ಜನವಿರೋಧಿ ಹಾಗೂ ಕಾರ್ಪೋರೇಟ್ ಕಂಪೆನಿಗಳ ಪರವಾದ ಬಜೆಟ್

ಮಾರ್ಚ್ 20, 2016ರ ಪತ್ರಿಕಾ ಹೇಳಿಕೆ

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೊನ್ನೆ ಮಂಡಿಸಿದ 2016-17ರ ಸಾಲಿನ ಕರ್ನಾಟಕ ರಾಜ್ಯದ ಬಜೆಟ್ ಜನವಿರೋಧಿ ಹಾಗೂ ಕಾರ್ಪೋರೇಟ್ ಪರವಾದ ಬಜೆಟ್ ಎಂದು ಭಾರತ ಕಮ್ಯೂನಿಷ್ಠ್ ಪಕ್ಷ (ಮಾಕ್ರ್ಷವಾದಿ)ದ ರಾಜ್ಯ ಸಮಿತಿ ವಿಶ್ಲೇಷಿಸಿದೆ. ಕರ್ನಾಟಕದ ಕೃಷಿ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಮತ್ತು ಕೈಗಾರಿಕೆ ಮುನ್ನಡೆಗೆ ಆಧಾರ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆಯೆಂದು ಠೀಕಿಸಿದೆ.

ರಾಜ್ಯದ ರೈತರು ಸಾಲಬಾಧಿತರಾಗಿ ಪ್ರತಿನಿತ್ಯ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಳೆದ 06 ತಿಂಗಳ ಅವಧಿಯಲ್ಲಿ 1,100ಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆ ಮಡಿಕೊಂಡಿದ್ದಾರೆ. ಕೃಷಿ ಉತ್ಪಾದನೆಯ ದರ ಶೇ 4.5ರಷ್ಠು ಕಡಿತಗೊಂಡಿದೆ. ಆಹಾರಧಾನ್ಯಗಳ ಉತ್ಪಾದನೆ 20ಲಕ್ಷ ಟನ್‍ಗಳಷ್ಠು ಕಡಿತಗೊಂಡಿದೆ.

ಕೃಷಿಕೂಲಿಕಾರರು, ಕಸುಬುದಾರರು,  ಬರಗಾಲಗಳು ಮತ್ತು ಗ್ರಾಮಗಳಲ್ಲಿ ಕೆಲಸ ಲಭ್ಯವಿಲ್ಲದೇ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಗುತ್ತಿಗೆ ಹಾಗೂ ಅಸಂಘಟಿತ ವಲಯದ ಕಾರ್ಮಿಕರ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಈ ಎಲ್ಲರ ತಲಾ ಆದಾಯ ಸರಾಸರಿ 25ರೂ.ಗಳಿಗಿಂತಲೂ ಕಡಿಮೆ ಇದೆ. ಅಗತ್ಯ ವಸ್ತುಗಳ ವ್ಯಾಪಕವಾದ ಬೆಲೆ ಏರಿಕೆಯ ಈ ಕಾಲದಲ್ಲಿ ಈ ಎಲ್ಲಾ ದುಡಿಯುವ ಜನರ ಆದಾಯ ಹೆಚ್ಚು ಮಾಡುವ ಮತ್ತು ಕನಿಷ್ಠ ವೇತನವನ್ನು ಹೆಚ್ಚಿಸುವ ಯಾವುದೇ ಪ್ರಸ್ತಾಪವನ್ನು ಬಜೆಟ್ ಮಾಡಿಲ್ಲ ಬದಲಿಗೆ ಗಾಯದ ಮೇಲೆ ಬರೆ ಎಳೆಯುವಂತೆ ಈಗಾಗಲೇ ಬೆಲೆ ಎರಿಕೆಯಿಂದ ಮತ್ತು ಆಧಾಯದ ಕುಸಿತದಿಂದ ತತ್ತರಿಸಿರುವ ಈ ಜನತೆಯ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮತ್ತು ಕೋತಾ ಬಜೆಟ್ ಮೂಲಕ ಮತ್ತಷ್ಠು ಹೊರೆ ಏರಲು ಮುಂದಾಗಿರುವುದು ಖಂಡನೀಯವಾಗಿದ್ದು, ತಕ್ಷಣವೇ ಅದನ್ನು ವಾಪಸು ಪಡೆಯಬೇಕೆಂದು ಒತ್ತಾಯಿಸಿದೆ.

ರಾಜ್ಯದ ಅಭಿವೃಧ್ಧಿಯನ್ನು ಸಾದಿಸಲು ಬಹುಸಂಖ್ಯ್ಯಾತರಾದ ದುಡಿಯುವ ಜನರ ಆಧಾಯವನ್ನು ಹೆಚ್ಚಿಸಲು, ಕನಿಷ್ಠ ಕೂಲಿಯನ್ನು ಮಾಸಿಕ 18,000ಕ್ಕೆ ಹೆಚ್ಚಿಸಬೇಕು ಹಾಗೂ ರೈತರನ್ನು ಆತ್ಮಹತ್ಯೆಗಳಿಂದ ಸಂರಕ್ಷಿಸಲು ಅವರ ಋಣ ಭಾರವನ್ನು ಕಡಿಮೆ ಮಾಡಲು ಮತ್ತು ಅವರ ಕೃಷಿ ಉತ್ಪನ್ನಗಳಿಗೆ ಲಾಭದಾಯಕವಾದ ಬೆಲೆಗಳು ಖಾತರಿಯಾಗಿ ದೊರೆಯುವಂತೆ ಕ್ರಮವಹಿಸಿ ರೈತ- ಕೂಲಿಕಾರರನ್ನು ಆಧರಿಸಿದ ವ್ಯವಸಾಯವನ್ನು ಉಳಿಸಬೇಕು ಮಾತ್ರವಲ್ಲಾ ಇದರ ನಾಶಕ್ಕೆ ಕಾರಣವಾಗುವ ಕಾರ್ಪೋರೇಟ್ ಕೃಷಿಗೆ ಅವಕಾಶನೀಡುವ ವಿಶೇಷಕೃಷಿವಲಯದ ಪ್ರಸ್ಥಾಪವನ್ನು ಕೈಬಿಡುವಂತೆ ಒತ್ತಾಯಿಸಿದೆ.

ಕೂಲಿಕಾರರ ವಲಸೆಯನ್ನು ತಡೆಯಲು ಮತ್ತು ಗ್ರಾಮಗಳಲ್ಲಿಯೇ ಉದ್ಯೋಗ ದೊರೆಯುವಂತೆ ಮಾಡಲು, ಬರಗಾಲಗಳ ಈ ಸಂದರ್ಭದಲ್ಲಿ ರಾಷ್ಠ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಭಷ್ರಮುಕ್ತವನ್ನಾಗಿಸಿ ಮತ್ತು ಕನಿಷ್ಠ ವರ್ಷದಲ್ಲಿ 200 ದಿನಗಳ ಕಾಲವಾದರೂ ಪ್ರತಿದಿನ ಕನಿಷ್ಠ 600 ರೂಗಳ ಕೂಲಿಯೊಂದಿಗೆ ದೊರೆಯುವಂತೆ ಕ್ರಮವಹಿಸಬೇಕು.  ಈ ಎಲ್ಲದಕ್ಕೂ ಅಗತ್ಯ ಕ್ರಮ ಹಾಗೂ ಬಜೆಟನಲ್ಲಿ ಅಗತ್ಯ ಹಣವನ್ನು ಒದಗಿಸಲು ಸಿಪಿಐ(ಎಂ)ಒತ್ತಾಯಿಸಿದೆ.

ಉನ್ನತ ಶಿಕ್ಷಣದ ಸೌಲಭ್ಯವನ್ನು ಸಾರ್ವಜನಿಕ ರಂಗದಲ್ಲಿ ವಿಸ್ತರಿಸಲು ಮತ್ತು ರಾಜ್ಯದ ವಿದ್ಯಾವಂತ ನಿರುದ್ಯೋಗಿ ಯುವಜನರಿಗೆ ಉದ್ಯೋಗ ಒದಗಿಸುವ ಯೋಜನೆಗಳಾಗಲೀ ಅಥವಾ ನಿರುದ್ಯೋಗ ಭತ್ಯೆ ನೀಡುವ ಪ್ರಸ್ಥಾಪವನ್ನಾಗಲೀ ಈ ಬಜೆಟ್ ಮಾಡಿಲ್ಲವೆಂದು ಠೀಕಿಸಿದೆ.

ತಕ್ಷಣವೇ ಕಾರ್ಪೋರೇಟ್ ಕಂಪೆನಿಗಳಪರವಾದ ನಿಲುಮೆಯನ್ನು ಮತ್ತು ದಿಶೆಯನ್ನು ಕೈಬಿಟ್ಟು ಜನತೆಯ ಹಾಗೂ ರಾಜ್ಯದ ಅಭಿವೃದ್ಧಿ ಪರವಾದ ಬಜೆಟ್‍ಆಗಿ ಪರಿವರ್ತಿಸಲು ರಾಜ್ಯ ಸರಕಾರವನ್ನು ಒತ್ತಾಯಿಸಿದೆ. ಅದೇ ರೀತಿ, ಈ ಜನವಿರೋಧಿ ಬಜೆಟ್‍ನ್ನು ತಿರಷ್ಕರಿಸಲು ಮತ್ತು ಜನಪರವಾದ ಬಜೆಟಗಾಗಿ ಪ್ರತಿಭಟನೆ ನಡೆಸಲು ಕರೆ ನೀಡಿದೆ.

ಜಿ.ವಿ. ಶ್ರೀರಾಮರೆಡ್ಡಿ

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *