ಸುಪ್ರಿಂ ಕೋರ್ಟ್: ಸಮಗ್ರತೆ-ಸ್ವಾತಂತ್ರ್ಯದ ಚೌಕಾಸಿ ಇರಬಾರದು

ಜನವರಿ 12 ರಂದು ದೇಶದ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರುಗಳು ಒಂದು ಪತ್ರಿಕಾ ಸಮ್ಮೇಳನವನ್ನು ನಡೆಸಿದ್ದಾರೆ. ಇದೊಂದು ಅಭೂತಪೂರ್ವ ಘಟನೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಅಭಿಪ್ರಾಯ ವ್ಯಕ್ತಪಡಿಸಿದೆ. ಅವರು ಹಲವು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ. ಇವು ಒಂದು ಸಂಸ್ಥೆಯಾಗಿ ಸುಪ್ರಿಂ ಕೋರ್ಟಿನ ಮೇಲೆ ಮಹತ್ವದ ಪರಿಣಾಮ ಬೀರುವಂತವು. ಉದಾಹರಣೆಗೆ ಮೊಕದ್ದಮೆಗಳ ವಿಚಾರಣೆಗಳಿಗೆ ಸರದಿ ಪಟ್ಟಿ ಇತ್ಯಾದಿ.

ನ್ಯಾಯಾಂಗದ, ಅದರಲ್ಲೂ ಸುಪ್ರಿಂ ಕೋರ್ಟಿನ ಸಮಗ್ರತೆ ಮತ್ತು ಸ್ವಾತಂತ್ರ್ಯ ಸಂವಿಧಾನದ ಒಂದು ಮಹತ್ವದ ಸ್ಥಂಭ. ಅದರಲ್ಲಿ ಚೌಕಾಸಿ ಸಾಧ್ಯವಿಲ್ಲ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಈ ಎಲ್ಲ ಪ್ರಶ್ನೆಗಳನ್ನು ದೇಶದಲ್ಲಿ  ಸರ್ವೊಚ್ಚ ನ್ಯಾಯಾಲಯದ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆ ಮತ್ತು ಪಾರದರ್ಶಕತೆಯನ್ನು ಗಮನದಲ್ಲಿಟ್ಟುಕೊಂಡು ಪರಿಹರಿಸಲಾಗುವುದು ಎಂಬ ಆಶಯವನ್ನು ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *