ಆರೆಸ್ಸೆಸ್‍ನ ದುಷ್ಟ ರಾಜಕೀಯ, ಸುಳ್ಳುಗಾರಿಕೆ ಬಯಲಾಗುತ್ತದೆ

ಸ್ವಾತಂತ್ಯಾ ನಂತರದ ಪ್ರತಿಯೊಂದು ಕೋಮುಗಲಭೆಯ ನ್ಯಾಯಾಂಗ ತನಿಖೆಯಲ್ಲಿ ಕಟು ತೀರ್ಪುಗಳನ್ನು ಎದುರಿಸಬೇಕಾಗಿ ಬಂದಿರುವ ಆರೆಸ್ಸೆಸ್/ಬಿಜೆಪಿ ಸುಳ್ಳುಗಳನ್ನು ಮತ್ತೆ-ಮತ್ತೆ ನೂರು ಬಾರಿ ಹೇಳಿ ಅದನ್ನು ಸತ್ಯವೆಂದು ನಂಬಿಸುವ ಹಿಟ್ಲರನ ಬಂಟ ಗೋಬೆಲ್ಸನ ತಂತ್ರಗಳನ್ನು ಸದಾ ಬಳಸಿಕೊಂಡು ಬಂದಿವೆ. ಕೇರಳದಲ್ಲಿ ಸಿಪಿಐ(ಎಂ) ಮೇಲೆ ವ್ಯಾಪಕ ಪ್ರಮಾಣದಲ್ಲಿ ಹಲ್ಲೆಗಳನ್ನು ನಡೆಸುತ್ತಲೇ ತಾನೇ ಹಿಂಸಾಚಾರಕ್ಕೆ ಬಲಿಯಾಗಿದ್ದೇನೆ ಎಂದು ಬಿಂಬಿಸುವ ಮಹಾ ಸುಳ್ಳುಗಾರಿಕೆ ಅವರದ್ದು.

ಹೈದರಾಬಾದಿನಲ್ಲಿ ಇದೀಗ ಮುಕ್ತಾಯ ಗೊಂಡಿರುವ ಆರೆಸ್ಸೆಸ್‍ನ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಸಭೆ ಸಿಪಿಐ(ಎಂ) ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ವಿರುದ್ಧ ಹಿಂಸಾಚಾರ ನಡೆಸುತ್ತಿದೆಯೆಂಬ ಎಂಬ ತನ್ನ ಸುಳ್ಳು ಆಪಾದನೆಯನ್ನು ಪುನರುಚ್ಚರಿಸಿದೆ. ಸತ್ಯ ತದ್ವಿರುದ್ಧವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ವಿಧಾನಸಭಾ ಚುನಾವಣೆಗಳ ನಂತರ, ಚುನಾವಣಾ ಫಲಿತಾಂಶ ಪ್ರಕಟವಾದ ದಿನವೇ ಆರೆಸ್ಸೆಸ್ ಮುಖ್ಯಮಂತ್ರಿಗಳ ಚುನಾವಣಾ ಕ್ಷೇತ್ರದಲ್ಲಿ ವಿಜಯೋತ್ಸವದ ಮೇಲೆ ಬಾಂಬುಗಳನ್ನು ಎಸೆದ ಪರಿಣಾಮವಾಗಿ ಒಬ್ಬ ಸಿಪಿಐ(ಎಂ) ಕಾರ್ಯಕರ್ತರ ಸಾವು ಉಂಟಾಯಿತು, ಹಲವರಿಗೆ ಗಾಯಗಳಾದವು.

ಆರೆಸ್ಸೆಸ್ ತನ್ನ ಕೋಮುಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ತಂತ್ರದೊಂದಿಗೆ ಇಂತಹ ಹಿಂಸಾಚಾರ ಮತ್ತು ಭಯೋತ್ಪಾದನೆಯ ರಾಜಕೀಯವನ್ನು ಸೇರಿಸಿ ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಕೇರಳದ ಉತ್ತರ ಭಾಗದಲ್ಲಿ ತನ್ನ ಹಿಂಬಾಲಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸುತ್ತ ಬಂದಿದೆ. ಇದು ತನ್ನ ಪ್ರಭಾವವನ್ನು ವಿಸ್ತರಿಸುವ ಅದÀರ ಮಾದರಿ ತಂತ್ರ. ಸ್ವಾತಂತ್ರ್ಯದ ನಂತರ ದೇಶದಲ್ಲಿ ನಡೆದ ಕೋಮುಗಲಭೆಗಳ ತನಿಖೆ ನಡೆಸಿರುವ ಪ್ರತಿಯೊಂದು ನ್ಯಾಯಾಂಗ ಆಯೋಗ ಕೂಡ ಹಿಂಸಾಚಾರ ಮತ್ತು ಭಯೋತ್ಪಾದನೆಯ ಮೂಲಕ ಕೋಮುಧ್ರುವೀಕರಣ ನಡೆಸುವ ಆರ್.ಎಸ್.ಎಸ್. ನ ಪಾತ್ರದ ಬಗ್ಗೆ ತೀಕ್ಷ್ಣವಾದ ತೀರ್ಪು ನೀಡಿದೆ ಎಂಬ ಸಂಗತಿಯತ್ತ ಈ ಸಂದರ್ಭದಲ್ಲಿ ಸಿಪಿಐ(ಎಂ) ಪೊಲಿಟ್‍ಬ್ಯುರೊ ಗಮನ ಸೆಳೆದಿದೆ.

ಪ್ರಸಕ್ತ ಎಲ್‍ಡಿಎಫ್ ಸರಕಾರದ ಈ ಅಲ್ಪಾವಧಿಯಲ್ಲೇ ಆರೆಸ್ಸೆಸ್ ನಡೆಸಿರುವ ಅಮಾನುಷ ಹಲ್ಲೆಗಳಲ್ಲಿ ಐವರು ಸಿಪಿಐ(ಎಂ) ಕಾರ್ಯಕರ್ತರ ಕೊಲೆಯಾಗಿದೆ, 300ಕ್ಕೂ ಹೆಚ್ಚು ಸದಸ್ಯರು ಗಾಯಗೊಂಡಿದ್ದಾರೆ. ಪಕ್ಷದ 35 ಕಚೇರಿಗಳು ಮತ್ತು ಮತ್ತು ಪಕ್ಷದ ಸದಸ್ಯರ 80 ಮನೆಗಳ ಮೇಲೆ ದಾಳಿ ನಡೆದಿದೆ, ಅವಕ್ಕೆ ನಷ್ಟ ಉಂಟುಮಾಡಲಾಗಿದೆ. ಈ ನಿರಂತರ ಮತ್ತು ಯೋಜಿತ ದಾಳಿಗಳ ಇಂತಹ ಪ್ರಮಾಣವೇ ಆರೆಸ್ಸೆಸ್ ನಡೆಸಿರುವ ಘಾತುಕತನವನ್ನು ಬಯಲಿಗೆಳೆಯುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

ಆರೆಸ್ಸೆಸ್/ಬಿಜೆಪಿ ಸುಳ್ಳುಗಳನ್ನು ಮತ್ತೆ-ಮತ್ತೆ ನೂರು ಬಾರಿ ಹೇಳಿ ಅದನ್ನು ಸತ್ಯವೆಂದು ನಂಬಿಸುವ ಹಿಟ್ಲರನ ಬಂಟ ಗೋಬೆಲ್ಸನ ತಂತ್ರಗಳನ್ನು ಸದಾ ಬಳಸಿಕೊಂಡು ಬಂದಿವೆ. ಕೇರಳದಲ್ಲಿ ಸಿಪಿಐ(ಎಂ) ಮೇಲೆ ವ್ಯಾಪಕ ಪ್ರಮಾಣದಲ್ಲಿ ಹಲ್ಲೆಗಳನ್ನು ನಡೆಸುತ್ತಲೇ ತಾವೇ ಹಿಂಸಾಚಾರಕ್ಕೆ ಬಲಿಯಾಗಿದ್ದೇವೆ ಎಂದು ಬಿಂಬಿಸುವ ಸುಳ್ಳುಗಾರಿಕೆ ಅವರದ್ದು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ವರ್ಣಿಸಿದೆ.

ಬಾಧಿತ ಪ್ರದೇಶಗಳಲ್ಲಿ ಶಾಂತಿ ಮತ್ತು ಸೌಹಾರ್ದವನ್ನು ಮತ್ತೆ ನೆಲೆಗೊಳಿಸುವ ಬಗ್ಗೆ ಮಾತಾಡೋಣ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಗಳು ಆರೆಸ್ಸೆಸ್‍ಗೆ ಕರೆ ನೀಡಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲು ಆರೆಸ್ಸೆಸ್ ನಿರಾಕರಿಸಿದೆ. ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಈ ಕುರಿತು ಸರ್ವಪಕ್ಷ ಸಭೆ ಕರೆಯುವುದಾಗಿ ಪ್ರಕಟಿಸಿದರು. ಇತ್ತೀಚಿನ ಮಾಹಿತಿಯ ಪ್ರಕಾರ ಕಣ್ಣೂರಿನ ಜಿಲ್ಲಾ ಕಲೆಕ್ಟರ್ ಕರೆದ ಸರ್ವಪಕ್ಷ ಸಭೆಯಲ್ಲಿ ಆರೆಸ್ಸೆಸ್ ಹಾಜರಾಗಿಲ್ಲ. ಆದ್ದರಿಂದ ಸಿಪಿಐ(ಎಂ) ವಿರುದ್ಧ ತನ್ನ ಹಿಂಸಾಚಾರವನ್ನು ಮುಂದುವರೆಸುವ ದೃಢನಿರ್ಧಾರವನ್ನು ಆರೆಸ್ಸೆಸ್ ಮಾಡಿದಂತಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಆರೆಸ್ಸೆಸ್‍ನ ಈ ಮೋಸವನ್ನು ಬಯಲಿಗೆಳೆಯಲಾಗುವುದು, ಕೇರಳ ಮತ್ತು ಭಾರತದ ಜನತೆ ಬಿಜೆಪಿಯ ಇಂತಹ ದುಷ್ಟ ರಾಜಕೀಯವನ್ನು ಸೋಲಿಸುವ ದೃಢನಿರ್ಧಾರ ಮಾಡಿದ್ದಾರೆ ಎಂದು ಎಚ್ಚರಿಸಿದೆ.

Leave a Reply

Your email address will not be published. Required fields are marked *