ಮಧ್ಯಪ್ರದೇಶದಲ್ಲಿ ಬಿಜೆಪಿಯ ಭಂಡ ಕುದುರೆ ವ್ಯಾಪಾರ

11 03 2020emergency operationಮಧ್ಯಪ್ರದೇಶದ ಕಾಂಗ್ರೆಸ್ ರಾಜ್ಯ ಸರಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಒರಟು ಕುದುರೆ ವ್ಯಾಪಾರದಲ್ಲಿ ತೊಡಗಿ ಪ್ರಜಾಪ್ರಭುತ್ವದ ಬಗ್ಗೆ ತನ್ನ ತಿರಸ್ಕಾರವನ್ನು ಬಿಜೆಪಿ ಮತ್ತೊಮ್ಮೆ, ಪ್ರದರ್ಶಿಸಿದೆ. ಜನಾದೇಶವನ್ನು ಸಂಪೂರ್ಣವಾಗಿ ತಿರುವುಮುರುವುಗೊಳಿಸುವ ಪ್ರಯತ್ನ, ಪ್ರಜಾಪ್ರಭುತ್ವದ ಬಗ್ಗೆ, ಜನತೆಯ ಇಚ್ಛೆ ಮತ್ತು ಕಾನೂನಿನ ಆಳ್ವಿಕೆಯ ಬಗ್ಗೆ  ಬಿಜೆಪಿಯ ನಿಲುವನ್ನು ಮತ್ತೊಮ್ಮೆ ಪ್ರದರ್ಶಿಸುತ್ತದೆ ಎಂದು ಇದನ್ನು ಖಂಡಿಸುತ್ತ ಪೊಲಿಟ್‌ ಬ್ಯುರೊ ಹೇಳಿದೆ.

 

ಹಲವು ಬಿಜೆಪಿಯೇತರ ರಾಜ್ಯ ಸರಕಾರಗಳು ಸಿ ಎ ಎ/ಎನ್‌ ಪಿ ಆರ್/ಎನ್‌ ಆರ್‌ ಸಿ ಪ್ರಕ್ರಿಯೆಗೆ ವಿರೋಧವನ್ನು ಘೋಷಿಸಿರುವುದರಿಂದ, ಬಿಜೆಪಿ ಅತ್ಯಂತ ಕೆಟ್ಟ ಸ್ವರೂಪದ ಕುದುರೆ ವ್ಯಾಪಾರದಲ್ಲಿ ತೊಡಗಿ, ಈ ರಾಜ್ಯಸರಕಾರಗಳನ್ನು ಪತನಗೊಳಿಸುವ ಪ್ರಯತ್ನದ ಮೇಲೆ ಗುರಿಯಿಟ್ಟಿದೆ.

 

ಬಿಜೆಪಿಯ ಈ ಪ್ರಜಾಪ್ರಭುತ್ವ- ವಿರೋಧಿ ವಿಧಾನಗಳನ್ನು ಬಲವಾಗಿ ಖಂಡಿಸುತ್ತ ಸಿಪಿಐ(ಎಂ) ಪೊಲಿಟ್‌ಬ್ಯುರೊ, ನಿರ್ದಿಷ್ಟವಾಗಿ ಎಲ್ಲ ಬಿಜೆಪಿಯೇತರ ರಾಜ್ಯ ಸರಕಾರಗಳ ಗಮನವನ್ನು ಈ ಕುದುರೆ ವ್ಯಾಪಾರದತ್ತ ಸೆಳೆದಿದೆ, ಈ ರಾಜ್ಯ ಸರಕಾರಗಳು ಬಿಜೆಪಿಯ ಅಪಾರ ಹಣಬಲ ಮತ್ತು ಕುದುರೆ ವ್ಯಾಪಾರದ, ಜತೆ-ಜತೆಗೆ ಅದರ ಬ್ಲಾಕ್‌ಮೇಲ್, ಆಮಿಷಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಹೇಳಿದೆ. ಜನಾದೇಶವನ್ನು ಉಲ್ಲಂಘಿಸಲು ಸಾಧ್ಯವಿಲ್ಲ, ಈ ರೀತಿ ಭಂಡ ಪ್ರಜಾಪ್ರಭುತ್ವ-ವಿರೋಧಿ ರೀತಿಯಲ್ಲಿ ಅದನ್ನು ತಿರುವುಮುರುವುಗೊಳಿಸಲು ಸಾಧ್ಯವಿಲ್ಲ ಎಂದು  ಪೊಲಿಟ್‌ ಬ್ಯುರೊ ಹೇಳಿದೆ.

 

ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚುರಿ ಮಧ್ಯಪ್ರದೇಶದ ಬೆಳವಣಿಗೆಗಳ ಬಗ್ಗೆ ಟಿಪ್ಪಣಿ ಮಾಡುತ್ತ “ಕಾಯಿಲೆಯೊಂದು ವ್ಯಾಪಕವಾಗಿ ಹರಡುವ ಭೀತಿಯಿರುವಾಗ, ಸಾಮಾಜಿಕ ವಿಷಮತೆ ಆಳಗೊಳ್ಳುತ್ತಿರುವಾಗ, ಜತೆಗೆ ಆರ್ಥಿಕ ವ್ಯವಸ್ಥೆ ಕುಸಿಯುತ್ತಿರುವಾಗ  ಈ ಸರಕಾರ ರಾಜ್ಯ ಸರಕಾರಗಳನ್ನು ಉರುಳಿಸುವ ಮತ್ತು ಸುಳ್ಳುಗಳನ್ನು ಪಸರಿಸುವುದರ ಮೇಲೆ ಗಮನ ಕೇಂದ್ರೀಕರಿಸಿದೆ. ಮುಂದೆ ಇದಕ್ಕೆ ಅದು ಉತ್ತರ ಕೊಡಬೇಕಾಗುತ್ತದೆ”  ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *