ಸುಪ್ರೀಂ ತೀರ್ಪು : ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಹೊಸ ಹುರುಪು

18 ವರ್ಷಗಳ ಕಾನೂನು ಕಲಾಪಗಳ ನಂತರ ಮಾಜಿ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತ, ಶಶಿಕಲ, ಸುಧಾಕರನ್ ಮತ್ತು ಇಳವರಸಿ ತಪ್ಪಿತಸ್ಥರೆಂದು 2015ರಲ್ಲಿ ನ್ಯಾಯಮೂರ್ತಿ ಮೈಕೆಲ್‍ ದಕುನ್ಹ ಅವರಿಗೆ ಶಿಕ್ಷೆ ವಿಧಿಸಿದ್ದರು. ನಂತರ ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ಕುಮಾರಸಾಮಿ ಈ ಶಿಕ್ಷೆಯನ್ನು ರದ್ದು ಮಾಡಿ ಇವರೆಲ್ಲ ನಿರ್ದೋಷಿಗಳೆಂದು ತೀರ್ಪು ಕೊಟ್ಟರು. ಈಗ ಸುಪ್ರಿಂಕೋರ್ಟ್ ಹೈಕೋರ್ಟಿನ ಈ ತೀರ್ಪನ್ನು ವಜಾ ಮಾಡಿ ನ್ಯಾಯಮೂರ್ತಿ ದಕನ್ಹ ಅವರ ತೀರ್ಪನ್ನು ಎತ್ತಿ ಹಿಡಿದಿದೆ. ಶಶಿಕಲ, ಸುಧಾಕರನ್ ಮತ್ತು ಇಳವರಸಿ ಇವರಿಗೆ ನಾಲ್ಕು ವರ್ಷಗಳ ಶಿಕ್ಷೆ ಮತ್ತು 10ಕೋಟಿ ರೂ. ದಂಡ ವಿಧಿಸಲಾಗಿದೆ.

ಸಿಪಿಐ(ಎಂ) ಈ ತೀರ್ಪನ್ನು ಸ್ವಾಗತಿಸಿದೆ. ಇದು ಸಾರ್ವಜನಿಕಜೀವನದಲ್ಲಿ ಭ್ರಷ್ಟಾಚಾರದಲ್ಲಿತೊಡಗುವವರಿಗೆಒಂದುಎಚ್ಚರಿಕೆ, ಇದು ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಹೊಸ ಹುರುಪು ನೀಡುತ್ತದೆ ಎಂದು ಅದು ಹೇಳಿದೆ.

ರಾಜ್ಯಪಾಲರು ರಾಜ್ಯದಲ್ಲಿ ಸ್ಥಿರತೆಯನ್ನು ಮತ್ತೆ ನೆಲೆಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ವಿಧಾನಸಭೆಯ ಅಧಿವೇಶನವನ್ನು ಕರೆದು ಹೊಸದೊಂದು ಸರಕಾರ ರಚನೆಯಾಗುವಂತೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

Leave a Reply

Your email address will not be published. Required fields are marked *