತಿವೆ.

ಇಂತಹ ನಡೆಗಳು ನಾಡಿನ ಗಣ್ಯರನ್ನು ದುರುದ್ದೇಶದಿಂದಲೇ ಅಪಮಾನ ಮಾಡಲಾಗಿದೆಯೆಂಬುದನ್ನು ತೋರುತ್ತದೆ ಎಂದು ಸಿಪಿಐ(ಎಂ) ತನ್ನ ತೀವ್ರ ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆ.

ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *