ಸೌಹಾರ್ದ – ಸಮೃದ್ಧ – ಜನತಾ ಕರ್ನಾಟಕ ನಿರ್ಮಾಣಕ್ಕಾಗಿ ಸೆ.18ಕ್ಕೆ ಸಿಪಿಐ(ಎಂ) ರಾಜಕೀಯ ಸಮಾವೇಶ

ಸೌಹಾರ್ದ, ಸಮೃದ್ಧ, ಜನತಾ ಕರ್ನಾಟಕ ನಿರ್ಮಾಣಕ್ಕಾಗಿ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ವತಿಯಿಂದ ರಾಜ್ಯ ಮಟ್ಟದ ಬೃಹತ್ ರಾಜಕೀಯ ಸಮಾವೇಶವು ಸೆಪ್ಟಂಬರ್‌ 18(ಭಾನುವಾರ) ಹಮ್ಮಿಕೊಳ್ಳಲಾಗಿದೆ.

cpim samavesha1ಸಮಾವೇಶವು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ‌ ಕೆಹೆಚ್‌ಬಿ ಲೇಔಟ್‌ (ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ರಸ್ತೆ) ನಲ್ಲಿ ನಡೆಯಲಿದೆ. ಇದನ್ನು ಮುಂಚಿತವಾಗಿ ಬೆಳಿಗ್ಗೆ 11.00ಗಂಟೆಗೆ ನ್ಯಾಷನಲ್‌ ಕಾಲೇಜು ಮುಂಭಾಗದಿಂದ ಬೃಹತ್‌ ಮೆರವಣಿಗೆ ನಡೆಯಲಿದೆ.

ಸಮಾವೇಶಕ್ಕೆ ಸಿಪಿಐ(ಎಂ) ಪೊಲಿಟ್‌ ಬ್ಯೂರೋ ಸದಸ್ಯರು ಹಾಗೂ ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಿಪಿಐ(ಎಂ) ಪೊಲಿಟ್‌ ಬ್ಯೂರೋ ಸದಸ್ಯರಾದ ಎಂ.ಎ. ಬೇಬಿ ಹಾಗೂ ಬಿ.ವಿ. ರಾಘವಲು, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಭಾಗವಹಿಸಿ ಮಾತನಾಡಲಿದ್ದಾರೆ.

ರಾಜಕೀಯ ಸಮಾವೇಶದ ಭಾಗವಾಗಿ ಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಚಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕೆಂಪು ಕಾರ್ಯಕರ್ತರ ಪಡೆ, ವೇದಿಕೆ ನಿರ್ಮಾಣಕ್ಕೆ ಸಂಬಂಧಿಸಿದ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸಿಪಿಐ(ಎಂ) ಮುಖಂಡರು ತಮ್ಮ ತಮ್ಮ ಜವಾಬ್ದಾರಿ ಕೆಲಸಗಳನ್ನು ಕೈಗೊಂಡಿದ್ದಾರೆ. ಈಗಾಗಲೇ ಪ್ರಚಾರದ ಭಾಗವಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ಬಗ್ಗೆ, ರಾಜಕೀಯ ಆಡಳಿತಶಾಹಿಗಳ ಜನ ವಿರೋಧಿ ನೀತಿಗಳು ಹಾಗೂ ಜನ ಸಂಕಷ್ಟಗಳ ಪರಿಹಾರಕ್ಕಾಗಿನ ಜನ ಚಳುವಳಿ ಸಂಘಟಿಸುವ ಕುರಿತು ಅಭಿಯಾನವನ್ನು ನಡೆಸಲಾಗಿದೆ. ಇದರೊಂದಿಗೆ, ಸಾಂಸ್ಕೃತಿಕ ಕಲಾತಂಡದ ಮೂಲಕ ಜಾಗೃತಿಯನ್ನು ಮೂಡಿಸಲಾಗಿದೆ.

ಜನರ ನಡುವೆ ರಾಜಕೀಯ ಸಮಾವೇಶದ ವಿಚಾರಗಳನ್ನು ತಿಳಿಸುವುದರೊಂದಿಗೆ, ಜನರ ನಡುವೆ ದೇಣಿಗೆ ಸಂಗ್ರಹಿಸುವ ಮೂಲಕ ಸಮಾವೇಶ ಯಶಸ್ಸಿಗೆ ಸಿಪಿಐ(ಎಂ) ಪಕ್ಷದ ಜಿಲ್ಲಾ, ತಾಲ್ಲೂಕು ಸಮಿತಿಗಳ ಸದಸ್ಯರು, ಮುಖಂಡರು ಒಟ್ಟಾಗಿ ಶ್ರಮಸಿದ್ದಾರೆ.

ರಾಜಕೀಯ ಸಮಾವೇಶ ಸಿದ್ದತಾ ಸಮಿತಿಯ ಸಂಚಾಲಕ ಡಾ.ಅನಿಲ್‍ಕುಮಾರ್, ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ, ತಾಲ್ಲೂಕು ಕಾರ್ಯದರ್ಶಿ ಮಹಮದ್ ಅಕ್ರಂ, ಮುಖಂಡ ಎಚ್.ಪಿ.ಲಕ್ಷ್ಮಿನಾರಾಯಣ, ಭಾಸ್ಕರರೆಡ್ಡಿ, ಬಿ.ಎಚ್.ಆರೀಫ್, ಎನ್.ಎಸ್.ಚಲಪತಿ, ಹೇಮಚಂದ್ರ, ಒಬಳರಾಜು, ಸಿಪಿಎಂನ ಜಿಲ್ಲಾ ಸಮಿತಿ ಸದಸ್ಯ ಪಿ.ಮಂಜುನಾಥ ರೆಡ್ಡಿ, ಎಂ.ಎನ್.ರಘುರಾಮ ರೆಡ್ಡಿ, ಹೇಮಚಂದ್ರ, ಬಿಳ್ಳೂರುನಾಗರಾಜ್, ಶ್ರೀರಾಮನಾಯಕ್, ಎ.ಎನ್.ಶ್ರೀರಾಮಪ್ಪ, ನಗರ ಸಮಿತಿ ಕಾರ್ಯದರ್ಶಿ ಅಶ್ವಥ್ಥನಾರಾಯಣ, ಬಿ.ಎಚ್.ಆರೀಫ್, ದೇವಿಕುಂಟೆಶ್ರೀನಿವಾಸ್, ಆಚೇಪಲ್ಲಿಮದ್ದಿರೆಡ್ಡಿ, ಜಿ.ಕೃಷ್ಣಪ್ಪ, ವೆಂಕಟೇಶಬಾಬು, ಬಿ.ಸಾವಿತ್ರಮ್ಮ ಸೇರಿದಂತೆ ಹಲವರು ಭಾಗಿಯಾಗಿ ಸಮಾವೇಶದ ಯಶಸ್ಸಿಗೆ ತಮಗೆ ನೀಡಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ತೊಡಗಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *