ಕೇಂದ್ರ ಬಜೆಟ್ 2017-18: ಜನಗಳ ಮೇಲೆ ಮತ್ತಷ್ಟು ಹೊರೆಗಳು

ಭಾರತದ ಸಾಮಾನ್ಯ ಜನಗಳು ನೋಟುರದ್ಧತಿಯ ವಿನಾಶಕಾರಿ ದುಷ್ಪರಿಣಾಮಗಳ ಅಡಿಯಲ್ಲಿ ನರಳುತ್ತಿರುವಾಗ ಹಣಕಾಸು ಮಂತ್ರಿಗಳು ದುಡಿಯುವ ಜನತೆಯ ಸಂಕಟಗಳನ್ನು ವಿಪರೀತವಾಗಿ ಹೆಚ್ಚಿಸುವ ಬಜೆಟನ್ನು ಹಣಕಾಸು ಮಂತ್ರಿಗಳು ಮುಂದಿಟ್ಟಿದ್ದಾರೆ, ಇದೊಂದು ಸಂಕೋಚನಕಾರಿ ಬಜೆಟ್ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ. ಅಂದರೆ ದೇಶದ ಆರ್ಥಿಕವನ್ನು ವಿಸ್ತರಿಸುವ ಬದಲು ಸಂಕುಚಿತಗೊಳಿಸುತ್ತದೆ, ಉದ್ಯೋಗಗಳು ನಿರ್ಮಾಣಗೊಳ್ಳುವ ಮೊದಲು ಕುಂಠಿತಗೊಳ್ಳುತ್ತವೆ.

ಜನವರಿ 31ರಂದು ಮಂಡಿಸಿದ ಆರ್ಥಿಕ ಸರ್ವೇಕ್ಷಣೆ ಆರ್ಥಿಕ ಬೆಳವಣಿಗೆಯ ವೇಗ ಇಳಿಯುತ್ತಿದೆ, ಸರಕು ಮತ್ತು ಸೇವೆಗಳ ಬೇಡಿಕೆಯಲ್ಲಿ ತೀಕ್ಷ್ಣವಾದ ಇಳಿಕೆಯಾಗಿದೆ, ಬೃಹತ್ ಪ್ರಮಾಣದಲ್ಲಿ ಉದ್ಯೋಗನಷ್ಟವಾಗುತ್ತಿದೆ, ಕೃಷಿ ಆದಾಯಗಳು ಇಳಿಮುಖಗೊಂಡಿವೆ ಮತ್ತು ನಗದು ಹೆಚ್ಚಾಗಿ ಬೇಕಾಗುವ ವಲಯಗಳಲ್ಲಿ ಸಾಮಾಜಿಕ ಭಂಗ ಬಂದಿದೆ. ನೋಟುರದ್ಧತಿಯಿಂದಾಗಿ ಕೈಗಾರಿಕಾ ಸಾಮಥ್ರ್ಯದ ಬಹುಪಾಲನ್ನು ಬಳಸಲಾಗದಂತಹ ಸನ್ನಿವೇಶ ಉಂಟಾಗಿದೆ. ವಾಹನ, ಸಿಮೆಂಟ್, ಉಕ್ಕು, ಕಾಗದ, ಅಲ್ಯುಮಿನಿಯಂ ಮತ್ತು ರಸಗೊಬ್ಬರ ಮುಂತಾದ ಪ್ರಮುಖ ಉದ್ದಿಮೆಗಳ ಮೇಲೇ ಭಾರೀ ಹೊಡೆತ ಬಿದ್ದಿದೆ, ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಉಂಟಾಗಿದೆ. ಇಂತಹ ಒಂದು ಸನ್ನಿವೇಶದಲ್ಲಿ 4 ಕೋಟಿ ಟನ್ ಸಾರ್ವಜನಿಕ ಆಹಾರ ದಾಸ್ತಾನು ಇದ್ದರೂ, ಚಾಲ್ತಿ ಖಾತೆ ಕೊರತೆಯ ಮತ್ತು ವಿದೇಶಿ ವಿನಿಮಯದ ಪರಿಸ್ಥಿತಿ ಸಮಾಧಾನಕರವಾಗಿದ್ದರೂ ಸರಕಾರ ಸಂಕೋಚನಕಾರಿ ಹಣಕಾಸು ಧೋರಣೆಗಳನ್ನು ಅನುಸರಿಸುತ್ತಿರುವುದು ಒಂದು ವಿಡಂಬನೆ ಎಂದು ಸಿಪಿಐ(ಎಂ) ಖೇದ ವ್ಯಕ್ತ ಪಡಿಸಿದೆ.

ಬಜೆಟ್‍ನ ಒಟ್ಟು ಪ್ರಮಾಣ ಕಳೆದ ವರ್ಷ ಪರಿಷ್ಕøತ ಅಂದಾಜಿನ ಪ್ರಕಾರ ಜಿಡಿಪಿಯ 13.4 ಶೇ. ಇತ್ತು. ಈ ವರ್ಷ ಅದು 12.7ಶೇ.ಕ್ಕೆ ಇಳಿದಿದೆ. ಹಣಕಾಸು ಕೊರತೆಯ ಬಜೆಟ್ ಗುರಿಯನ್ನು ಸಾಧಿಸಲಿಕ್ಕಾಗಿ ಖರ್ಚುಗಳನ್ನು ಕಡಿಮೆ ಮಾಡಲಾಗಿದೆ. 2016-17ರ ಪರಿಷ್ಕøತ ಅಂದಾಜಿನಲ್ಲಿ ಒಟ್ಟು ರೆವಿನ್ಯೂ ಆದಾಯ ಜಿಡಿಪಿಯ 9.4ಶೇ. ಇದ್ದರೆ, 2017-18ರ ಬಜೆಟ್ ಅಂದಾಜಿನಲ್ಲಿ ಅದನ್ನು 9ಶೇ.ಕ್ಕೆ ಇಳಿಸಲಾಗಿದೆ. ಬಜೆಟಿನ ಕ್ರಮಗಳಿಂದಾಗಿ ಬಿಟ್ಟುಕೊಟ್ಟ ತೆರಿಗೆಗಳ ಪ್ರಮಾಣ 30 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಿದೆ, ಅದೀಗ ಜಿಡಿಪಿಯ 2.1ಶೇ. ಆಗಿದೆ ಎಂದು ಬಜೆಟಿಗೆ ಜನ-ವಿರೋಧಿ ಸ್ವರೂಪ ನೀಡಿರುವ ಅಂಶಗಳನ್ನು ಪರಿಶೀಲಿಸುತ್ತ ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ಈ ಬಜೆಟ್ ಮೂಲಕ ದುಡಿಯುವ ಜನಗಳ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಏಕೆಂದರೆ ಬಜೆಟಿನಲ್ಲಿ ಸಣ್ಣ ಪ್ರಮಾಣದ ಆದಾಯ ತೆರಿಗೆದಾರರಿಗೆ ನೀಡಿರುವ 20ಸಾವಿರ ಕೋಟಿ ರೂ. ಪರಿಹಾರಕ್ಕಿಂತ ಎಷ್ಟೋ ಹೆಚ್ಚು ಅಂದರೆ 75 ಸಾವಿರ ಕೋಟಿ ರೂ.ಗಳ ಹೆಚ್ಚಿನ ಆದಾಯವನ್ನು ಜನಗಳ ಮೇಲೆ ಹಾಕಿರುವ ಪರೋಕ್ಷ ತೆರಿಗೆಗಳಿಂದ ಸರಕಾರ ಈ ಬಜೆಟ್ ಮೂಲಕ ನಿರೀಕ್ಷಿಸುತ್ತಿದೆ. ಮತ್ತೊಮ್ಮೆ ಈ ವರ್ಷವೂ ಹೆಚ್ಚಿನ ಆದಾಯ ಸಂಗ್ರಹಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚಿನ ಅಬಕಾರಿ ಸುಂಕವನ್ನೇ ಅವಲಂಬಿಸಿದೆ.

ನೇರ ತೆರಿಗೆಗಳ ಸಂಗ್ರಹದಲ್ಲಿ 1.3 ಲಕ್ಷ ಕೋಟಿ ರೂ. ಹೆಚ್ಚಳವಾಗುತ್ತದೆ ಎಂದು ಸರಕಾರ ನೆಚ್ಚಿಕೊಂಡಿದೆ. ಆದರೆ ಇದು ವಾಸ್ತವದಲ್ಲಿ ಈಡೇರಲಿಕ್ಕಿಲ್ಲ. ಏಕೆಂದರೆ ಉನ್ನತ ಮಟ್ಟದ ಆರ್ಥಿಕ ಬೆಳವಣಿಗೆ ಆಗುತ್ತದೆ ಎಂಬ ಸರಕಾರದ ನಿರೀಕ್ಷೆ ಜಿಎಸ್‍ಟಿಯಿಂದ ತೆರಿಗೆ ಸಂಗ್ರಹದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಅನಿಶ್ಚಿತತೆ ಇದೆ ಎಂಬುದನ್ನು ಉಪೇಕ್ಷಿಸಿದೆ ಮತ್ತು ನೋಟು ರದ್ಧತಿ ಹೆಚ್ಚಿನ ಮಟ್ಟದಲ್ಲಿ ತೆರಿಗೆ ಪಾವತಿಗೆ ಮ್ಯಾಜಿಕ್ ಗುಳಿಗೆಯಂತೆ ಕೆಲಸ ಮಾಡುತ್ತದೆ ಎಂದು ಭಾವಿಸಿದೆ. ಆದ್ದರಿಂದ ಈ ನಿರೀಕ್ಷೆ ಅವಾಸ್ತವ ಎಂದೂ ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.

ಈ ಬಜೆಟ್‍ನಲ್ಲಿ ಮೂಲರಚನೆಯ ನಿರೂಪಣೆಯಲ್ಲಿ ‘ಕೈಗೆಟಕುವ ವಸತಿ’ಯನ್ನು ಹಣಕಾಸು ಮಂತ್ರಿಗಳು ಸೇರಿಸಿದ್ದಾರೆ. ಇದೊಂದು ಒಳ್ಳೆಯ ಅಂಶ ಎಂದು ಹೇಳಲಾಗುತ್ತಿದೆ. ಅದರೆ ಹಣಕಾಸು ಮಂತ್ರಿಗಳು ಆರ್ಥಿಕ ಹಿಂಜರಿತದ ಪರಿಸ್ಥಿತಿಯನ್ನು ನಿಭಾಯಿಸಲು ಒಂದು ವಸತಿ ಗುಳ್ಳೆ(ಹೌಸಿಂಗ್ ಬಬ್ಲ್)ಯನ್ನು ಈ ಮೂಲಕ ಸೃಷ್ಟಿಸುತ್ತಿರುವಂತೆ ಕಾಣುತ್ತಿದೆ ಎಂದೂ ಸಿಪಿಐ(ಎಂ) ಹೇಳಿದೆ. ಈ ರೀತಿ ಮೂಲರಚನೆಯಲ್ಲಿ ಇದನ್ನು ಸೇರಿಸುವ ಮೂಲಕ ಬಿಲ್ಡರುಗಳಿಗೆ ಅಗ್ಗದಲ್ಲಿ ಭೂಮಿ ಮತ್ತು ಸಾಲ ಒದಗಿಸಲು ಭೂಸ್ವಾಧೀನದ ಕಠಿಣ ಅಂಶಗಳಿಂದ ವಿನಾಯ್ತಿ, ಸಬ್ಸಿಡಿ ಬಡ್ಡಿದರಗಳಲ್ಲಿ ಆದ್ಯತೆ ವಲಯದ ಸಾಲಗಳನ್ನು ಒದಗಿಸ ಲಾಗುವುದಂತೆ, ಅಲ್ಲದೆ ದೊಡ್ಡ ಮನೆಗಳನ್ನು ಕಟ್ಟುವುದನ್ನೂ ‘ಕೈಗೆಟಕುವ ವಸತಿ’ಯಲ್ಲಿ ಸೇರಿಸಲಾಗುವುದಂತೆ. ಇವೆಲ್ಲ ಒಂದು ‘ವಸತಿ ಗುಳ್ಳೆ’ ಸೃಷ್ಟಿಸುವ ದಿಕ್ಕಿನಲ್ಲಿ ಇರುವ ಕ್ರಮಗಳು ಎಂದು ಪೊಲಿಟ್‍ಬ್ಯುರೊ ವಿಶ್ಲೇಷಿಸಿದೆ.

ಬಂಡವಾಳ ಗಳಿಕೆ(ಕ್ಯಾಪಿಟಲ್ ಗೇನ್)ಯ ಮೇಲಿನ ತೆರಿಗೆಯಲ್ಲಿ ಮೂಲವರ್ಷವನ್ನು 2001ಕ್ಕೆ ತಂದು  ಹೊಣೆಯನ್ನು ತಗ್ಗಿಸಿರುವುದು ರಿಯಲ್ ಎಸ್ಟೇಟ್ ಜೂಜುಕೋರರಿಗೆ ಮತ್ತು ಬಿಲ್ಡರುಗಳಿಗೆ ಲಾಭದ ಸುರಿಮಳೆಯಾಗಲಿದೆ.

50 ಕೋಟಿ ರೂ. ವರೆಗೆ ವಾರ್ಷಿಕ ವಹಿವಾಟು ಇರುವ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಆದಾಯ ತೆರಿಗೆಯನ್ನು ಇಳಿಸುವ ಪ್ರಸ್ತಾವ ಕಾರ್ಪೊರೇಟ್ ವಲಯಕ್ಕೆ ಕಾರ್ಪೊರೇಟ್ ತೆರಿಗೆಯಿಂದ ತಪ್ಪಿಸಿಕೊಳ್ಳುವ ಹೊಸದೊಂದು ದಾರಿಯನ್ನು ತೆರೆದು ಕೊಟ್ಟಿದೆ. ಏಕೆಂದರೆ ಅವುಗಳಲ್ಲಿ ಬಹಳಷ್ಟು ಉದ್ದಿಮೆಗಳು ದೊಡ್ಡ ಕಾರ್ಪೊರೇಟ್‍ಗಳೊಂದಿಗೆ ಸಂಬಂಧ ಇರುವಂತವು ಎಂಬುದನ್ನು ಸರಕಾರ ಉಪೇಕ್ಷಿಸಿದೆ.

ನೋಟುರದ್ಧತಿ ಬ್ಯಾಂಕುಗಳಿಗೆ ಹೆಚ್ಚು ಸಾಲ ನೀಡಲು ಹಣ ಒದಗಿಸಿದೆ ಎಂದು ಹಣಕಾಸು ಮಂತ್ರಿಗಳು ತಮ್ಮ ಬಜೆಟ್ ಭಾಷಣದಲ್ಲಿ ಮತ್ತೆ-ಮತ್ತೆ ಹೇಳಿದ್ದಾರೆ. ಆದರೆ ದುಡಿಯುವ ಜನರಿಂದ ಬಲವಂತವಾಗಿ ಮಾಡಿಸಿರುವ ಉಳಿತಾಯದ ಅಲ್ಪಾವಧಿ ಠೇವಣಿಗಳನ್ನು ಬ್ಯಾಂಕುಗಳು ಸಾಲ ನೀಡಲು ಉಪಯೋಗಿಸಲಾರವು, ಏಕೆಂದರೆ ನಗದು ಹಣವÀನ್ನು ಪಡೆಯುವುದರ ಮೇಲೆ ಹಾಕಿರುವ ಮಿತಿಗಳನ್ನು ತೆಗೆದ ಕೂಡಲೇ ಬಡ ಠೇವಣಿದಾರರು ತಮ್ಮ ಠೇವಣಿಗಳ ಬಹುಭಾಗವನ್ನು ತಮ್ಮ ಬಳಕೆಗಾಗಿ ತೆಗೆಯುತ್ತಾರೆ ಎಂಬ ಸರಳ ಸಂಗತಿಯತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ ಗಮನ ಸೆಳೆದಿದೆ

ಈ ಬಜೆಟಿನ ಒಟ್ಟು ಮೊತ್ತದ 1.48ಶೇ.ವನ್ನು ಮಾತ್ರವೇ ಪರಿಶಿಷ್ಟ ಬುಡಕಟ್ಟುಗಳ ಕಲ್ಯಾಣಕ್ಕೆ ಮತ್ತು 2.44ಶೇ.ವನ್ನು ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ಕೊಡಲಾಗಿದೆ. ಇದು ದೇಶದ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಬುಡಕಟ್ಟುಗಳು ಮತ್ತು ಪರಿಶಿಷ್ಟ ಜಾತಿಗಳ ಜನಸಂಖ್ಯೆಯ ಪ್ರಮಾಣಕ್ಕಿಂತ ಬಹಳ ಕಡಿಮೆ ಮಟ್ಟದಲ್ಲಿದೆ. ಅದೇ ರೀತಿ ಲಿಂಗ ಬಜೆಟ್ ಎಂದು ವರ್ಗೀಕರಿಸಿದ ಬಾಬ್ತಿಗೆ ನೀಡಿರುವ ಹಣ ಒಟ್ಟು ಬಜೆಟ್ ಹಣದ 5.3ಶೇ. ಮಾತ್ರ.

ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸರಕಾರದ ಅತಿ ದೊಡ್ಡ ಬಡತನ ನಿವಾರಣೆಯ ಕಾರ್ಯಕ್ರಮ. ಇದಕ್ಕೆ ಇದುವರೆಗಿನ ಅತಿ ಹೆಚ್ಚು ಹಣವನ್ನು ಕೊಟ್ಟಿದ್ದೇವೆ ಎಂದು ಹಣಕಾಸು ಮಂತ್ರಿಗಳು ದೊಡ್ಡದಾಗಿ ಹೇಳಿಕೊಂಡಿದ್ದಾರೆ. ಆದರೆ ಬಜೆಟ್ ದಸ್ತಾವೇಜುಗಳನ್ನು ಪರಿಶೀಲಿಸಿದರೆ ಕಳೆದ ವರ್ಷಕ್ಕಿಂತ ಹೆಚ್ಚೇನೂ ಹಣ ಕೊಟ್ಟಿಲ್ಲ ಎಂಬುದು ಕಾಣ ಬರುತ್ತದೆ ಎಂದಿರುವ ಸಿಪಿಐ(ಎಂ) ಕಳೆದ ವರ್ಷ ಈ ಕಾರ್ಯಕ್ರಮಕ್ಕೆ 47.4 ಕೋಟಿ ಖರ್ಚು ಮಾಡಲಾಗಿದೆ ಎಂದು ಅಂದಾಜು ಮಾಡಲಾಗಿದೆ,  ಈ ಬಾರಿ, ಮಂದಗತಿಯ ಆರ್ಥಿಕದ  ಕಠಿಣ ಪರಿಸ್ತಿತಿಯಿದ್ದರೂ  ಕೊಟ್ಟಿರುವುದು ತುಸುವೇ ಹೆಚ್ಚು, ಅಂದರೆ 48ಸಾವಿರ ಕೋಟಿ ರೂ. ಮಾತ್ರ ಎಂಬ ಸಂಗತಿಯತ್ತ ಗಮನ ಸೆಳೆದಿದೆ.

ಸಾಮಾಜಿಕ ವಲಯಕ್ಕೂ ತುಸುವೇ ಹೆಚ್ಚು ಹಣ ಕೊಟ್ಟಿದ್ದು, ಹಣದುಬ್ಬರವನ್ನು ಪರಿಗಣಿಸಿದಾಗ 7ನೇ ವೇತನ ಆಯೋಗದ ಶಿಫಾರಸಿನ ಜಾರಿಯಿಂದ ಆಗಿರುವ ಸಂಬಳದ ಖರ್ಚಿನಲ್ಲಿ ಆಗಿರುವ ಹೆಚ್ಚಳಕ್ಕಷ್ಟೇ ಸಾಕಾಗುವಂತದ್ದು. ಆರೋಗ್ಯದ ಬಾಬ್ತಿಗೆ ಕೊಟ್ಟಿರುವ ಹಣದ ಪ್ರಮಾಣದಲ್ಲಿ ತುಸು ಹೆಚ್ಚಳವಾದರೂ, ಶಾಲಾಶಿಕ್ಷಣ ಮತ್ತು ಸಾಕ್ಷರತೆಗೆ ಕೊಟ್ಟಿರುವ ಹಣದ ಪಾಲು ವಾಸ್ತವವಾಗಿ ಕಡಿಮೆಯಾಗಿದೆ. 2016-17ರ ಪರಿಷ್ಕøತ ಬಜೆಟಿನಲ್ಲಿ 2.2ಶೇ. ಇದ್ದದ್ದು 2017-18ರ ಈ ಬಜೆಟಿನಲ್ಲಿ 2.16ಶೇ.ಕ್ಕೆ ಇಳಿದಿದೆ.

