ಸಾಗಾಣಿಕೆ ಕಾರ್ಮಿಕರ ಮುಷ್ಕರಕ್ಕೆ ಸಿಪಿಐ(ಎಂ) ಬೆಂಬಲ

ಮೋಟಾರು ವಾಹನಗಳ ಕಾಯ್ದೆ ತಿದ್ದುಪಡಿ ಮಸೂದೆಯ ಪ್ರತಿಗಾಮಿ ಅಂಶಗಳ ವಿರುದ್ಧ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಸತತ ಬೆಲೆಯೇರಿಕೆಗಳ ವಿರುದ್ಧ ಒಂದು ದಿನ ರಾಷ್ಟ್ರೀಯ ಮುಷ್ಕರದ ಕರೆಗೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಬೆಂಬಲ ವ್ಯಕ್ತಪಡಿಸಿದೆ.

ಅಖಿಲ ಭಾರತ ರಸ್ತೆ ಸರಿಗೆ ಕಾರ್ಮಿಕರ ಸಂಘಟನೆಗಳ ಸಮನ್ವಯ ಸಮಿತಿ ಎತ್ತಿರುವ ಬೇಡಿಕೆಗಳು ನೈಜವಾಗಿವೆ, ಸರಕಾರ ಅವರ ಪ್ರಸ್ತಾವಗಳನ್ನು ಅನುಕೂಲಕರ ರೀತಿಯಲ್ಲಿ ಪರಿಶೀಲಿಸಬೇಕು ಎಂದು ಸಿಪಿಐ(ಎಂ) ಹೇಳಿದೆ.

ಕೇಂದ್ರ ಸರಕಾರ ಅವರ ನೈಜ ಬೇಡಿಕೆಗಳಿಗೆ ಒಪ್ಪಿಗೆ ನೀಡಬೇಕು, ಆಮೂಲಕ ಈ ಮುಷ್ಕರದಿಂದ ಆರ್ಥಿಕಕ್ಕೆ ಮತ್ತು ಸಾರ್ವಜನಿಕರಿಗೆ ಆಗಬಹುದಾದ ಗಂಭೀರ ಅನಾನುಕೂಲಗಳನ್ನು ತಪ್ಪಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಕೇಂದ್ರ ಸರಕಾರಕ್ಕೆ ಕರೆ ನೀಡಿದೆ.

Leave a Reply

Your email address will not be published. Required fields are marked *