ಒಕ್ಕೂಟ ತತ್ವ ಮತ್ತು ರಾಜ್ಯಗಳ ಹಕ್ಕುಗಳಿಗಾಗಿ ಅವಿರತ ಹೋರಾಡಿದವರು-ಎಂ. ಕರುಣಾನಿಧಿ

ಎಂ. ಕರುಣಾನಿಧಿಯವರು ದ್ರಾವಿಡ ಆಂದೋಲನದ ಹಿರಿಯ ನೇತಾರ, ಡಿಎಂಕೆ ಅಧ್ಯಕ್ಷರು ಮತ್ತು ತಮಿಳುನಾಡಿನ ರಾಜಕೀಯದ ಒಬ್ಬ ಕಟ್ಟಾಳು ಎಂದು ಆಗಸ್ಟ್ ೭ರಂದು ಅವರ ನಿಧನದ ಬಗ್ಗೆ  ಆಳವಾದ ದುಃಖವನ್ನು ವ್ಯಕ್ತಪಡಿಸುತ್ತ ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ. ಅವರು ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ಹದಿಮೂರು ಬಾರಿ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾದ ಅವರು ಯಾವುದೇ ಚುನಾವಣೆಯಲ್ಲಿ ಸೋತಿಲ್ಲ ಎಂಬುದನ್ನೂ ಪೊಲಿಟ್‌ಬ್ಯುರೊ ನೆನಪಿಸಿಕೊಂಡಿದೆ.

ಕರುಣಾನಿಧಿ ಹಲವು ಪರಿಣತಿಗಳ ಒಬ್ಬ ವ್ಯಕ್ತಿ. ಒಬ್ಬ ಸಮರ್ಥ ಆಡಳಿತಗಾರರು, ಲೇಖಕರು, ಕುಶಲ ವಾಗ್ಮಿ ಮತ್ತು ವಿಚಾರವಾದಿ ಹಾಗೂ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿದವರು. ತಮಿಳುನಾಡಿನ ರಾಜಕೀಯ ಮತ್ತು ಸಮಾಜದ ರೂಪುರೇಷೆಗಳನ್ನು ಸೃಜಿಸಿದವರಲ್ಲಿ ಪ್ರಮುಖರು ಎಂದು ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಪೊಲಿಟ್‌ಬ್ಯುರೊ ಹೇಳಿದೆ.

ಅವರನ್ನು ಒಕ್ಕೂಟತತ್ವ ಮತ್ತು ರಾಜ್ಯಗಳ ಹಕ್ಕುಗಳಿಗಾಗಿ ಅವರ ಹೋರಾಟಕ್ಕಾಗಿ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾಸಿದ್ದಕ್ಕಾಗಿ ಸದಾ ನೆನಪಿಸಿಕೊಳ್ಳಲಾಗುವುದು. ರಾಷ್ಟ್ರೀಯ ಮಟ್ಟದಲ್ಲಿ ಸಮ್ಮಿಶ್ರ ರಂಗಗ ರಾಜಕೀಯವನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಅವರ ಎಲ್ಲ ಕುಟುಂಬದ ಸದಸ್ಯರುಗಳು , ಡಿಎಂಕೆಯ ಸಮಸ್ತ ಮುಖಂಡತ್ವ, ಕಾರ್ಯಕರ್ತರು ಮತ್ತು ಅನುಯಾಯಿಗಳಿಗೆ ಹಾಗೂ ತಮಿಳುನಾಡಿನ ಸಮಸ್ತ ಜನತೆಗೆ ತನ್ನ ಹಾರ್ದಿಕ ಸಂತಾಪಗಳನ್ನು ತಿಳಿಸಿದೆ.

Karunanidhi2

Leave a Reply

Your email address will not be published. Required fields are marked *