ವಾಲ್‌ಮಾರ್ಟ್ ಹಿಂಬಾಗಿಲ ಭಾರತ ಪ್ರವೇಶಕ್ಕೆ ಅವಕಾಶ : ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ಇಂಡಿಯಾ ಆಗಿದೆ

ಅಂತರ್ರಾಷ್ಟ್ರೀಯ ಇ-ವಾಣಿಜ್ಯದ ಅಂದರೆ ಇಂಟರ್ನೆಟ್ ಮೂಲಕ ಚಿಲ್ಲರೆ ಮಾರಾಟದ ದೈತ್ಯ ಕಂಪನಿ ವಾಲ್ ಮಾರ್ಟ್ ಭಾರತದ ಇಂತಹ ಚಿಲ್ಲರೆ ಮಾರಾಟದ ಕಂಪನಿ ಫ್ಲಿಪ್‌ಕಾರ್ಟ್‌ನ್ನು 16 ಬಿಲಿಯ ಡಾಲರುಗಳಿಗೆ ಸ್ವಾಧೀನ ಪಡಿಸಿಕೊಂಡಿರುವುದು  ಭಾರತದ ಬೃಹತ್ ಗಾತ್ರದ ಬಹುಕೋಟಿ ಬೆಲೆಬಾಳುವ ಚಿಲ್ಲರೆ ವ್ಯಾಪಾರ ವಲಯದೊಳಕ್ಕೆ ವಿದೇಶಿ ಬಂಡವಾಳ ಹಿಂಬಾಗಿಲಿನಿಂದ ಬರಲು ಅನುಕೂಲ ಮಾಡಿಕೊಟ್ಟಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಈ ಸುದ್ದಿಗೆ ಪ್ರತಿಕ್ರಿಯಿಸುತ್ತ ಹೇಳಿದೆ.

ಭಾರತದ ಬಹುಬ್ರಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದೊಳಗೆ ಎಫ್‌ಡಿಐ ಗೆ ಅವಕಾಶ ನೀಡುವುದನ್ನು ಎಡಪಕ್ಷಗಳು ಬಲವಾಗಿ ವಿರೋಧಿಸಕೊಂಡು ಬಂದಿವೆ. ಇದು ನೇರವಾಗಿ ಸುಮಾರು ನಾಲ್ಕು ಕೋಟಿ ಜನಗಳಿಗೆ ಉದ್ಯೋಗ ಒದಗಿಸಿರುವ ಭಾರತದ ಚಿಲ್ಲರೆ ವ್ಯಾಪಾರ ವಲಯನವನ್ನು ಸಂಪೂರ್ಣವಾಗಿ ನಾಶಮಾಡುತ್ತದೆ ಎಂಬುದೇ ಈ ವಿರೋಧಕ್ಕೆ ಕಾರಣ. ನಮ್ಮ ಜನಸಂಖ್ಯೆಯ ಐದನೇ ಒಂದು ಭಾಗ ಈ ವಲಯದಲ್ಲಿನ ಆದಾಯಗಳನ್ನು ಅವಲಂಬಿಸಿದೆ. ಪ್ರತಿಪಕ್ಷವಾಗಿದ್ದಾಗ ಬಿಜೆಪಿ ಕೂಡ ಈ ನಡೆಯನ್ನು ವಿರೋಧಿsಸಿತ್ತು.  ಎಂಬ ಸಂಗತಿಯತ್ತವೂ ಸಿಪಿಐ(ಎಂ) ಗಮನ ಸೆಳೆದಿದೆ.

ವಾಲ್‌ಮಾರ್ಟ್ ತಮ್ಮ ಸರಕುಗಳನ್ನು ಅಂತರ್ರಾಷ್ಟ್ರೀಯ ಮಾರುಕಟ್ಟೆಗಳಿಂದ ತರಿಸಿಕೊಡುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಈಗ ಇವನ್ನು ಭಾರತದಲ್ಲೂ ಮಾರಲಾಗುತ್ತದೆ. ಈ ಮೂಲಕ ನಮ್ಮ ಸಣ್ಣ ಮತ್ತು ಮಧ್ಯಮ ವಲಯಗಳೂ ನಾಶಗೊಳ್ಳುತ್ತವೆ. ಇವೆರಡು ಕೃಷಿ ವಲಯದ ನಂತರ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುವ ವಲಯಗಳು.

ಮೋದಿ ಸರಕಾರ ಎಲ್ಲ ಆಶ್ವಾಸನೆಗಳಲ್ಲೂ ಜನಗಳಿಗೆ ಬಗೆಯುತ್ತಿರುವ ನಗ್ನ ವಿಶ್ವಾಸಘಾತ ಈ ಕೈವಶದೊಂದಿಗೆ ಮತ್ತೊಮ್ಮೆ ಬಯಲಾಗಿದೆ, ಮೇಕ್ ಇನ್ ಇಂಡಿಯಾ ಈಗ ಮೇಕ್ ಫಾರ್ ಇಂಡಿಯಾ ಆಗಿದೆ, ಅಂದರೆ ಭಾರತದಲ್ಲಿ ತಯಾರಿಸುವ ಬದಲು ಭಾರತಕ್ಕೆ ತಯಾರಿ ಎಂದಾಗಿದೆ  ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಲೇವಡಿ ಮಾಡಿದೆ.

ಮೋದಿ ಸರಕಾರ ವಾಲ್‌ಮಾರ್ಟ್‌ಗೆ ಫ್ಲಿಫ್‌ಕಾರ್ಟನ್ನು ಕೈವಶ ಮಾಡಿಕೊಳ್ಳಲು ಮಂಜೂರಾತಿ ನೀಡಿರುವುದನ್ನು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ಇಂತಹ ಸ್ವಾಧೀನಗಳು ನಮ್ಮ ದೇಶದ ಮತ್ತು ಜನಗಳ ಹಿತಗಳಿಗೆ ವಿರುದ್ಧವಾದದ್ದು. ಇದಕ್ಕೆ ಅವಕಾಶ ನೀಡಬಾರದು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.

Leave a Reply

Your email address will not be published. Required fields are marked *