ಭಾರತದ ಬಹುತ್ವ ಮತ್ತು ವೈವಿಧ್ಯತೆಯ ಮೇಲಿನ ಒಂದು ದಾಳಿ : ಪ್ರತಿಪಕ್ಷಗಳ ಮುಖಂಡರು

ಸಂಸತ್ತಿನ ಗ್ರಂಥಭಂಡಾರ ಕಟ್ಟಡದಲ್ಲಿ ಜುಲೈ 11ರಂದು ಉಪರಾಷ್ಟಪತಿ ಹುದ್ದೆಗೆ ಪ್ರತಿಪಕ್ಷಗಳ ಅಭ್ಯರ್ಥಿಯ ಬಗ್ಗೆ ಚರ್ಚಿಸಲು ಸೇರಿದ ಸಭೆ ಈ ಕೆಳಗಿನ ನಿರ್ಣಯವನ್ನು ಅಂಗೀಕರಿಸಿದೆ:

“ನಾವು, ಪ್ರತಿಪಕ್ಷಗಳ ಮುಖಂಡರು, ಅಮರನಾಥ ಯಾತ್ರಿಗಳ ಮೇಲೆ ಹೇಡಿತನದ ಮತ್ತು ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ಇದಕ್ಕೆ ಬಲಿಯಾದವರ ಕುಟುಂಬಗಳಿಗೆ ನಮ್ಮ ಅತ್ಯಂತ ಆಳವಾದ ಸಹಾನುಭೂತಿಯನ್ನು ವ್ಯಕ್ತಪಡಿಸುತ್ತೇವೆ ಮತ್ತು ಅವರ ಈ ನೋವಿನ ಈ ಗಳಿಗೆಯಲ್ಲಿ ಅವರ ಬೆಂಬಲಕ್ಕೆ ನಿಲ್ಲುತ್ತೇವೆ.

ಇದು ಮಾನವತೆಯ ಮೇಲಿನ ಒಂದು ದಾಳಿ. ಇದು ಭಾರತದ ಬಹುತ್ವ ಮತ್ತು ವೈವಿಧ್ಯತೆಯ ಮೇಲಿನ ಒಂದು ದಾಳಿ. ಇದು ಮಾನವೀಯ ಮೌಲ್ಯಗಳು ಮತ್ತು ಕಶ್ಮೀರಿಯತ್ ಮೇಲಿನ ದಾಳಿ.

ಸರಕಾರ ಈ ಅಮಾನವೀಯ ಕೃತ್ಯವನ್ನು ಎಸಗಿರುವವರನ್ನು, ಅದರ ನಿಜವಾದ ಸಂಚನ್ನು ರೂಪಿಸಿದವರನ್ನು  ನ್ಯಾಯನಿರ್ಣಯಕ್ಕೆ ಒಳಪಡಿಸಲು ತನ್ನ ಅಧೀನವಿರುವ ಎಲ್ಲ ಸಂಪನ್ಮೂಲಗಳನ್ನು  ಬಳಸಬೇಕು ಎಂದು ಕೇಳುತ್ತೇವೆ. ಮುಂಗಡ ರಹಸ್ಯ ಮಾಹಿತಿಗಳಿದ್ದರೂ ಈ ದಾಳಿಯನ್ನು ತಡೆಯುವಲ್ಲಿ ವಿಫಲವಾದದ್ದೇಕೆ ಎಂದು ಸರಕಾರ ಆತ್ಮಾವಲೋಕನ ಮಾಡಬೇಕಾಗಿದೆ.”

 

Leave a Reply

Your email address will not be published. Required fields are marked *