ಪ್ರತಿಪಕ್ಷ-ಮುಕ್ತ ತ್ರಿಪುರಾಕ್ಕೆ ಬಿಜೆಪಿ ದಬ್ಬಾಳಿಕೆ

ಪ್ರಕಾಶ್ ಕಾರಟ್‌

ಪ್ರಕಾಶ್ ಕಾರಟ್‌
ಪ್ರಕಾಶ್ ಕಾರಟ್‌

ಚುನಾವಣೆಯಲ್ಲಿ ಗೆದ್ದ ನಂತರವೂ ಪ್ರತಿಪಕ್ಷಗಳ ಮೇಲೆ ಈ ರೀತಿಯ ವ್ಯಾಪಕ ಹಾಗೂ ತೀವ್ರ ದಾಳಿ ಏಕೆ ನಡೆಯುತ್ತಿದೆ ಎಂದು ತ್ರಿಪುರಾದ ಹೊರಗಿನ ಜನರು ಕೇಳಬಹುದು. ವರ್ಗ ಪ್ರಶ್ನೆ ಬರುವುದು ಇಲ್ಲೇ. ಪಶ್ಚಿಮ ಬಂಗಾಳದಂತೆ ತ್ರಿಪುರಾದಲ್ಲಿ ಕಮ್ಯೂನಿಸ್ಟ್ ಚಳವಳಿಯನ್ನು ಹಲವು ದಶಕಗಳ ವರ್ಗ ಹೋರಾಟ ಮತ್ತು ಸಾಮೂಹಿಕ ಆಂದೋಲನಗಳಿಂದ ಕಟ್ಟಲಾಗಿದೆ. ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಸಂಘಟನೆಯನ್ನು ನಾಶ ಮಾಡುವುದು ಹಾಗೂ ಅದರ ಸಾಮೂಹಿಕ ನೆಲೆಯನ್ನು ಹಾಳುಗೆಡಹುವುದು ತ್ರಿಪುರಾದಲ್ಲಿ ನಾವು ನೋಡುತ್ತಿರುವ ದಬ್ಬಾಳಿಕೆಯ ಗುರಿಯಾಗಿದೆ. ಚುನಾವಣೆಗೆ ಮುಂಚೆಯೇ ಆಗಲಿ ನಂತರವೇ ಆಗಲಿ, ಕಮ್ಯೂನಿಸ್ಟ್ ಮತ್ತು ಎಡ ಚಳವಳಿ ಮೇಲಿನ ವರ್ಗ ದಾಳಿ ಮುಂದುವರಿಯುತ್ತದೆ. ಕಮ್ಯೂನಿಸ್ಟ್ ಚಳವಳಿಯನ್ನೇ ನಿರ್ನಾಮ ಮಾಡುವುದೇ ಇದರ ಉದ್ದೇಶವಾಗಿದೆ.

ತ್ರಿಪುರಾ ವಿಧಾನಸಭೆಗೆ ನಡೆದ ಚುನಾವಣೆಗಳ ಫಲಿತಾಂಶ ಮಾರ್ಚ್ 2ರಂದು ಪ್ರಕಟವಾದ ನಂತರ ಅಲ್ಲಿ ನಡೆಸಲಾಗುತ್ತಿರುವ ಹಿಂಸಾಚಾರದ ದಳ್ಳುರಿಯು ಒಂದು ವೇಳೆ ಬಿಜೆಪಿ ಬಹುಮತ ಗಳಿಸಿದರೆ ಏನು ನಡೆಯಬಹುದೆಂದು ನಿರೀಕ್ಷಿಸಲಾದ ಭವಿಷ್ಯದ ಪ್ರಕಾರವೇ ಇದೆ. ಏನಿದ್ದರೂ ಅದು ಕಡಿಮೆ ಅಂತರದಲ್ಲಿ ಬಹುಮತ ಗಳಿಸಿದೆ. ಮಾರ್ಚ್ 6ರ ವರೆಗಿನ ಲಭ್ಯ ಮಾಹಿತಿ ಪ್ರಕಾರ ಬಿಜೆಪಿ ಗುಂಪುಗಳು ರಾಜ್ಯದಾದ್ಯಂತ  ಸುಮಾರು ಒಂದು ಸಾವಿರ ಆಕ್ರಮಣ-ಹಲ್ಲೆಗಳನ್ನು ನಡೆಸಿದೆ. ಇದು ಸಿಪಿಐ(ಎಂ), ಎಡರಂಗ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲಿನ ದೈಹಿಕ ದಾಳಿ, ಅವರ ಮನೆಗಳ ದಾಂಧಲೆ ಮತ್ತು ಸುಡುವುದು ಹಾಗೂ ಪಕ್ಷದ ಕಚೇರಿಗಳನ್ನು ನಾಶ ಮಾಡುವ ಸ್ವರೂಪದಲ್ಲಿದೆ. ರಬ್ಬರ್ ಪ್ಲಾಂಟೇಶನ್‌ಗಳನ್ನು, ಬೆಳೆಗಳನ್ನು ಸುಡುವುದು ಮತ್ತು ಇ-ರಿಕ್ಷಾಗಳನ್ನು ಹಾಗೂ ಇತರ ವಾಹನಗಳನ್ನು ಸುಟ್ಟು ಅವುಗಳನ್ನು ಓಡಿಸಲು ಆಗದಂತೆ ಮಾಡಿ ಜನರ ಜೀವನೋಪಾಯವನ್ನು ಕಸಿಯುವಂತೆ ಮಾಡುವುದು ಈ ಹಾನಿಕಾರಕ ಹಿಂಸಾಚಾರದ ಉದ್ದೇಶವಾಗಿದೆ.

2018 ಮಾರ್ಚ್‌ನಲ್ಲಿ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರ ನಡೆದ ರೀತಿಯಲ್ಲೇ ಈ ಬಾರಿಯೂ ಹಿಂಸಾಚಾರವನ್ನು ಹರಿಬಿಡಲಾಗಿದೆ. ಅದು ಆಡಳಿತ ನಡೆಸಿದ ಐದು ವರ್ಷದುದ್ದಕ್ಕೂ ಆಳುವ ಪಕ್ಷದ ದಬ್ಬಾಳಿಕೆ ಮುಂದುವರಿದಿತ್ತು. ಬಲವಂತದಿಂದ ಹಣ ಕಸಿದುಕೊಳ್ಳುವುದು ಹಾಗೂ ಕಾರ್ಯಕರ್ತರ ಕುಟುಂಬಗಳಿಗೆ ಬೆದರಿಕೆ ಹಾಕುವುದು ಅದರಲ್ಲಿ ಸೇರಿವೆ. ಈ ಅವಧಿಯಲ್ಲಿ ಸಿಪಿಐ(ಎಂ)ನ 25 ಸದಸ್ಯರು ಮತ್ತು ಬೆಂಬಲಿಗರ ಕೊಲೆಯಾಗಿದೆ. ಈ ಬಾರಿ ಬಿಜೆಪಿ ಗಳಿಸಿದ ಸ್ಥಾನಗಳು ಮತ್ತು ಮತಗಳಿಕೆಯಲ್ಲಿ ಗಣನೀಯ ಇಳಿಕೆಯಾಗಿದೆ. ಇದರಿಂದ ಹುಟ್ಟಿದ ಸಿಟ್ಟು ಹಾಗೂ ಹತಾಶೆಯಿಂದ ವ್ಯಾಪಕ ತೀವ್ರ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಕಾಣುತ್ತಿದೆ. ಎಲ್ಲಾ ದಮನಕಾರಿ ಪ್ರಯತ್ನಗಳ ಹೊರತಾಗಿಯೂ ಪ್ರತಿಪಕ್ಷ, ಎಡ-ಕಾಂಗ್ರೆಸ್ ಕೂಟ ಶೇಕಡ 35ರಷ್ಟು ಮತಗಳನ್ನು ಪಡೆದಿರುವುದು ಗಮನಾರ್ಹ.

tripura march 2023

ಚುನಾವಣೆಯಲ್ಲಿ ಗೆದ್ದ ನಂತರವೂ ಪ್ರತಿಪಕ್ಷಗಳ ಮೇಲೆ ಈ ರೀತಿಯ ವ್ಯಾಪಕ ಹಾಗೂ ತೀವ್ರ ದಾಳಿ ಏಕೆ ನಡೆಯುತ್ತಿದೆ ಎಂದು ತ್ರಿಪುರಾದ ಹೊರಗಿನ ಜನರು ಕೇಳಬಹುದು. ವರ್ಗ ಪ್ರಶ್ನೆ ಬರುವುದು ಇಲ್ಲೇ. ಪಶ್ಚಿಮ ಬಂಗಾಳದಂತೆ ತ್ರಿಪುರಾದಲ್ಲಿ ಕಮ್ಯೂನಿಸ್ಟ್ ಚಳವಳಿಯನ್ನು ಹಲವು ದಶಕಗಳ ವರ್ಗ ಹೋರಾಟ ಮತ್ತು ಸಾಮೂಹಿಕ ಆಂದೋಲನಗಳಿಂದ ಕಟ್ಟಲಾಗಿದೆ. ಸಿಪಿಐ(ಎಂ) ಸಂಘಟನೆಯನ್ನು ನಾಶ ಮಾಡುವುದು ಹಾಗೂ ಅದರ ಸಾಮೂಹಿಕ ನೆಲೆಯನ್ನು ಹಾಳುಗೆಡಹುವುದು ತ್ರಿಪುರಾದಲ್ಲಿ ನಾವು ನೋಡುತ್ತಿರುವ ದಬ್ಬಾಳಿಕೆಯ ಗುರಿಯಾಗಿದೆ. ಚುನಾವಣೆಗೆ ಮುಂಚೆಯೇ ಆಗಲಿ ನಂತರವೇ ಆಗಲಿ, ಕಮ್ಯೂನಿಸ್ಟ್ ಮತ್ತು ಎಡ ಚಳವಳಿ ಮೇಲಿನ ವರ್ಗ ದಾಳಿ ಮುಂದುವರಿಯುತ್ತದೆ. ಕಮ್ಯೂನಿಸ್ಟ್ ಚಳವಳಿಯನ್ನೇ ನಿರ್ನಾಮ ಮಾಡುವುದೇ ಇದರ ಉದ್ದೇಶವಾಗಿದೆ.

ಮಾರ್ಚ್ 8 ರಂದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮಾಣಿಕ್ ಸಹಾ ಈ ಆಕ್ರಮಣಗಳಿಗೆ ಪ್ರತಿಕ್ರಿಯಿಸಿದ ರೀತಿಯಿಂದಲೇ ಈ ಹಿಂಸಾಚಾರದ ಹಿಂದೆ ಆಳುವ ಬಿಜೆಪಿ ಇದೆ ಎನ್ನುವುದು ಸಾಬೀತಾಗುತ್ತದೆ.  ʻಪ್ರತಿಪಕ್ಷಗಳ ಬೆಂಬಲಿಗರು ಮತ್ತು ಜನರು ಸ್ಥಾಪಿತ ಹಿತಾಸಕ್ತರೊಂದಿಗೆ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆʼ ಎಂದು ಕೆಲವು ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ ಸಹಾ ಹೇಳಿದ್ದಾರೆ. ಅಂದರೆ, ಬಿಜೆಪಿಗೆ ಕೆಟ್ಟ ಹೆಸರು ತರಲು ಸಿಪಿಐ(ಎಂ) ಮತ್ತು ಇತರ ಪ್ರತಿಪಕ್ಷ ಕಾರ್ಯಕರ್ತರು ಸ್ವತಃ ತಮ್ಮ ಮನೆಗಳು, ಅಂಗಡಿಗಳು ಮತ್ತು ಕಚೇರಿಗಳಿಗೆ ಬೆಂಕಿ ಹಾಕಿಕೊಳ್ಳುತ್ತಿದ್ದಾರೆ!

2018ಕ್ಕೂ ಮುಂಚೆ ಅಧಿಕಾರದಲ್ಲಿದ್ದಾಗ ಸಿಪಿಐ(ಎಂ) ಮತ್ತು ಎಡರಂಗ ಪ್ರತಿಪಕ್ಷಗಳನ್ನು ದಮನಿಸುತ್ತಿತ್ತು ಎಂದು ಆರೋಪಿಸುವುದು ಇನ್ನೊಂದು ತಂತ್ರವಾಗಿದೆ. ಈ ಸುಳ್ಳು ಹರಡುವಲ್ಲಿ ಸ್ವತಃ ಪ್ರಧಾನಿ ಮೋದಿಯವರದೇ ದೊಡ್ಡ ಪಾಲಿದೆ. ತ್ರಿಪುರಾದಲ್ಲಿ ಚುನಾವಣಾ ರ‍್ಯಾಲಿಗಳಲ್ಲಿ ಮಾತನಾಡುವ ವೇಳೆ ಮೋದಿ ಇದೇ ರೀತಿಯ ಮಾತುಗಳನ್ನು ಆಡಿದ್ದರು. ಮಾರ್ಚ್ 2ರ ಸಂಜೆ ದೆಹಲಿಯಲ್ಲಿ ಬಿಜೆಪಿ ಕೇಂದ್ರ ಕಾರ್ಯಾಲಯದಲ್ಲಿ ತ್ರಿಪುರಾ ವಿಜಯೋತ್ಸವದ ಆಚರಣೆ ವೇಳೆ ಕೂಡ ಅದೇ ಸುಳ್ಳಿನ ಕಂತೆ ಪುರಾಣಗಳನ್ನು ಮೋದಿ ಪುನರಾವರ್ತಿಸಿದ್ದಾರೆ. ಹಿಂದೆ ಅಗರ್ತಲಾ ಮತ್ತು ತ್ರಿಪುರಾದ ಇತರ ಭಾಗಗಳಲ್ಲಿ ಒಂದು ಪಕ್ಷದ ಬಾವುಟಗಳನ್ನು ಮಾತ್ರವೇ ಹಾರಲು ಬಿಡಲಾಗುತ್ತಿತ್ತು. ಬೇರೆ ಯಾವುದೇ ಪಕ್ಷದ ಧ್ವಜ ಹಾರಿಸಲು ಪ್ರಯತ್ನಿಸಿದರೆ ಹಿಂಸಾಚಾರ ನಡೆಸಲಾಗುತ್ತಿತ್ತು ಎಂದು ಮೋದಿ ಪದೇ ಪದೇ ಹೇಳಿದರು. ಒಂದು ಆಳುವ ಪಕ್ಷವಾಗಿ ಸಿಪಿಐ(ಎಂ)ನ ಸರ್ವಾಧಿಕಾರದ ಬಗ್ಗೆ ಮಾತನಾಡುವುದು ವಾಸ್ತವದ ಮುಖಕ್ಕೆ ಹೊಡೆಯುವಂತಿದೆ.

ಉದಾಹರಣೆಗೆ, 2018ರಲ್ಲಿ ಎಡರಂಗದ ಅಧಿಕಾರವಿದ್ದಾಗ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ರಾಜ್ಯದಾದ್ಯಂತ ಬಿಜೆಪಿ ಧ್ವಜಗಳು, ಬ್ಯಾನರ್‌ಗಳು ಮತ್ತು ಫಲಕಗಳು ರಾರಾಜಿಸಿದ್ದು ಅನೇಕ ವೀಕ್ಷಕರ ಹುಬ್ಬು ಮೇಲೆರುವಂತೆ ಮಾಡಿತ್ತು. ಯಾಕೆಂದರೆ ಬಿಜೆಪಿ ರಾಜ್ಯದಲ್ಲಿ ಯಾವತ್ತೂ ಬಲಿಷ್ಠ ಪಕ್ಷ ಆಗಿರಲಿಲ್ಲ. ಅದಕ್ಕೂ ಮುಂಚೆ, ರಾಜ್ಯದಲ್ಲಿ ಕಾಂಗ್ರೆಸ್ ಪ್ರಮುಖ ಪ್ರತಿಪಕ್ಷವಾಗಿದ್ದಾಗ ಕಾಂಗ್ರೆಸ್ ಧ್ವಜಗಳು ರಾಜಧಾನಿ ಅಗರ್ತಲಾ ಸುತ್ತಮುತ್ತ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದವು. ಬಿಜೆಪಿ ಆಡಳಿತಾವಧಿಯಲ್ಲಿ 2021ರ ನವೆಂಬರ್‌ನಲ್ಲಿ ನಡೆದ ಅಗರ್ತಲಾ ಮುನಿಸಿಪಲ್ ಚುನಾವಣೆಗಳಲ್ಲಿ ಬಿಜೆಪಿ 51ರಲ್ಲಿ ಎಲ್ಲಾ 51 ಸ್ಥಾನಗಳನ್ನು ಗೆದ್ದಿತ್ತು. ಅದು ರಿಗ್ಗಿಂಗ್ ಮಾಡಿ ಪಡೆದ ಜಯವಾಗಿತ್ತು. ಆದರೆ, ಎಡರಂಗ ಅಧಿಕಾರದಲ್ಲಿದ್ದಾಗ ನಡೆದ ಮುನಿಸಿಪಲ್ ಚುನಾವಣೆಗಳಲ್ಲಿ ಹೀಗೆ ಆಗಿರಲಿಲ್ಲ. 1995ರ ಚುನಾವಣೆಗಳಲ್ಲಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಬಹುಮತ ಪಡೆದಿತ್ತು. ನಂತರ ಕೂಡ ಮಹಾನಗರಪಾಲಿಕೆಯಲ್ಲಿ ಕಾಂಗ್ರೆಸ್ ಗಣನೀಯ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವುದು ಮುಂದುವರಿಯಿತು. ಅಲ್ಲದೆ ಸತತ ವಿಧಾನಸಭಾ ಚುನಾವಣೆಗಳಲ್ಲಿ ಅದು ಶೇಕಡ 40ಕ್ಕೂ ಅಧಿಕ ಮತಗಳನ್ನು ಪಡೆದಿತ್ತು.

Tripura Election result

ಕಳೆದ ಐದು ವರ್ಷಗಳ ಬಿಜೆಪಿ ಆಡಳಿತದಲ್ಲಿ ಪ್ರತಿಪಕ್ಷಗಳ ಹಕ್ಕುಗಳನ್ನು ಸ್ಪಷ್ಟವಾಗಿ ನಿರಾಕರಿಸಲಾಗಿದೆ ಹಾಗೂ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕ್ರೂರವಾಗಿ ದಮನಿಸಲಾಗಿದೆ. ರಾಜ್ಯದ 16 ಸಿಪಿಐ(ಎಂ) ಶಾಸಕರ ಪೈಕಿ ಯಾರೊಬ್ಬರಿಗೂ ಚುನಾಯಿತ ಪ್ರತಿನಿಧಿಯಾಗಿ ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳನ್ನು ನಡೆಸಲು ಈ ಐದು ವರ್ಷಗಳಲ್ಲಿ ತಮ್ಮ ಕ್ಷೇತ್ರಗಳಲ್ಲಿ ಮುಕ್ತವಾಗಿ ಓಡಾಡಲು ಸಾಧ್ಯವಿರಲಿಲ್ಲ ಎನ್ನುವುದರಿಂದ ತ್ರಿಪುರಾದಲ್ಲಿ ಅಧಿಕಾರಶಾಹಿ-ಫ್ಯಾಸಿಸ್ಟ್ ವ್ಯವಸ್ಥೆಯ ಸ್ವರೂಪ ಹೇಗಿದೆ ಎನ್ನುವುದನ್ನು ಯಾರಾದರೂ ಅಂದಾಜು ಮಾಡಬಹುದಾಗಿದೆ. ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ಮುಖಂಡ ಮಾಣಿಕ್ ಸರ್ಕಾರ್ ಕೂಡ ಅವರಲ್ಲಿ ಒಳಗೊಂಡಿದ್ದಾರೆ. 2021ರ ಸೆಪ್ಟೆಂಬರ್‌ನಲ್ಲಿ ತಮ್ಮ ಕ್ಷೇತ್ರದಲ್ಲಿ ಬ್ಲಾಕ್ ಮಟ್ಟದ ಸಾಮೂಹಿಕ ಮನವಿ ಅರ್ಪಣೆ  ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಣಿಕ್ ಸರ್ಕಾರ್  ಅವಕಾಶ ಕೋರಿದ್ದಕ್ಕೆ ಪ್ರತಿಯಾಗಿ, ಬಿಜೆಪಿ ಗೂಂಡಾಗಳು ರಾಜ್ಯದಾದ್ಯಂತ ಸಿಪಿಐ(ಎಂ) ಕಚೇರಿಗಳು ಮತ್ತು ಪಕ್ಷದ ಸದಸ್ಯರ ಮನೆಗಳ ಮೇಲೆ ಆಕ್ರಮಣ ನಡೆಸಿದ್ದರು. ಸಿಪಿಐ(ಎಂ) ಪಕ್ಷದ ರಾಜ್ಯ ಕಚೇರಿ ಮೇಲೆ ಕೂಡ ದಾಳಿ ನಡೆದಿತ್ತು.

ಸತತ ಐದು ವರ್ಷ ಕಾಲ ದಬ್ಬಾಳಿಕೆ ಮತ್ತು ದಮನಕಾರಿ ಆಡಳಿತದ ಮೂಲಕ ಪಕ್ಷವನ್ನು ಮತ್ತು ಎಡರಂಗ ಸಂಘಟನೆಯನ್ನು ದುರ್ಬಲಗೊಳಿಸಲು ತಾವು ಸಮರ್ಥರಾದೆವು ಎಂಬ ವಾಸ್ತವಾಂಶವೇ ಪ್ರಸಕ್ತ ಚುನಾವಣೆಯಲ್ಲಿ ದುರ್ಬಲ ಸಾಧನೆಗೆ ಕಾರಣ ಎಂಬುದು ಬಿಜೆಪಿ-ಆರ್‌ಎಸ್‌ಎಸ್ ಕೂಟಕ್ಕೆ ಚೆನ್ನಾಗಿ ಗೊತ್ತಿದೆ.  ದೀರ್ಘ ಕಾಲದ ದಬ್ಬಾಳಿಕೆಯ ಹೊರತಾಗಿಯೂ ಎಡರಂಗ ಕಾರ್ಯಕರ್ತರು ಚೇತರಿಸಿಕೊಂಡು ದಿಟ್ಟತನದಿಂದ ಚುನಾವಣಾ ಪ್ರಚಾರದಲ್ಲಿ ಕೆಲಸ ಮಾಡಿದ್ದು ಆಳುವ ಬಿಜೆಪಿ ಕೂಟವನ್ನು ಕಾಡುತ್ತಿದೆ. ರಾಜ್ಯದಲ್ಲಿ ಎಡ ಮತ್ತು ಪ್ರತಿಪಕ್ಷಗಳ ವಿರುದ್ಧ ಮುಂದುವರಿದಿರುವ ದಾಳಿಯು ಬಿಜೆಪಿ-ಆರ್‌ಎಸ್‌ಎಸ್ ಕೂಟದವರ ಭೀತಿ ಮತ್ತು ಅನಿಶ್ಚಯತೆಯ ಸಂಕೇತವಾಗಿದೆ.

ತಮ್ಮ ವಿರುದ್ಧದ ಹಿಂಸಾಚಾರವನ್ನು ಎದುರಿಸುವ ಮಹತ್ವದ ಸವಾಲನ್ನು ಸಿಪಿಐ(ಎಂ) ಮತ್ತು ಎಡರಂಗ ಎದುರಿಸುತ್ತಿದೆ. ಜನತೆಯೊಂದಿಗೆ ಸಂಪರ್ಕವನ್ನು ಮುಂದುವರಿಸುವ ಹೊಣೆಯೂ ಇದೆ. ಈ ಪ್ರಯತ್ನದಲ್ಲಿ ಅವರಿಗೆ ದೇಶದ ಎಲ್ಲಾ ಜನತಾಂತ್ರಿಕ, ಪ್ರಗತಿಪರ ಮತ್ತು ಜಾತ್ಯತೀತ ಶಕ್ತಿಗಳ ಬೆಂಬಲವಿದೆ.

ಅನು: ವಿಶ್ವ

Leave a Reply

Your email address will not be published. Required fields are marked *