ಐದು ವಿಧಾನಸಭಾ ಚುನಾವಣೆಗಳ ಫಲಿತಾಂಶಗಳ ಕುರಿತು

ಉತ್ತರಪ್ರದೇಶದಲ್ಲಿ ಬಿಜೆಪಿಗೆ ಭಾರೀ ವಿಜಯ, ಆದರೆ ಅದು ದೇಶಕ್ಕೆ ಅಪಾಯಕಾರಿಯಾಗಬಹುದು

ಬಿಜೆಪಿ ಉತ್ತರ ಪ್ರದೇಶದಲ್ಲಿ ವಿಧಾನ ಸಭೆಯಲ್ಲಿ ಮುಕ್ಕಾಲು ಪಾಲಿಗಿಂತ ಹೆಚ್ಚು  ಸ್ಥಾನಗಳನ್ನು ಪಡೆದು ಭಾರೀ ವಿಜಯ ಗಳಿಸಿದೆ. ಈ ವಿಜಯವನ್ನು ಪಕ್ಕಾ ಕೋಮುವಾದಿ ಪ್ರಚಾರ ಮತ್ತು ವ್ಯಾಪಕವಾದ ಜಾತಿ ಮೈತ್ರಿಗಳ ಒಂದು ಮಿಶ್ರಣದ ಮೂಲಕ ಸಾಧಿಸಲಾಗಿದೆ. ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಲೋಕಸಭಾ ಚುನಾವಣೆಗಳಲ್ಲಿ ಮೇಲಕ್ಕೊಯ್ದದ್ದು ಈ ಮಿಶ್ರಣವೇ, ಆ ನಡೆಯನ್ನು ಉಳಿಸಿಕೊಳ್ಳಲಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಅಭಿಪ್ರಾಯ ಪಟ್ಟಿದೆ.

ಬಿಜೆಪಿಗೆ ಬೃಹತ್ ಜನಾದೇಶ ದೊರೆತಿದೆ ಎಂದು ಒಪ್ಪಿಕೊಳ್ಳುತ್ತಲೇ, ಸಿಪಿಐ(ಎಂ), ಇದು ದೇಶಕ್ಕೆ ಅಪಾಯಕಾರಿ ಪರಿಣಾಮಗಳನ್ನು ಉಂಟು ಮಾಡಬಹುದು ಎಂದೂ ಹೇಳಿದೆ. ಏಕೆಂದರೆ ಇದು ಛಿದ್ರಕಾರಿಯಾದ ಮತ್ತು ದೇಶಕ್ಕೆ ಹಾನಿಕಾರಕವಾದ ಹಿಂದುತ್ವ ರಾಜಕಾರಣದ ಬಾಂಡಿಗೆ ಪ್ರೋತ್ಸಾಹ ನೀಡುತ್ತದೆ ಎಂದು ಅದು ಹೇಳಿದೆ.

ಉತ್ತರಾಖಂಡದಲ್ಲಿ ಬಿಜೆಪಿ ಒಂದು ದೊಡ್ಡ ವಿಜಯದೊಂದಿಗೆ ಯಶಸ್ಸು ದಾಖಲಿಸಿದೆ, ಮತ್ತು ಕಾಂಗ್ರೆಸ್ ಪಕ್ಷವನ್ನು ಸರಕಾರದಿಂದ ಹೊರಹಾಕಿದೆ. ಆದರೆ ಪಂಜಾಬಿನಲ್ಲಿ ಅಕಾಲಿ-ಬಿಜೆಪಿ ಮೈತ್ರಿಕೂಟ ಒಂದು ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ, ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿದೆ.

ಗೋವಾ ವಿಧಾನಸಭೆಯಲ್ಲಿ ಬಹುಮತ ಪಡೆಯುವಲ್ಲಿ ಬಿಜೆಪಿ ವಿಫಲವಾಗಿದ್ದರೆ, ಮಣಿಪುರದಲ್ಲಿ ಕಾಂಗ್ರೆಸ್ ತನ್ನ ಪ್ರಭಾವೀ ಸ್ಥಾನಮಾನವನ್ನು ಕಳಕೊಂಡಿರುವಂತೆ ಕಾಣುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *