17ನೇ ಲೋಕಸಭೆ 2019 : ಸಿಪಿಐ(ಎಂ) ಚುನಾವಣಾ ಪ್ರಣಾಳಿಕೆ

ಚುನಾವಣಾ ಪ್ರಣಾಳಿಕೆ ಪಿಡಿಎಫ್ ಆವೃತ್ತಿ

ಭಾಗ 1

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಐದು ವರ್ಷಗಳ ಆಳ್ವಿಕೆಯು ದೇಶಕ್ಕೆ ಮತ್ತು ಜನರಿಗೆ ಅಸಹನೀಯ ಆಪತ್ತಾಗಿ ಪರಿಣಮಿಸಿದೆ.

ಈ ಚುನಾವಣೆಗಳು ಸ್ವತಂತ್ರ ಭಾರತದ ಇತಿಹಾಸದಲ್ಲೆÃ ಅತ್ಯಂತ ನಿರ್ಣಾಯಕವಾದದ್ದಾಗಿದೆ. ನಮ್ಮ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ  ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರದ ಭವಿಷ್ಯವೇ ಇಂದು ಅಪಾಯದಲ್ಲಿದೆ.  ಏಕೆಂದರೆ, ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರವು ಪ್ರಧಾನಿ ನರೇಂದ್ರ ಮೋದಿಯ ಅಡಿಯಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಕೋಮುವಾದಿ ಧೃವೀಕರಣವನ್ನು ಹರಿತಗೊಳಿಸುತ್ತಾ ನಮ್ಮ ಶ್ರಿÃಮಂತ, ವೈವಿಧ್ಯಮಯ ಸಾಮಾಜಿಕ ಬಂಧದ ಸಾಮರಸ್ಯವನ್ನು ತೀಕ್ಷ÷್ಣವಾಗಿ ಛಿದ್ರಗೊಳಿಸುತ್ತಿದೆ. ಈ ಕಳೆದ ಐದು ವರ್ಷಗಳಲ್ಲಿ ಅದು ನಮ್ಮ ಎಲ್ಲಾ ಸಾಂವಿಧಾನಿಕ ಸಂಘ ಸಂಸ್ಥೆಗಳ ಮೇಲೆ ನಿರ್ಲಜ್ಜ ಹಾಗೂ ನಿರಂತರ ದಾಳಿಯನ್ನು ತೀವ್ರವಾಗಿಸಿದೆ. ಬಿಜೆಪಿಯು ಈ ಕೇಂದ್ರ ಸರ್ಕಾರದಲ್ಲಿ ಮತ್ತೆ ಮುಂದುವರಿಯುವುದೆಂದರೆ ನಮ್ಮ ಸಂವಿಧಾನದ ಮೂಲಭೂತ ಆಧಾರಸ್ಥಂಭಗಳನ್ನು ಇನ್ನೂ ಹೆಚ್ಚು ಹಾನಿಗೊಳಪಡಿಸಿದಂತೆಯೇ ಸರಿ.

ಆದಕಾರಣ, ಈ ಸರ್ಕಾರವನ್ನು ಸೋಲಿಸುವುದು ಮತ್ತು ನಮ್ಮ ಸಾಂವಿಧಾನಿಕ ಗಣತಂತ್ರವನ್ನು ರಕ್ಷಿಸುವ ಹಾಗೂ ನಂತರ ಅದನ್ನು ಇನ್ನೂ ಕ್ರೊÃಢೀಕರಿಸುವ ಒಂದು ಪರ್ಯಾಯ ಜಾತ್ಯತೀತ ಸರ್ಕಾರವನ್ನು ಸ್ಥಾಪಿಸುವುದೇ ಭಾರತದ ಮತದಾರರ ಮುಂದಿರುವ ಪ್ರಥಮ ಜವಾಬ್ದಾರಿಯಾಗಿದೆ. ಆದರೆ, ಇದು ಸಾಧ್ಯವಾಗುವುದು ಈಗಿನ ನೀತಿಗಳ ದಿಕ್ಕನ್ನು ಆಮೂಲಾಗ್ರವಾಗಿ ಜನರ ಪರವಾಗಿ ತಿರುಗಿಸಿದಾಗ ಮಾತ್ರ. ಇದನ್ನು ನಿಜರೂಪಕ್ಕೆ ತರಲು ಭಾರತದ 17ನೇ ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಸಂಖ್ಯಾಬಲವನ್ನು ಹೆಚ್ಚಿಸಬೇಕಾದ ಅಗತ್ಯವಿದೆ.

ಪ್ರಜಾಪ್ರಭುತ್ವದ ಮೇಲೆ ದಾಳಿಗಳು

ಕಳೆದ ಐದು ವರ್ಷಗಳಲ್ಲಿ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳು ಮತ್ತು ಅಧಿಕಾರಿಗಳು ಹಾಗೂ ಸಂವಿಧಾನವು ಖಾತ್ರಿಪಡಿಸಿದ ಜನರ ಹಕ್ಕುಗಳ ಮೇಲೆ ಒಂದು ದುಷ್ಟ ನಿರಂಕುಶ ದಾಳಿಯನ್ನು ನಾವು ಕಂಡಿದ್ದೆÃವೆ.

ಕೆಲವು ಉದಾಹರಣೆಗಳು:

ಸಂಸತ್ತಿನ ಕಾರ್ಯನಿರ್ವಹಣೆಯನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ. ಸಂಸತ್ತಿಗೆ ಸರ್ಕಾರದ ಉತ್ತರದಾಯಿತ್ವ, ಜನತೆಗೆ ಸಂಸದರ ಉತ್ತರದಾಯಿತ್ವ ಇವುಗಳ ಮೂಲಕ ಜನತೆ ತಮ್ಮ ಸಾರ್ವಭೌಮತೆಯನ್ನು ಚಲಾಯಿಸುವ ರೀತಿಯು “ನಾವು, ಜನತೆ” ಎಂಬ ಸಂವಿಧಾನದ ಪ್ರಾರಂಭದ ವಾಕ್ಯದಲ್ಲಿ ಅಡಕವಾಗಿದೆ. ಇದನ್ನು ಹಾಳುಗೆಡವಲಾಗುತ್ತಿದೆ.

ಮೇಲ್ಮನೆ, ರಾಜ್ಯಸಭಾದ ಸ್ವತಂತ್ರ ಕಾರ್ಯನಿರ್ವಹಣೆಯನ್ನು ಮೋದಿ ಸರ್ಕಾರವು, ರಾಜ್ಯಸಭಾವನ್ನು ಕಡೆಗಣಿಸಿ ಬೇಕಾಬಿಟ್ಟಿಯಾಗಿ ‘ಹಣಕಾಸು ಮಸೂದೆ’ಯ ದಾರಿ ಹಿಡಿಯುವ ಮೂಲಕ ಹಾಳುಗೆಡಹುತ್ತಿದೆ. ವಾಸ್ತವದಲ್ಲಿ ಶಾಸನಾತ್ಮಕ ಮೇಲ್ವಿಚಾರಣೆ ನಡೆಸುವ ಸಂಸದೀಯ ಸಮಿತಿಗಳನ್ನು ಸಂಪೂರ್ಣವಾಗಿ ಹಾಳುಗೆಡವಲಾಗುತ್ತಿದೆ.

ನ್ಯಾಯಾಂಗದಲ್ಲೂ ಲಜ್ಜಾಹೀನವಾಗಿ ಮೂಗುತೂರಿಸುವ ಮೂಲಕ ಜನರಿಗೆ ನ್ಯಾಯವನ್ನು ನಿರಾಕರಿಸಲಾಗುತ್ತಿದೆ ಮತ್ತು ಅದರ ಪರಿಣಾಮವಾಗಿ ಜನರಿಗೆ ನ್ಯಾಯ ಒದಗಿಸುವಲ್ಲಿ ಹಾಗೂ ಸಂವಿಧಾನವನ್ನು ಎತ್ತಿಹಿಡಿಯುವಲ್ಲಿ ನಿರತರಾಗಿರುವ ನ್ಯಾಯಾಧೀಶರಲ್ಲಿ ಅತೃಪ್ತಿ ಹೊಗೆಯಾಡುತ್ತಿದೆ.

ತನಿಖಾ ಸಂಸ್ಥೆ ಸಿಬಿಐಯ ಮಹತ್ವವನ್ನು ಹಾಳುಗೆಡವಲಾಗಿದೆ ಮತ್ತು ಅದನ್ನು ಪ್ರಧಾನಮಂತ್ರಿ ಮತ್ತು ಸರ್ಕಾರದ ರಾಜಕೀಯ ಉದ್ದೆÃಶಗಳಿಗಾಗಿ ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಸ್ವತಂತ್ರ ನಿಯಂತ್ರಣ ಅಧಿಕಾರವನ್ನು ಕಿತ್ತುಹಾಕಿ ಆರ್.ಬಿ.ಐ.ನ ಮೀಸಲು ನಿಧಿಯನ್ನು ಸರ್ಕಾರದ ಖರ್ಚುವೆಚ್ಚಗಳಿಗಾಗಿ ಬಳಸಲು ಮುಂದಾಗಿದೆ.

ಕಾರ್ಮಿಕ ವರ್ಗ, ರೈತಾಪಿ ಜನರು ಮತ್ತು ಇತರೆ ಎಲ್ಲಾ ದುಡಿಯುವ ಜನರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟಿಸುವ ಹಕ್ಕುಗಳನ್ನು ಮೊಟಕುಗೊಳಿಸಲಾಗುತ್ತಿದೆ. ಪ್ರತಿ ಭಾರತೀಯನ ಖಾಸಗಿತ್ವದ ಮೂಲಭೂತ ಹಕ್ಕನ್ನು ಕಸಿಯುವ ಪ್ರಯತ್ನ ನಡೆದಿದೆ.

ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರö್ಯದ ಹಕ್ಕಿನ ಮೇಲೆ ವ್ಯಾಪಕ ದಾಳಿಗಳಾಗುತ್ತಿವೆ. ಸರ್ಕಾರವನ್ನು ಟೀಕಿಸುವ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮಗಳ ಮೇಲೆ ದಾಳಿಗಳು; ಆರ್.ಎಸ್.ಎಸ್./ಬಿಜೆಪಿಯನ್ನು ಟೀಕಿಸುವವರ ಮೇಲೆ ಮನಸೋಯಿಚ್ಛೆ ದೇಶದ್ರೊÃಹಿಗಳೆಂಬ ಆರೋಪ ಹೊರಿಸುವುದು. ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯಗಳ ಅಪರಾಧೀಕರಣ; ದಲಿತರು ಮುಂತಾದ ಸರ್ಕಾರ ಗುರಿಯಿಡುವ ವಿಭಾಗಗಳ ಪರವಾಗಿ ನಿಲ್ಲುವ ನ್ಯಾಯವಾದಿಗಳು ಮತ್ತು ಬುದ್ಧಿಜೀವಿಗಳಿಗೆ ಕಿರುಕುಳ ನೀಡುವುದು ಮತ್ತು ಹಿಂಸೆ ಮಾಡುವುದು.

ಆರ್.ಎಸ್.ಎಸ್./ಬಿಜೆಪಿಯನ್ನು ಟೀಕಿಸುವವರ ಮೇಲೆ ಹಿಂಸಾತ್ಮಕ ದೈಹಿಕ ದಾಳಿ ಹಾಗೂ ಡಾ.ನರೇಂದ್ರ ದಭೋಲ್ಕರ್, ಕಾಂ.ಗೋವಿಂದ ಪನ್ಸಾರೆ, ಡಾ.ಎಂ.ಎಂ.ಕಲಬುರ್ಗಿ ಹಾಗೂ ಗೌರಿ ಲಂಕೇಶ್ ಮುಂತಾದ ವಿಚಾರವಾದಿಗಳು ಮತ್ತು ಬುದ್ಧಿಜೀವಿಗಳ ಹತ್ಯೆಗೂ ಕಾರಣವಾದ ದಾಳಿಗಳು.

ಜಾತ್ಯತೀತವಾದದ ಮೇಲಿನ ದಾಳಿಗಳು

ವಿವಾದಾತ್ಮಕ ವಿಷಯಗಳಾದ ಮಂದಿರ ನಿರ್ಮಾಣ, ಮುಸ್ಲಿಂ ಹೆಸರುಗಳನ್ನು ತೆಗೆದು ಸಾರ್ವಜನಿಕ ಸ್ಥಳಗಳ ಮರುನಾಮಕರಣ ಮುಂತಾದ ವಿಷಯಗಳನ್ನು ಎತ್ತಿ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹಾಗೂ ಹಿಂಸೆಯ ವಾತಾವರಣ ಸೃಷ್ಟಿಸಿ ಕೋಮು ಧೃವೀಕರಣವನ್ನು ಆಕ್ರಮಣಕಾರಿ ರೀತಿಯಲ್ಲಿ ತೀವ್ರಗೊಳಿಸಲಾಗುತ್ತಿದೆ.

ಗೋರಕ್ಷಣೆ ಮತ್ತು ನೈತಿಕ ಪೋಲಿಸ್‌ಗಿರಿ ಹೆಸರಿನಲ್ಲಿ ಖಾಸಗೀ ಸೇನೆಗಳನ್ನು ಪೋಷಿಸಲಾಗುತ್ತಿದೆ. ದಲಿತರು ಮತ್ತು ಮುಸ್ಲಿಮರ ಮೇಲೆ ಮಾರಣಾಂತಿಕ ದಾಳಿಗಳಾಗುತ್ತಿವೆ. ಖಾಸಗೀ ಸೇನೆಗಳ ಅನಿರ್ಬಂಧಿತ ಚಟುವಟಿಕೆಗಳು ಸಾಮೂಹಿಕವಾಗಿ ಹೊಡೆದು ಕೊಲ್ಲುವ ಘಟನೆಗಳಿಗೆ ದಾರಿ ಮಾಡಿಕೊಡುತ್ತಿವೆ.

ಭಾರತೀಯ ಶಿಕ್ಷಣ ವ್ಯವಸ್ಥೆಯ ಆಕ್ರಮಣಕಾರಿ ಕೋಮುವಾದೀಕರಣ.

ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಕೋಮುವಾದೀಕರಣಗೊಳಿಸಲು ಎಲ್ಲಾ ವಿಶ್ವವಿದ್ಯಾನಿಲಯಗಳ, ಉನ್ನತ ಶಿಕ್ಷಣ ಸಂಸ್ಥೆಗಳ, ಸಂಶೋಧನಾ ಸಂಸ್ಥೆಗಳ, ಸಾಂಸ್ಕೃತಿಕ ಅಕಾಡೆಮಿಗಳ ಉನ್ನತ ಸ್ಥಾನಗಳಿಗೆ ಆರ್.ಎಸ್.ಎಸ್. ಕಾರ್ಯಕರ್ತರನ್ನು ನಿರ್ಲಜ್ಜೆಯಿಂದ ನೇಮಕಮಾಡಲಾಗಿದೆ.
ಹಿಂದುತ್ವ ಅಜೆಂಡಾವನ್ನು ಮುನ್ನೆಲೆಗೆ ತರಲು ಎಲ್ಲಾ ಹಂತಗಳ ಪಠ್ಯಗಳನ್ನು, ಬಹುಮುಖ್ಯವಾಗಿ ಶಾಲಾ ಪಠ್ಯ ಪುಸ್ತಕಗಳನ್ನು ಅವರು ಬದಲಾಯಿಸುವ ಪ್ರಯತ್ನ ನಡೆಸಿದ್ದಾರೆ.

ಅನಾಹುತಕಾರಿ ಆರ್ಥಿಕ ನೀತಿಗಳು

ಈ ಐದು ವರ್ಷಗಳ ಅವಧಿಯಲ್ಲಿ, ಆರ್ಥಿಕ ಚಟುವಟಿಕೆಗಳ ಎಲ್ಲಾ ರಂಗಗಳನ್ನು ವಿದೇಶಿ ನೇರ ಬಂಡವಾಳಕ್ಕೆ ತೆರೆದುಕೊಟ್ಟು ಅವರ ಲಾಭಗಳನ್ನು ಹೆಚ್ಚಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ.

ಸಾರ್ವಜನಿಕ ಆಸ್ತಿಗಳ ದೊಡ್ಡ ಮಟ್ಟದ ಖಾಸಗೀಕರಣ; ಅವುಗಳ ಅತ್ಯುತ್ಕೃಷ್ಟ ಆಸ್ತಿಗಳನ್ನು ಆಯ್ದ ವಿದೇಶಿ ಹಾಗೂ ಭಾರತೀಯ ಕಾರ್ಪೊರೇಟ್ ಕಂಪನಿಗಳಿಗೆ ವಹಿಸಿಕೊಡಲಾಗುತ್ತಿದೆ.

ರಫೇಲ್ ಹಗರಣದಲ್ಲಿ ಬಿಂಬಿತವಾದಂತೆ ಚಮಚಾ ಬಂಡವಾಳಶಾಹಿಗೆ ಅಂಕೆಯಿಲ್ಲದ ಉತ್ತೆÃಜನ, ಚುನಾವಣೆಗೆ ಸ್ವಲ್ಪವೇ ಮೊದಲು ದೇಶೀಯ ವಿಮಾನ ನಿಲ್ದಾಣಗಳನ್ನು ಮತ್ತು ಭಾರತದ ಮೊಟ್ಟ ಮೊದಲ ವಿದ್ಯುತ್ ವಿಶೇಷ ಆರ್ಥಿಕ ವಲಯ (ಎಸ್.ಇ.ಜಡ್.)ವನ್ನು ಖಾಸಗೀಕರಿಸಲು ಅದಾನಿ ಗುಂಪಿಗೆ ಹಕ್ಕು ಮಂಜೂರು, ಇತ್ಯಾದಿ. ರಾಜಕೀಯ ಪಕ್ಷಗಳಿಗೆ ವಂತಿಗೆ ನೀಡುವುದರ ಮೇಲಿದ್ದ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿರುವುದು, ಚುನಾವಣಾ ಬಾಂಡುಗಳನ್ನು ಚಾಲ್ತಿಗೆ ತಂದು ಅಂತಹ ಚಮಚಾವಾದಕ್ಕೆ ಲೂಟಿ ಮಾಡಲು ಹೆಬ್ಬಾಗಿಲನ್ನೆÃ ತೆರೆದಿಡಲಾಗಿದೆ.

11 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಮೊತ್ತದ ಎನ್.ಪಿ.ಎ.(ಹೋಕು ಬಾಕಿ) ಸೃಷ್ಟಿಯಲ್ಲಿ ಬಿಂಬಿತವಾದಂತೆ ಸಾರ್ವಜನಿಕ ಹಣವನ್ನು ಲೂಟಿ ಮಾಡಲು ಅನುಕೂಲ ಒದಗಿಸಲಾಗಿದೆ ಮತ್ತು ಉತ್ತೆÃಜನ ನೀಡಲಾಗಿದೆ.

ನಗದು ವ್ಯವಹಾರವನ್ನೇ ನಂಬಿ ಬದುಕುತ್ತಿದ್ದ ಕೋಟ್ಯಾಂತರ ಜನರ ಬದುಕನ್ನು ನೋಟುರದ್ದತಿ(ಡಿಮಾನಿಟೈಸೇಷನ್) ಮೂಲಕ ನಾಶಮಾಡಲಾಗಿದೆ.

ಕೃಷಿ ವಲಯದ ನಂತರ ಅತ್ಯಂತ ಹೆಚ್ಚು ಉದ್ಯೋಗ ಸೃಷ್ಟಿಮಾಡುವ ಅತಿಸಣ್ನ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು(ಎಂ.ಎಸ್.ಎಂ.ಇ) ಜಿ.ಎಸ್.ಟಿ. ಜಾರಿಮಾಡುವುದರ ಮೂಲಕ ಕಾರ್ಯತಃ ನಾಶಮಾಡಲಾಗಿದೆ. ಮುದ್ರಾ ಸಾಲದ ಎನ್.ಪಿ.ಎ. 2017-18ರ ಸಾಲಿಗಿಂತ 2018-19ನೇ ಸಾಲಿನ ಮೊದಲ 9 ತಿಂಗಳಿನಲ್ಲಿ 53% ಹೆಚ್ಚಾಗಿದೆ.

ಜನರ ಹೊಟ್ಟೆಪಾಡಿನ ಮೇಲೆ ಹಿಂದೆಂದೂ ಕಂಡು ಕೇಳರಿಯದಂತಹ ಆಕ್ರಮಣ

ರಿಯಾಯಿತಿ ದರದಲ್ಲಿ ಆಹಾರ ಪೂರೈಕೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸಾರ್ವಜನಿಕ ವಿತರಣಾ ವ್ಯವಸ್ಥೆ(ರೇಷನ್ ಕಾರ್ಡ್ ಪದ್ಧತಿ) ಮುಂತಾದವುಗಳ ಮೂಲಕ ಜನಸಾಮಾನ್ಯರು ಪಡೆಯುತ್ತಿದ್ದ ಪ್ರಯೋಜನಗಳಲ್ಲಿ ತೀವ್ರ ಕಡಿತ ಮತ್ತು ನಿರಾಕರಣೆ

ಆಳವಾಗುತ್ತಿರುವ ಕೃಷಿ ಬಿಕ್ಕಟ್ಟು ಭಾರತದ ರೈತಾಪಿ ಜನರನ್ನು ನಾಶಮಾಡುತ್ತಿದೆ ಮತ್ತು ಹತಾಶೆಯ ಆತ್ಮಹತ್ಯೆಗಳು ಹಚ್ಚಾಗುತ್ತಿವೆ.

ಗ್ರಾಮೀಣ ಭಾರತದ ಜನರ ಬದುಕು ಹಿಂದೆಂದೂ ಇಷ್ಟು ಕೆಟ್ಟಿರಲಿಲ್ಲ. ಅವರ ನಿಜ ಆದಾಯ ಹಿಂದೆಂದೂ ಕಾಣದಷ್ಟು ಕುಸಿಯುತ್ತಿದೆ.

ಕೃಷಿ ಆದಾಯದ ಬೆಳವಣಿಗೆಯ ದರ ಅಕ್ಟೊÃಬರ್–ಡಿಸೆಂಬರ್ 2018 ರಲ್ಲಿ 2.67% ಗೆ ಕುಸಿದು ಕಳೆದ 14 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟದ್ದೆಂದು ದಾಖಲಾಗಿದೆ.(ಸೆಂಟ್ರಲ್ ಸ್ಟಾö್ಯಟಿಸ್ಟಿಕ್ಸ್ ಆಫಿಸ್-ಕೇಂದ್ರ ಅಂಕಿಅಂಶಗಳ ಕಛೇರಿ). ಆರ್.ಬಿ.ಐ. ವರದಿಯ ಪ್ರಕಾರ ಕೃಷಿ ಕ್ಷೇತ್ರದಲ್ಲಿ ಸಾಲ ಹಿಂತಿರುಗಿಸದೆ ಇರುವ ಮೊತ್ತ ಕಳೆದ 2017ರ ಸೆಪ್ಟೆಂಬರ್‌ನಲ್ಲಿ 70000 ಕೋಟಿ ರೂಪಾಯಿ ಇದ್ದದ್ದು 2018ರ ಸೆಪ್ಟೆಂಬರ್ ಹೊತ್ತಿಗೆ 1 ಲಕ್ಷ ಕೋಟಿ ರೂಪಾಯಿಗೆ ಏರಿದೆ. ಕೃಷಿ ವಲಯದ ಬಿಕ್ಕಟ್ಟು ಅಷ್ಟು ಬಿಗಡಾಯಿಸಿದ್ದರಿಂದ ರೈತರ ಆತ್ಮಹತ್ಯೆ ಹೆಚ್ಚಾಗುತ್ತಲೇ ಇದೆ.

ನಿರುದ್ಯೋಗ

ಕಳೆದ ಕೆಲವು ವರ್ಷಗಳಿಂದ ಉದ್ಯೊÃಗದ ಅವಕಾಶಗಳು ತೀರ ಕಡಿಮೆಯಾಗುತ್ತಿರುವುದರಿಂದ ನಮ್ಮ ಯುವಜನರು ಹತಾಶರಾಗುತ್ತಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಮೋದಿಯವರು ಆಶ್ವಾಸನೆ ನೀಡಿದ್ದರು, ಅಂದರೆ ಈ ಐದು ವರ್ಷಗಳಲ್ಲಿ 10 ಕೋಟಿ ಉದ್ಯೋಗ. ವಾಸ್ತವ ಪರಿಸ್ಥಿತಿಯೆಂದರೆ ನಿರುದ್ಯೋಗ ದರವು ಕಳೆದ 45 ವರ್ಷಗಳಲ್ಲಿ ಅತ್ಯಂತ ಹೆಚ್ಚಾಗಿದ್ದು 6.1% ರಷ್ಟಾಗಿದೆ (ಎನ್.ಎಸ್.ಎಸ್.ಒ-ರಾಷ್ಟ್ರೀಯ ಮಾದರಿ ಸರ್ವೇಕ್ಷಣ ಕಛೇರಿ). ನಿರುದ್ಯೋಗದ ದರ 2018ರಲ್ಲಿ 5.9% ಇದ್ದದ್ದು ಫೆಬ್ರವರಿ 2019 ರಲ್ಲಿ 7.1% ರಷ್ಟಾಗಿದೆ(ಸಿ.ಎಂ.ಐ.ಇ-ಭಾರತ ಆರ್ಥಿಕ ಮೇಲ್ವಿಚಾರಣೆ ಕೇಂದ್ರ). ಗ್ರಾಮೀಣ ಭಾರತದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದ್ದಾಗಿದೆ. ಎನ್.ಎಸ್.ಎಸ್.ಒ. ವರದಿ ಪ್ರಕಾರ 2011-12 ರಿಂದ 2017-18ರ ಅವಧಿಯಲ್ಲಿ ಸಾಂದರ್ಭಿಕ ಶ್ರಮಿಕರಲ್ಲಿ(ಕ್ಯಾಸುಯಲ್ ಲೇಬರ‍್ಸ್) 3.2 ಕೋಟಿ ಉದ್ಯೋಗ ನಷ್ಟವಾಗಿದ್ದು, ಸಾಂದರ್ಭಿಕ ಶ್ರಮ ಮತ್ತು ಕೃಷಿ ಆದಾಯದ ಮೇಲೆ ಅವಲಂಬಿತರಾಗಿದ್ದ 1.5 ಕೋಟಿ ಜನರನ್ನು ಬಾಧಿಸಿದೆ.

ಹೆಚ್ಚಾಗುತ್ತಿರುವ ಎಸ್.ಸಿ. ಮತ್ತು ಎಸ್.ಟಿ.ಗಳ ಮೇಲಿನ ದಾಳಿಗಳು

ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಬುಡಕಟ್ಟು ಜನರ ಮೇಲಿನ ಅಪರಾಧಗಳು, ವಿಶೇಷವಾಗಿ ಗುಜರಾತಿನಲ್ಲಿ ಮತ್ತು ಹಿಂದೆ ಬಿಜೆಪಿ ಆಳ್ವಿಕೆಯ ರಾಜ್ಯಗಳಾದ ಮಧ್ಯಪ್ರದೇಶ ಮತ್ತು ರಾಜಾಸ್ತಾನಗಳಲ್ಲಿ ಒಂದೇ ಸಮನಾಗಿ ಹೆಚ್ಚಾಗುತ್ತಲೇ ಇವೆ.

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅವರಿಗೆ ದಕ್ಕಬೇಕಾದ ಜಮೀನು ಪಟ್ಟಾಗಳಿಂದ ಆದಿವಾಸಿಗಳು ದೊಡ್ಡ ಪ್ರಮಾಣದಲ್ಲಿ ವಂಚಿತರಾಗುತ್ತಿದ್ದಾರೆ.

‘ಗುಜರಾತ್ ಮಾದರಿ’ ಎಂದು ಹೆಚ್ಚು ಪ್ರಚಾರದಲ್ಲಿರುವ ಗುಜರಾತ್ ರಾಜ್ಯದಲ್ಲಿ ಹೆಚ್ಚುತ್ತಿರುವ ದಾಳಿಗಳ ನಿದರ್ಶನಗಳು ಸಿಗುತ್ತವೆ, ಕಳೆದ ಐದು ವರ್ಷಗಳಲ್ಲಿ ಎಸ್.ಸಿ ಮತ್ತು ಎಸ್.ಟಿ.ಗಳ ಮೇಲೆ ಅನುಕ್ರಮವಾಗಿ 32% ಮತ್ತು 55% ಅಪರಾಧಗಳು ಹೆಚ್ಚಾಗಿವೆ. (ಗುಜರಾತ್ ವಿಧಾನಸಭಾ ದಾಖಲೆಗಳಿಂದ).

ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳು

ಮಹಿಳೆಯರು ಹೆಚ್ಚಿನ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. 2016ರಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚು ವರದಿಯಾಗಿವೆ – ಪ್ರತಿ ಒಂದು ಗಂಟೆಗೆ ಸರಾಸರಿ ನಾಲ್ಕು ಅತ್ಯಾಚಾರಗಳು. ಅಂದಿನಿಂದ ಎನ್.ಸಿ.ಆರ್.ಬಿ(ರಾಷ್ಟಿçÃಯ ಅಪರಾಧ ದಾಖಲೆಗಳ ಕಾರ್ಯಾಲಯ)ಯು ಈ ವಿಷಯದಲ್ಲಿನ ಅಂಕಿಅಂಶಗಳ ಪ್ರಕಟಣೆಯನ್ನು ಸರ್ಕಾರ ನಿಲ್ಲಿಸಿದೆ.

ಮಹಿಳೆಯರ ಮೇಲೆ, ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಘೋರ ಸಾಮೂಹಿಕ ಅತ್ಯಾಚಾರಗಳು ಹಾಗೂ ಯುವತಿಯರ ಕೊಲೆಗಳಂತಹ ಕೃತ್ಯಗಳ ಮೂಲಕ ನಮ್ಮ ಸಮಾಜವು ಒಟ್ಟಾರೆಯಾಗಿ ಅಮಾನುಷಗೊಳ್ಳುತ್ತಿರುವುದನ್ನು ಕಾಣಬಹುದು.

ಬಡವರನ್ನು ಬಡವರನ್ನಾಗಿಸುವುದು ಮತ್ತು ಶ್ರೀಮಂತರನ್ನು ಶ್ರೀಮಂತರನ್ನಾಗಿಸುವುದು

ಒಟ್ಟು ಜನಸಂಖ್ಯೆಯಲ್ಲಿನ ಮೇಲುಸ್ತರದ ಶೇಕಡಾ ಒಂದರಷ್ಟು ಜನರಲ್ಲಿ ಒಟ್ಟು ಸಂಪತ್ತಿನ ಕ್ರೋಢೀಕರಣದ ಪಾಲು, ಈ ಐದು ವರ್ಷಗಳಲ್ಲಿ, 2014 ರಲ್ಲಿ 43% ಇದ್ದದ್ದು 2018ರಲ್ಲಿ ಅದು 73% ಆಗಿದೆ.

ಪೆಟ್ರೋಲಿಯಮ್ ಉತ್ಪನ್ನಗಳ (ಪೆಟ್ರೋಲ್, ಡೀಸೆಲ್, ಇತ್ಯಾದಿ) ಮೇಲಿನ ತೆರಿಗೆಗಳನ್ನು ಮತ್ತು ಸುಂಕಗಳನ್ನು ಇಳಿಸಲು ಸರ್ಕಾರ ನಿರಾಕರಿಸುತ್ತಿರುವುದರಿಂದ ಬೆಲೆಗಳು ಅಸಹನೀಯವಾಗಿ ಏರಿ, ಕಾರ್ಮಿಕ ವರ್ಗದ ಹಾಗೂ ನೌಕರರ ಕೆಲಸದ ಪರಿಸ್ಥಿತಿ ತೀರ ಕನಿಷ್ಠಕ್ಕಿಳಿದಿದೆ.

ಹಾಳುಗೆಡವಲ್ಪಟ್ಟ ಭಾರತದ ಆರ್ಥಿಕತೆ

ಕಳೆದ ಐದು ವರ್ಷಗಳಲ್ಲಿ ಅತ್ಯಂತ ಕಡಿಮೆ ಜಿಡಿಪಿ ಬೆಳವಣಿಗೆ ದರ – 2013-14 ರ ಅವಧಿಯ 8.2 % ನಿಂದ 2018-19ರ ಮೊದಲ ಮೂರು ತ್ರೆöÊಮಾಸಿಕದಲ್ಲಿ, ಸರ್ಕಾರ ಅಂಕಿಅಂಶಗಳನ್ನು ಎಷ್ಟೆÃ ತಿರುಚಿ ತೋರಿಸಿದರೂ 7% ಕ್ಕೆ ಇಳಿದಿದೆ. ಹಿಂದಿನ ಅಂಕಿಅಂಶಗಳ ಸರಣಿಯನ್ನು ಬಳಸಿದ್ದರೆ ಅದು ಕೇವಲ 4.7% ಆಗಿರುತ್ತಿತ್ತು.

ಕಳೆದ ತ್ರೆöÊಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಇನ್ನೂ ಕುಸಿದು 6.6% ಕ್ಕೆ ಇಳಿಯುವುದರ ಮೂಲಕ ಆರ್ಥಿಕತೆಯು ಹಿಂಜರಿತದತ್ತ ಜಾರುತ್ತಿದೆ ಎನ್ನುವ ವಾಸ್ತವವನ್ನು ತೋರುತ್ತಿದೆ. ‘ಭಾರತವು ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ’ ಎಂದು ನಮ್ಮ ಪ್ರಧಾನ ಮಂತ್ರಿ ಮೋದಿ ಎದೆ ತಟ್ಟಿ ಹೇಳಿಕೊಳ್ಳುತ್ತಿರುವ ಆರ್ಥಿಕತೆ ಇದು!

ಜಿ.ಎಸ್.ಟಿ. ಸಂಗ್ರಹವು, ಸರ್ಕಾರ ಎಷ್ಟೆÃ ಕೊಚ್ಚಿಕೊಂಡರೂ, ಕುಸಿಯುತ್ತಲೇ ಸಾಗಿದ್ದು 2017-18ರಲ್ಲಿ 7.8% ಇದ್ದದ್ದು 2018-19ರಲ್ಲಿ 5.8%ಗೆ ಇಳಿದಿದೆ. ಅದು ನಮ್ಮ ಆರ್ಥಿಕತೆಯ ಭಾರಿ ಹಿಂಜರಿತವನ್ನು ಪ್ರತಿಬಿಂಬಿಸುತ್ತದೆ.

ನೋಟು ರದ್ದತಿ ಮತ್ತು ಜಿ.ಎಸ್.ಟಿ. ಇವೆರಡೂ ದೇಶದ ಆರ್ಥಿಕತೆಯ ಮೂಲಾಧಾರದ ಮೇಲೆಯೇ ಮಾಡಿದ ಅಶುಭ ಸೂಚಕ ದಾಳಿಗಳು. 2016ರ ನವಂಬರ್‌ಗಿಂತಲೂ ಮುಂಚೆ, ನೋಟುರದ್ದತಿಗೆ ಮುಂಚೆ 2.6% ಇದ್ದ ಜಾಗತಿಕ ಜಿಡಿಪಿಯು ನೋಟುರದ್ದತಿಯ ನಂತರ, 3.1% ಗೆ ಏರಿತು. ಇದಕ್ಕೆ ವ್ಯತಿರಿಕ್ತವಾಗಿ ಭಾರತದ ಜಿಡಿಪಿಯು 7.8% ನಿಂದ 6.8%ಕ್ಕೆ ಕುಸಿಯಿತು.

ಜನರ ಬದುಕು ನಾಶವಾದ ಕಾರಣ ದೇಶೀಯ/ ಆಂತರಿಕ ಬೇಡಿಕೆಯಲ್ಲಿ ತೀವ್ರ ಕುಸಿತ ಉಂಟಾಗಿ ಕೈಗಾರಿಕೆಗಳು ಮತ್ತು ಉದ್ದಿಮೆಗಳ ಬೆಳವಣಿಗೆಯನ್ನು ದುರ್ಬಲಗೊಳಿಸಿತು. ಇದರ ಪರಿಣಾಮವಾಗಿ, ದೇಶದ ಅತ್ಯಂತ ದೊಡ್ಡ ಕಾರು ಉತ್ಪಾದಕ ಮಾರುತಿ ಸುಜುಕಿ, ಕಾರುಗಳ ಮಾರಾಟ ತೀವ್ರ ಕುಸಿದಿದೆ ಎಂಬ ಕಾರಣ ನೀಡಿ ತಮ್ಮ ಉತ್ಪಾದನೆಯನ್ನು 27% ಕಡಿತಗೊಳಿಸಿತು. ಎಂಟು ಪ್ರಮುಖ ಮೂಲಸೌಕರ್ಯ ಉದ್ದಿಮೆಗಳ ಬೆಳವಣಿಗೆ ಫೆಬ್ರವರಿ 2014 ರಿಂದ ಜನವರಿ 2019ರ ಅವಧಿಯಲ್ಲಿ 2.9% ಕುಸಿತ ಕಂಡಿತು. ಕೈಗಾರಿಕಾ ಉತ್ಪಾದನೆ ಸೂಚ್ಯಾಂಕವು(ಐಐಪಿ-ಇಂಡೆಕ್ಸ್ ಆಫ್ ಇಂಡಸ್ಟಿçಯಲ್ ಪ್ರೊಡಕ್ಷನ್) ತೀರ ಕೆಳಕ್ಕಿಳಿದು ನವಂಬರ್ 2018ರಲ್ಲಿ, ಆ ಹಿಂದಿನ ಏಳು ತಿಂಗಳ ಸರಾಸರಿ ಬೆಳವಣಿಗೆ 5.7% ಕ್ಕೆ ಹೋಲಿಸಿದರೆ -0.3% ಗೆ ಕುಸಿಯಿತು.

ದೇಶದ ರೂಪಾಯಿ ಅಪಮೌಲ್ಯ ಹೊಂದಿ ಐತಿಹಾಸಿಕ ಕೆಳ ಮಟ್ಟ ತಲುಪಿ, 2014ರಲ್ಲಿ ಒಂದು ಅಮೆರಿಕನ್ ಡಾಲರಿಗೆ 63.14 ಇದ್ದದ್ದು 2019ರಲ್ಲಿ 71.76 ಕ್ಕೆ ಏರಿದೆ.

ಭಾರತದ ರಫ್ತು ಆದಾಯದಲ್ಲಿ ಕೂಡ ಈ ಅವಧಿಯಲ್ಲಿ ತೀವ್ರ ಕುಸಿತ ಕಾಣ ಬಂದಿದೆ. 2014 ಫೆಬ್ರವರಿ ಮತ್ತು ಜನವರಿ 2019ರ ನಡುವಿನ ಅವಧಿಯಲ್ಲಿ ವಾಣಿಜ್ಯ ಶಿಲ್ಕು ಅಥವಾ ವ್ಯತ್ಯಾಸವು 29.8% ಭಾರಿ ಕುಸಿತ ಅನುಭವಿಸಿತು.

ಚಾಲ್ತಿ ಖಾತೆ ಕೊರತೆ(ಕರೆಂಟ್ ಅಕೌಂಟ್ ಡಿಫಿಸಿಟ್), ಅಂದರೆ ಭಾರತದ ಆಮದು ಮತ್ತು ರಫ್ತು ಮೌಲ್ಯಗಳ ನಡುವಿನ ಅಂತರವು ಈ ಐದು ವರ್ಷಗಳಲ್ಲಿ ಏರುಗತಿಯಲ್ಲೆÃ ಇದೆ. 2017-18ರಲ್ಲಿ ಜಿಡಿಪಿಯ 1.1% ಇದ್ದ ಕೊರತೆಯು 2018-19ರಲ್ಲಿ 2.9% ಗೆ ಏರಿದೆ. ಡಾಲರ್ ಲೆಕ್ಕದಲ್ಲಿ ಈ ಕೊರತೆಯ ಬೆಳವಣಿಗೆಯು 6.1 ಬಿಲಿಯನ್ ಇದ್ದದ್ದು 19.1 ಬಿಲಿಯನ್ ಡಾಲರಿಗೆ ಏರಿತು.

ಈ ಅವಧಿಯಲ್ಲಿ ಕೃಷಿ ಬೆಳವಣಿಗೆಯು ದಾಖಲೆಯ ಕೆಳ ಮಟ್ಟ ತಲುಪಿದೆ. ಕೃಷಿ ಬೆಳವಣಿಗೆ ದರವು 5.1% ನಿಂದ 2.7% ಗೆ ಇಳಿಯಿತು ಮತ್ತು ಇನ್ನೂ ಕುಸಿದು ಫೆಬ್ರವರಿ 2015 ಹಾಗೂ ಫೆಬ್ರವರಿ 2019ರ ನಡುವೆ 1.7 ಕ್ಕೆ ಇಳಿಯಿತು.(ಸಿ.ಎಸ್.ಒ). ಕಳೆದ ನಾಲ್ಕು ತ್ರೆöÊಮಾಸಿಕಗಳಲ್ಲಿ ನಾಲ್ಕನೇ ಸತತವಾದ ಋಣಾತ್ಮಕ ಬೆಳವಣಿಗೆ ದರ ದಾಖಲಾಗಿದೆ.

ಒಕ್ಕೂಟ ಸಂರಚನೆಯ ಮೇಲೆ ದಾಳಿಗಳು

ಕೇಂದ್ರ – ರಾಜ್ಯ ಸಂಬಂಧಗಳು ತೀವ್ರವಾಗಿ ಹದಗೆಟ್ಟಿವೆ.

ಜಿ.ಎಸ್.ಟಿ. ಜಾರಿಯಿಂದಾಗಿ ರಾಜ್ಯಗಳ ಆದಾಯ ಹೆಚ್ಚಿಸಿಕೊಳ್ಳುವ ಹಕ್ಕುಗಳು ಮೊಟಕಾಗಿವೆ.

ಯೋಜನಾ ಆಯೋಗದ ರದ್ದತಿಯಿಂದಾಗಿ ರಾಜ್ಯಗಳು ತಮ್ಮ ಆರ್ಥಿಕ ಯೋಜನೆ ಮತ್ತು ಉದ್ದೆÃಶಗಳ ಈಡೇರಿಕೆಗೆ ಸಮಾಲೋಚನೆ ನಡೆಸುವ ವೇದಿಕೆಯಿಂದ ವಂಚಿತವಾಗಿವೆ.

ಬಿಜೆಪಿಯೇತರ ರಾಜ್ಯ ಸಕಾರಗಳನ್ನು ಪರಿಚ್ಛೆÃದ 356 ರ ಅಡಿಯಲ್ಲಿ ಕಿತ್ತುಹಾಕಲಾಗುವುದೆಂಬ ಮೋದಿ ಸರ್ಕಾರದ ನಿರಂತರ ಬೆದರಿಕೆ.

ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆ ಆದಾಯವನ್ನು ಹಂಚಿಕೊಳ್ಳುವಲ್ಲಿ ಅಸಮಾನ ಹಾಗೂ ಅನ್ಯಾಯದ ಧೋರಣೆಯನ್ನು ಕಳೆದ ಐದು ವರ್ಷಗಳಲ್ಲಿ ನೋಡಿದ್ದೇವೆ.

ರಾಷ್ಟ್ರೀಯ ಭದ್ರತೆ

ಮೋದಿ ಸರ್ಕಾರದ ಜಮ್ಮು ಮತ್ತು ಕಾಶ್ಮೀರ ನೀತಿಯು ಕಣಿವೆಯ ಜನರನ್ನು ಮತ್ತೂ ದೂರತಳ್ಳುವ ಹಾನಿಯನ್ನು ಉಂಟುಮಾಡಿದೆ.

ಭಯೋತ್ಪಾದಕ ಘಟನೆಗಳು ತ್ವರಿತಗತಿಯಲ್ಲಿ ಬೆಳೆಯುತ್ತಿವೆ. 2009-14 ಮತ್ತು 2014-19ರ ನಡುವೆ, ಭಯೋತ್ಪಾದಕ ದಾಳಿಗಳು 109 ರಿಂದ 626 ರಷ್ಟು ಏರಿಕೆ ಕಂಡಿವೆ; ಪ್ರಾಣತೆತ್ತ ಭದ್ರತಾ ಸಿಬ್ಬಂದಿಗಳ ಸಂಖ್ಯೆ 139 ರಿಂದ 483 ಕ್ಕೆ ಏರಿದೆ; ಹತ್ಯೆಗೊಳಗಾದ ನಾಗರಿಕರ ಸಂಖ್ಯೆ 12 ರಿಂದ 210 ಕ್ಕೆ ಹೆಚ್ಚಿದೆ. ಮತ್ತು ಯುದ್ಧ ವಿರಾಮದ ಉಲ್ಲಂಘನೆಯ ಸಂಖ್ಯೆ 563 ರಿಂದ 5596ಕ್ಕೆ ಏರಿದೆ.

ಉಗ್ರಗಾಮಿ ಗುಂಪುಗಳನ್ನು ಸೇರುವ ಸ್ಥಳೀಯ ಯುವಜನರ ಸಂಖ್ಯೆ ಅಪಾಯಕರ ಮಟ್ಟ ತಲುಪಿದೆ. ಜೀವ ತೆತ್ತ ಸ್ಥಳೀಯ ಉಗ್ರಗಾಮಿಗಳ ಸಂಖ್ಯೆ 2014ರಲ್ಲಿ 16 ಇದ್ದದ್ದು 2018ರಲ್ಲಿ 191 ಆಗಿದೆ.

ಸಂಬಂಧಪಟ್ಟ ಎಲ್ಲರೊಂದಿಗೆ ರಾಜಕೀಯ ಸಂಧಾನ ಪ್ರಾರಂಭಿಸುವುದು ಮತ್ತು ವಿಶ್ವಾಸ ಮೂಡಿಸುವ ಕ್ರಮಗಳನ್ನು ಜಾರಿಮಾಡುವುದಾಗಿ ಕಾಶ್ಮಿÃರದ ಜನರಿಗೆ ನೀಡಿದ ಆಶ್ವಾಸನೆಗಳನ್ನು ಸರ್ಕಾರ ಈಡೇರಿಸದೆ ನಂಬಿಕೆದ್ರೊÃಹ ಎಸಗಿದೆ.

ಉರಿ ಭಯೋತ್ಪಾದಕ ದಾಳಿಯ ನಂತರ ನಡೆಸಿದ ಮಿಂಚಿನ ದಾಳಿ(ಸರ್ಜಿಕಲ್ ಸ್ಟೆçöÊಕ್)ಯಿಂದಲೂ ಗಡಿಯಲ್ಲಿನ ಭಯೋತ್ಪಾದಕ ದಾಳಿಗಳನ್ನು ಕೊನೆಗಾಣಿಸಲಾಗಿಲ್ಲ. ಪುಲ್ವಾಮಾದಂತಹ ದಾಳಿಗಳು ನಡೆಯುತ್ತಲೇ ಇವೆ.

ಪಾಕಿಸ್ತಾನದ ಒಳಗೆ ಬಾಲಾಕೋಟಿನಲ್ಲಿ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದ ನಂತರವೂ ಭಯೋತ್ಪಾದಕರ ದಾಳಿಯು ಮುಂದುವರಿದಿದ್ದು ನಮ್ಮ ಭದ್ರತಾ ಸಿಬ್ಬಂದಿಗಳ ಸಾವಿನಲ್ಲಿ ಪರ್ಯವಸಾನವಾಗುತ್ತಿದೆ.

ಇಡೀ ದೇಶ ಮತ್ತು ಎಲ್ಲಾ ವಿರೋಧ ಪಕ್ಷಗಳು ಭಯೋತ್ಪಾದನೆ ವಿರುದ್ಧ ಒಂದಾಗಿ ನಿಂತಿರುವಾಗ, ಬಿಜೆಪಿ-ಆರ್.ಎಸ್.ಎಸ್. ಈ ವಿಷಯವನ್ನು ರಾಜಕೀಯಗೊಳಿಸುವ ನೀಚ ಕೃತ್ಯದಲ್ಲಿ ನಿರತವಾಗಿವೆ.

ವಿದೇಶಾಂಗ  ನೀತಿ

ಭಾರತದ  ಸ್ವತಂತ್ರ ವಿದೇಶಾಂಗ ನೀತಿಯನ್ನು ತ್ಯಜಿಸಿದ್ದರ ಮುಖ್ಯಾಂಶಗಳು:

ಅಮೇರಿಕಾದ ಜಾಗತಿಕ ಆಯಕಟ್ಟಿನ ಹಿತಾಸಕ್ತಿಗಳಿಗೆ ಹೊಂದಿಕೊಳ್ಳುವ ಸಲುವಾಗಿ ವಿದೇಶ ನೀತಿಯ ದಿಕ್ಕನ್ನು ಬದಲಿಸಿ, ಭಾರತವನ್ನು  ಅಮೇರಿಕನ್ ಸಾಮ್ರಾಜ್ಯಶಾಹಿಯ ಒಬ್ಬ ಕಿರಿಯ ಪಾಲುದಾರನ ಮಟ್ಟಕ್ಕೆ ಇಳಿಸಲಾಗಿದೆ.

ಅಕ್ಕ ಪಕ್ಕದ ಎಲ್ಲ ದೇಶಗಳೊಂದಿಗೆ ನಮ್ಮ ಸ್ನೇಹ ಸಂಬಂಧಗಳು ಹದಗೆಡುತ್ತಿವೆ.

ಮಿಲಿಟರಿ ಆಕ್ರಮಣವೂ ಸೇರಿದಂತೆ ಅಮೆರಿಕನ್ ಸಾಮ್ರಾಜ್ಯಶಾಹಿಯಿಂದ ಸಾರ್ವಭೌಮತೆಯ ಮೇಲೆ ದಾಳಿಗೆ ಒಳಗಾದ ದೇಶಗಳ ಜನತೆಯೊಂದಿಗಿನ ಭಾರತದ ಪಾರಂಪರಿಕ ಸೌಹಾರ್ದತೆ ಕಣ್ಮರೆಯಾಗಿದೆ. ವೆನಿಜು?ಏಲಾ ಪ್ರಕರಣವು ಇದಕ್ಕೆ ಇತ್ತಿÃಚಿನ ನಿದರ್ಶನ.

ದೇಶದ ರಕ್ಷಣಾ ಸ್ಥಾವರಗಳನ್ನು ಅಮೇರಿಕಾದ ಬಳಕೆಗೆ ತೆರೆದಿಟ್ಟಿರುವುದು ಮತ್ತು ಅಮೆರಿಕನ್ ಸಾಮ್ರಾಜ್ಯಶಾಹಿಯ ಒಬ್ಬ  ಪ್ರಧಾನ  ರಕ್ಷಣಾ ಪಾಲುದಾರನಂತೆ ಅದರೊಂದಿಗೆ ಕೈ ಜೋಡಿಸಿರುವುದು.

2014ರ ಎಲ್ಲ ಆಶ್ವಾಸನೆಗಳ ಭಂಡ ವಿಶ್ವಾಸಘಾತ

ಬಿಜೆಪಿ, ನಿರ್ದಿಷ್ಟವಾಗಿ ನರೇಂದ್ರ ಮೋದಿ ಭಾರತದ ಜನತೆಗೆ ಕೊಟ್ಟಿದ್ದ ಪ್ರತಿಯೊಂದು ಆಶ್ವಾಸನೆಯೂ ಈ  ಐದು ವರ್ಷಗಳಲ್ಲಿ ಹುಸಿಯಾಗಿದೆ – ಪ್ರತಿ ವರ್ಷವೂ ಎರಡು ಕೋಟಿಯಂತೆ ಐದು ವರ್ಷಗಳಲ್ಲಿ ಹತ್ತು ಕೋಟಿ ಉದ್ಯೊÃಗ ಸೃಷ್ಠಿ; ರೈತರಿಗೆ ಉತ್ಪಾದನಾ ವೆಚ್ಚದ 1.5 ರಷ್ಟು ಕನಿಷ್ಠ ಬೆಂಬಲ ಬೆಲೆ ಕೊಡುವುದು; ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂಗಳನ್ನು ಜಮಾ ಇತ್ಯಾದಿ ಇತ್ಯಾದಿ.;

ಈ ಘೋರ ದಾಖಲೆಯಿಂದಾಗಿ, ಈ  ಮೋದಿ ಸರಕಾರ ಕೊಟ್ಟ ಭರವಸೆಗಳು ಮತ್ತು ಅವುಗಳನ್ನು ಈಡೇರಿಸದಿರುವ ಬಗ್ಗೆ  ಈ ಚುನಾವಣೆಯ ಸಂದರ್ಭದಲ್ಲಿ ಉತ್ತರ  ಕೇಳಬೇಕಾಗಿದೆ.

ಆದರೆ, ಅತ್ಯಂತ ಮಹತ್ವದ ಸಂಗತಿಯೆಂದರೆ, ಈ ಚುನಾವಣೆಗಳು ಸ್ವತಂತ್ರ ಭಾರತದ ಇತಿಹಾಸದಲ್ಲೆÃ ಅತಿ ನಿರ್ಣಾಯಕವಾಗಿ ಪರಿಣಮಿಸಿವೆ. ಇದು ನಮ್ಮ ಜಾತ್ಯತೀತ  ಜನತಾಂತ್ರಿಕ ಸಾಂವಿಧಾನಿಕ ವ್ಯವಸ್ಥೆಯ ಭವಿಷ್ಯವನ್ನು ನಿರ್ಧರಿಸುತ್ತದೆ.

ನಮ್ಮ ಸಾಂವಿಧಾನಿಕ ಗಣತಂತ್ರವನ್ನು ರಕ್ಷಿಸಬೇಕು ಮತ್ತು  ಅದನ್ನು ಮತ್ತಷ್ಟು ಕ್ರೊÃಡೀಕರಿಸಬೇಕು ಹಾಗೂ ಒಂದು ತೀವ್ರಗಾಮಿ ಜನಪರವಾದ ನಿಟ್ಟಿನಲ್ಲಿ ನೀತಿಗಳನ್ನು ಬದಲಿಸಬೇಕು ಎಂದಾದರೆ ಬಿಜೆಪಿ ಮತ್ತು ಅದರ ಮಿತ್ರ ಕೂಟವನ್ನು ಸೋಲಿಸುವುದು ನಮ್ಮ ಆದ್ಯ ಕರ್ತವ್ಯವಾಗುತ್ತದೆ.

ಅ) ಬಿಜೆಪಿ ಮೈತ್ರಿಕೂಟವನ್ನು ಸೋಲಿಸಬೇಕು

ಆ) ಲೋಕಸಭೆಯಲ್ಲಿ ಸಿಪಿಐ(ಎಂ) ಮತ್ತು ಎಡಪಕ್ಷಗಳ ಬಲವನ್ನು ಹೆಚ್ಚಿಸಬೇಕು ಮತ್ತು

ಇ) ಕೇಂದ್ರದಲ್ಲಿ ಒಂದು ಪರ್ಯಾಯ ಜಾತ್ಯತೀತ ಸರಕಾರ ರಚಿಸಲಾಗುವಂತೆ ಮಾಡಬೇಕು

      ಎಂದು ಸಿಪಿಐ(ಎಂ) ಭಾರತೀಯ ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತದೆ.

ಭಾಗ – 2

ಪರ್ಯಾಯ ನೀತಿಗಳು

ದೇಶಕ್ಕೆ ಮತ್ತು ಜನರಿಗೆ ಅಗತ್ಯವಿರುವುದು, ಆರ್ಥಿಕ ಬೆಳವಣಿಗೆ ಮತ್ತು ಒಟ್ಟು ಅಭಿವೃದ್ಧಿಯ ಒಂದು ಪರ್ಯಾಯ ದಿಕ್ಪಥ ಮತ್ತು ಒಟ್ಟಾರೆ ಅಭಿವೃದ್ಧಿ ಎಂಬುದು ಸ್ಪಷ್ಟವಾಗಿದೆ. ಇದನ್ನು ಬಿಜೆಪಿಯು ಈಗ ಅನುಸರಿಸುತ್ತಿರುವ ಆರ್ಥಿಕ ನೀತಿಗಳನ್ನು ಮತ್ತು ಕೋಮುವಾದಿ ಧೃವೀಕರಣವನ್ನು ಹರಿತಗೊಳಿಸುವ ಅದರ ಅಜೆಂಡಾವನ್ನು ತಿರಸ್ಕರಿಸಿ, ಜನ-ಪರ ನೀತಿಗಳತ್ತ ಒಂದು ನೀತಿ ಪಲ್ಲಟದ ಆಧಾರದಲ್ಲಿ ಮಾತ್ರವೇ ಸಾಧಿಸಲು ಸಾಧ್ಯ.

ಭಾರತದಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ. ಈಗ ಚಮಚಾ ಬಂಡವಾಳಶಾಹಿ ಮತ್ತು  ರಫೇಲ್ ವಿಮಾನ ವ್ಯವಹಾರದ  ರೀತಿಯ ಭ್ರಷ್ಟಾಚಾರದ ಹಗರಣಗಳ ಮೂಲಕ ಆಗುತ್ತಿರುವ ನಮ್ಮ ಸಂಪನ್ಮೂಲಗಳ ಕೊಳ್ಳೆಯನ್ನು ನಿಲ್ಲಿಸಿದರೆ, ದೇಶದ ಪ್ರತಿ ನಾಗರಿಕರಿಗೂ ಶಿಕ್ಷಣ, ಗುಣಮಟ್ಟದ ಆರೋಗ್ಯ ಪಾಲನೆ, ಉದ್ಯೊÃಗ ಮತ್ತು ಒಂದು ಘನತೆಯ ಜೀವನೋಪಾಯ ಒದಗಿಸಲು ಸಾಕಾಗುವಷ್ಟು ಸಂಪನಮೂಲಗಳು ಲಭ್ಯ ಇವೆ. ಇದು ಕೈಗೂಡಬೇಕು ಎಂದಾದರೆ, ನಮ್ಮ ಧೋರಣೆಯ ದಿಕ್ಕಿನಲ್ಲಿ ಒಂದು ತೀವ್ರÀ ಪಲ್ಲಟ ಆಗಬೇಕಾಗಿದ್ದು ಅದನ್ನು ಖಾತ್ರಗೊಳಿಸಬೇಕಾಗಿದೆ.

ಮುಖ್ಯಾಂಶಗಳು

  1. ಸಿಪಿಐ(ಎಂ) ಜಾರಿಗೊಳಿಸಲು ಕಟಿಬದ್ಧವಾಗಿರುವ ಇಂತಹ ಒಂದು  ಪರ್ಯಾಯ ನೀತಿಗಳ ನೆಲೆಗಟ್ಟಿನ ಮುಖ್ಯಾಂಶಗಳು ಹೀಗಿವೆ:
  2. ಭಾರತದ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಜಾತ್ಯತೀತ ತತ್ವ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ.
  3. ತಮ್ಮ ಉತ್ಪತ್ತಿಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ, ಅಂದರೆ, ಉತ್ಪಾದನಾ ವೆಚ್ಚಕ್ಕಿಂತ ಶೇ.50ರಷ್ಟಾದರೂ ಹೆಚ್ಚಿನ ಮಟ್ಟದಲ್ಲಿ ಮಾರುವ ರೈತರ ಹಕ್ಕನ್ನು ಜಾರಿಗೊಳಿಸುವುದು.
  4. ಕನಿಷ್ಠ ಕೂಲಿಯು 18,000 ರೂಗಳಿಗೆ ಕಡಿಮೆ ಇಲ್ಲದಂತೆ ಶಾಸನಬದ್ಧಗೊಳಿಸುವದು ಮತ್ತು ಕೂಲಿಯನ್ನು ಬಳಕೆದಾರ ಬೆಲೆ ಸೂಚ್ಯಂಕದೊಂದಿಗೆ ಜೋಡಿಸುವುದು.
  5. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಒಂದು ಕೆ.ಜಿ ಗೆ 2 ರೂಪಾಯಿ ಗರಿಷ್ಟ ಬೆಲೆಯಲ್ಲಿ ಪ್ರತಿ ಕುಟುಂಬಕ್ಕೆ 35 ಕೆ.ಜಿ ಅಥವಾ ಪ್ರತಿ ವ್ಯಕ್ತಿಗೆ 7 ಕೆ.ಜಿ ಧಾನ್ಯಗಳನ್ನು ಸಾರ್ವತ್ರಿಕವಾಗಿ ಸರಬರಾಜು ಮಾಡುವುದು.
  6. ಉಚಿತ ಆರೋಗ್ಯ ಪಾಲನೆಯ ಹಕ್ಕು; ಖಾಸಗಿ ವಿಮಾ ಕಂಪೆನಿಗಳ ಹಿಡಿತದಲ್ಲಿರುವ ಆರೋಗ್ಯ ಪಾಲನಾ ಯೋಜನೆಯನ್ನು ಕೊನೆಗೊಳಿಸುವುದು; ಆರೋಗ್ಯದ ಮೇಲಿನ ಸಾರ್ವಜನಿಕ ವೆಚ್ಚವನ್ನು ಜಿಡಿಪಿಯ ಶೇ.5ರಷ್ಟು ಮಟ್ಟಕ್ಕೆ ಏರಿಸುವುದು.
  7. ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಮೂರನೆ ಒಂದು ಭಾಗ ಮೀಸಲಾತಿಯನ್ನು ಜಾರಿಗೊಳಿಸುವುದು; ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನುಕೊನೆಗೊಳಿಸಲು ಸಮಗ್ರ ಕ್ರಮಗಳನ್ನು  ಜರುಗಿಸುವುದು.
  8. ಸಾರ್ವಜನಿಕ ಶಿಕ್ಷಣ – ಶಾಲಾ ಮತ್ತು ಉನ್ನತ ಶಿಕ್ಷಣ – ವ್ಯವಸ್ಥೆಯ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಿ ವ್ಯಾಪಕವಾಗಿ ವಿಸ್ತರಿಸುವುದು; ಶಿಕ್ಷಣದ ಮೇಲಿನ ಸಾರ್ವಜನಿಕ ವೆಚ್ಚವನ್ನು ಜಿಡಿಪಿಯ ಶೇ.6ರಷ್ಟು ಮಟ್ಟಕ್ಕೆ ಏರಿಸುವುದು; ಕೋಮುವಾದೀಕರಣದಿಂದ ಶಿಕ್ಷಣ ವ್ಯವಸ್ಥೆಯನ್ನು ಮುಕ್ತಗೊಳಿಸುವುದು ಮತ್ತು ಅದರ ಪ್ರಜಾಪ್ರಭುತ್ವ ಸ್ವರೂಪವನ್ನು ಖಾತ್ರಿಗೊಳಿಸುವುದು.
  9. ಉದ್ಯೋಗದ ಹಕ್ಕು ಒಂದು ಸಂವಿಧಾನಾತ್ಮಕ ಹಕ್ಕಾಗಿಸುವುದು; ಕೆಲಸ ಇಲ್ಲದವರಿಗೆ ನಿರುದ್ಯೊÃಗ ಭತ್ಯೆ ಒದಗಿಸುವುದು.
  10. ಎಲ್ಲ ಹಿರಿಯ ನಾಗರಿಕರಿಗೆ ಕನಿಷ್ಠ ಕೂಲಿಯ ಅರ್ಧಕ್ಕಿಂತ ಕಡಿಮೆ ಇಲ್ಲದಷ್ಟು ಅಥವಾ 6,000 ರೂಗಳು, ಈ ಎರಡರಲ್ಲಿ ಯಾವುದು ಹೆಚ್ಚೊÃ ಆ ಮೊತ್ತದ  ವೃದ್ಧಾಪ್ಯ ವೇತನ .
  11. ಸಾರ್ವಜನಿಕ ಚಲಯದ ಉದ್ದಿಮೆಗಳ ಖಾಸಗೀಕರಣವನ್ನು ನಿಲ್ಲಿಸುವುದು ಮತ್ತು ರಕ್ಷಣೆ, ಇಂಧನ, ರೈಲ್ವೆ ಮತ್ತಿತರ ಮೂಲ ಸೇವೆಗಳಲ್ಲಿ ಆಗಿರುವ ಖಾಸಗೀಕರಣವನ್ನು ಹಿಂದಿನ ಸ್ಥಿತಿಗೆ ಮರಳಿಸುವುದು.
  12. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ಖಾಸಗಿ ವಲಯದ ಉದ್ಯೊÃಗಗಳಲ್ಲಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕೆಗೆ ಮೀಸಲಾತಿ ಕಲ್ಪಿಸುವುದು.
  13. ಶ್ರೀಮಂತರು ಮತ್ತು ಕಾರ್ಪೊರೇಟ್‌ಗಳ ಮೇಲಿನ ತೆರಿಗೆಯನ್ನು ಹೆಚ್ಚಿಸುವುದು; ಅತಿ ಶ್ರೀಮಂತರ ಮೇಲೆ  ಮೊದಲಿದ್ದಂತೆ ಸಂಪತ್ತು ತೆರಿಗೆ ವಿಧಿಸುವುದು ಮತ್ತು ವಾರಸುದಾರಿಕೆ ತರಿಗೆಯನ್ನು ಆರಂಭಿಸುವುದು ಹಾಗೂ ದೀರ್ಘಾವದಿ ಬಂಡವಾಳ ಗಳಿಕೆ ತರಿಗೆಯನ್ನು ಮತ್ತೆ ತರುವುದು
  14. ಆನುಪಾತಿಕ ಪ್ರಾತಿನಿಧ್ಯವನ್ನು, ಭಾಗಶಃ  ಪಟ್ಟಿ ಪದ್ಧತಿಯೊಂದಿಗೆ ಜಾರಿಗೆ ತಂದು ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು; ಚುನಾವಣಾ ಬಾಂಡ್‌ಗಳನ್ನು ರದ್ದುಪಡಿಸುವುದು; ಅಭ್ಯರ್ಥಿಗಳ ಚುನಾವಣಾ ವೆಚ್ಚಗಳನ್ನು ಸಾಮಗ್ರಿಗಳ ರೂಪದಲ್ಲಿ ಸರ್ಕಾರವೇ ಭರಿಸುವುದು.

ಜಾತ್ಯತೀತತೆಯ ರಕ್ಷಣೆಯಲ್ಲಿ

ಧರ್ಮವನ್ನು ರಾಜಕೀಯದಿಂದ ಪ್ರತ್ಯೇಕಿಸಬೇಕು ಮತ್ತು ಈ ಅಂಶವನ್ನು ಪರಿಣಾಮಕಾರಿಯಾಗಿಸಲು ಅಗತ್ಯವಿರುವ ಶಾಸನಾತ್ಮಕ ಕ್ರಮಗಳನ್ನು ಅಂಗೀಕರಿಸಬೇಕು ಮತ್ತು ಜಾರಿಗೊಳಿಸಬೇಕು ಎಂಬುದು ಸಿಪಿಐ(ಎಂ) ನಿಲುವು.  ಕೋಮುವಾದಿ ಹಿಂಸಾಚಾರವನ್ನು ದೃಢವಾಗಿ ನಿರ್ವಹಿಸಬೇಕು. ಎಲ್ಲ ವಲಯಗಳಲ್ಲೂ ಜಾತ್ಯತೀತ ಮೌಲ್ಯಗಳನ್ನು ಸರ್ಕಾರವು ಪ್ರೋತ್ಸಾಹಿಸಬೇಕು.

ಸಿಪಿಐ(ಎಂ) ಈ ನಿಟ್ಟಿನಲ್ಲಿ ದುಡಿಯುತ್ತದೆ:

ಆಯಕಟ್ಟಿನ ಹುದ್ದೆಗಳಲ್ಲಿ ಬಿಜೆಪಿ ಸರ್ಕಾರವು ನೇಮಿಸಿರುವ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ವಜಾಮಾಡುವುದು.

ಕೋಮುವಾದಿ ಹಿಂಸಾಚಾರದ ವಿರುದ್ಧವಾಗಿ ಒಂದು ಸಮಗ್ರ ಕಾನೂನು ರೂಪಿಸುವುದು; ಕೋಮುವಾದಿ ಹಿಂಸಾಚಾರಕ್ಕೆ ಗುರಿಯಾದವರಿಗೆ ಶೀಘ್ರವಾಗಿ ನ್ಯಾಯ ಮತ್ತು ಸಾಕಷ್ಟು ಪರಿಹಾರವನ್ನು ಒದಗಿಸುವುದು ಮತ್ತು ಪ್ರಭುತ್ವದ ಬೆಂಬಲವನ್ನು ಒಕ್ಕೂಟ ವ್ಯವಸ್ಥೆಯ ಚೌಕಟ್ಟಿಗೆ ಧಕ್ಕೆಯಾಗದಂತೆ ಒದಗಿಸುವುದು.

ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಗೋರಕ್ಷಣೆಯ ಹೆಸರಿನಲ್ಲಿ ದಾಳಿಮಾಡುತ್ತಿರುವ ಮತ್ತು ಕೋಮು ದ್ವೇಷ ಹರಡುವ ಎಲ್ಲ ಕಾನೂನುಬಾಹಿರ ಖಾಸಗಿ ಪಡೆಗಳನ್ನು, ವಿವಿಧ ‘ಸೇನಾ’ಗಳ ಹೆಸರಿನ ಕಾವಲುಕೊರ ಗುಂಪುಗಳನ್ನು ತಕ್ಷಣವೇ ನಿಷೇಧಿಸುವುದು. ಕೋಮು ದ್ವೇಷ ಹರಡುವುದರ ಮೇಲೆ ಮತ್ತು ಅಲ್ಪಸಂಖ್ಯಾತರ ಮೇಲೆ ದಾಳಿಗಳ ಮೇಲೆ ಲಗಾಮು ಹಾಕಲು ಮತ್ತು ಕ್ರಮ ಕೈಗೊಳ್ಳಲು ಸೂಕ್ತ ಕಾನೂನು ಕ್ರಮಗಳನ್ನು ರೂಪಿಸುವುದು ಮತ್ತು ಸಾರ್ವಜನಿಕವಾಗಿ ಸಾಯ ಹೊಡೆಯುವುದರ(ಲಿಂಚಿಂಗ್) ವಿರುದ್ಧ ಕಾನೂನು ರೂಪಿಸುವುದು.

ಕೋಮುವಾದಿ ಹಿಂಸೆಯಲ್ಲಿ ತೊಡಗುವವರಿಗೆ, ಅವರ ಸಾರ್ವಜನಿಕ ಅಥವಾ ಅಧಿಕೃತ ಹುದ್ದೆಯನ್ನು ಲೆಕ್ಕಿಸದೆ, ಬೇರೆಯವರಿಗೆ ಎಚ್ಚರಿಕೆ ಕೊಡುವ ರೀತಿಯ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು.

ಯಾವುದೇ ಭಯ ಅಥವಾ ತಾರತಮ್ಯವಿಲ್ಲದ ಮತ್ತು ಗೌರವಯುತ ಹಾಗೂ ಸಮಾನತೆಯ ಜೀವನ ನಡೆಸುವ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವುದು.

ಎಲ್ಲ ಶಾಲಾಪಠ್ಯಗಳಲ್ಲಿ ಕೋಮುವಾದಿ ಪಕ್ಷಪಾತ ಮತ್ತು ಪೂರ್ವಗ್ರಹಗಳನ್ನು ಬಿಂಬಿಸುವ ಅಂಶಗಳನ್ನು ವರ್ಜಿಸುವುದು.

ಸಂವಿಧಾನ ಮತ್ತು ಜನತಾಂತ್ರಿಕ ಹಕ್ಕುಗಳ ರಕ್ಷಣೆಯಲ್ಲಿ

ಯಾವುದೇ ಅಂತಾರಾಷ್ಟ್ರೀಯ ಒಡಂಬಡಿಕೆಗಳಿಗೆ ಕಡ್ಡಾಯವಾಗಿ ಪಾರ್ಲಿಮೆಂಟಿನ ಒಪ್ಪಿಗೆ ಪಡೆಯುವಂತೆ ಸಂವಿಧಾನಕ್ಕೆ ತಿದ್ದುಪಡಿ ತರುವುದು.

ವಸಾಹತು ಕಾಲದ ‘ರಾಜದ್ರೋಹ ಕಾಯ್ದೆ’ಯನ್ನು ಮತ್ತು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಕಲಂ 124ಎ ರದ್ದುಪಡಿಸುವುದು.

‘ಸಶಸ್ತç ಪಡೆಗಳ ವಿಶೇಷ ಅಧಿಕಾರ ಕಾಯ್ದೆ’(ಎಎಫ್‌ಎಸ್‌ಪಿಎ)ಯನ್ನು ರದ್ದುಮಾಡಿ ಅದರ ಸ್ಥಾನದಲ್ಲಿ ಸಶಸ್ತç ಪಡೆಗಳ ಕಾರ್ಯಾಚರಣೆಗೆ ಅವಶ್ಯವಾದ ಮತ್ತು ಕರಾಳ ಕಟ್ಟಳೆಗಳಿಲ್ಲದ ಒಂದು ಸೂಕ್ತವಾದ ಕಾನೂನು ಚೌಕಟ್ಟು ರೂಪಿಸುವುದು.

‘ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ)ಯನ್ನು ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯನ್ನು ರದ್ದುಪಡಿಸುವುದು/ತಿದ್ದುಪಡಿ ಮಾಡುವುದು.

ಮಾನಹಾನಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಕಲಂ 499 ರದ್ದುಪಡಿಸುವುದು.

ಚಿತ್ರಹಿಂಸೆ ಮತ್ತು ಇತರ ಕ್ರೂರ, ಅಮಾನವೀಯ, ಮಾನವ ಘನತೆಗೆ ಚ್ಯುತಿಯಾಗುವ ನಡವಳಿಕೆ ಅಥವಾ ಶಿಕ್ಷೆಗಳ ಬಗ್ಗೆ ಅಂತಾರಾಷ್ಟಿçÃಯ ಒಡಂಬಡಿಕೆಗಳನ್ನು ಊರ್ಜಿತಗೊಳಿಸುವುದು

ಮರಣದಂಡನೆಯನ್ನು ಕಾನೂನು ಗ್ರಂಥಗಳಿಂದ ತೆಗೆಯಲು ಭಾರತೀಯ ದಂಡ ಸಂಹಿತೆ ಮತ್ತು ಇತರ ಶಾಸನಗಳಿಗೆ ತಿದ್ದುಪಡಿ ಮಾಡುವುದು.

ಸೇವೆಗಳು ಮತ್ತು ದೂರು ನಿವಾರಣೆಗಳನ್ನು  ಸಮಯಬದ್ಧವಾಗಿ ಒದಗಿಸುವುದನ್ನು ಖಚಿತಗೊಳಿಸಲು ನಾಗರಿಕರ ಸನ್ನದು ಮತ್ತು ದೂರು ನಿವಾರಣೆ ಕಾಯ್ದೆಯನ್ನು ರೂಪಿಸುವುದು.

ಸಾರ್ವಜನಿಕ ಕಾರ್ಯಕ್ರಮಗಳ ಪರಿಣಾಮಗಳು ನಿರ್ವಹಣೆಯ  ಮೌಲ್ಯಮಾಪನ ಮಾಡಲು ಸಾಮಾಜಿಕ ಲೆಕ್ಕ ಪರಿಶೋಧನೆ ಮತ್ತು ಜವಾಬುದಾರಿಕೆಯನ್ನು ಕಡ್ಡಾಯಗೊಳಿಸುವಂತಹ ಶಾಸನವನ್ನು ರೂಪಿಸಿ ಅದನ್ನು  ಸರ್ಕಾರದ ಆಡಳಿತದ ಎಲ್ಲ ವಲಯಗಳಿಗೂ ವಿಸ್ತರಿಸುವುದು ಮತ್ತು ಸರ್ಕಾರವು ಜನಾದೇಶಕ್ಕೆ ಉತ್ತರದಾಯಿಯಾಗಿರುವಂತೆ ಮಾಡಲು ಪ್ರತಿ ನಾಗರಿಕರನ್ನು ಸಬಲೀಕರಿಸುವುದು.

ಎಲ್ಲ ಸಮಾಜ ಕಲ್ಯಾಣ ಕ್ರಮಗಳಿಗೆ ಆಧಾರ್ ಮತ್ತು ಬಯೋಮೆಟ್ರಿಕ್ಸ್ ಬಳಕೆಯನ್ನು ರದ್ದುಮಾಡುವುದು.

ಪರ್ಯಾಯ ಆರ್ಥಿಕ ನೀತಿಗಳು

ಬೆಳವಣಿಗೆಯ ಒಂದು ಪರ್ಯಾಯ ದಿಕ್ಪಥ

ಸಿಪಿಐ(ಎಂ) ಈ ಕೆಳಗಿನ ಆರ್ಥಿಕ ನೀತಿಗಳಿಗಾಗಿ ದುಡಿಯುತ್ತದೆ:

  • ಯೋಜನಾ ಆಯೋಗವನ್ನು ಪುನಃ ಸ್ಥಾಪಿಸುವುದು.
  • ಪೂರ್ಣ ಉದ್ಯೋಗ ಸೃಷ್ಟಿಸುವತ್ತ ಬೆಳವಣಿಗೆಯನ್ನು ಉದ್ಯೋಗಾವಕಾಶ ನಿರ್ಮಾಣದೊಂದಿಗೆ ಸಮಗ್ರೀಕರಿಸುವುದು ಮತ್ತು ಜನಗಳ ಕೈಯಲ್ಲಿ ಹಣ ಹರಿದಾಡುವಂತಾಗಿ ಬೇಡಿಕೆಗೆ ಉತ್ತೇಜನೆ ಒದಗಿಸುವುದು.
  • ಶ್ರೀಮಂತರು, ಕಾರ್ಪೊರೇಟ್‌ಗಳ ಲಾಭ ಮತ್ತು ಐಶಾರಾಮಿ ಸರಕುಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಸಂಪನ್ಮೂಲ ನೆಲೆಯನ್ನು ವಿಸ್ತರಿಸುವುದು.
  • ಕೃಷಿ ಉತ್ಪಾದನೆ, ಸಂಶೋಧನೆ ಮತ್ತು ನೀರಾವರಿ ಕಾರ್ಯಗಳಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು.
  • ಭೌತಿಕ ಮತ್ತು ಸಾಮಾಜಿಕ ಮೂಲ ಸೌಕರ್ಯಗಳಾದ ವಿದ್ಯುಚ್ಛಕ್ತಿ, ಸಾರ್ವಜನಿಕ ಸಾರಿಗೆ, ಬಂದರುಗಳು, ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಆಸ್ಪತ್ರೆಗಳ ಮೇಲೆ ಸಾರ್ವಜನಿಕ ಹೂಡಿಕೆಗಳಿಗೆ  ಸಂಪನ್ಮೂಲಗಳನ್ನು ಸಮರ್ಪಕವಾಗಿ ಒದಗಿಸುವುದು.
  • ತಾಳಿಕೆಯಿಲ್ಲದ ಐಶಾರಾಮಿ ಸರಕುಗಳಿಗೆ ಬದಲಾಗಿ ಸಾಮೂಹಿಕ ಬಳಕೆಯ ಸರಕುಗಳ ಉತ್ಪಾದನೆಗೆ ಅನುಕೂಲ ಮಾಡಿಕೊಡುವುದು.
  • ಬೀಜ, ಗೊಬ್ಬರ, ವಿದ್ಯುಚ್ಛಕ್ತಿ/ಡೀಸೆಲ್‌ನಂತಹ ಲಾಗುವಾಡುಗಳಿಗೆ ಸಾರ್ವಜನಿಕ ಹಣ ಮತ್ತು ಸಬ್ಸಿಡಿ ಒದಗಿಸುವುದು.
  • ಹೆಚ್ಚು ಉದ್ಯೋಗ ಸೃಷ್ಠಿಸುವ ಸಣ್ಣ ಮತ್ತು ಮಧ್ಯಮ ಘಟಕಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಂತಹ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರೋತ್ಸಾಹ ಒದಗಿಸುವುದು.
  • ‘ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ’(ಎಫ್‌ಆರ್‌ಬಿ ಆಕ್ಟ್)ಯ ರದ್ದತಿ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡಬೇಕಾದ ಸಾಮಾಜಿಕ ವಲಯದ ಖರ್ಚುಗಳಿಗೆ ಒಂದು ಕನಿಷ್ಠ ಮಟ್ಟ ನಿಗದಿಪಡಿಸುವುದು.
  • ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಸರ್ಕಾರದ ಇಕ್ವಿಟಿ ಮತ್ತಷ್ಟು ಕಡಿಮೆಯಾಗದಂತೆ ತಡೆಯುವುದು ಮತ್ತು ಸಾರ್ವಜನಿಕ ವಲಯದಲ್ಲಿ ಬ್ಯಾಂಕಿಂಗ್ ಮತ್ತು ವಿಮೆಯನ್ನು ಬಲಗೊಳಿಸುವುದು, ಅವುಗಳಿಂದ ಆದ್ಯತಾ ವಲಯಗಳಿಗೆ ಸಾಲನೀಡಿಕೆಯ ಮಾನದಂಡಗಳ ಕಟ್ಟುನಿಟ್ಟಿನ ಪಾಲನೆ.
  • ಹಣಕಾಸು ವಲಯದ ಎಲ್ಲ ನಿಯಂತ್ರಣ ಸಂಸ್ಥೆಗಳೂ ಕಡ್ಡಾಯವಾಗಿ ಸಂಸತ್ತಿಗೆ ಮತ್ತು ಶಾಸನಾತ್ಮಕ ಉಸ್ತುವಾರಿಗೆ  ಉತ್ತರದಾಯಿಯಾಗಿರುವಂತೆ ಕಡ್ಡಾಯಗೊಳಿಸುವುದು.
  • ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹತ್ವವುಳ್ಳ ತೀರ್ಮಾನಗಳನ್ನು ಕೈಗೊಳ್ಳುವಾಗ ರಾಜ್ಯ ಸರ್ಕಾರಗಳನ್ನೂ ಒಳಗೊಳ್ಳುವುದು ಮತ್ತು ರಾಜ್ಯಗಳ ನಿರ್ಣಯ ಕೈಗೊಳ್ಳುವ ಅಧಿಕಾರಗಳ ಮರುಸ್ಥಾಪನೆ ಹಾಗೂ  ಸಂಪನ್ಮೂಲಗಳನ್ನು ಎತ್ತಲು ರಾಜ್ಯಗಳಿಗೆ ಹೆಚ್ಚಿನ ಹಣಕಾಸು  ಅಮುಕೂಲಗಳು ಇರುವಂತೆ ಮಾಡುವುದು.

ಸಂಪನ್ಮೂಲಗಳ ಸಂಗ್ರಹಣೆ

ಈ ಉದ್ದೇಶಕ್ಕಾಗಿ ಸಿಪಿಐ(ಎಂ) ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುತ್ತದೆ:

ದೀರ್ಘಾವಧಿ ಹೂಡಿಕೆಯಿಂದ ಗಳಿಸಿದ ಲಾಭದ ಮೇಲೆ ತೆರಿಗೆ ಮತ್ತು ಷೇರು ವ್ಯವಹಾರಗಳ ಮೇಲೆ ತೆರಿಗೆ ಪುನಃ ವಿಧಿಸುವ ಮೂಲಕ ಸಟ್ಟಾಕೋರ ಬಂಡವಾಳ ಗಳಿಕೆಗಳ ಮೇಲೆ ತೆರಿಗೆ ವಸೂಲಿ.

ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳಲು ವಿದೇಶಗಳಿಗೆ ಪಲಾಯನಗೈದ ಎಲ್ಲ ಬ್ಯಾಂಕ್ ಸಾಲಗಳ ಸುಸ್ತಿದಾರರನ್ನು ಎಳೆದು ತಂದು ಅವರನ್ನು ಶಿಕ್ಷೆಗೆ ಗುರಿಪಡಿಸಿ ಅವರು ಕೊಳ್ಳೆ ಹೊಡೆದ ಹಣವನ್ನು ಬಡ್ಡಿ ಸಮೇತ ವಸೂಲು ಮಾಡುವುದು.

ಹಿಂದೆ ಜಾರಿಯಲ್ಲಿದ್ದ ಸಂಪತ್ತು ತೆರಿಗೆಯನ್ನು ಅತಿ ಶ್ರೀಮಂತರು ಹೊಂದಿರುವ  ಸಂಪತ್ತಿನ ಮೇಲೆ ವಿಧಿಸುವುದು ಮತ್ತು ವಾರಸುದಾರಿಕೆ ತೆರಿಗೆಯನ್ನು ಆರಂಭಿಸುವುದು.

ಕಾರ್ಪೊರೇಟ್‌ಗಳು ಲಾಭಗಳ ಮೇಲಿನ ತೆರಿಗೆಯನ್ನು ಶಾಸನಬದ್ಧ ದರಗಳನ್ನು ಏರಿಸುವ ಮೂಲಕ ಹೆಚ್ಚಿಸುವುದು, ಈ ಮೂಲಕ ಬಹಳ ಕಡಿಮೆ ಮಟ್ಟದ ವಾಸ್ತವಿಕ ದರಗಳಿಂದಾಗಿ ಅಪಾರ ಆದಾಯ ನಷ್ಟವನ್ನು ತಪ್ಪಿಸುವುದು.

ಜಿಎಸ್‌ಟಿ ವ್ಯವಸ್ಥೆಯನ್ನು, ನಮ್ಮ ದೇಶದ ಒಕ್ಕೂಟ ವ್ಯವಸ್ಥೆಯನ್ನು, ರಾಜ್ಯಗಳ ಹಕ್ಕುಗಳನ್ನು ಗೌರವಿಸುವ ರೀತಿಯಲ್ಲಿ  ಸಂಪನ್ಮೂಲಗಳನ್ನು ಹಂಚಿಕೊಳ್ಳು ಆಗುವಂತೆ ಆಮೂಲಾಗ್ರವಾಗಿ ಸರಿಪಡಿಸಬೇಕು.

ಹಣಕಾಸು ವಲಯದ ನಿಯಂತ್ರಣ

ಪ್ರಭುತ್ವವು ಹಣಕಾಸಿನ ಆಡಳಿತದ ಮೇಲೆ ಹತೋಟಿ ಹೊಂದುವುದಕ್ಕಾಗಿ ಮತ್ತು ಅಭಿವೃದ್ಧಿ ಹಣಕಾಸಿನ ಪುನರುಜ್ಜಿÃವನಕ್ಕಾಗಿ ಸಿಪಿಐ(ಎಂ) ಈ ಕೆಳಗಿನ ನಿಲುವು ಹೊಂದಿದೆ::

ಬಂಡವಾಳ ಖಾತೆಯ ಪೂರ್ಣ ಪರಿವರ್ತನೆಯತ್ತ ಹೆಜ್ಜೆ ಇಡುವ ಪ್ರಯತ್ನಗಳಿಂದ ಹಿಂದೆ ಸರಿಯುವುದು; ಹಣಕಾಸು ಬಂಡವಾಳದ ಒಳಹರಿವು ಮತ್ತು ಹೊರ ಹರಿವುಗಳ ಮೇಲೆ ಪುನಃ ನಿಯಂತ್ರಣ ಹೇರುವುದು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಳಸುವ ಪಾರ್ಟಿಸಿಪೇಟರಿ ನೋಟ್ಸ್ ಎಂಬ ಉಪಕರಣವನ್ನು ನಿಷೇಧಿಸಬೇಕು; ಜೂಜುಕೋರ ಹಣಕಾಸು ವ್ಯವಹಾರಗಳನ್ನು ನಿರುತ್ಸಾಹಿತಗೊಳಿಸುವುದು.

ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಯನ್ನು ಕಾಪಾಡುವುದು ಮತ್ತು ಹಣಕಾಸು ನಿಯಂತ್ರಣ ವ್ಯವಸ್ಥೆಯನ್ನು ಆಧುನೀಕರಿಸುವುದು. ಬ್ಯಾಂಕುಗಳ ಮೇಲೆ ರಿಸರ್ವ್ ಬ್ಯಾಂಕ್‌ನ ನಿಯಂತ್ರಣದ ಪಾತ್ರವನ್ನು ಬಲಗೊಳಿಸುವುದು. ಪ್ರತಿಯೊಂದು ಸಣ್ಣ ಪುಟ್ಟ ಸೇವೆಗೂ ಬ್ಯಾಂಕುಗಳು ದುಬಾರಿ ಶುಲ್ಕ ವಿಧಿಸುವುದನ್ನು ನಿಲ್ಲಿಸುವಂತೆ ರಿಸರ್ವ್ ಬ್ಯಾಂಕ್ ಮಾರ್ಗದರ್ಶನ ಸೂತ್ರಗಳನ್ನು ಜಾರಿಗೊಳಿಸುವುದು. ಬ್ಯಾಂಕುಗಳಿಗೆ ನಷ್ಟ ಉಂಟುಮಾಡುವ ಅಪರಾಧಿಗಳ ಮೇಲೆ ಕಠಿಣ ಕ್ರಮ ಜರುಗಿಸುವುದು.

ಖಾಸಗಿ ವಲಯದಲ್ಲಿ ಬ್ಯಾಂಕುಗಳನ್ನು ಆರಂಭಿಸಲು ಆರ್‌ಬಿಐ ಪರವಾನಗಿ ಕೊಡುವ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು ಮತ್ತು ಬ್ಯಾಂಕಿಂಗ್ ನಿಯಂತ್ರಣ(ತಿದ್ದುಪಡಿ) ಕಾಯ್ದೆ, 2012 ರ ಪರಾಮರ್ಶೆ  ನಡೆಸುವುದು.

ಬ್ಯಾಂಕುಗಳು ತಮ್ಮ ಸ್ವತಂತ್ರ ಅಸ್ತಿತ್ವ ಮತ್ತು ಅನನ್ಯತೆಗಳನ್ನು ಉಳಿಸಿಕೊಳ್ಳುವುದನ್ನು ಖಾತ್ರಿಪಡಿಸುವುದು. ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಪರಾಮರ್ಶಿಸುವುದು ಮತ್ತು ಬ್ಯಾಂಕ್ ಶಾಖೆಗಳನ್ನು ಮುಚ್ಚುವುದನ್ನು ನಿಲ್ಲಿಸುವುದು.

ಭಾರತೀಯ ಬ್ಯಾಂಕುಗಳ ಒಡೆತನವನ್ನು ವಿದೇಶಿ ಬ್ಯಾಂಕುಗಳು ವಹಿಸಿಕೊಳ್ಳುವುದನ್ನು ತಡೆಗಟ್ಟುವುದು.

ದೊಡ್ಡ ಬಂಡವಾಳಗಾರರು ಬ್ಯಾಂಕುಗಳಿಂದ ಸಾಲ ಪಡೆದು ಕಾರ್ಯಗತಗೊಳಿಸುವ ಯೋಜನೆಗಳಲ್ಲಿ ತಮಗೆ ಎದುರಾಗುವ ರಿಸ್ಕ್ ಅನ್ನು ಬ್ಯಾಂಕುಗಳಿಗೆ ವರ್ಗಾಯಿಸುವ ಪರಿಪಾಠವನ್ನು ಕಠಿಣ ಕ್ರಮಗಳ ಮೂಲಕ ತಡೆಯುವುದು.  ಸುಸ್ತಿದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳು ಮತ್ತು ಅವರಿಂದ ಸಾಲ ವಸೂಲಿ ಮಾಡಲು ಅನುವಾಗುವಂತೆ ಬ್ಯಾಂಕಿಂಗ್ ನಿಯಂತ್ರಣವನ್ನು ಬಲಗೊಳಿಸುವುದು.

ಸುಸ್ತಿದಾರರ ಹೆಸರುಗಳನ್ನು ಪ್ರಕಟಿಸುವುದು. ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವುದು. ಉದ್ದೆÃಶಪೂರ್ವಕ ಸುಸ್ತಿದಾರರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳವುದು ಮತ್ತು ಅವರಿಗೆ ಹೊಸ ಸಾಲ ಕೊಡದಂತೆ ಅಥವಾ ಅವರ ಹಳೆಯ ಸಾಲದ ಮರು ಪಾವತಿಯ ಅವಧಿಯನ್ನು ಹೊಸದೆಂಬಂತೆ ನವೀಕರಿಸುವುದನ್ನು ನಿಷೇಧಿಸುವುದು ಮತ್ತು ಅಂತವರ ಮೇಲೆ ಕ್ರಿಮಿನಲ್ ಪ್ರೊಸಿಜರ್ ಕ್ರಮ ಕೈಗೊಳ್ಳುವುದು.

ತೆರಿಗೆ ಅಡಗುದಾಣಗಳಿಂದ ಅಕ್ರಮವಾಗಿ ಹರಿದು ಬರುವ ಬಂಡವಾಳವನ್ನು ನಿಷೇಧಿಸುವುದು. ಉಭಯ ತೆರಿಗೆ ಸಂಬಂಧಿತ ಒಪ್ಪಂದಗಳ ಕೆಲವು ನ್ಯೂನತೆಗಳನ್ನು ಬಳಸಿಕೊಂಡು ತೆರಿಗೆಯಿಂದ ನುಣಚಿಕೊಳ್ಳುವುದನ್ನು ತಡೆಯುವುದು.

ಸೂಕ್ತ ನಿಯಂತ್ರಣಗಳೊಂದಿಗೆ ಸಣ್ಣ ಉಳಿತಾಯಗಳನ್ನು ಬಲಪಡಿಸುವುದು; ಚಿಟ್ ಫಂಡ್ ಸಂಬಂಧಿತ ಕಾನೂನು ಬಲಗೊಳಿಸಿ ಜನಸಾಮಾನ್ಯರ ಠೇವಣಿಗಳಿಗೆ ಸುರಕ್ಷೆ ಒದಗಿಸುವುದು; ಚಾಲಾಕಿ ಚಿಟ್ ಫಂಡ್ ನಿರ್ವಾಹಕರ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕುವುದು ಮತ್ತು ಸಂತ್ರಸ್ತ ಠೇವಣಿದಾರರಿಗೆ ಪಾವತಿಗಳನ್ನು ವ್ಯವಸ್ಥೆ ಮಾಡುವುದು.

ಹಣಕಾಸು ವಲಯದಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮತಿಸುವ ಪ್ರಸ್ತಾಪವನ್ನು ಹಿಂಪಡೆಯುವುದು.

ವಿಮಾ ವಲಯದಲ್ಲಿ  ವಿದೇಶಿ ನೇರ ಹೂಡಿಕೆಯ ಗರಿಷ್ಠ ಮಿತಿ ಶೇ.26 ದಾಟದಂತೆ ಖಾತ್ರಿಪಡಿಸುವುದು.

ಮೂಲಸೌಕರ್ಯಗಳು

ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಿಪಿಐ(ಎಂ) ನಿಲುವು:

ರಕ್ಷಣಾ ಉತ್ಪಾದನಾ ವಲಯದಲ್ಲಿ ಖಾಸಗೀಕರಣವನ್ನು ಸಂಪೂರ್ಣವಾಗಿ ಹಿಂದಕಕೆ ಪಡೆಯುವುದು; ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿಯವರ ಭಾಗವಹಿಸುವಿಕೆಯನ್ನು ತಕ್ಷಣ ರದ್ದುಪಡಿಸುವುದು; ರಕ್ಷಣಾ ವಲಯದಲ್ಲಿ ವಿದೇಶಿ ನೇರ ಹೂಡಿಕೆಯನ್ನು ನಿಲ್ಲಿಸುವುದು; ದೇಶದ ರಕ್ಷಣಾ ಅಗತ್ಯಗಳ ಬಗ್ಗೆ ಸ್ವಾವಲಂಬನೆ ಸಾಧಿಸುವ ಮಟ್ಟಕ್ಕೆ  ಸರ್ಕಾರದ ಒಡೆತನದ ರಕ್ಷಣಾ ಕೈಗಾಕೆಗಳನ್ನು ಬಲಗೊಳಿಸುವುದು ಮತ್ತು ವಿಸ್ತರಿಸುವುದು.

ಮೂಲಸೌಕರ್ಯಗಳ ಮೇಲಿನ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು; ವಿದ್ಯುತ್/ಇಂಧನ, ಸಂಪರ್ಕ, ರೈಲ್ವೇ, ರಸ್ತೆಗಳು, ಬಂದರು ಮತ್ತು ವಿಮಾನ ನಿಲ್ದಾಣಗಳಿಗೆ ಸಾಕಷ್ಟು ಪ್ರಮಾಣದ ಹಣವನ್ನು ಯೋಜನಾಬದ್ಧವಾಗಿ ಒದಗಿಸುವುದು.

ರೈಲ್ವೇಯಲ್ಲಿ ವಿದೇಶಿ ನೇರ ಹೂಡಿಕೆಯನ್ನು ನಿಲ್ಲಿಸುವುದು; ರೈಲ್ವೇ, ರಕ್ಷಣೆ, ಬಂದರು ಮತ್ತು ಹಡಗು ಕಟ್ಟೆಗಳು, ಬ್ಯಾಂಕುಗಳು, ವಿಮೆ, ಕಲ್ಲಿದ್ದಲು, ಜಲ ಸಂಪನ್ಮೂಲಗಳು ಇತ್ಯಾದಿಗಳ ಖಾಸಗೀಕರಣದ ತೀರ್ಮಾನವನ್ನು ಹಿಂಪಡೆಯುವುದು.

ಸ್ವಾಭಿಮಾನ ಮತ್ತು ಸ್ವಾವಲಂಬನೆಗಳಿಂದ ಕೂಡಿದ ದೇಶದ ಅಭಿವೃದ್ಧಿಯ ಹಿತದೃಷ್ಠಿಯಿಂದ ಇಂಧನ ಮತ್ತು ದೂರ ಸಂಪರ್ಕ ಸಾಧನ-ಸಲಕರಣೆಗಳ ತಯಾರಿಕೆ ಮಾಡುವ ಉದ್ದೆÃಶದಿಂದ ಇಂಧನ ಮತ್ತು ಟೆಲೆಕಾಂ ನೀತಿಗಳನ್ನು ಪರಾಮರ್ಶಿಸುವುದು.

ಖಾಸಗಿ ಇಂಧನ/ವಿದ್ಯುತ್ ಉತ್ಪಾದಕರ ಪರವಾಗಿರುವ ಪ್ರವೃತ್ತಿಯನ್ನು ಬದಲಾಯಿಸುವುದು; ವಿದ್ಯುತ್ ಹಂಚಿಕೆಯ ಖಾಸಗಿಕರಣ ಮತ್ತು ಪಟ್ಟಣಗಳ ವಿದ್ಯುತ್ ಹಂಚಿಕೆಯನ್ನು ಫ್ರಾಂಚೈಸೀಗಳಿಗೆ ಕೊಡುವುದನ್ನು ನಿಲ್ಲಿಸುವುದು.

ಟೆಲಿಕಾಂ ಸಂಪರ್ಕ ಹಳ್ಳಿ ಹಳ್ಳಿಯನ್ನೂ ತಲುಪುವಂತಾಗಲು ಟೆಲೆಕಾಂ ನೀತಿಗಳನ್ನು ಬದಲಾಯಿಸುವುದು; ಸಾರ್ವಜನಿಕ ವಲಯದ ಟೆಲೆಕಾಂ ಕಂಪೆನಿಗಳಾದ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗಳು ತಮ್ಮ ಸೇವೆಗಳನ್ನು ಉನ್ನತ ದರ್ಜೆಗೇರಿಸಲು ಅಗತ್ಯವಿರುವ ತರಂಗಾಂತರಗಳನ್ನು ನೀಡುವ ಮೂಲಕ ಅವುಗಳನ್ನು ಬಲಪಡಿಸುವುದು.

ಬ್ರಾಡ್‌ಬ್ಯಾಂಡ್ ಸಂಪರ್ಕದ ವಿಸ್ತಾರವನ್ನು ಹೆಚ್ಚಿಸುವುದು ಮತ್ತು ಎಲ್ಲರಿಗೂ ಕೈಗೆಟಕುವ ದರದಲ್ಲಿ ಅಂತರ್ಜಾಲವನ್ನು  ದೊರಕಿಸುವುದು.

ಮೂಲಸೌಕರ್ಯಗಳನ್ನು ಪಿಪಿಪಿ (ಖಾಸಗಿ-ಸಾರ್ವಜನಿಕ- ಸಹಭಾಗಿತ್ವ ) ಮಾರ್ಗವಾಗಿ ಖಾಸಗೀಕರಿಸುವುದನ್ನು ಪರಾಮರ್ಶಿಸುವುದು.

ವಿಮಾನ ನಿಲ್ದಾಣಗಳ ಉನ್ನತೀಕರಣ ಮತ್ತು ನಿರ್ವಹಣೆಗಳನ್ನು ಖಾಸಗಿಯವರಿಗೆ ವಹಿಸಿರುವ ಆದೇಶಗಳನ್ನು ಹಿಂಪಡೆಯುವುದು. ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರವು ಈಗಾಗಲೇ ನವೀಕರಿಸಿರುವ ದೇಶೀಯ ವಿಮಾನ ನಿಲ್ದಾಣ ಪಿಪಿಪಿ ಮಾರ್ಗವಾಗಿ ಖಾಸಗೀಕರಣಗೊಳಿಸದಿರುವುದು.

ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳಿಗೆ ಒತ್ತು ಕೊಡುವುದು; ಗ್ರಾಮೀಣ ವಿದ್ಯುತ್ ಸಂಪರ್ಕ, ರಸ್ತೆಗಳ ನಿರ್ಮಾಣ ಮುಂತಾದ ಕಾರ್ಯಗಳಿಗೆ ಹೆಚ್ಚು ಹಣ ಒದಗಿಸುವುದು.

ವ್ಯಾಪಾರ ಪ್ರಶ್ನೆಗಳು

ಸಿಪಿಐ(ಎಂ) ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕೆಂಬ ನಿಲುವನ್ನು ತಳೆದಿದೆ:

ದೇಶದ ಹಿತಾಸಕ್ತಿಗಳನ್ನು ಕಾಪಾಡುವುದು  ಮತ್ತು ಭಾರತೀಯ ರಫ್ತುಗಳಿಗೆ ಹೆಚ್ಚು ಸುಂಕಗಳನ್ನು ಹೆಚ್ಚಿಸುವ ವಿಧಿಸುತ್ತಿರುವ  ಮತ್ತು ‘ವ್ಯಾಪಾರ ಯುದ್ಧ’ ಸಾರಿರುವ ಅಮೇರಿಕಾದ ವಿರುದ್ಧ ಸೆಟೆದು ನಿಲ್ಲುವುದು.

ಸಣ್ಣ ಮತ್ತು ಅತಿ ಸಣ್ಣ ರೈತರ ಹಿತ ಕಾಪಾಡುವ ದೃಷ್ಠಿಯಿಂದ ಧಾನ್ಯಗಳ ಆಮದಿನ ಮೇಲೆ ಪರಿಮಾಣಾತ್ಮಕ ಮಿತಿ ಹೇರುವುದು.

ಆರೋಗ್ಯ, ಶಿಕ್ಷಣ, ಜಲ ಸಂಪನ್ಮೂಲಗಳು, ಬ್ಯಾಂಕುಗಳು, ವಿಮೆ ಮುಂತಾದ ಹಣಕಾಸು ಸೇವೆಗಳನ್ನು ಗಾಟ್ಸ್ ನಿಂದ ಹೊರಗಿಡುವುದು; ವ್ಯಾಪಾರ ಸಂಬಂಧಿತ ಬೌದ್ಧಿಕ ಆಸ್ತಿಗಳ ಒಪ್ಪಂದದ ಪರಾಮರ್ಶೆಗೆ ಒತ್ತಾಯಿಸುವುದು.

ಹಾಲಿ ಇರುವ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಪರಾಮರ್ಶೆಗೆ ಒಳಪಡಿಸುವುದು; ಈಗಿರುವ ವ್ಯಾಪಾರ ಶರತ್ತುಗಳ ಮೇಲೆ ಯೂರೋಪಿಯನ್ ಒಕ್ಕೂಟದೊಂದಿಗೆ ಹೊಸ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಿಸಿಕೊಳ್ಳಲು ಮುಂದುವರಿಯದಿರುವುದು.

ಒಕ್ಕೂಟ ತತ್ವವನ್ನು ಸದೃಢಗೊಳಿಸುವುದು

ಕೇಂದ್ರ-ರಾಜ್ಯ ಸಂಬಂಧಗಳ ಆಮೂಲಾಗ್ರ ಪುರ‍್ರಚನೆ ಕುರಿತಂತೆ ಸಿಪಿಐ(ಎಂ)ನ ನಿಲುವು:

ಸೂಕ್ತವಾದ ವ್ಯವಸ್ಥೆಯೊಂದಿಗೆ ಕಲಮು 356 ನ್ನು ಬದಲಾಯಿಸುವುದು ಮತ್ತು ಕಲಮು 355 ರ ದುರುಪಯೋಗವನ್ನು ತಡೆಯಲು ಅದನ್ನು ತಿದ್ದುಪಡಿ ಮಾಡುವುದು.

ರಾಜ್ಯಪಾಲರ ಪ್ರಸಕ್ತ ಪಾತ್ರ ಮತ್ತು ಸ್ಥಾನಮಾನವನ್ನು ಪರಾಮರ್ಶಿಸುವುದು. ಮುಖ್ಯಮಂತ್ರಿ ಸೂಚಿಸಿದ ಮೂವರು ಸಮರ್ಥ ವ್ಯಕ್ತಿಗಳ ಪ್ಯಾನೆಲ್‌ನಿಂದ ರಾಜ್ಯಪಾಲರನ್ನು ರಾಷ್ಟçಪತಿಗಳು ನೇಮಕ ಮಾಡುವುದು.

ಕೇಂದ್ರ ತೆರಿಗೆಗಳ ಒಟ್ಟು ಸಂಗ್ರಹದಲ್ಲಿ ರಾಜ್ಯಗಳಿಗೆ ಶೇ.50ನ್ನು ವಿಕೇಂದ್ರಿಕರಿಸುವುದು; ಸರ್‌ಚಾರ್ಜ್ಗಳು ಮತ್ತು ಸೆಸ್‌ಗಳನ್ನು ರಾಜ್ಯಗಳಿಗೆ ವಿತರಿಸುವುದು.

ಕೇಂದ್ರ ಸರ್ಕಾರದ ತೆರಿಗೆಯೇತರ ಆದಾಯಗಳನ್ನು ಭಾಗ ಮಾಡಬಹುದಾದ ಒಟ್ಟು ನಿಧಿಯ ಭಾಗವಾಗಿ ಮಾಡುವುದು ಮತ್ತು ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವುದು.

ರಾಜ್ಯಗಳ ಮೇಲೆ ಹೇರಲಾಗಿರುವ ಈಖಃಒ ಕಾಯ್ದೆಯನ್ನು ಅಂಗೀಕರಿಸಬೇಕು ಎಂಬಿತ್ಯಾದಿ ಷರತ್ತುಗಳನ್ನು ಹಿಂಪಡೆಯುವುದು; ಹಣಕಾಸು ಆಯೋಗಗಳ ಸಂರಚನೆ ಮತ್ತು ಪ್ರಸ್ತಾಪಗಳಲ್ಲಿ ರಾಜ್ಯಗಳ ಅಭಿಪ್ರಾಯದ ಪರಿಗಣನೆ.

ರಾಜ್ಯ ಪಟ್ಟಿಯಲ್ಲಿರುವ ಕೇಂದ್ರ ಪ್ರಾಯೋಜಿತ ಸ್ಕಿÃಂಗಳನ್ನು ನಿಧಿಯೊಂದಿಗೆ ರಾಜ್ಯಗಳಿಗೆ ವರ್ಗಾಯಿಸುವುದು.

ಅಂತರ್-ರಾಜ್ಯ ಮಂಡಳಿಯ ತೀರ್ಮಾನಗಳಿಗೆ ಭಾರತ ಸರ್ಕಾರದ ಮೇಲೆ ಬಾಧ್ಯತೆ ಇರುವ ಹಾಗೆ ಸಂವಿಧಾನಿಕ ತಿದ್ದುಪಡಿಯನ್ನು ತರುವುದು; ರಾಷ್ಟಿçÃಯ ಅಭಿವೃದ್ಧಿ ಮಂಡಳಿ(ಓಆಅ)ಗೆ ಸಂವಿಧಾನಿಕ ಸ್ಥಾನಮಾನವನ್ನು ನೀಡುವುದು; ಓಆಅಂiÀÄ ಕಾರ್ಯಕಾರಿ ಅಂಗವಾಗಿ ಕೆಲಸ ಮಾಡುವಂತೆ ಯೋಜನಾ ಆಯೋಗವನ್ನು ಪುನರ್ ಸ್ಥಾಪಿಸುವುದು.

ಸ್ಥಳೀಯ ಸ್ವಯಂ-ಆಡಳಿತದ ವೆಚ್ಚಕ್ಕೆ ಜಿಡಿಪಿಯ ಕನಿಷ್ಟ ಮಟ್ಟದ ಗುರಿಯನ್ನು ನಿಗದಿಪಡಿಸುವುದು; ಸ್ಥಳೀಯ ಸಂಸ್ಥೆಗಳಿಗೆ ವಿಕೇಂದ್ರೀಕರಿಸಲಾಗುವ ನಿಧಿಯನ್ನು ರಾಜ್ಯ ಸರ್ಕಾರಗಳ ಮೂಲಕ ನೀಡುವುದು.

ಕೈಗಾರಿಕೆ

ಸಿಪಿಐ(ಎಂ) ನಿಲುವು ಹೀಗಿದೆ:

ಹೊಸ ಬಂಡವಾಳ ಮತ್ತು ತಂತ್ರಜ್ಞಾನವನ್ನು ಸೇರ್ಪಡೆ ಮಾಡುವ ಮೂಲಕ ಮೂಲ ಮತ್ತು ಆಯಕಟ್ಟಿನ ಕ್ಷೆÃತ್ರಗಳಲ್ಲಿ ಸಾರ್ವಜನಿಕ ವಲಯವನ್ನು ಸದೃಢಗೊಳಿಸುವುದು ಮತ್ತು ವಿಸ್ತರಿಸುವುದು; ಸಾರ್ವಜನಿಕ ವಲಯದಲ್ಲಿ ಸ್ವಾಯತ್ತತೆ ಮತ್ತು ದಕ್ಷತೆಯನ್ನು ಪ್ರೊÃತ್ಸಾಹಿಸುವುದು.

ಹೂಡಿಕೆಯನ್ನು ಯುಕ್ತಿಯುತಗೊಳಿಸುವ ಮತ್ತು ಉದ್ಯೊÃಗ ಸೃಷ್ಟಿಗೆ ಪ್ರೊÃತ್ಸಾಹದಾಯಕವಾದ ದೀರ್ಘಾವಧಿ ಕೈಗಾರಿಕಾ ನೀತಿಯ ಮೂಲಕ ತಯಾರಿಕಾ ವಲಯದ ಬೆಳವಣಿಗೆಗೆ ಆದ್ಯತೆ ನೀಡುವುದು.

ಲಾಭ ಮಾಡುತ್ತಿರುವ ಮತ್ತು ಲಾಭದಾಯಕವಾಗಬಹುದಾದ ಸಾರ್ವಜನಿಕ ಉದ್ದಿಮೆಗಳ ಬಂಡವಾಳ ಹಿಂತೆಗೆತ ಮತ್ತು ಖಾಸಗೀಕರಣಕ್ಕೆ ತಡೆ; ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಮುಖವಾದ ಸಾರ್ವಜನಿಕ ಉದ್ದಿಮೆಗಳಿಗೆ ಪುನಶ್ಚೆÃತನ ಪ್ಯಾಕೇಜನ್ನು ನೀಡುವುದು.

ರೋಗಗ್ರಸ್ತ ಸೆಣಬು ಮತ್ತು ಚಹಾ ಪ್ಲಾಂಟೇಷನ್‌ಗಳ ಪುನಶ್ಚೆÃತನ ಮತ್ತು ಆರಂಭ.

ಪ್ರೋತ್ಸಾಹಕಗಳು, ಮೂಲಸೌಕರ್ಯಗಳ ಬೆಂಬಲ ಮತ್ತು ಬ್ಯಾಂಕ್‌ಗಳಿಂದ ಸಾಕಷ್ಟು ಸಾಲಗಳನ್ನು ಲಭ್ಯಗೊಳಿಸುವ ಮೂಲಕ ಹೆಚ್ಚು ಉದ್ಯೋಗಾವಕಾಶಗಳಿರುವ ವಲಯಗಳಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ಪ್ರೋತ್ಸಾಹಿಸುವುದು; ಸಮುಚ್ಛಯ ಅಭಿವೃದ್ಧಿ ಯೋಜನೆ(ಅಆP)ಗಳಿಗೆ ಹಣಕಾಸು ಹಂಚಿಕೆಯನ್ನು ಹೆಚ್ಚಿಸುವುದು.

ಆಮದು ಸುಂಕಗಳ ಮನಸೋಇಚ್ಛೆಯ ಇಳಿಕೆ ಮತ್ತು ಅಸ್ಥಿತ್ವದಲ್ಲಿರುವ ಭಾರತೀಯ ಕಂಪನಿಗಳನ್ನು ವಿದೇಶೀ ಕಂಪನಿಗಳು ವಶಪಡಿಸಿಕೊಳ್ಳುವುದರಿಂದ ದೇಶೀಯ ಕೈಗಾರಿಕೆಗೆ ರಕ್ಷಣೆ; ತಯಾರಿಕಾ ಮತ್ತು ಸೇವಾ ವಲಯಗಳಲ್ಲಿ ಹೂಡಲು ಖಾಸಗಿ ರಂಗವನ್ನು ಪ್ರೊÃತ್ಸಾಹಿಸುವುದು; ಉದ್ಯೋಗ ಸೃಷ್ಟಿ ಮತ್ತು ಖ&ಆ ಪ್ರಯತ್ನಗಳಿಗೆ ಸಂಬಂಧ ಹೊಂದಿರುವ ಖಾಸಗಿ ರಂಗಕ್ಕೆ ಪ್ರೊÃತ್ಸಾಹ ಒದಗಿಸುವುದು.

ಚಿಲ್ಲರೆ ವ್ಯಾಪಾರದಲ್ಲಿ ವಿದೇಶೀ ನೇರ ಬಂಡವಾಳವನ್ನು ನಿಷೇಧಿಸುವುದು; ಒಂದು ಲೈಸೆನ್ಸಿಂಗ್ ಪಾಲಿಸಿಯ ಮೂಲಕ ಇ-ಕಾಮರ್ಸ್ ಮತ್ತು ದೇಶೀಯ ಕಾರ್ಪೊರೇಟ್ ಚಿಲ್ಲರೆ ವ್ಯಾಪಾರಿಗಳನ್ನು ನಿಯಂತ್ರಿಸುವುದು.

ಅಸಂಖ್ಯಾತ ತೆರಿಗೆ ರಿಯಾಯಿತಿಗಳನ್ನು ತೆಗೆದು ಹಾಕಲು SEZ ಕಾಯ್ದೆ ಮತ್ತು ನಿಯಮಗಳನ್ನು ತಿದ್ದುಪಡಿ ಮಾಡುವುದು ಮತ್ತು ಭೂಬಳಕೆಯನ್ನು ನಿಯಂತ್ರಿಸುವುದು; ಎಲ್ಲಾ SEZ ಗಳಲ್ಲಿ ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟಾದ ಜಾರಿಯನ್ನು ಖಾತ್ರಿಗೊಳಿಸುವುದು.

ಖನಿಜ ಕ್ಷೆÃತ್ರದ ಮತ್ತಷ್ಟು ಉದಾರೀಕರಣ ಮತ್ತು ಖಾಸಗೀಕರಣವನ್ನು ತಡೆಯುವುದು; ಖಾಸಗಿ ರಂಗಕ್ಕೆ ಹಂಚಿಕೆ ಮಾಡಲಾದ ಎಲ್ಲಾ ಕಾರ್ಯಾಚರಿಸದಿರುವ ಕಲ್ಲಿದ್ದಲು ಬ್ಲಾಕ್‌ಗಳನ್ನು ವಾಪಸ್ ಪಡೆದು ಕೋಲ್ ಇಂಡಿಯಾ ಲಿಮಿಟೆಡ್‌ಗೇ ಮೀಸಲಾದ ಬಳಕೆಗೆ ನೀಡುವುದು.

ಕೋಲ್ ಇಂಡಿಯಾ ಲಿಮಿಟೆಡ್‌ನ್ನು ಕಲ್ಲಿದ್ದಲ ಗಣಿಗಾರಿಕೆ ಮಾಡುವ ಮತ್ತು ಕೈಗಾರಿಕೆಗಳಿಗೆ ಮತ್ತು ಗ್ರಾಹಕರಿಗೆ ಪೂರೈಕೆ ಮಾಡುವ ಏಕಘಟಕ ಮತ್ತು ಏಕೈಕ ಏಜೆನ್ಸಿಯಾಗಿ ಮಾಡುವುದು; ಕಲ್ಲಿದ್ದಲು ಗಣಿಗಳ ವಾಣಿಜ್ಯ ಗಣಿಗಾರಿಕೆಗೆ ಅವಕಾಶ ಕೊಡುವ ತೀರ್ಮಾನವನ್ನು ಕೂಡಲೇ ವಾಪಸ್ ಪಡೆಯುವುದು.

ಜವಳಿ, ಜಮಖಾನ, ಕರಕುಶಲ, ಚರ್ಮ, ನಾರು, ಮುಂತಾದ ಪರಂಪರಾಗತ ಕೈಗಾರಿಕೆಗಳ ರಕ್ಷಣೆ.

ಈ ರಂಗಗಳಲ್ಲಿರುವ ಕಾರ್ಮಿಕರಿಗೆ ನಿಯಮಿತ ಬೆಲೆಗಳಲ್ಲಿ ಲಾಗೋಡನ್ನು ಒದಗಿಸುವುದು; ಡಿಸೈನ್, ತಂತ್ರಜ್ಞಾನ ಮತ್ತು ಕೌಶಲ್ಯಗಳನ್ನು ಸುಧಾರಿಸುವುದು, ಮಾರ್ಕೆಟಿಂಗ್ ಮುಂತಾದವುಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಮತ್ತು ವಿಸ್ತರಿತ ಸೇವೆಗಳನ್ನು ಒದಗಿಸುವುದು.

ಕೃಷಿಯ ಪುನಶ್ವೇತನ

ಕೃಷಿ ಬಿಕ್ಕಟ್ಟನ್ನು ಇಲ್ಲವಾಗಿಸಲು, ಕೃಷಿಯನ್ನು ಫಲದಾಯಕವಾಗಿಸಲು ಮತ್ತು ರೈತರ ಆದಾಯ ಹೆಚ್ಚಳವನ್ನು ಖಾತ್ರಿಗೊಳಿಸಲು ಸಿಪಿಐ(ಎಂ) ಕೆಳಕಂಡ ಕ್ರಮಗಳನ್ನು ಸೂಚಿಸುತ್ತದೆ:

ಲಾಗೋಡಿನ ಒಟ್ಟು ವೆಚ್ಚಗಳ ಕನಿಷ್ಟ ಒಂದೂವರೆ ಪಟ್ಟು ಇರುವ ಹಾಗೆ ಕನಿಷ್ಟ ಬೆಂಬಲ ಬೆಲೆಗೆ ತಮ್ಮ ಉತ್ಪನ್ನವನ್ನು ಮಾರುವ ಹಕ್ಕನ್ನು ರೈತರಿಗೆ ಕೊಡುವ ಶಾಸನ ರೂಪಿಸುವುದು.

ಗ್ರಾಮೀಣ ಬಡವರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಗ್ರಾಮೀಣ ವಲಯದ ಮೇಲಿನ ಸಾರ್ವಜನಿಕ ವೆಚ್ಚದಲ್ಲಿ ಗಮನಾರ್ಹ ಹೆಚ್ಚಳವನ್ನು ಸಾಧಿಸುವುದು ಮತ್ತು ಕೃಷಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವುದು.

ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು ಮತ್ತು ಕೃಷಿ ಸಂಶೋಧನೆ ಹಾಗೂ ವಿಸ್ತರಣಾ ಸೇವೆಗಳಿಗಾಗಿ ಸಾರ್ವಜನಿಕ ಸಂಸ್ಥೆಗಳನ್ನು ವಿಸ್ತರಿಸುವುದು.

ರಾಷ್ಟ್ರೀಯ ಆಹಾರ ಭದ್ರತೆಗೆ ಧಕ್ಕೆ ತರುವ ಅತಿಯಾದ ರಫ್ತು ಮತ್ತು ಅಗ್ಗದ ಸುರಿಯುವಿಕೆ ಎರಡನ್ನೂ ತಡೆಗಟ್ಟಲು ವ್ಯಾಪಾರ ನಿರ್ಬಂಧಗಳನ್ನು ಪುನರ್-ಜಾರಿಗೊಳಿಸುವುದು.

ವಾಣಿಜ್ಯ ಬೆಳೆಗಳಿಗೆ ಕನಿಷ್ಟ ಬೆಲೆಗಳನ್ನು ನಿಗದಿಗೊಳಿಸಲು ಸರಕು ಮಂಡಳಿಗಳನ್ನು ಪುನಶ್ವೇತನಗೊಳಿಸುವುದು.

ಕೃಷಿ ವಲಯಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸುಲಭವಾದ ಸಾಂಸ್ಥಿಕ ಸಾಲಗಳನ್ನು ಒದಗಿಸುವುದು.

ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್ ಪೂರೈಸಲು ಸಾರ್ವಜನಿಕ ಹೂಡಿಕೆಯನ್ನು ವಿಸ್ತರಿಸುವುದು ಮತ್ತು ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ತಡೆಯುವುದು; ಕೃಷಿಗೆ ತಡೆ ರಹಿತ ವಿದ್ಯುತ್ ಪೂರೈಕೆಯನ್ನು ಖಾತ್ರಿಗೊಳಿಸುವುದು; ನೀರಾವರಿ ಸೌಲಭ್ಯಗಳನ್ನು ವಿಸ್ತರಿಸುವುದು.

ಗ್ರಾಮೀಣ ಮೂಲಸಂರಚನೆಯಲ್ಲಿ ಮೂಲ ಸೌಲಭ್ಯಗಳನ್ನು ಮತ್ತು ಸುಧಾರಣೆಯನ್ನು ಒದಗಿಸುವುದು.

ರಸಗೊಬ್ಬರಗಳಲ್ಲಿ ಪೋಷಕಾಂಶ ಆಧಾರಿತ ಸಬ್ಸಿಡಿ ವ್ಯವಸ್ಥೆಯನ್ನು ರದ್ದುಗೊಳಿಸುವುದು; ಬೀಜ ಕಾಯ್ದೆಯನ್ನು ರದ್ದುಗೊಳಿಸುವುದು ಮತ್ತು ರೈತ ಸ್ನೇಹಿ ಬೀಜ ಶಾಸನವನ್ನು ತರುವುದು.

ಗುತ್ತಿಗೆ ಕೃಷಿಯನ್ನು ಪ್ರತಿಪಾದಿಸುವ ಮಾದರಿ ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸುವುದು; ಕೃಷಿ ಮಾರುಕಟ್ಟೆಗಳಲ್ಲಿ ರೈತ ಸ್ನೆÃಹಿ ಸುಧಾರಣೆಗಳನ್ನು ತರುವುದು.

ಅಸಮಾನ ವಿದೇಶೀ ವ್ಯಾಪಾರ ಒಪ್ಪಂದಗಳನ್ನು ವರ್ಜಿಸುವುದು ಮತ್ತು ರಾಷ್ಟಿçÃಯ ಆರ್ಥಿಕ ಸಾರ್ವಭೌಮತೆಯ ತತ್ವವನ್ನು ಆಧರಿಸಿ ಎಲ್ಲಾ ವ್ಯಾಪಾರ ಸಂಬಂಧೀ ಮಾತುಕತೆಗಳನ್ನು ನಡೆಸುವುದು ಹಾಗೂ ಇವುಗಳನ್ನು ಸಂಸತ್ತಿನ ಪರಿಶೀಲನೆಗೆ ಒಳಪಡಿಸುವುದು.

ದೊಡ್ಡ ಬಂಡವಾಳದಾರರಿಗೆ ಅನುಕೂಲವಾಗುವ ಭೌದ್ಧಿಕ ಆಸ್ತಿ ವ್ಯವಸ್ಥೆಯಲ್ಲಿನ ಬದಲಾವಣೆಗಳನ್ನು ಹಿಂಪಡೆಯುವುದು; ಜೀವ ವೈವಿಧ್ಯ ರಕ್ಷಣೆಗೆ ಸಂಬಂಧಿಸಿದಂತೆ ಖಾಸಗಿ ಕೃಷಿ ಸಂಶೋಧನೆಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣವನ್ನು ಖಾತ್ರಿಗೊಳಿಸುವುದು.

ಕೃಷಿ ಉತ್ಪಾದನೆ, ನೀರಿನ ಬಳಕೆ, ಲಾಗೋಡು ಖರೀದಿ, ಬೆಳೆ ದಾಸ್ತಾನು, ಹುಟ್ಟುವಳಿ ಮಾರುಕಟ್ಟೆ ಮತ್ತು ಹೈನುಗಾರಿಕೆ ಇವುಗಳಿಗಾಗಿ ಸಹಕಾರಿ ವ್ಯವಸ್ಥೆಯನ್ನು ಪ್ರೊÃತ್ಸಾಹಿಸುವುದು ಮತ್ತು ಗಟ್ಟಿಗೊಳಿಸುವುದು.

ಭೂಮಿ ಕುರಿತ ಪ್ರಶ್ನೆಗಳು

ಸಿಪಿಐ(ಎಂ) ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುತ್ತದೆ:

ಉತ್ತಮ ಗುಣಮಟ್ಟದ ಜೀವನ ಮತ್ತು ಹೆಚ್ಚಾದ ಭೂ ಮೌಲ್ಯದಲ್ಲಿ ಪಾಲು ಸಿಗುವುದನ್ನು ಖಾತ್ರಿಗೊಳಿಸಲು, ‘ಭೂ ಸ್ವಾಧೀನ, ಪುನರ್ವಸತಿ ಮತ್ತು ಪುನರ್‌ಸ್ಥಾಪನೆಯಲ್ಲಿ ನ್ಯಾಯಯುತ ಪರಿಹಾರದ ಹಕ್ಕು ಹಾಗೂ ಪಾರದರ್ಶಕತೆÀ ಕಾಯ್ದೆ, 2013’ ನ್ನು (Right to Fair Compensation and Transparency in Land Acquisition, Rehabilitation and Resettlement Act 2013) ಭೂಸ್ವಾಧೀನದ ಎಲ್ಲಾ ಕಾನೂನುಗಳ ಮೇಲೆ ಇದು ಸಾರ್ವತ್ರಿಕವಾಗಿ ಅನ್ವಯವಾಗುವಂತೆ ಖಾತ್ರಿಪಡಿಸುವ, ಸಾರ್ವಜನಿಕ ಉದ್ದೇಶವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸುವ, ಎಲ್ಲಾ ಬಾಧಿತ ಜನರ ಪೂರ್ಣ ಮತ್ತು ಮಾಹಿತಿಪೂರ್ಣ ಪೂರ್ವ ಒಪ್ಪಿಗೆ, ಸಾಮಾಜಿಕ ಪರಿಣಾಮ ಅಂದಾಜು ಮತ್ತು ಪರಿಹಾರ ಮತ್ತು R&R ಗೆ ಬದ್ಧವಾಗಿರುವಂತೆ ಮಾಡುವ ರೀತಿಯಲ್ಲಿ ತಿದ್ದುಪಡಿ ಮಾಡುವುದು.

ಎಲ್ಲಾ ನಿರಾಶ್ರಿತ ಮತ್ತು ನಿರ್ವಸತಿಗೊಂಡ ರೈತರಿಗೆ ಸರಿಯಾದ ಪರಿಹಾರ ಸಿಗುವ ಹಾಗೆ ಸೂಕ್ತ ನೀತಿಗಳನ್ನು ಜಾರಿಗೊಳಿಸುವುದು.

ಭೂ-ಮಿತಿ ಕಾನೂನುಗಳನ್ನು ದುರ್ಬಲಗೊಳಿಸುವ ಪ್ರಸಕ್ತ ಒತ್ತನ್ನು ಬದಲಾಯಿಸುವುದು; ಭೂ ಸುಧಾರಣೆಗಳ ಜಾರಿಗೆ ತ್ವರಿತ ಮತ್ತು ಸಮಗ್ರವಾದ ಕ್ರಮಗಳನ್ನು ಜಾರಿಗೊಳಿಸುವುದು.

ಹುಲ್ಲುಗಾವಲುಗಳು, ಸಮುದಾಯಿಕ ಅರಣ್ಯಗಳು, ಕುರುಚಲು ಭೂಮಿಗಳು, ಮುಂತಾದ ಸರ್ವ ಸಾಮಾನ್ಯ ಭೂಮಿಗಳ ಕಬಳಿಕೆ ಮತ್ತು ವಶಪಡಿಸಿಕೊಳ್ಳವುದನ್ನು ತಡೆಯುವುದು.

ಎಲ್ಲಾ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಭೂಮಿಯನ್ನು ಭೋಗ್ಯ, ಮಾರಾಟ, ವರ್ಗಾವಣೆ ಅಥವಾ ಇತರ ಯಾವುದೇ ವಿಧಾನದಲ್ಲಿ ಖಾಸಗಿ ರಂಗಕ್ಕೆ ವರ್ಗಾಯಿಸುವುದರಿಂದ ರಕ್ಷಣೆ ನೀಡುವುದು.

ಭೂಮಿತಿಗೆ ಮೇಲ್ಪಟ್ಟ ಎಲ್ಲಾ ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಳ್ಳುವುದು ಮತ್ತು ಕೃಷಿಯೋಗ್ಯ ಭೂಮಿಯನ್ನು ಭೂರಹಿತ ಮತ್ತು ಬಡ ರೈತ ಕುಟುಂಬಗಳಿಗೆ, ಅದರಲ್ಲೂ ವಿಶೇಷವಾಗಿ ಎಸ್.ಸಿ./ಎಸ್.ಟಿ. ಜನರಿಗೆ ವಿತರಣೆ ಮಾಡುವುದು; ಮಹಿಳೆಗೆ ಭೂಮಿಯ ಮೇಲೆ ಸಮಾನ ಹಕ್ಕನ್ನು ಒದಗಿಸುವಂತೆ ಜಂಟಿ ಪಟ್ಟಾಗಳನ್ನು ನೀಡುವುದು.

ಎಲ್ಲಾ ಗ್ರಾಮೀಣ ಮತ್ತು ನಗರದ ಬಡವರಿಗೆ ಮನೆ ನಿವೇಶನಗಳು ಮತ್ತು ಹಿತ್ತಲು ಸಹಿತ ಭೂಮಿಯನ್ನು ಒದಗಿಸುವುದು.

ಯಾವಾವ ರಾಜ್ಯಗಳಲ್ಲಿ ಇನ್ನೂ ಮಾಡಿಲ್ಲವೋ ಅಂತಹ ರಾಜ್ಯಗಳಲ್ಲಿ ಗೇಣಿದಾರರನ್ನು ಮತ್ತು ಗೇಣಿದಾರರ ಹಕ್ಕುಗಳನ್ನು ದಾಖಲು ಮಾಡುವುದು.

ರಿಯಲ್ ಎಸ್ಟೇಟ್ ಜೂಜಾಟಕ್ಕೆ ಭೂ ಕಬಳಿಕೆಯನ್ನು ನಿಷೇಧಿಸುವುದು.

ಆಹಾರ ಭದ್ರತೆಗಾಗಿ

ಹಸಿವು ಮುಕ್ತ ಭಾರತಕ್ಕಾಗಿ ಕೆಲಸ ಮಾಡಲು, ಸಿಪಿಐ(ಎಂ) ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುತ್ತದೆ:

ಪ್ರಸ್ತುತ ಗುರಿ ನಿರ್ದೇಶಿತ ವ್ಯವಸ್ಥೆಯನ್ನು ನಿರ್ಮೂಲಗೊಳಿಸಿ, ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಸುಧಾರಿತವಾದ ಮತ್ತು ಬಲಯುತವಾದ ಸಾರ್ವತ್ರಿಕ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸುವುದು. ಆಧಾರ್‌ನೊಂದಿಗೆÀ ಜೋಡಣೆ ಇರುವುದಿಲ್ಲ.

ಒಂದು ಕುಟುಂಬಕ್ಕೆ ಕನಿಷ್ಟ 35 ಕೆಜಿ ಅಥವಾ ಪ್ರತಿ ವ್ಯಕ್ತಿಗೆ 7 ಕೆಜಿ, ಯಾವುದು ಹೆಚ್ಚೊÃ ಆ ಪ್ರಮಾಣದಲ್ಲಿ ಆಹಾರಧಾನ್ಯಗಳನ್ನು, ಗರಿಷ್ಟ ಬೆಲೆ ಪ್ರತಿ ಕೆಜಿಗೆ 2 ರೂ. ದಾಟದಂತೆ ಒದಗಿಸುವುದು.

ಈ ವಲಯದಲ್ಲಿ ರಾಜ್ಯ ಸರ್ಕಾರಗಳ ಮುತುವರ್ಜಿಗಳನ್ನು ಬೆಂಬಲಿಸುವುದು.

ಆಹಾರ ಧಾನ್ಯಗಳ ಜೊತೆಯಲ್ಲಿ, ಬೇಳೆಗಳು, ಅಡುಗೆ ಎಣ್ಣೆ, ಸಕ್ಕರೆ, ಸೀಮೆಎಣ್ಣೆಗಳನ್ನು ನಿಯಂತ್ರಿತ ದರಗಳಲ್ಲಿ ರೇಷನ್ ವ್ಯವಸ್ಥೆಯಲ್ಲಿ ಪೂರೈಸುವುದು.

ಐಸಿಡಿಎಸ್ ಮತ್ತು ಮಧ್ಯಾಹ್ನ-ಊಟ ಯೋಜನೆಗಳಿಗೆ ನೀಡುವ ಆಹಾರ ಪೂರೈಕೆಯನ್ನು ಹೆಚ್ಚಿಸಲಾಗುವುದು ಮತ್ತು ಬೇಯಿಸಿದ ಬಿಸಿ ಪೌಷ್ಟಿಕ ಊಟವನ್ನು ಖಾತ್ರಿಗೊಳಿಸುವುದು ಮತ್ತು ಇದನ್ನು ಒಂದು ಕಾನೂನಾತ್ಮಕ ಹಕ್ಕಾಗಿ ಆಹಾರ ಹಕ್ಕಿನ ಕಾಯ್ದೆಯಡಿ ತರುವುದು.

ಯಾವುದೇ ಷರತ್ತುಗಳಿಲ್ಲದೇ ಗರ್ಭಿಣಿ ಮಹಿಳೆಯರಿಗೆ ಆಹಾರ ಭದ್ರÀ್ಷತಾ ಕಾಯ್ದೆಯ ರೂ.6000 ಭತ್ಯೆಯನ್ನು ಖಾತ್ರಿಗೊಳಿಸುವುದು.

ವಲಸೆ ಕಾರ್ಮಿಕರು, ನಿರ್ಗತಿಕರು, ವಿಧವೆಯರು, ವಿಶೇಷ ಚೇತನರಂತಹ ದುರ್ಬಲ ಜನವಿಭಾಗಗಳಿಗೆ ಉಚಿತ ಒಲೆಗಳಂತಹ ವಿಶೇಷ ಕ್ರಮಗಳು.

ದೂರದ ಮತ್ತು ಬೆಟ್ಟ ಪ್ರದೇಶಗಳಂತಹ ಜಾಗಗಳಲ್ಲಿ ವಾಸಿಸುವ ಆದಿವಾಸಿ ಮತ್ತು ದುರ್ಬಲ ವರ್ಗಗಳಿಗೆ ರೇಷನ್ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು.

ಆಧಾರ್ ಜೋಡಣೆಯಿಲ್ಲದೆ ವರ್ಷಕ್ಕೆ ಹನ್ನೆರಡು ಅಡುಗೆ ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ನೀಡುವುದು.

ಆಹಾರ ಧಾನ್ಯಗಳಿಗೆ ಬದಲಿಯಾಗಿ ನಗದು ವರ್ಗಾವಣೆ ಇರುವುದಿಲ್ಲ.

ಬೆಲೆ ಏರಿಕೆಯನ್ನು ತಡೆಗಟ್ಟುವುದು

ಸಿಪಿಐ(ಎಂ) ಆವಶ್ಯಕ ಸರಕುಗಳ ಬೆಲೆಗಳಲ್ಲಿ ಏರಿಕೆಗಳನ್ನು ತಡೆಯಲು ಸರಣಿ ಕ್ರಮಗಳನ್ನು ಸೂಚಿಸುತ್ತದೆ. ಈ ಕ್ರಮಗಳಲ್ಲಿ ಈ ಕೆಳಗಿನವುಗಳು ಸೇರಿರುತ್ತವೆ:

ಪೆಟ್ರೋಲಿಯಂ ಉತ್ಪನ್ನಗಳಿಗೆ ಈಗಿರುವ ಅನಿಯಂತ್ರಿತ ಬೆಲೆ ನಿಗದಿ ಪದ್ಧತಿಯನ್ನು ಕೈಬಿಟ್ಟು ಆಡಳಿತಾತ್ಮಕ ಬೆಲೆ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೊಳಿಸುವುದು.

ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರಿÃಯ ಅಬಕಾರಿ ಮತ್ತು ಕಸ್ಟಂಸ್ ತೆರಿಗೆಗಳನ್ನು ಕಡಿತಗೊಳಿಸುವುದು.

ನೈಸರ್ಗಿಕ ಅನಿಲ ಮತ್ತು ಸಬ್ಸಿಡಿಯುತ ಗ್ಯಾಸ್ ಸಿಲಿಂಡರ್‌ಗಳ ದರಗಳನ್ನು ನಿಯಂತ್ರಿಸುವುದು.

ಸಂಸದೀಯ ಸ್ಥಾಯಿ ಸಮಿತಿ ಶಿಫಾರಸಿನಂತೆ ಕೃಷಿ ಸರಕುಗಳಲ್ಲಿ ಮುಂಗಡ ವ್ಯಾಪಾರವನ್ನು ನಿಷೇಧಿಸುವುದು.

ಅಗತ್ಯ ವಸ್ತುಗಳ ಅಕ್ರಮ ದಾಸ್ತಾನು ಮತ್ತು ಕಳ್ಳ ವ್ಯಾಪಾರದ ವಿರುದ್ಧ ಕಠಿಣ ಕ್ರಮ ಮತ್ತು ಅಗತ್ಯ ಸರಕುಗಳ ಕಾಯ್ದೆಯ ಅಂಶಗಳನ್ನು ಗಟ್ಟಿಗೊಳಿಸುವುದು.

ಉಗ್ರಾಣ ಮತ್ತು ಗೋದಾಮುಗಳಲ್ಲಿರುವ ಆಹಾರಧಾನ್ಯಗಳ ಖಾಸಗಿ ದಾಸ್ತಾನುಗಳ ಪ್ರಕಟಣಾ ನಿಯಮಗಳನ್ನು ಗಟ್ಟಿಗೊಳಿಸುವುದು. ಹೆಚ್ಚುವ ಮಾರುಕಟ್ಟೆ ದರಗಳ ವಿರುದ್ಧ ಸಾರ್ವತ್ರಿಕ ಪಡಿತರ ವ್ಯವಸ್ಥೆ ಮತ್ತು ಬಫರ್ ದಾಸ್ತಾನನ್ನು ಒಂದು ವಿವೇಚನಾಯುತವಾದ ಕ್ರಮವಾಗಿ ಬಳಸುವುದು.

ಬೆಲೆಗಳು ಹೆಚ್ಚಿರುವಾಗ ಮತ್ತು ಏರಿಕೆಯಾಗುವಾಗ ಆಹಾರಧಾನ್ಯಗಳ ರಫ್ತನ್ನು ನಿಯಂತ್ರಿಸುವುದು.

ಅಗತ್ಯ ಔಷಧಿ ಬೆಲೆಗಳ ನಿಯಂತ್ರಣವನ್ನು ಖಾತ್ರಿಗೊಳಿಸುವುದು.

ವಿದೇಶಾಂಗ ನೀತಿ

ಬಹು-ಧೃವೀಯತೆಯನ್ನು ಪ್ರೋತ್ಸಾಹಿಸುವ ಸ್ವತಂತ್ರ ಮತ್ತು ಅಲಿಪ್ತ ವಿದೇಶಾಂಗ ನೀತಿ. BRICS, SCO ಮತ್ತು IBSA ಗಳನ್ನು ಗಟ್ಟಿಗೊಳಿಸುವುದು. SAARCನ್ನು ಪುನರ್‌ಕ್ರಿಯಾಶೀಲಗೊಳಿಸುವುದು ಮತ್ತು ನಮ್ಮ ತಕ್ಷಣದ ನೆರೆಹೊರೆಯ ದೇಶಗಳ ಜೊತೆ ಸಂಬಂಧಗಳನ್ನು ಗಟ್ಟಿಗೊಳಿಸುವುದು.

ದೇಶಗಳ ನಡುವಿನ ಎಲ್ಲಾ ವಿವಾದಗಳನ್ನು ನಿಭಾಯಿಸಲು ವಿಶ್ವಸಂಸ್ಥೆಯಂತಹ ಬಹುಪಕ್ಷೀಯ ವೇದಿಕೆಗಳನ್ನು ಬಲಗೊಳಿಸುವುದು; ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆಯ ರಚನೆಯನ್ನು ಪ್ರಜಾಪ್ರಭುತ್ವಿಕರಿಸುವುದು.

ವೆನಿಜುವೆಲಾ ಮತ್ತು ಅನೇಕ ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ಈಗ ಸಂಭವಿಸುತ್ತಿರುವ ರೀತಿಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಮಧ್ಯಪ್ರವೇಶಗಳು ಮತ್ತು ಪ್ರಭುತ್ವ ಬದಲಾವಣೆ ಹೇರಿಕೆಗಳನ್ನು ವಿರೋಧಿಸುವುದು.

ಪಶ್ಚಿಮ ಏಷ್ಯಾ ಮತ್ತು ದಕ್ಷಿಣ-ಪೂರ್ವ ಏಷ್ಯಾ ದೇಶಗಳೊಡನೆ ಸಂಬಂಧಗಳನ್ನು ಬಲಗೊಳಿಸುವುದು ಮತ್ತು ‘ಲ್ಯಾಟಿನ್ ಅಮೆರಿಕನ್ ಮತ್ತು ಕೆರಿಬಿಯನ್ ದೇಶಗಳ ಸಮುದಾಯ’(ಕಮ್ಯುನಿಟಿ ಆಫ್ ಲ್ಯಾಟಿನ್ ಅಮೇರಿಕನ್ ಅಂಡ್ ಕರ‍್ರಿಬಿಯನ್ ಕಂಟ್ರಿಸ್-CELAC) ದೊಂದಿಗೆ ಹತ್ತಿರದ ಸಂಬಂಧವನ್ನು ಬೆಸೆಯುವುದು.

ಗಡಿಯಾಚೆಗಿನ ಭಯೋತ್ಪಾದನೆಯೂ ಸೇರಿದಂತೆ ಎಲ್ಲ ಬಾಕಿಯಿರುವ ವಿಚಾರಗಳನ್ನು ಪರಿಹರಿಸಲು ಪಾಕಿಸ್ತಾನದೊಂದಿಗೆ ಮಾತುಕತೆಯನ್ನು ಆರಂಭಿಸುವುದು.

ಬಾಂಗ್ಲಾದೇಶದೊಂದಿಗೆ ಸಂಬಂಧಗಳನ್ನು ಬೆಸೆಯಲು ವಿಶೇಷ ಪ್ರಯತ್ನಗಳು ಮತ್ತು ತೀಸ್ತಾ ಜಲ ಒಪ್ಪಂದವನ್ನು ಇತ್ಯರ್ಥಗೊಳಿಸುವುದು.
ಈಗಲೂ ಪ್ರಭುತ್ವರಹಿತವಾಗಿರುವ ರೋಹಿಂಗ್ಯಾರ ಪ್ರಶ್ನೆಗಳಿಗೆ ಗಮನ ನೀಡುವುದು.

ಶ್ರೀಲಂಕಾದಲ್ಲಿ ಉತ್ತರ ಮತ್ತು ಪೂರ್ವ ಪ್ರದೇಶಗಳಿಗೆ ಅಧಿಕಾರವನ್ನು ವಿಕೇಂದ್ರೀಕರಿಸುವ ಮತ್ತು ಆ ಮೂಲಕ ಐಕ್ಯ ಶ್ರೀಲಂಕಾದೊಳಗೇ ತಮಿಳು ಭಾಷಿಕರಿಗೆ ಸ್ವಾಯತ್ತತೆಯನ್ನು ನೀಡುವ ಕುರಿತು ಶ್ರೀಲಂಕಾ ಸರ್ಕಾರದೊಂದಿಗೆ ಚರ್ಚಿಸುವುದು. ಯುದ್ಧದ ಕೊನೆಯ ಹಂತದಲ್ಲಿ ನಡೆಸಲಾದ ದೌರ್ಜನ್ಯಗಳ ಕುರಿತು ಒಂದು ಸ್ವತಂತ್ರ ವಿಶ್ವಾಸಾರ್ಹ ತನಿಖೆಗಾಗಿ ಪ್ರಯತ್ನಗಳನ್ನು ಮುಂದುವರೆಸುವುದು.

ವಿದೇಶಾಂಗ ನೀತಿಯಲ್ಲಿ ಇಸ್ರೇಲಿ-ಪರ ವಾಲಿಕೆಯನ್ನು ಬದಲಾಯಿಸುವುದು.

ಭದ್ರತಾ ವಿಚಾರಗಳು

ಪ್ರಸಕ್ತ ಸರ್ಕಾರವು ಅಮೇರಿಕದೊಂದಿಗೆ ಮಾಡಿಕೊಂಡಿರುವ LEMOA, COMCASA ನಂತಹ ರಕ್ಷಣಾ ಒಪ್ಪಂದಗಳನ್ನು ಪರಿಷ್ಕರಿಸುವುದು; ಅಮೇರಿಕದೊಂದಿಗಿನ ರಕ್ಷಣಾ ಚೌಕಟ್ಟು ಒಪ್ಪಂದದಿಂದ ಹೊರಬರುವುದು; ಅಮೇರಿಕಾದೊಂದಿಗೆ ಮಿಲಿಟರಿ ಸಹಯೋಗ ಒಪ್ಪಂದಗಳ ಮುಂದಿನ ಪ್ರಯತ್ನಗಳನ್ನು ನಿಲ್ಲಿಸುವುದು; ದಕ್ಷಿಣ ಏಷ್ಯಾದಲ್ಲಿ ಯಾವುದೇ ಮಿಲಿಟರಿ ನೆಲೆಗಳ ಅವಕಾಶವಿಲ್ಲ ಎಂಬ ನೀತಿಯನ್ನು ಪ್ರೋತ್ಸಾಹಿಸುವುದು.

ಇಂಡೋ-ಯುಎಸ್ ಪರಮಾಣು ಒಪ್ಪಂದವನ್ನು ಪರಿಷ್ಕರಿಸುವುದು; ವಿದೇಶೀ ಅಣು ರಿಯಾಕ್ಟರ್‌ಗಳ ಆಮದನ್ನು ನಿಲ್ಲಿಸುವುದು; ದೇಶೀಯ ಯುರೇನಿಯಂ ಮತ್ತು ಥೋರಿಯಂ ಮೀಸಲನ್ನು ಆಧರಿಸಿ ನಾಗರಿಕ ಪರಮಾಣು ಶಕ್ತಿಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು.

ವಿಶ್ವಸಂಸ್ಥೆಯ ಮೂಲಕ ಜಾಗತಿಕ ಪರಮಾಣು ನಿಶಸ್ತೀಕರಣ ಸಾಧಿಸುವುದು; ಅಣು ಪರೀಕ್ಷೆ ನಿಷೇಧಕ್ಕೆ ಸಂಸದೀಯ ಅನುಮೋದನೆಯನ್ನು ನೀಡುವುದು; ಹಿಂದೂ ಮಹಾಸಾಗರದಲ್ಲಿನ ಡೀಗೋ ಗಾರ್ಷಿಯಾದಲ್ಲಿರುವ ಅಮೇರಿಕನ್ ಮಿಲಿಟರಿ ನೆಲೆಯಿಂದ ಅಣ್ವಸ್ತçಗಳನ್ನು ತೆಗೆದುಹಾಕಲು ಒತ್ತಾಯಿಸುವುದು.

ಸೈಬರ್ ವ್ಯೊಮದ ಮಿಲಿಟರೀಕರಣವನ್ನು ನಿವಾರಿಸುವ ನೀತಿಗಳನ್ನು ಅನುಸರಿಸುವುದು.

ಸೈಬರ್ ದಾಳಿಗಳಿಂದ ಭಾರತದ ಇಂಟರ್‌ನೆಟ್ ಮತ್ತು ದೂರಸಂಪರ್ಕ ಜಾಲಗಳನ್ನು ರಕ್ಷಿಸುವುದು ಮತ್ತು ಸ್ಥಳೀಯ ಸಾಮರ್ಥ್ಯಗಳ ಬೆಳವಣಿಗೆಯ ಮೂಲಕ ಕಣ್ಗಾವಲು.

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯ ಚೌಕಟ್ಟಿನೊಳಗೆ ಕೆಲಸ ಮಾಡುವ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯ ನಿರ್ಮಾಣ.

ವಿವಿಧ ಗುಪ್ತಚರ ಏಜೆನ್ಸಿಗಳ ನಡುವೆ ಸಮನ್ವಯವನ್ನು ಹೆಚ್ಚಿಸುವುದು ಮತ್ತು ಜನರ ಜೀವಗಳ ರಕ್ಷಣೆಗಾಗಿ ವಿಶ್ವಾಸಾರ್ಹ ಗುಪ್ತಚರ ಮಾಹಿತಿಗಳನ್ನು ಆಧರಿಸಿ ಸೂಕ್ತ ಕಾರ್ಯಾಚರಣೆಯ ಖಾತ್ರಿ.

ಪ್ರಭುತ್ವದ ಒಡೆತನದ ರಕ್ಷಣಾ ಉದ್ದಿಮೆಯ ವಿಸ್ತರಣೆ, ಬೆಳವಣಿಗೆ ಮತ್ತು ಬಲವರ್ಧನೆಯ ಮೂಲಕ ರಕ್ಷಣೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವುದು ಮತ್ತು ಪೂರ್ಣ ಸಾಮರ್ಥ್ಯ ಬಳಕೆಯನ್ನು ಖಾತ್ರಿಗೊಳಿಸುವುದು.

ರಕ್ಷಣಾ ಉಪಕರಣಗಳು ಮತ್ತು ಶಸ್ತಾçಸ್ತçಗಳ ಕೊಳ್ಳುವಿಕೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ವ್ಯವಸ್ಥೆಯನ್ನು ಖಾತ್ರಿಗೊಳಿಸುವುದು. ರಫೇಲ್ ವಿಮಾನ ವ್ಯವಹಾರದಂತಹ ಭ್ರಷ್ಟಾಚಾರ ಹಗರಣಗಳಲ್ಲಿ ತ್ವರಿತವಾದ ವಿಚಾರಣೆ ನಡೆಸುವುದು ಮತ್ತು ಶಿಕ್ಷೆಯನ್ನು ವಿಧಿಸುವುದು.

ಜಮ್ಮು ಮತ್ತು ಕಾಶ್ಮೀರ

ಸಂವಿಧಾನದ ಪರಿಚ್ಛೇದ 370 ರ ಪೂರ್ಣ ವ್ಯಾಪ್ತಿಯೊಳಗೆ ರಾಜ್ಯಕ್ಕೆ ಗರಿಷ್ಟ ಸ್ವಾಯತ್ತತೆಯನ್ನು ಆಧರಿಸಿ ಕಾಶ್ಮೀರ ಸಮಸ್ಯೆಗೆ ರಾಜಕೀಯ ಪರಿಹಾರ; ಜಮ್ಮು, ಕಾಶ್ಮೀರ ಮತ್ತು ಲಡಖ್ ಪ್ರದೇಶಗಳಿಗೆ ಪ್ರಾದೇಶಿಕ ಸ್ವಾಯತ್ತತೆಯನ್ನು ನೀಡುವ ಮೂಲಕ ಸ್ವಾಯತ್ತ ವ್ಯವಸ್ಥೆಯನ್ನು ನಿರ್ಮಿಸುವುದು; ಸಂವಿಧಾನದ ಪರಿಚ್ಛೇದ 35(ಎ) ನ್ನು ತೆಗೆದು ಹಾಕುವ ಎಲ್ಲಾ ಪ್ರಯತ್ನಗಳನ್ನೂ ವಿರೋಧಿಸುವುದು.

ಸಂಬಂಧಿಸಿದ ಎಲ್ಲರೊಂದಿಗೂ ತಕ್ಷಣದಲ್ಲೇ ಮಾತುಕತೆಗಳ ಮೂಲಕ ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸುವುದು.

ಅಮಾಯಕ ಜನರ ವಿರುದ್ಧ ರಕ್ಷಣಾ ಪಡೆಗಳ ಮಿತಿ ಮೀರಿದ ಆಚರಣೆಗಳನ್ನು ತಡೆಯಲು ದೃಢವಾದ ಕ್ರಮಗಳು; ಪ್ರತಿಭಟನಾಕಾರರ ಮೇಲೆ ಪೆಲ್ಲೆಟ್ ಗನ್‌ಗಳು ಮತ್ತು ಇತರೆ ಮಾರಕ ಆಯುಧಗಳ ಬಳಕೆಯನ್ನು ನಿಷೇಧಿಸುವುದು.

ಸಮಾಜದ ಎಲ್ಲಾ ವಿಭಾಗದ ಜನರೊಂದಿಗೆ ಮಾತನಾಡುವ ಮೂಲಕ ಮತ್ತು ಅವರ ನೈಜವಾದ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸುವ ಮೂಲಕ ಕಾಶ್ಮೀರದಲ್ಲಿ ವಿಶ್ವಾಸ ಬೆಳವಣಿಗೆಯ ಕ್ರಮಗಳಿಗೆ ಮುತುವರ್ಜಿ ಮಾಡುವುದು.

ಯುವಜನರ ಉದ್ಯೋಗ ಸೃಷ್ಟಿಗೆ ವಿಶೇಷವಾಗಿ ಗಮನ ಮತ್ತು ಹಾಳಾಗಿರುವ ಮೂಲಸೌಕರ್ಯಗಳ ಪುನರ್‌ರಚನೆ ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ಖಾತ್ರಿಗೊಳಿಸುವುದು.

AFSPA ವನ್ನು ಪೂರ್ಣವಾಗಿ ಹಿಂಪಡೆಯುವುದು.

ಈಶಾನ್ಯ ಪ್ರದೇಶ

ನಾಗರಿಕತ್ವವನ್ನು ನೀಡಲು ಧರ್ಮವನ್ನು ಮಾನದಂಡವಾಗಿ ಮಾಡುವ ನಾಗರಿಕತ್ವ ತಿದ್ದುಪಡಿ ಮಸೂದೆಯನ್ನು ರದ್ದುಗೊಳಿಸುವುದು.

ಸುಪ್ರೀಂ ಕೋರ್ಟ್ ನ ನಿರ್ದೇಶನಗಳ ಪ್ರಕಾರ ಅಸ್ಸಾಂನಲ್ಲಿ ಎನ್‌ಆರ್‌ಸಿ (NRC) ಪ್ರಕ್ರಿಯೆಯನ್ನು ತಕ್ಷಣವೇ ಪೂರ್ಣಗೊಳಿಸುವುದು; ಯಾವುದೇ ಭಾರತೀಯರನ್ನೂ ಹೊರಗಿಡಬಾರದು.

ಇಡೀ ಈಶಾನ್ಯ ಪ್ರದೇಶವನ್ನು ಅಭಿವೃದ್ಧಿಗಾಗಿನ ಆದ್ಯತಾ ಪ್ರದೇಶವೆಂದು ಘೋಷಿಸುವುದು; ಭೌತಿಕ ಮೂಲರಚನೆಗಳನ್ನು ಮತ್ತು ಯುವಜನರಿಗಾಗಿ ವಿಶೇಷ ಉದ್ಯೊÃಗ ಯೋಜನೆಗಳನ್ನು ಅಭಿವೃದ್ಧಿಪಡಿಸುವುದು; ಗಡಿ ಬೇಲಿಯನ್ನು ವೇಗವಾಗಿ ಪೂರ್ಣಗೊಳಿಸುವುದು.

ಸಂವಿಧಾನದ 6 ನೇ ಷೆಡ್ಯೂಲ್ ಅಡಿಯಲ್ಲಿ ಆಡಳಿತಾತ್ಮಕ ಮತ್ತು ಹಣಕಾಸಿನ ಅಧಿಕಾರಗಳನ್ನು ರಕ್ಷಿಸುವುದು ಮತ್ತು ವಿಸ್ತರಿಸುವುದು; ವಿವಿಧ ಜನಾಂಗೀಯ ಗುಂಪುಗಳ ಮತ್ತು ರಾಷ್ಟಿçÃಯತೆಗಳ ಅಸ್ಮಿತೆಗಳನ್ನು ರಕ್ಷಿಸುವುದು.

ದುಡಿಯುವ ಜನತೆಯ ಹಕ್ಕುಗಳ ರಕ್ಷಣೆಯಲ್ಲಿ

ಕಾರ್ಮಿಕ ವರ್ಗ

ಸಿಪಿಐ(ಎಂ) ಪಕ್ಷವು ಇವುಗಳಿಗೆ ಬದ್ಧವಾಗಿದೆ.

ಕಾರ್ಮಿಕರಿಗೆ ಕಾನೂನಾತ್ಮಕ ಕನಿಷ್ಠ ವೇತನವು ರೂ.18,000 ಕ್ಕಿಂತ ಕಡಿಮೆಯಿಲ್ಲದಂತೆ ಖಾತ್ರಿಗೊಳಿಸುವುದು; ವೇತನವು ಗ್ರಾಹಕ ಬೆಲೆ ಸೂಚ್ಯಾಂಕಕ್ಕೆ ಜೋಡಣೆಯಾಗಿರಬೇಕು; 15ನೆಯ ಐಎಲ್‌ಸಿ ಶಿಫಾರಸ್ಸಿನ ಆಧಾರದಲ್ಲಿ ವೇತನ ನಿಗದಿಯಾಗಬೇಕು.

ನೀಡುವ ಸಾಮರ್ಥ್ಯವಿರಬೇಕೆಂಬ ನಿರ್ಬಂಧವಿರದಂತೆ ಕೇಂದ್ರ ಸಾರ್ವಜನಿಕ ವಲಯದ ನೌಕರರಿಗೆ ಕಾಲಾನುಕ್ರಮವಾಗಿ ವೇತನ ಪರಿಷ್ಕರಣೆ, ಏಳನೆಯ ವೇತನ ಆಯೋಗದ ಶಿಫಾರಸ್ಸಿನಂತೆ ಬಾಕಿಯಿರುವ ಕೇಂದ್ರ ಸರ್ಕಾರಿ ನೌಕರರ ಸಮಸ್ಯೆಗಳ ತಕ್ಷಣ ಪರಿಹಾರ.

ಎಲ್ಲ ಕಾರ್ಮಿಕ ವಿರೋಧಿ, ಮಾಲೀಕರ ಪರವಾಗಿರುವ ಕಾರ್ಮಿಕ ಕಾನೂನುಗಳ ತಿದ್ದುಪಡಿಗಳನ್ನು ರದ್ದುಗೊಳಿಸುವುದು. ವಿವಿಧ ರಾಜ್ಯಗಳ ವಲಸೆಗಾರರ ಬಗೆಗಿನ, ವಿಚಾರಗಳನ್ನೂ ಒಳಗೊಂಡಂತೆ ಕಾರ್ಮಿಕ ಕಾನೂನುಗಳ ಕಟ್ಟುನಿಟ್ಟಿನ ಜಾರಿ, ಕಾನೂನು ಜಾರಿ ಮಾಡುವ ಕಾರ್ಮಿಕ ಇಲಾಖೆ ಮತ್ತಿತರ ಸಂಸ್ಥೆಗಳಿಗೆ ಹೆಚ್ಚಿನ ಸಿಬ್ಬಂದಿ ಮತ್ತು ಇತರ ಅನುಕೂಲತೆಗಳನ್ನು ಒದಗಿಸುವ ಮೂಲಕ ಅವುಗಳನ್ನು ಬಲಿಷ್ಠಗೊಳಿಸುವುದು; ಎಲ್ಲ ಕಾರ್ಮಿಕ ನ್ಯಾಯಾಲಯ ಮತ್ತು ಟ್ರಿಬ್ಯುನಲ್‌ಗಳಿಗೆ ನ್ಯಾಯಾಧೀಶರು ಮತ್ತು ಇತರ ಬೆಂಬಲ ಸಿಬ್ಬಂದಿಯನ್ನು ನೇಮಿಸುವುದು.

ಅಸಂಘಟಿತ ಕೆಲಸಗಾರರ ಕುರಿತಾಗಿರುವ ಕಾನೂನುಗಳನ್ನು ಉತ್ತಮಗೊಳಿಸುವುದು ಮತ್ತು ಕಾರ್ಮಿಕ ಸ್ಥಾಯಿ ಸಮಿತಿಯು ನೀಡಿರುವ ಶಿಫಾರಸ್ಸುಗಳನ್ನು ಜಾರಿಮಾಡುವುದು. ಕೆಲಸಗಾರರನ್ನು ಹಲವು ವಿಭಾಗಗಳಲ್ಲಿ ವಿಂಗಡಿಸಿ ವಿವಿಧ ಮಂಡಳಿಗಳಡಿಯಲ್ಲಿ ತರುವ ಪದ್ಧತಿಗೆ ಬದಲಾಗಿ ಎಲ್ಲ ಕೆಲಸಗಾರರಿಗೂ ನೆರವಾಗುವಂತೆ ಏಕಗವಾಕ್ಷಿ ಪದ್ಧತಿ ಜಾರಿ ಮಾಡುವುದು; ಸಾಕಷ್ಟು ಮುಂಗಡಪತ್ರ ವಿನಿಯೋಗದೊಂದಿಗೆ ಅಸಂಘಟಿತ ನೌಕÀರರ ಕಲ್ಯಾಣ ನಿಧಿ ಸ್ಥಾಪಿಸುವುದು. ಜೀವವಿಮೆ, ಮಕ್ಕಳ ಕಲ್ಯಾಣ, ಅಪಘಾತ ವಿಮೆ, ವೃದ್ಧಾಪ್ಯ ವೇತನ, ತಾಯ್ತನವೂ ಒಳಗೊಂಡಂತೆ ಆರೋಗ್ಯ ಸೇವೆ ಈ ಎಲ್ಲವೂ ಲಭ್ಯವಾಗುವಂತೆ ಬಡತನ ರೇಖೆಯ ನಿರ್ಬಂಧವಿರದೆ ಸಾರ್ವತ್ರಿಕ ಸಮಾಜ ಕಲ್ಯಾಣ ಯೋಜನೆಯ ರಕ್ಷಣೆ ನೀಡುವುದು, ಕೃಷಿಕೂಲಿಗಾರರೂ ಸೇರಿದಂತೆ ಎಲ್ಲಾ ಕೆಲಸಗಾರರ  ಸಾಮಾಜಿಕ ಭದ್ರತೆ ಮತ್ತು ದುಡಿಮೆಯ ನಿಯಮಾವಳಿಯನ್ನೊಳಗೊಂಡ ಒಮದು ಸಮಗ್ರ ಶಾಸನ ರೂಪಿಸುವುದು.

‘ಹೊಸ ಪಿಂಚಣಿ ಯೋಜನೆ’ ಮತ್ತು ‘ನಿವೃತ್ತಿ ವೇತನ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’(ಪಿಎಫ್‌ಆರ್‌ಡಿಎ)ವನ್ನು ವಜಾಗೊಳಿಸಿ ಎಲ್ಲ ನೌಕರರಿಗೆ ಫಲ-ನಿರೂಪಿತ ನಿವೃತ್ತಿ ವೇತನ ಯೋಜನೆ ಜಾರಿಮಾಡಿ ಈ ನೌಕರರ ಕಟ್ಟಕಡೆಯ ಸಂಬಳದ ಶೇ.50ರಷ್ಟು (ಗ್ರಾಹಕ ದರ ಬೆಲೆ ಸೂಚ್ಯಾಂಕ ಅನುಸಾರವಾಗಿ) ನಿವೃತ್ತಿವೇತನ ಸಾಧ್ಯವಾಗುವಂತೆ ಮಾಲೀಕರು ಮತ್ತು ಸರ್ಕಾರಗಳು ತಮ್ಮ ಕೊಡುಗೆ ನೀಡುವಂತೆ ಮಾಡುವುದು.

ಮೋಟಾರು ವಾಹನ (ತಿದ್ದುಪಡಿ) ಮಸೂದೆಯ ವಾಪಸಾತಿ; ಅಸಂಘಟಿತ ಸಾರಿಗೆ ನೌಕರರಿಗೂ ಸಾಮಾಜಿಕ ಭದ್ರತೆ ಯೋಜನೆ ಒದಗಿಸುವುದು.

ಗುಪ್ತ ಮತದಾನದ ಮೂಲಕ ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ನೀಡುವುದು ಮತ್ತು ಕಾರ್ಮಿಕ ಹಕ್ಕುಗಳ ರಕ್ಷಣೆ, ಎಲ್ಲ ಸಂಸ್ಥೆಗಳಲ್ಲಿ ಕಾರ್ಮಿಕ ಸಂಘಟನೆಗಳಿಗೆ ಮಾನ್ಯತೆ ನೀಡುವುದನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸುವುದು. ಅಂತರಾಷ್ಟಿçÃಯ ಕಾರ್ಮಿಕ ಸಂಘಟನೆ(ಐಎಲ್‌ಒ) ಅಧಿನಿರ್ಣಯ ಸಂ.87, 98 ಮತ್ತು 189 ಗಳನ್ನೂ ಮಂಜೂರು ಮಾಡಿ ಮನೆಕೆಲಸಗಾರರೂ ಸೇರಿದಂತೆ ಸಂಘ ಕಟ್ಟುವ ಹಕ್ಕು ಮತ್ತು ಸಾಮಾಜಿಕ ಚೌಕಾಶಿ ಹಕ್ಕಿನ ವಿಚಾರಗಳಲ್ಲಿ ತಿದ್ದುಪಡಿ ತರುವುದು.

ಖಾಸಗಿ ಮತ್ತು ಸಾರ್ವಜನಿಕ ವಲಯಗಳೆರಡರಲ್ಲೂ ನಿರ್ಣಯ ಪ್ರಕ್ರಿಯೆಯಲ್ಲಿ ದುಡಿಮೆಗಾರರ ಪ್ರಾತಿನಿಧ್ಯಕ್ಕೆ ಅನುವು ಮಾಡಿಕೊಡುವುದು; ದ್ವಿಪಕ್ಷಿÃಯ ಮತ್ತು ತ್ರಿಪಕ್ಷಿÃಯ ವ್ಯವಸ್ಥೆಗಳನ್ನು ಬಲಪಡಿಸುವುದು; ಕಾರ್ಮಿಕರ ಸಂಬಂಧಿಸಿದ ಯಾವುದೇ ನಿರ್ಣಯ ತೆಗೆದುಕೊಳ್ಳುವಾಗಲೂ ಅವರ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಹಮತದೊಂದಿಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು. ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳೊಂದಿಗೆ ಕಾಲಕಾಲಕ್ಕೆ ಅರ್ಥಪೂರ್ಣ ಸಂವಾದ ನಡೆಸುವುದು.

ಕೆಲಸಗಳನ್ನು ತಾತ್ಕಾಲಿಕವಾಗಿ ಇಲ್ಲವೆ ಗುತ್ತಿಗೆಯ ಮೂಲಕ ಮಾಡಿವುದನ್ನು ನಿರುತ್ತೇಜಗೊಳಿಸುವುದು. ಗುತ್ತಿಗೆ ಕೆಲಸ (ನಿರ್ಬಂಧ ಮತ್ತು ನಿರ್ಮೂಲನೆ) ಕಾನೂನಿನ ಕಡ್ಡಾಯ ಜಾರಿ; ಸಮಾನ ಕೆಲಸಕ್ಕೆ ಸಮಾನ ವೇತನದ ಅನುಸಾರವಾಗಿ ಗುತ್ತಿಗೆ ಕೆಲಸಗಾರರಿಗೂ ಖಾಯಂ ಕೆಲಸಗಾರರಷ್ಟೇ ವೇತನ ಮತ್ತು ಸೌಲಭ್ಯಗಳನ್ನು ನೀಡುವುದು; ಖಾಯಂ ಮತ್ತು ನಿರಂತರ ಸ್ವರೂಪದ ಕೆಲಸಗಳನ್ನು ಗುತ್ತಿಗೆ ಮತ್ತು ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸುವುದು; ಭಾರತವೂ ಸಹಿ ಮಾಡಿರುವ Iಐಔ 204ರ ಶಿಫಾರಸ್ಸಿನ ಭಾವನೆಯನ್ನು ಉಲ್ಲಂಘಿಸಿರುವ  ‘ನಿರ್ದಿಷ್ಟ ಅವಧಿಯ ಉದ್ಯೋಗ’ವನ್ನು ತಕ್ಷಣವೇ ರದ್ದು ಮಾಡುವುದು; ಗುತ್ತಿಗೆ ಕೆಲಸಗಾರರು ಮತ್ತು ಅಸಂಘಟಿತ ಕೆಲಸಗಾರರ ಹಕ್ಕುಗಳನ್ನು ರಕ್ಷಿಸಲು ಕಾರ್ಮಿಕ ಸಂಘಟನೆಗಳನ್ನು ಕಟ್ಟುವ ಅದರ ಪೂರ್ಣವಧಿ ಸದಸ್ಯರಾಗುವ, ಮತದಾನ ಮಾಡುವ ಹಕ್ಕುಗಳನ್ನು ರಕ್ಷಿಸುವುದು; ಸಂಘಟನೆ ಕಟ್ಟುವ ಮತ್ತು ಮುಷ್ಕರ ಹೂಡುವ ಅವರ ಮೂಲಭೂತ ಹಕ್ಕು ಚಲಾಯಿಸುವಂತೆ ಮಾಡುವುದು; ಕಾರ್ಮಿಕ ಕಲ್ಯಾಣ ಮಂಡಳಿಗಳನ್ನು ಬಲಗೊಳಿಸುವುದು.

ಎಲ್ಲ ಉದ್ಯೋಗಗಳಲ್ಲೂ ಮಹಿಳಾ ಕೆಲಸಗಾರರಿಗೆ ಸಮಾನ ವೇತನ ನೀಡುವುದು; ಗೃಹಾಧಾರಿತ ಕೆಲಸಗಾರರೂ ಸೇರಿದಂತೆ ಎಲ್ಲ ಮಹಿಳಾ ಕೆಲಸಗಾರರಿಗೂ ಹೆರಿಗೆ ಸೌಲಭ್ಯ, ಆರೋಗ್ಯ ವಿಮೆ ಮತ್ತು ನಿವೃತ್ತಿವೇತನದಂತಹ ಸಾಮಾಜಿಕ ಭದ್ರತೆಯ ಯೋಜನೆ ಜಾರಿಮಾಡುವುದು.

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ವಿರೋಧಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವುದು.

ಮಹಿಳಾ ಕೆಲಸಗಾರರಿಗೆ 26 ವಾರಗಳ ವೇತನ ಸಹಿತ ಹೆರಿಗೆ ರಜೆ, ಹೆರಿಗೆ ಸೌಲಭ್ಯ ಮತ್ತು ಶಿಶು ಪಾಲನಾ ಕೇಂದ್ರ ಸೌಲಭ್ಯಗಳು; ಸರ್ಕಾರದ ವಿವಿಧ ಯೋಜನೆಗಳಾದ ಅಂಗನವಾಡಿ, ಆಶಾ, ಬಿಸಿಯೂಟ, ಅರೆಶಿಕ್ಷಕ, ರಾಷ್ಟಿçÃಯ ಆರೋಗ್ಯ ಮಿಷನ್ ಇವುಗಳಲ್ಲಿ ದುಡಿಯುತ್ತಿರುವ ಕಾರ್ಯಕರ್ತೆಯರನ್ನು ನೌಕರರೆಂದು ಗುರುತಿಸಿ ಅವರಿಗೆ ಕಾನೂನಾತ್ಮಕವಾಗಿ ದೊರೆಯಬೇಕಾದ ಕನಿಷ್ಟ ವೇತನ, ಸಾಮಾಜಿಕ ಭದ್ರತೆಯ ಸೌಲಭ್ಯಗಳು, ನಿವೃತ್ತಿ ವೇತನ ಇತ್ಯಾದಿಗಳನ್ನು ನೀಡುವುದು. ಅವರ ಕಾರ್ಮಿಕ ಹಕ್ಕುಗಳನ್ನು ರಕ್ಷಿಸುವುದು.

ರೈತಾಪಿ ಜನತೆ

ಸಿಪಿಐ(ಎಂ) ಪಕ್ಷವು ಇವುಗಳಿಗೆ ಬದ್ಧವಾಗಿದೆ

ಕೃಷಿಯು ಪ್ರತಿಫಲದಾಯಕವಾಗುವಂತೆ ರಾಷ್ಟ್ರೀಯ ಕೃಷಿ ಆಯೋಗದ ಶಿಫಾರಸ್ಸುಗಳನ್ನು ಜಾರಿಮಾಡುವುದು.

ಎಲ್ಲ ಬೆಳೆಗಳ ಎಲ್ಲ  ವೆಚ್ಚಗಳಿಗೆ ಅನ್ವಯವಾಗುವಂತೆ ಸ್ಥಿರ ಮತ್ತು ಪ್ರತಿಫಲದಾಯಕ ಬೆಲಗಳನ್ನು ಖಾತ್ರಿಗೊಳಿಸುವುದು ; ಬೆಳೆಯಲು ತಗುಲಬಹುದಾದ ಎಲ್ಲ ವೆಚ್ಚ, ಕುಟುಂಬದ ಜನರ ದುಡಿಮೆ ಮತ್ತು ಭೂ ಬಾಡಿಗೆಗಳನ್ನು ಸೇರಿಸಿ ತಗಲುವ ವೆಚ್ಚ ಕಳೆದು ಕಡೇ ಪಕ್ಷ ಶೇ.50ರಷ್ಟು ಪ್ರತಿಫಲ ದೊರೆಯುವಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಮಾಡುವುದು.

ಬೆಳೆಗಳನ್ನು ಸರ್ಕಾರವೇ ಕೊಳ್ಳುವುದು ಸಾಧ್ಯವಾಗುವಂತೆ ಎಲ್ಲ ಪ್ರದೇಶಗಳಲ್ಲಿ ಖರೀದಿ ಸೌಲಭ್ಯ ಒದಗಿಸುವ ಮೂಲಕ ಸಾಕಷ್ಟು ಬೆಳೆಗಳನ್ನು ಸಕಾಲದಲ್ಲಿ ಕೊಳ್ಳುವುದು.

ಸಾಂಸ್ಥಿಕ ಮತ್ತು ಲೇವಾದೇವಿದಾರರಿಂದಲೂ ತೆಗೆದುಕೊಂಡ ಸಾಲಗಳಿಂದ ಬಾಧಿತರಾದ ರೈತರಿಗೆ  ಸಮಗ್ರ ಋಣ ಪರಿಹಾರ ಮತ್ತು ಸಾಲ ಮನ್ನಾವನ್ನು ಖಾತ್ರಿಗೊಳಿಸುವುದು.

ಎಲ್ಲ ಸಣ್ಣ, ಅತಿ ಸಣ್ಣ ರೈತರು, ಗೇಣಿದಾರರು ಮತ್ತು ಭಾಗಬೆಳೆಗಾರ ರೈತರೆಲ್ಲರಿಗೂ ಅನ್ವಯಿಸುವಂತೆ ಒಂದು ನೈಜವಾದ ಸಮಗ್ರ ಬೆಳೆ ವಿಮಾ ಯೋಜನೆ ರೂಪಿಸುವುದು.

ಸಕಾಲದಲ್ಲಿ ರೈತರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಬೀಜಗೊಬ್ಬರ ಇತ್ಯಾದಿಗಳನ್ನು ಕಡಿಮೆ ಬೆಲೆಗೆ ಒದಗಿಸುವುದು.

ಸಾಂಪ್ರದಾಯಿಕ ಬೀಜಗಳು ಮತ್ತು ಜೀವವೈವಿಧ್ಯದ ಮೇಲಿನ ರೈತರ ಅಧಿಕಾರ ಗುರುತಿಸಿ ಅವರ ಬೀಜಗಳ ಮರುಬಳಕೆಯ ಹಕ್ಕುಗಳನ್ನು ಎತ್ತಿಹಿಡಿಯುವುದು.

ಒಂದು ‘ರಾಷ್ಟ್ರೀಯ ಮಣ್ಣಿನ ಗುಣಮಟ್ಟ ಸುಧಾರಣೆ ಮತ್ತು ಪೂರಣ ಯೋಜನೆ’ಯನ್ನು ಸುಸ್ಥಿರ ಜಲಸಂನ್ಮೂಲ ನಿರ್ವಹಣೆಯೊಂದಿಗೆ ಆರಂಭಿಸುವುದು.

ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಕೂಲಿ ಸಬ್ಸಿಡಿ ನೀಡುವುದು.

ಕೃಷಿ ಕೂಲಿಕಾರರು

ಸಿಪಿಐ(ಎಂ) ಪಕ್ಷವು ಇವುಗಳಿಗೆ ಬದ್ಧವಾಗಿದೆ.

ಕೃಷಿಕೂಲಿಕಾರರ ಕನಿಷ್ಠ ದಿನಗೂಲಿಯನ್ನು ರೂ.600 ಕ್ಕೆÃರಿಸುವುದು ಮತ್ತು ಮಹಿಳಾ ಕೂಲಿಕಾರರಿಗೆ ಸಮಾನ ಕೂಲಿ ನೀಡುವುದು.

ಕನಿಷ್ಠ ಕೂಲಿ ಕಾಯ್ದೆಯನ್ನು ಜಾರಿ ಮಾಡಲು ಇರುವ ನಿಯಂತ್ರಣ ಮತ್ತು ಜಾರಿ ವ್ಯವಸ್ಥೆಯನ್ನು ಪುನಶ್ಚೆÃತನಗೊಳಿಸುವುದು.

ಉದ್ಯೋಗ ಖಾತ್ರಿ ಯೋಜನೆಗಿರುವ ನೂರು ದಿನಗಳ ಮಿತಿಯನ್ನು ತೆಗೆದುಹಾಕುವುದು; ನೀಡುವ ಕೂಲಿಯನ್ನು ರಾಜ್ಯದ ಕನಿಷ್ಠ ಕೂಲಿಗೆ ಸಮಾನವಾಗಿರುವಂತೆ ನೋಡಿಕೊಳ್ಳುವುದು ಮತ್ತು ಯೋಜನೆಯಡಿ ಉದ್ಯೊÃಗ ನೀಡುವುದು ಸಾಧ್ಯವಾಗದಿದ್ದರೆ ನಿರುದ್ಯೊÃಗ ಭತ್ಯೆ ನೀಡುವುದು.

ಕೇಂದ್ರ ಸರ್ಕಾರವೇ ಹಣಕಾಸು ಒದಗಿಸಿ ಕೃಷಿಕೂಲಿಕಾರರಿಗೆ ಕನಿಷ್ಠ ವೇತನ, ನಿವೃತ್ತಿ ವೇತನ, ಅಪಘಾತ ಪರಿಹಾರ ನೀಡುವುದು ಮತ್ತು ಅವರ ಸಾಮೂಹಿಕ ಚೌಕಾಶಿ ಹಕ್ಕು ನೀಡುವಂತೆ ಒಂದು ಸಮಗ್ರ ಕಾನೂನು ರೂಪಿಸುವುದು.

ಕೃಷಿ ಕೂಲಿಕರರಿಗೆ ಭೂ ವಿತರಣೆ ಮಾಡುವುದು; ಎಲ್ಲ ಗ್ರಾಮೀಣ ಕುಟುಂಬಗಳಿಗೆ ನಿವೇಶನ ನೀಡುವುದು ಮತ್ತು ಅವರಿಗೆ ಮನೆಗಳನ್ನು ಕಟ್ಟಿಸುವುದು.

ಭೂಸ್ವಾಧೀನ ಮತ್ತು ಸ್ಥಳಾಂತರವಾದಾಗ ಕೃಷಿಕೂಲಿಕಾರರನ್ನು ಸಂತ್ರಸ್ತರೆಂದು ಗುರುತಿಸಿ ಅವರಿಗೆ ಪುನರ್ವಸತಿ ಮತ್ತು ಪರಿಹಾರಕ್ಕೆ ಹಕ್ಕುದಾರರೆಂದು ಗುರುತಿಸುವುದು.

ಎಂಡೋಸಲ್ಫಾನ್ ನಂತಹ ಮಾರಕ ಕೀಟನಾಶಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಮತ್ತು ಅದರಿಂದ ಬಾಧಿತರಾದ ಕೃಷಿಕೂಲಿಕಾರರಿಗೆ ಆರೋಗ್ಯ ಸೇವೆ ಮತ್ತು ಔಷಧಿಗಳನ್ನು ಒದಗಿಸುವುದು.

ದಲಿತ ಮತ್ತು ಆದಿವಾಸಿಗಳ ಸಂವಿಧಾನಾತ್ಮಕ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅವರ ವಾಸಸ್ಥಳಗಳನ್ನು ಅಭಿವೃದ್ಧಿಗೊಳಿಸುವುದು.

ವಲಸೆಗಾರ ಕೃಷಿಕೂಲಿಕಾರರಿಗೂ ನೆರವಾಗುವಂತೆ ಅಖಿಲ ಭಾರತ ಮಟ್ಟದಲ್ಲಿ ಎಲ್ಲ ಕೃಷಿಕಾರರಿಗೆ ಸಂಪೂರ್ಣ ಮತ್ತು ಸಾರ್ವತ್ರಿಕ ಸಾಮಾಜಿಕ ಸುರಕ್ಷತೆ ದೊರೆಯುವಂತೆ ಏಕಗವಾಕ್ಷಿ ಯೋಜನೆಯನ್ನು ನೀಡುವುದು.

ಮೀನುಗಾರಿಕಾ ಕೆಲಸಗಾರರು

ಮೀನುಗಾರರ ಕ್ಷೇಮಾಭಿವೃದ್ಧಿಗೆ ಮಂಡಳಿಗಳನ್ನು ಸ್ಥಾಪಿಸಿ ಅವರಿಗೆ ಗುರುತಿನ ಚೀಟಿ ಮತ್ತು ಸಾಮಾಜಿಕ ಭದ್ರತಾ ಯೋಜನೆ ನೀಡುವುದು.

ವಿದೇಶಿ ಮೀನುಗಾರರು ಮತ್ತು ದೊಡ್ಡ ಮೀನುಗಾರರ ವಿನಾಶಕಾರಿ ಮೀನುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು.

ಕಡಲ ತೀರಗಳನ್ನು ಪ್ರವಾಸೋದ್ಯಮ, ಹೋಟೆಲ್ ಮತ್ತು ಇತರ ಉದ್ಯಮಗಳಿಗೆ ತೆರವು ಮಾಡುವ 2018ರ CRZ ಪ್ರಕಟಣೆಯನ್ನು ಹಿಂತೆಗೆದುಕೊಳ್ಳುವುದು ಮತ್ತು ಕಡಲ ತೀರದ ಮೇಲಿನ ಮೀನುಗಾರರ ಹಕ್ಕುಗಳನ್ನು ಇಲ್ಲವಾಗಿಸಿ ಭೂಮಾಲೀಕರಿಗೆ ನೀಡುವುದನ್ನು ತಪ್ಪಿಸುವುದು.

ಸಮಾನ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ

ಮಹಿಳೆಯರು:

ಸಿಪಿಐ(ಎಂ) ಈ ಕೆಳಗಿನವುಗಳಿಗೆ ಬದ್ಧವಾಗಿದೆ:

ಶಾಸನಸಭೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ಒದಗಿಸಲು ಅಗತ್ಯ ಕಾಯ್ದೆಯನ್ನು ತರಲು,

ತ್ರಿವಳಿ ತಲಾಖ್‌ನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿರುವ ಸುಗ್ರಿÃವಾಜ್ಞೆಯನ್ನು ರದ್ದುಗೊಳಿಸಲು,
ಮಹಿಳೆಯರು ಮತ್ತು ಮಕ್ಕಳನ್ನು ದುಡಿಮೆ ಹಾಗೂ ಲೈಂಗಿಕ ಕಾರಣಗಳಿಗೆ ಕದ್ದು ಸಾಗಿಸುವುದನ್ನು ನಿರ್ಬಂಧಿಸುವ ಸಲುವಾಗಿ ಸಮರ್ಪಕ ಕಾನೂನು ತರಲು

ಹುಟ್ಟಿದ  ಮತ್ತು ಮದುವೆಯಾದ ಕುಟುಂಬಗಳ ಆಸ್ತಿಯಲ್ಲಿ ಮಹಿಳೆಯರಿಗೆ ಸಮ ಪಾಲು ದೊರೆಯುವಂತ ಎಕಾನೂನು ತರಲು; ಮಹಿಳೆಯರು ಮತ್ತು ಮಕ್ಕಳಿಗೆ ಜೀವನಾಂಶದ ಕಾನೂನನ್ನು ಸಶಕ್ತಗೊಳಿಸಲು; ಒಂದೇ ಉಸಿರಿಗೆ ತಲಾಖ್ ಹೇಳಿಸಿಕೊಂಡ ಮಹಿಳೆಯೂ ಸೇರಿದಂತೆ ಎಲ್ಲ ಪರಿತ್ಯಕ್ತ ಮಹಿಳೆಯರ ರಕ್ಷಣೆ, ಪುನರ್ವಸತಿ, ಬದುಕಿಗೆ ಮಾರ್ಗಗಳನ್ನು ರೂಪಿಸಲು

ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಸುವ ಎಲ್ಲ ರೀತಿಯ ಹೀನ ಕ್ರೌರ್ಯಗಳನ್ನು ನಿಯಂತ್ರಿಸಲು ಮತ್ತು ಅದಕ್ಕೆ ಕಾರಣರಾದ ಅಪರಾಧಿಗಳಿಗೆ ಶಿಕ್ಷೆ ವಿಧಿಸಲು

ಲೈಂಗಿಕ ಅಪರಾಧ ತಡೆ ಕಾನೂನಿಗೆ ತಿದ್ದುಪಡಿ ತರುವಾಗ ಕೈ ಬಿಟ್ಟಿರುವ ಜಸ್ಟಿÃಸ್ ವರ್ಮಾ ಆಯೋಗದ ಶಿಫಾರಸುಗಳನ್ನು ಸೇರ್ಪಡೆ ಮಾಡುವುದು;

ಲಿಂಗ ಸಮಾನತೆಯ ಪಠ್ಯಗಳನ್ನು ಶಿಕ್ಷಣದಲ್ಲಿ ಅಳವಡಿಸುವುದು.

ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ವಾತಾವರಣ ಕಲ್ಪಿಸುವುದು,

ವಿಕಲಾಂಗ ಮಹಿಳೆಯರಿಗೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಸರಾಗವಾದ ಪ್ರವೇಶಾವಕಾಶ ಕಲ್ಪಿಸುವುದು,

ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮಹಿಳೆಯರ ಮೇಲೆ ನಡೆಯುವ ಜಾತಿ ಆಧಾರಿತ ದೌರ್ಜನ್ಯಗಳಿಗೆ ಶಿಕ್ಷೆಯ ಪ್ರಮಾಣ ಹೆಚ್ಚಿಸುವುದು.

ಪೋಲೀಸರೂ ಸೇರಿದಂತೆ ದೂರುಗಳನ್ನು ನಿಸ್ಸತ್ವಗೊಳಿಸುವ, ವಿಳಂಬ ಮಾಡುವ ವ್ಯಕ್ತಿಗಳಿಗೆ ದಂಡ ವಿಧಿಸುವುದು.

ತ್ವರಿತ ನ್ಯಾಯಾಲಯಗಳನ್ನು ರಚಿಸಲು, ವೈವಾಹಿಕ ಅತ್ಯಾಚಾರವನ್ನು ಅಪರಾಧವನ್ನಾಗಿ ಪರಿಗಣಿಸಲು, ಭಾರತೀಯ ದಂಡ ಸಂಹಿತೆಯ ಕಲಮು 498ಏ ಯನ್ನು ಸಡಿಲಗೊಳಿಸದಿರಲು,

ಲೈಂಗಿಕ ದೌರ್ಜನ್ಯ, ಆಸಿಡ್ ಧಾಳಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ಸಂತ್ರಸ್ತರಿಗೆ ಸಂಪೂರ್ಣ ಹಣಕಾಸಿನ ನೆರವಿನೊಂದಿಗೆ ಪುನರ್ವಸತಿ ಯೋಜನೆ ಕಲ್ಪಿಸಲು,

ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ, ಲೈಂಗಿಕ ದೌರ್ಜನ್ಯ ನಿಯಂತ್ರಣ ಕಾಯಿದೆ, ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಮತ್ತು ಲೈಂಗಿಕ ಹಿಂಸೆಯನ್ನು ತಡೆಗಟ್ಟಲು, ಅದರಲ್ಲಿಯೂ ಮಕ್ಕಳ ಮೇಲಿನ ಲೈಂಗಿಕ ಹಿಂಸಾಚಾರ ತಡೆಯಲು ಇರುವ ಕಾಯಿದೆಗಳನ್ನು ಹಾಗೂ ಪರಿಹಾರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಕೇಂದ್ರದಿಂದ ಅನುದಾನ ಒದಗಿಸಲು,

ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು. ಕಾಯ್ದೆಯಡಿ ಇರಬೇಕಾದ ಈಗ ನಿಷ್ಕಿçಯಗೊಂಡಿರುವ ಪರಿಶೀಲನಾ ಸಮಿತಿಗಳನ್ನು ಸಕ್ರಿಯಗೊಳಿಸಲು,

* ಈ ಕೆಳಗಿನ ಹೊಸ ಕಾನೂನುಗಳನ್ನು ರಚಿಸಲು,

ಮರ್ಯಾದೆಯ ಹೆಸರಿನ ಹತ್ಯೆಗಳನ್ನು ತಡೆಯಲು ಒಂದು ಪ್ರತ್ಯೇಕ ಕಾನೂನು ಮಹಿಳೆಯರು ಮತ್ತು ಮಕ್ಕಳನ್ನು ಕದ್ದು ಸಾಗಿಸುವುದರ ವಿರುದ್ಧ,
ಮಹಿಳೆ ಮತ್ತು ಮಕ್ಕಳಿಗೆ ಜೀವನಾಂಶದ ಕಾನೂನನ್ನು ಇನ್ನಷ್ಟು ಬಲಗೊಳಿಸಲು,

ಹಿಂದಿನ ತ್ರಿಪುರಾ ಸರ್ಕಾರ ಜಾರಿಗೆ ತಂದಿದ್ದ ರೀತಿಯಲ್ಲಿಯೇ ಪರಿತ್ಯಕ್ತ ಮಹಿಳೆಯರಿಗೆ ಭತ್ಯೆ ನೀಡಲು,

ವಿಧವೆಯರು, ಸೇರಿದಂತೆ ಮಹಿಳೆಯರೇ ಕುಟುಂಬದ ಜವಾಬ್ದಾರಿ ಹೊತ್ತ ಎಲ್ಲ ಒಂಟಿ ಮಹಿಳೆಯರಿಗೆ ವಿಶೇಷ ಯೋಜನೆಯನ್ನು ಜಾರಿಗೆ ತರಲು.

ಮಹಿಳೆಯರ ಸ್ವ ಸಹಾಯ ಗುಂಪುಗಳಿಗೆ ಬ್ಯಾಂಕ್ ಲಿಂಕೇಜ್ ಕೊಡಿಸಿ, 4%ಗೆ ಮೀರದಂತೆ ಸಾಲ ಸೌಲಭ್ಯ ಒದಗಿಸಲು ಮತ್ತು ಪರಿಶಿಷ್ಟ ಜಾತಿ ಪಂಗಡದ ಮಹಿಳೆಯರಿಗೆ ವಿಶೇಷ ರಿಯಾಯಿತಿ ಕಲ್ಪಿಸಲು,

ಮನೆಗೆಲಸ ಮತ್ತು ಗೃಹಾಧಾರಿತ ಉದ್ದಿಮೆಗಳಲ್ಲಿ ಕೆಲಸಮಾಡುವ ಮಹಿಳೆಯರ ರಕ್ಷಣೆಗೆ ಕಾಯ್ದೆಯನ್ನು ತರುವ,

ಚುನಾಯಿತ ಪ್ರತಿನಿಧಿಗಳು ಮತ್ತು ಇತರ ಕ್ಷೇತ್ರಗಳಲ್ಲಿರುವವರೂ ಸೇರಿದಂತೆ ಯಾರೇ ಮಹಿಳೆಯರ ಕುರಿತು ಹಗುರವಾಗಿ, ಅವಹೇಳನಕಾರಿಯಾಗಿ ಮಾತನಾಡದಂತೆ, ಸ್ತ್ರೀ ದ್ವೇಷಿ ಲಿಂಗಸೂಕ್ಷ್ಮತೆಯನ್ನು ಮರೆತ ಹೇಳಿಕೆಗಳನ್ನು ನೀಡದಂತೆ ನೀತಿ ಸಂಹಿತೆಯನ್ನು ತರಲು,

ಆಯವ್ಯಯದಲ್ಲಿ ಮಹಿಳೆಯರಿಗಾಗಿಯೇ ಬಜೆಟ್ ರೂಪಿಸುವ ಮತ್ತು ಈಗಿರುವ 30% ನಿಂದ 40% ಗೆ ಮೀಸಲಿಡುವ ಪರಿಪಾo ಬೆಳೆಸಿಕೊಳ್ಳಲು,

ಮಕ್ಕಳು:

ಸಿಪಿಐ(ಎಂ) ಮಕ್ಕಳ ಹಕ್ಕಿನ ರಕ್ಷಣೆಯನ್ನು ಬಲವಾಗಿ ಪ್ರತಿಪಾದಿಸುತ್ತದೆ ಮತ್ತು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ.

0-6 ರ ವಯೋಮಾನದ ಎಲ್ಲ ಮಕ್ಕಳಿಗೂ ಅನ್ವಯವಾಗುವಂತೆ ಸಮಗ್ರ ಶಿಶುಅಭಿವೃದ್ದಿ ಯೋಜನೆಯನ್ನು ಸಾರ್ವತ್ರಿÃಕರಿಸಲು, ಅದರಖಾಸಗೀಕರಣವನ್ನು ಹಿಂಪಡೆಯಲು,

ಅಂಗನವಾಡಿ ಮತ್ತು ಶಾಲೆಗಳ ಮಕ್ಕಳಿಗೆ ಪೌಷ್ಟಿಕಾಂಶ ದೊರಕುವಂತೆ ತಲಾ ವೆಚ್ಚಕ್ಕೆ ಹೆಚ್ಚು ಹಣ ಕೊಡಲು, ಅಂಗನವಾಡಿ ಕೇಂದ್ರಗಳಲ್ಲಿ ಶಿಶುಪಾಲನಾ ವ್ಯವಸ್ಥೆಯನ್ನು ತರಲು,

3 ರಿಂದ 18 ರ ವಯೋಮಾನದ ವರೆಗೆ ಎಲ್ಲ ಮಕ್ಕಳೂ ಆರ್.ಟಿ.ಇ ಕಾಯ್ದೆಯ ಅಡಿಯಲ್ಲಿ ಬರುವಂತೆ ಮತ್ತು ವಿಕಲಾಂಗ ಮಕ್ಕಳಿಗೂ ಅನ್ವಯಿಸುವಂತೆ ಆ ಕಾಯ್ದೆಯನ್ನು ವಿಸ್ತರಿಸಲು,

ಎಲ್ಲ ಜಿಲ್ಲೆಗಳಲ್ಲಿಯೂ ಮಕ್ಕಳ ಆಟೋಟಗಳಿಗೆ ಅಗತ್ಯವಾದ ಆಟದ ಬಯಲನ್ನು ಒದಗಿಸಲು

ಎಲ್ಲ ಬಗೆಯ ಬಾಲ್ಯ ದುಡಿಮೆಯನ್ನು ನಿಷೇಧಿಸುವ ಮತ್ತು ಬಾಲ ಕಾರ್ಮಿಕರಾಗಿರುವ ಮಕ್ಕಳ ಪುನರ್ವಸತಿಗೆ ವಿಶೇಷ ಹೆಚ್ಚುವರಿ ಅನುದಾನ ಒದಗಿಸಲು

ಆದಿವಾಸಿ, ದಲಿತ ಮತ್ತಿತರ ಸಮಾಜದ ಅಂಚಿಗೆ ತಳ್ಳಲ್ಪಟ್ಟ ವಿಭಾಗದ ಮಕ್ಕಳು ಮತ್ತು ಇತರ ವಿಭಾಗದ ಮಕ್ಕಳ ಮಧ್ಯೆ ಹೆಚ್ಚುತ್ತಿರುವ ಕಂದರವನ್ನು ತುಂಬಲು ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ಅತ್ಯಾಧುನಿಕ ಸೌಲಭ್ಯಗಳುಳ್ಳ ಸನಿವಾಸ ಶಾಲೆಗಳೂ ಸೇರಿದಂತೆ ಅಗತ್ಯವಾದ ಕ್ರಮ ಕೈಗೊಳ್ಳಲು ಮತ್ತು ಇದಕ್ಕಾಗಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು, ಯಾವುದೇ ಹಂತದಲ್ಲಿಯೂ ಇರಬಹುದಾದ ತಾರತಮ್ಯ ಧೋರಣೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು,

ವಿಶೇಷ ಪೌಷ್ಟಿಕಾಂಶ ಪೂರೈಕೆ, ಪ್ರತಿರಕ್ಷಣೆ(ಇಮ್ಯುನೈಸೇಶನ್), ಶಾಲಾಪೂರ್ವ ಅನೌಪಚಾರಿಕ ಶಿಕ್ಷಣದ ಅವಕಾಶ,ನಿಗದಿತ ಆರೋಗ್ಯ ತಪಾಸಣೆ, ಅಗತ್ಯವಿರುವಾಗ ಲಭ್ಯವಾಗಬೇಕಾದ ವಿಶೇಷ ದೇಖರೇಕೆಯ ಸೌಲಭ್ಯಗಳು ಹೀಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು,
ಕಾಣೆಯಾದ ಮಕ್ಕಳ ಪತ್ತೆಗೆ ವಿಶೇಷ ಗಮನ ಮತ್ತು ಸಾರ್ವಜನಿಕರಿಗೆ ಪತ್ತೆ ಕಾರ್ಯದ ಸ್ಥಿತಿಯ ಮಾಹಿತಿ ನೀಡಲು,

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಲು,

ಬೀದಿ ಮಕ್ಕಳಿಗೆ ಆಶ್ರಯತಾಣ, ಮತ್ತು ಸಾಮಾಜಿಕ ಸೇವಾ ಲಭ್ಯತೆಗಳನ್ನು ಪೂರೈಸಲು,

ಬಾಲಾಪರಾಧಿಗಳ ನ್ಯಾಯ ವ್ಯವಸ್ಥೆ( ಜ್ಯುವೆನಲ್ ಜಸ್ಟಿÃಸ್ ಸಿಸ್ಟಮ್)ಯಲ್ಲಿ ಅಗತ್ಯ ಸುಧಾರಣೆ, ಮಕ್ಕಳಲ್ಲಿ ಮೂಡಿದ ಅಪರಾಧ ಮನೋಭಾವದಿಂದ ಹೊರಬರಲು ಅಗತ್ಯ ಕ್ರಮ ಕೈಗೊಳ್ಳಲು ಮತ್ತು ಅವರನ್ನು ಜವಾಬ್ದಾರಿಯುತ ಪ್ರಜೆಗಳಾಗಿ ಸಮಾಜದ ಭಾಗವಾಗಿ ತೊಡಗಿಕೊಳ್ಳಲು ಅಗತ್ಯ ಸಹಾಯ ನೀಡಲು ಸಂಸ್ಥೆಗಳನ್ನು ರಚಿಸಲು,

ಸಿ.ಪಿ.ಐ.(ಎಂ) ಬದ್ಧವಾಗಿದೆ.

ಯುವಜನ:

ಉದ್ಯೋಗದ ಹಕ್ಕನ್ನು ಸಾಂವಿಧಾನಿಕ ಹಕ್ಕಾಗಿ ಸೇರ್ಪಡೆ ಮಾಡಲು,

ಉದ್ಯೋಗ ಅಥವಾ ನಿರುದ್ಯೊÃಗ ಭತ್ಯೆ ನೀಡಲು,

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹುದ್ದೆಗಳÉ ನೇಮಕಾತಿಗಿರುವ ನಿರ್ಬಂಧವನ್ನು ಕಿತ್ತುಹಾಕಲು,

ನಿಗದಿತ ಕಾಲಾವಧಿಯ ಒಳಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲು,

ಯುವಜನರ ಅಗತ್ಯಗಳಿಗೆ ಸ್ಪಂದಿಸಲು ರಾಷ್ಟಿçÃಯ ಯುವ ನೀತಿಯೊಂದರ ರಚನೆಗೆ,

ಯುವಜನರಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಮತ್ತು ತರಬೇತಿ ನೀಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪ್ರಾಯೋಜನೆಯಲ್ಲಿ ಕ್ರೀಡಾಮಿಷನ್‌ಗಳ ಸ್ಥಾಪನೆಗೆ,

ಸಿಪಿಐ(ಎಂ) ಬದ್ಧವಾಗಿದೆ.

ಪರಿಶಿಷ್ಟ ಜಾತಿಗಳು  ಮತ್ತು ಪಂಗಡಗಳು

ಸಿ.ಪಿ.ಐ.(ಎಂ) ಪಕ್ಷವು ಜಾತಿ ಪದ್ಧತಿಯ ಮತ್ತು ಜಾತಿ ಆಧಾರಿತವಾದ ಎಲ್ಲ ರೀತಿಯ ಶೋóಣೆಯ ನಿರ್ಮೂಲನೆಗೆ ಕಟಿಬದ್ಧವಾಗಿದೆ.

ಮಾನವಹಕ್ಕುಗಳಾದ- ಸಾರ್ವತ್ರಿಕ ಆರೋಗ್ಯ, ಶಿಕ್ಷಣ, ಉದ್ಯೊÃಗ, ಉತ್ತಮ ಮತ್ತು ಸುರಕ್ಷಿತವಾದ ಬದುಕು, ಎಲ್ಲ ವಿಭಾಗಗಳಿಗೆ ಎಲ್ಲ ರಂಗಗಳಲ್ಲಿ, ನಿರ್ದಿಷ್ಟವಾಗಿ  ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗಾಗಿ  ಹೆಚ್ಚುವರಿ ಹಣ ನೀಡಿಕೆಯೂ ಸೇರಿದಂತೆ ವಿಶೇಷ ಕ್ರಮಗಳನ್ನು ಪ್ರೋತ್ಸಾಹಿಸುತ್ತದೆ.

ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಸಮನಾದ ಯೋಜನಾ ವೆಚ್ಚಗಳನ್ನು  ಪರಿಶಿಷ್ಟ ಜಾತಿಗಳಿಗೆ ‘ವಿಶೇಷ ಘಟಕ ಯೋಜನೆ’ (ಎಸ್‌ಸಿಪಿ)) ಮತ್ತು ಪರಿಶಿಷ್ಟ ಪಂಗಡಗಳಿಗೆ ‘ಬುಡಕಟ್ಟು ಉಪಯೋಜನೆ (ಟಿಎಸ್‌ಪಿ)ಗೆ ಒದಗಿಸುವಂತೆ ಮಾಡಲು ಒಂದು ಕೇಂದ್ರ ಶಾಸನವನ್ನು ರೂಪಿಸಲು ಬದ್ಧವಾಗಿದೆ. ಒಂದು ಸ್ಥಾಯಿ ಸಮಿತಿಯನ್ನು ಸ್ಥಾಪಿಸುವ ಮೂಲಕ ಈ ಯೋಜನೆಗಳು ಜಾರಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೇರವಾಗಿ ತಲುಪುವಂತೆ ನೋಡಿಕೊಳ್ಳುತ್ತದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂ ಕುಟುಂಬಗಳಿಗೆ 5 ಎಕರೆ ಕೃಷಿಯೋಗ್ಯ ಭೂಮಿ ವಿತರಣೆ ಮಾಡಲು ಬದ್ಧವಾಗಿದೆ.

ಎಸ್.ಸಿ. ಮತ್ತು ಎಸ್.ಟಿ. ಗಳಿಗೆ ಖಾಸಗಿ ರಂಗದಲ್ಲಿ ಮೀಸಲಾತಿ ಒದಗಿಸಲು ಒಂದು ಕೇಂದ್ರ ಶಾಸನ ಜಾರಿಗೊಳಿಸಲು ಬದ್ಧವಾಗಿದೆ.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು (ದೌರ್ಜನ್ಯ ವಿರೋಧಿ) ಕಾಯಿದೆ 1989 ಮತ್ತು ದೌರ್ಜನ್ಯ ವಿರೋದಿ ಕಾಯಿದೆ ತಿದ್ದುಪಡಿ ಮಸೂದೆ 2015 ಅನ್ನು ಅಂಗೀಕರಿಸಿ ಜಾರಿ ಮಾಡಲು ಬದ್ಧವಾಗಿದೆ. ಎಸ್.ಸಿ./ಎಸ್.ಟಿ. ದೌರ್ಜನ್ಯ ವಿರೋಧಿ ಕಾಯಿದೆಯನ್ನು ಸಂವಿಧಾನದ ವಿಧಿ 10 ರಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲು ಮತ್ತು ಎಸ್.ಸಿ. ಹಾಗೂ ಎಸ್.ಟಿ. (ದೌರ್ಜನ್ಯ ವಿರೋಧಿ) ಕಾಯಿದೆ 1989 ರ ವಿಧಿ 14 ರ ಅನುಸಾರ ಪ್ರತಿಯೊಂದು ಜಿಲ್ಲೆಯಲ್ಲಿ ಕಡ್ಡಾಯ ವಿಶೇಷ ಕೋರ್ಟ್ಗಳನ್ನು ಸ್ಥಾಪಿಸಲು ಬದ್ಧವಾಗಿದೆ.

ಶಿಕ್ಷಣ ಸಂಸ್ಥೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ನೇಮಕಾತಿಯಲ್ಲಿನ ಬೇಧ ಭಾವ ಹೋಗಲಾಡಿಸಿ, ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ನೆರವಾಗುವಂತೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳುವ ಜೊತೆಗೆ ವೃತ್ತಿಪರ ಕೆಲಸದ ಅವಕಾಶಗಳನ್ನು ಹೆಚ್ಚಿಸಲು ಅನುವಾಗುವಂತೆ ಜಾತಿ, ಧರ್ಮ, ಲಿಂಗ ಆಧಾರಿತ ಬೇಧಭಾವ ತಡೆಯಲು ಒಂದು ವಿಶೇಷ ಕಾಯಿದೆಯ ಜಾರಿಗೆ ಬದ್ಧವಾಗಿದೆ.

ಸಮಾಜೋ-ಆರ್ಥಿಕ ಜಾತಿ ಸಮೀಕ್ಷೆಯ ವರದಿಯನ್ನು ತಕ್ಷಣದಲ್ಲಿಯೇ ಪ್ರಕಟಿಸಲು ಬದ್ಧವಾಗಿದೆ.

ಎಲ್ಲಾ ಎಸ್.ಸಿ. ಮತ್ತು ಎಸ್.ಟಿ. ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮತ್ತು ವಿದ್ಯಾರ್ಥಿ ವೇತನ ನೀಡಲು ಬದ್ಧವಾಗಿದೆ.

ಪರಿಶಿಷ್ಟ ಜಾತಿಗಳು

ಮೀಸಲಾಗಿಟ್ಟಿರುವ ಜಾಗಗಳು, ಹುದ್ದೆಗಳು ಮತ್ತು ಬಡ್ತಿಯಲ್ಲಿರುವ ಬ್ಯಾಕ್‌ಲಾಗ್‌ಗಳನ್ನು ಭರ್ತಿ ಮಾಡುವ ಸಲುವಾಗಿ ಒಂದು ಕಾಲಮಿತಿಯುಳ್ಳ ನೇಮಕಾತಿ ಪ್ರಕ್ರಿಯೆ ನಡೆಸಲು; ಎಸ್.ಸಿ. ಯುವ ಸಮೂಹಕ್ಕೆ ಕುಶಲ ತರಬೇತಿ ಸೌಲಭ್ಯ ನೀಡಲು; ಸ್ವ ಉದ್ಯೊÃಗ ಮಾಡುತ್ತಿರುವ ಎಸ್.ಸಿ. ಗಳಿಗೆ ಮತ್ತು ಎಸ್.ಸಿ. ಕೈಗಾರಿಕೋದ್ಯಮಿಗಳಿಗೆ ಸಾಲ ಸೌಲಭ್ಯ ಒದಗಿಸಲು ಮತ್ತು ಮಾರುಕಟ್ಟೆ ವಿಸ್ತರಿಸಲು ನೆರವು ನೀಡಲು ಬದ್ಧವಾಗಿದೆ.

ಬರಿಗೈಯಿಂದ ಮಲ ಸ್ವಚ್ಛತೆ ತಡೆಯುವ ಕಾನೂನಿನ ಎಲ್ಲಾ ಹುಳುಕುಗಳನ್ನು ಮುಚ್ಚಲು ತಿದ್ದುಪಡಿ ತರಲು ಮತ್ತು ಸೂಕ್ತವಾದ ನಿಧಿಯೊಂದಿಗೆ ನಿಗದಿತ ಅವಧಿಯೊಳಗೆ ಪುನರ್ವಸತಿ ಯೋಜನೆ ಜಾರಿ ಮಾಡಲು; ಬರಿಗೈ ಮಲ ಸ್ವಚ್ಛತೆ ಮಾಡಿಸುವ ಅಮಾನವೀಯ ಪದ್ಧತಿಯನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲು; ಈ ಮಲ ಕೇಂದ್ರಗಳನ್ನು ಸ್ವಚ್ಛಗೊಳಿಸಲು ಹೋಗಿ ತಮ್ಮ ಪ್ರಾಣ ಕಳೆದುಕೊಳ್ಳುವವರ ಕುಟುಂಬಕ್ಕೆ ಸುಪ್ರಿಂ ಕೋರ್ಟ್ ತೀರ್ಮಾನದ ಪ್ರಕಾರ ಪರಿಹಾರ ನೀಡಲು ಬದ್ಧವಾಗಿದೆ.

ಪೌರ ಕಾರ್ಮಿಕ ಸೇವೆಗಳಲ್ಲಿ ಗುತ್ತಿಗೆ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವವರ ಸೇವೆಗಳನ್ನು ಖಾಯಂ ಗೊಳಿಸಲು ಬದ್ಧವಾಗಿದೆ.

ಎಲ್ಲಾ ಎಸ್.ಸಿ. ಕುಟುಂಬಗಳಿಗೆ ಮತ್ತು ಎಸ್.ಸಿ. ಗಳು ವಾಸವಿರುವ ಪ್ರದೇಶಗಳಲ್ಲಿ ನಿವೇಶನ, ಮನೆ, ಶೌಚಾಲಯ, ನೀರು, ಆರೋಗ್ಯ, ವಿದ್ಯುಚ್ಛಕ್ತಿ ಸೌಲಭ್ಯ ಒದಗಿಸಲು ಬದ್ಧವಾಗಿದೆ. ಒಂದು ವಿಶೇಷ ಕ್ರಮಗಳ ಮೂಲಕ ಹಾಗೂ ಬಜೆಟ್ ಮೂಲಕ ನಿಧಿ ಒದಗಿಸಿ ವಸತಿ ಮತ್ತು ನಾಗರಿಕ ಸೌಲಭ್ಯಗಳಿಂದ ಇತರರಿಗೆ ಹೋಲಿಸಿದಲ್ಲಿ ವಂಚಿತರಾಗಿ ಉಂಟಾಗಿರುವ ಅಂತರವನ್ನು ಸರಿಪಡಿಸಲು ಬದ್ಧವಾಗಿದೆ.

ದಲಿತ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ವಿಸ್ತರಿಸಲು ಬದ್ಧವಾಗಿದೆ.

ಪರಿಶಿಷ್ಟ ಪಂಗಡಗಳು

ಸಿಪಿಐ(ಎಂ) ನಿಲುವು

ಎಲ್ಲಾ ಸರ್ಕಾರಿ ಸೇವೆಗಳಲ್ಲಿ ಎಸ್‌ಟಿ ಮೀಸಲಾತಿ ಇರುವ ಹುದ್ದೆಗಳನ್ನು ಕಾನೂನಾತ್ಮಕ ಸಮಯದ ಪರಿಮಿತಿಯೊಳಗೆ ಭರ್ತಿ ಮಾಡಬೇಕು.

ಆದಿವಾಸಿಗಳ ಭೂ ಹಕ್ಕುಗಳನ್ನು ರಕ್ಷಿಸಲು ಮತ್ತು ಅವರಿಂದ ಕಾನೂನುಬಾಹಿರವಾಗಿ  ಕಿತ್ತುಕೊಂಡ ಭೂಮಿಯನ್ನು ಮರಳಿಸಬೇಕು.  ವ್ಯವಹಾರ ಸುಗಮತೆಯ  ನೆಪದಲ್ಲಿ ಆದಿವಾಸಿಗಳ ಭೂಮಿಯನ್ನು ಕೊಳ್ಳಲು ಆದಿವಾಸಿಗಳ ಅನುಮತಿ ನಿರಾಕರಿಸುವ ಎಲ್‌ಎಆರ್‌ಆರ್ ತಿದ್ದುಪಡಿಯನ್ನು ಹಿಂಪಡೆಯಬೇಕು.

ಅರಣ್ಯಗಳ ಖಾಸಗೀಕರಣಕ್ಕೆ ಒತ್ತು ನೀಡುವ ರಾಷ್ಟಿçÃಯ ಅರಣ್ಯ ನೀತಿಯನ್ನು ಹಿಂಪಡೆಯಲು ಮತ್ತು ಅದರ ಬದಲು ಪರಿಶಿಷ್ಟ ಪಂಗಡಗಳ ಹಕ್ಕುಗಳನ್ನು ರಕ್ಷಿಸುವ ಸೂಕ್ತ ನೀತಿ ಜಾರಿ.

‘ಪರಿಶಿಷ್ಟ ಪಂಗಡ ಮತ್ತು ಅನ್ಯ ಪಾರಂಪರಿಕ ಅರಣ್ಯ ವಾಸಿಗಳು (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯಿದೆ 2006’ ಯ ಸಂಪೂರ್ಣವಾಗಿ ಜಾರಿ ; 1980 ನೇ ಇಸವಿಯಿಂದ ಅನ್ವಯವಾಗುವಂತೆ ಇತರ ಪಾರಂಪರಿಕ ಅರಣ್ಯ ವಾಸಿಗಳನ್ನು ಬಲಗೊಳ್ಳುವಂತೆ ಈ ಕಾಯಿದೆಗೆ ತಿದ್ದುಪಡಿ. ಆದಿವಾಸಿಗಳನ್ನು ಅವರ ಹಾಡಿಗಳಿಂದ ಹೊರ ಹಾಕಬಾರದು.

ಅರಣ್ಯ ರಕ್ಷಣೆ ಮತ್ತು ಪರಿಸರ ಕಾಯಿದೆಗೆ ತನ್ನ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್‌ಗಳು ನಿರ್ಧಾರ ಕೈಗೊಳ್ಳುವ ಶಕ್ತಿಯನ್ನು ಕುಂಠಿತಗೊಳಿಸುವ ತಿದ್ದುಪಡಿಗಳನ್ನು ತೆಗೆದುಹಾಕಬೇಕು..

ಪಿ.ಇ.ಎಸ್.ಎ. ಮತ್ತು  5ನೇ ಶೆಡ್ಯೂಲಿನ ಅಡಿಯಲ್ಲಿ ಹಕ್ಕುಗಳ ರಕ್ಷಣೆ. ಪರಿಶಿಷ್ಟ ಪಂಗಡಗಳ ಭಾಷೆಗಳು ಮತ್ತು ಅವುಗಳನ್ನು ಗುರುತಿಸುವುದು , ರಕ್ಷಿಸುವುದು  ಮತ್ತು ಬೆಳೆಸುವುದು; ಭಿಲಿ, ಗೊಂಡಿ ಮತ್ತು ಕೊಕ್ ಬೊರೊಕ್ ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೆÃದದಲ್ಲಿ ಅಳವಡಿಸಬೇಕು. ಆಯಾ ರಾಜ್ಯಗಳು ಅಲ್ಲಿನ ಆದಿವಾಸಿಗಳ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಗುರುತಿಸಬೇಕು.

ರಾಜ್ಯ ಸರ್ಕಾರಗಳು ತಯಾರಿಸುವ ಘೋಷಿತ ನಿವಾಸಿಗಳ ಪಟ್ಟಿಯಲ್ಲಿ ಆದಿವಾಸಿಗಳನ್ನು ಅವರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬಂದಿದ್ದರೂ ಸಹ, ಅವರ ಎಸ್‌ಟಿ ಅಸ್ಮಿತೆ ಮತ್ತು ಹಕ್ಕುಗಳೊಂದಿಗೆ ನೇರವಾಗಿ ಸೇರಿಸಬೇಕು.

ಸಬ್ಸಿಡಿ ಒಳಗೊಂಡ ಆಹಾರ ಧಾನ್ಯಗಳು ಒದಗುವಂತೆ ಮಾಡಲು ಎಲ್ಲಾ ಪರಿಶಿಷ್ಟ ಪಂಗಡಗಳನ್ನು ಆಹಾರ ಭದ್ರತಾ ಕಾಯಿದೆಯಡಿ ತರಬೇಕು.
ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನದಲ್ಲಿ ಏರಿಕೆ ಮತ್ತು  ಕಾಲಕಾಲಕ್ಕೆ ಎಲ್ಲಾ ಪರಿಶಿಷ್ಟ ಪಂಗಡಗಳ ಹಾಸ್ಟೆಲ್‌ಗಳ ಆಡಿಟ್ ಮತ್ತು ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವುದು.

ಅಲ್ಪ ಸಂಖ್ಯಾತರು

ಸಿಪಿಐ(ಎಂ) ನಿಲುವು

ಅಲ್ಪ ಸಂಖ್ಯಾತ ಆಯೋಗವನ್ನು ಹೆಚ್ಚುವರಿ ಅಧಿಕಾರ ಮತ್ತು ವ್ಯಾಪ್ತಿ ಒಳಗೊಂಡ ಒಂದು ಕಾನೂನಾತ್ಮಕ ಸಂಸ್ಥೆಯನನಾಗಿ ಮಾಡುವುದು ಮತ್ತು ಅದರ ಅಧ್ಯಕ್ಷರು ಹಾಗೂ ಸದಸ್ಯರುಗಳ ಸ್ಥಾನಮಾನವನ್ನು ಏರಿಸುವುದು.

ಪರಿಶಿಷ್ಟ ಪಂಗಡಗಳ ಉಪಯೋಜನೆ ರೀತಿಯಲ್ಲಿ ಒಂದು ಮುಸ್ಲಿಂ ಅಲ್ಪಸಂಖ್ಯಾತ ಉಪಯೋಜನೆ ತಯಾರಿಸುವ ಮೂಲಕ ಸಾಚಾರ್ ಸಮಿತಿಯ ಶಿಫಾರಸ್ಸು ಜಾರಿಗೆ ಮುಂದಾಗುವುದು; ಸಾಚಾರ್ ಸಮಿತಿಯ ನಂತರ ಪ್ರಾರಂಭಿಸಿರುವ ಅಲ್ಪಸಂಖ್ಯಾತ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಮತ್ತು ತಿದ್ದುಪಡಿಗೊಳಿಸುವ ಮೂಲಕ ಮುಸ್ಲಿಂ ಜನಸಂಖ್ಯೆ ವಾಸವಾಗಿರುವ ಜಿಲ್ಲೆಗಳನ್ನು ಗುರುತಿಸಿ ಅವರ ಶಿಕ್ಷಣ, ಉದ್ಯೊÃಗ ಮತ್ತು ಆರೋಗ್ಯಕ್ಕೆ ವಿಶೇಷ ಮುತುವರ್ಜಿ ವಹಿಸುವುದು.

ಕ್ರಿಶ್ಚಿಯನ್ನರು ಮತ್ತು ಪ್ರಾದ್ರಿಗಳ ಮೇಲೆ ಮುಂದುವರೆದಿರುವ ದಾಳಿಗಳನ್ನು ಹತ್ತಿಕ್ಕಲು “ಕೋಮುವಾದಿ ಹಿಂಸಾ ನಿಯಂತ್ರಣ ಕಾಯಿದೆ” ಮತ್ತು “ಅಲ್ಪ ಸಂಖ್ಯಾತ ದೌರ್ಜನ್ಯ ನಿಯಂತ್ರಣ ಕಾಯಿದೆ” ತರುವುದು.

ರಂಗನಾಥ ಮಿಶ್ರ ಆಯೋಗದ ವರದಿಯ ಶಿಫಾರಸ್ಸುಗಳ ಜಾರಿ. ತಕ್ಷಣದ ಕಾರ್ಯವಾಗಿ ನಿರ್ದಿಷ್ಟ ರಾಜ್ಯಾವಾರು ಹಂಚಿಕೆಯೊಂದಿಗೆ ಮುಸ್ಲಿಂ ಸಮುದಾಯದಲ್ಲಿ ಬಹುಸಂಖ್ಯಾತರಾಗಿರುವ ಒಬಿಸಿ ಮುಸ್ಲಿಮರನ್ನು ಒಬಿಸಿ ಕೋಟಾದಡಿ ಸೇರಿಸುವುದು.

ಬ್ಯಾಂಕುಗಳು ನೀಡುವ ಆದ್ಯತಾ ವಲಯ ಸಾಲನೀಡಿಕೆಯಲ್ಲ್ಲಿ ಮುಸ್ಲಿಮರಿಗಾಗಿ ಶೇ. 15 ಪ್ರಮಾಣ ನಿಗದಿ; ಸ್ವ-ಉದ್ಯೊÃಗದಲ್ಲಿರುವ ಮುಸ್ಲಿಂ ಯುವ ಜನತೆಗೆ ಸಬ್ಸಿಡಿ ಇರುವ ಸಾಲ.

ಮುಸ್ಲಿಂ ಯುವತಿಯರಿಗೆ ಶಿಕ್ಷಣ ಒದಗಿಸಲು ವಿಶೇಷ ಒತ್ತು ; ಮುಸ್ಲಿಂ ವಿದ್ಯಾರ್ಥಿನಿಯರಿಗೆ ನೀಡುವ ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸುವುದು.

ಶಾಲೆಗಳಲ್ಲಿ ಉರ್ದು ಕಲಿಕೆ; ÀÄ್ನ ಉರ್ದು ಭಾಷೆಯಲ್ಲಿ ಗುಣಮಟ್ಟದ ಪಠ್ಯ ಪುಸ್ತಕಗಳ ಪ್ರಕಟಣೆ ಮತ್ತು ಉರ್ದು ಉಪನ್ಯಾಸಕರ ಹುದ್ದೆಗಳ ಭರ್ತಿ.

ಭಯೋತ್ಪಾದನೆ ಕೇಸ್‌ಗಳಿಂದ ಖುಲಾಸೆಗೊಂಡ ಮುಸ್ಲಿಮರಿಗೆ ಪರಿಹಾರ ಮತ್ತು ಪುನರ್ವಸತಿ ಹಾಗೂ ಇವರನ್ನು ಸುಳ್ಳು ಕೇಸ್ ಗಳಲ್ಲಿ ಸಿಲುಕಿಸಿದ ಅಧಿಕಾರಿಗಳಿಗೆ ಶಿಕ್ಷೆ.

ಜನಜಂಗುಳಿಯ ಸಾಯ ಬಡಿಯುವ ಹಿಂಸಾಚಾರಗಳ ಎಲ್ಲಾ ಸಂತ್ರಸ್ತರಿಗೆ ಪರಿಹಾರ

ಒಬಿಸಿಗಳು

ಕೇಂದ್ರ ಸರಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಗಳಿಗೆ ಶೇ. 27 ಮೀಸಲಾತಿಯ ಸಮರ್ಪಕ ಜಾರಿ; ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಬಿಸಿ ಮೀಸಲಾತಿ ವಿಸ್ತರಣೆ.

ಹಿಂದುಳಿದ ವರ್ಗಗಳ ರಾಷ್ಟಿçÃಯ ಆಯೋಗವನ್ನು ಬಲಗೊಳಿಸುವುದು.

ಒಬಿಸಿ ಸರ್ಟಿಫಿಕೇಟ್ ಗಳನ್ನು ನೀಡುವ ಪ್ರಕ್ರಿಯೆಯ ಸರಳೀಕರಣ.

ಎಸ್.ಸಿ. ಮತ್ತು ಎಸ್.ಟಿ. ಗಳಿಗೆ ರಚಿಸಿರುವ ರೀತಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಒಬಿಸಿಗಳಿಗೆ ಉದ್ಯೊÃಗ ನೀಡಿಕೆ ಮತ್ತು ಬಡತನ ನಿರ್ಮೂಲನಾ ಯೋಜನೆಗಳ ಸಮರ್ಪಕ ಜಾರಿ.

ತೃತೀಯ ಲಿಂಗಿಗಳು

ಸಿಪಿಐ(ಎಂ) ನಿಲುವು:

ತೃತೀಯ ಲಿಂಗಿಗಳ ಹಕ್ಕುಗಳ ಮಸೂದೆ 2014 ಅನ್ನು ಜಾರಿ ಮಾಡುವ ಮೂಲಕ ಎಲ್ಲಾ ತೃತೀಯ ಲಿಂಗಿಗಳ ಹಕ್ಕುಗಳನ್ನು ಎತ್ತಿ ಹಿಡಿಯುವುದು ಮತ್ತು ಈಗಿರುವ ತೃತೀಯ ಲಿಂಗಿಗಳ ಮಸೂದೆ 2018 ರಲ್ಲಿರುವ ನ್ಯೂನತೆಗಳ ನಿವಾರಣೆ.

ಸಲಿಂಗ ಜೋಡಿಗಳಿಗೆ, ಮದುವೆಯಂತೆಯ, ಕಾನೂನು ಮಾನ್ಯತೆ –‘ನಾಗರಿಕ ಸಂಯೋಗ’ / ‘ಸಲಿಂಗ ಭಾಗೀದಾರಿಕೆಗಳು’,  ವಿಶೇಷ ಮದುವೆ ಕಾಯಿದೆ 1954 ರ ರೀತಿಯಲ್ಲಿ ಕಾನೂನು/ಗಳನ್ನು ತಂದು, ಜೊತೆಗಾರರನ್ನು ಅವಲಂಬಿತರನ್ನಾಗಿ ಪಿತ್ರಾರ್ಜಿತ ಆಸ್ತಿ, ವಿಚ್ಛೆÃದನದ ಸಂದರ್ಭದಲ್ಲಿ ನೀಡುವ ಪರಿಹಾರ ಧನ, ಇತ್ಯಾದಿ ದೊರೆಯುವಂತೆ ಮಾಡುವುದು.

ಎಲ್‌ಜಿಬಿಟಿ ಒಳಗೊಳ್ಳುವ  ಒಂದು ಸಮಗ್ರವಾದ ಬೇಧ ತಾರತಮ್ಯ-ವಿರೋಧಿ  ಮಸೂದೆ ರೂಪಿಸುವುದು.

ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ, ಉದ್ಯೊÃಗದಲ್ಲಿ ಸೂಕ್ತ ಸಮಪಾತಳಿ ಮೀಸಲಾತಿ.

ಎಲ್‌ಜಿಬಿಟಿ ವ್ಯಕ್ತಿಗಳ ಮೇಲಿನ ಹಿಂಸೆಯನ್ನು ಎಲ್‌ಜಿಬಿಟಿ ಅಲ್ಲದ ವ್ಯಕ್ತಿಗಳ ಮೇಲಿನ ಹಿಂಸೆಯಂತೆಯೇ ಪರಿಗಣಿಸುವುದು.

ಲಿಂಗ ಹೊಂದಾಣಿಕೆ ಇಲ್ಲದ ಮತ್ತು ಎಲ್‌ಜಿಬಿಟಿ ವಿದ್ಯಾರ್ಥಿಗಳು, ಉದ್ಯೊÃಗಿಗಳು ಹಾಗೂ ಶಿಕ್ಷಕರನ್ನು ಬೆದರಿಸುವುದು,  ಹಿಂಸೆ, ಕಿರುಕುಳ ತಡೆಯಲು ಕ್ರಮಗಳು; ಲೈಂಗಿಕ ಪ್ರವೃತ್ತಿ ಮತ್ತು ಲಿಂಗ ಅಸ್ಮಿತೆಯ ಆಧಾರದಲ್ಲಿ ನಡೆಸುವ ರ‍್ಯಾಗಿಂಗ್ ತಡೆಯುವ ಕ್ರಮಗಳು; ತೃತೀಯ ಲಿಂಗಿಗಳು, ಅಂತರ ಲಿಂಗಿಗಳು, ಲಿಂಗ ಹೊಂದಾಣಿಕೆಯಿರದ ವಿದ್ಯಾರ್ಥಿಗಳು, ಉದ್ಯೊÃಗಿಗಳು ಮತ್ತು ಅಧ್ಯಾಪಕರುಗಳು ಬಳಸಬಹುದಾದ ಸುರಕ್ಷಿತ ಸ್ನಾನಗೃಹಗಳ ಲಭ್ಯತೆಯನ್ನು ಕುರಿತ ಯುಜಿಸಿ ರ‍್ಯಾಗಿಂಗ್-ವಿರೋಧಿ ನೀತಿ ತಿದ್ದುಪಡಿ (2016) ಯ ಜಾರಿ.

ವಿಕಲತೆಯಿರುವ ವ್ಯಕ್ತಿಗಳು

ಸಿಪಿಐ(ಎಂ) ನಿಲುವು:

ವಿಕಲತೆಯಿರುವ ವ್ಯಕ್ತಿಗಳ ಹಕ್ಕುಗಳ ಕಾಯಿದೆ ಮತ್ತು ಮಾನಸಿಕ ಆರೋಗ್ಯ ಪಾಲನಾ ಕಾಯಿದೆ ಯನ್ನು ಸೂಕ್ತ ಬಜೆಟ್ ನೀಡಿಕೆಯೊಂದಿಗೆ ಜಾರಿ.

ವಿಕಲತೆಯಿರುವ  ವ್ಯಕ್ತಿಗಳ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ಅಧಿನಿರ್ಣಯಕ್ಕೆ ಅನುಗುಣವಾಗಿ ದೇಶದ ಎಲ್ಲಾ ಕಾನೂನುಗಳ ಸಮನ್ವಯ.

ರಾಷ್ಟ್ರೀಯ ವಿಕಲ ಚೇತನ ನೀತಿಯ ಮರ ಪರಿಶೀಲನೆ ಮತ್ತು ತಿದ್ದುಪಡಿ.

ಸರ್ಟಿಫಿಕೇಟ್ ನೀಡುವ ಪ್ರಕ್ರಿಯೆಯ ಸರಳೀಕರಣ ಮತ್ತು ಯುಡಿಐಡಿ ಗುರುತಿನ ಚೀಟಿ ನೀಡುವುದು.

ಎಲ್ಲಾ ಸರ್ಕಾರಿ ವಿಭಾಗಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಒಂದು ನಿಗದಿತ ಅವಧಿಯೊಳಗೆ ಭರ್ತಿ ಮಾಡಲು ಮತ್ತು ವಿಕಲತೆಯಿರುವ ವ್ಯಕ್ತಿಗಳ ಸಾಮಥ್ಯಕ್ಕೆ ಅನುಗುಣವಾಗಿ ನೂತನ ಉದ್ಯೋಗಾವಕಾಶಗಳ ಸೃಷಿಗ್ಟೆ ಕ್ರಮ.

ವಿಕಲತೆಯಿರುವ ವ್ಯಕ್ತಿಗಳಿಗಾಗಿ ಎಲ್ಲಾ ಕಟ್ಟಡಗಳು ಸಾರ್ವಜನಿಕ ಸ್ಥಳಗಳು ಎಲ್ಲಾ ವಿಧದ ಸಾರಿಗೆಗಳು, ಮಾಹಿತಿ ಮತ್ತಿತರೆಡೆ ಸುಲಭವಾಗಿ ತಲುಪುವಂತೆ ವ್ಯವಸ್ಥೆ , ಆಂಗಿಕ ಭಾಷಾ ಅನುವಾದಕರ ನೇಮಕ; ಟಿ.ವಿ. ಮತ್ತಿತರ ಮಾಧ್ಯಮಗಳು ಶ್ರವಣ ದೋಷ ಮತ್ತು ಅಂಧರಿಗೆ ಲಭ್ಯಗೊಳಿಸುವುದು.

ವಿಕಲತೆಯಿರುವ ವ್ಯಕ್ತಿಗಳ ಜೀವನ ಗೌರವಯುತವಾಗಿರುವಂತೆ ನೋಡಿಕೊಳ್ಳುವುದು; ವಿಕಲತೆ ಮತ್ತು ವಿಕಲತೆಯಿರುವ ವ್ಯಕ್ತಿಗಳ ದೂಷಣೆಗಳನ್ನು ಕುರಿತಂತೆ ಶೂನ್ಯ ಸಹಿಷ್ಣುತೆ; ಇವರ ಪಿಂಚಣಿಯನ್ನು ಕನಿಷ್ಠ ರೂ. 6000 ಕ್ಕೆ ಏರಿಸಿ ಬೆಲೆ ಸೂಚ್ಯಾಂಕಕ್ಕೆ ಜೋಡಣೆ; ಪಾಲನೆ ನೀಡುವವರಿಗೆ ಭತ್ಯೆ ಒದಗಿಸುವುದು.

ಸಹಾಯ ಸಾಮಗ್ರಿಗಳು, ಉಪಕರಣಗಳನ್ನು  ಉಚಿತವಾಗಿ ನೀಡುವುದು; ಇವುಗಳ ಮೇಲೆ ಮತ್ತು ವಿಕಲತೆಯಿರುವ ವ್ಯಕ್ತಿಗಳು ಬಳಸುವ ವಾಹನಗಳ ಮೇಲೆ ಶೂನ್ಯ ಜಿಎಸ್‌ಟಿ.

ಎಲ್ಲಾ ಹಂತಗಳಲ್ಲಿ ಒಳಗೊಳ್ಳುವ ಶಿಕ್ಷಣ; ಶಾಲೆಯ ಮೂಲಭೂತ ಸೌಕರ್ಯಗಳು ಮತ್ತು ಪಠ್ಯಕ್ರಮಗಳು ಎಲ್ಲರನ್ನೂ ಒಳಗೊಳ್ಳುವಂತೆ ಮಾಡುವುದು; ವಿಕಲತೆಯಿರುವ ವ್ಯಕ್ತಿಗಳಿಗೆ ಉಚಿತ ಆರೋಗ್ಯ ಸೌಲಭ್ಯಗಳ ಲಭ್ಯತೆ.

ಸಂಸದರ ನಿಧಿಯಿಂದ ವಿಕಲತೆಯಿರುವ ವ್ಯಕ್ತಿಗಳಿಗೆ ಎಲ್ಲಾ ರೀತಿಯ ಸಹಾಯಕ ಸಾಮಗ್ರಿಗಳು, ಸೌಲಭ್ಯಗಳ ವಿತರಣೆ.

ವಿಕಲತೆಯಿರುವ ವ್ಯಕ್ತಿಗಳ ಹಕ್ಕುಗಳ ಕಾಯಿದೆ 2016 ರ ಅನ್ವಯ ವಿಕಲತೆಯಿರುವ ವ್ಯಕ್ತಿಗಳ ಸಮರ್ಪಕ ಗಣತಿ.

ವಿಕಲತೆಯಿರುವ ವ್ಯಕ್ತಿಗಳಿರುವ ಕುಟುಂಬಗಳಿಗೆ ಸರ್ಕಾರವು ಹೆಚ್ಚುವರಿ ಭೂಮಿ ಮತ್ತು ಭೂಮಿತಿ ಮೀರಿರುವ ಹೆಚ್ಚುವರಿ ಭೂಮಿ ಹಂಚಿಕೆ ಮಾಡುವ ಕಾರ್ಯಕ್ರಮಗಳಲ್ಲಿ ಮೊದಲ ಆದ್ಯತೆ.

ಜನತೆಯ ಕಲ್ಯಾಣಕ್ಕಾಗಿ

ಶಿಕ್ಷಣ

ಜಿಡಿಪಿ ಯ ಶೇ. 6 ಪ್ರಮಾಣವನ್ನು ಶಿಕ್ಷಣದ ಮೇಲೆ ಸಾರ್ವಜನಿಕ ವೆಚ್ಚಕ್ಕೆ ಎತ್ತಿಡುವುದು;

ಶಿಕ್ಷಣ ಮತ್ತು ಪಠ್ಯಗಳಲ್ಲಿ ಇರುವ ಕೋಮುವಾದಿ ಅಂಶಗಳನ್ನು ತೆಗೆಯಲು ಕ್ರಮ ಕೈಗೊಳ್ಳುವುದು; ಪ್ರಭುತ್ವ ಅನುದಾನ ನೀಡುವ ಯಾವುದೇ ಸಂಸ್ಥೆಗಳಲ್ಲಿ ಜಾತ್ಯತೀತತೆ-ವಿರೋಧಿ ಕಣ್ಣೊÃಟಗಳಿರುವ ಉಪ ಕುಲಪತಿಗಳು ಮತ್ತು ಇತರ ಪ್ರಮುಖ ಸಿಬ್ಬಂದಿ ಇರದಂತೆ ನೋಡಿಕೊಳ್ಳುವುದು.

ವಿಶ್ವವಿದ್ಯಾಲಯಗಳು, ಯುಜಿಸಿ, ICHR, ICSSR,  NCERT ಮುಂತಾದ ಸಂಸ್ಥೆಗಳಿಗೆ ನೇಮಕ ಮಾಡುವಲ್ಲಿ ಶೈಕ್ಷಣಿಕ ಪರಿಣತಿ ಮತ್ತು ವೃತ್ತಿಪರ ಕುಶಲತೆ ಮಾತ್ರ ಅರ್ಹ ಅಂಶಗಳಾಗಬೇಕು. ಶಾಲಾ ಪಠ್ಯಗಳಲ್ಲಿರುವ ಕೋಮುವಾದಿ ಅಂಶಗಳ ಬಗ್ಗೆ ಒಂದು ಪರಿಣತ ಪರಾಮರ್ಶೆ  ಸಮಿತಿ ರಚಿಸುವುದು.

ಒಂದು ಸಮಾನ ಶಿಕ್ಷಣ ವ್ಯವಸ್ಥೆಯನ್ನು ಸ್ಥಾಪಿಸುವುದು; ಸರ್ಕಾರಿ ಶಾಲೆಗಳ ಮುಚ್ಚುವಿಕೆ ಅಥವಾ ವಿಲೀನವನ್ನು ತಡೆಯುವುದು; ಕೇರಳ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ಉನ್ನತೀಕರಣಗೊಳಿಸುವುದು.

ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀಡಲು ಶಿಕ್ಷಣ ಹಕ್ಕು ಕಾಯಿದೆ ಜಾರಿಗೊಳಿಸುವುದು; ನೆರೆಹೊರೆ ಶಾಲಾ ಕಲಿಕೆ ಪರಿಕಲ್ಪನೆಯನ್ನು ಸಂಸ್ಥೀಕರಿಸಲು ಶಿಕ್ಷಣದ ಹಕ್ಕು  ಕಾಯಿದೆಗೆ ತಿದ್ದುಪಡಿ ತರುವುದು;  ಪ್ರಾಥಮಿಕ ಹಂತವನ್ನು ಮೀರಿ ಇದನ್ನು ವಿಸ್ತರಿಸುವುದು ಮತ್ತು  ಕಲಿಕೆ ಮುಂದುವರೆಸುವ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ ಒದಗಿಸುವುದು; 2022 ರೊಳಗೆ ಎಲ್ಲಾ ಶಾಲೆಗಳು ಶಿಕ್ಷಣದ ಹಕ್ಕು ಕಾಯಿದೆಯನ್ನು ಪಾಲಿಸುವಂತೆ ನೋಡಿಕೊಳ್ಳುವುದು.

ಶಾಲೆ ಬಿಡುವುದನ್ನು ತಡೆಯಲು ಮಾಧ್ಯಮಿಕ ಶಿಕ್ಷಣವನ್ನು ವಿಸ್ತಾರಗೊಳಿಸುವುದು ಮತ್ತು ಇದನ್ನು ಸಾರ್ವತ್ರಿಕಗೊಳಿಸುವುದು; ಎಸ್‌ಎಸ್‌ಎ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಮತ್ತು ಮೂಲರಚನೆಯನ್ನು ಹೆಚ್ಚಿಸುವುದು; ಹಿಂದುಳಿದ ಪ್ರದೇಶಗಳಲ್ಲಿನ ಹೆಣ್ಣು ಮಕ್ಕಳು ಮತ್ತು ಇನ್ನಿತರ ಅವಕಾಶವಂಚಿತ ವಿಭಾಗಗಳು ಶಾಲೆ ಬಿಡದಂತೆ  ಮಾಡಲು ನಿಯಮಗಳು, ಸಮಯ ಮತ್ತಿತರ ಅಂಶಗಳಲ್ಲಿ ಸಡಿಲತೆ ತೋರುವುದು.

ವಿಶ್ವವಿದ್ಯಾಲಯಗಳಲ್ಲಿ ಮತ್ತು ಕಾಲೇಜು ಕ್ಯಾಂಪಸ್ ಗಳಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧದ ಲಿಂಗ ಸಂವೇದನಾ ಸಮಿತಿಗಳನ್ನು ರಚಿಸುವುದು.
ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ, ನೇಮಕಾತಿ ಮತ್ತು ಪಠ್ಯಕ್ರಮ ನಿಯಂತ್ರಿಸಲು ಶಾಸನ ತರುವುದು.

ಉನ್ನತ ಶಿಕ್ಷಣದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಇರಬಾರದು.

ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿವಿಧತೆಯನ್ನು ಗುರುತಿಸುವ ರೀತಿಯಲ್ಲಿ ಶಿಕ್ಷಣದ ಎಲ್ಲಾ ಹಂತಗಳಲ್ಲಿ ಪ್ರಗತಿಪರ ಮತ್ತು ಜನವಾದಿ ಪಠ್ಯಕ್ರಮವನ್ನು ರೂಪಿಸುವುದು.

ಈಗ ಗುತ್ತಿಗೆ ಅಥವಾ ಅರೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿಸುವವರನ್ನು ಖಾಯಂಗೊಳಿಸುವುದು.

ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ, ಶಿಕ್ಷಕರ ಮತ್ತು ಶಿಕ್ಷಕೇತರ ಸಿಬ್ಬಂದಿಗಳ ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸುವುದು; ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ಕಡ್ಡಾಯ ಮಾಡುವುದು.

ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆ ಮೇಲಿನ ದಾಳಿಯನ್ನು ನಿಲ್ಲಿಸುವುದು.

ಉನ್ನತ ಶಿಕ್ಷಣಕ್ಕಾಗಿ ಸಾರ್ವಜನಿಕ ಅನುದಾನಗಳನ್ನು ಹೆಚ್ಚಿಸುವುದು.

ಆರೋಗ್ಯ

ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಸೂಕ್ತ ಕಾನೂನುಗಳನ್ನು ಜಾರಿ ಮಾಡುವ ಮೂಲಕ ಉಚಿತ ಆರೋಗ್ಯ ರಕ್ಷಣೆ ದೊರೆಯುವಂತಾಗಬೇಕು.
ಆರೋಗ್ಯಕ್ಕಾಗಿ ವೆಚ್ಚ ಮಾಡುವ ಮೊತ್ತವು ಅಲ್ಪಾವಧಿಯಲ್ಲಿ ಜಿಡಿಪಿಯ ಕನಿಷ್ಠ ಶೆ. 3.5 ಮತ್ತು ದೀರ್ಘಾವಧಿಯಲ್ಲಿ ಶೇ. 5ಕ್ಕೆ ಹೆಚ್ಚಿಸುವುದು ಮತ್ತು ಇದರಲ್ಲಿ ಕೇಂದ್ರದ ಪ್ರಮಾಣವು ಹೆಚ್ಚಿರುವಂತೆ ನೋಡಿಕೊಳ್ಳುವುದು.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಿಷ್ಠಗೊಳಿಸಿ, ವಿಸ್ತಾರಗೊಳಿಸಿ, ಪುರ‍್ರೂಪಿಸಿ ಇದು ಎಲ್ಲಾ ಸ್ಥಳೀಯ ಸಮುದಾಯಗಳಿಗೆ ಜವಾಬುದಾರಿಯಾಗುವಂತೆ ಮತ್ತು ಸಮಗವಾದ ಆರೋಗ್ಯ ಸೇವೆಗಳು ಉಚಿತವಾಗಿ, ಸುಲಭವಾಗಿ ಎಲ್ಲರಿಗೂ ದೊರೆಯುವಂತೆ ಮಾಡುವುದು; ಸಾರ್ವತ್ರಿಕ ಆರೋಗ್ಯ ಪಾಲನೆಗಾಗಿ ಬಹುಪಾಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಆಧಾರಿತ ಚೌಕಟ್ಟನ್ನು ನಿರ್ಮಿಸುವುದು ಮತ್ತು ಸಕ್ರಿಯವಾಗಿ ಪ್ರೊÃತ್ಸಾಹಿಸುವುದು. ಹೆಸರುಗೆಡಿಸಿಕೊಂಡಿರುವ `ವಿಮಾ ಮಾದರಿ’ ಆಧಾರಿತವಾಗಿರುವ ಆಯುಷ್ಮಾನ್ ಭಾರತ ಯೋಜನೆಯಡಿ ಇರುವ ಪಿಎಂಜೆಎವೈ ಅನ್ನು ರದ್ದುಗೊಳಿಸುವುದು.

ಸರ್ವಜನಿಕ-ಖಾಸಗಿ ಭಾಗೀದಾರಿಕೆ(ಪಿ.ಪಿ.ಪಿ.) ಮೂಲಕ  ಆರೋಗ್ಯ ಪಾಲನೆಯ ಸೇವೆಗಳ ಖಾಸಗೀಕರಣ ಮತ್ತು ಹೊರಗುತ್ತಿಗೆ ಪ್ರವೃತ್ತಿಯನ್ನು ತಕ್ಷಣದಲ್ಲಿ, ಪರಿಣಾಮಕಾರಿಯಾಗಿ ಹಿಂಪಡೆಯುವುದು.

ಕಾರ್ಮಿಕರ ಆರೋಗ್ಯ ಪಾಲನೆಗೆ ಇಎಸ್‌ಐ ಯೋಜನೆಯನ್ನು ವಿಸ್ತರಿಸುವುದು ಮತ್ತು ಮರು ರೂಪಿಸುವುದು.

ತುರ್ತು, ಕಟ್ಟುನಿಟ್ಟಾದ ಕ್ರಮಗಳ ಮೂಲಕ ಖಾಸಗಿ ಆರೋಗ್ಯ ಪಾಲನಾ ವಲಯ, ವಿಶೇಷವಾಗಿ, ಕಾರ್ಪೋರೇಟ್ ಒಡೆತನದ ಆಸ್ಪತ್ರೆಗಳನ್ನು ನಿಯಂತ್ರಿಸುವುದು ಮತ್ತು ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಆಕ್ಟ್ ಅಡಿಯಲ್ಲಿ  ಇವನ್ನು ತರುವುದು. ರೋಗಿಗಳ ಹಕ್ಕುಗಳ ಆಚರಣೆಯಾಗುವಂತೆ 2010 ರ ಈ ಕಾಯ್ದೆಯನ್ನು ಮಾರ್ಪಾಡುಗೊಳಿಸುವುದು, ವಿವಿಧ ಆರೋಗ್ಯ ಸೇವೆಗಳ ಶುಲ್ಕಗಳು ಮತ್ತು ಗುಣಮಟ್ಟವನ್ನು ನಿಯಂತ್ರಿಸುವುದು.

ಮಾನಸಿಕ ಅನಾರೋಗ್ಯ ವಿರುವ ವ್ಯಕ್ತಿಗಳಿಗೆ ಸಮಗ್ರ ಚಿಕಿತ್ಸೆ ಮತ್ತು ಆರೈಕೆ ಸೌಲಭ್ಯ ಪಡೆದುಕೊಳ್ಳುವಂತೆ ಮಾಡಲು ಪರಿಷ್ಕೃತ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮವನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ನೊಂದಿಗೆ ಜೋಡಿಸುವುದು.

ಎಲ್ಲಾ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಅನಿರ್ಬಂಧಿತ ಔಷಧಿ, ಉಚಿತವಾಗಿ ದೊರೆಯುವಂತೆ ಮಾಡುವುದು; ಮಾರುಕಟ್ಟೆಯಿಂದ ಅಪಾಯಕಾರಿ ಅಂಶಗಳುಳ್ಳ ಔಷಧಿಗಳನ್ನು ತೆಗೆದುಹಾಕುವುದು.

ಒಂದು ವೆಚ್ಚ ಆಧಾರಿತ ಬೆಲೆ ನಿಗದಿÀ ಸೂತ್ರದ ಅಳವಡಿಕೆಯ ಮೂಲಕ ಅಗತ್ಯ ಔಷಧಿಗಳ ಬೆಲೆ ನಿಯಂತ್ರಿಸುವುದು; ಕನಿಷ್ಠ ವೆಚ್ಛ ಗರಿಷ್ಠ ಮಾರಾಟ ದರ ಮತ್ತು ಅಗತ್ಯ ಔಷಧಿಗಳ ರಾಷ್ಟಿÃಯ ಪಟ್ಟಿಯಲ್ಲಿರುವ ಔಷಧಿಗಳ ಮೇಲಿನ ಅಬ್ಕಾರಿ ಸುಂಕವನ್ನು ಕಡಿಮೆ ಮಾಡುವುದು.

ಸೂಕ್ಷö್ಮ ರಂಗಗಳಲ್ಲಿ ಬಹುರಾಷ್ಟ್ರೀಯ ಔಷಧಿ ಸಂಸ್ಥೆಗಳ ಏಕಸ್ವಾಮ್ಯ ಮುರಿಯುವ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.

ಅಗತ್ಯ ಔಷಧಿಗಳು ಮತ್ತು ಲಸಿಕೆಗಳನ್ನು ತಯಾರಿಸಲು ಅನುವಾಗುವಂತೆ ಸಾರ್ವಜನಿಕ ವಲಯ ಔಷಧಿ ಘಟಕಗಳನ್ನು ಪುನರುಜ್ಜೀವನಗೊಳಿಸುವುದು.

ಕ್ಲಿನಿಕಲ್ ಟ್ರಯಲ್‌ಗಳ ಮೇಲೆ ಹತೋಟಿ ಮತ್ತು ಕಟ್ಟುನಿಟ್ಟಾದ ನಿಯಂತ್ರಣ.  ಮತ್ತು ಅನೈತಿಕ ಕ್ಲಿನಿಕಲ್ ಟ್ರಯಲ್‌ಗಳನ್ನು ನಿಷೇಧಿಸುವುದು.

ಅಮೇರಿಕಾದ ಔಷಧ ಕಾನೂನು ವಿಧಿಸುವ ಏಜೆನ್ಸಿಯಾಗಿರುವ ಯುಎಸ್‌ಎಫ್‌ಡಿಎ ನ ಕಛೇರಿಗಳು ಮತ್ತು ಅಧಿಕಾರಿಗಳನ್ನು ಭಾರತದಿಂದ ತೆಗೆಯುವುದು.

ಭಾರತದ ಪೇಟೆಂಟ್ ಕಾನೂನುಗಳನ್ನು ರಕ್ಷಿಸುವುದು ಮತ್ತು ಅವುಗಳನ್ನು ದುರ್ಬಲಗೊಳಿಸದಂತೆ ನೋಡಿಕೊಳ್ಳುವುದು.

ಡಾಕ್ಟರ್‌ಗಳು ಮತ್ತು ನರ್ಸ್ಗಳಿಗೆ ತರಬೇತಿ ನೀಡಲು ಸರ್ಕಾರದಿಂದ ನೂತನ ಕಾಲೇಜುಗಳನ್ನು ತೆರೆಯಲು ಆದ್ಯತೆ ನೀಡುವುದು; ಇಂತಹ ಕಾಲೇಜುಗಳನ್ನು ಆರೋಗ್ಯ ವ್ಯವಸ್ಥೆ ಅಸಮರ್ಪಕವಾಗಿರುವ ಈಶಾನ್ಯ ಪ್ರದೇಶಗಳು ಮತ್ತು ಬಡ ರಾಜ್ಯಗಳಲ್ಲಿ ಸಾರ್ವಜನಿಕ ವೆಚ್ಚದ ಮೂಲಕ ಸ್ಥಾಪಿಸುವತ್ತ ಆದ್ಯತೆ ನೀಡುವುದು; ಆರೋಗ್ಯ ಕಾರ್ಯಕರ್ತರಿಗೆ  ತರಬೇತಿ ಸಂಸ್ಥೆಗಳನ್ನು ಸ್ಥಾಪಿಸುವುದು.

ಉದ್ಯೋಗ ಖಾತರಿ

ಎಲ್ಲಾ ನಗರ ಪ್ರದೇಶಗಳಲ್ಲಿ ಉದ್ಯೋಗ ಖಾತರಿಗಾಗಿ ಒಂದು ಶಾಸನವನ್ನು ತರುವುದು.

ಮಹಾತ್ಮಾ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೊÃಗ ಖಾತರಿ ಯೋಜನೆ (ಎಂಎನ್‌ರೇಗಾ) ಅಡಿಯಲ್ಲಿ 200 ದಿನಗಳ ಕೆಲಸವನ್ನು ಖಾತರಿಪಡಿಸುವುದು. ಗ್ರಾಮೀಣ ಪ್ರದೇಶಗಳಲ್ಲಿನ ಜನಜೀವನದ ಗುಣಮಟ್ಟವನ್ನು ಸುಧಾರಿಸಲಿಕ್ಕಾಗಿ ಈ ಯೋಜನೆಯಡಿ ಮಾಡಬಹುದಾದ ಕೆಲಸಗಳ ಪಟ್ಟಿಯನ್ನು ವಿಸ್ತರಿಸುವುದು.

ಉದ್ಯೋಗಗಳ ಸೃಷ್ಟಿಯಲ್ಲಿ ಹೆಚ್ಚು ಶ್ರಮಶಕ್ತಿ-ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಪ್ಯಾಕೇಜ್.

ಹೆಚ್ಚು ಶ್ರಮಶಕ್ತಿ-ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಪ್ರೊÃತ್ಸಾಹ ನೀಡುವ ಮೂಲಕ ನಿರುದ್ಯೋಗವನ್ನು ತಡೆಗಟ್ಟುವುದು; ಸಂಬಂಧಪಟ್ಟ ಕೈಗಾರಿಕೆಗಳ ಉದ್ಯೊÃಗ ಸೃಷ್ಟಿಯ ಆಧಾರದಲ್ಲಿ ಉದ್ಯೊÃಗದಾತರಿಗೆ ಆರ್ಥಿಕ ನೆರವು, ಪ್ರೋತ್ಸಾಹ ಮತ್ತು ವಿನಾಯತಿಗಳನ್ನು ನೀಡುವುದು.

ಸರಕಾರಿ ಇಲಾಖೆಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬಬೇಕು. ನೇಮಕಾತಿಗಳ ಮೇಲಿನ ನಿರ್ಬಂಧವನ್ನು  ಹಾಗೂ ವಾರ್ಷಿಕ ಮೂರು ಶೇಕಡಾ ಸರಕಾರೀ ಹುದ್ದೆಗಳ ಸರಂಡರ್ ಕ್ರಮವನ್ನು ತೆಗೆದುಹಾಕಬೇಕು. ಎಲ್ಲಾ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬುವುದನ್ನು ಖಾತರಿಪಡಿಸಬೇಕು.

ಹಿರಿಯ ನಾಗರಿಕರು ಮತ್ತು ಪಿಂಚಣಿ

ಹಿರಿಯ ನಾಗರಿಕರು ಗೌರವಯುತ ಬದುಕನ್ನು ಸಾಗಿಸಲು ಅನುಕೂಲವಾಗುವಂತೆ ಸಾರ್ವಜನಿಕ ನಿಧಿಯಿಂದ, ಫಲಾನುಭವಿಗಳಿಂದ ಯಾವುದೇ ಕೊಡುಗೆ ಅಗತ್ಯವಿಲ್ಲದ ವೃದ್ಧಾಪ್ಯ ಪಿಂಚಣಿ ಯೋಜನೆಯೊಂದನ್ನು ರೂಪಿಸಬೇಕು. ಈ ಮೂಲಕ ತಿಂಗಳಿಗೆ ಕನಿಷ್ಠ ವೇತನದ ಶೇಕಡಾ 50ರಷ್ಟು ಅಥವಾ 6000 ರೂಪಾಯಿ-ಇವುಗಳಲ್ಲಿ ಯಾವುದು ಹೆಚ್ಚೊÃ ಅದನ್ನು ಆದಾಯ ತೆರಿಗೆ ನೀಡುವವರನ್ನು ಹಾಗೂ ಇತರ ಯಾವುದೇ ಮೂಲಗಳಿಂದ ಹೆಚ್ಚಿನ ಪಿಂಚಣಿ ಪಡೆಯುವವರನ್ನು ಹೊರತುಪಡಿಸಿ ಭಾರತದ ಪ್ರತಿಯೊಬ್ಬ ನಾಗರಿಕರಿಗೆ ಸಿಗುವಂತೆ ಮಾಡುಬೇಕು.

ಪಿಂಚಣಿಯ ಮೊತ್ತ ಪ್ರತಿ ವರ್ಷ ತನ್ನಿಂತಾನೆ ಪರಿಷ್ಕಾರಗೊಳ್ಳುವಂತಾಗಲು ಪಿಂಚಣಿಯನ್ನು ಗ್ರಾಹಕರ ಬೆಲೆಗಳಿಗೆ ಜೋಡಣೆ ಮಾಡಬೇಕು.
ವೃದ್ಧಾಪ್ಯ ಪಿಂಚಣಿಗಳಿಗೆ ಏಕ ಗವಾಕ್ಷಿ ಯೋಜನೆಯನ್ನು ರೂಪಿಸಬೇಕು.

ಎಲ್ಲಾ ವಿಧವೆಯರು, ಅನಾಥರು ಮತ್ತು  ಅಂಗವಿಕಲರಿಗೆ ವಯಸ್ಸಿನ ಪರಿಮಿತಿಯಿಲ್ಲದೆ ಏಕರೀತಿಯ ಭತ್ಯೆ ನೀಡಬೇಕು.

ಸರಕಾರದ ಬೆಂಬಲದೊಂದಿಗೆ ಎಲ್ಲಾ ವೃದ್ಧಾಲಯಗಳು / ಡೇಕೇರ್ ಕೇಂದ್ರಗಳ ಒಂದು ಜಾಲವನ್ನು ಕಟ್ಟುವುದು.

ಮಾಜಿ ಸೈನಿಕರು

ಒಂದು ಶ್ರೇಣಿ-ಒಂದು ಪಿಂಚಣಿ ಯೋಜನೆಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವುದು.

ನಿವೃತ್ತ ಕೇಂದ್ರಿÃಯ ಅರೆಸೇನಾ ಪಡೆಗಳ ಸಿಬ್ಬಂದಿ, ವಿಧವೆಯರು ಹಾಗೂ ಅವಲಂಬಿತರ ಕಲ್ಯಾಣವನ್ನು ಖಾತರಿಪಡಿಸುವುದು, ಅವರನ್ನು ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸಮನಾಗಿ ಪರಿಗಣಿಸುವುದು.

ಮಾಜಿ ಸೈನಿಕರ ಸಮಸ್ಯೆಗಳ ಪರಿಶೀಲನೆ ಮತ್ತು ಪರಿಹಾರಕ್ಕಾಗಿ ಸಶಸ್ತç ಪಡೆಗಳ ನಿವೃತ್ತ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸುವುದು.

ನಗರ ಪ್ರದೇಶಗಳ ಪ್ರಶ್ನೆಗಳು

ಭಾರತದ ನಗರ ಪ್ರದೇಶಗಳಲ್ಲಿ ಬಡವರು ಮತ್ತು ದುಡಿಯುವ ಜನರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಿಪಿಐ (ಎಂ) ಈ ಕೆಳಗಿನ ವಿಚಾರಗಳಿಗೆ ಬದ್ಧವಾಗಿದೆ.

ನಗರಾಡಳಿತದ ಚುನಾಯಿತ ನಗರ ಸಂಸ್ಥೆಗಳನ್ನು ಬದಿಗೊತ್ತುವ ಸ್ಪೆಷಲ್ ಪರ್ಪಸಸ್ ವೆಹಿಕಲ್ಸ್ನ ಕಡ್ಡಾಯ ರಚನೆಯನ್ನು ರದ್ದುಪಡಿಸುವುದು; ಸಂವಿಧಾನದ 74ನೇ ತಿದ್ದುಪಡಿ ಕಾನೂನನ್ನು ಅನುಷ್ಠಾನಗೊಳಿಸುವುದು ಮತ್ತು ಒಂದು ಕಾಲಮಿತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಮತ್ತು ಹಣಕಾಸಿನ ವಿಕೇಂದ್ರಿÃಕರಣವನ್ನು ಖಾತರಿಗೊಳಿಸುವುದು; ನಗರ ಯೋಜನೆಗಳ ರೂಪಣೆ ಮತ್ತು ಬಜೆಟ್ ಪ್ರಕ್ರಿಯೆಯಲ್ಲಿ ಜನರ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸುವುದು.

ಒಂದು ಹೊಸ ನಗರ ನೀತಿಯನ್ನು ರೂಪಿಸುವುದು. ಅದರನ್ವಯ `ಸ್ಮಾರ್ಟ್ ಸಿಟಿಗಳ’ ಬದಲಿಗೆ ಒಳಗೊಳ್ಳುವಿಕೆ ಹಾಗೂ ಸುಸ್ಥಿರತೆಯ ತತ್ವದೊಂದಿಗೆ `ವಾಸಯೋಗ್ಯ ನಗರ’ಗಳ ನಿರ್ಮಾಣ. ನಗರದ ಬಡವರು ಮತ್ತು ಕಾರ್ಮಿಕರಿಗೆ ಅವರವರ ನಗರಗಳಲ್ಲಿ ಒಂದು ಸ್ಪಷ್ಟವಾದ ಕನಿಷ್ಟ  ಗುಣಮಟ್ಟ ಮತ್ತು ಜನರ ಈಗ ಅಸ್ತಿತ್ವದಲ್ಲಿರುವ ವಸತಿಪ್ರದೇಶಗಳ ಮತ್ತು ಜೀವನೋಪಾಯಗಳ ರಕ್ಷಣೆ. ಸ್ಥಳೀಯ ಚುನಾಯಿತ ಸರಕಾರಗಳ ಮೂಲಕ ಸಾರ್ವಜನಿಕ ಸಮಾಲೋಚನೆ ಮತ್ತು ಚರ್ಚೆಗಳೊಂದಿಗೆ ಈ ಇಡೀ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.

ಯೋಜಿತ ನಗರೀಕರಣ; ನಗರಗಳಲ್ಲಿ ಹೆಚ್ಚುತ್ತಿರುವ ದುಡಿಯುವ ಜನರ ವಲಸೆಯಿಂದಾಗಿ ಅಗತ್ಯವಾದ ಸಾರ್ವಜನಿಕ ವ್ಯವಸ್ಥೆಗಳನ್ನು ಸ್ಥಾಪಿಸಲು ಹೆಚ್ಚು ಸರಕಾರಿ ಹಣವನ್ನು ಹೂಡುವುದು. ಮಧ್ಯಮ ಹಂತದ ನಗರಗಳ ಬೆಳವಣಿಗೆಗೆ ಗಮನವನ್ನು ಕೊಡುವುದು- ಮಧ್ಯಮ ಹಂತದ ನಗರಗಳಿಗೆ ಹೆಚ್ಚೆಚ್ಚು ಉದ್ಯೊÃಗಗಳು ಆಕರ್ಷಿತವಾಗುವಂತೆ ಮಾಡುವುದು.

ಜನತೆಯ ನೀರು ಮತ್ತು ವಸತಿಯ ಹಕ್ಕನ್ನು ಮಾನ್ಯ ಮಾಡುವುದು ಮತ್ತು ಕುಡಿಯುವ ನೀರು, ನೈರ್ಮಲ್ಯ, ವಿದ್ಯುತ್, ಸಾರಿಗೆ, ಪಡಿತರ ಅಂಗಡಿಗಳು, ಆರೋಗ್ಯ ಸೌಲಭ್ಯಗಳು, ಶಾಲೆಗಳು, ಬೀದಿ ದೀಪಗಳು ಇತ್ಯಾದಿ ಮೂಲಭೂತ ಸೇವೆಗಳನ್ನು ನಗರ ಪ್ರದೇಶಗಳ ಬಡವರಿಗೆ ಕೈಗೆಟಕುವಂತೆ ಮಾಡುವುದು.

ಹೆಚ್ಚು ತೊಂದರೆಗೊಳಗಾದವರಿಗೆ ಮತ್ತು ಅನಾಥರಿಗಾಗಿ ಸಾಕಷ್ಟು ಸೌಲಭ್ಯಗಳುಳ್ಳ ರಾತ್ರಿ ಆಶ್ರಯತಾಣಗಳು, ಮನೆಗಳು ಮತ್ತು ಸಾಮೂಹಿಕ ಅಡುಗೆ ಮನೆಗಳನ್ನು ನಿರ್ವಹಿಸುವುದು.

ಶೂನ್ಯ ತೆರವು ನೀತಿಯೊಂದಿಗೆ ಕೊಳೆಗೇರಿಗಳನ್ನು ನಾಶಮಾಡುವುದಕ್ಕೆ ತಡೆ. ಕೊಳೆಗೇರಿಗಳನ್ನು ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸುವುದನ್ನು ಖಾತರಿಪಡಿಸುವುದು. ಕೊಳೆಗೇರಿ ಪ್ರದೇಶಗಳು ರಿಯಲ್ ಎಸ್ಟೆÃಟ್ ಕುಳಗಳಿಗೆ ವರ್ಗವಾಗುವುದನ್ನು ತಡೆಯುವುದು. ಕೊಳೆಗೇರಿ ವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು.

ಕಾರ್ಮಿಕರನ್ನು ಬುಡಮೇಲು ಮಾಡುವುದು ಹಾಗೂ ಅವರ ಕೆಲಸದ ಸ್ಥಳಗಳಿಂದ ದೂರಕ್ಕೆ ನಗರದ ಹೊರವಲಯಗಳಿಗೆ ಸ್ಥಳಾಂತರಿಸುವುದರ ಮೇಲೆ ಪೂರ್ಣ ನಿರ್ಬಂಧ.

ಪೂರ್ಣ ನಾಗರಿಕ ಸೌಲಭ್ಯಗಳೊಂದಿಗೆ ವಸತಿ ವ್ಯವಸ್ಥೆಗಾಗಿ ಹೆಚ್ಚಿನ ಸಾರ್ವಜನಿಕ ಹಣದ ಬಳಕೆ. ಶ್ರಿÃಮಂತ ವರ್ಗಗಳಿಗಷ್ಟೇ ಅನುಕೂಲ ಮಾಡಿಕೊಡುವ ರಿಯಲ್ ಎಸ್ಟೆÃಟ್ ವ್ಯವಸ್ಥೆಯ ಎಗ್ಗಿಲ್ಲದ ಬೆಳವಣಿಗೆಗೆ ಕಡಿವಾಣ.

ಆಧುನಿಕ, ಕೈಗೆಟಕುವ, ಸಮಾನ ಸಾರ್ವಜನಿಕ ಸಾರಿಗೆ ಹಾಗೂ ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನು ಖಾತರಿಪಡಿಸುವುದು. ಪಾದಚಾರಿಗಳು, ಸೈಕಲ್ ಸವಾರರು ಮತ್ತು ಇತರ ನಿಧಾನಗತಿಯ ವಾಹನಗಳಿಗೆ ಹೆಚ್ಚಿನ ಹಕ್ಕಿನೊಂದಿಗೆ ಯೋಜಿತ ರಸ್ತೆಗಳು ಮತ್ತು ಸಾರಿಗೆ. ಈ ಕ್ರಮಗಳಿಂದ ವಾಯು ಮಾಲಿನ್ಯ ಮತ್ತು ವಾಹನ ದಟ್ಟಣೆಯನ್ನು ತಡೆಯುವುದು.

ರೀಸೈಕಲ್ ಮಾಡಬಹುದಾದ/ಪುನರ್‌ಬಳಸಬಹುದಾದ ತ್ಯಾಜ್ಯಗಳ ಘನತ್ಯಾಜ್ಯ ನಿರ್ವಹಣೆಗೆ ವಿಶೇಷ ಗಮನ ನೀಡುವುದು. ಅಪಾಯಕಾರಿ ಎಲೆಕ್ಟ್ರಾನಿಕ್/ರಾಸಾಯನಿಕ ಮತ್ತು ಜೈವಿಕ ತ್ಯಾಜ್ಯಗಳನ್ನು ಪಿಪಿಪಿ ಇಲ್ಲದೆ ಎಸ್‌ಡಬ್ಲುö್ಯಎಂ ಕಾರ್ಮಿಕರ ಸಹಕಾರಿ ಸಂಘಗಳ ಮೂಲಕ ನಿರ್ವಹಿಸುವುದು.

ಬೀದಿ ಬದಿ ವ್ಯಾಪಾರಿಗಳಿಗೆ ರಕ್ಷಣೆಯನ್ನು ಖಾತರಿಪಡಿಸುವುದು ಮತ್ತು ಅವರ ಧನಾತ್ಮಕ ಕೊಡುಗೆಯನ್ನು ಗುರುತಿಸುವುದು. ಬೀದಿ ವ್ಯಾಪಾರಿಗಳನ್ನು ನೊಂದಾಯಿಸುವುದು ಮತ್ತು ಪಟ್ಟಣ ವ್ಯಾಪಾರ ಸಮಿತಿಗಳನ್ನು (ಟಿವಿಸಿ) ರಚಿಸುವುದು.

ಪರಿಸರ

ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಪರಿಸರ ಅನುಮತಿ ಪ್ರಕ್ರಿಯೆ ಮತ್ತು ವ್ಯವಸ್ಥೆಗಳನ್ನು ಪರಿಣಾಮಕಾರಿಗೊಳಿಸುವುದು, ಕಾಲಮಿತಿಯೊಳಗೆ, ಪಾರದರ್ಶಕವಾಗಿರುವಂತೆ, ಬಾಧ್ಯವಾಗಿರುವಂತೆ ಮತ್ತು ಯಾವುದೇ ಹಿತಗಳ ಸಂಘರ್ಷಗಳಿಂದ ಹೊರತಾಗಿರುವಂತೆ ಮಾಡುವುದು.

ಹಸಿರುಮನೆಯ ಅನಿಲಗಳ ಉಗುಳುವಿಕೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳುವುದು, ಉತ್ಪಾದನೆ ಮತ್ತು ಬಳಕೆಯ ಎಲ್ಲಾ ಕ್ಷೇತ್ರಗಳಲ್ಲಿ ಇಂಧನ ದಕ್ಷತೆ, ಸೌರ ಮತ್ತು ಗಾಳಿಯಂಥ ನವೀಕರಿಸಬಹುದಾದ ಇಂಧನದ ಬಳಕೆಗೆ ಪ್ರೊÃತ್ಸಾಹ; ಇಂಧನ ಅಸಮಾನತೆಯನ್ನು ಕಡಿಮೆ ಮಾಡುವುದು ಮತ್ತು ಆರ್ಥಿಕ ದುರ್ಬಲ ವಿಭಾಗಗಳಿಗೆ ಇಂಧನ ಸಿಗುವಂತೆ ಮಾಡುವುದು.

ಪ್ರಕೃತಿ ಮತ್ತು ಹವಾಮಾನ ಸಂಬಂಧಿತ ದುರಂತಗಳನ್ನು ನಿರ್ವಹಿಸಲು ರಾಜ್ಯಗಳನ್ನು ಬಲಪಡಿಸುವುದು. ತೊಂದರೆಗೊಳಗಾಗುವ ಜನರ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಹವಾಮಾನ ಪೂರಕ ಅಭಿವೃದ್ಧಿ ತಂತ್ರಗಳನ್ನು ಅಳವಡಿಸುವುದು ಮತ್ತು ಅನುಷ್ಠಾನಗೊಳಿಸುವುದು.

ಪರಿಣಾಮಕಾರಿ ನಿಯಮಗಳ ಮೂಲಕ ನದಿಗಳು ಮತ್ತು ಇತರ ಜಲ ಮೂಲಗಳ ಮಾಲಿನ್ಯವನ್ನು ತಡೆಯುವುದು. ಇದಕ್ಕಾಗಿ ಕೇಂದ್ರಿÃಯ ಮತ್ತು ರಾಜ್ಯಗಳ ನಿಯಂತ್ರಣ ಸಂಸ್ಥೆಗಳನ್ನು ವಿಶೇಷವಾಗಿ ಬಲಪಡಿಸುವುದು.

ನದಿ ಪಾತ್ರಗಳು ಮತ್ತು ಪ್ರವಾಹ ಪ್ರದೇಶಗಳನ್ನು ಅವನತಿಗೊಳಿಸುವುದು ಹಾಗೂ ಅಲ್ಲಿ ವಿನಾಶಕಾರಿ ಅಭಿವೃದ್ಧಿಯನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಳ್ಳುವುದು.

ಜಲ ಸಂಪನ್ಮೂಲಗಳು

ನೀರು ಒಂದು ಅಲಭ್ಯ ಸಾರ್ವಜನಿಕ ವಸ್ತು ಎಂದು ಪರಿಗಣಿಸಿ ರಾಷ್ಟಿçÃಯ ಜಲ ನೀತಿಯನ್ನು ರೂಪಿಸುವುದು. ಜಲ ಮರುಪೂರಣ ಮತ್ತು ಸಂರಕ್ಷಣೆಯ ಜೊತೆಜೊತೆಯಲ್ಲೇ ಗೃಹಬಳಕೆ, ನೀರಾವರಿ ಮತ್ತು ಕೈಗಾರಿಕೆ ನೀರಿನ ಲಭ್ಯತೆಯನ್ನು ಹೆಚ್ಚಿಸುವ ರೀತಿಯಲ್ಲಿ ಈ ನೀತಿಯನ್ನು ರೂಪಿಸುವುದು. ಪರಿಣಾಮಕಾರಿ ನಿಯಂತ್ರಣ ಮತ್ತು ಬೇಡಿಕೆ ನಿರ್ವಹಣೆ ಮೂಲಕ ಅದನ್ನು ಸಾಧಿಸುವುದು. ಎಲ್ಲಾ ಜನರಿಗೆ ಬಳಕೆಯೋಗ್ಯ ಕುಡಿಯುವ ನೀರನ್ನು ಸಮಾನವಾಗಿ ಪೂರೈಸುವುದು ಆದ್ಯತೆಯಾಗಿರುತ್ತದೆ.

ಜಲ ಸಂಪನ್ಮೂಲಗಳನ್ನು ಖಾಸಗೀಕರಿಸುವುದಿಲ್ಲ ಮತ್ತು ನೀರಿನ ಹಕ್ಕನ್ನು ಮಾನ್ಯ ಮಾಡಲಾಗುವುದು.

ಪರಿಣಾಮಕಾರಿ ನಿಯಮಗಳು, ನಿಯಂತ್ರಣ ಸಂಸ್ಥೆಗಳನ್ನು ಬಲಪಡಿಸುವುದು ಹಾಗೂ ಸೂಕ್ತ ಕಾನೂನುಗಳ ಮೂಲಕ ಅಂತರ್ಜಲ ಕುಸಿಯುವುದನ್ನು ನಿರ್ವಹಿಸುವುದು.

ವಿಜ್ಞಾನ ಮತ್ತು ತಂತ್ರಜ್ಞಾನ

ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶೀಯ ಸಂಶೋಧನೆಗಾಗಿ ಸಾರ್ವಜನಿಕ ಹೂಡಿಕೆಯನ್ನು ಜಿಡಿಪಿಯ ಶೇಕಡಾ 2 ಕ್ಕೆ ಏರಿಸಲಾಗುವುದು.

ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ವಿಶ್ವಿದ್ಯಾನಿಲಯ ವ್ಯವಸ್ಥೆಯನ್ನು ಬಲಪಡಿಸುವುದು. ವಿಜ್ಞಾನದಲ್ಲಿ ಮೂಲಭೂತ ಸಂಶೋಧನೆಗೆ ಆದ್ಯತೆ.

ನಮ್ಮ ಸಂವಿಧಾನ ನಿರ್ದೇಶಿಸಿರುವ ಪ್ರಕಾರ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕ ಚಿಂತನೆ ಬೆಳೆಸಲು ಆಂದೋಲನ.

ಬೀಜ ಕ್ಷೇತ್ರದಲ್ಲಿ ಮಾನ್ಸಾಂಟೊನಂಥ ಕಂಪೆನಿಗಳ ಏಕಸ್ವಾಮ್ಯ ಮುರಿಯಲಿಕ್ಕಾಗಿ ಕೃಷಿ ಸಂಶೋಧನೆಗೆ ಗಮನ ಕೇಂದ್ರೀಕರಿಸುವುದು.

ಕಾಪಿರೈಟ್ ಅಥವಾ ಪೇಟೆಂಟ್‌ಗಳ ಮೂಲಕ ಏಕಸ್ವಾಮ್ಯ ಮಾಲಿಕತ್ವದಿಂದ ಮುಕ್ತವಾಗಿರುವ ಮುಕ್ತ ಸಾಫ್ಟ್ ವೇರ್ ಮತ್ತಿತರ ಹೊಸ ತಂತ್ರಜ್ಞಾನವನ್ನು ಪ್ರೋತ್ಸಾಹಿಸುವುದು. ಜೈವಿಕ ತಂತ್ರಜ್ಞಾನ ಮತ್ತು ಔಷಧ ಸಂಶೋಧನೆಯಂಥ ಎಲ್ಲಾ ಕ್ಷೆÃತ್ರಗಳಲ್ಲಿ `ನಾಲೆಜ್ ಕಾಮನ್ಸ್’ ಪ್ರೋತ್ಸಾಹಿಸುವುದು.

ಡಿಜಿಟಲ್ ಮೂಲ ಸೌಕರ್ಯವು ಒಂದು ಸಾರ್ವಜನಿಕ ಮೂಲ ಸೌಕರ್ಯ ಎಂದು ಮಾನ್ಯ ಮಾಡುವುದು ಹಾಗೂ ಅದನ್ನು ಜನ ಕಲ್ಯಾಣಕ್ಕೆ ಬಳಕೆ ಮಾಡುವುದು.

ಕಣ್ಗಾವಲು ಮತ್ತು ಖಾಸಗಿತ್ವದ ಪ್ರಶ್ನೆಗಳು

ಸೆಕ್ಷನ್ 69ರ ಅಡಿಯಲ್ಲಿ ಸರಕಾರಿ ಸಂಸ್ಥೆಗಳು ಸಾಮೂಹಿಕ ಕಣ್ಗಾವಲು ನಡೆಸುವುದನ್ನು ನಿಲ್ಲಿಸಬೇಕು. ನಾಗರಿಕರ ಖಾಸಗಿತನವನ್ನು ಉಲ್ಲಂಘಿಸುವ ಯಾವುದೇ ಕಣ್ಗಾವಲಿಗೆ ಸ್ಪಷ್ಟ ನಿಯಮಗಳಿರಬೇಕು ಮತ್ತು ಅದು ನ್ಯಾಯಾಂಗದ ಮೇಲುಸ್ತುವಾರಿಯಲ್ಲಿರಬೇಕು.

ಬಳಕೆದಾರರ ಖಾಸಗಿ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಕೆ / ದುರ್ಬಳಕೆ ಆಗುವುದನ್ನು ತಡೆದು ಜನರಿಗೆ ರಕ್ಷಣೆ ನೀಡಲು ಮಾಹಿತಿ ಖಾಸಗಿತನ ಕಾನೂನುಗಳನ್ನು ರೂಪಿಸಬೇಕು.

ಜಿಯೊ/ಏರ್‌ಟೆಲ್/ವೊಡಾಫೋನ್‌ನಂಥ ಟೆಲಿಕಾಂ ಅಥವಾ ಗೂಗಲ್, ಫೇಸ್‌ಬುಕ್ ಮತ್ತಿತರ ಇಂಟರ್‌ನೆಟ್ ಸೇವಾ ವೇದಿಕೆಗಳ ಬಳಕೆಯ ಏಕಸ್ವಾಮ್ಯವನ್ನು ತಡೆಯಬೇಕು.

ಸಂಸ್ಕೃತಿ ಮತ್ತು ಮಾಧ್ಯಮಗಳು

ಸಂವಿಧಾನದ ಎಂಟನೇ ಪರಿಚ್ಚೇದದಲ್ಲಿ ಪಟ್ಟಿ ಮಾಡಿರುವ ಎಲ್ಲಾ ಭಾಷೆಗಳಿಗೆ ಸಮಾನ ಪ್ರೋತ್ಸಾಹ ನೀಡಬೇಕು ಮತ್ತು ಅವನ್ನು ಅಭಿವೃದ್ಧಿಪಡಿಸಬೇಕು.

ಜಾತ್ಯತೀತ, ಪ್ರಗತಿಪರ ಮತ್ತು ಪ್ರಜಾಸತ್ತಾತ್ಮಕ ಸಂಸ್ಕೃತಿಯನ್ನು ಉತ್ತೇಜಿಸುವುದು; ಕೋಮುವಾದಿ ಶಕ್ತಿಗಳು ಸಾಂಸ್ಕೃತಿಕ ವ್ಯಕ್ತಿಗಳು ಮತ್ತು ನಿರ್ಮಾಣಗಳ ಮೇಲೆ ನಡೆಸುವ ದಾಳಿಗಳನ್ನು ಕಠಿಣವಾಗಿ ನಿರ್ವಹಿಸಬೇಕು.

ಮಹಿಳೆಯರ ಮೇಲಿನ ದೌರ್ಜನ್ಯವನ್ನು ಮತ್ತು ಲೈಂಗಿಕತೆಯನ್ನು ವೈಭವೀಕರಿಸುವುದನ್ನು ಹತ್ತಿಕ್ಕಬೇಕು.

ಟಿವಿ ಮತ್ತು ರೇಡಿಯೋಗೆ ಪ್ರಸಾರ ಭಾರತಿ ನಿಗಮವನ್ನು ಒಂದು ನೈಜ ಸಾರ್ವಜನಿಕ ಪ್ರಸಾರ ಸೇವೆ ಒದಗಿಸುವ ಸಂಸ್ಥೆಯನ್ನಾಗಿ ಮಾಡಲು ಬಲಪಡಿಸಬೇಕು;  ಸಾರ್ವಜನಿಕ ಪ್ರಸಾರ ಸೇವೆಯಲ್ಲಿಪ್ರಸಾರವಾಗುವ ಕಾರ್ಯಕ್ರಮಗಳಲ್ಲಿ ರಾಜ್ಯಗಳ ಅಭಿಪ್ರಾಯಗಳಿಗೆ ಅವಕಾಶವಿರಬೇಕು.

ಏಕಸ್ವಾಮ್ಯವನ್ನು ತಡೆಯುವ ಸಲುವಾಗಿ ಕ್ರಾಸ್-ಮೀಡಿಯಾ ಮಾಲಿಕತ್ವವನ್ನು ನಿಷೇಧಿಸಬೇಕು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಎಫ್‌ಡಿಐಗೆ ಅವಕಾಶ ನೀಡುವ ನೀತಿಯನ್ನು ವಾಪಸ್ ಪಡೆಯಬೇಕು.

ಮಾಧ್ಯಮದ ಸ್ವತಂತ್ರ ನಿಯಂತ್ರಣ ಪ್ರಾಧಿಕಾರವಾಗಿ ಕಾರ್ಯಾಚರಿಸಲು ಮಾಧ್ಯಮ ಮಂಡಳಿಯನ್ನು ಸ್ಥಾಪಿಸಬೇಕು.

ಇಂಟರ್‌ನೆಟ್ ಆಡಳಿತವನ್ನು ಅಮೆರಿಕದ ಹಿಡಿತದಿಂದ ತಪ್ಪಿಸಿ ಒಂದು ಸೂಕ್ತ ಅಂತರ‍್ರಾಷ್ಟ್ರೀಯ ಸಂಸ್ಥೆಗೆ ಒಪ್ಪಿಸಬೇಕು. ಸಾಮಾಜಿಕ ನ್ಯಾಯ ಕಟ್ಟುವ ಹಾಗೂ ಜಾಗತಿಕ ಕಾರ್ಪೊರೇಷನ್‌ಗಳಿಂದ ಮುಕ್ತವಾದ ಒಂದು ಜನ-ಕೇಂದ್ರಿತ ಇಂಟರ್‌ನೆಟ್‌ಅನ್ನು ಉತ್ತೆÃಜಿಸುವುದು; ಖಾಸಗಿತನದ ಹಕ್ಕನ್ನು ರಕ್ಷಿಸುವ ಮತ್ತು ಯಾವುದೇ ಸರಕಾರಗಳಿಂದ ಸಾಮೂಹಿಕ ಕಣ್ಗಾವಲಿಗೆ ಅವಕಾಶ ನೀಡದ ಒಂದು ಜಾಗತಿಕ ಇಂಟರ್‌ನೆಟ್ ವ್ಯವಸ್ಥೆಯನ್ನು ಉತ್ತೇಜಿಸುವುದು.

ಸುಳ್ಳು ಸುದ್ದಿ ಹರಡುವುದನ್ನು ನಿಯಂತ್ರಿಸಲು ಮತ್ತು ಸುಳ್ಳು ಸುದ್ದಿಗಳನ್ನು ಪ್ರಾಯೋಜಿಸುವ ಗುಂಪುಗಳು ಮತ್ತು ವ್ಯಕ್ತಿಗಳ ವಿರುದ್ಧ ಕ್ರಮಗಳನ್ನು ಕೈಗೊಳ್ಳಬೇಕು.

ಮಾಧ್ಯಮ ಸ್ವಾತಂತ್ರö್ಯದ ರಕ್ಷಣೆ ಮತ್ತು ಪತ್ರಕರ್ತರ ಮೇಲಿನ ಹಲ್ಲೆಗಳನ್ನು ತಡೆಯಲು ಕ್ರಮಗಳು.

ಸ್ವತಂತ್ರ ಮಾಧ್ಯಮಕ್ಕಾಗಿ ವಿವಿಧ ರೀತಿಗಳಲ್ಲಿ ಸಾರ್ವಜನಿಕ ಬೆಂಬಲವನ್ನು ಒದಗಿಸುವುದು.

ಗೌರವಯುತ ವೇತನವನ್ನು ಹಾಗೂ ಉದ್ಯೊÃಗ ಭದ್ರತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಎಲ್ಲಾ ಮಾಧ್ಯಮ ಸಂಸ್ಥೆಗಳ ಪತ್ರಕರ್ತರು ಮತ್ತು ಕಾರ್ಮಿಕರನ್ನು ಒಳಗೊಳಿಸಲು ಕಾರ್ಯನಿರತ ಪತ್ರಕರ್ತರ ಕಾನೂನನ್ನು ತಿದ್ದುಪಡಿ ಮಾಡುವುದು. ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲಿ ವೇತನ ಪರಿಷ್ಕರಣೆಗಾಗಿ ಮುದ್ರಣ, ಇಲೆಕ್ಟಾçನಿಕ್ ಮತ್ತು ಡಿಜಿಟಲ್ ಮಾಧ್ಯಮದ ಪತ್ರಕರ್ತರಿಗಾಗಿ ಹೊಸ ವೇತನ ಮಂಡಳಿಯನ್ನು ರಚಿಸುವುದು.

ಸಾಂಸ್ಥಿಕ ಸುಧಾರಣೆಗಳಿಗಾಗಿ

ಸಿಪಿಐ (ಎಂ) ಈ ಕೆಳಗಿನವುಗಳ ಪರವಾಗಿದೆ:

ವೈಯಕ್ತಿಕ ಹಕ್ಕುಗಳು ಮತ್ತು ಸ್ವಾತಂತ್ರö್ಯದ ರಕ್ಷಣೆ. ವಾಕ್ ಸ್ವಾತಂತ್ರö್ಯ, ಅಭಿವ್ಯಕ್ತಿ ಸ್ವಾತಂತ್ರö್ಯ ಮತ್ತು ವೈಯಕ್ತಿಕ ಹಕ್ಕುಗಳ ಮೇಲೆ ಅನಗತ್ಯ ನಿಯಂತ್ರಣಗಳನ್ನು ಹೇರುವ ಎಲ್ಲಾ ನಿಯಮಗಳ ಪುನರ್‌ಪರಿಶೀಲನೆ ಹಾಗೂ ಸುಧಾರಣೆ.

ಕಾನೂನುಬದ್ಧ, ಸಂವಿಧಾನಿಕ ಮತ್ತು ನಿಯಂತ್ರಣ ಸಂಸ್ಥೆಗಳ ಸ್ವಾತಂತ್ರö್ಯವನ್ನು ರಕ್ಷಿಸುವುದು. ಸಿವಿಸಿ, ಸಿಬಿಐ, ಇಸಿಐ, ರಾಷ್ಟಿçÃಯ/ರಾಜ್ಯ ಮಾನವ ಹಕ್ಕುಗಳ ಆಯೋಗಗಳು, ಲೋಕಪಾಲ್, ಲೋಕಾಯುಕ್ತರು, ಮಹಿಳಾ ಆಯೋಗಗಳು, ಎಸ್‌ಸಿ/ಎಸ್‌ಟಿ ಆಯೋಗಗಳು ಇತ್ಯಾದಿ ಮೇಲುಸ್ತುವಾರಿ, ನಿಯಂತ್ರಕ ಮತ್ತು ನ್ಯಾಯಿಕ ಸಂಸ್ಥೆಗಳ ನೇಮಕಾತಿಗಳಲ್ಲಿ ಪಾರದರ್ಶಕತೆಯನ್ನು ಖಾತರಿಪಡಿಸುವ ಮೂಲಕ ಇದನ್ನು ಸಾಧಿಸುವುದು. ವಿಶೇಷವಾಗಿ ಉನ್ನತ ಸ್ಥಾನಗಳಲ್ಲಿನ ಎಲ್ಲಾ ರೀತಿಯ ಭ್ರಷ್ಟಾಚಾರವನ್ನು ತಡೆಯುವುದು ಮತ್ತು ನಿಯಂತ್ರಿಸುವುದು, ದೂರುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು, ಭ್ರಷ್ಟಾಚಾರದ ಸೂಚನೆಗಳನ್ನು ಕೊಡುವವರನ್ನು (ವಿಸಲ್ ಬ್ಲೋವರ್ಸ್) ರಕ್ಷಿಸುವುದು; ತ್ವರಿತ ಹಾಗೂ ಕೈಗೆಟಕುವ ನ್ಯಾಯ ವ್ಯವಸ್ಥೆ; ಮತ್ತು ಚುನಾವಣೆ ವ್ಯವಸ್ಥೆಯ ಸುಧಾರಣೆಗಾಗಿ ಕ್ರಮಗಳನ್ನು ಕೈಗೊಳ್ಳುವುದು.

ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಹೆಚ್ಚಿನ ಜವಾಬುದಾರಿಕೆ

ಭ್ರಷ್ಟಾಚಾರ ತಡೆ ಕಾನೂನು ಮತ್ತು ಲೋಕಪಾಲ ಕಾನೂನಿನ ವ್ಯಾಪ್ತಿಯನ್ನು ವಿಸ್ತರಿಸಲು ಹಾಗೂ  ಸರಕಾರ ಮತ್ತು ಖಾಸಗಿ ಕ್ಷೇತ್ರದ ನಡುವಿನ ಎಲ್ಲಾ ಬಗೆಯ ಗುತ್ತಿಗೆಗಳು, ಒಪ್ಪಂದಗಳು ಅಥವಾ ಯಾವುದೇ ರೀತಿಯ ಎಂಒಯುಗಳನ್ನು ಅವುಗಳ ವ್ಯಾಪ್ತಿಗೆ ತರಲಿಕ್ಕಾಗಿ ಅವುಗಳನ್ನು ಬಲಪಡಿಸುವುದು ಹಾಗೂ ತಿದ್ದುಪಡಿ ಮಾಡುವುದು.

ಕಾರ್ಪೊರೇಟ್ ಅಪರಾಧಗಳ ಸಮಗ್ರ ತನಿಖೆಗಾಗಿ ಸಂಬಂಧಪಟ್ಟ ನಿಯಂತ್ರಕರು ಮತ್ತು ತನಿಖಾ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವುದು.

ಖಾಸಗಿ ಹಣಕಾಸು ಕ್ಷೇತ್ರದ ಸಂಸ್ಥೆಗಳನ್ನು, ಅದರಲ್ಲೂ ವಿಶೇಷವಾಗಿ ಬ್ಯಾಂಕಿಂಗ್ ಮತ್ತು ವಿಮೆ ಕ್ಷೇತ್ರಗಳನ್ನು, ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಎಲ್ಲಾ ಯೋಜನೆಗಳನ್ನು ಲೋಕಪಾಲ ಕಾನೂನು, ವಿಸಲ್ ಬ್ಲೊÃವರ್ಸ್ ರಕ್ಷಣೆ ಕಾನೂನು ಮತ್ತು ಇತರೆ ಸಂಬಂಧಿತ ಭ್ರಷ್ಟಾಚಾರ-ವಿರೋಧಿ ಕಾನೂನುಗಳ ವ್ಯಾಪ್ತಿಗೆ ತರುವುದು.

ಮಾಹಿತಿ ಹಕ್ಕು ಕಾನೂನು (ಆರ್‌ಟಿಐ) ಬಳಕೆದಾರರು ಮತ್ತು ಭ್ರಷ್ಟಾಚಾರ-ವಿರೋಧಿ ಹೋರಾಟಗಾರರಿಗೆ ರಕ್ಷಣೆ ಒದಗಿಸಲು ಪರಿಣಾಮಕಾರಿ ವ್ಯವಸ್ಥೆಗಳನ್ನು ರೂಪಿಸುವುದು ಮತ್ತು ಒಂದು ಪರಿಣಾಮಕಾರಿ ವಿಸಲ್ ಬ್ಲೊÃವರ್ಸ್ ರಕ್ಷಣೆ ಕಾನೂನನ್ನು ರಚಿಸುವುದು.

ಆರ್‌ಟಿಐ ಕಾನೂನನ್ನು ಬಲಪಡಿಸುವುದು ಹಾಗೂ ಆಡಳಿತದ ನಿರ್ಧಾರ ತೆಗೆದುಕೊಳ್ಳುವ ಎಲ್ಲಾ  ವಿಷಯಗಳಲ್ಲಿ ನಾಗರಿಕರ ಸಕ್ರಿಯ ಭಾಗವಹಿಸುವಿಕೆಗಾಗಿ ಸಾಂಸ್ಥಿಕ ನಿಯಮಗಳನ್ನು ರೂಪಿಸುವುದು; ಯಾವುದೇ ಕಾನೂನು ಅಂಗೀಕಾರವಾಗುವ ಮುನ್ನ ಜನರಿಂದ ಅಭಿಪ್ರಾಯಗಳನ್ನು ಪಡೆಯುವ ಹಾಗೂ ಪಾರದರ್ಶಕ ಕಾನೂನು-ಪೂರ್ವ ಪ್ರಕ್ರಿಯೆಗಾಗಿ ಆರ್‌ಟಿಐನ ಸೆಕ್ಷನ್ 4ನ್ನು ಜಾರಿಗೊಳಿಸುವುದು.

ಅಧಿಕೃತ ರಹಸ್ಯಗಳ ಕಾಯಿದೆ (ಒಎಸ್‌ಎ)ಯ ದುರುಪಯೋಗ ತಡೆಯುವುದು ಹಾಗೂ ಅದನ್ನು ಸೂಕ್ತವಾಗಿ ಸುಧಾರಿಸುವುದು.

ನ್ಯಾಯಾಂಗ ಸುಧಾರಣೆ

ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ವಕೀಲರ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಒಂದು ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯನ್ನಾಗಿ ರಾಷ್ಟ್ರೀಯ ನ್ಯಾಯಾಂಗ ಆಯೋಗವನ್ನು, ನೇಮಕಗಳು, ವರ್ಗಾವಣೆಗಳು ಮತ್ತು ನ್ಯಾಯಾಧೀಶರ ತಪ್ಪು-ಒಪ್ಪುಗಳ ಪರಿಶೀಲನೆಗಾಗಿ ಮತ್ತು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಖಾತರಿಪಡಿಸಲು ರಚಿಸಬೇಕು.

ಸಾಮಾನ್ಯ ಜನರಿಗೆ ಕೈಗೆಟಕುವ ವೆಚ್ಚದಲ್ಲಿ ತ್ವರಿತವಾಗಿ ನ್ಯಾಯ ಸಿಗುವಂತಾಗಲು ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸುವುದು. ನ್ಯಾಯಾಂಗದಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬುವುದು.

ಭಿನ್ನಮತವನ್ನು ದಮನಿಸುವಲ್ಲಿ ದುರುಪಯೋಗವಾಗುವುದನ್ನು ತಡೆಯಲು ಕ್ರಿಮಿನಲ್ ನ್ಯಾಯಾಂಗ ನಿಂದನೆಯ ವ್ಯಾಖ್ಯಾನವನ್ನು ಸೂಕ್ತವಾಗಿ ಬದಲಾಯಿಸುವುದು.

ನ್ಯಾಯಾಧೀಶರು ತಮ್ಮ ಆಸ್ತಿಪಾಸ್ತಿ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸುವುದನ್ನು ಕಡ್ಡಾಯಗೊಳಿಸುವುದು.

ನ್ಯಾಯಾಂಗದ ಎಲ್ಲಾ ಹಂತಗಳಲ್ಲಿ ಸಾಕಷ್ಟು ಪ್ರಾತಿನಿಧ್ಯ ಮತ್ತು ವೈವಿಧ್ಯವನ್ನು ಖಾತರಿಪಡಿಸಬೇಕು.

ಚುನಾವಣಾ ಆಯೋಗದ ಸುಧಾರಣೆ

ಪ್ರಧಾನ ಮಂತ್ರಿ, ಪ್ರತಿಪಕ್ಷ ನಾಯಕ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯೊಂದರ ಸಲಹೆಯ ಮೇರೆಗೆ ರಾಷ್ಟçಪತಿಯವರು ಚುನಾವಣೆ ಆಯೋಗದ ಸದಸ್ಯರನ್ನು ನೇಮಕ ಮಾಡಬೇಕು.

ಚುನಾವಣೆ ಆಯುಕ್ತರು ನಿವೃತ್ತರಾದ ಮೇಲೆ ಅವರು ಸರಕಾರದ ಯಾವುದೇ ಹುದ್ದೆಯಲ್ಲಿರುವುದು ಅಥವಾ ರಾಜ್ಯಪಾಲರಾಗುವುದು ಅಥವಾ ಶಾಸನಸಭೆಯೊಂದರ ಸದಸ್ಯರಾಗುವುದನ್ನು ಕಾನೂನಾತ್ಮಕವಾಗಿ ನಿಷೇಧಿಸುವುದು.

ಚುನಾವಣಾ ವೀಕ್ಷಕರ ಕಾರ್ಯವ್ಯಾಪ್ತಿಯನ್ನು ನಿರ್ದಿಷ್ಟ ಪಡಿಸಲಿಕ್ಕಾಗಿ ಜನತಾ ಪ್ರಾತಿನಿಧ್ಯ ಕಾನೂನಿಗೆ ತಿದ್ದುಪಡಿ ತರುವುದು.

ಚುನಾವಣಾ ಸುಧಾರಣೆ

ಭಾಗಶಃ ಪಟ್ಟಿ ವ್ಯವಸ್ಥೆಯೊಂದಿಗೆ ಆನುಪಾತಿಕ ಪ್ರಾತಿನಿಧ್ಯವನ್ನು ಜಾರಿಗೆ ತರುವುದು.

ಚುನಾವಣಾ ಬಾಂಡ್‌ಗಳನ್ನು ರದ್ದು ಮಾಡುವುದು.

ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ವಸ್ತು ರೂಪದಲ್ಲಿ ಸರಕಾರ ನೆರವು ನೀಡುವುದು; ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದನ್ನು ನಿಷೇಧೀಸುವುದು.

ಪ್ರಜಾಪ್ರಭುತ್ವದಲ್ಲಿ ನಂಬಿಕೆಯನ್ನು ಮರುಸ್ಥಾಪಿಸುವದನ್ನು ಖಾತರಿಪಡಿಸಲು ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಸೂಕ್ತವಾಗಿ ತಿದ್ದುಪಡಿ ಮಾಡುವುದು. ಚುನಾವಣಾ ಫಲಿತಾಂಶ ಘೋಷಿಸುವ ಮುನ್ನ ಇವಿಎಂಗೆ ಪ್ರತಿಯಾಗಿ ಶೇಕಡಾ 50 ರವರೆಗಿನ ವಿವಿಪ್ಯಾಟ್‌ಗಳ ಎಣಿಕೆಗೆ ಅವಕಾಶ ಕಲ್ಪಿಸುವುದು.

ಅಭ್ಯರ್ಥಿಗಳ ಖರ್ಚಿನ ಮೇಲೆ ಇರುವ ಮಿತಿಯ ರೀತಿಯಲ್ಲೆÃ ರಾಜಕೀಯ ಪಕ್ಷಗಳ ಚುನಾವಣಾ ಖರ್ಚನ್ನು ಕೂಡ ಮಿತಿಯ ವ್ಯಾಪ್ತಿಗೆ ಒಳಪಡಿಸಬೇಕು. ಚುನಾವಣಾ ವೆಚ್ಚದ ಪಾರದರ್ಶಕತೆ ಮತ್ತು ಜವಾಬುದಾರಿಕೆಯನ್ನು ಖಾತರಿಪಡಿಸಬೇಕು.

Leave a Reply

Your email address will not be published. Required fields are marked *