ಕಾವೇರಿ ನೀರು ಬಿಡುಗಡೆಯ ತೀರ್ಪು ಅವಾಸ್ತವಿಕ

ನೆನ್ನೆ ಭಾರತದ ಸರ್ವೋಚ್ಛ ನ್ಯಾಯಾಲಯ ಕಾವೇರಿ ನೀರಿನ ವಿಷಯವಾಗಿ 2,000 ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಬಿಡುವುದನ್ನು ಮುಂದುವರೆಸಬೇಕೆಂದು ಅಜ್ಞೆ ಮಾಡಿದೆ. ಆದರೆ, ಜನವರಿ ತಿಂಗಳಲ್ಲಿ ಯಾವುದೇ ಮಳೆಯ ನಿರೀಕ್ಷೆ ಮತ್ತು ನೀರಿನ ಹೊಸ ಶೇಖರಣೆಯ ನಿರೀಕ್ಷೆ ಇಲ್ಲದಿರುವಾಗ ಕೂಡಾ ನೀರಿನ ಬಿಡುಗಡೆಯನ್ನು ಮುಂದುವರೆಸಬೇಕೆಂದು ನೀಡಿರುವ ನಿರ್ದೇಶನ ಅವಾಸ್ತವಿPವಾಗಿದೆ., ಕರ್ನಾಟಕ ಸತತ 3 ವರ್ಷಗಳ ನಿರಂತರ ಬರಗಾಲವನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ನೀರಾವರಿ ಸ್ಥಗಿತವಾಗಿದೆ ಮತ್ತು ಕುಡಿಯುವ ನೀರಿಗೂ ತತ್ವಾರವಾಗಿದೆ. ಇದನ್ನು ಸುಪ್ರೀಂ ಕೋರ್ಟ್ ಪರಿಗಣಿಸದಿರುವುದು ವಿಷಾದಕರವೆಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ. ಇಂತಹ ಅಡಳಿತಾತ್ಮಕ ವಿಷಯಗಳ ನಿರ್ವಹಣೆಯನ್ನು ಕಾರ್ಯಾಂಗಕ್ಕೆ ಬಿಡದೆ ನ್ಯಾಯಾಂಗವೇ ನಿರಂತರವಾಗಿ ಮಧ್ಯಪ್ರವೇಶ ಮಾಡುತ್ತಿರುವುದು ಇಂತಹ ನಿರ್ದೇಶನಗಳಿಗೆ ಕಾರಣವಾಗಿದೆ ಎಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ.

ಅಂಗನವಾಡಿ ಕಾರ್ಯಕರ್ತೆಯ ಮೇಲೆ ಗ್ಯಾಂಗ್ ರೇಪ್ ಬಗ್ಗೆ :

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸುಂಕನಾಳ ಗ್ರಾಮದ ಉಜಿನಿಯ ಅಂಗನವಾಡಿ ಶಿಕ್ಷಕಿಯ ಮೇಲೆ ಗ್ಯಾಂಗ್ ರೇಪ್ ಪ್ರಕರಣ ನಡೆದಿರುವುದು ಅತ್ಯಂತ ಅಮಾನವೀಯ ಎಂದು ಸಿಪಿಐ(ಎಂ) ಖಂಡಿಸಿದೆ. ಈ ಕೃತ್ಯವನ್ನು ಎಸಗಿದÀ 10 ಜನರನ್ನು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಿ, ಕರ್ತವ್ಯಲೋಪ ಎಸಗಿದ ತನಿಖಾ ಅಧಿಕಾರಿ ಎಸ್.ಪಿ ಮಲ್ಲಮ್ಮ ಚೌಬೆಯನ್ನು ಅಮಾನತ್ತು ಮಾಡಬೇಕು ಎಂದು ಸಿಪಿಐ(ಎಂ) ಆಗ್ರಹಿಸುತ್ತದೆ. ನೊಂದ ದುಡಿಯುವ ಮಹಿಳೆಯಗೆ ರಕ್ಷಣೆ-ಭದ್ರತೆ ಮತ್ತು ಪರಿಹಾರ ನೀಡಿ ಹಾಗೂ ಐಸಿಡಿಎಸ್ ಯೋಜನೆಯದಲ್ಲದ ಯಾವುದೇ ಕೆಲಸಕ್ಕೆ ಇಲಾಖೆಯವರು ಅಂಗನವಾಡಿ ನೌಕರರನ್ನು ಬಳಸದಂತೆ ರಾಜ್ಯ ಸರ್ಕಾರ ತಕ್ಷಣವೇ ಕ್ರಮವಹಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

