ಜಾನುವಾರು ಮಾರಾಟ ನಿಷೇಧ: ಸಿಪಿಐ(ಎಂ) ಖಂಡನೆ

ಆಹಾರ ಸಂಹಿತೆ ಹೇರುವ ಕೋಮುವಾದಿ  ವಿಭಜನಕಾರಿ  ಅಜೆಂಡಾ

ಜಾನುವಾರುಗಳನ್ನು ವಧೆಗಾಗಿ ಮಾರುವುದನ್ನು ನಿಷೇಧಿಸಿರುವ ಪರಿಸರ, ಅರಣ್ಯಗಳು ಮತ್ತು ವಾತಾವರಣ ಬದಲಾವಣೆ ಮಂತ್ರಾಲಯದ ಅಧಿಸೂಚನೆ ದೇಶದ ಮೇಲೆ ಆಹಾರ ಸಂಹಿತೆಯೊಂದನ್ನು ಹೇರುವ ಸಂಪೂರ್ಣವಾಗಿ ಕೋಮುವಾದಿ ಮತ್ತು ವಿಭಜನಕಾರೀ ಅಜೆಂಡಾಕ್ಕೆ ಕಾನೂನಿನ ವೇಷ ತೊಡಿಸುವ ಮೋದಿ ಸರಕಾರದ ಒಂದು  ಹೇಯ ಪ್ರಯತ್ನ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ.

ಇದು ಪಶುಪಾಲನೆಯಲ್ಲಿ ತೊಡಗಿರುವ ಕೋಟ್ಯಂತರ ಬೇಸಾಯಗಾರರ  ಜೀವನಾಧಾರವನ್ನು ಧ್ವಂಸ ಮಾಡುತ್ತದೆ, ಸಾಂಪ್ರದಾಯಿಕ ಜಾನುವಾರು ಸಂತೆಗಳನ್ನು ನಿರ್ಮೂಲಗೊಳಿಸುತ್ತದೆ ಹಾಗೂ ನಿರುಪಯುಕ್ತ ಜಾನುವಾರುಗಳನ್ನು ಸಾಕುವ ನ್ಯಾಯಯುತ ಹೊರೆಯನ್ನು ರೈತರ ಮೇಲೆ ಹೇರುತ್ತದೆ. ಈಗಾಗಲೇ ಹೆಚ್ಚುತ್ತಿರುವ ಕೃಷಿ ಲಾಗುವಾಡುಗಳ ವೆಚ್ಚಗಳಿಂದ ಹೆಚ್ಚೆಚ್ಚಾಗಿ ಆತ್ಮಹತ್ಯೆಗಳಿಯುತ್ತಿರುವ ರೈತರ ಮೇಲೆ ಮತ್ತಷ್ಟು ಹೊರೆಯನ್ನು ಹೇರುತ್ತದೆ.

ಅಲ್ಲದೆ ಇದು ಚರ್ಮ ಉದ್ದಿಮೆ ಮತ್ತು ಮಾಂಸ ರಫ್ತು ಉದ್ದಿಮೆಯ ಮೇಲೂ ದುಷ್ಪರಿಣಾಮ ಬೀರಿ ಲಕ್ಷಾಂತರ ಜನಗಳ ಜೀವನಾಧಾರಗಳನ್ನು ತಟ್ಟುತ್ತದೆ ಎಂದಿರುವ ಸಿಪಿಐ(ಎಂ) ಈ ಆಧಿಸೂಚನೆ ರಾಜ್ಯಗಳ ಅಧಿಕಾರಗಳಲ್ಲಿ ಹಸ್ತಕ್ಷೇಪ ಕೂಡ ಆಗುತ್ತದೆ ಎಂದಿದೆ. ಆದ್ದರಿಂದ ಸಿಪಿಐ(ಎಂ) ವಿರೋಧಿಸುತ್ತ,  ಅದನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *