ಗೋಧ್ರಾ ರೈಲಿಗೆ ಬೆಂಕಿ

27 ಫೆಬ್ರುವರಿ 2002

ಈ ದಿನ ಮುಂಜಾನೆ ಸಾಬರಮತಿ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಬೆಂಕಿ ಬಿದ್ದು 59 ಜನ ಒಳಗೆನೇ ಸುಟ್ಟು ಹೋದರು. ಇವರಲ್ಲಿ ಹೆಚ್ಚಿನವರು ಬಾಬ್ರಿ ಮಸೀದಿಯ ನಾಶದ ನಂತರ ಗುಜರಾತಿಗೆ ಹಿಂದಿರುಗುತ್ತಿದ್ದ ಕರಸೇವಕರು ಎಂದು ಹೇಳಲಾಗಿದೆ. ಈ ದುರಂತ ನಿಗೂಢವಾಗಿದ್ದು ಇದರ ಕಾರಣಗಳ ಬಗ್ಗೆ ಸರ್ವಸಮ್ಮತ  ನಿಲುವು ಇಲ್ಲ. ಆದರೆ ಸುಮಾರು 2 ಸಾವಿರ (ಬಹುಪಾಲು ಮುಸ್ಲಿಮ್) ಜನರನ್ನು ಬಲಿ ತೆಗೆದುಕೊಂಡ ಹಾಗೂ ಸಾವಿರಾರು ಮುಸ್ಲಿಮರು ಗಾಯಗೊಂಡವರೂ ನಿರಾಶ್ರಿತರನ್ನಾಗಿಸಿದ, ಕುಖ್ಯಾತ ಗುಜರಾತ್ ದಂಗೆಗಳಿಗೆ ಇದು ಕಾರಣ(ಅಥವಾ ನೆಪವೋ) ಆಯಿತು.

ಈ ದುರಂತಕ್ಕೆ ಮೂರು ತನಿಖಾ ಆಯೋಗಗಳು ಬೇರೆ ಬೇರೆ  ಕಾರಣಗಳನ್ನು ಕೊಟ್ಟಿವೆ. ಗುಜರಾತ್ ಸರಕಾರ ನೇಮಿಸಿದ ತನಿಖಾ ಕಮಿಶನ್ ಒಂದು ದೊಡ್ಡ ಗುಂಪು ರೈಲು ಬೋಗಿಗೆ ಬೆಂಕಿ ಕೊಟ್ಟಿತು ಎಂದು ಹೇಳಿತು. ಈ ಕಮಿಶನಿನ ಮುಖ್ಯಸ್ಥ ನ್ಯಾ. ನಾನಾವಟಿ ಅವರ ನಿಷ್ಪಕ್ಷಪಾತತೆ ಮತ್ತು ದೀರ್ಘ ವಿಳಂಬದ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿದೆ.  31 ಜನರಿಗೆ ಈ ಅಪರಾಧಕ್ಕೆ ಶಿಕ್ಷೆ ವಿಧಿಸಸಲಾಗಿದೆ. ರೈಲು ಮಂತ್ರಿ ನೇಮಿಸಿದ ತನಿಖಾ ಕಮಿಶನ್ ಇದೊಂದು `ಅಫಘಾತ’? ಎಂದು ಹೇಳಿತು. ಈ ಕಮಿಶನಿನ ನೇಮಕಾತಿ ಸಂವಿಧಾನ-ಬದ್ಧ ಅಲ್ಲ ಎಂದು ಹೇಳಲಾಯಿತು. ಇದು ಗುಜರಾತ್ ದಂಗೆ ನಡೆಸಲು ನೆಪವಾಗಲು ಪೂರ್ವ-ಯೋಜಿತ ಕುಕೃತ್ಯವೆಂದು ಹಲವರ ನಂಬಿಕೆ.

Leave a Reply

Your email address will not be published. Required fields are marked *