ಕಮ್ಮನಹಳ್ಳಿಯಲ್ಲಿ ಯುವತಿಯ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ :

ಡಿಸೆಂಬರ್ 31 ಮತ್ತು ಜನವರಿ 01ರ ನಡುವಿನ ರಾತ್ರಿ ಬೆಂಗಳೂರು ನಗರಕ್ಕೆ ಸೇರಿದ ಕಮ್ಮನಹಳ್ಳಿಯ ಬಳಿ ಯುವತಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಸಿಪಿಐ(ಎಂ) ಖಂಡಿಸುತ್ತದೆ. ಅಂದು ಮಹಾತ್ಮಗಾಂಧಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನಡೆಸಿದ ಪ್ರಕರಣಗಳು ವರದಿಯಾಗಿದೆ. ಈ ಎಲ್ಲಾ ಘಟನೆಗಳಿಗೆ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಸೂಕ್ತ ಮುನ್ನೆಚ್ಚರಿಕೆಯನ್ನು ವಹಿಸದಿರುವುದೇ ಮುಖ್ಯ ಕಾರಣವೆಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ. ಆದರೆ ಗೃಹ ಮಂತ್ರಿಗಳು ಇಂತಹ ಘಟನೆಗಳ ಹೊಣೆಯನ್ನು ಯುವತಿಯರ ಉಡುಪಿನ ಮೇಲೆ ವಹಿಸಿರುವುದು ಖಂಡನೀಯ.
ಇಂತಹ ಘಟನೆಗಳು ಮರುಕಳಿಸದಂತೆ ಡಿಸೆಂಬರ್ ತಿಂಗಳಲ್ಲಿ ಸಾರ್ವಜನಿಕ ಶಿಕ್ಷಣ ನೀಡಲು ಪೌರಾಢಳಿತ ಸಂಸ್ಥೆಗಳು ಜನಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರ ಕ್ರಮ ವಹಿಸಬೇಕಂದು ಮತ್ತು ಪೊಲೀಸ್ ಇಲಾಖೆ ದೃಢವಾದ ಎಚ್ಚರಿಕೆಗಳನ್ನು ನೀಡಬೇಕೆಂದು ಸಿಪಿಐ(ಎಂ) ಅಭಿಪ್ರಾಯಪಟ್ಟಿದೆ. ಈ ಕಾರ್ಯದಲ್ಲಿ ಮಹಿಳೆಯರ ಸಂಘಟನೆಗಳು ಮತ್ತು ಇತರ ನಾಗರೀಕ ಸಮಾಜದ ಸಂಘಟನೆಗಳನ್ನು ಒಳಗೊಂಡು ವ್ಯಾಪಕ ಜನಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಒತ್ತಾಯಿಸುತ್ತದೆ.

ಜನವರಿ 05, 2017ರಂದು ಬಿಡುಗಡೆ ಮಾಡಲಾದ ಪತ್ರಿಕಾ ಹೇಳಿಕೆ

ವಿ.ಜೆ.ಕೆ ನಾಯರ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು
ಜಿ.ಎನ್. ನಾಗರಾಜ್, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು

 

 

Leave a Reply

Your email address will not be published. Required fields are marked *