ಹಣಕಾಸು ಮಂತ್ರಿಗಳು ತಮ್ಮ ಭಾಷಣದಲ್ಲಿ ರೈತರ ಆದಾಯಗಳನ್ನು ಇಮ್ಮಡಿಗೊಳಿಸುವುದಾಗಿ ಮತ್ತೆ-ಮತ್ತೆ ಹೇಳಿದರು. ಆದರೆ ಕೃಷಿಗೆ ಕೊಟ್ಟಿರುವ ಹಣದಲ್ಲಿ ಇದೇನೂ ಕಾಣಿಸಿಲ್ಲ. ಅದರಲ್ಲೇನೂ ಹೆಚ್ಚಳ ಮಾಡಿಲ್ಲ ಎಂಬ ಸಂಗತಿಯತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ ಬೊಟ್ಟು ಮಾಡಿದೆ.  ವಾಸ್ತವವಾಗಿ ಅದರ ಪ್ರಮಾಣ ಕಡಿಮೆಯಾಗಿದೆ. 2016-17ರ ಪರಿಷ್ಕøತ ಅಂದಾಜಿನ ಪ್ರಕಾರ ಅದು ಒಟ್ಟು ಖರ್ಚಿನ 1.98ಶೇ. ಇತ್ತು. 2017-18ರ ಬಜೆಟಿನಲ್ಲಿ ಅದು 1.95ಶೇ. ಕ್ಕೆ ಇಳಿದಿದೆ. ಸರಕಾರ ಬಹಳಷ್ಟು ಹೇಳಿಕೊಳ್ಳುವ ಪ್ರಮುಖ ಕಾರ್ಯಕ್ರಮಗಳಿಗೂ ಹೆಚ್ಚಿನ ಹಣವನ್ನೇನೂ ಕೊಟ್ಟಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಯನ್ನಷ್ಟೇ ಅವಲಂಬಿಸಿ ರೈತರ ಆದಾಯಗಳನ್ನು ದ್ವಿಗುಣಗೊಳಿಸಬಹುದು ಎಂದು ಅದು ಭಾವಿಸಿದಂತಿದೆ.

ಮೂಲರಚನೆಯ ಮೇಲೆ ಗಮನ ಕೇಂದ್ರೀಕರಿಸಿ ರುವುದಾಗಿ ಹಣಕಾಸು ಮಂತ್ರಿಗಳು ಹೇಳಿದರೂ ಸರಕಾರದ ಬಂಡವಾಳ ಖರ್ಚಿನ ಪ್ರಮಾಣ ಇಳಿದಿದೆ. 2016-17ರ ಪರಿಷ್ಕøತ ಅಂದಾಜಿನಲ್ಲಿ ಅದು ಜಿಡಿಪಿಯ 1.86ಶೇ. ಇತ್ತು. 2017-18ರ ಬಜೆಟಿನಲ್ಲಿ ಅದು 1.84ಶೇ.ಕ್ಕೆ ಇಳಿದಿದೆ.

ಹಣಕಾಸು ಮಂತ್ರಿಗಳು ರಾಜಕೀಯ ಹಣ ಸಂಗ್ರಹದ ಬಗ್ಗೆ ಬಹಳಷ್ಟು ಪ್ರಕಟಣೆಗಳನ್ನು ಮಾಡಿದ್ದಾರೆ. ಪಾರದರ್ಶಕತೆ ಮತ್ತು ಹೊಣೆಗಾರಿಕೆ ಯನ್ನು ಹೆಚ್ಚಿಸಲಿಕ್ಕಾಗಿ ಇವೆಲ್ಲ ಎಂದು ಹೇಳಿದರು. ನಗದು ದೇಣಿಗೆಗಳಿಗೆ 2000ರೂ. ಮಿತಿ ಹಾಕಲಾಗಿದೆ. ಇದು ಅರ್ಥಹೀನ, ಏಕೆಂದರೆ ಇಂತಹ ವರ್ಗಾವಣೆಗಳನ್ನು ಹೆಚ್ಚಾಗಿ ವರದಿ ಮಾಡುವುದೇ ಇಲ್ಲ. ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳನ್ನು ನಿಷೇಧಿಸದೆ ಮತ್ತು ರಾಜಕೀಯ ಪಕ್ಷಗಳ ಚುನಾವಣಾ ಖರ್ಚುಗಳ ಮೇಲೆ ಒಟ್ಟಾರೆ ಮಿತಿ ಹಾಕದೆ ಕೈಗೊಳ್ಳುವ  ಕ್ರಮಗಳೆಲ್ಲ ಬರೀ ಪೊಳ್ಳು ಎಂದು ಸಿಪಿಐ(ಎಂ) ಬಲವಾಗಿ ಟೀಕಿಸಿದೆ.

ಒಟ್ಟಿನಲ್ಲಿ ಹೇಳುವುದಾದರೆ, ಈ ಬಜೆಟ್ ನೋಟುರದ್ಧತಿಯಿಂದಾಗಿ ಮತ್ತು ಮಂದ ಆರ್ಥಿಕ ಪರಿಸ್ಥಿತಿ ವ್ಯಾಪಿಸಿರುವುದರಿಂದ ಜನಗಳ ಮೇಲೆ ಬಿದ್ದಿರುವ ಹೊರೆಗಳನ್ನು ಕಡೆಗಣಿಸಿದೆಯಷ್ಟೇ ಅಲ್ಲ, ಮತ್ತಷ್ಟು  ಹೊರೆಗಳನ್ನು ಹೇರಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಟೀಕಿಸಿದೆ.

  • ಬಜೆಟ್‍ನ ಒಟ್ಟು ಪ್ರಮಾಣ ಕಳೆದ ವರ್ಷ ಪರಿಷ್ಕøತ ಅಂದಾಜಿನ ಪ್ರಕಾರ ಜಿಡಿಪಿಯ 13.4 ಶೇ. ಇತ್ತು. ಈ ವರ್ಷ ಅದು 12.7ಶೇ.ಕ್ಕೆ ಇಳಿದಿದೆ.
  • 2016-17ರ ಪರಿಷ್ಕøತ ಅಂದಾಜಿನಲ್ಲಿ ಒಟ್ಟು ರೆವಿನ್ಯೂ ಆದಾಯ ಜಿಡಿಪಿಯ 9.4ಶೇ. ಇದ್ದರೆ, 2017-18ರ ಬಜೆಟ್ ಅಂದಾಜಿನಲ್ಲಿ ಅದನ್ನು 9ಶೇ.ಕ್ಕೆ ಇಳಿಸಲಾಗಿದೆ.
  • ಆದರೆ ಜನಗಳ ಮೇಲಿನ ಮೇಲಿನಪರೋಕ್ಷ ತೆರಿಗೆಗಳಲ್ಲಿ 75000 ಕೋಟಿ ರೂ.ಗಳ ಹೆಚ್ಚಳ.
  • ಶ್ರೀಮಂತ ವಿಭಾಗಗಳಿಗೆ ಬಿಟ್ಟುಕೊಟ್ಟ ತೆರಿಗೆಗಳ ಪ್ರಮಾಣ 30 ಸಾವಿರ ಕೋಟಿ ರೂ.ಗಳಷ್ಟು ಹೆಚ್ಚಿದೆ, ಅದೀಗ ಜಿಡಿಪಿಯ 2.1ಶೇ. ಆಗಿದೆ.
  • ಬಿಲ್ಡರುಗಳಿಗೆ ಅಗ್ಗದಲ್ಲಿ ಭೂಮಿ ಮತ್ತು ಸಾಲ ಒದಗಿಸಲು ಭೂಸ್ವಾಧೀನದ ಕಠಿಣ ಅಂಶಗಳಿಂದ ವಿನಾಯ್ತಿ, ಸಬ್ಸಿಡಿ ಬಡ್ಡಿದರಗಳಲ್ಲಿ ಆದ್ಯತೆ ವಲಯದ ಸಾಲಗಳನ್ನು ಒದಗಿಸಲಾಗುವುದಂತೆ, ಅಲ್ಲದೆ ದೊಡ್ಡ ಮನೆಗಳನ್ನು ಕಟ್ಟುವುದನ್ನೂ ‘ಕೈಗೆಟಕುವ ವಸತಿ’ಯಲ್ಲಿ ಸೇರಿಸಲಾಗುವುದಂತೆ. ಇವೆಲ್ಲ ಒಂದು ‘ವಸತಿ ಗುಳ್ಳೆ’ ಸೃಷ್ಟಿಸುವ ದಿಕ್ಕಿನಲ್ಲಿನ ಕ್ರಮಗಳು.
  • 50 ಕೋಟಿ ರೂ. ವರೆಗೆ ವಾರ್ಷಿಕ ವಹಿವಾಟು ಇರುವ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಆದಾಯ ತೆರಿಗೆಯನ್ನು ಇಳಿಸುವ ಪ್ರಸ್ತಾವ ಕಾರ್ಪೊರೇಟ್ ವಲಯಕ್ಕೆ ಕಾರ್ಪೊರೇಟ್ ತೆರಿಗೆಯಿಂದ ತಪ್ಪಿಸಿಕೊಳ್ಳುವ ಹೊಸದೊಂದು ದಾರಿಯನ್ನು ತೆರೆದು ಕೊಟ್ಟಿದೆ.
  • ಪರಿಶಿಷ್ಟ ಬುಡಕಟ್ಟುಗಳ ಕಲ್ಯಾಣಕ್ಕೆ ಕೇವಲ 1.48%ಮತ್ತು ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ಕೇವಲ 2.44% ಮತ್ತು ಲಿಂಗ ಬಜೆಟ್ ಎಂದು ವರ್ಗೀಕರಿಸಿದ ಬಾಬ್ತಿಗೆ ಕೇವಲ 5.3%
  • ರೈತರ ಆದಾಯಗಳನ್ನು ಇಮ್ಮಡಿಗೊಳಿಸುವ ಮಾತುಗಳೇನೇ ಇದ್ದರೂ ಕೃಷಿಗೆ ಕೊಟ್ಟಿರುವ ಹಣದಲ್ಲಿ ಹೆಚ್ಚಳ ಮಾಡಿಲ್ಲ  ವಾಸ್ತವವಾಗಿ ಅದರ ಪ್ರಮಾಣ ಕಡಿಮೆಯಾಗಿದೆ. 2016-17ರ ಪರಿಷ್ಕøತ ಅಂದಾಜಿನ ಪ್ರಕಾರ ಅದು ಒಟ್ಟು ಖರ್ಚಿನ 1.98ಶೇ. ಇತ್ತು. 2017-18ರ ಬಜೆಟಿನಲ್ಲಿ ಅದು 1.95ಶೇ. ಕ್ಕೆ ಇಳಿದಿದೆ.
  • ಮೂಲ ರಚನೆಯ ಮೇಲೆ ಗಮನ ಕೇಂದ್ರೀಕರಿಸಿರುವುದಾಗಿ  ಹೇಳಿದರೂ ಬಂಡವಾಳ ಖರ್ಚಿನ ಪ್ರಮಾಣ 2016-17ರ ಪರಿಷ್ಕøತ ಅಂದಾಜಿನಲ್ಲಿ ಜಿಡಿಪಿಯ 1.86ಶೇ. ಇದ್ದದ್ದು 2017-18ರ ಬಜೆಟಿನಲ್ಲಿ 1.84ಶೇ.ಕ್ಕೆ ಇಳಿದಿದೆ.

 

 

 

Leave a Reply

Your email address will not be published. Required fields are marked *