ಧರ್ಮ, ಜಾತಿಯ ಹೆಸರಲ್ಲಿ ಓಟು ಕೇಳುವುದು ಭ್ರಷ್ಟಆಚರಣೆ

ಸುಪ್ರಿಂಕೋರ್ಟ್‍ನ ಬಹುಮತದತೀರ್ಪು : ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸ್ವಾಗತ

ಚುನಾವಣಾ ಪ್ರಕ್ರಿಯೆ ಒಂದು ಜಾತ್ಯತೀತ ಚಟುವಟಿಕೆ, ಇಂತಹ ಚಟುವಟಿಕೆಯಲ್ಲಿ ಧರ್ಮಕ್ಕೆ ಸ್ಥಾನವಿರಲು ಸಾಧ್ಯವಿಲ್ಲ ಎಂದು ದೇಶದ ಸರ್ವೋಚ್ಚ ನ್ಯಾಯಾಲಯದ ಏಳು ನ್ಯಾಯಾಧೀಶರಿದ್ದ ಸಂವಿಧಾನ ಪೀಠ ಬಹುಮತದ ತೀರ್ಪು ನೀಡಿರುವುದನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸ್ವಾಗತಿಸಿದೆ. ಸಂವಿಧಾನ ಪೀಠ 4-3 ಬಹುಮತದಿಂದ ಈ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿಗಳಾದ ಠಾಕುರ್‍ ಅವರು ಇದರೊಡನೆ ಸಹಮತವಿರುವ ಒಂದು ಪ್ರತ್ಯೇಕ ತೀರ್ಪು ನೀಡಿದ್ದಾರೆ. ಅದು ಹೀಗದಿಂದೆ: “… ಪ್ರಭುತ್ವದ ಅಥವ ಅದರ ಚಟುವಟಿಕೆಯ ಜಾತ್ಯತೀತ ಚಾರಿತ್ರ್ಯದಿಂದ ಧರ್ಮದ ಅಥವ ಧಾರ್ಮಿಕ ಪರಿಗಣನೆಯನ್ನು ತೆಗೆಯುವಂತಹ ಒಂದು ವ್ಯಾಖ್ಯೆ ಇಂತಹ ಪರಿಗಣನೆಗಳು ಪ್ರವೇಶಿಸಲು, ತಟ್ಟಲು ಅಥವ ಪರಿಣಾಮ ಬೀರಲು ಅವಕಾಶ ನೀಡುವ ವ್ಯಾಖ್ಯೆಗಿಂತ ಅಪೇಕ್ಷಣೀಯವಾಗಬೇಕು.”

ಸುಪ್ರಿಂಕೋರ್ಟ್‍ನ ಈ ತೀರ್ಪು ಜನತಾ ಪ್ರಾತಿನಿಧ್ಯ ಕಾಯ್ದೆ, 1951ರ ಸೆಕ್ಷನ್ 123(3)ರ ವ್ಯಾಖ್ಯೆ ಕುರಿತಾದದ್ದು. ನ್ಯಾಯ ಪೀಠದ ಮುಂದಿದ್ದ ಪ್ರಶ್ನೆ ಧರ್ಮದ ಹೆಸರಿನಲ್ಲಿ ಮತ ಕೇಳುವುದು ಭ್ರಷ್ಟ ಆಚರಣೆ ಎಂದು ಪರಿಗಣಿಸಬೇಕೇ ಎಂಬುದು.  “ಸೆಕ್ಷನ್123(3)ಗೆ (1961ರ) ತಿದ್ದುಪಡಿಯ ನಂತರವೂ ಅದರ ಒಟ್ಟಂಶವೆಂದರೆ ಧರ್ಮ, ಜನಾಂಗ, ಜಾತಿ, ಸಮುದಾಯ ಅಥವ ಭಾಷೆಯ ಹೆಸರಿನಲ್ಲಿ ಮನವಿ, ಅದು ಅಭ್ಯರ್ಥಿಯ ಧರ್ಮ, ಜನಾಂಗ, ಜಾತಿ, ಸಮುದಾಯ ಅಥವ ಭಾಷೆಯ ಹೆಸರಿನಲ್ಲಿ ಇಲ್ಲದಿದ್ದಾಗಲೂ ನಿಷಿದ್ಧವಾಗಿದೆ. ಹೀಗೆ ವ್ಯಾಖ್ಯಿಸಿದಾಗ ಧರ್ಮ, ಜನಾಂಗ, ಜಾತಿ, ಸಮುದಾಯ ಅಥವ ಭಾಷೆ ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಪಾತ್ರ ವಹಿಸಲು ಬಿಡಲಾಗದು ಮತ್ತು ಈ ಯಾವುದೇ ಪರಿಗಣನೆಯಿಂದ ಮನವಿ ಮಾಡಿದರೆ, ಅದು ಒಂದು ಭ್ರಷ್ಟ ಆಚರಣೆಯಾಗುತ್ತದೆ” ಎಂದು ಮುಖ್ಯ ನ್ಯಾಯಾಧೀಶ ಠಾಕುರ್‍ ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ಆದರೆ, ಒಬ್ಬ ಅಭ್ಯರ್ಥಿಯ ಪರವಾಗಿ ಇವುಗಳಲ್ಲಿ ಯಾವುದೇ ಹೆಸರಿನಲ್ಲಿ ಮತದಾರರಿಗೆ ಮನವಿ ಮಾಡುವುದಕ್ಕೂ ಮತ್ತು ಒಂದು ಚುನಾವಣಾ ಪ್ರಕ್ರಿಯೆ ಚರ್ಚೆಯಲ್ಲಿ ಈ ಧರ್ಮ, ಜಾತಿ ಅಥವ ಭಾಷೆಯ ಅಂಶಗಳ ಮೇಲೆ ಅನ್ಯಾಯಗಳ ಮತ್ತು ಪಕ್ಷಪಾತಗಳ ಪ್ರಶ್ನೆ ಎತ್ತುವುದಕ್ಕೂ ನಡುವೆ ವ್ಯತ್ಯಾಸದ ಒಂದು ಬಹಳ ತೆಳ್ಳಗಿನ ಗೆರೆ ಇದೆ ಎಂಬ ಸಂಗತಿಯತ್ತ ಸಿಪಿಐ(ಎಂ) ಗಮನ ಸೆಳೆದಿದೆ.

ಭಿನ್ನ ಮತದ ತೀರ್ಪು ನೀಡಿದ ನ್ಯಾಯಾಧೀಶರುಗಳು ಭಾರತೀಯ ಪ್ರಭುತ್ವದ ಸ್ವರೂಪ ಜಾತ್ಯತೀತವಾಗಿದ್ದರೂ, ಸಂವಿಧಾನ ಧರ್ಮ, ಜಾತಿ ಅಥವ ಭಾಷೆಗಳ ಪ್ರಶ್ನೆಗಳ ಬಗ್ಗೆ ಉಪೇಕ್ಷೆಯನ್ನೇನೂ ಹೊಂದಿಲ್ಲ ಎಂದು ಹೇಳುತ್ತಾರೆ. “ಸಂವಿಧಾನ ಬಹಳಷ್ಟು ಜನ ವಿಭಾಗಗಳ ಮೇಲೆ ಧರ್ಮ, ಜಾತಿ ಮತ್ತು ಭಾಷೆಯ ಆಧಾರದಲ್ಲಿ ಮಾಡಿರುವ ಪಕ್ಷಪಾತ ಮತ್ತು ಹೇರಿರುವ ವಂಚನೆಯ ಇತಿಹಾಸದ ಪರಿವೆಯಿಲ್ಲವೆಂದಲ್ಲ. ಧರ್ಮ, ಜಾತಿ ಮತ್ತು ಭಾಷೆ ಪರಿವರ್ತಿಸಲಾಗದ ಲಕ್ಷಣಗಳ ಆಧಾರದಲ್ಲಿ ನಮ್ಮ ಸಮಾಜದ ಬಹಳಷ್ಟು ವಿಭಾಗಗಳ ಮೇಲೆ ಹೇರಿರುವ ಪಕ್ಷಪಾತದ ಸಂಕೇತವಾಗಿರುವಂತೆ, ಶತಮಾನಗಳ ಅನ್ಯಾಯಗಳಿಗೆ ಉತ್ತರಿಸುವ ಒಂದು ಸಾಮಾಜಿಕ ಅಣಿನೆರಿಕೆಯ ಸಂಕೇತವೂ ಆಗಿದೆ. ಅವು ಒಂದು ನ್ಯಾಯಯುತ ಸಾಮಾಜಿಕ ವ್ಯವಸ್ಥೆಯನ್ನು ಉತ್ಪತ್ತಿಸುವ ಸಂವಿಧಾನದ ಕೇಂದ್ರ ವಿಷಯದ ಭಾಗಗಳಾಗಿವೆ” ಎಂದು ಭಿನ್ನಮತದ ತೀರ್ಪಿನಲ್ಲಿ ಹೇಳಲಾಗಿದೆ.

ಚುನಾವಣಾ ಪ್ರಯೋಜನಕ್ಕಾಗಿ ಅಥವ ವಿರೋಧಿ ಅಭ್ಯರ್ಥಿಯ ಸೋಲಿಗಾಗಿ ಈ ಯಾವುದೇ ಅಂಶಗಳನ್ನು ಬಳಸಿಕೊಳ್ಳುವುದು ಮತ್ತು ಸಾಮಾಜಿಕ ಪಕ್ಷಪಾತ ಮತ್ತು ಸಾಮಾಜಿಕ ಅನ್ಯಾಯಗಳ ಪ್ರಶ್ನೆಗಳನ್ನು ಎತ್ತುವುದಕ್ಕೂ ನಡುವೆ ಇರುವ ವ್ಯತ್ಯಾಸವನ್ನು ಸ್ಪಷ್ಟಪಡಿಸಬೇಕಾದ ಅಗತ್ಯವಿದೆ ಎಂದು ಈ ಹಿನ್ನೆಲೆಯಲ್ಲಿ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಅಭಿಪ್ರಾಯ ಪಟ್ಟಿದೆ. ಸಾಮಾಜಿಕ ನ್ಯಾಯ ಪಡೆಯುವುದಕ್ಕಾಗಿ ಪಕ್ಷಪಾತ ಮತ್ತು ಅನ್ಯಾಯಗಳ ಪ್ರಶ್ನೆಗಳನ್ನು ಎತ್ತುವುದು ಯಾವುದೇ ಚುನಾವಣಾ ಸಂವಾದದ ಅನಿವಾರ್ಯ ಅಂಶವಾಗಿರಬೇಕಾಗುತ್ತದೆ, ಸಂವಿಧಾನದ ಮತ್ತು ಚುನಾವಣಾ ಪ್ರಕ್ರಿಯೆಯ ಜಾತ್ಯತೀತ ಪ್ರಜಾಸತ್ತಾತ್ಮಕ ಬುನಾದಿಯನ್ನುಗಟ್ಟಿ ಮಾಡಲು ಈ ಸ್ಪಷ್ಟತೆ ಅಗತ್ಯ ಎಂದು ಅದು ಹೇಳಿದೆ.

Leave a Reply

Your email address will not be published. Required fields are marked *