ಇಸ್ರೆಲ್ ಪ್ರಧಾನಿಯ ಭೇಟಿ ಸ್ವಾಗತ ಯೋಗ್ಯವಲ್ಲ

ಇಸ್ರೆಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಜನವರಿ 14ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಈ ಅಧಿಕೃತ ಭೇಟಿ ಸ್ವಾಗತಯೋಗ್ಯವೇನೂ ಅಲ್ಲ. ಅವರ ನೇತೃತ್ವದ ಮೈತ್ರಿ ಸರಕಾರ ಇಸ್ರೆಲ್ ಕಂಡಿರುವ ಅತ್ಯಂತ ಬಲಪಂಥೀಯ ಸರಕಾರ. ಅದರಲ್ಲಿ  ಉಗ್ರ ಬಲಪಂಥೀಯ ಯೆಹೂದಿ ಪಕ್ಷಗಳಿವೆ. ಒಂದು ಸ್ವತಂತ್ರ ಪ್ಯಾಲೆಸ್ತಿನೀ ಪ್ರಭುತ್ವ ಮೂಡಿ ಬರುವ ಎಲ್ಲ ಸಾಧ್ಯತೆಗಳನ್ನು ತಡೆಯಲು ಈ ಸರಕಾರ ಪ್ರಯತ್ನಿಸುತ್ತಿದೆ.

ನೆತನ್ಯಾಹು ಭಾರತಕ್ಕೆ ಭೇಟಿ ನೀಡುತ್ತಿರುವ ಎರಡನೇ ಇಸ್ರೆಲಿ ಪ್ರಧಾನಿ. ಮೊದಲ ಪ್ರಧಾನಿ ಎಂದರೆ ಅರಿಯಲ್ ಶರೋನ್. ಆತನೂ 2003 ರಲ್ಲಿ ಬಿಜೆಪಿ ಸರಕಾರದಲ್ಲಿದ್ದಾಗ ಭೇಟಿ ನೀಡಿದ್ದು.

ಮೋದಿ ಸರಕಾರದ ಆಹ್ವಾನದ ಮೇರೆಗೆ ಬರುತ್ತಿರುವ ನೆತನ್ಯಾಹು ಮತ್ತು ಮೋದಿ ಸೈದ್ಧಾಂತಿಕವಾಗಿ ಸಮಾನ ಮನಸ್ಕರು. ಒಬ್ಬರು ಬಲಪಂಥೀಯ ಅತಿ ಉಗ್ರ ಯೆಹೂದಿ ರಾಷ್ಟ್ರವಾದವನ್ನು ಪ್ರತಿನಿಧಿಸುತ್ತಿದ್ದರೆ, ಇನ್ನೊಬ್ಬರು ಬಲಪಂಥೀಯ ಹಿಂದುತ್ವ ರಾಷ್ಟ್ರವಾದವನ್ನು ಪ್ರತಿಪಾದಿಸುವವರು. ಕಳೆದ ಬಾರಿ ಭೇಟಿ ನೀಡಿ ಇಸ್ರೆಲಿಗೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನ ಮಂತ್ರಿ ಎನಿಸಿಕೊಂಡ ಮೋದಿಯವರು ಪ್ಯಾಲೆಸ್ತಿನೀ ಪ್ರಾಧಿಕಾರಕ್ಕೆ ಭೇಟಿ ನೀಡದೆ, ಇಸ್ರೆಲಿ ಆಕ್ರಮಣಕ್ಕೆ ಬೆಂಬಲದ ಸಂಕೇತ ನೀಡಿದ್ದರು.

ಆದರೆ ಬಿಜೆಪಿ ಸರಕಾರದ ಇಸ್ರೆಲಿ-ಪರ ನಿಲುವಿಗೆ ತದ್ವಿರುದ್ಧವಾಗಿ ಭಾರತ ಮತ್ತು ಜನತೆ ಸದಾ ಇಸ್ರೆಲಿ ಆಕ್ರಮಣವನ್ನು ವಿರೋಧಿಸಿದ್ದಾರೆ. ಪ್ಯಾಲೆಸ್ತಿನೀ ಹೋರಾಟಕ್ಕೆ ಸೌಹಾರ್ದ ವ್ಯಕ್ತಪಡಿಸಿದ್ದಾರೆ. ಆಕ್ರಮಣಕಾರಿ ಪ್ಯಾಲೆಸ್ತಿನಿ-ವಿರೋಧಿ ಧೋರಣೆಗಳನ್ನು ಭಾರತದ ಜಾತ್ಯತೀತ ಪ್ರಜಾಪ್ರಭುತ್ವ  ಮನೋಭಾವದ ಜನಗಳು ವಿರೋಧಿಸುತ್ತಾರೆ ಎಂದು ನೆತನ್ಯಾಹು ತಿಳಿಯಬೇಕಾಗಿದೆ ಎಂದು ಸಿಪಿಐ(ಎಂ)ನ ಪತ್ರಿಕೆ ‘ಪೀಪಲ್ಸ್ ಡೆಮಾಕ್ರಸಿ’ ಸಂಪಾದಕೀಯ ಹೇಳಿದೆ.

Leave a Reply

Your email address will not be published. Required fields are marked *